Tag: ಕಣ್ಣಪ್ಪ ಸಿನಿಮಾ

  • `ಕಣ್ಣಪ್ಪ’ ನೋಡಿ ವಿಷ್ಣು ಮಂಚು ಮೆಚ್ಚಿದ ರಜನಿಕಾಂತ್

    `ಕಣ್ಣಪ್ಪ’ ನೋಡಿ ವಿಷ್ಣು ಮಂಚು ಮೆಚ್ಚಿದ ರಜನಿಕಾಂತ್

    ಳೆದ 30 ವರ್ಷಗಳ ಹಿಂದಿನ ಸ್ಮರಣೀಯ ಕ್ಷಣಗಳು ಮತ್ತು ಚಿತ್ರರಂಗದ ಸಂಭ್ರಮದ ನಡುವೆ, ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ಸೂಪರ್‌ಸ್ಟಾರ್ ರಜನಿಕಾಂತ್ (Rajanikanth) ಹಾಗೂ ನಟ ಮೋಹನ್ ಬಾಬು (Mohan Babu) ಚೆನ್ನೈನಲ್ಲಿ ಮತ್ತೆ ಒಂದಾದರು. ಇದಕ್ಕೆ ಕಾರಣಕ್ಕೆ `ಪೆದರಾಯುಡು’ ಸಿನಿಮಾವು ಜೂನ್ 15, 1995ರಂದು ತೆರೆಕಂಡಿತ್ತು. ಇದೀಗ 30 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಬ್ಬರೂ ಸ್ಟಾರ್ ನಟರು, ವಿಷ್ಣು ಮಂಚು ನಟನೆಯ `ಕಣ್ಣಪ್ಪ’ (Kannappa) ಸಿನಿಮಾ ವೀಕ್ಷಿಸಿ ಹಳೇ ನೆನಪಿಗೆ ಹೊರಳಿದರು.

    ರವಿ ರಾಜ ಪಿನಿಸೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ `ಪೆದರಾಯುಡು’ ಸಿನಿಮಾ, ಅಂದಿನ ಕಾಲದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಗಟ್ಟಿ ಕಥಾ ಶೈಲಿ ನೆನಪಿನಲ್ಲಿ ಉಳಿಯುವ ಅಭಿನಯಗಳು ಮತ್ತು ಅದ್ವಿತೀಯ ಮಾಸ್ ಆಕರ್ಷಣೆಯಿಂದ ತೆಲುಗು ಚಿತ್ರರಂಗದಲ್ಲಿ ಈ ಚಿತ್ರ ಶಾಶ್ವತವಾಗಿ ಉಳಿದಿದೆ. ಈ ಚಿತ್ರ 30 ವರ್ಷ ಪೂರೈಸಿದ ಬೆನ್ನಲ್ಲೇ ರಜನಿಕಾಂತ್ ಮತ್ತು ಮೋಹನ್ ಬಾಬು (Mohan Babu) ಒಂದೆಡೆ ಸೇರಿ ಕಣ್ಣಪ್ಪ ಚಿತ್ರ ವೀಕ್ಷಿಸಿದರು. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ

    ಅಂದಹಾಗೆ ಜೂನ್ 27ರಂದು ಜಾಗತಿಕ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕಣ್ಣಪ್ಪ ಸಿನಿಮಾ ಬಿಡುಗಡೆಗೊಳ್ಳಲಿದೆ. ಈ ಚಿತ್ರದಲ್ಲಿ ಶಿವನ ಭಕ್ತರಾದ ಕಣ್ಣಪ್ಪನ ಕಥೆಯನ್ನು ವಿಶಿಷ್ಟವಾಗಿ ಆವರಿಸಿಕೊಂಡಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ರಜನಿಕಾಂತ್ ಕೊಂಚ ಭಾವುಕರಾಗಿದ್ದಾರೆ. ಇದನ್ನೂ ಓದಿ: ಪುರಿ ಜಗನ್ನಾಥ್ ನಿರ್ದೇಶನದ ಚಿತ್ರಕ್ಕೆ ಸಂಯುಕ್ತ ಮೆನನ್ ಎಂಟ್ರಿ

