Tag: ಕಡಲೆಕಾಯಿ

  • ಕಚ್ಚಾ ಬದಾಮ್ ಎಂದು ಹಾಡಿದ್ದವನ ಆತಂಕವೇನು ಗೊತ್ತಾ?

    ಕಚ್ಚಾ ಬದಾಮ್ ಎಂದು ಹಾಡಿದ್ದವನ ಆತಂಕವೇನು ಗೊತ್ತಾ?

    ಕೋಲ್ಕತ್ತ: ರಾತ್ರೋರಾತ್ರಿ ಸ್ಟಾರ್ ಆಗಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ. ಹೀಗೆ ಕಡಲೆಕಾಯಿ ಮಾರುತ್ತಾ ಜೀವನ ಸಾಗಿಸುತ್ತಿದ್ದ ಭುಬನ್ ಅವರು ಹಾಡಿದ್ದ ಒಂದು ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಈ ಸ್ಟಾರ್ ಪಟ್ಟ ಭುಬನ್ ಅವರಿಗೆ ಒಂದು ಆತಂಕವನ್ನುಂಟು ಮಾಡಿದೆ.

    ನಾನು ಕಲಾವಿದನಾಗಿ ಉಳಿಯಲು ಬಯಸುತ್ತೇನೆ. ನಾನೀಗ ಸೆಲಬ್ರೆಟಿಯಾಗಿದ್ದೇನೆ. ನಾನೊಬ್ಬ ಸೆಲೆಬ್ರಿಟಿಯಾಗಿ ಕಡಲೆಕಾಯಿ ಮಾರಲು ಹೊರಟರೆ ಅವಮಾನ ಎದುರಿಸಬೇಕಾಗುತ್ತದೆ. ನಾನು ಕಡಲೆಕಾಯಿ ಮಾರಾಟ ಮಾಡುವುದಿಲ್ಲ ಎಂದು  ಭುಬನ್ ಅವರು ಆತಂಕವ್ಯಕ್ತ ಪಡಿಸಿದ್ದಾರೆ.

    ಹಳೆಯ ಚೈನ್, ಮೊಬೈಲ್‍ಗಳನ್ನು ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಕಡಲೆಕಾಯಿ ನೀಡುತ್ತಿದ್ದರು ಭುಬನ್. ಈ ಹಾಡಿನ ಸಾಹಿತ್ಯ ಕೂಡ ಅದೇ ಅರ್ಥವನ್ನು ನೀಡುತ್ತದೆ. ಅವರಿಗೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದಕ್ಕೆ ಖುಷಿ ಇದೆ. ಇತ್ತೀಚೆಗೆ ಪಶ್ಚಿಮ ಬಂಗಾಳ ಪೊಲೀಸರು ಭುಬನ್ ಅವರನ್ನು ಸನ್ಮಾನಿಸಿದ್ದಾರೆ. ಇವರ ಒಂದು ಹಾಡು ಸೋಶಿಯಲ್ ಮೀಡಿಯಾದಲ್ಲಿ ಕಮಾಲ್ ಮಾಡಿದೆ. ಇದನ್ನೂ ಓದಿ:  ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ: ಪ್ರಮೋದ್ ಮುತಾಲಿಕ್

    ಹಾಡಿನ ಸಾಹಿತ್ಯ ಅರ್ಥವಾಗದಿದ್ದರೂ, ಭುಬನ್ ಹಾಡಿದ ರೀತಿ ಎಲ್ಲರಿಗೂ ಇಷ್ಟವಾಗಿತ್ತು. ಹೀಗಾಗಿ, ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಸಖತ್ ಸೌಂಡ್ ಮಾಡುತ್ತಿದೆ. ಭುಬನ್ ಕರೆಸಿ ಕಚ್ಚಾ ಬಾದಾಮ್.. ಹಾಡನ್ನು ರೆಕಾರ್ಡ್ ಮಾಡಿ, ಸಾಂಗ್ ಒಂದನ್ನು ಬಿಡಲಾಗಿದೆ. ಹೀಗಾಗಿ ಅವರನ್ನು ನೋಡುವ ದೃಷ್ಟಿ ಈಗ ಬದಲಾಗಿದೆ. ಈಗ ಅವರು ಮತ್ತೆ ಕಡಲೆಕಾಯಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

  • ಇನ್‌ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಯ್ತು ಕಡಲೆಕಾಯಿ ಮಾರುವವನ ಹಾಡು

    ಇನ್‌ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಯ್ತು ಕಡಲೆಕಾಯಿ ಮಾರುವವನ ಹಾಡು

    ತ್ತೀಚೆಗೆ ಇನ್‍ಸ್ಟಾಗ್ರಾಮ್ ರೀಲ್ಸ್ ತೆರೆಯುತ್ತಿದ್ದಂತೆ ಅತೀ ಹೆಚ್ಚು ಕೇಳಿಸುತ್ತಿರುವ ಹಾಡು ಅದುವೇ ಕಚ್ಚಾ ಬಾದಾಮ್. ದೇಶಾದ್ಯಂತ ಮಾತ್ರವಲ್ಲದೇ ಪ್ರಪಂಚದ ಮೂಲೆ ಮೂಲೆಗಳಿಂದ ರೀಲ್ಸ್ ಪ್ರಿಯರು ಈ ಹಾಡಿನ ಚ್ಯಾಲೆಂಜ್ ಸ್ವೀಕರಿಸಿ ಡ್ಯಾನ್ಸ್ ಮಾಡಿದ್ದಾರೆ.

    ಅಷ್ಟಕ್ಕೂ ಈ ಹಾಡನ್ನು ಅಸ್ತಿತ್ವಕ್ಕೆ ತಂದವನು ಒಬ್ಬ ಕಡಲೆಕಾಯಿ ಮಾರಾಟಗಾರ ಎಂಬ ವಿಷಯ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ. ಭುವನ್ ಬಡ್ಯಾಕರ್ ಎಂಬ ಕಡಲೆಕಾಯಿ ವ್ಯಾಪಾರಿಯ ಈ ಹಾಡು ಇತ್ತೀಚಿನ ಇನ್‍ಸ್ಟಾಗ್ರಾಮ್ ರೀಲ್ಸ್‍ನ ಟ್ರೆಂಡ್ ಪಟ್ಟಿಯಲ್ಲಿ ಸೇರಿದೆ.

    ಈ ಹಾಡಿನ ಅರ್ಥ ಏನು ಎಂಬುದು ಹಲವರಿಗೆ ತಿಳಿಯದೇ ಹೋಗಿರುವುದು ನಿಜವೇ. ಅಷ್ಟಕ್ಕೂ ಈ ಭುವನ್ ಯಾರು ಎಂಬೆಲ್ಲಾ ಗೊಂದಲ ನಿಮ್ಮಲ್ಲಿ ಇದ್ದರೆ ಇದನ್ನು ಓದಿ. ಇದನ್ನೂ ಓದಿ: ಕಾಗೆ ಕಾಟಕ್ಕೆ ಚಿತ್ರದುರ್ಗದ ಓಬಳಾಪುರ ಜನ ಸುಸ್ತು..!

    ಪಶ್ಚಿಮ ಬಂಗಾಳದ ಬಿರ್‍ಭೂಮ್ ಜಿಲ್ಲೆಯ ಲಕ್ಷೀನಾರಾಯಣಪುರದ ನಿವಾಸಿ ಭುವನ್ ಬಡ್ಯಾಕರ್ ಪ್ರತೀ ದಿನ ಕಡಲೆಕಾಯಿ ಮಾರಾಟ ಮಾಡಲು ಸೈಕಲ್‍ನಲ್ಲಿ ಊರಿಂದೂರಿಗೆ ಪ್ರಯಾಣಿಸುತ್ತಾರೆ. ಕಡಲೆಕಾಯಿ ಮಾರಾಟದಿಂದ ಪ್ರತೀ ದಿನ 250 ರೂ. ಸಂಪಾದಿಸುವ ಭುವನ್ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ.

