Tag: ಕಣ್ಣು

  • ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ

    ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ

    ಹೊಳೆಯುವ ಕಣ್ಣುಗಳ ಕೆಳಗೆ ಕಪ್ಪಾಗಿದ್ದರೆ, ನಿಮ್ಮ ಅಂದಕ್ಕೆ ಕಪ್ಪು ಚುಕ್ಕೆಯಾಗುತ್ತದೆ. ಡಾರ್ಕ್ ಸರ್ಕಲ್ ಸಮಸ್ಯೆ ಪ್ರತಿಯೊಬ್ಬರಿಗೂ ಕಾಡುತ್ತದೆ. ಕಣ್ಣಿನ ಕೆಳಗೆ ಕಪ್ಪಾಗುವುದು ಕೇವಲ ಮಹಿಳೆಯರಲ್ಲೇ ಅಲ್ಲದೇ ಪುರುಷರಲ್ಲು ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಸ್ಯೆ ಇಲ್ಲಿದೆ ಪರಿಹಾರ

    * ಎಳೆ ಸೌತೆಕಾಯಿಯನ್ನು ಕತ್ತರಿಸಿಕೊಂಡು ನಿಮ್ಮ ಎರಡೂ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ ನಿಮ್ಮ ಕಣ್ಣುಗಳು ಹೆಚ್ಚು ತಾಜಾತನದಿಂದ ಕೂಡಿರುತ್ತದೆ.  ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    * ಟೊಮೆಟೋ ರಸ, ನಿಂಬೆ ಹಣ್ಣಿನ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ. ಕಣ್ಣುಗಳ ಸುತ್ತ ಹಚ್ಚಿ ಸುಮಾರು ಅರ್ಧ ಗಂಟೆಯವರೆಗೆ ಇದನ್ನು ಹಾಗೆ ಬಿಟ್ಟು, ಆಮೇಲೆ ತಂಪಾದ ನೀರಿನಿಂದ ಮುಖ ತೊಳೆದುಕೊಳ್ಳಬೇಕು. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    * ಹತ್ತಿಯನ್ನು ರೋಸ್ ವಾಟರ್‌ನಲ್ಲಿ ಮುಳುಗಿಸಿ ಕಣ್ಣಿನ ಸುತ್ತ ಇಟ್ಟುಕೊಳ್ಳಿ ಇದರಿಂದ ಬಹುತೇಕ ಕಣ್ಣುಗಳ ಸಮಸ್ಯೆಗಳು ಬಗೆಹರಿಯುತ್ತವೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    * ಆಲೂಗಡ್ಡೆ ರಸವನ್ನು ಹತ್ತಿಯ ಸಹಾಯದಿಂದ ಕಣ್ಣುಗಳ ಮೇಲೆ 10 ನಿಮಿಷಗಳ ಕಾಲ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದನ್ನೂ ಓದಿ: ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ

    * ಮಲಗುವ ಮೊದಲು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಇದರಿಂದ ಚರ್ಮ ಹೊಳಿಪಿನಿಂದ ಕೂಡಿರುತ್ತದೆ. ಇದನ್ನೂ ಓದಿ: ಮಜ್ಜಿಗೆಯಲ್ಲಿದೆ ಮದ್ದಿನ ಗುಣ- ಪ್ರತಿನಿತ್ಯ ಒಂದು ಲೋಟ ಮಜ್ಜಿಗೆ ಕುಡಿದು ನೋಡಿ

    * ಕ್ಯಾರೆಟ್, ಬಿಟ್ರೂಟ್‍ಗಳಂತಹ ಹಸಿ ತರಕಾರಿಗಳನ್ನು ಹೆಚ್ಚು ಸೇವಿಸಿ. ವಿಟಮಿನ್ ಮತ್ತು ಮಿನರಲ್ಸ್‍ಗಳಿಂದ ಕೂಡಿದ ತರಕಾರಿಗಳು ದೇಹವನ್ನೂ ಕೂಡ ಆರೋಗ್ಯಯುತವಾಗಿಡುತ್ತದೆ. ಇದನ್ನೂ ಓದಿ: ಅಂದಕಷ್ಟೇ ಅಲ್ಲ ಉತ್ತಮ ಆರೋಗ್ಯಕ್ಕೂ ಧರಿಸಿ ಕಾಲ್ಗೆಜ್ಜೆ

  • ಅಪಘಾತದಲ್ಲಿ ಯುವಕ ಸಾವು- ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

    ಅಪಘಾತದಲ್ಲಿ ಯುವಕ ಸಾವು- ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

    ಮಡಿಕೇರಿ: ಕಳೆದ 5 ದಿನಗಳ ಹಿಂದೆ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ, ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತನ ಕುಟುಂಬಸ್ಥರು ಆತನ ಅಂಗಾಂಗ ದಾನ ಮಾಡುವ ಮೂಲಕ  ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

    ಪ್ರಜ್ವಲ್ (22) ಸಾವಿಗೀಡಾದ ಯುವಕ. ಈತ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ರೈತ ಸುರೇಶ್ ಅವರ ಮಗನಾಗಿದ್ದನು. ಪ್ರಜ್ವಲ್ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದ.

    ಕೂಡ್ಲೂರು ಕೈಗಾರಿಕಾ ಕಾಫಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಜ್ವಲ್, ಭಾನುವಾರ ರಾತ್ರಿ ಕೂಡ್ಲೂರ್ ಕಡೆಯಿಂದ ಕೂಡಿಗೆಗೆ ಹೋಗುತ್ತಿದ್ದ. ಈ ಸಂದರ್ಭ ಕೂಡುಮಂಗಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ಡಿಕ್ಕಿಯಾಗಿತ್ತು. ಪರಿಣಾಮ ಪ್ರಜ್ವಲ್ ತಲೆ ಭಾಗಕ್ಕೆ ಭಾರೀ ಪೆಟ್ಟು ಬಿದ್ದಿತ್ತು. ಗಾಯಾಳುವಿಗೆ ಕುಶಾಲನಗರ ಅರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮೈಸೂರು ಅಪೋಲೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಪ್ರಜ್ವಲ್ ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸುತ್ತಾರೆ. ಬಳಿಕ ಪ್ರಜ್ವಲ್ ತಂದೆ ತಾಯಿ ಹಾಗೂ ಚಿಕ್ಕಪ್ಪ ಮತ್ತು ಕುಟುಂಬಸ್ಥರು ಪ್ರಜ್ವಲ್‍ನ ಅಂಗಾಂಗ ದಾನ ಮಾಡಲು ನಿರ್ಧರಿಸಿ ಪ್ರಜ್ವಲ್‍ನ ಹೃದಯ ,ಕಣ್ಣು, ಕಿಡ್ನಿ ದಾನ ಮಾಡಿದ್ದಾರೆ. ಇದನ್ನೂ ಓದಿ: IPL Auction -15.25 ಕೋಟಿಗೆ ಇಶಾನ್ ಕಿಶನ್ ಸೇಲ್‌

    ಅಂಗಾಗಗಳನ್ನು ದಾನವಾಗಿ ನೀಡಿದ ಬಳಿಕ ಕೂಡಿಗೆಗೆ ಆಗಮಿಸಿದ ಪ್ರಜ್ವಲ್ ಪಾರ್ಥೀವ ಶರೀರಕ್ಕೆ ಗೌರವ ನಮನ ಸಲ್ಲಿಸಲಾಯಿತು. ಸ್ಥಳೀಯ ಗ್ರಾಪಂ ಜನಪ್ರತಿನಿಧಿಗಳು, ಆಟೋ ಚಾಲಕರುಗಳು, ನೂರಾರು ಮಂದಿ ಯುವಕರು ಮೃತದೇಹ ಬರಮಾಡಿಕೊಂಡು ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸಿದರು.

  • ಮೂರು ಕಣ್ಣು, 4 ಮೂಗಿನ ರಂಧ್ರ ಹೊಂದಿರುವ ವಿಚಿತ್ರ ಕರು ಜನನ

    ಮೂರು ಕಣ್ಣು, 4 ಮೂಗಿನ ರಂಧ್ರ ಹೊಂದಿರುವ ವಿಚಿತ್ರ ಕರು ಜನನ

    ರಾಯ್ಪುರ: ಹಸುವೊಂದು ಮೂರು ಕಣ್ಣು ಮತ್ತು ನಾಲ್ಕು ಮೂಗಿನ ರಂಧ್ರ ಹೊಂದಿರುವ ವಿಚಿತ್ರ ಕರುವಿಗೆ ಜನ್ಮ ನೀಡಿರುವ ಘಟನೆ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ.

    ಸದ್ಯ ಮೂರು ಕಣ್ಣಿನ್ನು ಹೊಂದಿರುವ ಕರುವನ್ನು ನೋಡಲು ದೂರದ ಊರುಗಳಿಂದ ಜನ ಜಮಾಯಿಸುತ್ತಿದ್ದು, ಎಲ್ಲರೂ ಕರುವಿಗೆ ಹೂವಿನ ಮಾಲೆ ಹಾಕಿ, ಕಾಣಿಕೆ ರೂಪದಲ್ಲಿ ಹಣವನ್ನು ಅರ್ಪಿಸಿ ಮಹಾದೇವನ ರೂಪವೆಂದು ಪೂಜಿಸುತ್ತಿದ್ದಾರೆ. ಮತ್ತೊಂದೆಡೆ ಪಶು ವೈದ್ಯರು ಕರು ಸರಿಯಾಗಿ ಬೆಳವಣಿಗೆಯಾಗದ ಕಾರಣ ಹೀಗೆ ಜನಿಸಿದೆ ಎನ್ನುತ್ತಿದ್ದಾರೆ.  ಇದನ್ನೂ ಓದಿ: ದೇಶದಲ್ಲಿ ಒತ್ತಾಯದಿಂದ ಯಾರಿಗೂ Corona Vaccine ನೀಡಲ್ಲ: ಕೇಂದ್ರ ಸರ್ಕಾರ

    ಜನವರಿ 14 ರಂದು ಸಂಜೆ 7 ಗಂಟೆ ಸುಮಾರಿಗೆ ಹಸು ಕರುವಿಗೆ ಜನ್ಮ ನೀಡಿದ್ದು, ಅಂದು ಮಕರ ಸಂಕ್ರಾಂತಿ ಹಬ್ಬದವಾಗಿದ್ದರಿಂದ ಕರುವಿನ ಜನನದ ಮೇಲೆ ಎಲ್ಲರಿಗೂ ನಂಬಿಕೆ ಹೆಚ್ಚಾಗಿದೆ. 3 ಕಣ್ಣಿನ ಕರುವನ್ನು ನೋಡಲು ಜನ ಮುಗಿಬೀಳುತ್ತಿದ್ದು, ಗ್ರಾಮಸ್ಥರು ದೀಪ ಹಚ್ಚಿ, ತೆಂಗಿನಕಾಯಿ ಒಡೆದು ಕರು ಮಹಾದೇವನ ರೂಪ ತಾಳಿದೆ ಎಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

