Tag: ಕಟ್

  • ಉದ್ಘಾಟನೆಗೆ ಸಿದ್ಧಗೊಂಡಿದ್ದ ಕುಡಿಯುವ ನೀರಿನ ಪೈಪ್ ಕತ್ತರಿಸಿದ ಕಿಡಿಗೇಡಿಗಳು!

    ಉದ್ಘಾಟನೆಗೆ ಸಿದ್ಧಗೊಂಡಿದ್ದ ಕುಡಿಯುವ ನೀರಿನ ಪೈಪ್ ಕತ್ತರಿಸಿದ ಕಿಡಿಗೇಡಿಗಳು!

    ಮಂಡ್ಯ: ಉದ್ಘಾಟನೆಗೆ ಸಿದ್ಧಗೊಂಡಿದ್ದ ಕುಡಿಯುವ ನೀರು ಟ್ಯಾಂಕಿನ ಪೈಪನ್ನು ಕಿಡಿಗೇಡಿಗಳು ಕತ್ತರಿಸಿದ್ದಾರೆ.

    ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ 1ನೇ ವಾರ್ಡಿನಲ್ಲಿ ಕುಡಿಯುವ ನೀರು ಟ್ಯಾಂಕಿನ ಪೈಪ್ ಕೊಯ್ದಿದ್ದಾರೆ. ಇದರಿಂದ ರಾತ್ರಿಯಿಡಿ ಟ್ಯಾಂಕ್ ಸುತ್ತಮುತ್ತ ನೀರು ತುಂಬಿ ತುಳುಕುವ ಮೂಲಕ ನೀರು ಪೋಲಾಗಿದೆ.

    ದೊಡ್ಡ ಟ್ಯಾಂಕ್ ನಿರ್ಮಿಸಿ ಮನೆ ಮನೆ ಬಾಗಿಲಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದ್ರೆ ಮನೆಗಳಿಗೆ ಕುಡಿಯುವ ನೀರು ಸರಬರಾಜು ಆಗದಂತೆ ಇದೀಗ ಕಿಡಿಗೇಡಿಗಳು ಈ ಟ್ಯಾಂಕಿನ ಪೈಪ್ ಕತ್ತರಿಸಿದ್ದಾರೆ.

    ಉದ್ಘಾಟನೆಗೆ ಸಿದ್ಧವಾಗಿದ್ದ ನೀರಿನ ಟ್ಯಾಂಕ್ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಉದ್ಘಾಟನೆಯಾಗಿರಲಿಲ್ಲ. ಪುರಸಭೆ ಅಧಿಕಾರಿಗಳು ಕುಡಿಯುವ ನೀರಿಗಾಗಿ ಸ್ಥಳೀಯರ ಮನವಿ ಮೇರೆಗೆ ಮಾನವೀಯತೆ ದೃಷ್ಟಿಯಿಂದ ನೀರು ಸರಬರಾಜು ಮಾಡುತ್ತಿದ್ದರು. ಆದ್ರೆ ಇದೀಗ ರಾಜಕೀಯ ವೈಷಮ್ಯದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆಂದು ಶಾಸಕ ಸುರೇಶ್‍ಗೌಡ ಬೆಂಬಲಿಗರು ಆರೋಪಿಸುತ್ತಿದ್ದಾರೆ.

  • 3 ತಿಂಗಳ ಹಸುಗೂಸಿನ ಬೆರಳು ಕಟ್ ಮಾಡಿದ ಪಾಪಿ ವೈದ್ಯ

    3 ತಿಂಗಳ ಹಸುಗೂಸಿನ ಬೆರಳು ಕಟ್ ಮಾಡಿದ ಪಾಪಿ ವೈದ್ಯ

    ಬೆಳಗಾವಿ(ಚಿಕ್ಕೋಡಿ): ಪಾಪಿ ವೈದ್ಯನೊಬ್ಬ ಮೂರು ತಿಂಗಳ ಹಸುಗೂಸಿನ ಬೆರಳು ಕಟ್ ಮಾಡಿದ ಘಟನೆ ಬೆಳಗಾವಿ ನಗರದ ಕಿರ್ಲೊಸ್ಕರ್ ರಸ್ತೆಯಲ್ಲಿರುವ ಬೆಳಗಾವಿ ಚಿಲ್ಡ್ರನ್ ಆಸ್ಪತ್ರೆಯಲ್ಲಿ ನಡೆದಿದೆ.

    ಬಾಬಣ್ಣ ಹುಕ್ಕೇರಿ ಎಂಬ ವೈದ್ಯ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಉಮೇಶ್ ಎಂಬವರ ಪುಟ್ಟ ಕಂದಮ್ಮನ ಬೆರಳನ್ನೇ ಕಟ್ ಮಾಡಿದ್ದಾನೆ.

    ಕಂದಮ್ಮ ಜ್ವರದಿಂದ ಬಳಲುತ್ತಿದ್ದ ವೇಳೆ ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಗ ವೈದ್ಯ ಬಾಬಣ್ಣ ಹುಕ್ಕೇರಿ ಸಲಾಯಿನ್ ಹಾಕಿದ್ದ ಬ್ಯಾಂಡೇಜ್ ತೆಗೆಯುವಾಗ ಮಗುವಿನ ಬೆರಳು ಕಟ್ ಮಾಡಿದ್ದಾನೆ. ಬಳಿಕ ತುಂಡಾದ ಬೆರಳು ಜೋಡಿಸಲು ಹರಸಾಹಸ ಪಟ್ಟಿದ್ದಾನೆ.

    ಈ ಬಗ್ಗೆ ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೈದ್ಯ ಬಾಬಣ್ಣ ಹುಕ್ಕೇರಿ, ನರ್ಸ್ ಅಶ್ವಿನಿ ವಿರುದ್ಧ ಕೇಸ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಯುವಕನ ಮರ್ಮಾಂಗ ಕತ್ತರಿಸಿದ ಮಹಿಳೆ ಪ್ರಕರಣಕ್ಕೆ ಟ್ವಿಸ್ಟ್

    ಯುವಕನ ಮರ್ಮಾಂಗ ಕತ್ತರಿಸಿದ ಮಹಿಳೆ ಪ್ರಕರಣಕ್ಕೆ ಟ್ವಿಸ್ಟ್

    ಭುವನೇಶ್ವರ್: ಒಡಿಶಾದ ಕೆಯೊಂಜ್ಹಾರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಯುವಕನ ಮರ್ಮಾಂಗ ಕತ್ತರಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ.

    ಯುವಕನ ಮರ್ಮಾಂಗ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಡೌಗಾನ್ ಗ್ರಾಮದ 24 ವರ್ಷದ ಕಮಲ ಪತ್ರ ಎಂಬ ಮಹಿಳೆಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಂಡಿದ್ದೇವು. ಅಲ್ಲದೇ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಘಟನೆಗೆ ಅಕ್ರಮ ಸಂಬಂಧವೇ ಕಾರಣ ಎಂದು ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಜೇಮ್ಸ್ ಟೊಪ್ಪೊ ಮಾಹಿತಿ ನೀಡಿದ್ದಾರೆ.

    ಏನಿದು ಘಟನೆ?
    24 ವರ್ಷದ ರಾಜೇಂದ್ರ ನಾಯಕ್ ಜರಾಬೆದ ಗ್ರಾಮದ ನಿವಾಸಿ. ಅಲ್ಲದೇ ಬಡೌಗಾನ್ ಗ್ರಾಮದ ಕಮಲ ಪತ್ರ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ರಾಜೇಂದ್ರ ಚೆನ್ನೈ ಮೂಲದ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಅಲ್ಲದೇ ಅಲ್ಲಿಯೂ ಸಹ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಊರಿಗೆ ಬಂದಾಗಲೆಲ್ಲಾ ಕಮಲಾಳ ಮನೆಗೆ ಭೇಟಿ ನೀಡುತ್ತಿದ್ದ.

    ಕಳೆದ ಮಂಗಳವಾರ ಮತ್ತು ಬುಧವಾರವೂ ಕಮಲಾಳ ಮನೆಗೆ ತೆರಳಿದ್ದ. ಈ ವೇಳೆ ಚೆನ್ನೈ ಮಹಿಳೆಯೊಂದಿಗೆ ಮಾತನಾಡುತ್ತಿರುವಾಗ ಕಮಲಾ ಕೈಗೆ ಸಿಕ್ಕಿಬಿದ್ದಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಕಮಲ ಮನೆಯಲ್ಲಿ ಮಲಗಿದ್ದ ರಾಜೇಂದ್ರನ ಮರ್ಮಾಂಗವನ್ನು ಕತ್ತರಿಸಿ ಸೇಡು ತೀರಿಸಿಕೊಂಡಿದ್ದಳು.

    ಗಂಭೀರವಾಗಿ ಗಾಯಗೊಂಡಿದ್ದ ರಾಜೇಂದ್ರನನ್ನು ಮೊದಲು ಹರಿಚಂದಾಪುರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ನಂತರ ಕೆಯೊಂಜ್ಹಾರ್ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಆದರೆ  ಹೆಚ್ಚಿನ ಚಿಕಿತ್ಸೆಗಾಗಿ ಕಟಕ್‍ನ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ಯುವಕನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಯುವಕನ ಮರ್ಮಾಂಗವನ್ನೇ ಕತ್ತರಿಸಿ ಬಿಟ್ಳು ಆಂಟಿ!

    ಯುವಕನ ಮರ್ಮಾಂಗವನ್ನೇ ಕತ್ತರಿಸಿ ಬಿಟ್ಳು ಆಂಟಿ!

    ಭುವನೇಶ್ವರ್: ಮಹಿಳೆಯೊಬ್ಬಳು ಯುವಕನ ಮರ್ಮಾಂಗವನ್ನು ಕತ್ತರಿಸಿದ ಅಮಾನವೀಯ ಘಟನೆಯೊಂದು ಒಡಿಶಾದ ಕೆಯೊಂಜ್ಹಾರ ಜಿಲ್ಲೆಯ ಹರಿಚಂದನ್ ಪುರ್ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಕಳೆದ ರಾತ್ರಿ ನಡೆದಿದ್ದು, ಯುವಕನನ್ನು ರಾಜೇಂದ್ರ ನಾಯಕ್ ಎಂದು ಗುರುತಿಸಲಾಗಿದೆ. ಈತ ಜರಬಿದಾ ಗ್ರಾಮದ ಘತಗಾನ್ ಪ್ರದೇಶದ ನಿವಾಸಿಯಾಗಿದ್ದಾನೆ.

    ಏನಿದು ಘಟನೆ?:
    ಯುವಕ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರ ಸಂಜೆ ವಾಪಸ್ಸಾಗಿದ್ದಾನೆ. ಇನ್ನೇನೋ ಸ್ವಲ್ಪ ಹೊತ್ತಿನಲ್ಲೇ ರಾತ್ರಿಯಾಗುತ್ತೆ ಅಂತ ಯುವಕ, ಹರಿಚಂದನ್ ಪುರದಲ್ಲಿರೋ ಮಹಿಳೆಯ ಮನೆಯಲ್ಲಿ ತಂಗಿದ್ದಾನೆ. ಮರುದಿನ ಬೆಳಗ್ಗೆ ಆತ ತನ್ನ ಮನೆಗೆ ಅಲ್ಲಿಂದ ತೆರಳುವವನಿದ್ದನು.

    ರಾತ್ರಿ ಮಹಿಳೆ ತನಗೆ ಒತ್ತಾಯಪೂರ್ವಕವಾಗಿ ಮದ್ಯಪಾನ ಮಾಡಿಸಿದ್ದಾಳೆ. ಅತಿಯಾಗಿ ಮದ್ಯ ಸೇವಿಸಿದ್ದರಿಂದ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದೆನು. ಇದನ್ನೇ ಸದುಪಯೋಗಪಡಿಸಿಕೊಂಡ ಮಹಿಳೆ ಮರ್ಮಾಂಗವನ್ನು ಕಟ್ ಮಾಡಿದ್ದಾಳೆ ಅಂತ ಯುವಕ ಆರೋಪಿಸಿದ್ದಾನೆ.

    ನಾವಿಬ್ಬರು ಫೋನ್ ನಲ್ಲಿ ಮಾತನಾಡುತ್ತಿದ್ದೆವು. ಆದ್ರೆ ನಾನು ಬೇರೆಯವರ ಜೊತೆ ಮಾತನಾಡುತ್ತಿದ್ದಾಗ ಆಕೆ ಅದನ್ನು ಖಂಡಿಸಿದ್ದಳು. ಈ ವಿಚಾರಕ್ಕಾಗಿ ಇಬ್ಬರ ಮಧ್ಯೆ ಜಗಳ ನಡೆದಿದೆ. ನೀನು ನನ್ನ ಜೊತೆ ಮಾತ್ರ ಮಾತಾಡಬೇಕು, ನನ್ನ ಮನೆಗೆ ಬಂದು ಬೇರೆಯವರ ಜೊತೆ ಮಾತನಾಬೇಡ ಅಂತ ತಗಾದೆ ತೆಗೆದಿದ್ದಳು. ಇದೇ ವಿಚಾರದಿಂದ ಸಿಟ್ಟುಗೊಂಡ ಆಕೆ ಈ ಕೃತ್ಯ ಎಸಗಿದ್ದಾಳೆ ಅಂತ ಸಂತ್ರಸ್ತ ಯುವಕ ತಿಳಿಸಿದ್ದಾನೆ.

    ಸದ್ಯ ಯುವಕ ಹರಿಚಂದನ್ ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ ಅಂತ ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews