Tag: ಕಡಲೆಕಾಯಿ ಪರಿಷೆ

  • ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ (Basavanagudi Kadlekai Parishe) ದಿನಾಂಕ ನಿಗದಿ ಆಗಿದೆ. ಮುಂದಿನ ತಿಂಗಳು ನವೆಂಬರ್ 17 ಮತ್ತು 18ರಂದು ಎರಡು ದಿನಗಳ ಕಾಲ ಪರಿಷೆ ನಡೆಯಲಿದೆ.

    ಶ್ರೀ ದೊಡ್ಡಗಣಪತಿ ದೇವಾಲಯದಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ತನ್ನದೇ ಆದ ವಿಶೇಷ ಇತಿಹಾಸ ಇದೆ. ಪ್ರತಿ ವರ್ಷದಂತೆ ಈ ವರ್ಷವು ಯಾವುದೇ ಅಹಿತಕರ ಘಟನೆ ಆಗದಂತೆ ಅದ್ಧೂರಿ ಆಗಿ ನಡೆಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಗೋಲ್ಡನ್ ಪಾಸ್ ಪಡೆದು, ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ಧ್ರುವ ಸರ್ಜಾ

    ಇದೇ ಗುರುವಾರ ಕಡಲೆ ಕಾಯಿ ಪರಿಷೆ ಸಂಬಂಧ ಸಾರಿಗೆ ಸಚಿವ ಹಾಗೂ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ (Ramalinga Reddy) ನೇತೃತ್ವದಲ್ಲಿ ಸಭೆ ಕೂಡ ನಡೆಯಲಿದ್ದು, ಸಭೆಯಲ್ಲಿ ಸ್ಥಳೀಯ ಶಾಸಕರು ಭಾಗಿಯಾಗಲಿದ್ದಾರೆ. ಜೊತೆಗೆ ವ್ಯಾಪಾರಿಗಳಿಂದ ಯಾವುದೇ ಸುಂಕ ವಸೂಲಾತಿ ಯಾರು ಮಾಡಬಾರದು ಎಂಬುದುನ್ನ ನಿರ್ಧಾರ ಕೈಗೊಳ್ಳುವುದರ ಜೊತೆಗೆ ಏನೆಲ್ಲ ವಿಶೇಷತೆ ಇರುತ್ತೆ ಎಂಬುದನ್ನ ಬಹಿರಂಗ ಪಡಿಸಲಿದ್ದಾರೆ.  ಇದನ್ನೂ ಓದಿ: ರಷ್ಯಾದ ತೈಲ ಆಮದು ಕಡಿಮೆಯಾಗಲಿದೆ, ದೀಪಾವಳಿಯಂದು ಮೋದಿ ಜೊತೆ ಮಾತನಾಡಿದ್ದೇನೆ: ಟ್ರಂಪ್‌

  • ಬೆಂಗಳೂರಿನ ಪ್ರಸಿದ್ಧ ಬಸವನಗುಡಿ, ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    ಬೆಂಗಳೂರಿನ ಪ್ರಸಿದ್ಧ ಬಸವನಗುಡಿ, ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    -ನ.25, 26ರಂದು ಬಸವನಗುಡಿಯಲ್ಲಿ ಪರಿಷೆ, 3 ಲಕ್ಷ ಜನ ಭಾಗಿ ಸಾಧ್ಯತೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ಮತ್ತು ಮಲ್ಲೇಶ್ವರಂ ಕಡಲೆಕಾಯಿ ಪರಿಷೆಯ (Kadalekai Parishe) ದಿನಾಂಕವನ್ನ ಮುಜರಾಯಿ ಇಲಾಖೆ (Muzrai Department) ಘೋಷಣೆ ಮಾಡಿದೆ. ಎರಡು ದಿನಗಳ ಕಾಲ ಈ ಪರಿಷೆ ನಡೆಸಲು ನಿರ್ಧರಿಸಿದೆ. ಈ ಬಾರಿಯ ಕಡಲೆಕಾಯಿ ಪರಿಷೆ ಹಲವು ವಿಶೇಷತೆಗಳಿಂದ ಕೂಡಿರಲಿದೆ.

    ಪ್ರತಿ ವರ್ಷದಂತೆ ಈ ವರ್ಷವೂ ಬಸವನಗುಡಿ ಕಡಲೆಕಾಯಿ ಪರಿಷೆ ಮಾಡಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ನವೆಂಬರ್ 25 ಮತ್ತು 26ರಂದು ಎರಡು ದಿನಗಳ ಕಾಲ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಈ ಸಂಬಂಧ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳ ಜೊತೆ ಸಭೆ ಮಾಡಿ ಹಲವಾರು ಸಲಹೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದ 50 ಶಾಸಕರಿಗೆ ಬಿಜೆಪಿಯಿಂದ ತಲಾ 50 ಕೋಟಿ ಆಫರ್‌ ಬಂದಿತ್ತು: ಸಿಎಂ ಬಾಂಬ್‌

    ಇನ್ನೂ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ನವೆಂಬರ್ 15 ರಿಂದ 3 ದಿನಗಳ ಕಾಲ ನಡೆಯಲಿದೆ. ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ನಿರ್ಧರಿಸಲಾಗಿದೆ. ಪರಿಷೆಗೆ ಬರುವವರು ಮತ್ತು ವ್ಯಾಪಾರಸ್ಥರು ಪ್ಲಾಸ್ಟಿಕ್ ಬಿಟ್ಟು, ಬಟ್ಟೆ ಚೀಲವನ್ನೆ ಬಳಸಬೇಕು ಎಂಬ ನಿಯಮ ಜಾರಿ ಮಾಡಲಾಗುತ್ತದೆ. ಇನ್ನು ಈ ಪರಿಷೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಈ ಬಾರಿ ಮೂರು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ರಝಾಕರು ಮುಸ್ಲಿಮರಲ್ಲ, ಸುಟ್ಟಿದ್ದು ನಮ್ಮನೆ, ಹೋಗಿದ್ದು ನಮ್ಮವರ ಜೀವ, ಯೋಗಿಗೆ ಏನಾಗಬೇಕು? – ಪ್ರಿಯಾಂಕ್ ತಿರುಗೇಟು

    ಕಳೆದ ಬಾರಿ ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡಿರೋ ಆರೋಪ ಎದ್ದಿತ್ತು. ಹೀಗಾಗಿ ಈ ಬಾರಿ ಆ ರೀತಿ ಅಕ್ರಮಗಳು ನಡೆಯದಂತೆ ಕ್ರಮವಹಿಸಿ ಯಶಸ್ವಿಗೊಳಿಸಲು ಪ್ಲ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ಗುರುವಾರ ಬಿಎಸ್‌ವೈ, ರಾಮುಲುಗೆ ಬಿಗ್‌ ಡೇ!

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಡಲೆಕಾಯಿ ಪರಿಷೆಯಲ್ಲಿ ಹಣ ವಸೂಲಿ ಮಾಡುತ್ತಿದ್ದವರ ಮೇಲೆ ಕ್ರಮ: ರಾಮಲಿಂಗಾ ರೆಡ್ಡಿ ಭರವಸೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಡಲೆಕಾಯಿ ಪರಿಷೆಯಲ್ಲಿ ಹಣ ವಸೂಲಿ ಮಾಡುತ್ತಿದ್ದವರ ಮೇಲೆ ಕ್ರಮ: ರಾಮಲಿಂಗಾ ರೆಡ್ಡಿ ಭರವಸೆ

    ಬೆಂಗಳೂರು: ಕಡಲೆಕಾಯಿ ಪರಿಷೆ (Kadalekai Parishe) ಹೆಸರಿನಲ್ಲಿ ನಿಯಮ ಮೀರಿ ಸುಂಕ ವಸೂಲಿ ಮಾಡುತ್ತಿರುವ ಆರೋಪದ ಬಗ್ಗೆ `ಪಬ್ಲಿಕ್ ಟಿವಿ’ ಪ್ರಸಾರ ಮಾಡಿದ ವರದಿ ಫಲಶೃತಿ ನೀಡಿದೆ.

    ದೇವಾಲಯದ ಆವರಣದ ಹೊರಗೆ ಕಡಲೆಕಾಯಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಬಳಿ 500 ರೂ. ಹಣ ಪಡೆದು ರಶೀದಿ ನೀಡಲಾಗಿತ್ತು. ಈ ಬಗ್ಗೆ ನಿರಂತರ ವರದಿಯ ಬಳಿಕ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕ್ರಮಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ಅಶೋಕ್ ಹೆಸರಿನ ನಾಮಫಲಕ ಇರೋವರೆಗೂ ಆ ಕೊಠಡಿಗೆ ಹೋಗಲ್ಲ: ಎಸ್‌ಆರ್ ವಿಶ್ವನಾಥ್ ಮುನಿಸು

    ರಶೀದಿಯ ಮೇಲೆ ದೊಡ್ಡ ಬಸವನಗುಡಿ (Basavanagudi) ದೇವಸ್ಥಾನ, ಕಡಲೆಕಾಯಿ ಪರಿಷೆ ಎಂದು ಮುದ್ರಣಗೊಂಡಿದೆ. ಈ ಬಗ್ಗೆ ವಿಚಾರಿಸಿದಾಗ ಪ್ರಸಾದ್ ಎಂಬವರಿಗೆ 2-3 ಲಕ್ಷಕ್ಕೆ ಬಿಡ್ ನೀಡಲಾಗಿದೆ. ಒಂದು ದಿನ ಮಾತ್ರ ಹಣ ವಸೂಲಿಗೆ ಅವಕಾಶ ಇದ್ದು, ಬಿಡ್ ನೀಡಿದ ಮಾತ್ರಕ್ಕೆ 500, 200 ರೂ. ಕಲೆಕ್ಟ್ ಮಾಡುವ ಹಾಗಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮಕೈಗೊಳ್ಳುವುದಾಗಿ ದೊಡ್ಡ ಗಣಪತಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ್ ಬಾಬು ಮಾಹಿತಿ ನೀಡಿದ್ದಾರೆ.

    ಬೆಳಗ್ಗೆಯಿಂದ ದುಡಿದರೂ 500 ರೂ. ದುಡಿಮೆ ಆಗುವುದಿಲ್ಲ. ಹೀಗಿರುವಾಗ 500 ರೂ. ಕೊಡಬೇಕು ಎಂದು ಬರುತ್ತಾರೆ. ನೂಕುವ ಗಾಡಿಯಲ್ಲಿ ವ್ಯಾಪಾರ ಮಾಡುವವನಿಗೆ 200 ರೂ. ವಸೂಲಿ ಮಾಡುತ್ತಾರೆ ಎಂದು ವ್ಯಾಪಾರಿಗಳು `ಪಬ್ಲಿಕ್ ಟಿವಿ’ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಈ ವರದಿ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಸುಂಕ ವಸೂಲಿ ಮಾಡಲು ಅವರ್ಯಾರು? ಉಚಿತವಾಗಿ ವ್ಯಾಪಾರ ಮಾಡಲು ಅವಕಾಶ ಇದೆ. ಹಣ ವಸೂಲಿ ಮಾಡಿದವರನ್ನು ಅಮಾನತು ಮಾಡ್ತೇನೆ. ಕಡಲೆಕಾಯಿ ಪರೀಷೆ ವಿಚಾರವಾಗಿ ಇಓ ಬಳಿ ಮಾತಾಡಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಆಕ್ಷೇಪಾರ್ಹ ಲೇಖನ – ಸಂಜಯ್‌ ರಾವತ್‌ ವಿರುದ್ಧ ದೇಶದ್ರೋಹದ ಕೇಸ್‌

  • ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಚಾಲನೆ- 3 ದಿನಗಳ ಕಾಲ ಬೆಂಗಳೂರಲ್ಲಿ ಗ್ರಾಮೀಣ ವೈಭವ

    ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಚಾಲನೆ- 3 ದಿನಗಳ ಕಾಲ ಬೆಂಗಳೂರಲ್ಲಿ ಗ್ರಾಮೀಣ ವೈಭವ

    ಬೆಂಗಳೂರು: ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ (Kadalekai Parishe)  ಇಂದಿನಿಂದ ಆರಂಭವಾಗಿದೆ. ಬಸವನಗುಡಿಯ ದೊಡ್ಡ ಗಣೇಶ ದೇವಾಲಯದ ಬಳಿ ಸುಗ್ಗಿಯ ವೈಭವ ಜೋರಾಗಿದ್ದು, ಎತ್ತ ನೋಡಿದ್ರು ಜಾತ್ರಾ ಮೆರುಗು ಸಿಟಿಯ ಮಧ್ಯೆ ಗ್ರಾಮೀಣ ಸೊಬಗನ್ನ ರಂಗೇರಿಸುತ್ತಿದೆ.

    ತನ್ನದೇ ಆದ ಇತಿಹಾಸ ಹೊಂದಿರೋ ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ ಸಿಕ್ಕಿದೆ. ದೊಡ್ಡ ಗಣೇಶನ ದೇವಾಲಯದಲ್ಲಿ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮಾಡುವ ಮೂಲಕ ಪರಿಷೆಗೆ ಚಾಲನೆ ನೀಡಲಾಯ್ತು. ಸಂಸದ ತೇಜಸ್ವಿಸೂರ್ಯ, ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಅಧಿಕೃತ ಚಾಲನೆ ನೀಡಿದ್ರು.

    ಹಿಂದಿನಿಂದಲೂ ಸಂಪ್ರದಾಯದಂತೆ ಕಡಲೆಕಾಯಿ ಉತ್ಸವ ಮಾಡಿಕೊಂಡು ಬರಲಾಗಿದ್ದು, ಈ ಹಿಂದೆ ಜಮೀನುಗಳಿಂದ ಕಡಲೆಕಾಯಿ ತಂದು ಇಲ್ಲಿ ಮಾರಾಟ ಮಾಡಲಾಗ್ತಿತ್ತು. ಆದರೆ 2008ರಿಂದ ಪರಿಷೆಗೆ ಹೊಸ ಆಯಾಮ ಕೊಡಲಾಗಿದೆ. ವಿಶೇಷವಾಗಿ 1 ವಾರದವರೆಗೂ ಜಾತ್ರೆ ನಡೆಯಲಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚು ಜನ ಪರಿಷೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಾರಿ ಕೂಡ ಸುಮಾರು 7 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ಭ್ರದತೆ ದೃಷ್ಟಿಯಿಂದ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಮಹಿಳೆಯರ ಸೇಫ್ಟಿ ದೃಷ್ಟಿಯಿಂದ ಅನೌನ್ಸ್ ಮೆಂಟ್ ಸೇರಿದಂತೆ 50ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಇನ್ನೂ ಇಂದು ಸಂಜೆ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನೆರವೇರಿದೆ.

    ಪರಿಷೆಗೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ (Tejaswi Surya) ಮಾತನಾಡಿ, ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ. ನಮ್ಮ ನೆಲದ ಸಂಸ್ಕೃತಿ ಇಂದಿಗೂ ಜೀವಂತವಾಗಿರೋದು ಈ ರೀತಿಯ ಆಚರಣೆಯಿಂದಗಳಿಂದಲೇ. ಈ ವರ್ಷವೂ ಲಕ್ಷಾಂತರ ಜನರು ಭಾಗಿಯಾಗ್ತಿದ್ದಾರೆ. ಪ್ರಧಾನ ಮಂತ್ರಿಗಳು ಸ್ಥಳೀಯ ವ್ಯಾಪಾರಿಗಳಿಗೆ ಆರ್ಥಿಕತೆ ಉತ್ತೇಜನ ನೀಡುವಲ್ಲಿ ಮುಂದಾಗಿದ್ದಾರೆ. ಅದೇ ರೀತಿ ಕಡಲೆಕಾಯಿ ಪರಿಷೆ ಸಾಕಷ್ಟು ವ್ಯಾಪಾರಿಗಳಿಗೆ ಆದಾಯ ಆಗಲಿದೆ. ಕೋಟ್ಯಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯಲಿದೆ. ತಂದೆ ತಾಯಿಗಳು ತಮ್ಮ ಮಕ್ಕಳನ್ನು ಕರೆ ತನ್ನಿ ಎಂದ್ರು.

