Tag: ಕಚ್ಚಾ ತೈಲ

  • ಪಾಕಿಸ್ತಾನಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಕೊಡಲ್ಲ – ರಷ್ಯಾ

    ಪಾಕಿಸ್ತಾನಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಕೊಡಲ್ಲ – ರಷ್ಯಾ

    ಇಸ್ಲಾಮಾಬಾದ್‌: ಪಾಕಿಸ್ತಾನಕ್ಕೆ (Pakistan) ಶೇ.30-40 ರಷ್ಟು ರಿಯಾಯಿತಿ ದರದಲ್ಲಿ ಕಚ್ಚಾ ತೈಲ (Crude Oil) ನೀಡಲು ರಷ್ಯಾ (Russia) ನಿರಾಕರಿಸಿದೆ ಎಂದು ದಿ ನ್ಯೂಸ್‌ ಇಂಟರ್‌ನ್ಯಾಷನಲ್‌ ವರದಿ ಮಾಡಿದೆ.

    ಮಾಸ್ಕೋದಲ್ಲಿ ನಡೆದ ಮಾತುಕತೆಯ ವೇಳೆ ಪಾಕಿಸ್ತಾನದ ನಿಯೋಗವು ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಮಾಡುವಂತೆ ಕೋರಿತ್ತು. ಆದರೆ ಪಾಕ್‌ ಕೋರಿಕೆಯನ್ನು ರಷ್ಯಾ ನಿರಾಕರಿಸಿದೆ. ಪಾಕಿಸ್ತಾನದ ಪೆಟ್ರೋಲಿಯಂ ರಾಜ್ಯ ಸಚಿವ ಮುಸಾದಿಕ್ ಮಲಿಕ್ ಮತ್ತು ಮಾಸ್ಕೋದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು ರಷ್ಯಾದೊಂದಿಗೆ ಮಾತುಕತೆ ನಡೆಸಿದ್ದರು. ಇದನ್ನೂ ಓದಿ: ಅಫ್ಘಾನಿಸ್ತಾನದ ಮದರಸಾದಲ್ಲಿ ಬಾಂಬ್ ಸ್ಫೋಟ – 19 ಸಾವು, 24 ಮಂದಿಗೆ ಗಾಯ

    ಇದೀಗ ಏನನ್ನೂ ನೀಡಲು ಸಾಧ್ಯವಿಲ್ಲ ಎಂದು ರಷ್ಯಾ ಹೇಳುವುದರೊಂದಿಗೆ ಮಾತುಕತೆ ಕೊನೆಗೊಂಡಿದೆ. ಪಾಕಿಸ್ತಾನದ ಬೇಡಿಕೆಯನ್ನು ಪರಿಗಣಿಸಲಾಗುವುದು. ರಾಜತಾಂತ್ರಿಕ ಮಾರ್ಗಗಳ ಮೂಲಕ ಏನು ಮಾಡಬಹುದೆಂದು ಆಲೋಚಿಸಿ ತಿಳಿಸಲಾಗುವುದು ಎಂದು ಪಾಕಿಸ್ತಾನಕ್ಕೆ ಭರವಸೆ ನೀಡಿದೆ.

    PAK

    ಪಾಕಿಸ್ತಾನದ ಅಧಿಕೃತ ನಿಯೋಗವು ನವೆಂಬರ್ 29 ರಂದು ಮಾಸ್ಕೋಗೆ ಭೇಟಿ ನೀಡಿ ರಷ್ಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತ್ತು. ಈ ವೇಳೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಸಾಧ್ಯತೆ, ಪಾವತಿ ವಿಧಾನ ಮತ್ತು ಸಾಗಣೆ ವೆಚ್ಚದ ಬಗ್ಗೆ ಚರ್ಚಿಸಿತ್ತು. ಇದನ್ನೂ ಓದಿ: ಯುದ್ಧದಲ್ಲಿ ಐಸಿಸ್ ನಾಯಕ ಖುರಾಶಿ ಸಾವು

    ನವೆಂಬರ್ 13 ರಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್, ರಷ್ಯಾದ ತೈಲ ಖರೀದಿಸುವುದನ್ನು ಅಮೆರಿಕ ತಡೆಯಲು ಸಾಧ್ಯವಿಲ್ಲ. ತೈಲ ಖರೀದಿಗೆ ಚಿಂತನೆ ನಡೆದಿದ್ದು, ಶೀಘ್ರವೇ ಆ ಕಾರ್ಯ ಮಾಡುತ್ತೇವೆ ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ರಷ್ಯಾ ಈಗ ಭಾರತದ ಅತಿ ದೊಡ್ಡ ತೈಲ ಪೂರೈಕೆದಾರ ದೇಶ

    ರಷ್ಯಾ ಈಗ ಭಾರತದ ಅತಿ ದೊಡ್ಡ ತೈಲ ಪೂರೈಕೆದಾರ ದೇಶ

    ನವದೆಹಲಿ: ರಷ್ಯಾ(Russia) ಈಗ ಭಾರತದ(India) ಅತಿ ದೊಡ್ಡ ಕಚ್ಚಾ ತೈಲ(Crude Oil) ಪೂರೈಕೆದಾರ ದೇಶವಾಗಿ ಹೊರಹೊಮ್ಮಿದೆ.

    ಅಕ್ಟೋಬರ್‌ನಲ್ಲಿ ಭಾರತಕ್ಕೆ ಪ್ರತಿದಿನ 9,46,000 ಬ್ಯಾರೆಲ್‌ ತೈಲವನ್ನು ರಷ್ಯಾ ರಫ್ತು ಮಾಡಿದೆ. ಸೆಪ್ಟೆಂಬರ್‌ನಲ್ಲಿ ಪ್ರತಿ ದಿನ ರಷ್ಯಾ 8,76,000 ಬ್ಯಾರೆಲ್‌ ತೈಲವನ್ನು ರಫ್ತು ಮಾಡಿತ್ತು

    ಭಾರತದ ಒಟ್ಟು ಕಚ್ಚಾ ತೈಲ ಆಮದು ಪ್ರಮಾಣದಲ್ಲಿ ರಷ್ಯಾ ಶೇ.22, ಇರಾಕ್‌ ಶೇ.20.5, ಸೌದಿ ಅರೇಬಿಯಾ ಶೇ.16 ರಷ್ಟು ಪಾಲನ್ನು ಹೊಂದಿದೆ. ಈ ಮೂಲಕ ಮೊದಲ ಬಾರಿಗೆ ರಷ್ಯಾ ಪ್ರಥಮ  ಸ್ಥಾನವನ್ನು ಪಡೆದಿದೆ. ಸೆಪ್ಟೆಂಬರ್‌ಗೆ ಹೋಲಿಸಿದರೆ ರಷ್ಯಾದಿಂದ ಆಮದಾಗುವ ರಫ್ತು ಪ್ರಮಾಣ ಶೇ.5 ರಷ್ಟು ಹೆಚ್ಚಳವಾಗಿದೆ. ಇದನ್ನೂ ಓದಿ: ರಷ್ಯಾದಿಂದ ಡಿಸ್ಕೌಂಟ್‌ ಬೆಲೆಯಲ್ಲಿ ತೈಲ – 35 ಸಾವಿರ ಕೋಟಿ ಗಳಿಸಿದ ಭಾರತ

    ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾದಿಂದ ಭಾರತಕ್ಕೆ 7,06,000 ಬಿಪಿಡಿ(ಬ್ಯಾರೆಲ್‌ ಪರ್‌ ಡೇ) ಕಚ್ಚಾ ತೈಲ ರಫ್ತು ಆಗಿದ್ದರೆ ಸೆಪ್ಟೆಂಬರ್‌ನಲ್ಲಿ 8,07,000 ಬಿಪಿಡಿ ರಫ್ತು ಆಗಿತ್ತು. ಉಕ್ರೇನ್‌ ಯುದ್ಧದ ಬಳಿಕ ಭಾರತ ಅಲ್ಲದೇ ಚೀನಾ, ಟರ್ಕಿ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದಿಂದ  ತೈಲವನ್ನು ಆಮದು ಮಾಡುತ್ತಿವೆ.

    ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್(Jaishankar) ಅವರು, ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಸಮರ್ಥಿಸಿಕೊಂಡು ಇದೊಂದು ʼಬೆಸ್ಟ್‌ ಡೀಲ್‌ʼ ಎಂದು ಬಣ್ಣಿಸಿದ್ದರು. ಬೆಲೆಗಳು ದುಬಾರಿಯಾಗಿರುವ ಸಮಯದಲ್ಲಿ ಪ್ರತಿಯೊಂದು ದೇಶವೂ ತನ್ನ ಪ್ರಜೆಗಳಿಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಲು ಪ್ರಯತ್ನ ಮಾಡುತ್ತದೆ. ಈಗ ಅದನ್ನೇ ನಾವು ಮಾಡುತ್ತಿದ್ದೇವೆ ಎಂದು ಜೈಶಂಕರ್ ಸಮರ್ಥಿಸಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಪೆಟ್ರೋಲ್‌, ಡೀಸೆಲ್‌ ದರ 40 ಪೈಸೆ ಇಳಿಕೆ – 7 ತಿಂಗಳ ಬಳಿಕ ದರ ಕಡಿತ

    ಪೆಟ್ರೋಲ್‌, ಡೀಸೆಲ್‌ ದರ 40 ಪೈಸೆ ಇಳಿಕೆ – 7 ತಿಂಗಳ ಬಳಿಕ ದರ ಕಡಿತ

    ನವದೆಹಲಿ: ವಾಹನ ಸವಾರರಿಗೆ ಸಿಹಿಸುದ್ದಿ. ಪೆಟ್ರೋಲ್‌, ಡೀಸೆಲ್‌ (Petrol, Diesel) ದರ ಪ್ರತಿ ಲೀಟರ್‌ 40 ಪೈಸೆ ಇಳಿಕೆಯಾಗಿದೆ.

    ಪರಿಷ್ಕೃತ ದರ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಜಾರಿಯಾಗಲಿದೆ. ಕಳೆದ 6 ತಿಂಗಳಿನಿಂದ ಪೆಟ್ರೋಲ್‌, ಡೀಸೆಲ್‌ ದರ ಯಥಾಸ್ಥಿತಿಯಲ್ಲಿತ್ತು. ಏಪ್ರಿಲ್‌ 7 ರಂದು ಕೊನೆಯ ಬಾರಿಗೆ ದರ ಕಡಿತಗೊಂಡಿತ್ತು. ಇದನ್ನೂ ಓದಿ: ಬೆಳಗಾವಿಯಲ್ಲಿ ಕ್ರಿಕೆಟ್ ದೇವರು – ಗೂಡಂಗಡಿಯಲ್ಲಿ ಟೀ ಸವಿದ ತೆಂಡೂಲ್ಕರ್

    ಇಳಿಕೆ ಯಾಕೆ?
    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ (International Crude Oil Prices) ಕೆಲ ದಿನಗಳಿಂದ 95 ಡಾಲರ್‌ ಅಸುಪಾಸಿನಲ್ಲಿದೆ. ಸೋಮವಾರ ಬ್ರೆಂಟ್‌(Brent) ಕಚ್ಚಾ ತೈಲದ ದರ ಒಂದು ಬ್ಯಾರೆಲ್‌ಗೆ 92 ಡಾಲರ್‌(7,600 ರೂ.) ಇತ್ತು. ಈ ವರ್ಷದ ಆರಂಭದಲ್ಲಿ ರಷ್ಯಾ ಉಕ್ರೇನ್‌ ಯುದ್ಧದಿಂದಾಗಿ ಒಂದು ಬ್ಯಾರೆಲ್‌ ಕಚ್ಚಾ ತೈಲದ ದರ 139 ಡಾಲರ್‌ಗೆ ಏರಿಕೆಯಾಗಿತ್ತು.

    ಬೆಂಗಳೂರಿನಲ್ಲಿ ಎಷ್ಟು?
    ಈ ಮೊದಲು 1 ಲೀಟರ್‌ ಪೆಟ್ರೋಲ್‌ ದರ 101.94 ರೂ. ಪೈಸೆ ಇದ್ದರೆ ಡೀಸೆಲ್‌ ದರ 87.89 ರೂ. ಇತ್ತು. ಈಗ ಪೆಟ್ರೋಲ್‌ ದರ 101.54 ರೂ. ಡೀಸೆಲ್‌ ದರ 87.49 ರೂ.ಗೆ ಇಳಿಕೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಷ್ಯಾ ಈಗ ಭಾರತದ 2ನೇ ಅತಿ ದೊಡ್ಡ ತೈಲ ಪೂರೈಕೆದಾರ

    ರಷ್ಯಾ ಈಗ ಭಾರತದ 2ನೇ ಅತಿ ದೊಡ್ಡ ತೈಲ ಪೂರೈಕೆದಾರ

    ನವದೆಹಲಿ: ರಷ್ಯಾ (Russia) ಇದೀಗ ಭಾರತದ (India) 2ನೇ ಅತಿ ದೊಡ್ಡ ಕಚ್ಚಾ ತೈಲ (Crude Oil) ಪೂರೈಕೆದಾರನಾಗಿ ಹೊರಹೊಮ್ಮಿದೆ. ಕಳೆದ ತಿಂಗಳು ಭಾರತ ರಷ್ಯಾದಿಂದ ಆಮದು ಮಾಡಿದ ತೈಲ ಶೇ.18.5 ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.

    ಭಾರತ ಜೂನ್‌ನಲ್ಲಿ ರಷ್ಯಾದಿಂದ ದಿನಕ್ಕೆ 9,33,000 ಬ್ಯಾರೆಲ್‌ನಷ್ಟು ತೈಲವನ್ನು ಆಮದು ಮಾಡಿಕೊಂಡಿತ್ತು. ಬಳಿಕ ಕಚ್ಚಾ ತೈಲದ ಆಮದು 2 ತಿಂಗಳು ಕುಸಿದ ಬಳಿಕ ಸೆಪ್ಟೆಂಬರ್‌ನಲ್ಲಿ ದಿನಕ್ಕೆ 8,79,000 ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಂಡಿದೆ. ಈ ಮೂಲಕ ಇದೀಗ ಭಾರತಕ್ಕೆ ಸೌದಿ ಅರೇಬಿಯಾದ ಬಳಿಕ ರಷ್ಯಾ ಅತಿ ಹೆಚ್ಚು ತೈಲ ರಫ್ತು ಮಾಡುವ ದೇಶ ಎನಿಸಿಕೊಂಡಿದೆ.

    ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಭಾರತಕ್ಕೆ ಕೇವಲ ಶೇ.1 ರಷ್ಟು ತೈಲವನ್ನು ಪೂರೈಕೆ ಮಾಡುತ್ತಿತ್ತು. ಯುದ್ಧ ಪ್ರಾರಂಭವಾಗುತ್ತಿದ್ದಂತೆಯೇ ಕಚ್ಚಾ ತೈಲವನ್ನು ಭಾರೀ ರಿಯಾಯಿತಿಯಲ್ಲಿ ನೀಡಲು ಆರಂಭಿಸಿದ ರಷ್ಯಾದಿಂದ ಭಾರತ ಭಾರೀ ಪ್ರಮಾಣದಲ್ಲಿ ಆಮದನ್ನು ಹೆಚ್ಚಿಸಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – 20 ಮಂದಿ ನಾಪತ್ತೆ

    ತೈಲ ಆಮದು ಮಾಡುವ ದೇಶಗಳ ಪೈಕಿ ಭಾರತ ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಭಾರತ ರಷ್ಯಾದಿಂದ ಆಮದನ್ನು ಹೆಚ್ಚಿಸುತ್ತಿದ್ದಂತೆ ಅಮೆರಿಕ, ಇರಾಕ್ ಹಾಗೂ ಸಂಯುಕ್ತ ಅರಬ್ ಸಂಸ್ಥಾನಗಳಿಗೆ ಭಾರೀ ಹೊಡೆತ ಉಂಟಾಗಿದೆ. ಕಳೆದ ತಿಂಗಳು ಸೌದಿ ಅರೇಬಿಯಾ ಭಾರತದ ಅತಿ ದೊಡ್ಡ ತೈಲ ಪೂರೈಕೆದಾರನಾಯಿತು. ಆದರೆ ಇರಾಕ್ ಹಾಗೂ ಸಂಯುಕ್ತ ಅರಬ್ ಸಂಸ್ಥಾನ ಈಗ 3 ಹಾಗೂ 4 ನೇ ಸ್ಥಾನಕ್ಕೆ ಕುಸಿದಿವೆ. ಇದನ್ನೂ ಓದಿ: ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗ್ತಿವೆ : ಕಾಂಗ್ರೆಸ್‌

    Live Tv
    [brid partner=56869869 player=32851 video=960834 autoplay=true]

  • ರಷ್ಯಾದಿಂದ ಡಿಸ್ಕೌಂಟ್‌ ಬೆಲೆಯಲ್ಲಿ ತೈಲ – 35 ಸಾವಿರ ಕೋಟಿ ಗಳಿಸಿದ ಭಾರತ

    ರಷ್ಯಾದಿಂದ ಡಿಸ್ಕೌಂಟ್‌ ಬೆಲೆಯಲ್ಲಿ ತೈಲ – 35 ಸಾವಿರ ಕೋಟಿ ಗಳಿಸಿದ ಭಾರತ

    ನವದೆಹಲಿ: ರಷ್ಯಾದಿಂದ(Russia) ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು(Crude Oil) ಖರೀದಿ ಮಾಡಿದ್ದರಿಂದ ಭಾರತ(India) 35 ಸಾವಿರ ಕೋಟಿ ರೂ. ಗಳಿಕೆ ಮಾಡಿದೆ.

    ಉಕ್ರೇನ್‌ Ukraine) ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾದಿಂದ ತೈಲ ಖರೀದಿ ಮಾಡದಂತೆ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಇದ್ದರೂ ಯಾವುದಕ್ಕೂ ಬಗ್ಗದ ಭಾರತ ಈಗಲೂ ಆಮದು ಮುಂದುವರಿಸಿದೆ.

    ರಷ್ಯಾದಿಂದ ಕಡಿಮೆ ದರದಲ್ಲಿ ತೈಲ ಖರೀದಿ ಮಾಡಿದ ಬಳಿಕ ದೇಶೀಯ ತೈಲ ಕಂಪನಿಗಳು ಸಂಸ್ಕರಿಸಿ  ವಿದೇಶಗಳಿಗೆ ಮಾರಿತ್ತು. ಈ ವಿಚಾರ ಮನಗಂಡ ಕೇಂದ್ರ ಸರ್ಕಾರ ವಿದೇಶಗಳಿಗೆ ರಫ್ತು ಮಾಡುವ ತೈಲಗಳಿಗೆ ವಿಂಡ್‌ಫಾಲ್‌ ತೆರಿಗೆ(Windfall Tax) ಹೆಚ್ಚಿತ್ತು. ಈ ತೆರಿಗೆಯಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಬಂದಿದೆ. ಇದನ್ನೂ ಓದಿ: ಷರತ್ತು ವಿಧಿಸಿ ಭಾರತಕ್ಕೆ ಇನ್ನಷ್ಟು ಡಿಸ್ಕೌಂಟ್ ದರದಲ್ಲಿ ತೈಲ ನೀಡಲು ಮುಂದಾದ ರಷ್ಯಾ

    ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ತೈಲ ಪೂರೈಕೆ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಸೌದಿ ಮೂರನೇ ಸ್ಥಾನಕ್ಕೆ ಕುಸಿದರೆ ರಷ್ಯಾ ಎರಡನೇ ಸ್ಥಾನಕ್ಕೆ ಜಿಗಿದಿತ್ತು. ಈಗ ಮತ್ತೆ ಸ್ಥಾನ ಬದಲಾಗಿದ್ದು ಇರಾಕ್‌ ಮೊದಲ ಸ್ಥಾನಲ್ಲಿದ್ದರೆ ಸೌದಿ ಎರಡನೇ, ರಷ್ಯಾ ಮೂರನೇ ಸ್ಥಾನಲದಲ್ಲಿದೆ

    ವಾಣಿಜ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ ಏಪ್ರಿಲ್‌ ಜುಲೈ ಅವಧಿಯಲ್ಲಿ 1.3 ಶತಕೋಟಿ ಡಾಲರ್‌ ಮೌಲ್ಯದ ತೈಲವನ್ನು ಆಮದು ಮಾಡಿಕೊಂಡಿದ್ದರೆ ಈ ಬಾರಿ ಈ ಅವಧಿಯಲ್ಲಿ ರಷ್ಯಾದಿಂದ 11.2 ಶತಕೋಟಿ ಡಾಲರ್‌ ಮೌಲ್ಯದ ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ.

    ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್(Jaishankar) ಅವರು, ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಸಮರ್ಥಿಸಿಕೊಂಡು ಇದೊಂದು ʼಬೆಸ್ಟ್‌ ಡೀಲ್‌ʼ ಎಂದು ಬಣ್ಣಿಸಿದ್ದರು. ಬೆಲೆಗಳು ದುಬಾರಿಯಾಗಿರುವ ಸಮಯದಲ್ಲಿ ಪ್ರತಿಯೊಂದು ದೇಶವೂ ತನ್ನ ಪ್ರಜೆಗಳಿಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಲು ಪ್ರಯತ್ನ ಮಾಡುತ್ತದೆ. ಈಗ ಅದನ್ನೇ ನಾವು ಮಾಡುತ್ತಿದ್ದೇವೆ ಎಂದು ಜೈಶಂಕರ್ ಸಮರ್ಥಿಸಿಕೊಂಡರು. ಇದನ್ನೂ ಓದಿ: ನಮ್ಮದು ಬೆಸ್ಟ್‌ ಡೀಲ್‌ – ರಷ್ಯಾದಿಂದ ತೈಲ ಖರೀದಿಗೆ ಜೈಶಂಕರ್‌ ಸಮರ್ಥನೆ

    ಕೋವಿಡ್ 19 ಸಮಯದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆ ಕಂಡಿತ್ತು. ಈ ಸಂದರ್ಭದಲ್ಲಿ ಭಾರತ ಕಡಿಮೆ ದರದಲ್ಲಿ ತೈಲವನ್ನು ಖರೀದಿಸಿ ಈ ಸಂಗ್ರಹಾಗಾರದಲ್ಲಿ ಸಂಗ್ರಹಿಸಿ ಭರ್ತಿ ಮಾಡಿತ್ತು. ಇದರಿಂದಾಗಿ ಒಟ್ಟು 5 ಸಾವಿರ ರೂ. ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿತ್ತು.

    ಕೋವಿಡ್19 ಬರುವುದಕ್ಕೆ ಮೊದಲು ಮಂಗಳೂರು, ಪಾದೂರು ಅರ್ಧ ತುಂಬಿದ್ದರೆ, ವಿಶಾಖಪಟ್ಟಣದಲ್ಲಿ ಸ್ವಲ್ಪ ಜಾಗ ಉಳಿದಿತ್ತು. ದರ ಇಳಿಕೆಯಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಸೌದಿ ಅರೇಬಿಯಾ, ಯುಎಇ ಮತ್ತು ಇರಾಕ್ ನಿಂದ ತೈಲವನ್ನು ಖರೀದಿಸಿ ಭರ್ತಿ ಮಾಡಿತ್ತು. ಇದನ್ನೂ ಓದಿ: ಕೋವಿಡ್ 19 ವೇಳೆಯಲ್ಲಿ ದೇಶಕ್ಕೆ ಸಾವಿರಾರು ಕೋಟಿ ಉಳಿಸಿದ ಮಂಗಳೂರು

    Live Tv
    [brid partner=56869869 player=32851 video=960834 autoplay=true]

  • ನಮ್ಮದು ಬೆಸ್ಟ್‌ ಡೀಲ್‌ – ರಷ್ಯಾದಿಂದ ತೈಲ ಖರೀದಿಗೆ ಜೈಶಂಕರ್‌ ಸಮರ್ಥನೆ

    ನಮ್ಮದು ಬೆಸ್ಟ್‌ ಡೀಲ್‌ – ರಷ್ಯಾದಿಂದ ತೈಲ ಖರೀದಿಗೆ ಜೈಶಂಕರ್‌ ಸಮರ್ಥನೆ

    ಬ್ಯಾಂಕಾಕ್‌: ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸಮರ್ಥಿಸಿಕೊಂಡು ಇದೊಂದು ʼಬೆಸ್ಟ್‌ ಡೀಲ್‌ʼ ಎಂದು ಬಣ್ಣಿಸಿದ್ದಾರೆ.

    ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವಾದ್ಯಂತ ಆಗಿರುವ ಇಂಧನ ಬೆಲೆ ಏರಿಕೆಯ ಬಗ್ಗೆ ಚರ್ಚಿಸಿದರು.

    ನಾವು ನಮ್ಮ ಆಸಕ್ತಿಯ ಬಗ್ಗೆ ತುಂಬಾ ಮುಕ್ತ ಮತ್ತು ಪ್ರಾಮಾಣಿಕ ಮನಸ್ಥಿತಿಯನ್ನು ಹೊಂದಿದ್ದೇವೆ. ನಮ್ಮದು 2000 ಡಾಲರ್‌(ಅಂದಾಜು 1.58 ಲಕ್ಷ ರೂ.) ತಲಾ ಆದಾಯ ಹೊಂದಿರುವ ದೇಶ. ದುಬಾರಿ ಇಂಧನ ಬೆಲೆಗಳನ್ನು ನಿಭಾಯಿಸಲು ನಮ್ಮಿಂದ ಸಾಧ್ಯವಿಲ್ಲ. ಉತ್ತಮ ವ್ಯವಹಾರ ಮಾಡುವುದು ನನ್ನ ನೈತಿಕ ಕರ್ತವ್ಯ ಎಂದರು.

    9ನೇ ಭಾರತ-ಥಾಯ್ಲೆಂಡ್ ಜಂಟಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವರು ಥಾಯ್ಲೆಂಡ್‌ ಪ್ರವಾಸಲ್ಲಿದ್ದಾರೆ. ಇದನ್ನೂ ಓದಿ: ಆಫರ್‌ ಬೆನ್ನಲ್ಲೇ ದಾಖಲೆ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಭಾರತ

    ಈಗ ತೈಲ ಮತ್ತು ಅನಿಲಗಳ ಬೆಲೆಗಳು ಹೆಚ್ಚಾಗಿವೆ. ಏಷ್ಯಾ ದೇಶಗಳಿಗೆ ಮಧ್ಯಪ್ರಾಚ್ಯ ದೇಶಗಳಿಂದ ತೈಲ ಪೂರೈಕೆಯಾಗುತ್ತಿತ್ತು. ಆದರೆ ನಮ್ಮ ಸಾಂಪ್ರಾದಾಯಿಕ ಪೂರೈಕೆದಾರರು ಈಗ ಯುರೋಪ್‌ ಕಡೆ ತಿರುಗುತ್ತಿದ್ದಾರೆ. ಯಾಕೆಂದರೆ ಯುರೋಪ್ ರಷ್ಯಾದಿಂದ ಕಡಿಮೆ ತೈಲವನ್ನು ಖರೀದಿಸುತ್ತಿದೆ. ಬೆಲೆಗಳು ದುಬಾರಿಯಾಗಿರುವ ಸಮಯದಲ್ಲಿ ಪ್ರತಿಯೊಂದು ದೇಶವೂ ತನ್ನ ಪ್ರಜೆಗಳಿಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಲು ಪ್ರಯತ್ನ ಮಾಡುತ್ತದೆ. ಈಗ ಅದನ್ನೇ ನಾವು ಮಾಡುತ್ತಿದ್ದೇವೆ ಎಂದು ಜೈಶಂಕರ್ ಸಮರ್ಥಿಸಿಕೊಂಡರು.

    ತೈಲ ಖರೀದಿಯನ್ನು ನಾವು ರಕ್ಷಣಾತ್ಮಕ ರೀತಿಯಲ್ಲಿ ಮಾಡುತ್ತಿಲ್ಲ. ನಾವು ನಮ್ಮ ಆಸಕ್ತಿಗಳ ಬಗ್ಗೆ ತುಂಬಾ ಮುಕ್ತ ಮತ್ತು ಪ್ರಾಮಾಣಿಕವಾಗಿದ್ದೇವೆ ಎಂದರು. ಇದನ್ನೂ ಓದಿ: ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಮಾಧ್ಯಮಕ್ಕೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್

    ಜೈಶಂಕರ್‌ ಭಾರತದ ನಡೆಯನ್ನು ವಿಶ್ವ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳುವುದು ಇದು ಮೊದಲನೆಯದ್ದಲ್ಲ. ಈ ಹಿಂದೆಯೂ ಸರಿಯಾಗಿ ಸಮರ್ಥಿಸಿ ತಿರುಗೇಟು ನೀಡಿದ್ದರು. ರಷ್ಯಾದಿಂದ ಭಾರತ ಮಾತ್ರ ತೈಲ ಖರೀದಿ ಮಾಡುತ್ತಿಲ್ಲ. ಯುರೋಪ್‌ ಈಗಲೂ ಗ್ಯಾಸ್‌ ಖರೀದಿ ಮಾಡುತ್ತಿದೆ. ಹೀಗಿದ್ದರೂ ಭಾರತ ಮಾತ್ರ ಟಾರ್ಗೆಟ್‌ ಯಾಕೆ ಎಂದು ಪ್ರಶ್ನಿಸಿದ್ದರು.

    ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ರಷ್ಯಾ ಯುದ್ಧಕ್ಕೆ ನಿಧಿ ನೀಡಿದಂತಾಗುತ್ತದೆ ಎಂಬ ಪ್ರಶ್ನೆಗೆ, ಭಾರತ ತೈಲ ಖರೀದಿಸಿ ರಷ್ಯಾಗೆ ಸಹಾಯ ಮಾಡುತ್ತದೆ ಎಂದಾದರೆ ರಷ್ಯಾದಿಂದ ಗ್ಯಾಸ್‌ ಖರೀದಿಸುತ್ತಿರುವ ಯುರೋಪ್‌ ದೇಶಗಳು ಯುದ್ಧಕ್ಕೆ ನಿಧಿ ನೀಡಿದಂತೆ ಆಗುವುದಿಲ್ಲವೇ ಎಂದು ಮರು ಪ್ರಶ್ನೆ ಹಾಕಿ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ತೈಲ ಬೆಲೆ ಏರಿಕೆಯಿಂದ ಸೌದಿ ಅರಾಮ್ಕೋಗೆ ಭಾರೀ ಲಾಭ

    ತೈಲ ಬೆಲೆ ಏರಿಕೆಯಿಂದ ಸೌದಿ ಅರಾಮ್ಕೋಗೆ ಭಾರೀ ಲಾಭ

    ರಿಯಾದ್‌: ಉಕ್ರೇನ್‌ ರಷ್ಯಾ ಯುದ್ಧದಿಂದಾಗಿ ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋಗೆ ಭರ್ಜರಿ ಲಾಭವಾಗಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಅರಾಮ್ಕೋ ಕಂಪನಿಯ ನಿವ್ವಳ ಆದಾಯ 48.4 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕಂಪನಿ ನಿವ್ವಳ ಆದಾಯ ಶೇ.25.5 ಶತಕೋಟಿ ಡಾಲರ್‌ ಇತ್ತು. ಈ ಬಾರಿ ಶೇ.90 ರಷ್ಟು ಏರಿಕೆಯಾಗಿ ಇತಿಹಾಸ ಸೃಷ್ಟಿಸಿದೆ.

    ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಮಾಡಿದ ಕಂಪನಿಗಳ ಪೈಕಿ ತ್ರೈಮಾಸಿಕದಲ್ಲಿ ಸೌದಿ ಅರಾಮ್ಕೋ ಅತಿ ಹೆಚ್ಚು ಲಾಭ ಮಾಡಿದ ಕಂಪನಿ ಎಂದು ಬ್ಲೂಮ್‌ಬರ್ಗ್‌ ಹೇಳಿದೆ. ಇದನ್ನೂ ಓದಿ: ದೇಶದ ಅಭಿವೃದ್ಧಿಗೆ ಕುಟುಂಬ ರಾಜಕಾರಣದಿಂದ ಲಾಭ ಇಲ್ಲ: ಮೋದಿ

    ಇಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದವು. ಆದರೆ ಉಕ್ರೇನ್‌ ಮೇಲಿನ ದಾಳಿಯಿಂದಾಗಿ ಈಗ ಸೌದಿಯಿಂದ ಭಾರೀ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಲು ಆರಂಭಿಸಿದೆ. ಕೋವಿಡ್‌ ಕಡಿಮೆಯಾದ ಬಳಿಕ ತೈಲ ಬೆಲೆ ನಿಧಾನವಾಗಿ ಏರಲು ಆರಂಭವಾಗಿತ್ತು. ಈ ಮಧ್ಯೆ ಯುದ್ಧದಿಂದಾಗಿ ಬೇಡಿಕೆ ಜಾಸ್ತಿಯಾಗಿ ತೈಲ ಬೆಲೆ ಗಗನಕ್ಕೆ ಏರಿತ್ತು.

    ಒಪೆಕ್‌ ದೇಶಗಳ ಪೈಕಿ ಸೌದಿ ಅರೆಬಿಯಾ ಅತಿ ದೊಡ್ಡ ತೈಲ ಉತ್ಪಾದನಾ ದೇಶವಾಗಿದೆ. ವಿಶ್ವದ ಹಲವು ದೇಶಗಳು ಮನವಿಯ ಹಿನ್ನೆಲೆಯಲ್ಲಿ ಕಳೆದ ವಾರ ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸಲು ಒಪ್ಪಿಗೆ ನೀಡಿವೆ.

    ಸೌದಿ ಅರಾಮ್ಕೋ ಅಲ್ಲದೇ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿಗಳಾದ ಎಕ್ಸನ್‌ಮೊಬಿಲ್‌, ಶೆವ್ರಾನ್‌ ಮತ್ತು ಬಿಪಿ ಕಂಪನಿಗಳು ಕಚ್ಚಾ ತೈಲ ಬೆಲೆ ಏರಿಕೆಯಿಂದ ಲಾಭ ಮಾಡಿಕೊಂಡಿವೆ.

    ಸರ್ಕಾರಿ ಸಿಬ್ಬಂದಿ ವೇತನ, ಸಬ್ಸಿಡಿ, ಇತರ ಅಭಿವೃದ್ಧಿ ಕೆಲಸಗಳಿಗೆ ತೈಲ ಮತ್ತು ಅನಿಲ ಮಾರಾಟದ ಮೇಲೆ ಸೌದಿ ಅರೇಬಿಯಾ ಹೆಚ್ಚು ಅವಲಂಬಿತವಾಗಿದೆ. ರಷ್ಯಾ ಈಗ ಕಡಿಮೆ ಬೆಲೆಯಲ್ಲಿ ತೈಲ ನೀಡುವ ಆಫರ್‌ ನೀಡಿದ್ದರೂ ಪ್ರಸ್ತುತ 1 ಬ್ಯಾರೆಲ್‌ ಬ್ರೆಂಟ್‌ ಕಚ್ಚಾ ತೈಲ 100 ಡಾಲರ್‌ ಬೆಲೆಯಲ್ಲಿ ಮಾರಾಟವಾಗುತ್ತಿದೆ.

    ಪ್ರಸ್ತುತ ಈಗ ಸೌದಿ ಅರೇಬಿಯಾ ಪ್ರತಿ ದಿನ 10 ದಶಲಕ್ಷ ಬ್ಯಾರೆಲ್‌ ತೈಲವನ್ನು ಉತ್ಪಾದಿಸುತ್ತಿದೆ. ಪ್ರತಿ ದಿನ 13 ದಶಲಕ್ಷ ಬ್ಯಾರೆಲ್‌ ತೈಲ ಉತ್ಪಾದನೆ ಮಾಡುವ ಸಾಮರ್ಥ್ಯ ನಮಗಿದೆ. ಮುಂದಿನ ದಿನಗಳಲ್ಲಿ ಈ ಗರಿಷ್ಠ ಪ್ರಮಾಣವನ್ನು ನಾವು ತಲುಪಲಿದ್ದೇವೆ ಎಂದು ಸೌದಿ ಕಿಂಗ್‌ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಈ ಹಿಂದೆ ಪ್ರಕಟಿಸಿದ್ದರು.

    ಮೂರು ವರ್ಷದ ಹಿಂದೆ ಸೌದಿ ಅರಾಮ್ಕೋ ಐಪಿಒ ಬಿಡುಗಡೆ ಮಾಡಿದ್ದು, ಭಾರೀ ಪ್ರಮಾಣದಲ್ಲಿ ಲಾಭ ಬಂದ ಹಿನ್ನೆಲೆಯಲ್ಲಿ ಷೇರುದಾರರಿಗೆ 18.8 ಶತಕೋಟಿ ಡಾಲರ್‌ ಡಿವಿಡೆಂಡ್‌ ನೀಡಲಾಗುವುದು ಎಂದು ಕಂಪನಿ ಪ್ರಕಟಿಸಿದೆ. ಸೌದಿ ಅರಾಮ್ಕೋ ಕಂಪನಿಯಲ್ಲಿ ಸರ್ಕಾರವೇ ಶೇ.98 ರಷ್ಟು ಷೇರನ್ನು ಹೊಂದಿದೆ.

    Live Tv
    [brid partner=56869869 player=32851 video=960834 autoplay=true]

  • ಆಫರ್‌ ಬೆನ್ನಲ್ಲೇ ದಾಖಲೆ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಭಾರತ

    ಆಫರ್‌ ಬೆನ್ನಲ್ಲೇ ದಾಖಲೆ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಭಾರತ

    ನವದೆಹಲಿ: ರಷ್ಯಾದಿಂದ ಈಗ ದಾಖಲೆ ಪ್ರಮಾಣದಲ್ಲಿ ಭಾರತ ತೈಲವನ್ನು ಆಮದು ಮಾಡುತ್ತಿದ್ದು, ಜೂನ್‌ ತಿಂಗಳಿನಲ್ಲಿ ಪ್ರತಿ ದಿನ 9,50,000 ಬ್ಯಾರೆಲ್‌ ತೈಲವನ್ನು ಆಮದು ಮಾಡಿದೆ ಎಂದು ಮೂಲಗಳು ತಿಳಿಸಿವೆ.

    ಭಾರತಕ್ಕೆ ಕಡಿಮೆ ದರದಲ್ಲಿ ತೈಲವನ್ನು ನೀಡುತ್ತೇವೆ ಎಂದು ರಷ್ಯಾ ಆಫರ್‌ ಹೇಳಿದ ಬೆನ್ನಲ್ಲೇ ದೇಶದ ತೈಲ ಕಂಪನಿಗಳು ಭಾರೀ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಲು ಆರಂಭಿಸಿವೆ.

    OIL 2

    ಜೂನ್‌ ತಿಂಗಳಿನಲ್ಲಿ 4.8 ದಶಲಕ್ಷ ಬಿಪಿಡಿ(ಬ್ಯಾರೆಲ್ಸ್‌ ಪರ್‌ ಡೇ) ತೈಲವನ್ನು ಭಾರತ ವಿದೇಶದಿಂದ ಆಮದು ಮಾಡಿಕೊಂಡಿದೆ. ಮೇ ತಿಂಗಳಿಗೆ ಹೋಲಿಸಿದರೆ ಶೇ.3.8 ರಷ್ಟು ಕಡಿಮೆಯಾದರೂ ಕಳೆದ ವರ್ಷದ ಜೂನ್‌ ತಿಂಗಳಿಗೆ ಹೋಲಿಸಿದರೆ ಶೇ.23 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಕೋವಿಡ್‌ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ತೈಲ ಆಮದಾಗಿತ್ತು.

    ಮೇ ತಿಂಗಳಿಗೆ ಹೋಲಿಸಿದರೆ ರಷ್ಯಾದಿಂದ ತೈಲ ಆಮದು ಮಾಡುವ ಪ್ರಮಾಣ ಶೇ.15 ರಷ್ಟು ಹೆಚ್ಚಾಗಿದೆ. ಸೌದಿ ಅರೇಬಿಯಾ ಮತ್ತು ಇರಾಕ್‌ನಿಂದ ಆಮದಾಗುವ ಪ್ರಮಾಣ ಕ್ರಮವಾಗಿ ಶೇ.10.5 ಮತ್ತು ಶೇ.13.5 ರಷ್ಟು ಇಳಿಕೆಯಾಗಿದೆ. ಮಧ್ಯಪ್ರಾಚ್ಯ ದೇಶದಿಂದ ಖರೀದಿಸುತ್ತಿರುವ ತೈಲ ಪ್ರಮಾಣ ಶೇ.59.3 ರಿಂದ ಶೇ.56.3ಕ್ಕೆ ಕುಸಿದಿದೆ. ಇದನ್ನೂ ಓದಿ: ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಮಾಧ್ಯಮಕ್ಕೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್

    ಇಲ್ಲಿಯವರೆಗೆ ಭಾರತ ಇರಾಕ್‌ನಿಂದ ಹೆಚ್ಚಿನ ತೈಲ ಆಮದು ಮಾಡಿಕೊಂಡರೆ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ರಷ್ಯಾ ಎರಡನೇ ಸ್ಥಾನ ಪಡೆದರೆ ಸೌದಿ ಅರೇಬಿಯಾ ಮೂರನೇ ಸ್ಥಾನ ಕುಸಿದಿದೆ.

    ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲ ಪಡೆಯುತ್ತಿರುವ ಭಾರತ ಕಂಪನಿಗಳಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಮತ್ತು ನಾಯರಾ ಎನರ್ಜಿ ಆ ತೈಲವನ್ನು ಸಂಸ್ಕರಿಸಿ ವಿದೇಶಗಳಿಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿವೆ.

    ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಷ್ಯಾದಿಂದ ಭಾರತ 22,500 ಬಿಪಿಡಿ ತೈಲವನ್ನು ಆಮದು ಮಾಡಿದ್ದರೆ ಈ ವರ್ಷ ಏಪ್ರಿಲ್‌ ಜೂನ್‌ ಅವಧಿಯಲ್ಲಿ ಅವಧಿಯಲ್ಲಿ 6,82,200 ಬಿಪಿಡಿ ತೈಲವನ್ನು ಆಮದು ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್ಥಿಕ ಹಿಂಜರಿತ ಭೀತಿ – ಅಂತಾರಾಷ್ಟ್ರೀಯ ತೈಲಬೆಲೆ ಭಾರೀ ಇಳಿಕೆ

    ಆರ್ಥಿಕ ಹಿಂಜರಿತ ಭೀತಿ – ಅಂತಾರಾಷ್ಟ್ರೀಯ ತೈಲಬೆಲೆ ಭಾರೀ ಇಳಿಕೆ

    ದುಬೈ: ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ತೈಲ ಬೆಲೆ ಭಾರೀ ಕುಸಿತ ಕಂಡಿದೆ. 1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 100 ಡಾಲರ್(7,900 ರೂ.)ಗಿಂತಲೂ ಕಡಿಮೆಯಾಗಿದೆ.

    1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ 94 ಸೆಂಟ್ ಅಥವಾ ಶೇ.0.9 ರಷ್ಟು ಕುಸಿದು 99.75 ಡಾಲರ್ ತಲುಪಿದೆ. ವೆಸ್ಟ್ ಟೆಕ್ಸಾಸ್ ಇಂಟರ್‌ಮಿಡಿಯೆಟ್ ಕಚ್ಚಾ ತೈಲದ ಬೆಲೆ ಶೇ.9 ರಷ್ಟು ಕುಸಿದು 97.91 ಡಾಲರ್(7,700 ರೂ.) ತಲುಪಿದೆ.1988 ರಲ್ಲಿ ವ್ಯಾಪಾರ ಪ್ರಾರಂಭವಾದಾಗಿನಿಂದ ಕಂಡ 3ನೇ ಅತಿ ದೊಡ್ಡ ಕುಸಿತವಾಗಿದೆ. ಇದನ್ನೂ ಓದಿ: ಇಡಿ ದಾಳಿ ಬೆನ್ನಲ್ಲೇ ದೇಶ ತೊರೆದ ವಿವೋ ನಿರ್ದೇಶಕರು 

    ಪ್ರಪಂಚದಾದ್ಯಂತ ಹಣದುಬ್ಬರ ಸಮಸ್ಯೆ ಎದುರಾಗುತ್ತಿದ್ದು ಆರ್‌ಬಿಐ ಸೇರಿದಂತೆ ವಿಶ್ವದ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಲೋಹ, ತಾಳೆ ಎಣ್ಣೆ, ಇತರ ಸರಕುಗಳೊಂದಿಗೆ ಕಚ್ಚಾತೈಲದ ಬೆಲೆಯೂ ಕುಸಿತವಾಗಿದೆ. ಇದನ್ನೂ ಓದಿ: ಒಂದು ವಾರದೊಳಗೆ ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಸೂಚನೆ

    Live Tv
    [brid partner=56869869 player=32851 video=960834 autoplay=true]

  • ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಮುಂಬೈ: ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ನಿರಂತರ ವಿದೇಶಿ ಬಂಡವಾಳದ ಹೊರಹರಿವಿನಿಂದಾಗಿ ರೂಪಾಯಿಯ ಮೌಲ್ಯ ಗುರುವಾರ ಅಮೆರಿಕನ್ ಡಾಲರ್ ಎದುರು 77.81ರಷ್ಟಕ್ಕೆ ಕುಸಿತವಾಗಿದೆ.

    ಬುಧವಾರ ರೂಪಾಯಿ ಮೌಲ್ಯ 77.68ರಷ್ಟು ಇದ್ದು, ದಿನದ ಅಂತರದ (ಇಂಟ್ರಾ ಡೇ) ದಾಖಲೆಯ ಕನಿಷ್ಠ ಮಟ್ಟ 13 ಪೈಸೆಯಷ್ಟು ಕುಸಿದಿದೆ. ಈ ಮೂಲಕ ಡಾಲರ್ ಎದುರು ರೂಪಾಯಿ ಮೌಲ್ಯ 77.81ಕ್ಕೆ ತಲುಪಿದೆ. ಇದನ್ನೂ ಓದಿ: ಇಂದಿನಿಂದ 5 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ – ಹವಾಮಾನ ಇಲಾಖೆ

    ಮೇ 4 ರಂದು ನಡೆದ ನಿಗದಿತ ಸಭೆಯಲ್ಲಿ ಆರ್‌ಬಿಐ 40 ಬಿಪಿಎಸ್ ಹೆಚ್ಚಿಸಿದ್ದು, ಇದು ದರದ ಏರಿಕೆಗೆ ಕಾರಣವಾಗಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 123.43 ಡಾಲರ್ ಇದ್ದು, 0.12 ರಷ್ಟು ಕುಸಿದಿದೆ. ಇದನ್ನೂ ಓದಿ: ಕೋಮು ದ್ವೇಷಭಾಷಣ – ಓವೈಸಿ, ನೂಪುರ್ ಶರ್ಮಾ ವಿರುದ್ಧ FIR

    ದೇಶೀಯ ಈಕ್ವಿಟಿ ಮಾರುಕಟ್ಟೆಯ ಎದುರು 30 ಷೇರುಗಳ ಸೆನ್ಸೆಕ್ಸ್ 10.05 ಪಾಯಿಂಟ್ ಅಥವಾ 0.02 ರಷ್ಟು ಹೆಚ್ಚಿ 54,902.54 ರಲ್ಲಿ ವಹಿವಾಟು ನಡೆಸುತ್ತಿದೆ. ಆದರೆ ನಿಫ್ಟಿ 5.65 ಪಾಯಿಂಟ್ ಅಥವಾ ಶೇಕಡಾ 0.03 ರಷ್ಟು ಮುನ್ನಡೆ ಸಾಧಿಸಿ ಶೇಕಡಾ 0.03 ತಲುಪಿದೆ.