    ರೈತ ಹೆಮಂತ್ ಚಂದೇಲ್ ಅವರು ಕೃಷಿ ಕೆಲಸದ ಜೊತೆಗೆ ಹಸು ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದು, ಜರ್ಸಿ ಹಸುವನ್ನು ಸಾಕಿದ್ದಾರೆ. ಸಂಕ್ರಾತಿ ಹಬ್ಬದಂದು ಹಸು ಕರುವಿಗೆ ಜನ್ಮ ನೀಡಿದ್ದು, ಎರಡು ಕಣ್ಣುಗಳ ಮಧ್ಯೆ ಹಸುವಿನ ಹಣೆಯ ಮೇಲೆ ಮತ್ತೊಂದು ಕಣ್ಣಿದೆ. ವಿಶೇಷವೆಂದರೆ ಈ ಹಸು ಎರಡು ಮೂಗಿನ ರಂಧ್ರಗಳ ಬದಲಿಗೆ 4 ರಂಧ್ರಗಳನ್ನು ಹೊಂದಿದೆ ಹಾಗೂ ಅದರ ಬಾಲ ಜಡೆಯ ಮಾದರಿ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

  • ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

    ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್ ಕುಮಾರ್ (Puneeth Raj Kumar) ಅವರ ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ.

    ಹೌದು. ಈಗಾಗಲೇ ನಾಲ್ಕು ಜನರ ಬಾಳಿಗೆ ಬೆಳಕಾಗಿರೋ ಪುನೀತ್ ರಾಜ್ ಕುಮಾರ್ ಅವರ ಕಣ್ಣಿನಿಂದ ಇನ್ನೂ 10 ಜನಕ್ಕೆ ದೃಷ್ಟಿ ನೀಡಲು ವೈದ್ಯರು ತಯಾರಿ ನಡೆಸುತ್ತಿದ್ದಾರೆ. ಈ ವಿನೂತನ ಪ್ರಯತ್ನಕ್ಕೆ ನಾರಾಯಣ ನೇತ್ರಾಲಯ ಮುಂದಾಗಿದೆ. ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಕಾರ್ನಿಯಾ (Cornea) ಮತ್ತು ಸ್ಟೆಮ್ ಸೆಲ್ (Stem Cell) ಎರಡನ್ನು ಬಳಕೆ ಮಾಡಿಕೊಂಡು ದೃಷ್ಟಿ ನೀಡಲಾಗುತ್ತಿದೆ. ಇದನ್ನೂ ಓದಿ: ಇತಿಹಾಸ ಬರೆದ ಪವರ್ ಸ್ಟಾರ್ ಪುಣ್ಯಸ್ಮರಣೆ- ದಾಖಲೆ ಪ್ರಮಾಣದಲ್ಲಿ ನೇತ್ರದಾನಕ್ಕೆ ಅರ್ಜಿ

    ಪುನೀತ್ ರಾಜ್ ಕುಮಾರ್ ಸ್ಟೆಮ್ ಸೆಲ್ ಗಳ ಬಳಕೆಯಿಂದ ಅಂಧರಿಗೆ ದೃಷ್ಟಿ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಸ್ಟೆಮ್ ಸೆಲ್ ಥೆರಪಿ ನಡೆಸಿ 10 ಮಂದಿಗೆ ದೃಷ್ಟಿ ನೀಡಲು ಮುಂದಾಗಿದೆ. ಅಪ್ಪು ಕಾರ್ನಿಯಾವನ್ನು ಬೇರೆಯವರಿಗೆ ಬಳಸಿ ದೃಷ್ಟಿ ನೀಡಲಾಗಿದೆ. ಈಗ ಪುನೀತ್ ಅವರ ಕಣ್ಣಿನ ರಿಮ್ ಭಾಗದಿಂದ ವೈದ್ಯರು ಸ್ಟೆಮ್ ಸೆಲ್ ಸಂಗ್ರಹಿಸಿದ್ದಾರೆ. ಈಗಾಗಲೇ ಸ್ಟೆಮ್ ಸೆಲ್ ಗಳು ಮಲ್ಟಿಪಲ್ ಆಗುತ್ತಿವೆ. ಮಲ್ಟಿಪಲ್ ಆಗಲು ಕಾಲಾವಧಿ ಬೇಕಾಗುತ್ತಿದೆ. ಮಲ್ಟಿಪಲ್ ಆದ ಮೇಲೆ ಸ್ಟೆಮ್ ಸೆಲ್ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ಕಸಿ ಮಾಡಬಹುದು. ಈಗ ಕಸಿ ಮಾಡಲು ನಾರಾಯಣ ನೇತ್ರಾಲಯ ವೈದ್ಯರು ಮುಂದಾಗಿದ್ದಾರೆ. ಇದನ್ನೂ ಓದಿ: ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

    ಸ್ಟೆಮ್ ಸೆಲ್ ಥೆರಪಿ ಎಂದರೇನು ?
    ರೆಟಿನಾ (ಅಕ್ಷಿಪಟಲ) ಸಂಬಂಧಿ ಸಮಸ್ಯೆಗಳು ಹಾಗೂ ವಂಶವಾಹಿ ಗುಣಗಳಿಂದ ಬರುವ ಅನುವಂಶೀಯ ಖಾಯಿಲೆ ಬಳಲುತ್ತಿರುವರಿಗೆ ಅಂಧತ್ವ ನಿವಾರಿಸಬಹುದು. ಪಟಾಕಿ ಸಿಡಿತದಿಂದ ದೃಷ್ಟಿ ಹಾನಿಯಾಗಿದ್ದರೆ ನಿವಾರಿಸಲು ಸ್ಟೆಮ್ ಥೆರಪಿ ಮಾಡಿ ದೃಷ್ಟಿ ನೀಡುವುದೇ ಸ್ಟೆಮ್ ಥೆರಪಿ. ಸ್ಟೆಮ್ ಸೆಲ್ ಸಮಸ್ಯೆಯಿಂದಾಗಿ ಮ್ಯಾಕ್ಯೂಲರ್ ಡಿಜನರೇಶನ್ (Macular Degeneration), ರಿಟನೈಟಿಸ್ ಪಿಂಗಮೆಂಟೋಸ್ (Retinitis Pigmentosa) ನಂತಹ ಖಾಯಿಲೆಗಳಿಗೆ ಲಕ್ಷಾಂತರ ಮಂದಿ ಕುರುಡುರಾಗುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಪ್ರೇರಣೆ – ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಂದಿ ನೇತ್ರದಾನ

  • ನಾಲ್ವರ ಬಾಳಿಗೆ ಬೆಳಕಾದ ಅಪ್ಪು

    ನಾಲ್ವರ ಬಾಳಿಗೆ ಬೆಳಕಾದ ಅಪ್ಪು

    ಬೆಂಗಳೂರು: ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ ಕಣ್ಣನ್ನು ನಾಲ್ವರಿಗೆ ಅಳವಡಿಸಿದ್ದೇವೆ ಎಂದು ನಾರಾಯಣ ನೇತ್ರಾಲಯ ಡಾ. ಭುಜಂಗಶೆಟ್ಟಿ ಅವರು ಹೇಳಿದ್ದಾರೆ.

     

    ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಹೃದಯ ಸ್ತಂಭದಿಂದ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಆದರೆ ಸತ್ತ ಮೇಲೂ ತಮ್ಮ ಕಣ್ಣುಗಳನ್ನು ದಾನ ಮಾಡುವ ಮಾನವೀಯತೆ ಮೆರೆದಿದ್ದಾರೆ. ಇದೀಗ ಪುನೀತ್ ಅವರ ಕಣ್ಣು ನಾಲ್ವರ ಅಂಧಕಾರವನ್ನು ದೂರ ಮಾಡಿದೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

    ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣ ನೇತ್ರಾಲಯ ಡಾ.ಭುಜಂಗಶೆಟ್ಟಿ ಅವರು, ರಾಜ್ ಕುಮಾರ್ ಕುಟುಂಬದವರಿಗೆ ವಂದನೆ ಹೇಳೋಕೆ ಬಯಸುತ್ತೇನೆ. ಮೊದಲಿಗೆ ರಾಜ್‍ಕುಮಾರ್ ಅವರು ಬಂದು ನೇತ್ರಾದಾನ ಶುರು ಮಾಡಿದರು. ಬಳಿಕ ಪಾರ್ವತಮ್ಮನವರು, ಇದೀಗ ಪುನೀತ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಹೀಗಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ಸಿನಿಮಾ ರಿಲೀಸ್?

    ಶನಿವಾರವೇ ಅಪರೇಷನ್ ಮಾಡಿ ಪುನೀತ್ ಅವರ ಕಣ್ಣನ್ನು ಬೇರೆಯವರಿಗೆ ನೀಡಿದ್ದೇವೆ. ಸಾಮಾನ್ಯವಾಗಿ ಕಣ್ಣುದಾನ ಮಾಡಿದರೆ ಇಬ್ಬರಿಗೆ ಕೊಡುತ್ತೇವೆ. ಆದರೆ ಅಪ್ಪು ಕಣ್ಣುಗಳನ್ನು ನಾಲ್ಕು ಜನರಿಗೆ ಅಳವಡಿಸಿದ್ದೇವೆ. ಕರ್ನಿಯಾದ ಮುಂಭಾಗ ಮತ್ತು ಹಿಂಭಾಗದ ಪದರವನ್ನು ಎರಡು ಭಾಗವಾಗಿ ಮಾಡಿ ನಾಲ್ಕು ಜನರಿಗೆ ಕೊಟ್ಟಿದ್ದೇವೆ. ಅಂದರೆ ಕಣ್ಣಿನ ಮುಂದಿನ ಭಾಗ ಮತ್ತು ಬ್ಯಾಕ್ ಪೋಷನ್ ಬೇರ್ಪಡಿಸಿ ಅವಶ್ಯಕತೆ ಇರುವ ನಾಲ್ವರಿಗೆ ಕೊಟ್ಟಿದ್ದೇವೆ. ಒಬ್ಬರ ಕಣ್ಣನ್ನು ಒಂದೇ ದಿನ, ನಾಲ್ವರಿಗೆ ಕೊಟ್ಟಿರುವುದು ಇದೇ ಮೊದಲಾಗಿದೆ. ನಾಲ್ವರು ಇದೀಗ ತುಂಬಾ ಚೆನ್ನಾಗಿದ್ದಾರೆ. ಇದಕ್ಕೆ ಕಣ್ಣು ತುಂಬಾ ಚೆನ್ನಾಗಿ ಇರಬೇಕಾಗುತ್ತದೆ. ಪುನೀತ್ ಕಣ್ಣು ತುಂಬಾ ಚೆನ್ನಾಗಿದ್ದ ಕಾರಣ ಇದನ್ನು ನಾಲ್ವರಿಗೆ ನೀಡಲು ಸಾಧ್ಯವಾಯಿತು ಎಂದು ತಿಳಿಸಿದರು.

    ಐದು ಜನರ ತಂಡದ ಡಾಕ್ಟರ್‌ಗಳು ಆಪರೇಷನ್ ಅನ್ನು ಮಾಡಿದ್ದಾರೆ. ಈ ಮೊದಲು ಈ ರೀತಿಯ ಆಪರೇಷನ್ ಅನ್ನು ಬೇರೆ, ಬೇರೆ ದಿನ ಮಾಡಲಾಗುತ್ತಿತ್ತು. ಆದರೆ ಅಪ್ಪು ಕಣ್ಣಿಗೆ ಪೂರಕವಾದ ನಾಲ್ವರ ಕಣ್ಣುಗಳಿಗೆ ಮ್ಯಾಚ್ ಆಗಬೇಕು. ಇದೀಗ ಒಬ್ಬ ಯುವತಿ, ಮೂವರು ಯುವಕರಿಗೆ ಅಪ್ಪು ಕಣ್ಣು ನೀಡಲಾಗಿದೆ. ಬೆಳಗ್ಗೆ ಹನ್ನೊಂದು ಗಂಟೆಯಿಂದ ಸಂಜೆ ಆರು ಗಂಟೆ ತನಕ ಆಪರೇಷನ್ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ:  ಉಪ್ಪಿನಲ್ಲಿ ಚಿತ್ರ ಬಿಡಿಸಿ ಅಪ್ಪುಗೆ ವಿಶೇಷ ವಿದಾಯ ಹೇಳಿದ ತೆಲುಗು ಅಭಿಮಾನಿ

  • ಇಬ್ಬರ ಬಾಳಿಗೆ ಬೆಳಕಾದ ಅಪ್ಪು

    ಇಬ್ಬರ ಬಾಳಿಗೆ ಬೆಳಕಾದ ಅಪ್ಪು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಪುನೀತ್ ಕಣ್ಣುಗಳನ್ನ ಇಬ್ಬರಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ.

    PUNEET RAJKUMAR

    ಪುನೀತ್ ಅವರು ದಾನ ಮಾಡಿದ್ದ ಕಣ್ಣುಗಳನ್ನು ನಿನ್ನೆ ಒಬ್ಬರಿಗೆ, ಇಂದು ಒಬ್ಬರಿಗೆ ನೀಡಲಾಗಿತ್ತು. ಚಿಕಿತ್ಸೆ ಯಶಸ್ವಿಯಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‍ಕುಮಾರ್ ಅವರು ತಂದೆ ರಾಜ್‍ಕುಮಾರ್ ಹಾದಿಯಲ್ಲೇ ಸಾಗಿದ್ದಾರೆ. ವೈದ್ಯರು ಪುನೀತ್ ಕಣ್ಣುಗಳನ್ನ ಇಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

    ನಾರಾಯಣ ನೇತ್ರಾಲಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಿನ್ನೆ ಒಬ್ಬರಿಗೆ ಆಪರೇಷನ್ ಮಾಡಲಾಗಿದೆ ಮತ್ತು ಇಂದು ಮತ್ತೊಬ್ಬರಿಗೆ ಆಪರೇಷನ್ ಮಾಡಲಾಗಿದೆ. ಈ ಮೂಲಕ ಪುನೀತ್ ಅವರ ಎರಡೂ ಕಣ್ಣುಗಳ ಅಳವಡಿಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸಾವಿನ ಬಳಿಕವೂ ಇಬ್ಬರ ಬಾಳಿನಲ್ಲಿ ಅಪ್ಪು ಬೆಳಕಾಗಿದ್ದಾರೆ. ನಾರಾಯಣ ನೇತ್ರಾಲಯ ವೈದ್ಯರು ಮಂಗಳವಾರ ಶಸ್ತ್ರಚಿಕಿತ್ಸೆ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

    PUNEET

    ಪುನೀತ್ ರಾಜ್‍ಕುಮಾರ್ ಅವರು ನಿಧನರಾದ ಬಳಿಕ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಗಿತ್ತು. ಇದೀಗ ಅವರ ಕಣ್ಣುಗಳಿಂದ ಇಬ್ಬರ ಬಾಳಲ್ಲಿ ಬೆಳಕು ಮೂಡಿದೆ. ಇಂದು ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆಯನ್ನು ಈಡಿಗ ಸಂಪ್ರದಾಯದ ಮೂಲಕವಾಗಿ ನೆರವೇರಿಸಲಾಗಿದೆ. ಪುನೀತ್ ಅವರನ್ನು ಕಳೆದುಕೊಂಡ, ಅಭಿಮಾನಿಗಳು, ಕುಟುಂಬಸ್ಥರು, ಕಲಾವಿದರು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಸಾವು ದೊಡ್ಡ ಅನ್ಯಾಯ: ಸೃಜನ್ ಲೋಕೇಶ್ 

  • ಇಬ್ಬರು ಯುವಕರಿಗೆ ಸಂಚಾರಿ ವಿಜಯ್ ಕಣ್ಣು ಜೋಡಣೆ

    ಇಬ್ಬರು ಯುವಕರಿಗೆ ಸಂಚಾರಿ ವಿಜಯ್ ಕಣ್ಣು ಜೋಡಣೆ

    – ಮಿಂಟೋ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿ

    ಬೆಂಗಳೂರು: ಸಂಚಾರಿ ವಿಜಯ್ ಅವರ ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿದೆ. ಅವರ ಸಾಮಾಜಿಕ ಕಾರ್ಯ, ನಟನೆ, ಒಳ್ಳೆಯ ಗುಣ ಇರುವಂತಹ ನಟನನ್ನ ಕಳೆದುಕೊಂಡು ಕನ್ನಡಿಗರು ಕಣ್ಣೀರು ಹಾಕುತ್ತಾ ಇದ್ದಾರೆ. ಆದರೆ ಈಗ ಅವರ ನಿಧನದ ನಂತರ ಮಾಡಿರುವ ಮಹಾತ್ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಅವರ ಅಂಗಾಂಗ ದಾನದ ನಿರ್ಧಾರಕ್ಕೆ ವೈದ್ಯರು ಅವರ ಪೋಷಕರಿಗೆ ಧನ್ಯವಾದ ತಿಳಿಸುತ್ತಾ ಇದ್ದಾರೆ.

    ಸಂಚಾರಿ ವಿಜಯ್ ಅವರ ಕಣ್ಣುಗಳನ್ನ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರು ಯುವಕರಿಗೆ ಜೋಡಣೆ ಮಾಡಲಾಗಿದೆ. ಸಂಚಾರಿ ವಿಜಯ್ ಅವರ ವಯಸ್ಸಿನ ಒಬ್ಬರಿಗೆ ಮತ್ತು ಅವರಿಗಿಂತ ಚಿಕ್ಕ ವಯಸ್ಸಿನ ಮತ್ತೊಬ್ಬ ವಯಸ್ಸಿನ ಯುವಕನಿಗೆ ಕಣ್ಣು ಜೋಡಣೆ ಮಾಡಲಾಗಿದೆ. ಇಂದು ಬೆಳಗ್ಗೆಯೇ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿರೋದಾಗಿ ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ರಾಯಭಾರ ಕಚೇರಿಯಿಂದ ವಿಜಯ್ ನಿಧನಕ್ಕೆ ಕನ್ನಡದಲ್ಲೇ ಸಂತಾಪ

    ಈ ಬಗ್ಗೆ ಮಾತನಾಡಿದ ಡಾ. ಸುಜಾತ ರಾಥೋಡ್, ನಮ್ಮಲ್ಲಿ ಇಬ್ಬರಿಗೆ ಕಣ್ಣನ್ನ ಹಾಕಲಾಗಿದೆ. ಇಬ್ಬರೂ ಕೂಡ ಅಗತ್ಯವಾಗಿ ಬೇಕಾದ ರೋಗಿಗಳಿಗೆ ಕಣ್ಣು ಹಾಕಲಾಗಿದೆ. ಬ್ರೈನ್ ಡೆಡ್ ಆದಾಗ ಕಣ್ಣುಗಳು ಉತ್ತಮ ಗುಣಮಟ್ಟದಲ್ಲೇ ಇರುತ್ತೆ ವಿಜಯ್ ಕಣ್ಣುಗಳು ಉತ್ತಮವಾಗಿ ಇದ್ದವು. ಇದನ್ನೂ ಓದಿ: ದೇವರು ನಿಜವಾಗ್ಲೂ ಕ್ರೂರಿ ಅಂದ್ರು ಮೇಘನಾ..!

    ವಿಜಯ್ ಅವರ ಕಣ್ಣಿನಿಂದ ಇಬ್ಬರು ಯುವಕರು ಇದೀಗ ಜಗತ್ತನ್ನ ನೋಡುವಂತಾಗಿದೆ. ಆಪರೇಷನ್ ಆಗಿದ್ದು 6 ರಿಂದ 8 ಗಂಟೆ ಬಳಿಕ ದೃಷ್ಟಿ ಬರಲಿದೆ. 24 ಗಂಟೆಯೊಳಗೆ ಅವರ ದೃಷ್ಟಿ ಯಾವ ಪ್ರಮಾಣದಲ್ಲಿದೆ ಗೊತ್ತಾಗತ್ತೆ ಈ ನಿರ್ಧಾರ ತೆಗೆದುಕೊಂಡ ಕುಟುಂಬಸ್ಥರಿಗೆ ಕೃತಜ್ಞತೆ ಸಲ್ಲಿಸುತ್ತೆವೆ ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಸ್ನೇಹಿತ ರಘು ತೋಟದಲ್ಲೇ ಮಣ್ಣಲ್ಲಿ ಮಣ್ಣಾದ ವಿಜಯ್

