Tag: ಕಗಿಸೋ ರಬಾಡ

  • ಕೊಹ್ಲಿ ಒಬ್ಬ ಅಪ್ರಬುದ್ಧ ಆಟಗಾರ – ರಬಾಡ

    ಕೊಹ್ಲಿ ಒಬ್ಬ ಅಪ್ರಬುದ್ಧ ಆಟಗಾರ – ರಬಾಡ

    ನವದೆಹಲಿ: ಕೊಹ್ಲಿ ಪಂದ್ಯದ ಸಮಯದಲ್ಲಿ ಎದುರಾಳಿಗಳನ್ನು ನಿಂದಿಸುತ್ತಾರೆ. ಆದರೆ ಎದುರಾಳಿಗಳು ನಿಂದಿಸಿದಾಗ ಕೋಪಗೊಳ್ಳುತ್ತಾರೆ. ಹೀಗಾಗಿ ಅವರೊಬ್ಬ ಅಪ್ರಬುದ್ಧ ಆಟಗಾರ ಎಂದು ದಕ್ಷಿಣ ಆಫ್ರಿಕಾದ ಯುವ ವೇಗಿ ಕಗಿಸೋ ರಬಾಡ ಅವರು ಹೇಳಿದ್ದಾರೆ.

    ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯದ ವೇಳೆ ಆಕ್ರಮಣಕಾರಿ ವ್ಯಕ್ತಿತ್ವ ತೋರುವ ವಿಚಾರದ ಬಗ್ಗೆ ಮಾತನಾಡಿರುವ ರಬಾಡ ಐಪಿಎಲ್ ವೇಳೆ ತಮ್ಮ ಮತ್ತು ಕೊಹ್ಲಿ ನಡುವಿನ ಘಟನೆಯನ್ನು ಹಂಚಿಕೊಂಡಿದ್ದಾರೆ.

    ಕೊಹ್ಲಿ ಪಂದ್ಯದ ವೇಳೆ ಎದುರಾಳಿಗಳನ್ನು ನಿಂದಿಸುತ್ತಾರೆ. ಆದರೆ ಯಾರದರು ಅವರನ್ನು ನಿಂದಿಸಿದರೆ ಕೋಪಗೊಳ್ಳುತ್ತಾರೆ. ಇದೇ ರೀತಿ ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯವೊಂದರಲ್ಲಿ ನನ್ನ ಎಸೆತಕ್ಕೆ ಬೌಂಡರಿ ಬಾರಿಸಿದ ಕೊಹ್ಲಿ ಅವರು ನನ್ನನ್ನು ನಿಂದಿಸಿ ಮಾತನಾಡಿದರು. ನಂತರ ಎಸೆದ ಎಸೆತ ಡಾಟ್ ಅದ ಕಾರಣ ನಾನು ಅವರನ್ನು ನಿಂದಿಸಿದೆ. ಇದನ್ನು ಸಹಿಸಿಕೊಳ್ಳದ ಕೊಹ್ಲಿ ನನ್ನ ಮೇಲೆ ಕೋಪಗೊಂಡರು ಎಂದು ವಿವರಿಸಿದರು.

    ವಿರಾಟ್ ಒಬ್ಬ ಅತ್ಯುತ್ತಮ ಆಟಗಾರ. ಒಳ್ಳೆಯ ಬ್ಯಾಟ್ಸ್‌ಮನ್ ಆಕ್ರಮಣಕಾರಿ ಆಟದ ಮೂಲಕ ತಂಡಕ್ಕೆ ಗೆಲುವು ತಂದು ಕೊಡುವ ಅದ್ಭುತ ಆಟಗಾರ. ಆದರೆ ಎದುರಾಳಿಗಳನ್ನು ಜರಿಯುವ ಅವರು ಎದುರಾಳಿಗಳ ಜರಿಯುವಿಕೆಯನ್ನು ಸ್ವೀಕಾರ ಮಾಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಬಾಡ ಅವರು 2018ರಲ್ಲಿ ಕೊಹ್ಲಿ ಅವರನ್ನು ಹಿಂದಿಕ್ಕಿ ಐಸಿಸಿಯ ವರ್ಷದ ಆಟಗಾರ ಪ್ರಶಸ್ತಿ ಮತ್ತು ಆದೇ ವರ್ಷ ಅತ್ಯುತ್ತಮ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಕಸಿದುಕೊಂಡಿದ್ದರು.

