Tag: ಕಡಲೆಬೇಳೆ

  • ಹೋಳಿಗೆ ರುಚಿಯಷ್ಟೇ ಟೇಸ್ಟಿಯಾಗಿರುವ ‘ಸುಕ್ಕಿನುಂಡೆ’ ಮಾಡಿ ಸವಿಯಿರಿ

    ಹೋಳಿಗೆ ರುಚಿಯಷ್ಟೇ ಟೇಸ್ಟಿಯಾಗಿರುವ ‘ಸುಕ್ಕಿನುಂಡೆ’ ಮಾಡಿ ಸವಿಯಿರಿ

    ಡಲೆ ಬೇಳೆಯಲ್ಲಿ ಮಾಡುವ ಸಿಹಿ ತಿನಿಸು ಎಂದರೆ ನಮಗೆ ಥಟ್ ಎಂದು ನೆನಪಾಗುವುದು ಒಬ್ಬಟ್ಟು. ಆದರೆ ಇಂದು ನಾವು ಹೇಳಿಕೊಡುವ ರೆಸಿಪಿ ಸುಕ್ಕಿನುಂಡೆ. ಸುಕ್ಕಿನುಂಡೆ ಸಾಂಪ್ರದಾಯಿಕ ತಿನಿಸಾಗಿದ್ದು, ಯಾವುದೇ ಬೇಳೆಯನ್ನು ಬಳಸಿ ಈ ರೆಸಿಪಿಯನ್ನು ಮಾಡಬಹುದು. ಇಂದು ನಾವು ಕಡಲೆ ಬೇಳೆ ಬಳಸಿ ಸುಕ್ಕಿನುಂಡೆ ಹೇಗೆ ತಯಾರಿಸುವುದು ಎಂದು ಹೇಳಿಕೊಡುತ್ತೇವೆ. ಇದು ಆರೋಗ್ಯಕರವಾದ ಅಡುಗೆ ಕೂಡ ಆಗಿದೆ. ಒಳಗಡೆ ಹೋಳಿಗೆಯ ರುಚಿ ಇದ್ದು, ತಿನ್ನಲು ಸಖತ್ ಆಗಿ ಇರುತ್ತೆ. ಮತ್ತೆ ಇನ್ಯಾಕೆ ತಡ. ಈ ಶುಭ ಶನಿವಾರ ಕಡಲೆಬೇಳೆಯ ಸುಕ್ಕಿನುಂಡೆ ಮಾಡೋಣ.

    ಬೇಕಾಗುವ ಸಾಮಾಗ್ರಿಗಳು:
    * 3 ಗಂಟೆ ನೆನೆಸಿದ ಕಡಲೆ ಬೇಳೆ – 1 ಕಪ್
    * ಬೆಲ್ಲ – 1/3 ಕಪ್
    * ಉಪ್ಪು – ಅರ್ಧ ಟೀಸ್ಪೂನ್

    * ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    * 4 ಗಂಟೆ ನೆನೆಸಿದ ಅಕ್ಕಿ – 1 ಕಪ್
    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ಕರಿಯಲು ಎಣ್ಣೆ

    ಮಾಡುವ ವಿಧಾನ:
    * ಕುಕ್ಕರಿನಲ್ಲಿ 1 ಕಪ್ ಆಗುವಷ್ಟು ಕಡಲೆ ಬೇಳೆ ಹಾಗು ಒಂದೂಕಾಲು ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ದೊಡ್ಡ ಉರಿಯಲ್ಲಿ 4 ಕೂಗು ಕೂಗಿಸಿ. ನಂತರ ಇದರಲ್ಲಿರುವ ನೀರನ್ನು ಬಸಿದುಕೊಳ್ಳಿ.
    * ಕಡಲೆ ಬೇಳೆಯನ್ನು ಕುಕ್ಕರಿಗೆ ಹಾಕಿ, ಅದಕ್ಕೆ 1/3 ಕಪ್ ಬೆಲ್ಲ, ಕಾಲು ಚಮಚ ಉಪ್ಪು ಹಾಕಿ, ಬೆಲ್ಲ ಕರಗಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
    * ಇದಕ್ಕೆ ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ ಗಟ್ಟಿಯಾಗುವವರೆಗೆ ಬೇಯಿಸಿ.
    * ಮಿಕ್ಸಿ ಜಾರಿಗೆ 1 ಕಪ್ ಆಗುವಷ್ಟು ಅಕ್ಕಿ, ಅರ್ಧ ಚಮಚ ಉಪ್ಪು, ಕಾಲು ಚಮಚ ಅರಿಶಿನ ಪುಡಿ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ನುಣ್ಣಗೆ ರುಬ್ಬಿ. ಇದನ್ನು ಪಾತ್ರೆಗೆ ಹಾಕಿಕೊಳ್ಳಿ.
    * ಕಡಲೆಬೇಳೆ ಮತ್ತು ಬೆಲ್ಲದ ಮಿಶ್ರಣವನ್ನು ಉಂಡೆಗಳಾಗಿ ಮಾಡಿ. ಇವುಗಳನ್ನು ರುಬ್ಬಿದ ಹಿಟ್ಟಿನಲ್ಲಿ ಅದ್ದಿ.
    * ಎಣ್ಣೆಯನ್ನು ಬಿಸಿ ಮಾಡಿ ಒಂದೊಂದಾಗಿ ಹಾಕಿ. ಗರಿ-ಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಕರಿದು ತೆಗೆಯಿರಿ.

    – ರುಚಿಯಾದ ಕಡಲೆಬೇಳೆ ಸುಕ್ಕಿನುಂಡೆ ಸವಿಯಲು ಸಿದ್ಧ.

    Live Tv
    [brid partner=56869869 player=32851 video=960834 autoplay=true]