  • ಬ್ಲ್ಯಾಕ್ ಫಂಗಸ್‍ನಿಂದ ಕಣ್ಣು ಕಳೆದುಕೊಂಡ ವ್ಯಕ್ತಿ

    ಬ್ಲ್ಯಾಕ್ ಫಂಗಸ್‍ನಿಂದ ಕಣ್ಣು ಕಳೆದುಕೊಂಡ ವ್ಯಕ್ತಿ

    – ಕುಟುಂಬಸ್ಥರ ಅನುಮತಿ ಪಡೆದು ಆಪರೇಷನ್

    ಕಲಬುರಗಿ: ಕೊರೊನಾದಿಂದ ತತ್ತರಿಸಿದ ಕಲಬುರಗಿಯಲ್ಲಿ ಇದೀಗ ಬ್ಲ್ಯಾಕ್ ಫಂಗಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಬ್ಲ್ಯಾಕ್ ಫಂಗಸ್‍ಗೇ ಗುರಿಯಾಗಿದ ವ್ಯಕ್ತಿಯೊಬ್ಬರ ಬಲಗಣ್ಣು ತೆಗೆದು ವೈದ್ಯರು ಅವರ ಜೀವ ಉಳಿಸಿದ್ದಾರೆ.

    ಕಲಬುರಗಿಯ ನಿವಾಸಿಯಾದ ಅನಿಲ್ ಕುಮಾರ್ ಅವರಿಗೆ 8 ದಿನಗಳ ಹಿಂದೆ ಬಲಗಣ್ಣಿನ ಬಳಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಆದಾದ ಬಳಿಕ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ಅವರ ಸಂಬಂಧಿಕರು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ನಂತರ ಆತನ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಔಷಧಿ ಮೂಲಕ ಬ್ಲ್ಯಾಕ್ ಫಂಗಸ್ ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಸಿದ್ದಾರೆ. ಆದರೆ ಎಷ್ಟೇ ಔಷಧಿ ಇಂಜಕ್ಷನ್ ನೀಡಿದರೂ, ಬ್ಲ್ಯಾಕ್ ಫಂಗಸ್ ಮಾತ್ರ ಕಡಿಮೆಯಾಗಲಿಲ್ಲ.

    ಯಾವ ಔಷಧಿ ನೀಡಿದರೂ ಅನಿಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದಾಗ, ಕುಟುಂಬಸ್ಥರ ಜೊತೆ ಚರ್ಚಿಸಿ ಬ್ಲ್ಯಾಕ್ ಫಂಗಸ್ ಆಗಿರುವ ಬಲಗಣ್ಣು ತೆಗೆದರೆ ಮಾತ್ರ ಇವರು ಉಳಿಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಮೆದುಳಿಗೂ ಸಹ ಇದು ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಹೀಗಾಗಿ ಕುಟುಂಬಸ್ಥರ ಅನುಮತಿ ಪಡೆದು ಬ್ಲ್ಯಾಕ್‍ಫಂಗಸ್ ಆದ ಬಲಗಣ್ಣನ್ನು ಆಪರೇಷನ್ ಮಾಡಿ ವೈದ್ಯರು ತೆಗೆದಿದ್ದಾರೆ. ಇದೀಗ ಅನಿಲ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

  • ಕಣ್ಣುಗಳ ಆರೋಗ್ಯಕ್ಕೆ ಯಾವ ಆಹಾರ ಸೇವನೆ ಮಾಡಬೇಕು ಗೊತ್ತಾ?

    ಕಣ್ಣುಗಳ ಆರೋಗ್ಯಕ್ಕೆ ಯಾವ ಆಹಾರ ಸೇವನೆ ಮಾಡಬೇಕು ಗೊತ್ತಾ?

    ನುಷ್ಯನ ದೇಹದಲ್ಲಿ ಕಣ್ಣು ಬಹುಮುಖ್ಯವಾದ ಅಂಗ. ಮನುಷ್ಯನ ಆರೋಗ್ಯ, ಸುಖ-ಸಂತೋಷ, ನೋವು-ದುಃಖ ಎಲ್ಲವೂ ಕೂಡ ಕಣ್ಣಿನಲ್ಲಿಯೇ ವ್ಯಕ್ತವಾಗುತ್ತದೆ. ಕಣ್ಣು ಅತ್ಯಂತ ಸೂಕ್ಷ್ಮವಾಗಿರುತ್ತದೆ. ನಾವು ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಮೊದಲು ನಮ್ಮ ಕಣ್ಣುಗಳಿಗೆ ಅಗತ್ಯವಾಗಿ ಆರೋಗ್ಯಕರ ಸ್ಥಿತಿಯಲ್ಲಿ ಇರಬೇಕೆಂದರೆ ನಮ್ಮ ಕಣ್ಣುಗಳಿಗೆ ರಕ್ಷಣೆಕೊಡುವ ಆಹಾರಗಳನ್ನು ಸೇವಿಸಿದರೆ ಮಾತ್ರ ಸಾಧ್ಯ.

    * ಕ್ಯಾರೆಟ್ ಮತ್ತು ಇತರ ಹಣ್ಣು-ತರಕಾರಿಗಳು ಕಣ್ಣಿನ ಆರೋಗ್ಯಕ್ಕೆ ಉತ್ತಮ. ವಿಟಮಿನ್ ಎ ಇರುವ ಆಹಾರ ಪದಾರ್ಥಗಳು ರೆಟಿನಾ ಮತ್ತು ಕಣ್ಣಿನ ಇತರ ಭಾಗಗಳು ಚೆನ್ನಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

    * ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಕೂಡ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು, ಇದು ಕಣ್ಣುಗಳ ದೃಷ್ಟಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.