    `ಇದು ಅಸಾಧಾರಣ ಚಿತ್ರ. ಭಾವನೆ, ದೃಶ್ಯ ವೈಭವ ಮತ್ತು ಆಧ್ಯಾತ್ಮ- all extraordinary’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ರಜನಿಕಾಂತ್ ಬಗ್ಗೆಯೂ ಮಾತನಾಡಿದ ಮೋಹನ್ ಬಾಬು, `ಇವತ್ತು 22 ವರ್ಷಗಳಿಂದ ನಿರೀಕ್ಷಿಸುತ್ತಿದ್ದ ರಜನಿಕಾಂತ್ ಅವರ ಆಲಿಂಗನ ದೊರೆತಿದೆ. ಈಗ ನಾನು ಹೆದರುವುದಿಲ್ಲ. ನಾನು ಅಜೇಯ. ಕಣ್ಣಪ್ಪ ಬರುತ್ತಾನೆ!’ ಎಂದು ಸಂಭ್ರಮದಿಂದ ಹೇಳಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ ಪ್ರಕರಣ – ಹೇಳಿಕೆ ಕೊಡಲು ಪೊಲೀಸರನ್ನು ಸತಾಯಿಸುತ್ತಿರುವ ಸೋನು ನಿಗಮ್

    ಅಂದಹಾಗೆ ಕಣ್ಣಪ್ಪ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಪುತ್ರನ ಚಿತ್ರಕ್ಕೆ ಮೋಹನ್ ಬಾಬು ಬಂಡವಾಳ ಹೂಡಿ ನಿರ್ಮಾಪಕರಾಗಿದ್ದಾರೆ. ಬಹು ತಾರಾಗಣದ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಜೂನ್ ಕೊನೆಯ ವಾರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

  • ‘ಕಿರಾತಕ’ನ ಗೆಟಪ್‌ನಲ್ಲಿ ಮೋಹನ್ ಲಾಲ್- ‘ಕಣ್ಣಪ್ಪ’ ಚಿತ್ರದ ಪೋಸ್ಟರ್ ಔಟ್

    ‘ಕಿರಾತಕ’ನ ಗೆಟಪ್‌ನಲ್ಲಿ ಮೋಹನ್ ಲಾಲ್- ‘ಕಣ್ಣಪ್ಪ’ ಚಿತ್ರದ ಪೋಸ್ಟರ್ ಔಟ್

    ಟ ಮೋಹನ್‌ಲಾಲ್ (Mohanlal) ಅವರು 65ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ನಟನ ಬರ್ತ್‌ಡೇ ‘ಕಣ್ಣಪ್ಪ’ (Kannappa) ಚಿತ್ರದ ಪೋಸ್ಟರ್ ರಿವೀಲ್ ಮಾಡಿ ವಿಶೇಷವಾಗಿ ಚಿತ್ರತಂಡ ಶುಭಕೋರಿದೆ. ಇದನ್ನೂ ಓದಿ:ಮಾದಕ ಲುಕ್‌ನಲ್ಲಿ ಮಿಂಚಿದ ರಶ್ಮಿಕಾ- ಶ್ರೀವಲ್ಲಿ ಬ್ಯೂಟಿಗೆ ಫ್ಯಾನ್ಸ್ ಫಿದಾ

    ‘ಕಣ್ಣಪ್ಪ’ ಸಿನಿಮಾದಲ್ಲಿ ಕಿರಾತಕ ಎಂಬ ಪಾತ್ರದಲ್ಲಿ ಮೋಹಲ್ ಲಾಲ್ ನಟಿಸಿದ್ದಾರೆ. ನಟನ ವಿಭಿನ್ನ ಗೆಟಪ್ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಎಂದೂ ಕಾಣಿಸಿಕೊಂಡಿರದ ವಿಭಿನ್ನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಟನ ಬರ್ತ್‌ಡೇ ಟೀಸರ್‌ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಕಾನ್ 2025: ಕತ್ತಲ್ಲಿ ಮೋದಿ ಚಿತ್ರವಿರುವ ನೆಕ್ಲೆಸ್ ಧರಿಸಿ ನಟಿ ಗುಜ್ಜರ್ ವಾಕ್!

