Tag: ಕಟೀಲು ಶ್ರೀದುರ್ಗಾಪರಮೇಶ್ವರಿ

  • ಕುಟುಂಬ ಸಮೇತ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

    ಕುಟುಂಬ ಸಮೇತ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

    ಬಾಲಿವುಡ್ (Bollywood) ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ತುಳುನಾಡಿನ ಕಟೀಲು ದುರ್ಗಾಪರಮೇಶ್ವರಿ (Kateel Durgaparameshwari Temple) ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಶಿಲ್ಪಾ ಶೆಟ್ಟಿ ಅವರು ಮೂಲತಃ ಮಂಗಳೂರಿನವರು, ಮುಂಬೈನಲ್ಲಿ ಸೆಟಲ್ ಆಗಿದ್ದರು ಕೂಡ ಇಂದಿಗೂ ದೈವ ಕೋಲ, ಇನ್ನಿತರ ಪೂಜೆ ಕಾರ್ಯಕ್ರಮಗಳಿಗೆ ಆಗಾಗ ಕುಟುಂಬ ಸಮೇತ ಮಂಗಳೂರಿಗೆ ಭೇಟಿ ನೀಡುತ್ತಾರೆ. ಅದರಂತೆಯೇ ಇದೀಗ ಶಿಲ್ಪಾ ಶೆಟ್ಟಿ ಕುಟುಂಬ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿಲ್ಪಾ ಜೊತೆ ಪತಿ ರಾಜ್‌ ಕುಂದ್ರಾ, ಶಮಿತಾ ಶೆಟ್ಟಿ, ಸುನಂದಾ ಶೆಟ್ಟಿ ಭಾಗಿಯಾಗಿದ್ದರು.  ದೇವಳದ ವತಿಯಿಂದ ಶಿಲ್ಪಾ ಶೆಟ್ಟಿಗೆ ದೇವರ ವಸ್ತ್ರ ಪ್ರಸಾದ ನೀಡಿ ಅಶೀರ್ವಾದ ಮಾಡಲಾಯಿತು. ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಯಶ್ ವೀಡಿಯೋ ವೈರಲ್

    ಕನ್ನಡದ ‘ಕೆಡಿ’ ಸಿನಿಮಾ ಮೂಲಕ 17 ವರ್ಷಗಳ ನಂತರ ಮತ್ತೆ ನಟಿ ಶಿಲ್ಪಾ ಶೆಟ್ಟಿ ಸ್ಯಾಂಡಲ್‌ವುಡ್ ಕಂಬ್ಯಾಕ್ ಆಗಿದ್ದಾರೆ. ಡೈರೆಕ್ಟರ್ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಪ್ರಮುಖ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ.

  • ಕಟೀಲು ಶ್ರೀದುರ್ಗಾಪರಮೇಶ್ವರಿಯ ದರ್ಶನ ಪಡೆದ ರಾಕಿಂಗ್ ಸ್ಟಾರ್

    ಕಟೀಲು ಶ್ರೀದುರ್ಗಾಪರಮೇಶ್ವರಿಯ ದರ್ಶನ ಪಡೆದ ರಾಕಿಂಗ್ ಸ್ಟಾರ್

    ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಚಂದನವನದ ನಟ ರಾಕಿಂಗ್ ಸ್ಟಾರ್ ಯಶ್ ಭೇಟಿ ನೀಡಿದರು.

    ‘ಕೆಜಿಎಫ್-2’ ರಿಲೀಸ್‍ಗೂ ಮುನ್ನ ದೇಗುಲಗಳ ದರ್ಶನ ಮಾಡುತ್ತಿರುವ ಯಶ್ ಇಂದು ದುರ್ಗಾಪರಮೇಶ್ವರಿ ತಾಯಿಯ ದರ್ಶನ ಪಡೆದರು. ಈ ವೇಳೆ ದೇವಸ್ಥಾನದ ವತಿಯಿಂದ ಯಶ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ದುರ್ಗಾಪರಮೇಶ್ವರಿಯ ಸನ್ನಿಧಿಯ ಮುಂದೆ ಕೆಲ ಹೊತ್ತು ಧ್ಯಾನದಲ್ಲಿ ಮಗ್ನರಾಗಿದ್ದ ಯಶ್ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು.

    ಯಶ್ ಅವರನ್ನು ಕಂಡು ಅಭಿಮಾನಿಗಳು ಸಹ ಖುಷಿಪಟ್ಟರು. ಅಲ್ಲದೆ ಇಂದು ಯಶ್ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿಕೊಟ್ಟು ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿದ್ದರು. ಈ ವೇಳೆ ನಿರ್ಮಾಪಕ ವಿಜಯ್ ಕಿರಂಗದೂರು ಸಹ ಇದ್ದು, ಕೃಷ್ಣನ ದರ್ಶನ ಪಡೆದುಕೊಂಡಿದ್ದರು. ದೇವರದರ್ಶನ ಮಾಡಿ ರಥಬೀದಿಯಲ್ಲಿ ವಾಪಸಾಗುತ್ತಿದ್ದಂತೆ ಅಭಿಮಾನಿಗಳು ಫೋಟೋಗಳನ್ನು ತೆಗೆಸಿಕೊಂಡು ವಿಶ್ ಮಾಡಿದ್ರು. ಇದನ್ನೂ ಓದಿ: ನಟ ಯಶ್ ಕೃಷ್ಣಮಠಕ್ಕೆ ಭೇಟಿ – ಕನಕ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ

    ಈ ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಕುಂಭಾಶಿ ವಿನಾಯಕ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದರು.

  • ಭಕ್ತರ ಅಂಗೈಯಲ್ಲಿ ಕಟೀಲು ದುರ್ಗೆ – ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಅಮ್ಮನ ದರ್ಶನ

    ಭಕ್ತರ ಅಂಗೈಯಲ್ಲಿ ಕಟೀಲು ದುರ್ಗೆ – ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಅಮ್ಮನ ದರ್ಶನ

    ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮ, ಕರಾವಳಿ ಮಾತ್ರವಲ್ಲದೇ ದೇಶ ವಿದೇಶದಲ್ಲೂ ಲಕ್ಷಾಂತರ ಸಂಖ್ಯೆಯ ಭಕ್ತರನ್ನು ಹೊಂದಿರುವ ಶಕ್ತಿ ದೇವತೆ.

    ದುಷ್ಟ ಅರುಣಾಸುರನನ್ನು ಸಂಹಾರಗೈದು ಕಟೀಲಿನಲ್ಲಿ ನೆಲೆನಿಂತ ಭ್ರಮರಾಂಬಿಕೆಯ ದರ್ಶನ ಪಡೆಯುವುದಕ್ಕೆ ದಿನ ನಿತ್ಯ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಆದರೆ ಲಾಕ್‍ಡೌನ್‍ನಿಂದ ಸದ್ಯ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶ ಇಲ್ಲ. ಹೀಗಾಗಿ ಭಕ್ತರು ಮನೆಯಲ್ಲೇ ತಾಯಿಯ ದರ್ಶನ ಪಡೆಯುವಂತಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಎರಡು ದುರ್ಗಾಪರಮೇಶ್ವರಿಯ ಫೋಟೋ ಹಾಕಲಾಗುತ್ತಿದೆ.

    ದೇವಿಗೆ ದಿನನಿತ್ಯ ಪೂಜೆ ಸಲ್ಲಿಸುವ ಅರ್ಚಕರು, ಭಕ್ತರು ಮನೆಯಲ್ಲಿ ಕುಳಿತು ತಮ್ಮ ಅಂಗೈಯಲ್ಲೇ ದರ್ಶನ ಪಡೆಯಲಿ ಎನ್ನುವ ಉದ್ದೇಶದಿಂದ ಬೆಳಗ್ಗೆ ಹಾಗೂ ಸಂಜೆ ಪೂಜೆ ಬಳಿಕ ಅಲಂಕೃತ ದೇವಿಯ ಫೋಟೋ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚುಕೊಳ್ಳುತ್ತಿದ್ದಾರೆ. ಇದನ್ನು ಸಹಸ್ರಾರು ಭಕ್ತರು ವೀಕ್ಷಿಸಿ ತಾವು ಶೇರ್ ಮಾಡುತ್ತಿದ್ದಾರೆ.

    ಅಲ್ಲದೇ ವಾಟ್ಸಪ್ ಸ್ಟೇಟಸ್‍ನಲ್ಲೂ ಕಟೀಲು ತಾಯಿ ಫೋಟೋ ಹಾಕುತ್ತಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿಯ ಈ ಹೊಸ ಪ್ರಯತ್ನ ಭಕ್ತರಿಗೂ ಖುಷಿ ಕೊಟ್ಟಿದೆ.