Tag: ಕಣ್ಣೋಟ

  • ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಣ್ಣೋಟ ಫುಲ್ ವೈರಲ್!

    ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಣ್ಣೋಟ ಫುಲ್ ವೈರಲ್!

    ಗುವಾಹಟಿ: ಆಸೀಸ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯವನ್ನಾಡಲು ಗುವಾಹಟಿಗೆ ಆಗಮಿಸಿದ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಭವ್ಯ ಸ್ವಾಗತ ಕೋರಲಾಯಿತು.

    ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಸಾಂಪ್ರದಾಯಿಕ ಟೋಪಿ ಹಾಕುವುದರ ಮೂಲಕ ಶುಭ ಕೋರಿದರು. ಹೋಟೆಲ್ ಗೆ ಆಗಮಿಸುತ್ತಿದ್ದಂತೆ ಆಟಗಾರರ ಹಣೆಗೆ ತಿಲಕ ಹಾಗೂ ಶಾಲು ಹೊದೆಸಿ ಸ್ವಾಗತಿಸಲಾಯಿತು. ಈ ವೇಳೆ ತೆಗೆದ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ಈ ಫೋಟೋದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶಾಲು ಹೊದಿಸುತ್ತಿರುವ ಮಹಿಳೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ. ಈ ವೇಳೆ ಫೋಟೋಗ್ರಾಫರ್ ಕ್ಲಿಕ್ ಸರಿಯಾಗಿ ಆಗಿದೆ. ಇದನ್ನೇ ಕೊಹ್ಲಿ ಕಣ್ಣೋಟವಾಗಿ ಬದಲಾಗಿದೆ. ಉಳಿದ ಎಲ್ಲಾ ಆಟಗಾರರಿಗೂ ಇದೇ ರೀತಿಯ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

    ಈ ಹಿಂದೆಯೂ ಕೊಹ್ಲಿ ಇದೇ ರೀತಿಯ ‘ಕಣ್ಣೋಟ’ದ ವಿಚಾರದಲ್ಲಿ ಸಿಲುಕಿಕೊಂಡಿದ್ದರು. ಆಂದು ರಾಪಿಡ್ ಫೈರ್ ರೌಂಡ್ ವೇಳೆ ಆಂಕರ್ ಒಬ್ಬರ ಕಾಲಿನ ಮೇಲಿದ್ದ ಹಾಳೆಯನ್ನು ನೋಡಲು ಕೊಹ್ಲಿ ಯತ್ನಿಸಿದ್ದರು. ಈ ಕಣ್ಣೋಟ ಐಪಿಎಲ್ ವೇಳೆ ಭಾರೀ ಪ್ರಚಾರ ಪಡೆದಿತ್ತು.

    ಕೊನೆಗೆ ಆಂಕರ್ ಹಾಗೂ ವೀಕ್ಷಕ ವಿವರಣೆಗಾರ್ತಿ ಅರ್ಚನಾ ವಿಜಯಾ, ನಾನು ರಾಪಿಡ್ ಫೈರ್ ಮಾದರಿಯಲ್ಲಿ ಕೊಹ್ಲಿಯನ್ನು ಪ್ರಶ್ನಿಸುತ್ತಿದ್ದೆ. ಈ ವೇಳೆ ನನ್ನ ಕೈಯಲ್ಲಿದ್ದ ಕಾರ್ಡ್ ನೋಡಲು ಕೊಹ್ಲಿ ಮುಂದಾಗಿದ್ದರೇ ಹೊರತು ಅವರು ನನ್ನ ಕಾಲುಗಳನ್ನು ನೋಡುತ್ತಿರಲಿಲ್ಲ. ಆದರೆ ಫೋಟೋಗ್ರಾಫರ್ ಗಳೇ ಸಮಯ ಸಾಧಿಸಿ ಈ ಫೋಟೋ ತೆಗೆದು ಅನರ್ಥ ಕಲ್ಪಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ ಸ್ಪಷ್ಟನೆ ನೀಡಿದ್ದರು.