Tag: ಕಣ್ಮರೆ

  • OLXನಲ್ಲಿ ಸಿಯಾಜ್ ಕಾರು ಮಾರಾಟಕ್ಕಿಟ್ಟ ಟೆಕ್ಕಿ ನಾಪತ್ತೆ!

    OLXನಲ್ಲಿ ಸಿಯಾಜ್ ಕಾರು ಮಾರಾಟಕ್ಕಿಟ್ಟ ಟೆಕ್ಕಿ ನಾಪತ್ತೆ!

    ಬೆಂಗಳೂರು: ಟೆಕ್ಕಿಯೊಬ್ಬರು ನಿಗೂಢವಾಗಿ ಕಣ್ಮರೆ ಆದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.

    ಕುಮಾರ್ ಅಜಿತಾಬ್ (30) ನಾಪತ್ತೆಯಾಗಿರೋ ಟೆಕ್ಕಿ. ಬಿಹಾರ ಮೂಲದ ಅಜಿತಾಬ್ ಬೆಳ್ಳಂದೂರಿನ ಬ್ರಿಟೀಷ್ ಟೆಲಿಕಾಂ ನಲ್ಲಿ ಐದು ವರ್ಷದಿಂದ ಕೆಲಸ ಮಾಡುತ್ತಿದ್ದರು. ತನ್ನ ಸಿಯಾಜ್ ಕಾರನ್ನು ಮಾರಲು ಟೆಕ್ಕಿ ಒಎಲ್ ಎಕ್ಸ್ ನಲ್ಲಿ ಪ್ರಕಟಿಸಿದ್ದರು.

    ಸಿಯಾಜ್ ಕಾರನ್ನು ಮಾರಲು ಒಎಲ್ ಎಕ್ಸ್ ನಲ್ಲಿ ಪ್ರಕಟಿಸಿದ ಬಳಿಕ ಕುಮಾರ್ ಅಜಿತಾಬ್ ಕರೆ ಬಂದಾಗಲೆಲ್ಲ ಕಾರು ಸಮೇತ ಹೊರ ಹೋಗಿ ಬರುತ್ತಿದ್ದರು. ಹೀಗೆ ಡಿ. 18 ರಂದು ಕೂಡ ಮೊಬೈಲ್ ಗೆ ಕರೆ ಬಂದಿತ್ತು. ಎಂದಿನಂತೆಯೇ ಕುಮಾರ್ ಅಜಿತಬ್, ಕೆಎ 03 ಎನ್‍ಎ 1751 ನಂಬರಿನ ತನ್ನ ಸಿಯಾಜ್ ಕಾರಿನಲ್ಲಿ ಹೊರ ಹೋಗಿದ್ದರು. ದುರಂತ ಅಂದ್ರೆ ಈವರೆಗೂ ಅವರು ಮನೆಗೆ ವಾಪಸ್ಸಾಗಲಿಲ್ಲ.

    ಒಎಲ್ ಎಕ್ಸ್ ಜಾಹೀರಾತು ನೋಡಿ ಅಜಿತಾಬ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಅಜಿತಾಬ್ ನಾಪತ್ತೆ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • 1 ವರ್ಷ ತುಂಬದ ಪುಟ್ಟ ಮಗು ಕಣ್ಮರೆ: ಕಿಡ್ನ್ಯಾಪ್ ಶಂಕೆ

    1 ವರ್ಷ ತುಂಬದ ಪುಟ್ಟ ಮಗು ಕಣ್ಮರೆ: ಕಿಡ್ನ್ಯಾಪ್ ಶಂಕೆ

    ಬೆಂಗಳೂರು: ಇನ್ನೂ ಒಂದು ವರ್ಷ ತುಂಬದ ಪುಟ್ಟ ಮಗುವೊಂದು ಕಣ್ಮರೆಯಾಗಿರುವ ಘಟನೆ ಬೆಂಗಳೂರಿನ ಹೆಗ್ಡೆನಗರ ಸಮೀಪದ ಎಕ್ಸ್ ಸರ್ವಿಸ್ ಮ್ಯಾನ್ ಲೇಔಟ್ ನಲ್ಲಿ ನಡೆದಿದೆ.

    ರಾಯಚೂರು ಮೂಲದ ಕುಟುಂಬವೊಂದು ಬೆಂಗಳೂರಿನ ಹೆಗ್ಡೆನಗರ ಸಮೀಪದ ಎಕ್ಸ್ ಸರ್ವಿಸ್ಮನ್ ಲೇಔಟ್ ನಲ್ಲಿ ಕಳೆದ ಐದು ವರ್ಷದಿಂದ ಬಿಡಾರ ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಆ ಕುಟುಂಬದ ಭೀಮಾ ಮತ್ತು ಮಹೇಶ್ವರಿ ದಂಪತಿಯ ಇನ್ನೂ ಒಂದು ವರ್ಷ ತುಂಬದ ಪುಟ್ಟ ಮಗು ಅಭಿರಾಮ್ ಕಣ್ಮರೆಯಾಗಿದ್ದಾನೆ. ಕುಟುಂಬ ಸದಸ್ಯರು ಮನೆಯೊಳಗೆ ಕೆಲಸ ಮಾಡುತ್ತಿದ್ದ ವೇಳೆ ಮಗು ಅಭಿರಾಮ್ ಹೊರಗೆ ಆಟವಾಡುತ್ತಿದ್ದನು.

    ಈ ಸಂದರ್ಭದಲ್ಲಿ ಬೆಳಿಗ್ಗೆಯಿಂದಲೇ ಒಂದು ಆಟೋವನ್ನು ತಂದು ಯಾರೋ ಅಪರಿಚಿತರು ನಿಲ್ಲಿಸಿಕೊಂಡಿದ್ದರು. ಆ ಇಬ್ಬರು ಮಧ್ಯಾಹ್ನದ ಹೊತ್ತಿನಲ್ಲಿ ಬೈಕ್ ನಲ್ಲಿ ಬಂದು ಮಗುವನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ ಎಂದು ಹೇಳಲಾಗ್ತಿದೆ.

    ಸದ್ಯ ಮಗು ಕಾಣೆಯಾಗಿರುವ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.