    ಇಂದಿನಿಂದ ಆರಂಭವಾಗಿರೋ ಪರಿಷೆ ಇನ್ನೂ ಮೂರು ದಿನ ನಗರದ ಮಧ್ಯ ಭಾಗದಲ್ಲಿ ಹಳ್ಳಿ ಸೊಬಗನ್ನ ಸೃಷ್ಟಿಸಿರೊದಂತು ಸುಳ್ಳಲ್ಲ. ನೀವು ಭೇಟಿ ಕೊಡಿ, ವೈಭವವನ್ನ ಆನಂದಿಸಿ.

  • ಉದ್ಯಾನನಗರಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸಡಗರ – ಬಡವರ ಬಾದಾಮಿ ಈ ಬಾರಿ ದುಬಾರಿ

    ಉದ್ಯಾನನಗರಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸಡಗರ – ಬಡವರ ಬಾದಾಮಿ ಈ ಬಾರಿ ದುಬಾರಿ

    ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿಂದು (Bengaluru) ಗ್ರಾಮೀಣ ಸೊಗಡು ಮನೆ ಮಾಡಿತು. ಸಂಡೇ ಸ್ಪೆಷಲ್ ಎಂಬಂತೆ ಜನ ಬಸವನಗುಡಿ ಕಡಲೆಕಾಯಿ ಪರಿಷೆಯತ್ತ (Basavanagudi, Kadalekai Parishe) ಮುಖ ಮಾಡಿದ್ರು.

    ಬಸವನಗುಡಿ ಬುಲ್ ಟೆಂಪಲ್ ರಸ್ತೆಯಲ್ಲಿಂದು ಬಡವರ ಬಾದಾಮಿಯ ರಂಗು ಪಸರಿಸಿತು. ಎಲ್ಲೆಡೆ ಕಡಲೆಕಾಯಿ ರಾಶಿ, ರಾಶಿ ಗ್ರಾಹಕರ ಕೈ ಬೀಸಿ ಕರೆಯುತ್ತಿತ್ತು. ಇಂದಿನಿಂದ ನಗರದ ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಡಲೆ ಕಾಯಿ ಪರಿಷೆಗೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಚಿಲುಮೆ ಅಕ್ರಮ ಪ್ರಕರಣ – ಪ್ರಮುಖ ಆರೋಪಿ ರವಿಕುಮಾರ್ ಬಂಧನ

    ಕಡಲೆಕಾಯಿ ಜಾತ್ರೆಗೆ 500 ವರ್ಷಗಳ ಇತಿಹಾಸವಿದ್ದು, ಪಕ್ಕದ ತಮಿಳುನಾಡಿನಿಂದಲೂ ಕಡಲೆ ಕಾಯಿ ವ್ಯಾಪಾರಿಗಳು ಆಗಮಿಸಿದ್ರು. ಈ ಬಾರಿ ಪರಿಷೆಯಲ್ಲಿ ಕಡಲೆ ಕಾಯಿ ಬಾರಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಒಂದು ಸೇರು ಹಸಿ ಕಡಲೆಕಾಯಿ 50 ರೂ. ಹಾಗೇ ಹುರಿದ ಕಡಲೆಕಾಯಿ ಸೇರಿಗೆ 80 ರೂಪಾಯಿನಂತೆ ಮಾರಾಟವಾಗುತ್ತಿದೆ. 2 ಸಾವಿರ ವ್ಯಾಪಾರಿಗಳು ಪರಿಷೆಯಲ್ಲಿದ್ದಾರೆ. ಇದನ್ನೂ ಓದಿ: ಉಗ್ರರ ಅಡಗುತಾಣವಾಗ್ತಿದ್ಯಾ ಮಂಗಳೂರು – ಕರಾವಳಿ ಜಿಲ್ಲೆಯಾದ್ಯಂತ ಹೈ ಅಲರ್ಟ್

    ಕಡಲೆಕಾಯಿ ಪರಿಷೆಗೆ ಇತಿಹಾಸವೇ ಇದೆ. ಬೆಂಗಳೂರಿನ ಮೂಲೆ ಮೂಲೆಯಿಂದ ಜನ ಬಂದು ಕಡಲೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಪರಿಷೆ ಮುಗಿಯೋವರೆಗೂ ಬುಲ್ ಟೆಂಪಲ್ ದೇಗುಲದ ಮುಂಭಾಗ ವಾಹನ ಓಡಾಟ ನಿಷೇಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಡಲೆಕಾಯಿ ಪರಿಷೆಯಲ್ಲಿ ನಕ್ಕುನಲಿದ ವೈಷ್ಣವಿಗೌಡ

    ಕಡಲೆಕಾಯಿ ಪರಿಷೆಯಲ್ಲಿ ನಕ್ಕುನಲಿದ ವೈಷ್ಣವಿಗೌಡ

    ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಸೀಸನ್-8 ಸ್ಫರ್ಧಿಯಾಗಿದ್ದ ವೈಷ್ಣವಿ ಗೌಡ ಈ ಬಾರಿ ನಡೆದ ಕಡಲೆಕಾಯಿ ಪರಿಷೆಯಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.

    ಬಿಗ್‍ಬಾಸ್ ಸೀನಸ್-8ರಲ್ಲಿ ತಮ್ಮ ತರ್ಲೆ ಹಾಗೂ ಚೇಷ್ಟೆ ಮೂಲಕ ಮಂಜುರನ್ನು ಸದಾ ಗೋಳುಯ್ದುಕೊಳ್ಳುತ್ತಿದ್ದ ವೈಷ್ಣವಿ ಗೌಡ ದೊಡ್ಮನೆ ಮಂದಿಗಷ್ಟೇ ಅಲ್ಲದೇ ವೀಕ್ಷಕರಿಗೂ ಫೇವರೆಟ್ ಕಂಟೆಸ್ಟೆಂಟ್ ಅಂದರೆ ತಪ್ಪಾಗಲಾರದು. ಬಿಗ್‍ಬಾಸ್ ಮನೆಯಲ್ಲಿ ತಮ್ಮ ನಡೆ, ನುಡಿ, ಹಾವ-ಭಾವ ಮೂಲಕ ಕನ್ನಡಿಗರ ಹೃದಯ ಕದ್ದಿದ್ದ ಚೆಲುವೆ ವೈಷ್ಣವಿಗೌಡ. ಬಿಗ್‍ಬಾಸ್ ಕಾರ್ಯಕ್ರಮದ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಷಿವ್ ಆಗಿರುವ ವೈಷ್ಣವಿ ಗೌಡ ಇತ್ತೀಚೆಗಷ್ಟೇ ಕಡಲೆಕಾಯಿ ಪರಿಷೆಯಲ್ಲಿ ಮಸ್ತ್ ಮಜಾ ಮಾಡಿದ್ದಾರೆ.

    ಸದ್ಯ ಕಡಲೆ ಕಾಯಿ ಪರಿಷೆಯ ಕಲರ್ ಫುಲ್ ವೀಡಿಯೋವೊಂದನ್ನು ವೈಷ್ಣವಿ ಗೌಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋದಲ್ಲಿ ವೈಷ್ಣವಿ ಜಾತ್ರೆಯಲ್ಲಿ ಆಟ ಆಡಿರುವುದು, ಅಭಿಮಾನಿಗಳು ಹಾಗೂ ಪೊಲೀಸರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿವುದು, ದೊಡ್ಡ ಗಣೇಶ ದೇವಾಲಯಕ್ಕೆ ಭೇಟಿ ನೀಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಸಿಂಪಲ್ ಮ್ಯಾರೇಜ್ – ಮದುವೆ ಪ್ಲ್ಯಾನ್ ಬಗ್ಗೆ ಶುಭಾ ಪೂಂಜಾ ಮಾತು

    ವೀಡಿಯೋ ಜೊತೆಗೆ ಸಂಪ್ರದಾಯಿಕ ಹಿರಿಮೆ, ಆಚರಣೆ, ಜನ, ಬಣ್ಣ, ಬಣ್ಣದ ದೃಶ್ಯ ಎಲ್ಲವೂ ಅದ್ಭುತ ಅನುಭವ ತರಿಸಿದೆ. ಈ ವರ್ಷ ಕಡಲೆಕಾಯಿ ಪರಿಷೆಯಲ್ಲಿ ನಾನು ಭಾಗಿಯಾಗಿದ್ದು ಬಹಳ ಸಂತಸ ತಂದಿದೆ. ಮೊದಲ ಬಾರಿಗೆ ಕಡಲೆ ಕಾಯಿ ಪರಿಷೆ ವೀಕ್ಷಿಸಿದೆ ಎಂದು ಕ್ಯಾಪ್ಷನ್ ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Vaishnavi (@iamvaishnavioffl)

    ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತದೆ. ಜಾತ್ರೆಯಂತಿರುವ ಕಡಲೆಕಾಯಿ ಪರಿಷೆ ವೀಕ್ಷಿಸಲು ಬೆಂಗಳೂರಿನ ಮೂಲೆ ಮೂಲೆಗಲಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಈ ಮಧ್ಯೆ ಮೊದಲ ಬಾರಿಗೆ ಕಡಲೆ ಕಾಯಿ ಪರಿಷೆ ವೀಕ್ಷಿಸಿದ ವೈಷ್ಣವಿ ಗೌಡ ಸಖತ್ ಖುಷ್ ಆಗಿದ್ದಾರೆ. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ ಸಂತ್ರಸ್ತರಿಗೆ ಮಿಡಿದ ಟಾಲಿವುಡ್ ಸ್ಟಾರ್ಸ್

  • ಐತಿಹಾಸಿಕ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಚಾಲನೆ

    ಐತಿಹಾಸಿಕ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಚಾಲನೆ

    ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಟದಿಂದ ನಿಂತಿದ್ದ ಕಡಲೆಕಾಯಿ ಷರಿಷೆಗೆ ಮತ್ತೆ ರಂಗು ಬಂದಿದೆ. ಮುಜರಾಯಿ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ನಡೆಯುವ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಶಾಸಕರಾದ ರವಿಸುಬ್ರಮಣ್ಯ, ಉದಯ್ ಬಿ.ಗರುಡಾಚಾರ್ ಇಂದು ಚಾಲನೆ ನೀಡಿದರು.

