Tag: ಕಗೋಡು ತಿಮ್ಮಪ್ಪ

  • ಈ ಫಲಿತಾಂಶ ಕರ್ನಾಟಕದ ಯಾವುದೇ ಚುನಾವಣೆ ಮೇಲೆ ಪರಿಣಾಮ ಬೀರಲ್ಲ: ಕಾಗೋಡು

    ಈ ಫಲಿತಾಂಶ ಕರ್ನಾಟಕದ ಯಾವುದೇ ಚುನಾವಣೆ ಮೇಲೆ ಪರಿಣಾಮ ಬೀರಲ್ಲ: ಕಾಗೋಡು

    ಶಿವಮೊಗ್ಗ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಕರ್ನಾಟಕದ ಯಾವುದೇ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

    ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ನಾವು ಗೆಲ್ಲಬೇಕಿತ್ತು. ಮುಲಾಯಂ, ಅಖಿಲೇಶ್ ನಡುವಿನ ಭಿನ್ನಮತ ಹಾಗೂ ಮೋದಿ ಇಲ್ಲಿ ಹೆಚ್ಚು ಪ್ರಚಾರ ಮಾಡಿದ್ದು ಬಿಜೆಪಿ ಗೆಲುವಿಗೆ ಕಾರಣ ಎಂದು ಅವರು ಹೇಳಿದ್ರು.

    ಮಧ್ಯಾಹ್ನ 12.30 ಟ್ರೆಂಡ್ಸ್ ಪ್ರಕಾರ ಉತ್ತರಪ್ರದೇಶದಲ್ಲಿ ಬಿಜೆಪಿ 307 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಎಸ್‍ಪಿ ಕಾಂಗ್ರೆಸ್ 182, ಬಿಎಸ್‍ಪಿ 18, ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.