    ಪೇರ್ ಚುರಾ ಹಾಥೇರ್ ಬಾಲಾ ಥಾಕೆ ಜೋಡಿ ಸಿಟಿ ಗೋಲ್ಡ್ ಎರ್ ಚೈನ್ ದಿಯೆ ಜಬೆನ್ ಟೇಟ್ ಶೋಮನ್ ಶೋಮನ್ ಬಾದಾಮ್ ಪಬೆನ್. ಅಂದರೆ ನಿಮ್ಮ ಬಳಿ ಬಳೆ ಅಥವಾ ಸರ ಇದ್ದರೆ ಅವುಗಳನ್ನು ನನಗೆ ನೀಡಬಹುದು. ನಾನು ಅದಕ್ಕೆ ಸಮಾನ ಭಾಗದ ಕಡಲೆಕಾಯಿಯನ್ನು ನಿಮಗೆ ನೀಡುತ್ತೇನೆ ಎಂಬುದು ಈ ಹಾಡಿನ ಅರ್ಥ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

    ಭುವನ್ ಅವರು ಈ ಹಾಡನ್ನು ಹೇಳಿಕೊಂಡು ಕಡಲೆಕಾಯಿ ಮಾರಾಟ ಮಾಡುತ್ತಿದ್ದುದನ್ನು ನಿವಾಸಿಗರು ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋವನ್ನು ಮೊದಲ ಬಾರಿಗೆ 2021ರ ನವೆಂಬರ್‍ನಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ ಕಡಲೆಕಾಯಿ ಮಾರುವವನ ಹಾಡನ್ನು ನೆಟ್ಟಿಗರು ಹಲವು ಮ್ಯೂಸಿಕ್‍ನೊಂದಿಗೆ ರಿಮಿಕ್ಸ್ ಮಾಡಿ ಇನ್‍ಸ್ಟಾಗ್ರಾಮ್‍ನಲ್ಲಿ ಡ್ಯಾನ್ಸ್ ರೀಲ್ಸ್‍ಗಳಿಗೆ ಬಳಸುತ್ತಿದ್ದಾರೆ.

  • ಕಡಲೆಕಾಯಿ ಬೀಜದ ಚಮತ್ಕಾರಗಳು ನಿಮಗೂ ತಿಳಿದಿರಲಿ

    ಕಡಲೆಕಾಯಿ ಬೀಜದ ಚಮತ್ಕಾರಗಳು ನಿಮಗೂ ತಿಳಿದಿರಲಿ

    ವಾಲ್‍ನಟ್ಸ್ ಮತ್ತು ಬಾದಾಮಿಯಂತಹ ವಿವಿಧ ಒಣ ಬೀಜಗಳು ಹೃದಯಕ್ಕೆ ಆರೋಗ್ಯಕರ ಆಹಾರಗಳಾಗಿವೆ. ಇದರೊಟ್ಟಿಗೆ ಕಡಲೆಕಾಯಿಯೂ ಅಷ್ಟೇ ಪರಿಣಾಮಕಾರಿಯಾಗಿದೆ. ನಾವು ಪ್ರತಿನಿತ್ಯ ಸಿಹಿ ಅಥವಾ ಖಾರದ ತಿನಿಸಿನೊಡನೆ ಕಡಲೇಕಾಯಿ ಬೀಜವನ್ನು ಸೇವನೆ ಮಾಡುತ್ತೇವೆ. ಇದರಲ್ಲಿ ಆರೋಗ್ಯಕ್ಕೆ ಅಗತ್ಯವಾದ ಪ್ರೋಟೀನ್, ಆರೋಗ್ಯಕರ ಕೊಬ್ಬು, ಪೋಷಕಾಂಶಗಳು ಹೇರಳವಾಗಿದೆ. ಹೀಗಾಗಿ ನಿಮ್ಮ ಆಹಾರ ಪದ್ದತಿಯಲ್ಲಿ ಕಡಲೆಕಾಯಿಯನ್ನು ಸೆರ್ಪಡೆ ಮಾಡಿಕೊಳ್ಳುವುದರ ಮೂಲಕವಾಗಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದಾಗಿದೆ.

    * ಕಡಲೆಕಾಯಿ ಕೊಲೆಸ್ಟ್ರಾಲ್ ನಿಯಂತ್ರಿಸಿ ಹೃದಯಕ್ಕೆ ರಕ್ಷಾ ಕವಚವಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಮಾಡುವ ಮೂಲಕ ಪಾಶ್ರ್ವವಾಯು ಬಾರದಂತೆ ಆರೋಗ್ಯ ಕಾಪಾಡುತ್ತದೆ. ಇದನ್ನೂ ಓದಿ: USನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತಂದ ಪ್ರಧಾನಿ ಮೋದಿ

    * ಸರಿಯಾದ ಪ್ರಮಾಣದಲ್ಲಿ ಕಡಲೇಕಾಯಿ ಸೇವಿಸುವುದರಿಂದ ಪುರುಷ ಮತ್ತು ಮಹಿಳೆಯರ ಪಿತ್ತಕೋಶದಲ್ಲಿ ಕಲ್ಲುಗಳು ಕಂಡು ಬರುವುದಿಲ್ಲ.

    * ಕಡಲೆಕಾಯಿಯಲ್ಲಿ ಹೆಚ್ಚಿನ ಅಂಶದ ಕ್ಯಾಲೋರಿ ಮತ್ತು ಕೊಬ್ಬು ಕಂಡು ಬಂದರೂ ಅವು ತೂಕ ಹೆಚ್ಚಿಸುವುದಿಲ್ಲ ,ಆರೋಗ್ಯಕರ ಕೊಬ್ಬು ಮತ್ತು ತೂಕ ಕಾಯ್ದುಕೊಳ್ಳುವ ಮೂಲಕ ಬೊಜ್ಜಿನ ದೇಹದ ಅಪಾಯ ತಡೆಯುತ್ತವೆ. ಇದನ್ನೂ ಓದಿ: ಹೂವಿನ ಬೆಲೆ ಕುಸಿತ, ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ರೈತ

    * ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸುವುದಿಲ್ಲ. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಟೈಪ್ 2 ಡಯಾಬಿಟೀಸ್ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುತ್ತವೆ ಸಂಶೋಧನೆಗೆಳು.

    * ವಯಸ್ಸಾದವರಲ್ಲಿ ಗ್ಯಾಸ್ಟ್ರಿಕ್ ಅಲ್ಲದ ಅಡೆನೊಕಾರ್ಸಿನೋಮ ಎನ್ನುವ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

    * ಅತ್ಯಧಿಕ ನಾರಿನಾಂಶವನ್ನು ಒಳಗೊಂಡ ಕಾರಣ ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಊರಿಯೂತವನ್ನು ನಿಯಂತ್ರಣದಲ್ಲಿಡುತ್ತದೆ.

  • ಜೇಬಿನಲ್ಲಿದ್ದ ಕಡಲೆಕಾಯಿಂದ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು – ಮೂವರು ಅಂದರ್

    ಜೇಬಿನಲ್ಲಿದ್ದ ಕಡಲೆಕಾಯಿಂದ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು – ಮೂವರು ಅಂದರ್

    ಬಾಗಲಕೋಟೆ: ಜೇಬಲ್ಲಿ ಸಿಕ್ಕ ಕಡಲೆಕಾಯಿಯ ಸುಳಿವಿನಿಂದಲೇ ಕೊಲೆಗಾರರನ್ನು ಪತ್ತೆ ಹಚ್ಚುವಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಸಂಕ್ರಾಂತಿ ದಿನ ಜನವರಿ 14ರಂದು ಜಮಖಂಡಿ ತಾಲೂಕಿನ ಕುಂಚನೂರು ಪುನರ್ವಸತಿ ಕೇಂದ್ರದಲ್ಲಿ 34 ವರ್ಷದ ತುಕ್ಕಪ್ಪ ರೇವಣ್ಣವರ ಕೊಲೆಯಾಗಿತ್ತು. ಹಗ್ಗದಿಂದ ಕತ್ತು ಬಿಗಿದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಆಸ್ತಿ ವಿಚಾರವಾಗಿ ಚಿಕ್ಕಪ್ಪನಿಂದಲೇ ಕೊಲೆಗೆ ಸುಪಾರಿ ಕೊಡಲಾಗಿತ್ತು ಎಂಬ ಸುದ್ದಿ ತನಿಖೆಯಿಂದ ಹೊರ ಬಿದ್ದಿದೆ. ತುಕ್ಕಪ್ಪನ ಕೊಲೆಗೆ ಆತನ ಚಿಕ್ಕಪ್ಪನಾದ ಕರೆಪ್ಪ ರೇವಣ್ಣವರ ಸುಪಾರಿ ನೀಡಿದ್ದಾಗಿ ತನಿಖೆಯಿಂದ ಬಯಲಾಗಿದೆ.

    ಧರ್ಮಣ್ಣ ಗುಡದಾರ ಹಾಗೂ ವಿಠ್ಠಲ ಬಬಲೇಶ್ವರ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ. ಕೊಲೆ ಮಾಡುವ ಮೊದಲು ಕೊಲೆಗಾರರು ಹಾಗೂ ಕೊಲೆಯಾದ ವ್ಯಕ್ತಿ ಬಾರ್ ನಲ್ಲಿ ಮದ್ಯ ಸೇವನೆ ಮಾಡಿದ್ದರು. ಈ ವೇಳೆ ಬಾರ್ ನಲ್ಲಿ ನೆನೆಸಿಟ್ಟ ಕಡಲೆಗಳನ್ನು ಸ್ನ್ಯಾಕ್ಸ್ ರೀತಿಯಲ್ಲಿ ಕೊಡಲಾಗಿತ್ತು. ಶವ ಪರಿಶೀಲನೆ ವೇಳೆ ಮೃತ ವ್ಯಕ್ತಿಯ ಜೇಬಿನಲ್ಲಿ ಕಡಲೆಕಾಳು ಪತ್ತೆಯಾಗಿದ್ದವು. ಬಳಿಕ ಕಡಲೆಕಾಳು ಸ್ನ್ಯಾಕ್ಸ್ ರೀತಿ ಕೊಡುವ ಎಲ್ಲಾ ಬಾರ್ ಗಳನ್ನು ಪೊಲೀಸರು ತಡಕಾಡಿದ್ದರು. ಕೊನೆಗೆ ಜಮಖಂಡಿ ಬಾಲಾಜಿ ಬಾರ್ ನ ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಪ್ರಕರಣ ಬೇಧಿಸಲು ಸಹಕಾರಿಯಾಗಿದೆ.

    ಕೊಲೆಗೆ ಸುಪಾರಿ ಕೊಟ್ಟ ಮೃತ ತುಕ್ಕಪ್ಪನ ಚಿಕ್ಕಪ್ಪನಾದ ಕರೆಪ್ಪ ಹಾಗೂ ಕೊಲೆ ಮಾಡಿ ಧರ್ಮಣ್ಣ ಗುಡದಾರ, ವಿಠ್ಠಲ ಬಬಲೇಶ್ವರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಕೂಡ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಮುಂಡಗನೂರು ಗ್ರಾಮದವರು ಎಂದು ತಿಳಿದು ಬಂದಿದೆ.