    ತೆಲುಗು ನಟ ಮೋಹನ್ ಬಾಬು ‘ಕಣ್ಣಪ್ಪ’ ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮಂಚು ವಿಷ್ಣು ಜೊತೆ ಮೋಹನ್ ಲಾಲ್, ಅಕ್ಷಯ್ ಕುಮಾರ್, ಮಗಧೀರ ನಟಿ ಕಾಜಲ್, ಪ್ರಭಾಸ್, ಕನ್ನಡದ ನಟ ದೇವರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ.

    ಈ ಚಿತ್ರವು ಬಹುಭಾಷೆಗಳಲ್ಲಿ ಜೂನ್ 27ರಂದು ರಿಲೀಸ್ ಆಗಲಿದೆ. ಮಲ್ಟಿ ಸ್ಟಾರ್‌ಗಳು ನಟಿಸಿರುವ ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ‘ಬಾಹುಬಲಿ’ ನಟನ ಬಗ್ಗೆ ಹಗುರವಾಗಿ ಮಾತನಾಡಿದ ಮಂಚು ವಿಷ್ಣು- ಪ್ರಭಾಸ್ ಫ್ಯಾನ್ಸ್ ರೆಬೆಲ್

    ‘ಬಾಹುಬಲಿ’ ನಟನ ಬಗ್ಗೆ ಹಗುರವಾಗಿ ಮಾತನಾಡಿದ ಮಂಚು ವಿಷ್ಣು- ಪ್ರಭಾಸ್ ಫ್ಯಾನ್ಸ್ ರೆಬೆಲ್

    ‘ಕಣ್ಣಪ್ಪ’ ಸಿನಿಮಾದಲ್ಲಿ (Kannappa) ಉಚಿತವಾಗಿ ನಟಿಸಿರುವ ಪ್ರಭಾಸ್ ಬಗ್ಗೆ ನಟ ಮಂಚು ವಿಷ್ಣು (Manchu Vishnu) ಹಗುರವಾಗಿ ಮಾತಾಡಿ, ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಪ್ರಭಾಸ್ ʻಸಾಮಾನ್ಯ ನಟ’ ಎಂದು ಮಂಚು ವಿಷ್ಣು ಆಡಿದ ಮಾತುಗಳು ಪ್ರಭಾಸ್ ಅಭಿಮಾನಿಗಳನ್ನು ಕೆರಳಿಸಿವೆ. ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಇದನ್ನೂ ಓದಿ: ‘ಕಿಸ್’ ನಟಿಗೆ ಅದೃಷ್ಟ- ಸಿದ್ಧಾರ್ಥ್ ಮಲ್ಹೋತ್ರಾಗೆ ಶ್ರೀಲೀಲಾ ಜೋಡಿ?

    ಪ್ರಭಾಸ್ (Prabhas) ಬಗ್ಗೆ ಲಘುವಾಗಿ ಮಾತನಾಡಿ ಮಂಚು ವಿಷ್ಣು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಂದರ್ಶನದಲ್ಲಿ ಮಂಚು ವಿಷ್ಣು ನೇರವಾಗಿ ಪ್ರಭಾಸ್ ನಟನೆ ಬಗ್ಗೆ ಮಾತನಾಡಿಲ್ಲ, ಬದಲಿಗೆ ಮೋಹನ್ ಲಾಲ್ (Mohanlal) ಜೊತೆ ಹೋಲಿಸಿ ಕಾಮೆಂಟ್ ಮಾಡಿದ್ದಾರೆ. ಪ್ರಭಾಸ್ ಜೊತೆ ನಟಿಸಿದ ಅನುಭವ ಹೇಗಿತ್ತು ಎಂದು ವಿಷ್ಣು ಮಂಚುಗೆ ಕೇಳಲಾದ ಪ್ರಶ್ನೆಗೆ, ಪ್ರಭಾಸ್ ಆ್ಯಕ್ಟಿಂಗ್ ಸೀದಾಸಾದಾ, ಅವರು ಸಾಮಾನ್ಯ ನಟ ಅನ್ನಿಸುತ್ತದೆ. ಅವರು ಲೆಜೆಂಡರಿ ನಟನಾಗಿ ಬೆಳೆಯಲು ಸಮಯ ಬೇಕು ಅಂತ ನನಗೆ ಅನಿಸುತ್ತದೆ. ಆದರೆ ಮೋಹನ್ ಲಾಲ್ ಲೆಜೆಂಡ್. ಏಕೆಂದರೆ ಅವರು ಸಾಗಿಬಂದ ಹಾದಿ. ಮುಂದಿನ ದಿನಗಳಲ್ಲಿ ಪ್ರಭಾಸ್ ಕೂಡ ಲೆಜೆಂಡ್ ಆಗುತ್ತಾರೆ ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಗ್ರರ ದಾಳಿ ಸ್ಥಳದಲ್ಲೇ ಮಾರ್ಟಿನ್ ಸಿನಿಮಾ ಶೂಟಿಂಗ್ ನಡೆದಿತ್ತು, ಆಗ ಸೆಕ್ಯೂರಿಟಿ ಚೆನ್ನಾಗಿತ್ತು: ಧ್ರುವ ಸರ್ಜಾ

    ವಿಷ್ಣು ಮಂಚು ಅವರು ಪ್ರಭಾಸ್ ಬಗ್ಗೆ ಸಾಮಾನ್ಯ ನಟ ಎಂದು ನೀಡಿರುವ ಹೇಳಿರುವ ಹೇಳಿಕೆ ಈಗ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಪ್ರಭಾಸ್ ಬಗ್ಗೆ ವಿಷ್ಣು ಲಘುವಾಗಿ ಮಾತನಾಡಿದ್ದಾರೆ ಎಂದು ನಟನ ಫ್ಯಾನ್ಸ್ ರೆಬೆಲ್ ಆಗಿದ್ದಾರೆ.

    ಅಂದಹಾಗೆ, ತೆಲುಗಿನ ಹಿರಿಯ ನಟ ಮೋಹನ್ ಬಾಬು ನಿರ್ಮಾಣದ ‘ಕಣ್ಣಪ್ಪ’ ಚಿತ್ರದ ಜೂನ್ 27ರಂದು ರಿಲೀಸ್ ಆಗಲಿದೆ. ಇದರಲ್ಲಿ ಅಕ್ಷಯ್ ಕುಮಾರ್, ‘ಮಗಧೀರ’ ನಟಿ ಕಾಜಲ್, ಮೋಹನ್‌ಲಾಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ‘ಕಣ್ಣಪ್ಪ’ ಟೀಸರ್‌ನಲ್ಲಿ ಮಲ್ಟಿ ಸ್ಟಾರ್‌ಗಳ ಅಬ್ಬರ- ಪ್ರಭಾಸ್ ಎಂಟ್ರಿಯೇ ಚಿಂದಿ

    ‘ಕಣ್ಣಪ್ಪ’ ಟೀಸರ್‌ನಲ್ಲಿ ಮಲ್ಟಿ ಸ್ಟಾರ್‌ಗಳ ಅಬ್ಬರ- ಪ್ರಭಾಸ್ ಎಂಟ್ರಿಯೇ ಚಿಂದಿ

    ಟಾಲಿವುಡ್ ನಟ ಮಂಚು ವಿಷ್ಣು (Manchu Vishnu) ನಟನೆಯ ‘ಕಣ್ಣಪ್ಪ’ (Kannappa) ಟೀಸರ್ ರಿಲೀಸ್ ಆಗಿದೆ. ಬಹುಭಾಷೆಗಳಲ್ಲಿ ರಿಲೀಸ್ ಆಗಿರೋ ‘ಕಣ್ಣಪ್ಪ’ ಟೀಸರ್‌ನಲ್ಲಿ ಮಲ್ಟಿ ಸ್ಟಾರ್ ಕಲಾವಿದರು ಮಿಂಚಿದ್ದಾರೆ. ಅದರಲ್ಲಿ ಪ್ರಭಾಸ್ (Prabhas) ಕಣ್ಣೇ ಹೈಲೈಟ್ ಆಗಿದೆ. ಪ್ರಭಾಸ್ ಲುಕ್‌ಗೆ ಫ್ಯಾನ್ಸ್ ಕಳೆದೋಗಿದ್ದಾರೆ. ಇದನ್ನೂ ಓದಿ:‘ಗುಡ್ ಬ್ಯಾಡ್ ಅಗ್ಲಿ’ ಅವತಾರವೆತ್ತಿದ ಅಜಿತ್ ಕುಮಾರ್- ಟೀಸರ್‌ಗೆ ಫ್ಯಾನ್ಸ್ ಮೆಚ್ಚುಗೆ

    ನಾಯಕನಾಗಿ ಮಂಚು ವಿಷ್ಣು, ಶಿವನಾಗಿ ಅಕ್ಷಯ್ ಕುಮಾರ್, ಪಾರ್ವತಿಯಾಗಿ ಕಾಜಲ್ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ಜೊತೆ ಮೋಹನ್ ಲಾಲ್, ಶರತ್ ಕುಮಾರ್, ದೇವರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕೊನೆಯಲ್ಲಿ ಪ್ರಭಾಸ್ ಎಂಟ್ರಿ ಆಗುತ್ತಿದೆ. ಪ್ರಭಾಸ್ ನೋಡೋ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟನ ಎಂಟ್ರಿ ಚಿಂದಿ ಎಂದಿದ್ದಾರೆ.

    150 ಕೋಟಿ ರೂ. ಬಜೆಟ್‌ನಲ್ಲಿ ‘ಕಣ್ಣಪ್ಪ’ ಸಿನಿಮಾ ಮಾಡಲಾಗಿದೆ. ಟೀಸರ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

    ಅಂದಹಾಗೆ, ಇತ್ತೀಚೆಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ‘ಕಣ್ಣಪ್ಪ’ ಸಿನಿಮಾ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು, ನಾಯಕ ನಟ ಮಂಚು ವಿಷ್ಣು, ನಟಿ ಸುಮಲತಾ ಅಂಬರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಭಾರತಿ ವಿಷ್ಣುವರ್ಧನ್ ಕೂಡ ಭಾಗಿಯಾಗಿದ್ದರು.

  • ಕೊನೆಗೂ ರಿವೀಲ್ ಆಯ್ತು ಪ್ರಭಾಸ್ ಲುಕ್- ‘ಕಣ್ಣಪ್ಪ’ ಚಿತ್ರದ ಪೋಸ್ಟರ್ ಔಟ್

    ಕೊನೆಗೂ ರಿವೀಲ್ ಆಯ್ತು ಪ್ರಭಾಸ್ ಲುಕ್- ‘ಕಣ್ಣಪ್ಪ’ ಚಿತ್ರದ ಪೋಸ್ಟರ್ ಔಟ್

    ಡಾರ್ಲಿಂಗ್ ಪ್ರಭಾಸ್ (Darling Prabhas) ಅವರು ‘ಕಲ್ಕಿ’ ಆಗಿ ಸಕ್ಸಸ್ ಕಂಡ ಮೇಲೆ ರುದ್ರನಾಗಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ‘ಕಣ್ಣಪ್ಪ’ (Kannappa) ಸಿನಿಮಾದಲ್ಲಿ ಕೊನೆಗೂ ಪ್ರಭಾಸ್ ಲುಕ್ ರಿವೀಲ್ ಆಗಿದೆ. ಚಿತ್ರದ ನಯಾ ಪೋಸ್ಟರ್ ರಿವೀಲ್ ಆಗಿದೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ‘ಮಹಾನಟಿ’ ವಿನ್ನರ್ ಎಂಟ್ರಿ- ‘ಕಾಟೇರ’ ಡೈರೆಕ್ಟರ್‌ ತರುಣ್‌ ಸಿನಿಮಾದಲ್ಲಿ ಪ್ರಿಯಾಂಕಾ

    ಮಂಚು ವಿಷ್ಣು ಹೀರೋ ಆಗಿ ನಟಿಸುತ್ತಿರುವ ಚಿತ್ರದಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್ ರುದ್ರನಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಹರಡಿದ ತಲೆಗೂದಲು, ಕೈಯಲ್ಲಿ ಅರ್ಧ ಚಂದ್ರಾಕೃತಿಯ ಕೋಲು ಹಿಡಿದು ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಕೊರಳಲ್ಲಿ ರುದ್ರಾಕ್ಷಿ ಮಾಲೆ ಇದೆ. ಹೆಗಲಿಗೆ ಕೇಸರಿ ವಸ್ತ್ರವನ್ನು ಹೊದ್ದಿದ್ದಾರೆ. ಹಣೆಯಲ್ಲಿ ವಿಭೂತಿ ಇಟ್ಟುಕೊಂಡು ನಗುತ್ತಾ ಪ್ರಭಾಸ್ ಅವರು ಕಾಣಿಸಿಕೊಂಡಿದ್ದು, ಈ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Vishnu Manchu (@vishnumanchu)

    ಇನ್ನೂ ‘ಕಣ್ಣಪ್ಪ’ ಸಿನಿಮಾದಲ್ಲಿ ಶಿವನಾಗಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಶಿವನ ಅನುಯಾಯಿ ಪ್ರಭಾಸ್ ಬಣ್ಣ ಹಚ್ಚಿದ್ದಾರೆ. ಸಿನಿಮಾದಲ್ಲಿ ವಿಷ್ಣು ಮಂಚು ಜೊತೆ ಮೋಹನ್ ಲಾಲ್, ಕಾಜಲ್, ಪ್ರೀತಿ ಮುಕುಂದನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ವಿಷ್ಣು ಮಂಚು ತಂದೆ ಮೋಹನ್ ಬಾಬು ನಿರ್ಮಾಣ ಮಾಡುತ್ತಿದ್ದಾರೆ. ಇದೇ ಏ.25ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

  • ವಿಷ್ಣು ಮಂಚು ನಟನೆಯ ‘ಕಣ್ಣಪ್ಪ ಚಿತ್ರದಲ್ಲಿ ಮಧುಬಾಲ- ಫಸ್ಟ್ ಲುಕ್ ರಿಲೀಸ್‌

    ವಿಷ್ಣು ಮಂಚು ನಟನೆಯ ‘ಕಣ್ಣಪ್ಪ ಚಿತ್ರದಲ್ಲಿ ಮಧುಬಾಲ- ಫಸ್ಟ್ ಲುಕ್ ರಿಲೀಸ್‌

    ಪಾತ್ರವರ್ಗದ ವಿಚಾರವಾಗಿಯೇ ಸಾಕಷ್ಟು ಸದ್ದು ಮಾಡುತ್ತಿದೆ ಟಾಲಿವುಡ್‌ನ ‘ಕಣ್ಣಪ್ಪ’ (Kanappa) ಸಿನಿಮಾ. ಈಗಾಗಲೇ ಸರಣಿ ಸ್ಟಾರ್ ಕಲಾವಿದರನ್ನೇ ಒಳಗೊಂಡಿರುವ ಕಣ್ಣಪ್ಪ ಸಿನಿಮಾ ಸದ್ಯ ಶೂಟಿಂಗ್ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಮುಂದುವರಿಸಿದೆ. ಜೊತೆಗೆ ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಸಹ ನೋಡುಗರ ಹುಬ್ಬೇರಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ವಿಷ್ಣು ಮಂಚು (Vishnu Manchu) ಕಣ್ಣಪ್ಪನಾಗಿ ತಮ್ಮ ಖದರ್ ತೋರಿಸಲಿದ್ದಾರೆ. ಇದೀಗ ಇದೇ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಮಧುಬಾಲ ಅವರ ಲುಕ್ ಅನಾವರಣ ಮಾಡಲಾಗಿದೆ.

    ನಟಿ ಮಧುಬಾಲಾ (Madhubala) ಕಣ್ಣಪ್ಪ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬುದು ಈ ಹಿಂದೆಯೇ ಗೊತ್ತಿದ್ದ ವಿಚಾರ. ಆದರೆ, ಅವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಈ ವರೆಗೂ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಮಧುಬಾಲ ಅವರ ಪಾತ್ರ ಪರಿಚಯದ ಫಸ್ಟ್ ಲುಕ್ ರಿಲೀಸ್ ಆಗಿದೆ. ಕಣ್ಣಪ್ಪ ಚಿತ್ರದಲ್ಲಿ ಪನ್ನಗ ಹೆಸರಿನ ಖಡಕ್ ಪಾತ್ರದಲ್ಲಿ ಮಧುಬಾಲ ಮಿಂಚು ಹರಿಸಲಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಶತ್ರುಗಳ ಸಂಹಾರಕ್ಕೆ ನಿಂತಂತಿದೆ ಮಧುಬಾಲಾ ಅವರ ಫಸ್ಟ್ ಲುಕ್.

    ಬೇಡ ಕುಲದ ನಾಯಕಿಯಾಗಿ ಮಧುಬಾಲಾ ಅವರ ಪಾತ್ರ ಕಣ್ಣಪ್ಪ ಚಿತ್ರದಲ್ಲಿ ಸಾಗಲಿದೆ. ತಮ್ಮ ಸಮುದಾಯದ ನಾಯಕಿ ಮಾತ್ರವಲ್ಲ, ಹೋರಾಟದಲ್ಲಿಯೂ ದಿಟ್ಟೆ, ಧೀರೆ. ಅಂದುಕೊಂಡಂತೆ ಮಧುಬಾಲ ಅವರ ಪಾತ್ರ ಮೂಡಿಬಂದಿದ್ದು, ನೋಡುಗರಿಗೆ ಇಷ್ಟವಾಗಲಿದೆ ಎಂಬುದು ಚಿತ್ರತಂಡ ಭರವಸೆಯ ಮಾತುಗಳು. ಇನ್ನು ಈಗಾಗಲೇ ಕಣ್ಣಪ್ಪ ಚಿತ್ರದ ಟೀಸರ್ ಜಾಗತಿಕ ಮಟ್ಟದಲ್ಲಿಯೂ ಕ್ರೇಜ್ ಸೃಷ್ಟಿಸಿದೆ. ಇತ್ತೀಚಿನ ಕಾನ್ ಸಿನಿಮೋತ್ಸವದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗಿ, ಜಾಗತಿಕ ಪ್ರೇಕ್ಷಕರ ಗಮನ ಸೆಳೆದಿತ್ತು. ಇದನ್ನೂ ಓದಿ:ಶ್ರೀವಲ್ಲಿ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಕಿರುತೆರೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ

    ಕಣ್ಣಪ್ಪ ಸಿನಿಮಾ ಬರೀ ಇತಿಹಾಸವಲ್ಲ, ಇದು ಎರಡನೇ ಶತಮಾನದ ಚೋಳರ ಕಾಲದ ಕಥೆ ಎಂದು ಶಂಕರಾಚಾರ್ಯರು ಹೇಳಿದ್ದರು. 14 ನೇ ಶತಮಾನದಲ್ಲಿ ಕವಿ ಧೂರ್ಜಟಿ ಈ ಬಗ್ಗೆ ಬರೆದಿದ್ದಾರೆ. 18ನೇ ಶತಮಾನದಲ್ಲಿ ಬ್ರಿಟಿಷರೂ ಇಂಗ್ಲಿಷ್‌ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಇದೆಲ್ಲವನ್ನು ಅಧ್ಯಯನ ನಡೆಸಿ ಈ ಸಿನಿಮಾ ಮಾಡಲಾಗಿದೆ ಎಂದು ಟೀಸರ್ ಬಿಡುಗಡೆ ಸಂದರ್ಭದಲ್ಲಿ ವಿಷ್ಣು ಮಂಚು ಹೇಳಿಕೊಂಡಿದ್ದರು. ಹಾಗಾಗಿಯೇ ಕುತೂಹಲ ದುಪ್ಪಟ್ಟಾಗಿದೆ.

    ಚಿತ್ರದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಶರತ್‌ಕುಮಾರ್, ಮಧುಬಾಲ, ಕಾಜಲ್ ಅಗರ್‌ವಾಲ್ ಸೇರಿ ಬಹು ತಾರಾಗಣವೇ ಇದೆ. ಮಗನ ಚಿತ್ರವನ್ನು ಸ್ವತಃ ತಂದೆ ಮೋಹನ್ ಬಾಬು ನಿರ್ಮಿಸುತ್ತಿರುವ ಈ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾರತೀಯ ಭಾಷೆಗಳಿಗೂ ಈ ಚಿತ್ರ ಡಬ್ ಆಗಿ ರಿಲೀಸ್ ಆಗಲಿದೆ. ಡಿಸೆಂಬರ್‌ನಲ್ಲಿ ‘ಕಣ್ಣಪ್ಪ’ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ.

    ಎವಿಎ ಎಂಟರ್‌ಟೈನ್‌ಮೆಂಟ್ಸ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್‌ಗಳಲ್ಲಿ ನೂರಾರು ಕೋಟಿ ಬಜೆಟ್‌ನಲ್ಲಿ ದೊಡ್ಡ ಕ್ಯಾನ್ವಾಸ್‌ನೊಂದಿಗೆ ಮೂಡಿಬರುತ್ತಿರುವ ಈ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ವಿಎಫ್‌ಎಕ್ಸ್ ಕೆಲಸಕ್ಕೆ ಇಡೀ ತಂಡ ಹೆಚ್ಚಿನ ಶ್ರಮ ಹಾಕುತ್ತಿದೆ.

