ಶನಿವಾರ ನಟ ದರ್ಶನ್ (Actor Darshan) ಕೇರಳದ (Kerala) ಕಣ್ಣೂರಿನ (Kannur) ಭಗವತಿ ದೇವಾಲಯದಲ್ಲಿ ಶತ್ರು ಸಂಹಾರ ಹೋಮ ಮಾಡಿಸಿದ್ದಾರೆ. ಈ ವೇಳೆ ದಾಸನ ಜೊತೆ ಕೊಲೆ ಆರೋಪಿ ಪ್ರಜ್ವಲ್ ರೈ (Prajwal Rai) ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.ಇದನ್ನೂ ಓದಿ:ನಾರಿಮಣಿಯರಿಗೆ ಸಮ್ಮರ್ ಫ್ಯಾಷನ್ ಟಿಪ್ಸ್
ಹೌದು, ಪುತ್ತೂರಿನ (Puttur) ಕಾಂಗ್ರೆಸ್ (Congress) ಮುಖಂಡ ಸವಣೂರು ಪ್ರಜ್ವಲ್ ರೈ ಎಂಬಾತ ನಟ ದರ್ಶನ್ ಅನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಶತ್ರು ಸಂಹಾರ ಪೂಜೆ ಮಾಡಿಸಿದ್ದಾನೆ. ಆದರೆ ಪ್ರಜ್ವಲ್ ರೈ ಓರ್ವ ಕೊಲೆ ಆರೋಪಿ. 2017ರಲ್ಲಿ ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಕರೋಪಾಡಿ ಅಬ್ದುಲ್ ಜಲೀಲ್ ಕೊಲೆ ಪ್ರಕರಣದಲ್ಲಿ ಪ್ರಜ್ವಲ್ ರೈ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾನೆ. ಸದ್ಯ ಈ ಆರೋಪಿ, ದರ್ಶನ್ ಜೊತೆ ಕಾಣಿಸಿಕೊಂಡಿರುವುದು ಚರ್ಚೆಗೆ ಆಸ್ಪದ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿಯಾಗಿರುವ ದರ್ಶನ್, ಸಂಕಷ್ಟ ನಿವಾರಣೆಗಾಗಿ ಕೇರಳದ ಕಣ್ಣೂರಿನ ಮಾಡಾಯಿಕಾವು ಶ್ರೀ ಭಗವತಿ ದೇವಸ್ಥಾನಕ್ಕೆ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಹಾಗೂ ನಟ ಧನ್ವೀರ್ ಜೊತೆ ತೆರಳಿ ಶತ್ರು ಸಂಹಾರ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೊಲೆ ಆರೋಪಿ ಪ್ರಜ್ವಲ್ ರೈ ಕೂಡ ಕಾಣಿಸಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ:ಇಶಾನ್ ಕಿಶನ್ ಸ್ಫೋಟಕ ಶತಕ – ರಾಜಸ್ಥಾನ ವಿರುದ್ಧ ಹೈದರಾಬಾದ್‌ಗೆ 44 ರನ್‌ಗಳ ಭರ್ಜರಿ ಜಯ
– ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದ ಮಂಗಳೂರು ಆಸ್ಪತ್ರೆ – ಅಂತ್ಯಸಂಸ್ಕಾರ ನಡೆಸಲು ಮುಂದಾಗಿದ್ದ ಕುಟುಂಬಸ್ಥರು
ತಿರುವನಂತಪುರಂ: ಚಿಕಿತ್ಸೆ ಫಲಿಸದೇ ಮಂಗಳೂರು (Mangaluru) ಆಸ್ಪತ್ರೆಯಲ್ಲಿ ಮೃತಪಟ್ಟ 67 ವರ್ಷದ ವ್ಯಕ್ತಿಗೆ ಕೇರಳ (Kerala) ಆಸ್ಪತ್ರೆಯ ಶವಾಗಾರದಲ್ಲಿ (Mortuary) ಪುನರ್ಜನ್ಮ ಸಿಕ್ಕಿದೆ.
ಪಾರ್ಶ್ವವಾಯು ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಕಣ್ಣೂರಿನ ಪಚಪೊಯ್ಕಾದ ವೆಲ್ಲುವಕ್ಕಂಡಿ ಪವಿತ್ರನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರೂ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಜೀವರಕ್ಷಕ ಸಾಧನಗಳನ್ನು ಹಿಂತೆಗೆದುಕೊಳ್ಳುವುದಾಗಿ ಕುಟುಂಬಕ್ಕೆ ಆಸ್ಪತ್ರೆ ತಿಳಿಸಿತ್ತು. ಸೋಮವಾರ ಸಂಜೆಯ ವೇಳೆ ಪವಿತ್ರನ್ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಘೋಷಿಸಿತ್ತು. ಇದನ್ನೂ ಓದಿ: ಮದುವೆಗೆ 4 ದಿನ ಬಾಕಿಯಿರುವಾಗಲೇ ಪೊಲೀಸರ ಮುಂದೆ ಮಗಳನ್ನ ಗುಂಡಿಕ್ಕಿ ಕೊಂದ ತಂದೆ
ಸೋಮವಾರ ಸಂಜೆ 6:30 ರ ಸುಮಾರಿಗೆ ಅವರ ಶವವನ್ನು ಅಂಬುಲೆನ್ಸ್ (Ambulance) ಮೂಲಕ ಕಣ್ಣೂರಿಗೆ ಕಳುಹಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯಗೊಂಡ ಹಿನ್ನೆಲೆಯಲ್ಲಿ ರಾತ್ರಿ ಶವವವನ್ನು ಕಣ್ಣೂರಿನ ಎಕೆಜಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿ ಮಂಗಳವಾರ ಊರಿಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಲು ಕುಟುಂಬ ನಿರ್ಧರಿಸಿತ್ತು.
ರಾತ್ರಿ 11:30ರ ಹೊತ್ತಿಗೆ ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಾಗ ಪವಿತ್ರನ್ ಕೈ ಅಲುಗಾಡುವನ್ನು ಕರ್ತವ್ಯದಲ್ಲಿದ್ದ ಅಟೆಂಡೆಂಟ್ ಜಯನ್ ಗಮನಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಯ ವೈದ್ಯಕೀಯ ತಂಡವು ದೇಹ ಪರೀಕ್ಷಿಸಿ ಪವಿತ್ರನ್ ಜೀವಂತವಾಗಿರುವುದನ್ನು ಎಂದು ದೃಢಪಡಿಸಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಕ್ಷಣವೇ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಈಗ ಚಿಕಿತ್ಸೆಗೆ ಪವಿತ್ರನ್ ಸ್ಪಂದಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಅಟೆಂಡೆಂಟ್ ಜಯನ್ ಪ್ರತಿಕ್ರಿಯಿಸಿ, ಅಂಬುಲೆನ್ಸ್‌ನಿಂದ ದೇಹವನ್ನು ಇಳಿಸಿದಾಗ ಕೈ ಸ್ವಲ್ಪ ಚಲಿಸಿದನ್ನು ನೋಡಿದೆ. ನನಗೆ ಅನುಮಾನ ಬಂದ ವಿಚಾರವನ್ನು ನನ್ನ ಸಹೋದ್ಯೋಗಿ ಜೊತೆ ಹೇಳಿದೆ. ನಂತರ ಅವರ ಹೃದಯದ ನಾಡಿ ಮಿಡಿತ ಪರೀಕ್ಷೆ ಮಾಡಿದಾಗ ಅವರು ಜೀವಂತ ಇರುವುದು ದೃಢವಾಯಿತು ಎಂದು ತಿಳಿಸಿದರು.
ಈಗ ಮಂಗಳೂರಿನ ಖಾಸಗಿ ಆಸ್ಪತ್ರೆ ಮಾಡಿದ ಸಾವಿನ ದೃಢೀಕರಣದ ಬಗ್ಗೆ ಹಲವು ಪ್ರಶ್ನೆಗಳು ಸೃಷ್ಟಿಯಾಗಿದೆ. ಪವಿತ್ರನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬೆನ್ನಲ್ಲೇ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ADM) ನವೀನ್ ಬಾಬು (Naveen Babu) ತಮ್ಮ ಪಲ್ಲಿಕುನ್ನುನಲ್ಲಿರುವ ಮನೆಯಲ್ಲಿ ಮಂಗಳವಾರ (ಅ.15) ಶವವಾಗಿ ಪತ್ತೆಯಾಗಿದ್ದಾರೆ.
ಘಟನೆಯ ಹಿಂದಿನ ದಿನ ಮೃತ ನವೀನ್ ಬಾಬು ಅವರಿಗೆ ಸಹೋದ್ಯೋಗಿಗಳು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹಾಗೂ ಸಿಪಿಎಂ ನಾಯಕಿ ಪಿಪಿ ದಿವ್ಯಾ (PP Divya) ಆಹ್ವಾನವಿಲ್ಲದೇ ದಿಢೀರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ದಿವ್ಯಾ, ನವೀನ್ ಬಾಬು ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಜೊತೆಗೆ ಹಲವು ತಿಂಗಳುಗಳಿಂದ ಚೆಂಗಲೈ ಪೆಟ್ರೋಲ್ ಪಂಪ್‌ಗೆ ಅನುಮತಿ ನೀಡಲು ಎಡಿಎಮ್ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಟೀಕಿಸಿ, ಬಹಿರಂಗವಾಗಿ ಮಾತನಾಡಿದ್ದರು.
ಎಡಿಎಮ್ ಅವರ ದಿಢೀರ್ ವರ್ಗಾವಣೆ ಹಿಂದಿನ ಕಾರಣ ನನಗೆ ಗೊತ್ತಿದೆ. ಎರಡು ದಿನಗಳ ನಂತರ ಇನ್ನುಳಿದ ಮಾಹಿತಿಯನ್ನು ನೀಡುತ್ತೇನೆ ಎಂದು ಸುಳಿವು ನೀಡಿದ್ದರು. ಇದಾದ ಮಾರನೇ ದಿನ ನೇಣು ಬಿಗಿದ ಸ್ಥಿತಿಯಲ್ಲಿ ನವೀನ್ ಬಾಬು ಅವರ ಶವವಾಗಿ ಪತ್ತೆಯಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸಿಪಿಎಂ ಸ್ಥಳೀಯ ಮುಖಂಡ ಮಲಯಾಳಪುಳ ಮೋಹನ್ ಸುದ್ದಿಗಾರರೊಂದಿಗೆ ಮಾತನಾಡಿ, ಬಾಬು ಅವರ ಕುಟುಂಬವು ಸಾಂಪ್ರದಾಯಿಕ ಕುಟುಂಬವಾಗಿದ್ದು, ಬಾಬು ಕುರಿತು ನನಗೆ ಬಹಳ ಹಿಂದಿನಿಂದಲೂ ತಿಳಿದಿದೆ. ಬಾಬು ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದರು. ದಿವ್ಯಾ ಅವರ ಬಹಿರಂಗ ಟೀಕೆಯು ಬಾಬು ಅವರ ಸಾವಿಗೆ ಕಾರಣವಾಗಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ಸೈನ್ಯಕ್ಕೆ ಪ್ರಬಲ ಅಸ್ತ್ರ – ಅಮೆರಿಕದ MQ-9B ಪ್ರಿಡೆಟರ್ ಡ್ರೋನ್ ಒಪ್ಪಂದಕ್ಕೆ ಸಹಿ ಹಾಕಿದ ಭಾರತ
ತಿರುವನಂತಪುರಂ: ಕಳೆದ ತಿಂಗಳು ಕೇರಳದ (Kerala) ಕಣ್ಣೂರಿನಲ್ಲಿ (Kannur) ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾದ 6 ವರ್ಷದ ಬಾಲಕ (Boy) ಮತ್ತು ಆತನ ಕುಟುಂಬವನ್ನು ಚಿನ್ನದಂಗಡಿಯ ಮಾಲೀಕನೊಬ್ಬ (Gold Shop Owner) ತನ್ನ ಐಷಾರಾಮಿ ಕಾರಿನಲ್ಲಿ (luxury car) ಜಾಲಿ ರೈಡ್ ಹಾಗೂ ಶಾಪಿಂಗ್‌ಗೆ ಕರೆದುಕೊಂಡು ಹೋಗಿದ್ದಾರೆ. ಈ ಮೂಲಕ ಚಿನ್ನದಂಗಡಿ ಮಾಲೀಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೊಟ್ಟಾಯಂ ಮೂಲದ ಜುವೆಲ್ಲರಿ ಗ್ರೂಪ್‌ನ ಆಚಾಯನ್ಸ್ ಗೋಲ್ಡ್‌ನ ಮಾಲೀಕ ಟೋನಿ ವರ್ಕಿಚನ್ ರಾಜಸ್ಥಾನ ಮೂಲದ ವಲಸೆ ಕಾರ್ಮಿಕ ಕುಟುಂಬದ 6 ವರ್ಷದ ಬಾಲಕ ಗಣೇಶ್‌ನನ್ನು ಆತನ ಕುಟುಂಬದ ಜೊತೆಗೆ ಕೋಝಿಕ್ಕೋಡ್‌ನಾದ್ಯಂತ ನಗರದಲ್ಲಿ ಜಾಲಿ ರೈಡ್ ಕರೆದುಕೊಂಡು ಹೋಗಿದ್ದಾರೆ. ಮಾತ್ರವಲ್ಲದೇ ಬಾಲಕನಿಗೆ ಬೇಕೆನಿಸಿದ್ದನ್ನೆಲ್ಲವನ್ನೂ ತೆಗೆಸಿ ಕೊಟ್ಟಿದ್ದಾರೆ.
ಕಳೆದ ತಿಂಗಳು ವಲಸೆ ಕಾರ್ಮಿಕ ಕುಟುಂಬದ ಬಾಲಕ ಕಣ್ಣೂರಿನಲ್ಲಿ ಕಾರೊಂದಕ್ಕೆ ಒರಗಿ ನಿಂತಿದ್ದಕ್ಕಾಗಿ ಕಾರ್‌ನ ಮಾಲೀಕ ಕೋಪಗೊಂಡು ಬಾಲಕನಿಗೆ ಕಾಲಿನಿಂದ ಒದ್ದಿದ್ದ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಶಿಹಸಾದ್‌ನನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆಯ ಬಳಿಕ ರಾಜ್ಯಾದ್ಯಂತ ವಲಸೆ ಕಾರ್ಮಿಕರ ಬಗ್ಗೆ ಹಲವರು ಅನುಕಂಪ ತೋರಿ ಅತಿಥಿ ಕೆಲಸಗಾರರು ಎಂದು ಸಂಬೋಧಿಸಿದರು. ಇದನ್ನೂ ಓದಿ: ಕಾಂತಾರ ಚಿತ್ರ ವೀಕ್ಷಿಸಲು ಥಿಯೇಟರ್‌ಗೆ ಬಂದ ಜೋಡಿ ಮೇಲೆ ಹಲ್ಲೆ
ಈ ಘಟನೆ ನಡೆದ 1 ತಿಂಗಳ ಬಳಿಕ ಟೋನಿ ಅವರು ಹಲ್ಲೆಗೊಳಗಾದ ಬಾಲಕನನ್ನು ಗುರುತಿಸಿ, ಆತನಿಗೆ ಹಾಗೂ ಆತನ ಕುಟುಂಬದವರಿಗೆ ಜಾಲಿ ರೈಡ್ ಹಾಗೂ ಶಾಪಿಂಗ್ ಕರೆದುಕೊಂಡು ಹೋಗಲು ಮುಂದಾದರು. ಬಾಲಕನ ಕುಟುಂಬಕ್ಕೆ ಟೋನಿ 3 ತಿಂಗಳ ಕಾಲ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಕೇಸ್- ಪೀಸ್ ಪೀಸ್ ಪ್ರೇಮಿಗೆ ಜೈಲು ಅವಧಿ ವಿಸ್ತರಣೆ
Live Tv
[brid partner=56869869 player=32851 video=960834 autoplay=true]
ರಾಮನಗರ: ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಶ್ರೀ (BandeMutt Sri) ಗಳ 11ನೇ ದಿನದ ಕಾರ್ಯ ಇಂದು ನಡೆದಿದೆ. ಸಿದ್ದಗಂಗಾಶ್ರೀಗಳ ನೇತೃತ್ವದಲ್ಲಿ ಶಿವಗಣಾರಾಧನೆ ಕಾರ್ಯಕ್ರಮಕ್ಕೆ ನಡೆಸಲಾಗಿದ್ದು, ಮಠಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತ್ತೊಂದೆಡೆ ಪೊಲೀಸ್ ಕಸ್ಟಡಿಯಲ್ಲಿರೋ ಆರೋಪಿಗಳ ವಿಚಾರಣೆ ಮುಂದುವರಿದಿದ್ದು ಇಂದು ಸ್ಥಳ ಮಹಜರು ನಡೆಸಲಾಗಿದೆ. ಅಲ್ಲದೇ ವಿಚಾರಣೆ ವೇಳೆ ಕಣ್ಣೂರು ಶ್ರೀ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣ ಸಂಬಂಧ ಕಸ್ಟಡಿಯಲ್ಲಿರೋ ಮೂವರು ಆರೋಪಿಗಳ ವಿಚಾರಣೆ ಮೂರನೇ ದಿನವೂ ತೀವ್ರಗೊಂಡಿದೆ. ವಿಚಾರಣೆ ವೇಳೆ ಕಣ್ಣೂರು ಮಠದ ಮೃತ್ಯುಂಜಯ ತಪ್ಪೊಪ್ಪಿಕೊಂಡಿರೋ ಸ್ವಾಮೀಜಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಸವಲಿಂಗ ಶ್ರೀ ವಿಚಾರದಲ್ಲಿ ತಪ್ಪು ಮಾಡಿದ್ದೇನೆ, ಅದರ ಹೊರತಾಗಿ ಇನ್ಯಾರನ್ನೂ ಟಾರ್ಗೆಟ್ ಮಾಡಿಲ್ಲ ಅಂತಾ ಪಶ್ಚಾತ್ತಾಪ ವ್ಯಕ್ತಪಡಿಸಿರೋ ಬಗ್ಗೆ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಅಲ್ಲದೇ ಇಂದು ಮೃತ್ಯುಂಜಯ ಶ್ರೀಗಳ ಜೊತೆ ಕಣ್ಣೂರು ಮಠದಲ್ಲೂ ಸ್ಥಳ ಮಹಜರು ಮಾಡಲಾಗಿದೆ. ಕಣ್ಣೂರು ಮಠ (Kannuru Mutt) ದ ಮೊದಲ ಮಹಡಿಯ ವಿಶ್ರಾಂತಿ ಕೊಠಡಿ ಕಂಪ್ಯೂಟರ್, ಬೀರು, ಲಾಕರ್ ಗಳನ್ನ ಪರೊಶೀಲಿಸಿರೋ ಪೊಲೀಸರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಮತ್ತೊಂದೆಡೆ ಮಠದ ಆವರಣದಲ್ಲಿ ನಡೆದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀ ಸೇರಿ ಹಲವು ಮಠಾಧೀಶರು ಭಾಗಿಯಾಗಿದ್ರು. ಬಸವಲಿಂಗ ಶ್ರೀಗಳ ಗದ್ದುಗೆಯಲ್ಲಿ ಶಿವಪೂಜೆ ಮಾಡಿ ಸಿದ್ದಗಂಗಾ ಶ್ರೀಗಳ ಪಾದಪೂಜೆಯನ್ನ ನೆರವೇರಿಸಲಾಯಿತು. ಮಠಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಠದ ಮುಖಂಡರು ಸೇರಿ ನೂರಾರು ಭಕ್ತಾದಿಗಳು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಬಂಡೇಮಠ ಶ್ರೀಗಳ ಆತ್ಮಹತ್ಯೆ ಕೇಸ್- ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್
ಇದೇವೇಳೆ ಮಾತನಾಡಿದ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷ ಪರಮಶಿವಯ್ಯ ಮಾತನಾಡಿ ಬಂಧನ ಆಗಿರೋ ಕಣ್ಣೂರು ಶ್ರೀ ನಡೆ ಹಿಂದಿನಿಂದಲೂ ಸರಿ ಇಲ್ಲ. ಸಾಕಷ್ಟು ಹಗರಣ ಮಾಡಿ ಇತರ ಮಠಗಳು ಇವರನ್ನ ದೂರ ಇಟ್ಟಿದ್ರು. ಆದರೆ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಬಸವಲಿಂಗ ಶ್ರೀಗೆ ಇವರು ಅನ್ಯಾಯ ಮಾಡಿದ್ದಾರೆ. ಈಗ ಅವರ ಬಂಧನ ಆಗಿದೆ. ಅವರು ಜೀವನ ಪೂರ್ತಿ ಜೈಲಿನಲ್ಲಿರಬೇಕು, ಕಾನೂನಿನ ಪ್ರಕಾರ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ರು. ಅಲ್ಲದೇ ಶೀಘ್ರದಲ್ಲೇ ಬಂಡೇಮಠಕ್ಕೆ ನೂತನ ಮಠಾಧೀಶರ ನೇಮಕ ಮಾಡಲಾಗುವುದು. ಸಿದ್ದಗಂಗಾ ಶ್ರೀಗಳ ನಿರ್ಣಯದಂತೆ ಸಚ್ಚಾರಿತ್ರ್ಯ, ವಿದ್ಯಾವಂತ, ಆಧ್ಯಾತ್ಮಿಕ ಜ್ಞಾನ ಇರುವವರ ನೇಮಕ ಮಾಡಲಾಗುವು ಎಂದರು.
ಒಟ್ಟಾರೆ ಬಸವಲಿಂಗ ಶ್ರೀಗಳ ಆತ್ಮಹತ್ಯೆಯಿಂದಾಗಿ ಮಠದ ಭಕ್ತರು ಹಾಗೂ ಮಕ್ಕಳಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. 25ವರ್ಷಗಳ ಕಾಲ ಮಠ ಮುನ್ನಡೆಸಿ ಅಭಿವೃದ್ಧಿ ಮಾಡಿದ್ದನ್ನ ಭಕ್ತರು ಸ್ಮರಿಸಿದ್ದಾರೆ. ಅಲ್ಲದೇ ಪೊಲೀಸರ ತನಿಖೆ ಕೂಡಾ ತೀವ್ರಗೊಂಡಿದ್ದು ಪ್ರಕರಣದ ಮತ್ತಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?
Live Tv
[brid partner=56869869 player=32851 video=960834 autoplay=true]
ತಿರುವನಂತಪುರಂ: 135 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ (Air India Flight) ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಹಕ್ಕಿಯೊಂದು (Bird) ಬಡಿದ ಹಿನ್ನೆಲೆ ತುರ್ತು ಭೂಸ್ಪರ್ಶ (Emergency Landing) ಮಾಡಿರುವ ಘಟನೆ ಕೇರಳದ (Kerala) ಕಣ್ಣೂರಿನಲ್ಲಿ (Kannur) ಸೋಮವಾರ ನಡೆದಿದೆ.
ಕೋಝಿಕ್ಕೋಡ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅದಕ್ಕೆ ಹಕ್ಕಿಯೊಂದು ಬಡಿದಿದೆ. ವಿಮಾನದಲ್ಲಿ 135 ಪ್ರಯಾಣಿಕರಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಏರ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಗಗನಸಖಿ ಮೇಲೆ ಒಂದು ತಿಂಗಳಿಂದ ಅತ್ಯಾಚಾರ
ವಿಮಾನದಲ್ಲಿದ್ದ 135 ಪ್ರಯಾಣಿಕರಲ್ಲಿ 85 ಜನ ಕೋಝಿಕ್ಕೋಡ್ ಹಾಗೂ 50 ಮಂದಿ ಕಣ್ಣೂರಿನವರಾಗಿದ್ದಾರೆ. ಸದ್ಯ ಎಲ್ಲರೂ ಸುರಕ್ಷಿತರಾಗಿದ್ದಾರೆ. ವಿದೇಶಕ್ಕೆ ಹೋಗುವ ಪ್ರಯಾಣಿಕರಿಗೆ ಇತರ ವಿಮಾನಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, ದೆಹಲಿಗೆ ಹೋಗುವ ಪ್ರಯಾಣಿಕರನ್ನು ಕಣ್ಣೂರಿನ ಹೋಟೆಲ್‌ಗಳಲ್ಲಿ ಇರಿಸಲಾಗಿದೆ. ಮಂಗಳವಾರ ಅವರಿಗೆ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದಸರಾ ವೇಳೆ RSS, BJP ನಾಯಕರ ಮೇಲೆ ದಾಳಿಗೆ PFI ಸಂಚು
Live Tv
[brid partner=56869869 player=32851 video=960834 autoplay=true]
ತಿರುವನಂತಪುರಂ: ದೇಶದ 2ನೇ ಮಂಕಿಪಾಕ್ಸ್ ಪ್ರಕರಣ ಕೇರಳದ ಕಣ್ಣೂರಿನಲ್ಲಿ ದೃಢವಾಗಿದೆ. 31 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಗುಣಲಕ್ಷಣಗಳು ಕಂಡುಬಂದಿದ್ದು, ಇದೀಗ ಸೋಂಕು ದೃಢವಾಗಿದೆ.
ಕೇರಳದ ಕಣ್ಣೂರು ಜಿಲ್ಲೆಯ ವ್ಯಕ್ತಿ ಜುಲೈ 13 ರಂದು ದುಬೈನಿಂದ ಕರ್ನಾಟಕದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಬಳಿಕ ರೋಗದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ)ಗೆ ಕಳುಹಿಸಲಾಗಿತ್ತು. ಇದೀಗ ಅವರಿಗೆ ಮಂಕಿಪಾಕ್ಸ್ ಸೋಕು ಇರುವುದು ದೃಢವಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಮೊದಲ ಬಾರಿ ಸಾರ್ವಜನಿಕವಾಗಿ ವ್ಹೀಲ್ ಚೇರ್‌ನಲ್ಲಿ ಕಾಣಿಸಿಕೊಂಡ ಹೆಚ್‌ಡಿಡಿ
ಸದ್ಯ ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಸ್ಥಿತಿ ಸ್ಥಿರವಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ದೃಢಪಡಿಸಿದೆ. ಆದರೂ ನೆರೆಯ ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ದೃಢವಾಗುತ್ತಿರುವುದು ಕಾರ್ನಾಟಕದಲ್ಲೂ ಭೀತಿ ಹುಟ್ಟಿಸಿದೆ. ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ- ಸಾಲ ಮರುಪಾವತಿ ಮಾಡಲ್ಲ ಎಂದ ರೈತರು
ಪಶ್ಚಿಮ ಹಾಗೂ ಮಧ್ಯ ಆಫ್ರಿಕಾ ದೇಶಗಳಲ್ಲಿ ಮಂಕಿಪಾಕ್ಸ್ ದೀರ್ಘಕಾಲದಿಂದ ಕಂಡುಬಂದಿದ್ದು, ಈ ವರ್ಷದ ಮೇ ತಿಂಗಳಿನಿಂದ ಇತರ ದೇಶಗಳಲ್ಲೂ ಕಂಡುಬರಲು ಪ್ರಾರಂಭವಾಯಿತು. ಅತಿಯಾದ ಜ್ವರ ಹಾಗೂ ಚಿಕನ್‌ಪಾಕ್ಸ್ನಂತಹ ಗುಳ್ಳೆಗಳು ದೇಹದಲ್ಲಿ ಕಾಣಿಸಿಕೊಳ್ಳುವುದು ಮಂಕಿಪಾಕ್ಸ್‌ನ ಸಾಮಾನ್ಯ ಆರಂಭಿಕ ಲಕ್ಷಣಗಳು.
Live Tv
[brid partner=56869869 player=32851 video=960834 autoplay=true]
ತಿರುವನಂತಪುರಂ: ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಾವಿಗೆ ಬಿದ್ದ ಮಹಿಳೆಯೊಬ್ಬರು ಮತ್ತೊಂದು ಬಾವಿಯಲ್ಲಿ ಸುರಕ್ಷಿತವಾಗಿ ಪತ್ತೆಯಾದ ಅಚ್ಚರಿಯ ಘಟನೆ ಕಣ್ಣೂರಿನ ಇರಿಕ್ನೂರಲ್ಲಿ ನಡೆದಿದೆ.
ಉಮೇಬಾ(42) ಬಾವಿಗೆ ಬಿದ್ದ ಮಹಿಳೆ. ಇವರು ಇರಿಕೂರ್ ಆಯಿಪುಳದಲ್ಲಿ ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ಅಚಾನಕ್ ಆಗಿ ಬಾವಿಗೆ ಬಿದ್ದಿದ್ದಾರೆ.
ಮಹಿಳೆ ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಕೆಯ ರಕ್ಷಣೆಗೆ ತೆರಳಿದ್ದಾರೆ. ಆದರೆ ಮಹಿಳೆ ಮಾತ್ರ ಬಾವಿಯಲ್ಲಿ ಕಾಣಿಸಿರಲಿಲ್ಲ. ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಬಾವಿ 25 ಅಡಿ ಆಳವಿದೆ. ಬಾವಿಗೆ ಬಿದ್ದ ಮಹಿಳೆ ಕಾಣಿಸದೇ ಇದ್ದುದರಿಂದ ಕುಟುಂಬಸ್ಥರು ಗಾಬರಿಗೊಂಡಿದ್ದರು.
ಇತ್ತ ಮಹಿಳೆ ಬಾವಿಗೆ ಬಿದ್ದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಮಹಿಳೆ ಕಾಣಿಸದಿದ್ದಾಗ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವಷ್ಟರಲ್ಲಿ ಮಹಿಳೆಯನ್ನು ಸ್ಥಳೀಯರು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಸದ್ಯ ಆಕೆಯನ್ನು ಚಿಕಿತ್ಸೆಗಾಗಿ ಎಕೆಜಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸಾಂದರ್ಭಿಕ ಚಿತ್ರ
ವಿಶೇಷವೆಂದರೆ ಆಕೆ ಮಹಿಳೆ ಬಿದ್ದ ಬಾವಿಯಿಂದ ಭೂಗತವಾಗಿ ಗುಹೆಯೊಂದು ಹತ್ತಿರದ ಬಾವಿಗೆ ಸಂಪರ್ಕ ಹೊಂದಿತ್ತು. ಹೀಗಾಗಿ ಬಾವಿಗೆ ಬಿದ್ದ ಮಹಿಳೆ ಗುಹೆಯ ಮೂಲಕ ಇನ್ನೊಂದು ಬಾವಿಗೆ ಹೋಗಿ ಬಿದ್ದಿದ್ದಾರೆ.
ತಿರುವನಂತಪುರ: ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಇದೀಗ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಪ್ ಗಳು ಓಪನ್ ಆಗುತ್ತಿವೆ. ಹಾಗೆಯೇ ಜ್ಯುವೆಲ್ಲರಿ ಶಾಪ್ ಮಾಲೀಕ ತನ್ನ ಅಂಗಡಿಯ ಬಾಗಿಲು ತೆರೆದಾಗ ಶಾಕ್ ಒಂದು ಕಾದಿತ್ತು.
ಈ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದ್ದು, ಮಾಲೀಕ ತನ್ನ ಅಂಗಡಿಯನ್ನು ಕ್ಲೀನ್ ಮಾಡಲೆಂದು ಬಾಗಿಲು ತೆರೆದಾಗ ಈ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ಲಾಕ್ ಡೌನ್ ಮುಗಿಸಿ ತಿಂಗಳ ಬಳಿಕ ಶಾಪ್ ಬಾಗಿಲು ಓಪನ್ ಮಾಡುತ್ತಿದ್ದಂತೆಯೇ ಸರಗಳ ಮಧ್ಯೆ ಹೆಬ್ಬಾವು ಕಾಣಿಸಿಕೊಂಡಿದೆ. ಅಲ್ಲದೆ ಶಾಪ್ ಒಳಗಡೆ ಹೆಬ್ಬಾವು ಬರೋಬ್ಬರಿ 22 ಮೊಟ್ಟೆಗಳನ್ನು ಕೂಡ ಇಟ್ಟಿರುವುದನ್ನು ಕಂಡು ಮಾಲೀಕ ಅಚ್ಚರಿಗೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಂಗಡಿ ಮಾಲೀಕ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಧಿಕಾರಿಗಳು ಕೂಡ ಸ್ಥಳಕ್ಕೆ ದೌಡಾಯಿಸಿ ಹೆಬ್ಬಾವು ಹಾಗೂ ಮೊಟ್ಟೆಗಳನ್ನು ರಕ್ಷಣೆ ಮಾಡಿದ್ದಾರೆ.
ಹಾವೇರಿ: ಜಿಲ್ಲೆಯಿಂದ ಕೆಲಸ ಅರಸಿಕೊಂಡು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಗೆ ದುಡಿಯಲು ಹೋಗಿದ್ದ 40ಕ್ಕೂ ಅಧಿಕ ಕಾರ್ಮಿಕರು ಊರಿಗೆ ಬರಲಾಗದೆ ಪರದಾಡ್ತಿದ್ದಾರೆ.
ಕಣ್ಣೂರು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ವಾಸವಾಗಿರೋ ಕಾರ್ಮಿಕರು ಲಾಕ್ ಡೌನ್ ನಂತರ ರಾಜ್ಯಗಳ ಗಡಿ ಬಂದ್ ಆಗಿದ್ದರಿಂದ ಊರಿಗೆ ಬರಲು ಪರದಾಡ್ತಿದ್ದಾರೆ. ಅಲ್ಲದೆ ಲಾಕ್ ಡೌನ್ ನಂತರ ಕೆಲಸವೂ ಇಲ್ಲದೆ ಇದ್ದ ಹಣವೂ ಖರ್ಚಾಗಿದೆ. ಊಟಕ್ಕೆ ಬೇಕಾದ ಪದಾರ್ಥಗಳು ಖಾಲಿ ಆಗಿವೆ.
ಹೀಗಾಗಿ ನಮ್ಮನ್ನ ನಮ್ಮ ನಮ್ಮ ಊರಿಗೆ ತಲುಪಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ. ಮೊಬೈಲ್ ನಲ್ಲಿ ವಿಡಿಯೋ ಮಾಡಿ ಹರಿಬಿಡೋ ಮೂಲಕ ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಊರಿಗೆ ತಲುಪಿಸುವಂತೆ ಕೇಳಿಕೊಳ್ತಿದ್ದಾರೆ.