Tag: ಕಂಪ್ಲೆಂಟ್

  • ನಟಿ ತ್ರಿಷಾಗೆ ಅವಹೇಳನ ಪ್ರಕರಣ : ನಟನ ವಿರುದ್ಧ ಕೇಸ್ ದಾಖಲು

    ನಟಿ ತ್ರಿಷಾಗೆ ಅವಹೇಳನ ಪ್ರಕರಣ : ನಟನ ವಿರುದ್ಧ ಕೇಸ್ ದಾಖಲು

    ಮಿಳು (Tamil) ಚಿತ್ರೋದ್ಯಮ ಖ್ಯಾತ ವಿಲನ್ ಮನ್ಸೂರ್ ಅಲಿ ಖಾನ್ (Mansoor Ali Khan), ನಿಜ ಜೀವನದಲ್ಲೂ ವಿಲನ್ ಆಗಿದ್ದಾರೆ. ಲಿಯೋ ಸಿನಿಮಾದಲ್ಲಿ ನಾಯಕಿ ತ್ರಿಷಾ ಅವರನ್ನು ರೇಪ್ ಮಾಡುವಂತಹ ಸನ್ನಿವೇಶ ಇದೆ ಅಂದುಕೊಂಡಿದೆ. ಆದರೆ, ಇರಲಿಲ್ಲ. ಇದ್ದರೆ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬೆಡ್ ಮೇಲೆ ಬೀಸಾಕುತ್ತಿದ್ದೆ. ಈ ಹಿಂದೆ ಖುಷ್ಬೂ ಸೇರಿದಂತೆ ಹಲವರನ್ನು ಹಾಗೆಯೇ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದರು.

    ತ್ರಿಷಾ (Trisha) ಬಗೆಗಿನ ಮತ್ತು ಒಟ್ಟಾರೆ ನಟಿಯರ ಬಗ್ಗೆ ಆಡಿದ್ದ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತ್ರಿಷಾ ಸೇರಿದಂತೆ ಹಲವರು ನಟನೆ ನಡೆಯನ್ನು ಖಂಡಿಸಿದ್ದರು. ನಟನ ವ್ಯಕ್ತಿತ್ವವನ್ನು ಅವನ ಮಾತು ತೋರಿಸುತ್ತಿದೆ ಎಂದು ರಿಯ್ಯಾಕ್ಟ್ ಮಾಡಿದ್ದರು. ಜೊತೆಗೆ ಲಿಯೋ ಸಿನಿಮಾದ ನಿರ್ದೇಶಕರು ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದರು. ಮತ್ತೆ ಆತನೊಂದಿಗೆ ನಾನು ನಟಿಸುವುದಿಲ್ಲ ಎಂದು ತ್ರಿಷಾ ಹೇಳಿಕೊಂಡಿದ್ದರು.

    ಆಕ್ರೋಶ ಭುಗಿಲುಗೊಂಡ ಬೆನ್ನಲ್ಲೇ ಖುಷ್ಬೂ (Khushboo) ಕೂಡ ಘಟನೆಯ ಬಗ್ಗೆ ಮಾತನಾಡಿದ್ದರು. ಮನ್ಸೂರ್ ಅಲಿ ಖಾನ್ ನಂತಹ ಕೊಳಕು ಮನಸ್ಥಿತಿಯವರಿಗೆ ಕಾನೂನು ಮೂಲಕ ಪಾಠ ಕಲಿಸಬೇಕು. ಇಲ್ಲದಿದ್ದರೆ ಇಂತಹ ಗಂಡಸರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಮಾತನಾಡಿದ್ದರು. ಮತ್ತು ತಾವು ಕಾನೂನು ಮೂಲಕವೇ ಉತ್ತರಿಸುವುದಾಗಿ ತಿಳಿಸಿದ್ದರು.

     

    ಇಷ್ಟೆಲ್ಲ ನಡೆದರೂ ಮನ್ಸೂರ್ ಅಲಿ ಖಾನ್ ಮಾತ್ರ ಕ್ಷಮೆ ಕೇಳುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ನನ್ನ ಮಾತು ತಿರುಚಲಾಗಿದೆ ಎಂದು ಮಾತನಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಮಧ್ಯ ಪ್ರವೇಶಿಸಿತ್ತು. ದೂರು ದಾಖಲಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಿತ್ತು. ಅದರಂತೆ ತಮಿಳು ನಾಡು ಪೊಲೀಸರು ನಟನ ವಿರುದ್ಧ ದೂರು  ((Complaint) ದಾಖಲಿಸಿಕೊಂಡಿದ್ದಾರೆ.

  • ವಿವಾದಿತ ತಾರೆ ರಾಕಿ ಸಾವಂತ್ ವಿರುದ್ಧ ಎಫ್‌ಐಆರ್‌ ದಾಖಲು

    ವಿವಾದಿತ ತಾರೆ ರಾಕಿ ಸಾವಂತ್ ವಿರುದ್ಧ ಎಫ್‌ಐಆರ್‌ ದಾಖಲು

    ಬುಡಕಟ್ಟು ಸಮುದಾಯದ ವೇಷ ಭೂಷಣ ತೊಟ್ಟು ಅಪಹಾಸ್ಯ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಬಾಲಿವುಡ್ ನ ವಿವಾದಿತ ತಾರೆ ರಾಕಿ ಸಾವಂತ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಸದಾ ವಿವಾದಿಂದಲೇ ಸುದ್ದಿ ಆಗುವ ಈ ನಟಿ ವಿರುದ್ಧ ರಾಂಚಿಯಲ್ಲಿ ದೂರನ್ನು ದಾಖಲಿಸಲಾಗಿದೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ವಾರಕ್ಕೊಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುವ ರಾಕಿಗೆ ಈ ಬಾರಿ ಸರಿಯಾಗಿ ಬುದ್ಧಿ ಕಲಿಸಲೇಬೇಕೆಂದು ನಿರ್ಧರಿಸಿರುವ ಅಜಯ್ ಠಾಕ್ರೆ ಎಂಬುವವರು ಈ ದೂರು ನೀಡಿದ್ದು, ದೂರಿನಲ್ಲಿ ‘ರಾಕಿ ಬುಡಕಟ್ಟು ವೇಷಭೂಷಣಕ್ಕೆ ಅಪಮಾನ ಮಾಡಿದ್ದಾರೆ. ಅದನ್ನೂ ಅವರು ಅರೆನಗ್ನ ರೀತಿಯಲ್ಲಿ ಹಾಕಿಕೊಂಡಿದ್ದಾರೆ. ಇದರಿಂದ ನಮ್ಮ ಸಮುದಾಯದ ಮಹಿಳೆಯರಿಗೆ ಅವಮಾನ ಆಗಿದೆ. ನಾವು ಗೌರವಿಸುವ ಸಂಪ್ರದಾಯಕ್ಕೆ ಧಕ್ಕೆ ತರುವಂತಹ ಕೆಲಸವನ್ನು ರಾಕಿ ಮಾಡಿದ್ದಾರೆ. ಹಾಗಾಗಿ ಸೂಕ್ತ ಕ್ರಮ ತಗೆದುಕೊಳ್ಳಬೇಕೆಂದು’ ದೂರಿನಲ್ಲಿ ಬರೆಯಲಾಗಿದೆ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ಈ ಹಿಂದೆ ರಾಕಿ ಸಾವಂತ್ ಬುಡಕಟ್ಟು ಮಹಿಳೆಯರ ವೇಷಭೂಷಣ ಧರಿಸಿ ವಿಡಿಯೋ ಮಾಡಿದ್ದರು ಅದನ್ನು ಇನ್ಸ್ಟಾದಲ್ಲಿ ಹಾಕಿದ್ದರು. ಈ ವಿಡಿಯೋನೇ ಅಜಯ್ ಠಾಕ್ರೆ ಅವರ ಕಂಗೆಣ್ಣಿಗೆ ಗುರಿ ಮಾಡಿಸಿದೆ. ಎಫ್.ಐ.ಆರ್ ದಾಖಲಿಸುವಂತೆ ಮಾಡಿದೆ.