    ಈ ವಿಚಾರದ ಬಗ್ಗೆ ಮಾತನಾಡಿದ ರಬಾಡ, ಕೊಹ್ಲಿ ಅವರು ಕಳೆದ ಐದು ವರ್ಷದಿಂದ ಭಾರತೀಯ ಕ್ರಿಕೆಟ್‍ನ ಆಧಾರ ಸ್ತಂಭ ಅವರು ಈ ಎಲ್ಲಾ ಪ್ರಶಸ್ತಿಗಳಿಗೂ ಅರ್ಹರಾಗಿದ್ದಾರೆ. ಕೊಹ್ಲಿ ಅವರು ಆಡುವ ಆಟದ ವಿಷಯದಲ್ಲಿ ನೀವು ತಪ್ಪು ಹುಡುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    2019ರ ವಿಶ್ವಕಪ್‍ನ ತನ್ನ ಮೊದಲ ಪಂದ್ಯವನ್ನು ಕೊಹ್ಲಿ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 5 ರಂದು ಆಡಲಿದೆ.

  • ವಿಶ್ವ ಕ್ರಿಕೆಟ್‍ನಲ್ಲಿ ರಬಾಡ ಅತ್ಯಂತ ಕೆಟ್ಟ ಎಸೆತ – ಲೆಗ್ ಅಂಪೈರ್ ಜೊತೆ ಚರ್ಚಿಸಿ ತೀರ್ಪು ಕೊಟ್ಟ ಅಂಪೈರ್

    ವಿಶ್ವ ಕ್ರಿಕೆಟ್‍ನಲ್ಲಿ ರಬಾಡ ಅತ್ಯಂತ ಕೆಟ್ಟ ಎಸೆತ – ಲೆಗ್ ಅಂಪೈರ್ ಜೊತೆ ಚರ್ಚಿಸಿ ತೀರ್ಪು ಕೊಟ್ಟ ಅಂಪೈರ್

    ಕ್ವೀನ್ಸ್ ಲ್ಯಾಂಡ್: ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೋ ರಬಾಡ ಆಸ್ಟ್ರೇಲಿಯಾ ವಿರುದ್ಧ ಟಿ 20 ಪಂದ್ಯದಲ್ಲಿ ಕೆಟ್ಟದಾಗಿ ಬಾಲ್ ಎಸೆದು ಸುದ್ದಿಯಾಗಿದ್ದಾರೆ.

    9ನೇ ಓವರ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಕ್ರೀಸ್ ನಲ್ಲಿದ್ದರು. ವೇಗವಾಗಿ ಬಂದ ರಬಾಡ ಬಾಲ್ ಎಸೆದಿದ್ದಾರೆ. ಎಸೆದ ಬಾಲ್ ಮೇಲಕ್ಕೆ ಹಾರಿ ಎಡಗಡೆಗೆ ಹೋಗಿ ಪಾಯಿಂಟ್ ಬಳಿ ನಿಂತಿದ್ದ ಫೀಲ್ಡರ್ ಬಳಿ ಬಿದ್ದಿದೆ.  ಬಾಲ್ ಎಲ್ಲಿಗೋ ಹೋಗಿದ್ದನ್ನು ನೋಡಿ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ.

    ಈ ಎಸೆತಕ್ಕೆ ಏನು ತೀರ್ಪು ನೀಡಬೇಕು ಅಂಪೈರ್ ಗೆ ಗೊಂದಲ ಉಂಟಾಗಿ ಲೆಗ್ ಅಂಪೈರ್ ಜೊತೆ ಚರ್ಚಿಸಿದರು. ಬಳಿಕ ಡೆಡ್ ಬಾಲ್ ಎಂದು ಘೋಷಣೆ ಮಾಡಿದರು. ಈಗ ರಬಾಡ ಎಸೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಶ್ವದ ಕ್ರಿಕೆಟ್ ನ ಅಂತ್ಯ ಕೆಟ್ಟ ಎಸೆತಗಳಲ್ಲಿ ಇಂದು ಒಂದು ಹೇಳಿ ಜನ ಕಮೆಂಟ್ ಮಾಡುತ್ತಿದ್ದಾರೆ.

    ಮಳೆಯಿಂದಾಗಿ 10 ಓವರ್ ಕಡಿತಗೊಂಡಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ನಿಗದಿತ 10 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿತು. 21 ರನ್ ಗಳಿಂದ ದಕ್ಷಿಣ ಆಫ್ರಿಕಾ ಪಂದ್ಯವನ್ನು ಜಯಗಳಿಸಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews