Tag: ಕಡ್ಲೆಪುರಿ

  • ಬಿಜೆಪಿಯವರು ಕಡ್ಲೆಪುರಿ ತಿನ್ನುವುದನ್ನು ನಿಲ್ಲಿಸುತ್ತಾರೆಯೇ?: GST ವಿರುದ್ಧ ಬ್ಯಾನರ್ಜಿ ವಾಗ್ದಾಳಿ

    ಬಿಜೆಪಿಯವರು ಕಡ್ಲೆಪುರಿ ತಿನ್ನುವುದನ್ನು ನಿಲ್ಲಿಸುತ್ತಾರೆಯೇ?: GST ವಿರುದ್ಧ ಬ್ಯಾನರ್ಜಿ ವಾಗ್ದಾಳಿ

    ಕೋಲ್ಕತ್ತಾ: ಬಿಜೆಪಿ ಕಡ್ಲೆಪುರಿ ತಿನ್ನುವುದನ್ನು ನಿಲ್ಲಿಸುತ್ತದೆಯೇ? ಎಂದು ಬಿಜೆಪಿ ನೇತೃತ್ವದ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಜಿಎಸ್‍ಟಿ ಏರಿಕೆ ವಿರುದ್ಧ ಕಿಡಿಕಾರಿದರು.

    ಕೋಲ್ಕತ್ತಾದಲ್ಲಿ ಶಹೀದ್ ದಿವಸ್(ಹುತಾತ್ಮರ ದಿನ) ರ‍್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಮಾತನಾಡಿದ್ದು, ಕಡ್ಲೆಪುರಿಗೂ ಜಿಎಸ್‍ಟಿ ಬಂದಿದೆ. ಬಿಜೆಪಿ ಸ್ನೇಹಿತರು ಈಗ ಕಡ್ಲೆಪುರಿಯನ್ನು ತಿನ್ನುವುದಿಲ್ಲ. ಕಡ್ಲೆಪುರಿ, ಸಿಹಿತಿಂಡಿಗಳು, ಲಸ್ಸಿ, ಮೊಸರು ಮತ್ತು ಬೇವಿನ ಸೊಪ್ಪಿನ ಮೇಲೆ ಎಷ್ಟು ಜಿಎಸ್‍ಟಿ ವಿಧಿಸಲಾಗಿದೆ? ನಾವು ಏನು ತಿನ್ನುತ್ತೇವೆ? ಹೇಗೆ ತಿನ್ನಬೇಕು? ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದಕ್ಕೆ ಬೀದಿಗಿಳಿದಿದ್ದಾರೆ: ಬಿಜೆಪಿ 


    ರೋಗಿಯನ್ನು ಆಸ್ಪತ್ರೆಗೆ ಸೇರಿಸುವುದರಿಂದಲೂ ಜಿಎಸ್‍ಟಿಯನ್ನು ವಿಧಿಸಲಾಗಿದೆ. ಈ ವಿಧಾನ ನಮಗೆ ಬೇಡ. ಅದಕ್ಕೆ ನಮ್ಮ ಬಳಿ ತೆಗೆದುಕೊಂಡ ಎಲ್ಲವನ್ನು ಹಿಂತಿರುಗಿಸಿ. ಇಲ್ಲವಾದರೆ ನೀವು ಹೊರಟು ಹೋಗಿ ಎಂದು ಬಿಜೆಪಿ ವಿರುದ್ಧ ತಿರುಗೇಟು ಕೊಟ್ಟರು.

    ಕಳೆದ ವರ್ಷ, ಛತ್ತೀಸ್‍ಗಢದ ಬಿಜೆಪಿ ಶಾಸಕ ಬ್ರಿಜ್‍ಮೋಹನ್ ಅಗರ್ವಾಲ್ ಅವರು ಸರಕುಗಳ ಬೆಲೆ ಏರಿಕೆಯನ್ನು ಸಮಸ್ಯೆ ಎಂದು ಭಾವಿಸುವವರು ತಿನ್ನುವುದನ್ನು ನಿಲ್ಲಿಸಬೇಕು ಎಂದು ವಿಚಿತ್ರ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಆಕ್ರೋಶಗೊಂಡ ಜನರು, ನಾವು ಸತ್ತರೆ ಎಷ್ಟು ಜಿಎಸ್‍ಟಿ ಅನ್ವಯವಾಗುತ್ತೆ? ಮೃತದೇಹವನ್ನು ಸಾಗಿಸಲು ಹಾಸಿಗೆಗೆ ಎಷ್ಟು ಎಂದು ಕಿಡಿಕಾರಿದ್ದರು. ಇದನ್ನೂ ಓದಿ:  ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ – ಬ್ಯಾರಿಕೇಡ್ ಮೇಲಿಂದ ಹಾರಿದ ಡಿಕೆಶಿ ವಶ 

    1993 ರ ಯೂತ್‌ ಕಾಂಗ್ರೆಸ್‍ನ ರ‍್ಯಾಲಿಯಲ್ಲಿ ಪೊಲೀಸರ ಗುಂಡಿನ ದಾಳಿಗೆ 13 ಜನರು ಸಾವನ್ನಪ್ಪಿದ್ದರು. ಅವರ ನೆನಪಿಗಾಗಿ ಟಿಎಂಸಿ ಪ್ರತಿ ವರ್ಷ ಜುಲೈ 21 ರಂದು ಹುತಾತ್ಮರ ದಿನವನ್ನು ಆಚರಿಸುತ್ತದೆ. ಈ ವೇಳೆ ಮಮತಾ ಬ್ಯಾನರ್ಜಿ ಅವರು ನಾಯಕಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅಂಗಡಿ ಮಾಲಕಿ ಗೆದ್ದಿದ್ದಕ್ಕೆ ಕಡ್ಲೆಪುರಿ ಹಾರಿಸಿ ಸಂಭ್ರಮ

    ಅಂಗಡಿ ಮಾಲಕಿ ಗೆದ್ದಿದ್ದಕ್ಕೆ ಕಡ್ಲೆಪುರಿ ಹಾರಿಸಿ ಸಂಭ್ರಮ

    ಚಿಕ್ಕೋಡಿ: ಅಂಗಡಿ ಮಾಲಕಿ ಹುಕ್ಕೇರಿ ಪುರಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಕಡ್ಲೆಪುರಿ ಹಾರಿಸಿ ಸಂಭ್ರಮಿಸಿದ್ದಾರೆ.

    ಹುಕ್ಕೇರಿ ಪುರಸಭೆಯ 14 ನೇ ಮಹಿಳಾ ವಾರ್ಡ್ ನಿಂದ ಸುರೇಖಾ ಗಳತಿಗಮಠ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಅದರಲ್ಲಿ ಕಾಂಗ್ರೆಸ್ಸಿನ ಸುರೇಖಾ ಅವರು ಜಯಗಳಿಸಿದ್ದರು.

    ಸುರೇಖಾ ಅವರು ಗೆಲುವು ತಮ್ಮದಾಗಿಸಿಕೊಳ್ಳುತ್ತಿದ್ದಂತೆಯೇ ಅವರ ಕುಟುಂಬಸ್ಥರು ಸಂಭ್ರಮ ಮುಗಿಲುಮುಟ್ಟಿತ್ತು. ಅಲ್ಲದೇ ನಡುರಸ್ತೆಯಲ್ಲಿಯೇ ಸುರೇಖಾ ಅವರ ಅಂಗಡಿಯಿಂದಲೇ ಕಡ್ಲೆಪುರಿ ತಂದು ಹಾರಿಸಿ ಖುಷಿ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರು ಕೂಡ ಹುಕ್ಕೇರಿ ಪಟ್ಟಣದ ಕೋರ್ಟ್ ವೃತ್ತದಲ್ಲಿ ಕಡಲೆ ಪುರಿ ಎರಚಿ ಸಂಭ್ರಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv