Tag: ಕಚ್ಚಾ ಬದಾಮ್

  • ಕಾರ್ ಅಪಘಾತದ ಬಗ್ಗೆ ಹೊಸ ಹಾಡು ರಚಿಸಿದ ಕಚ್ಚಾ ಬಾದಮ್ ಗಾಯಕ ಭುಬನ್

    ಕಾರ್ ಅಪಘಾತದ ಬಗ್ಗೆ ಹೊಸ ಹಾಡು ರಚಿಸಿದ ಕಚ್ಚಾ ಬಾದಮ್ ಗಾಯಕ ಭುಬನ್

    ಕೋಲ್ಕತ್ತಾ: ತನ್ನ ಕಾರು ಅಪಘಾತಕ್ಕೀಡಾದ ಬಗ್ಗೆಯೇ ಕಚ್ಚಾ ಬಾದಮ್ ಗಾಯಕ ಭುಬನ್ ಬದ್ಯಾಕರ್ ಅವರು ಹೊಸ ಹಾಡು ರಚಿಸಿದ್ದಾರೆ. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಭುವನ್ ಅವರು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದ್ದರು. ಡ್ರೈವಿಂಗ್ ಕಲಿಯುವಾಗ ದುರಾದೃಷ್ಟವಶಾತ್ ಗೋಡೆಗೆ ಡಿಕ್ಕಿ ಹೊಡೆದು ಅಪಘಾತವಾಗಿದ್ದು, ಈ ವೇಳೆ ಅವರು ಅಪಘಾತದಿಂದ ಪಾರಾಗಿದ್ದರು. ಈ ಅಪಘಾದ ಕುರಿತಾಗಿ ಭುಬನ್ ಬದ್ಯಾಕರ್ ಅವರು ತಮ್ಮ  ಕ್ರಿಯಾಶೀಲತೆ ಮೂಲಕವಾಗಿ ದೇವರು ಹೇಗೆ ಅವರನ್ನು ರಕ್ಷಿಸಿದ ಎನ್ನುವ ಕುರಿತಾಗಿ ಹಾಡಿದ್ದಾರೆ.

    ಕಡಲೆ ಕಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಭುಬನ್ ಅವರು ಕಚ್ಚಾ ಬದಾಮ್ ಹಾಡು ಹಾಡಿ ರಾತ್ರಿ ಬೆಳಗಾವುದೊರಳಗೆ ಭಾರೀ ಫೇಮಸ್ ಆಗಿದ್ದರು. ಇವರ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ ಅನೇಕ ಮಂದಿ ರೀಲ್ಸ್ ಕೂಡ ಮಾಡುತ್ತಿದ್ದಾರೆ. ಹಳೆಯ ಚೈನ್, ಮೊಬೈಲ್‍ಗಳನ್ನು ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಭುಬನ್ ಕಡಲೆಕಾಯಿ ನೀಡುತ್ತಿದ್ದರು. ಹಾಡಿನ ಸಾಹಿತ್ಯ ಕೂಡ ಅದೇ ಅರ್ಥವನ್ನು ನೀಡಿತ್ತು. ತಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದಕ್ಕೆ ಖುಷಿ ಇದೆ ಎಂದಿದ್ದಾರೆ. ಅಲ್ಲದೆ ಆ ಬಳಿಕ ಅವರಿಗೆ ಸಿನಿಮಾ ಹಾಡುಗಳನ್ನು ಹಾಡುವ ಅವಕಾಶವು ದೊರೆಯಿತು. ಇದನ್ನೂ ಓದಿ: ಅವಧಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ ಬರುವ ಸಾಧ್ಯತೆ: ಹೆಚ್‍ಡಿಕೆ

    ಇತ್ತೀಚೆಗೆ ಭುಬನ್ ಅವರು ಕೋಲ್ಕತ್ತಾದ ಪಬ್‍ನಲ್ಲಿ ಹಾಡು ಹಾಡಲು ತೆರಳಿದ್ದರು. ರಾಕ್ ಸ್ಟಾರ್‍ನಂತೆ ಡ್ರೆಸ್ಸಿಂಗ್ ಮಾಡುವ ಮೂಲಕ ನ್ಯೂ ಲುಕ್‍ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು. ಇತ್ತೀಚೆಗೆ ಪಶ್ಚಿಮ ಬಂಗಾಳದ ಪೊಲೀಸರು ಕೂಡ ಭುಬನ್ ಅವರನ್ನು ಸನ್ಮಾನ ಮಾಡಿದ್ದರು.