  • ಅಕ್ಷಯ್ ಕುಮಾರ್ ಬಳಿಕ ‘ಕಣ್ಣಪ್ಪ’ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್

    ಅಕ್ಷಯ್ ಕುಮಾರ್ ಬಳಿಕ ‘ಕಣ್ಣಪ್ಪ’ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್

    ಟಾಲಿವುಡ್‌ನ ಬಿಗ್ ಬಜೆಟ್ ‘ಕಣ್ಣಪ್ಪ’ (Kanappa Film) ಸಿನಿಮಾ ತಾರಾಗಣ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ಪ್ರಭಾಸ್ (Prabhas), ಮೋಹನ್ ಲಾಲ್, ಅಕ್ಷಯ್ ಕುಮಾರ್ ಚಿತ್ರತಂಡಕ್ಕೆ ಸಾಥ್ ನೀಡಿದ ಬೆನ್ನಲ್ಲೇ ಮಗಧೀರ ಬೆಡಗಿ ಕಾಜಲ್ ಅಗರ್ವಾಲ್ (Kajal Aggarwal) ಕೂಡ ಕೈಜೋಡಿಸಿದ್ದಾರೆ.

    ಮಲ್ಟಿಸ್ಟಾರ್‌ಗಳಿರುವ ‘ಕಣ್ಣಪ್ಪ’ ಸಿನಿಮಾದಲ್ಲಿ ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಾಜಲ್‌ಗೂ ಮುಖ್ಯ ಪಾತ್ರವೊಂದಕ್ಕೆ ನಟಿಸಲು ಚಿತ್ರತಂಡ ಸಂಪರ್ಕಿಸಿದೆ. ಆದರೆ ಸಿನಿಮಾತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಒಂದೇ ವೇಳೆ, ಈ ಸುದ್ದಿ ನಿಜವೇ ಆಗಿದ್ದಲ್ಲಿ ಅಭಿಮಾನಿಗಳಿಗೆ ಮನರಂಜನೆ ಗ್ಯಾರಂಟಿ. ಇದನ್ನೂ ಓದಿ:ಚಿತ್ರರಂಗಕ್ಕೆ ದ್ವಾರಕೀಶ್ ಕೊಡುಗೆ ಅಪಾರ- ನರೇಂದ್ರ ಮೋದಿ ಸಂತಾಪ

    ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಮಾತ್ರವಲ್ಲ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೂ ನಟಿಸುವ ಮೂಲಕ ಕಾಜಲ್ ಸೈ ಎನಿಸಿಕೊಂಡಿದ್ದಾರೆ. ಮದುವೆಯಾಗಿ ಒಂದು ಮಗುವಿನ ತಾಯಿಯಾದ್ಮೇಲೆಯೂ ಕಾಜಲ್ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಈಗಲೂ ಕೂಡ ಚಿತ್ರರಂಗದಲ್ಲಿ ನಟಿಗೆ ಬೇಡಿಕೆ ಇದೆ. ಸದ್ಯ ‘ಕಣ್ಣಪ್ಪ’ ಚಿತ್ರದ ವಿಚಾರವಾಗಿ ನಟಿ ಸಖತ್ ಸುದ್ದಿಯಾಗುತ್ತಿದ್ದಾರೆ.

    ಸದ್ಯ ಕಾಜಲ್ ಕೈಯಲ್ಲಿ ತೆಲುಗು ಮತ್ತು ತಮಿಳು ಸೇರಿದಂತೆ ಹಲವು ಸಿನಿಮಾಗಳಿವೆ. ಒಂದಿಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಕಳೆದ ವರ್ಷ ಅಂತ್ಯದಲ್ಲಿ ಬಾಲಯ್ಯಗೆ ಜೋಡಿಯಾಗಿ ಕಾಜಲ್ ನಟಿಸಿದ್ದರು. ಇವರ ಜೊತೆ ಶ್ರೀಲೀಲಾ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ಸಕ್ಸಸ್‌ ಕಂಡಿದೆ.