    KADALEKAI PARISHE

    ಸಿಲಿಕಾನ್ ಸಿಟಿ ಬೆಂಗಳೂರಿನ ಬಸವನಗುಡಿ ಇಂದು ಕಲರ್ ಫುಲ್ ಆಗಿದೆ. ಬಣ್ಣ-ಬಣ್ಣದ ಅಟಿಕೆ, ರುಚಿ ರುಚಿಯಾದ ಬಡವರ ಬಾದಾಮಿ ಕಡಲೆಕಾಯಿ, ಲೈಟಿಂಗ್‍ನಲ್ಲಿ ಕಂಗೊಳಿಸುವ ಜಾತ್ರೆ ತಿನಿಸುಗಳು ಹಾಗೂ ಕಲರ್ ಫುಲ್ ದುನಿಯಾ ಅನಾವರಣವಾಗಿದೆ. ಬಸವನಗುಡಿ ಸಂಪ್ರದಾಯಿಕ ಕಡಲೆಕಾಯಿ ಪರಿಷೆಯ ಪ್ರಯುಕ್ತ ಹಬ್ಬದ ವಾತಾವರಣ ಮನೆ ಮಾಡಿದೆ. ಕೊರೊನಾ ಮಾರ್ಗಸೂಚಿಯೊಂದಿಗೆ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಕಡಲೇಕಾಯಿ ಪರಿಷೆ – ಬುಲ್ ಟೆಂಪಲ್ ರಸ್ತೆಯಲ್ಲಿ ಕಟ್ಟೆಚ್ಚರ

    KADLEKAI PARISHE

    ಇಂದಿನಿಂದ ಡಿಸೆಂಬರ್ 1ರವರೆಗೆ ಅಂದರೆ 3 ದಿನ ಈ ಕಡಲೆಕಾಯಿ ಪರಿಷೆ ನಡೆಯಲಿದೆ. ಸಾವಿರಕ್ಕೂ ಹೆಚ್ಚು ಕಡಲೆಕಾಯಿ ಮಳಿಗೆಗಳು ಓಪನ್ ಆಗಿದ್ದು. 50ರೂ.ಗೆ ಸೇರು ಮಾರಾಟವಾಗ್ತಿದೆ. ಭಾನುವಾರದಿಂದಲೇ ಪರಿಷೆ ಸಂಭ್ರಮ ಮನೆ ಮಾಡಿತ್ತು. ಕುಟುಂಬ ಸಮೇತರಾಗಿ ಬಂದು ಕೊರೊನಾ ನಿಯಮವನ್ನೇ ಮರೆತು ಕಡಲೆಕಾಯಿ ಖರೀದಿಸಲು ಜನ ಮುಗಿಬಿದ್ದಿದ್ದರು. ಇದನ್ನೂ ಓದಿ: ಮದುವೆಗೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡಿದ ವಧು – ವೀಡಿಯೋ ವೈರಲ್

    ಇಂದು ನಡೆದ ಕಾರ್ಯಕ್ರಮದಲ್ಲಿ ಆಡಳಿತಗಾರರು ರಾಕೇಶ್ ಸಿಂಗ್, ಮುಖ್ಯ ಆಯುಕ್ತರು, ಗೌರವ್ ಗುಪ್ತ, ವಲಯ ಆಯುಕ್ತರು ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತರು ಜಗದೀಶ್ ನಾಯಕ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಸಾಂಪ್ರದಾಯಿಕ ಆಚರಣೆಗೆ ಬ್ರೇಕ್ ಹಾಕಿ ಪೀಠಾರೋಹಣ ಮಾಡಿದ ಮುರುಘಾ ಶರಣರು

  • 2 ವರ್ಷಗಳ ಬಳಿಕ ಕಡಲೇಕಾಯಿ ಪರಿಷೆ – ಬುಲ್ ಟೆಂಪಲ್ ರಸ್ತೆಯಲ್ಲಿ ಕಟ್ಟೆಚ್ಚರ

    2 ವರ್ಷಗಳ ಬಳಿಕ ಕಡಲೇಕಾಯಿ ಪರಿಷೆ – ಬುಲ್ ಟೆಂಪಲ್ ರಸ್ತೆಯಲ್ಲಿ ಕಟ್ಟೆಚ್ಚರ

    ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕೊರೋನಾ ಕಾಟದ ಹಿನ್ನೆಲೆಯಲ್ಲಿ ನಿಂತಿದ್ದ ಷರಿಷೆ ರಂಗು ಮತ್ತೆ ಬಂದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಬಸವನಗುಡಿ ಇಂದು ಕಲರ್ ಫುಲ್ ಆಗಿತು.

