Tag: ಕಂಬ

  • ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕೋಳಿ ಕಳ್ಳ – ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ರು

    ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕೋಳಿ ಕಳ್ಳ – ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ರು

    ರಾಯಚೂರು: ದೇವದುರ್ಗ ತಾಲೂಕಿನ ಆಲ್ಕೋಡ ಗ್ರಾಮದಲ್ಲಿ ಕೋಳಿಗಳನ್ನ ಕದಿಯಲು ಬಂದಿದ್ದ ಕಳ್ಳನೊಬ್ಬ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಪಜೀತಿ ಅನುಭವಿಸಿದ್ದಾನೆ. ಕೋಳಿ ಕದಿಯುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕ ಕಳ್ಳನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ.

    ಕೋಳಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಅದರಲ್ಲಿಯೂ ಕದ್ದು ತಿನ್ನುವ ಕೋಳಿಯ ರುಚಿಯೇ ಬೇರೆ ಎಂಬ ಭಾವನೆ ಕೆಲವರಲ್ಲಿದೆ. ಸಿಟಿಗಿಂತಲೂ ಹಳ್ಳಿ ಕಡೆಗಳಲ್ಲಿ ಕೋಳಿಯನ್ನು ಕದ್ದು ಅಡುಗೆ ಮಾಡಿ ತಿನ್ನುವ ಖದೀಮರು ಬಹಳಷ್ಟು ಜನ ಇದ್ದಾರೆ. ಇನ್ನೂ ಕೆಲವು ಖದೀಮರು ಹಣಕ್ಕಾಗಿ ಕೋಳಿಯನ್ನು ಕದ್ದು, ಮಾರಾಟ ಮಾಡುತ್ತಾರೆ. ಸದ್ಯ ಇಂತಹದ್ದೇ ಪ್ರಯತ್ನಕ್ಕೆ ಕೈ ಹಾಕಿದ ವ್ಯಕ್ತಿಗೆ ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿದ್ದಾರೆ.  ಇದನ್ನೂ ಓದಿ: ಶಿವ ಭಕ್ತರ ಮೇಲೆ ಹೂಮಳೆ ಸುರಿಸುತ್ತೀರಿ, ಮುಸ್ಲಿಮರ ಮನೆಗಳಿಗೆ ಬುಲ್ಡೋಜರ್‌ ಬಿಡ್ತೀರಿ: ಯುಪಿ ಸರ್ಕಾರದ ವಿರುದ್ಧ ಓವೈಸಿ ಕಿಡಿ

    ರಾಜಾಸಾಬ್ ಅವರ ಮನೆಯಲ್ಲಿ ಕೋಳಿ ಕಳ್ಳತನ ಮಾಡಿದ್ದ ವ್ಯಕ್ತಿ. ಸುಮಾರು 10 ಕೋಳಿಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಒದೆ ತಿಂದಿದ್ದಾನೆ. ಮೂವರು ಕಳ್ಳರಲ್ಲಿ ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದು ಇನ್ನಿಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕೊಲೆಗೆ ಕೊಲೆ ಪ್ರತಿಕಾರವಲ್ಲ – ಸರ್ಕಾರ ಹೆಣದ ರಾಜಕೀಯ ಬಿಟ್ಟು ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲಿ: ಕಾಂಗ್ರೆಸ್

    Live Tv
    [brid partner=56869869 player=32851 video=960834 autoplay=true]

  • ಕಂಬಕ್ಕೆ ಸ್ಪೈಸ್‌ಜೆಟ್ ವಿಮಾನ ಡಿಕ್ಕಿ – ತಪ್ಪಿದ ಅನಾಹುತ

    ನವದೆಹಲಿ: ಸ್ಪೈಸ್‌ಜೆಟ್ ವಿಮಾನ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ಡಿಕ್ಕಿಯ ಪರಿಣಾಮ ವಿಮಾನದ ರೆಕ್ಕೆ ಹಾಗೂ ಕಂಬಕ್ಕೆ ಹಾನಿಯಾಗಿದೆ.

    ದೆಹಲಿಯಿಂದ ಜಮ್ಮುವಿಗೆ ಸಂಚರಿಸಲಿದ್ದ ವಿಮಾನ ಟರ್ಮಿನಲ್‌ನಿಂದ ರನ್‌ವೇಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಸೋಮವಾರ ಸ್ಪಯಸ್‌ಜೆಟ್ ಏಳು ವಿಮಾನಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. ಅವುಗಳಲ್ಲಿ ಗೋರಖ್‌ಪುರ-ವಾರಣಾಸಿಗೆ ಸಂಚರಿಸಲಿದ್ದ ವಿಮಾನವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾನುವಾರ ಚಾಲನೆ ನೀಡಿದ್ದರು. ಇದನ್ನೂ ಓದಿ: ಚಂಡೀಗಢದ ಮೇಲಿನ ಹಕ್ಕಿಗಾಗಿ ಪಂಜಾಬ್ ವಿಲ್ ಫೈಟ್: ಭಗವಂತ್ ಮಾನ್

    ಗೋರಖ್‌ಪುರ-ವಾರಣಾಸಿ ವಿಮಾನದ ಹೊರತಾಗಿ ಪ್ರಾದೇಶಿಕ ಸಂಪರ್ಕ ಯೋಜನೆಯ ಉಡಾನ್(UDAN) ಅಡಿಯಲ್ಲಿ ಹೈದರಾಬಾದ್-ಪುದುಚೇರಿ-ಹೈದರಾಬಾದ್, ವಾರಣಾಸಿ-ಕಾನ್ಪುರ್-ವಾರಣಾಸಿ ಹಾಗೂ ವಾರಣಾಸಿ-ಪಾಟ್ನಾ ವಿಮಾನಗಳನ್ನು ಪ್ರಾರಂಭಿಸುವುದಾಗಿ ಸ್ಪೈಸ್‌ಜೆಟ್ ಘೋಷಿಸಿತ್ತು.

  • ಮಳೆಯ ಆರ್ಭಟವನ್ನೂ ಲೆಕ್ಕಿಸದೇ ಕಂಬವನ್ನು ಹೊತ್ತೊಯ್ದು ಗ್ರಾಮಕ್ಕೆ ಬೆಳಕು ತಂದ ಗ್ರಾಮಸ್ಥರು!

    ಮಳೆಯ ಆರ್ಭಟವನ್ನೂ ಲೆಕ್ಕಿಸದೇ ಕಂಬವನ್ನು ಹೊತ್ತೊಯ್ದು ಗ್ರಾಮಕ್ಕೆ ಬೆಳಕು ತಂದ ಗ್ರಾಮಸ್ಥರು!

    ಕಾರವಾರ: ಹಳ್ಳದಲ್ಲಿ ಎದೆ ಮಟ್ಟದ ನೀರು ಹರಿಯುತ್ತಿದ್ದರೂ, ಊರಿನ ಕತ್ತಲು ಓಡಿಸಲು ಮಳೆಯ ಆರ್ಭಟವನ್ನೂ ಲೆಕ್ಕಿಸದೇ ಗ್ರಾಮಸ್ಥರು ಜೀವದ ಹಂಗು ತೊರೆದು ತುಂಬಿ ಹರಿಯುತ್ತಿದ್ದ ಹೊಳೆಯ ನೀರಿನಲ್ಲೇ ಕಂಬವನ್ನು ಹೊತ್ತೊಯ್ದು ಗ್ರಾಮಕ್ಕೆ ಬೆಳಕು ತಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನಲ್ಲಿ ನಡೆದಿದೆ.

    ಅಂಕೋಲ ತಾಲೂಕಿನ ಕಟ್ಟಿನಕಲು ಗ್ರಾಮದ ಕೋಟೇಪಾಲ್, ಕುಣಬೇರಕೇರಿ, ಬೇರೂಳ್ಳಿ, ಮತಿನಮತ್ತಿಯ ಸುತ್ತಮುತ್ತಲ ಗ್ರಾಮದಲ್ಲಿ ಕಳೆದ 8 ದಿನಗಳಿಂದ ಮಳೆಗೆ ಕಂಬದ ಮೇಲೆ ಮರ ಉರುಳಿ ವಿದ್ಯುತ್ ವ್ಯತ್ಯಯವಾಗಿತ್ತು. ಹೆಸ್ಕಾಂಗೆ ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಮಾತ್ರ ಸ್ಪಂದಿಸಲಿಲ್ಲ.

    8 ದಿನಗಳಿಂದ ಕತ್ತಲಲ್ಲಿದ್ದ ಜನರು ಹೆಸ್ಕಾಂ ಅಧಿಕಾರಿಗಳ ಧೋರಣೆಗೆ ಬೇಸತ್ತು ಊರ ಜನರೇ ಮುರಿದು ಹೋದ ಕಂಬಗಳನ್ನು ಹೊಸದಾಗಿ ಹಾಕುವ ಕೆಲಸಕ್ಕೆ ಕೈ ಹಾಕಿದ್ದಾರೆ. ರಭಸವಾಗಿ ಎದೆ ಮಟ್ಟಕ್ಕೆ ಹರಿಯುತಿದ್ದ ಹಳ್ಳದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 63 ರಿಂದ ಮೂರು ಕಿ.ಮೀ ದೂರವಿರುವ ಹಿರಿಹಳ್ಳದ ಮೂಲಕ ಕಂಬಗಳನ್ನು ತಮ್ಮ ಗ್ರಾಮಕ್ಕೆ ಹೊತ್ತೂಯ್ದಿದಾರೆ.

    ಕಂಬಗಳು ಮುರಿದ ಜಾಗದಲ್ಲಿ ನೆಟ್ಟು ತಮ್ಮ ಗ್ರಾಮಗಳಿಗೆ ಬೆಳಕು ತಂದಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಈ ಗ್ರಾಮ ಹಿರಿಹಳ್ಳದಿಂದಾಗಿ ದ್ವೀಪದಂತಾಗುತ್ತದೆ. ಹೀಗಾಗಿ ಈ ಗ್ರಾಮಕ್ಕೆ ಹಲವು ವರ್ಷಗಳಿಂದ ಸೇತುವೆ ಇಲ್ಲದೇ ಹಳ್ಳದಲ್ಲೇ ನಡೆದುಕೊಂಡು ಹೋಗುವ ಸ್ಥಿತಿಯಿದ್ದು ತಮಗೊಂದು ಸೇತುವೆಯಾಗಬೇಕೆಂಬುದು ಊರಿನ ಜನರು ಬಹಳ ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಬೇಡಿಕೆ ಇನ್ನೂ ಈಡೇರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿದ್ಯುತ್ ಕಂಬ ಸಾಗಣೆ ವೇಳೆ ಟ್ರ್ಯಾಕ್ಟರ್ ಪಲ್ಟಿ – ನಾಲ್ವರ ದುರ್ಮರಣ

    ವಿದ್ಯುತ್ ಕಂಬ ಸಾಗಣೆ ವೇಳೆ ಟ್ರ್ಯಾಕ್ಟರ್ ಪಲ್ಟಿ – ನಾಲ್ವರ ದುರ್ಮರಣ

    ರಾಯಚೂರು: ವಿದ್ಯುತ್ ಕಂಬ ಸಾಗಣೆ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿಂಧನೂರಿನ ಶ್ರೀಪುರಂ ಜಂಕ್ಷನ್‍ನಲ್ಲಿ ನಡೆದಿದೆ.

    ನಾಗರಾಜ್ (35), ರಮೇಶ್(25), ಶರಣಪ್ಪ(19) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅಪಘಾತದಲ್ಲಿ ಗಾಯಗೊಂಡಿದ್ದ ಮಲ್ಲಿಕಾರ್ಜನ್ (30) ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಸಿಂಧನೂರಿನ ಸರ್ಕಾರಿ ಆಸ್ಪತೆಗೆ ದಾಖಲಿಸಲಾಗಿದೆ.

    ವಿದ್ಯುತ್ ಕಂಬ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನ ಟ್ರಾಲಿ ಪಲ್ಟಿ ಹೊಡೆದು ಕಾರಣ ವಿದ್ಯುತ್ ಕಂಬಗಳು ಕಾರ್ಮಿಕರ ಮೇಲೆ ಬಿದ್ದು ಈ ಅನಾಹುತ ಸಂಭವಿಸಿದೆ. ಮೃತರು ಕೊಪ್ಪಳದ ಸುಳೆಕಲ್ ಮೂಲದವರು ಎನ್ನಲಾಗಿದ್ದು. ಸಾಸಲಮರಿ ಕ್ಯಾಂಪ್‍ನಿಂದ ಸಿಂಧನೂರು ಮಧ್ಯೆ ವಿದ್ಯುತ್ ಕಂಬ ಅಳವಡಿಕೆ ಕಾರ್ಯಕ್ಕೆ ಸಾಗಾಣೆ ಮಾಡಲಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸಿಂಧನೂರು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.