     

    * ಮೊಟ್ಟೆಯನ್ನು ಒಂದು ಸಂಪೂರ್ಣ ಆಹಾರವೆಂದು ಪರಿಗಣಿಸಬಹುದು. ನಿಮ್ಮ ಉಪಹಾರಕ್ಕೆ ಒಂದು ಮೊಟ್ಟೆಯನ್ನು ಸೇರಿಸಿದರೆ ನಿಮ್ಮ ದಿನಪೂರ್ತಿ ಅಗತ್ಯವಿರುವ ವಿಟಮಿನ್‍ಗಳ ಮತ್ತು ಜೀವಸತ್ವಗಳ ಪೂರೈಕೆಯಾಗುತ್ತದೆ.

     

    * ಬೀಟ್‍ರೂಟ್ ವಿಟಮಿನ್ ಎ ಸಮೃದ್ಧವಾಗಿ ಇರುವ ಬೇರಿನ ಜಾತಿಯ ಆಹಾರ. ನಿಮ್ಮ ಕಣ್ಣುಗಳು ಉತ್ಸಾಹಭರಿತ ಮತ್ತು ಸಂತೋಷದಿಂದ ಕೂಡಿರಬೇಕಾದಲ್ಲಿ ಈ ಬೀಟ್‍ರೂಟ್ ತರಕಾರಿಯನ್ನು ಸಾಕಷ್ಟು ಸೇವಿಸಬೇಕು.

    * ಕ್ಯಾರೆಟ್ ಜ್ಯೂಸ್ ಕಣ್ಣಿನ ದೃಷ್ಟಿಗೆ ವಿಟಮಿನ್ ಎ ಬಹಳ ಮುಖ್ಯ. ಕ್ಯಾರೆಟ್‍ನಲ್ಲಿ ವಿಟಮಿನ್ ಎ ಅಧಿಕವಾಗಿದ್ದು,ಕಣ್ಣುಗಳ ರೆಟಿನಾದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    *   ಪಾಲಕ್, ಮೆಂತ್ಯೆ, ಹರಿವೆ ಮುಂತಾದ ಸೋಪ್ಪುಗಳಲ್ಲಿ ವಿಟಮಿನ್ ಸಿ ಇರುತ್ತದೆ.

    * ಮೂಸಂಬಿ, ಕಿತ್ತಳೆ, ನಿಂಬೆ, ದಾಳಿಂಬೆ ಮುಂತಾದ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಈ ವಿಟಮಿನ್ ಕಣ್ಣಿನ ನರಗಳು ಆರೋಗ್ಯವನ್ನು ಕಾಪಾಡುತ್ತದೆ.

  • ಮೃತ ತಂದೆಯ ಕಣ್ಣು ದಾನ ಮಾಡಿದ ಮಕ್ಕಳು – ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

    ಮೃತ ತಂದೆಯ ಕಣ್ಣು ದಾನ ಮಾಡಿದ ಮಕ್ಕಳು – ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

    ಹಾವೇರಿ: ಮೃತ ತಂದೆಯ ಮಾಡುವ ಮೂಲಕವಾಗಿ ಕುಟುಂಬದ ಸದಸ್ಯರು ಸಾವಿನಲ್ಲೂ ಸಾರ್ಥಕತೆ ಮರೆದಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ನಡೆದಿದೆ.

    ರಾಣೇಬೆನ್ನೂರು ನಗರದ ಶಬರಿ ಕಾಲೋನಿಯ ನಿವಾಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಯಮ ನಿವೃತ್ತ ಚಾಲಕ ಶಿವಾನಂದ ಯಮ್ಮಿ(62) ಅವರ ಕಣ್ಣುಗಳನ್ನು ದಾನಮಾಡಲಾಗಿದೆ.

    ಶಿವಾನಂದ ಯಮ್ಮಿ ಅವರು ವಯೋಸಹಜವಾಗಿ ನಿಧನಹೊಂದಿದ್ದರು. ಯಮ್ಮಿ ಮಕ್ಕಳು ತಂದೆಯ ಎರಡು ಕಣ್ಣುಗಳನ್ನ ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಗೆ ದಾನಮಾಡಿದರು. ನೇತ್ರದಾನ ಮಾಡುವ ಮೂಲಕ ಎರಡು ಜೀವನಕ್ಕೆ ಬೆಳಕು ನೀಡಿದ್ದಾರೆ.

    ಅಕ್ಕಿ ಆಲೂರಿನ ಸ್ನೇಹಮೈತ್ರಿ ನೇತ್ರದಾನಿಗಳ ಬಳಗದ ಸಹಕಾರದೊಂದಿಗೆ ರಾಣೆಬೆನ್ನೂರಿನ ಡಾ. ಚಂದ್ರಶೇಖರ ಕೆಲಗಾರ ನೇತ್ರತ್ವದಲ್ಲಿ ನೇತ್ರಗಳನ್ನು ಸಂಗ್ರಹಿಸಲಾಯಿತು. ರಾಣೇಬೆನ್ನೂರು ನಗರದ ಜನತೆ ಹಾಗೂ ಅಪಾರ ಬಂದುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.