    ಬಣ್ಣ – ಬಣ್ಣದ ಅಟಿಕೆ, ರುಚಿ ರುಚಿಯಾದ ಬಡವರ ಬಾದಾಮಿ ಕಡಲೆ ಕಾಯಿ, ಲೈಟಿಂಗ್ ನಲ್ಲಿ ಕಂಗೊಳಿಸುವ ಜಾತ್ರೆ ತಿನ್ನಿಸುಗಳು ಹಾಗೂ ಕಲರ್ ಫುಲ್ ದುನಿಯಾ ಅನಾವರಣ. ಬಸವನಗುಡಿ ಸಂಪ್ರದಾಯಿಕ ಕಡಲೆ ಕಾಯಿ ಪರಿಷೆಯ ಪ್ರಯುಕ್ತ ಹಬ್ಬದ ವಾತಾವರಣ ಮನೆ ಮಾಡಿದೆ. ಇದನ್ನೂ ಓದಿ: 9 ದೇಶಗಳಲ್ಲಿ ಓಮಿಕ್ರಾನ್ ಪತ್ತೆ

    ನಾಳೆಯಿಂದ ಡಿಸೆಂಬರ್ 1ರವರೆಗೆ ಅಂದರೆ 3 ದಿನ ಈ ಕಡ್ಲೇಕಾಯಿ ಪರಿಷೆ ನಡೆಯಲಿದೆ. ಸಾವಿರಕ್ಕೂ ಹೆಚ್ಚು ಕಡಲೆ ಕಾಯಿ ಮಳಿಗೆಗಳು ಓಪನ್ ಆಗಿದ್ದು. 50 ರೂ.ಗೆ ಸೇರು ಮಾರಾಟವಾಗ್ತಿದೆ. ಭಾನುವಾರವಾದ ಇವತ್ತೇ ಪರಿಷೆ ಸಂಭ್ರಮ ಮನೆ ಮಾಡಿತ್ತು. ಕುಟುಂಬ ಸಮೇತರಾಗಿ ಬಂದು ಕೊರೋನಾ ನಿಯಮವನ್ನೇ ಮರೆತಿದ್ದಾರೆ. ನಾಳೆ ಬೆಳಗ್ಗೆ ಸಂಪ್ರಾಯಿಕವಾಗಿ ಕಡಲೆ ಕಾಗಿ ಪರಿಷೆಗೆ ಚಾಲನೆ ಸಿಗಲಿದೆ. ಇದನ್ನೂ ಓದಿ: ನಾಳೆಯಿಂದ ಚಳಿಗಾಲದ ಅಧಿವೇಶನ – ಆಡಳಿತ ಪಕ್ಷ ವಿರುದ್ಧ ಮುಗಿಬೀಳಲು ವಿಪಕ್ಷ ತಯಾರಿ

  • ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದ ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳು

    ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದ ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳು

    ಚಿಕ್ಕಬಳ್ಳಾಪುರ: ವಿಜೃಂಭಣೆಯಿಂದ ನೇರವೇರಿದ ಶ್ರೀ ವೀರಾಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಕಡಲೆಕಾಯಿ ಪರಿಷೆಗೆ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಶ್ರೀಗಳು ಭಕ್ತರಿಗೆ ಕಡಲೆಕಾಯಿ ವಿತರಿಸುವ ಮೂಲಕ ಚಾಲನೆ ನೀಡಿದರು.

    ನಗರ ಹೊರವಲಯದ ಸೂಲಾಲಪ್ಪನದಿನ್ನೆ ಬಳಿಯ ಶ್ರೀ ಆದಿಚುಂಚನಗಿರಿ ಶಾಖಾಮಠ ಉಸ್ತುವಾರಿಯಲ್ಲಿರುವ ಶ್ರೀ ವಿರಾಂಜನೇಯ ಸ್ವಾಮಿ ದೇಗುಲದ ಬಳಿ ಜಾತ್ರಾ ಮಹೋತ್ಸವ ಹಾಗೂ ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನೇರವೇರಿತು. ಪ್ರತಿ ವರ್ಷ ನಡೆಯುವ ಈ ಜಾತ್ರಾ ಮಹೋತ್ಸವ ಹಾಗೂ ಕಡಲೆಕಾಯಿ ಪರಿಷೆಯಲ್ಲಿ ಶ್ರೀ ಗಳಿಂದ ಕಡಲೆಕಾಯಿ ಪಡೆಯಬೇಕೆಂಬುವುದು ಭಕ್ತರ ಅಭಿಲಾಷೆ. ಹೀಗಾಗಿ ಶ್ರೀ ನಿರ್ಮಲಾನಂದನಾಥ ಶ್ರೀಗಳಿಂದ ಕಡಲೆಕಾಯಿ ಪಡೆದುಕೊಳ್ಳೋಕೆ ಭಕ್ತರು ನಾ ಮುಂದು ತಾ ಮುಂದು ಅಂತ ಮುಗಿಬಿದ್ದು ಕಡಲೆಕಾಯಿ ಪಡೆದುಕೊಂಡರು.

    ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ವಿರಾಂಜನೇಯಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಇಡೀ ದೇವಾಲಯವನ್ನ ಹೂಗಳಿಂದ ಅಲಂಕಾರ ಮಾಡಿದ್ದು ಭಕ್ತರ ಕಣ್ಮನ ಸೆಳೆಯಿತು. ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು, ಆದಿಚುಂಚನಗಿರಿ ಶಾಖಾ ಮಠ ಹಾಗೂ ದೇವಾಲಯದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಭಕ್ತರಿಗೆ ಕಡಲೆಕಾಯಿ ಸೇರಿದಂತೆ ಪಾನಕ ಮಜ್ಜಿಗೆ ವಿತರಣೆ ಮಾಡಿದ್ದು ದೇವರ ದರ್ಶನ ಪಡೆದು ಪುನೀತರಾದ ಭಕ್ತರು ಶ್ರೀ ಗಳಿಂದ ಕಡಲೆಕಾಯಿ ಪಡೆದು ಸಂಭ್ರಮಿಸಿದರು.

  • ಬಸವನಗುಡಿಯಲ್ಲಿ ಶುರುವಾಯ್ತು ಸಂಭ್ರಮದ ಕಡಲೆಕಾಯಿ ಪರಿಷೆ

    ಬಸವನಗುಡಿಯಲ್ಲಿ ಶುರುವಾಯ್ತು ಸಂಭ್ರಮದ ಕಡಲೆಕಾಯಿ ಪರಿಷೆ

    ಬೆಂಗಳೂರು: ಕಾರ್ತಿಕ ಮಾಸದ ಕಡೆಯ ಸೋಮವಾರವಾದ ಇಂದು ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ವಿದ್ಯುಕ್ತವಾಗಿ ಚಾಲನೆ ದೊರೆತಿದೆ.

    ಹೌದು, ರಾಜಧಾನಿಯ ಪ್ರಮುಖ ಹಬ್ಬಗಳಲ್ಲೊಂದಾದ ಕಡಲೆಕಾಯಿ ಪರಿಷೆಗೆ ಸೋಮವಾರ ಚಾಲನೆ ದೊರೆತಿದೆ. ಬಿಬಿಎಂಪಿ ಮಹಾಪೌರರಾದ ಗಂಗಾಬಿಕೆಯವರು ಬೆಳಗ್ಗೆ 10 ಗಂಟೆಗೆ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮೂಲಕ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದ್ದಾರೆ.

    ಮುಂಜಾನೆಯಿಂದಲೇ ಭಕ್ತರು ಬಸವನಗುಡಿಯ ದೊಡ್ಡ ಗಣೇಶ ಹಾಗೂ ದೊಡ್ಡ ಬಸವಣ್ಣನ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರು ಕಡಲೆಕಾಯಿಗಳನ್ನು ದೇವರಿಗೆ ಅರ್ಪಿಸುವ ಮೂಲಕ ತಮ್ಮ ಕೋರಿಕೆಯನ್ನು ಬೇಡಿಕೊಂಡಿದ್ದಾರೆ. ಅಲ್ಲದೇ ಗಣೇಶನಿಗೆ ಬೆಣ್ಣೆ ಅಲಂಕಾರದೊಂದಿಗೆ ಕಡಲೆಕಾಯಿ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ನೆರವೇರಿಸಲಾಗಿದೆ.

    ಕಡಲೆಕಾಯಿ ಪರಿಷೆಗೆ ಸೇಲಂ, ಯಶವಂತಪುರ, ದೊಡ್ಡಬಳ್ಳಾಪುರ, ಮೈಸರೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕಡಲೆಕಾಯಿ ವ್ಯಾಪಾರಿಗಳು ಆಗಮಿಸಿದ್ದಾರೆ. ಈ ಬಾರಿ ಹಿಂದಿನ ವರ್ಷಕ್ಕಿಂತಲೂ ಅತಿ ಹೆಚ್ಚು ಕಡಲೆಕಾಯಿ ಸ್ಟಾಲ್ ಗಳು ತಲೆ ಎತ್ತಿದೆ.

    ಪರಿಷೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೇಯರ್ ಗಂಗಾಬಿಕೆ, ಪ್ರತಿ ವರ್ಷ ಕಡಲೆಕಾಯಿ ಪರಿಷೆ ನಡೆಯುವದರಿಂದ ಬಸವನಗುಡಿಗೆ ಗ್ರಾಮೀಣ ಸೊಗಡು ನೀಡುತ್ತದೆ. ಪರಿಷೆಗೆ ಬರುವ ಪ್ರತಿಯೊಬ್ಬರು ಹಾಗೂ ವ್ಯಾಪಾರಸ್ಥರು ಪ್ಲಾಸ್ಟಿಕ್ ಕವರ್‍ಗಳನ್ನು ಬಳಸಬಾರದು. ಸ್ವಚ್ಛ ಬೆಂಗಳೂರಿಗೆ ಕಡಲೆಕಾಯಿ ಪರಿಷೆ ಅಡಿಪಾಯವಾಗಬೇಕು. ಕಳೆದ ವರ್ಷದ ಪರಿಷೆಯಲ್ಲಿ ದಿವಂಗತ ಅನಂತ ಕುಮಾರ್ ಅವರು ಪಾಲ್ಗೊಂಡಿದ್ದರು. ಆದರೆ ಈ ಬಾರಿ ಅವರು ಇಲ್ಲ ಅನ್ನುವುದು ತುಂಬಾ ದುಃಖಕರ ವಿಚಾರ. ಅವರು ಈ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಕನಸನ್ನು ನನಸಾಗಿಸುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಲಿದೆ ಎಂದು ಹೇಳಿದ್ರು.

    ಕಡಲೆಕಾಯಿ ಪರಿಷೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮೇಯರ್ ಗಂಗಾಂಬಿಕೆ, ಶಾಸಕ ಗರುಡಾಚಾರ್, ವಿಧಾನ ಪರಿಷತ್ ಸದಸ್ಯ ಸಿ.ಶರವಣ, ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv