Tag: ಕಣಿವೆ

  • ನದಿ, ಕಣಿವೆ, ಕೋಟೆ, ಜೈಲು – ಗಂಡಿಕೋಟವನ್ನು ನೀವು ನೋಡ್ಲೇಬೇಕು

    ನದಿ, ಕಣಿವೆ, ಕೋಟೆ, ಜೈಲು – ಗಂಡಿಕೋಟವನ್ನು ನೀವು ನೋಡ್ಲೇಬೇಕು

    ದಿ, ಕಣಿವೆ, ಕಲ್ಲುಬಂಡೆಗಳು, ಕೋಟೆ, ಉಗ್ರಾಣ, ಪುಷ್ಕರಿಣಿ, ಸೂರ್ಯೋದಯ, ಸೂರ್ಯಾಸ್ತಮಾನ, ಬೋಟಿಂಗ್, ದೇವಾಲಯ ಎಲ್ಲವನ್ನು ಒಂದೇ ಕಡೆ ನೋಡಬೇಕೇ? ಹಾಗಾದರೆ ನೀವು ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿರುವ ಗಂಡಿಕೋಟ(Gandikota) ಸ್ಥಳಕ್ಕೆ ಹೋಗಬೇಕು‌.

    ‘Grand Canyon of India’ ಎಂದೇ ಹೆಸರಾಗಿರುವ ಇಲ್ಲಿ ಪೆನ್ನಾರ್ ನದಿ ಹರಿಯುತ್ತಿದ್ದು ಸುತ್ತಲು ಕಣಿವೆ ಇದೆ. ನೀರು ಹತ್ತಿರದಲ್ಲೇ ಇರುವ ಕಾರಣ ವಿಜಯನಗರದ ಸಾಮಂತ ರಾಜನಾಗಿದ್ದ ಕುಮಾರ ತಿಮ್ಮಾ ಇಲ್ಲಿ ಕೋಟೆ ಕಟ್ಟಿದ್ದು ಈಗಲೂ ನೋಡಬಹುದು.

    ಕೋಟೆಯಲ್ಲಿ ಏನಿದೆ?
    50 ಅಡಿ ಎತ್ತರ, ಸುಮಾರು 7-8 ಕಿ‌‌ಮೀ ಸುತ್ತಳತೆಯ ಗಟ್ಟಿಯಾದ ರಕ್ಷಣಾ ಗೋಡೆಯಿದೆ. ಕಲ್ಲುಗಳನ್ನು ಬೆಲ್ಲ ಮತ್ತು ಸುಣ್ಣ ಬಳಸಿ ಕಟ್ಟಲಾಗಿದೆ. ಪ್ರವೇಶದ್ವಾರ ದಾಟಿ ಮುಂದೆ ಹೋದರೆ ಮದ್ದುಗುಂಡು ಸಂಗ್ರಹಾಗಾರ, ಉಗ್ರಾಣಗಳು, ಜೈಲು, ಮಾಧವ ಮತ್ತು ರಂಗನಾಥ ದೇವಸ್ಥಾನ, ರಾಣಿ ಮಹಲ್, ಪುಷ್ಕರಣಿ, ಚಾರ್ ಮಿನಾರ್, ಜುಮ್ಲಾ ಮಸೀದಿ ಇದೆ‌. ಇದನ್ನೂ ಓದಿ: ಬೈಕ್ ಪ್ರವಾಸಕ್ಕೆ ಯಾವ ಅಪ್ಲಿಕೇಶನ್ ಉತ್ತಮ?

    ಮೇಲೆ ತಿಳಿಸಿದ ಜೊತೆ ಜನರನ್ನು ಹೆಚ್ಚು ಸೆಳೆಯುವುದು ಇಲ್ಲಿನ ಕಲ್ಲು ಬಂಡೆಗಳು ಮತ್ತು ಕಣಿವೆಗಳು. ಸೂರ್ಯೋದಯ ಮತ್ತು ಸೂರ್ಯಾಸ್ತಮಾನ ಎರಡನ್ನು ಕಣ್ತುಂಬಿಕೊಳ್ಳುವ ಕಾರಣ ಇಲ್ಲಿಗೆ ಪ್ರವಾಸಿಗರು‌ ಹೆಚ್ಚಾಗಿ ಬರುತ್ತಾರೆ. ಫೋಟೋಗ್ರಫಿಗೆ ಬೇಕಾದ ಎಲ್ಲ ಪೂರಕ ಅಂಶಗಳು ಒಂದೇ ಕಡೆ ಸಿಗುವ ಕಾರಣ ಫೋಟೋಗ್ರಾಫರ್‌ಗಳು ಸಹ ಜಾಸ್ತಿ ಸಂಖ್ಯೆಯಲ್ಲಿ ಬರುತ್ತಾರೆ. ಎಲ್ಲವೂ ಚೆನ್ನಾಗಿದ್ದರೂ ಇಲ್ಲಿ ರಾತ್ರಿ ತಂಗಲು ಹೆಚ್ಚಿನ ವ್ಯವಸ್ಥೆ ಇಲ್ಲ.

    ಹತ್ತಿರದಲ್ಲಿ ಆಂಧ್ರಪ್ರದೇಶ ಸರ್ಕಾರ ಹರಿತಾ ಹೋಟೆಲಿನಲ್ಲಿ ಎಸಿ ರೂಮ್ ವ್ಯವಸ್ಥೆ ಇದೆ. ರೂಮ್ ಸಿಗದೇ ಇದ್ದರೂ ಟೆಂಟ್‌ನಲ್ಲಿ ಮಲಗಬಹುದು. ಹರಿತಾ ಮೂಲಕ ಮೊದಲೇ ಬುಕ್ ಮಾಡಿ ತಿಳಿಸಿದರೆ ಟೆಂಟ್ ಹಾಕಿ ಅವರೇ ವ್ಯವಸ್ಥೆ ಮಾಡಿಕೊಡುತ್ತಾರೆ.

    ಎಸಿ ರೂಮ್ ಗಳಿಗೆ ಹೋಲಿಸಿದರೆ ಟೆಂಟ್ ದರ ಬಹಳ ಕಡಿಮೆ. ಇದರಲ್ಲಿ ಸಂಜೆಯ ತಿಂಡಿ, ರಾತ್ರಿಯ ಊಟ, ಬೆಳಗ್ಗೆ ತಿಂಡಿಯೂ ಬರುತ್ತದೆ. ರಾತ್ರಿ ಊಟ ಟೆಂಟ್ ಇದ್ದ ಸ್ಥಳಕ್ಕೆ ಬರುತ್ತದೆ. ನಿಮಗೆ ಸಸ್ಯಾಹಾರ ಬೇಕೋ, ಮಾಂಸಾಹಾರ ಬೇಕೋ ಎನ್ನುವುದನ್ನು ಮೊದಲೇ ತಿಳಿಸಬೇಕಾಗುತ್ತದೆ.
    – ಅಶ್ವಥ್‌ ಸಂಪಾಜೆ

    Live Tv
    [brid partner=56869869 player=32851 video=960834 autoplay=true]

  • ಕಣಿವೆಗೆ ಬಿದ್ದ ಶಾಲಾ ಬಸ್ – ಮಕ್ಕಳು ಸೇರಿ 16 ಮಂದಿ ದುರ್ಮರಣ

    ಕಣಿವೆಗೆ ಬಿದ್ದ ಶಾಲಾ ಬಸ್ – ಮಕ್ಕಳು ಸೇರಿ 16 ಮಂದಿ ದುರ್ಮರಣ

    ಶಿಮ್ಲಾ: ಶಾಲಾ ಬಸ್ ಕಣಿವೆಗೆ ಉರುಳಿ ಮಕ್ಕಳು ಸೇರಿದಂತೆ 16 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ.

    ಸೇಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬಸ್ ಕುಲುವಿನಿಂದ ಸೈನ್ಜ್ ಕಡೆಗೆ ಸಾಗುತ್ತಿತ್ತು. ನಿಯೋಲಿ-ಶಂಶೇರ್ ಕಣಿವೆ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಬಸ್ ಕಣಿವೆಗೆ ಉರುಳಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಿದ್ದು, ಗಂಭೀರ ಗಾಯಗಳಾಗಿರುವವರೂ ಇರುವ ಕಾರಣ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಇದನ್ನೂ ಓದಿ: ಕಾಳಿ ಕೈಲಿ ಸಿಗರೇಟು, ಮತ್ತೊಂದು ಕೈಯಲ್ಲಿ ಎಲ್ಜಿಬಿಟಿಕ್ಯೂ ಧ್ವಜ : ಭುಗಿಲೆದ್ದ ಆಕ್ರೋಶ

    ಅಪಘಾತದ ಮಾಹಿತಿ ಸಿಗುತ್ತಲೇ ಕುಲು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

    ಈ ನಡುವೆ ಅಹಿತಕರ ಘಟನೆಗೆ ಪ್ರತಿಕ್ರಿಯಿಸಿದ ಹಿಮಾಚಲ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಕುಲುವಿನಲ್ಲಿ ಖಾಸಗಿ ಶಾಲಾ ಬಸ್ ಕಣಿವೆಗೆ ಬಿದ್ದಿರುವ ಸುದ್ದಿ ತಿಳಿದು ಬಂದಿದೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಅಗಲಿದ ಆತ್ಮಗಳಿಗೆ ಶಾಂತಿ ಹಾಗೂ ದುಃಖತಪ್ತ ಕುಟುಂಬಗಳಿಗೆ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಇಂಡೀಗೋದ ನೂರಾರು ಸಿಬ್ಬಂದಿಗೆ ಒಂದೇ ದಿನ ಅನಾರೋಗ್ಯ – ತನಿಖೆಗೆ ಡಿಜಿಸಿಎ ಸೂಚನೆ

    Live Tv
    [brid partner=56869869 player=32851 video=960834 autoplay=true]

  • ಕಣಿವೆಗೆ ಜಾರಿ ಬಿದ್ದ ಬಸ್- 21 ಮಂದಿಗೆ ಗಾಯ

    ಕಣಿವೆಗೆ ಜಾರಿ ಬಿದ್ದ ಬಸ್- 21 ಮಂದಿಗೆ ಗಾಯ

    ಶಿಮ್ಲಾ: ಹಿಮಾಚಲ ಪ್ರದೇಶದ ಸೋಲನ್-ಶಿಮ್ಲಾ ಗಡಿಯಲ್ಲಿರುವ ಕಿಯಾರಿ ನಲ್ಲಾದ ಬಳಿಯ ಕಣಿವೆಗೆ ಪ್ರವಾಸಿಗರ ಬಸ್ಸೊಂದು ಬಿದ್ದು 21 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

    ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆಂದು ಈ 21 ಮಂದಿ ಬಂದಿದ್ದರು. ಈ ವೇಳೆ ಸೋಲನ್- ಶಿಮ್ಲಾದ ಗಡಿ ಭಾಗದ ಕಿಯಾರಿ ನಲ್ಲಾದ ಬಳಿ ಬರುತ್ತಿದಂತೆ ಪ್ರವಾಸಿಗರ ಬಸ್ಸು ರಸ್ತೆಯಿಂದ ಜಾರಿ ಪಲ್ಟಿಯಾಗಿ ಕಣಿವೆಗೆ ಬಿದ್ದಿದೆ. ಅಪಘಾತದಲ್ಲಿ ಬಸ್ಸಿನಲ್ಲಿದ್ದ ಎಲ್ಲಾ ಪ್ರವಾಸಿಗರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸೋಲನ್- ಶಿಮ್ಲಾ ರಸ್ತೆಗಳಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಈ ಭಾಗದ ರಸ್ತೆಗಳಲ್ಲಿ ಪ್ರಯಾಣಿಸುವಾಗ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು ಎಂದು ಶಿಮ್ಲಾ ಪೊಲೀಸ್ ಅಧಿಕಾರಿ ಉಮಾಪತಿ ಜಮ್ವಾಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 60 ಅಡಿ ಎತ್ತರದಿಂದ ಕಣಿವೆಗೆ ಬಸ್ ಬಿದ್ದು 44 ಮಂದಿ ಸಾವು

    60 ಅಡಿ ಎತ್ತರದಿಂದ ಕಣಿವೆಗೆ ಬಸ್ ಬಿದ್ದು 44 ಮಂದಿ ಸಾವು

    ಡೆಹ್ರಾಡೂನ್: ಇಂದು ಬೆಳಗ್ಗೆ 60 ಅಡಿ ಮೇಲಿನಿಂದ ಬಸ್ಸೊಂದು ಕಣಿವೆಗೆ ಬಿದ್ದ ಪರಿಣಾಮ 44 ಹೆಚ್ಚು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಾಖಂಡ್‍ನ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ನಡೆದಿದೆ.

    ಈಗಾಗಲೇ ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ ತಂಡ (ಎನ್‌ಡಿಆರ್‌ಎಫ್) ಸಿಬ್ಬಂದಿ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಣಿವೆಗೆ ಬಸ್ಸು ಬೀಳಲು ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಬಸ್ಸು 60 ಅಡಿ ಮೇಲಿನಿಂದ ಬಿದ್ದಾಗಲೇ ಬಹಳಷ್ಟು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗರ್ವಾಲ್ ಪೊಲೀಸ್ ಆಯುಕ್ತ ದಿಲೀಪ್ ಜಾವಲಕರ್ ಹೇಳಿದ್ದಾರೆ.