Tag: ಕತ್ತರಿ

  • ಟಿವಿ ರಿಮೋಟ್‌ಗಾಗಿ ಅಣ್ಣ-ತಮ್ಮಂದಿರ ಕಿತ್ತಾಟ; ತಂದೆಯಿಂದ ಮಗನ ಹತ್ಯೆ

    ಟಿವಿ ರಿಮೋಟ್‌ಗಾಗಿ ಅಣ್ಣ-ತಮ್ಮಂದಿರ ಕಿತ್ತಾಟ; ತಂದೆಯಿಂದ ಮಗನ ಹತ್ಯೆ

    ಚಿತ್ರದುರ್ಗ: ಟಿವಿ ರಿಮೋಟ್‌ಗಾಗಿ (Tv Remote) ಅಣ್ಣ-ತಮ್ಮಂದಿರ (Brothers) ನಡುವೆ ಗಲಾಟೆ ನಡೆದ ಹಿನ್ನೆಲೆ ಸಿಟ್ಟಿಗೆದ್ದ ತಂದೆ (Father) ಹಿರಿಮಗನ ಮೇಲೆ ಕತ್ತರಿ (Scissors) ಎಸೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಹಿರಿಮಗ ಸಾವನ್ನಪ್ಪಿದ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

    ಜಿಲ್ಲೆಯ ಮೊಳಕಾಲ್ಮೂರು (Molakalmuru) ಪಟ್ಟಣದಲ್ಲಿ ಘಟನೆ ನಡೆದಿದ್ದು, ಹಿರಿಮಗ ಚಂದ್ರಶೇಖರ್ (16) ಸಾವನ್ನಪ್ಪಿದ್ದಾನೆ. ಮೃತ ಚಂದ್ರಶೇಖರ್ ಹಾಗೂ ತಮ್ಮ ಪವನ್ (14) ರಿಮೋಟ್‌ಗಾಗಿ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ತಂದೆ ಲಕ್ಷ್ಮಣ್‌ಬಾಬು ತನ್ನ ಹಿರಿಮಗನಾದ ಚಂದ್ರಶೇಖರ್ ಮೇಲೆ ಕತ್ತರಿ ಎಸೆದು ಹೆದರಿಸಲು ಮುಂದಾಗಿದ್ದಾರೆ. ಹಲವು ದಿನಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಲಕ್ಷ್ಮಣ್‌ಬಾಬು ಮಕ್ಕಳ ಜಗಳದಿಂದ ಸಿಟ್ಟಿಗೆದ್ದು ಹಿರಿಮಗನ ಕಡೆಗೆ ಕತ್ತರಿ ಎಸೆದಿದ್ದಾರೆ. ಇದನ್ನೂ ಓದಿ: ಕಾರು, ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ – 8 ಮಂದಿ ದುರ್ಮರಣ

    ದುರಾದೃಷ್ಟವಶಾತ್ ಕತ್ತರಿ ಏಟು ಬಾಲಕನ ಕಿವಿಯ ಹಿಂಭಾಗಕ್ಕೆ ಜೋರಾಗಿ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಚಂದ್ರಶೇಖರ್ (16) ಸಾವನ್ನಪ್ಪಿದ್ದಾನೆ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: 15 ವರ್ಷದಲ್ಲಿ ಒಮ್ಮೆಯೂ ತವರಿಗೆ ಕಳುಹಿಸದೆ ಕಿರುಕುಳ – ವಿಷ ಕುಡಿಸಿ ಪತ್ನಿಯ ಕೊಂದ ದುರುಳ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಆದಿಪುರುಷ’ ವಿವಾದಿತ ಡೈಲಾಗ್ ಗೆ ಕತ್ತರಿ: ಇದು ಬೇಕಿತ್ತಾ ಅಂತಾರೆ ಪ್ರಭಾಸ್ ಫ್ಯಾನ್ಸ್

    ‘ಆದಿಪುರುಷ’ ವಿವಾದಿತ ಡೈಲಾಗ್ ಗೆ ಕತ್ತರಿ: ಇದು ಬೇಕಿತ್ತಾ ಅಂತಾರೆ ಪ್ರಭಾಸ್ ಫ್ಯಾನ್ಸ್

    ಪ್ರಭಾಸ್ (Prabhas) ಮುಖ್ಯ ಭೂಮಿಕೆಯ ಆದಿಪುರುಷ (Adi Purush) ಸಿನಿಮಾ ವಿಶ್ವದಾದ್ಯಂತ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಜೊತೆಗೆ ವಿವಾದವನ್ನೂ ಮೈಮೇಲೆ ಎಳೆದುಕೊಂಡಿದೆ. ಆದಿಪುರುಷ ಸಿನಿಮಾದಲ್ಲಿ ಸೀತಾ ಭಾರತದ ಮಗಳು ಎಂದು ಹೇಳಿರುವ ಡೈಲಾಗ್ (Dialogue) ಭಾರೀ ವಿವಾದಕ್ಕೆ ಕಾರಣವಾಗಿತ್ತು. ನೇಪಾಳದಲ್ಲಿ ಈ ಚಿತ್ರವನ್ನು ಬ್ಯಾನ್ ಕೂಡ ಮಾಡಲಾಗಿದೆ. ಭಾರೀ ಪ್ರತಿರೋಧ ಕಾಣಿಸಿಕೊಂಡ ಬೆನ್ನಲ್ಲೇ ಈ ಡೈಲಾಗ್ ಗೆ ಕತ್ತರಿ ಹಾಕಲಾಗಿದೆ.

    ಈ ನಡುವೆ ಚಿತ್ರ ತಂಡ ಹೊಸದೊಂದು ವರಸೆ ಶುರು ಮಾಡಿಕೊಂಡಿದೆ. ಸಿನಿಮಾ ಬಗ್ಗೆ ಬಗೆ ಬಗೆಯ ರೀತಿಯಲ್ಲಿ ಚರ್ಚೆ ನಡೆಯುತ್ತಿದ್ದರೆ, ಚಿತ್ರತಂಡದ ಸಂಭಾಷಣೆಕಾರ ಮನೋಜ್ ಮುಂತಶೀರ್ ಅವರು ಇದೀಗ ಸಿನಿಮಾ ಬಗ್ಗೆ ವರಸೆ ಬದಲಿಸಿದ್ದಾರೆ. ರಾಮಾಯಣಕ್ಕೂ ಆದಿಪುರುಷ್ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಅಂತಾ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ‘ಪಾರು’ ಸೀರಿಯಲ್ ನಟಿ

    ಓಂ ರಾವತ್ (Om Raut) ನಿರ್ದೇಶನದ ‘ಆದಿಪುರುಷ್’ ಸಿನಿಮಾಗೆ ಕೆಟ್ಟ ವಿಮರ್ಶೆ ವ್ಯಕ್ತವಾಗುತ್ತಿದೆ. ಈ ಸಿನಿಮಾದ ಹಲವು ಅಂಶಗಳನ್ನು ಟೀಕಿಸಲಾಗುತ್ತಿದೆ. ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಅಭಿನಯಿಸಿದ್ದಾರೆ. ಲಕ್ಷ್ಮಣನ ಪಾತ್ರಕ್ಕೆ ಸನ್ನಿ ಸಿಂಗ್ ಅವರು ಬಣ್ಣ ಹಚ್ಚಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನಾಗಿ ಅಬ್ಬರಿಸಿದ್ದಾರೆ. ಆದರೆ ರಾಮಾಯಣವನ್ನು ತೋರಿಸಿದ ರೀತಿ ಸರಿಯಾಗಿಲ್ಲ ಎಂದು ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ಸೈಫ್‌ರನ್ನ ಮಾಡ್ರನ್ ರಾವಣನಂತೆ ತೋರಿಸಿರೋದು ಟ್ರೋಲ್ ಆಗುತ್ತಿದೆ. ಸಿನಿಮಾ ನೈಜವಾಗಿ ತೋರಿಸಿಲ್ಲ ಎಂದು ಟೀಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಶೀರ್ ಅವರು ಮಾತು ಬದಲಾಯಿಸಿದ್ದಾರೆ. ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ.

     

    ಸೋಶಿಯಲ್ ಮೀಡಿಯಾದಲ್ಲಿ ‘ಆದಿಪುರುಷ್’ ಸಿನಿಮಾವನ್ನು ಟ್ರೋಲ್ ಮಾಡಲಾಗುತ್ತಿದೆ. ಪಾತ್ರಗಳನ್ನು ತೋರಿಸಿದ ರೀತಿ, ಗ್ರಾಫಿಕ್ಸ್ ಗುಣಮಟ್ಟ ಸೇರಿದಂತೆ ಅನೇಕ ವಿಚಾರಗಳನ್ನು ಜನರು ಟೀಕಿಸುತ್ತಿದ್ದಾರೆ. ಈ ನಡುವೆ ಸಂಭಾಷಣಕಾರ ಮನೋಜ್ ಮುಂತಶೀರ್ ಅವರು ನೀಡಿದ ಕೇಳಿಕೆ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ರಾಮಾಯಾಣಕ್ಕೂ ಆದಿಪುರುಷ್‌ ಸಿನಿಮಾಗೂ ಸಂಬಂಧವಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್‌ಕ್ಲೈಮರ್‌ನಲ್ಲೂ ನಾವು ಅದನ್ನೇ ಹೇಳಿದ್ದೇವೆ ಎಂದು ಮನೋಜ್ ಮುಂತಶೀರ್ ಹೇಳಿದ್ದಾರೆ.