Tag: ಕಂಪ್ಲಿ ಶಾಸಕ

  • ಶಾಸಕ ಕಂಪ್ಲಿ ಗಣೇಶ್ ಸಮಯ ಪ್ರಜ್ಞೆಯಿಂದ ಬದುಕಿತು ಬಡಜೀವ

    ಶಾಸಕ ಕಂಪ್ಲಿ ಗಣೇಶ್ ಸಮಯ ಪ್ರಜ್ಞೆಯಿಂದ ಬದುಕಿತು ಬಡಜೀವ

    ಬಳ್ಳಾರಿ: ಹೃದಯಾಘಾತದಿಂದ ರಸ್ತೆ ಪಕ್ಕದಲ್ಲಿ ಬಿದ್ದು ಹೊರಳಾಡುತ್ತಿದ್ದ ವ್ಯಕ್ತಿಯನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸುವ ಮೂಲಕ ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಶಾಸಕ ಸಮಯ ಪ್ರಜ್ಞೆ ಮೆರೆದಿದ್ದಾರೆ.

    ಕೆಲಸದ ನಿಮಿತ್ತವಾಗಿ ಕಂಪ್ಲಿಯಿಂದ ಕರುಗೋಡ ಕಡೆಗೆ ಪ್ರಯಾಣ ಮಾಡುತ್ತಿದ್ದಾಗ, ಕುರುಗೋಡಿನ ಅಗ್ನಿಶಾಮಕ ದಳ ಕಛೇರಿ ಬಳಿ ಪಕ್ಕಿರಪ್ಪ ಎಂಬ ವ್ಯಕ್ತಿ, ಹೃದಯಾಘಾತವಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದ್ದರು. ಅದನ್ನು ಗಮನಿಸಿದ ಶಾಸಕ ಗಣೇಶ್ ಕೂಡಲೇ ಅಂಬುಲೆನ್ಸ್ ಕರೆಸಿ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಪಕ್ಕಿರಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಕ್ಕಿರಪ್ಪ ಕುರಗೋಡ ನಿವಾಸಿಯಾ. ಸ್ಥಳೀಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ಇವರು, ಸಂಜೆ ವಾಕಿಂಗ್ ಎಂದು ಬಂದಾಗ ಹೃದಯಾಘಾತವಾಗಿದೆ.

  • ಆನಂದ್ ಸಿಂಗ್ ಮೇಲೆ ಹಲ್ಲೆ- ಶಾಸಕ ಗಣೇಶ್ ಇನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ ಏಕೆ..?

    ಆನಂದ್ ಸಿಂಗ್ ಮೇಲೆ ಹಲ್ಲೆ- ಶಾಸಕ ಗಣೇಶ್ ಇನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ ಏಕೆ..?

    ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಗಣೇಶ್ ಅವರಿಗೆ ಜೈಲು ಶಿಕ್ಷೆ ತಪ್ಪಲಿಲ್ಲ.

    ಪರಪ್ಪನ ಅಗ್ರಹಾರದಲ್ಲಿರೋ ಕಂಪ್ಲಿ ಗಣೇಶ್, ಸುಲಭವಾಗಿ ಜಾಮೀನು ಸಿಗಬಹುದಾದ್ರೂ ಜಾಮೀನಿಗೆ ಅರ್ಜಿ ಸಲ್ಲಿಕೆಯಾಗಿಲ್ಲ. ಯಾಕಂದ್ರೆ ಈ ಜಾಮೀನು ಅರ್ಜಿಯ ಹಿಂದೆ ಕಾಂಗ್ರೆಸ್ ಬಿಜೆಪಿ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

    ಕಂಪ್ಲಿ ಗಣೇಶ್ ಗೆ ಜಾಮೀನು ಕೊಡಿಸಲು ಬಿಜೆಪಿ ಅವರು ವಕೀಲರ ಸಂಪರ್ಕ ಮಾಡಿದ್ದಾರೆ. ಆದ್ರೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬೇಡಿ ಎಂದು ಕಾಂಗ್ರೆಸ್ ನಾಯಕರು ವಕೀಲರ ಮೇಲೆ ಒತ್ತಡ ಹೇರಿದ್ದಾರೆ. ಒಂದು ವೇಳೆ ಜಾಮೀನು ಸಿಕ್ಕಿಬಿಟ್ರೆ ಗಣೇಶ್ ಬಿಜೆಪಿ ಸೇರೋ ಭೀತಿಯಿಂದ ಕಾಂಗ್ರೆಸ್ ನಾಯಕರು ಈ ರೀತಿ ಹೇಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಲೋಕಸಭಾ ಎಲೆಕ್ಷನ್ ನಲ್ಲಿ ಬಳ್ಳಾರಿಯಲ್ಲಿ ಹಿನ್ನಡೆ ಭೀತಿ ಎದುರಾಗಿದ್ದು, ಹೀಗಾಗಿ ಜಾಮೀನಿಗಾಗಿ ಅರ್ಜಿ ಸಲ್ಲಿಸಬೇಡಿ ಎಂದು ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿದ್ದಾರೆ. ಇಬ್ಬರ ಜಗಳದಿಂದಾಗಿ ಗಣೇಶ್ ಜೈಲಿನಲ್ಲೇ ದಿನ ದೂಡುತ್ತಿದ್ದಾರೆ.

    ಒಂದೇ ದಿನದಲ್ಲಿ ಜಾಮೀನು ಸಿಗೋ ನಿರೀಕ್ಷೆಯಲ್ಲಿದ್ದ ಕಂಪ್ಲಿ ಗಣೇಶ್, ಈಗ ಉಭಯ ಪಕ್ಷಗಳ ಜಗಳದಲ್ಲಿ ಸಿಲುಕಿದ್ದಾರೆ. ಲೋಕಸಭಾ ಚುನಾವಣಾ ಮುಗಿಯುವವರೆಗೂ ಜೈಲಿನಲ್ಲಿ ಇರಬೇಕಾದ ಪರಿಸ್ಥತಿ ಎದುರಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇದು ಒಂದು ಸೈಡೆಡ್ ವಿಷಯ, ಇದೂವರೆಗೂ ನಮ್ಮಿಂದ ಯಾವುದೇ ಹೇಳಿಕೆ ಪಡೆದಿಲ್ಲ – ಶಾಸಕ ಗಣೇಶ್ ಸಹೋದರ

    ಇದು ಒಂದು ಸೈಡೆಡ್ ವಿಷಯ, ಇದೂವರೆಗೂ ನಮ್ಮಿಂದ ಯಾವುದೇ ಹೇಳಿಕೆ ಪಡೆದಿಲ್ಲ – ಶಾಸಕ ಗಣೇಶ್ ಸಹೋದರ

    ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ 1 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕರ ಗಣೇಶ್ ಅವರನ್ನು ಬಿಡದಿ ಪೊಲೀಸರು ಗುಜರಾತ್‍ನ ಸೋಮನಾಥ ದೇವಾಲಯದ ಬಳಿ ಬಂಧಿಸಿದ್ದಾರೆ. ಈ ಬಗ್ಗೆ ಗಣೇಶ್ ಸಹೋದರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ಸತ್ಯ ಅಸತ್ಯತೆಯ ಬಗ್ಗೆ ಇನ್ನೂ ಏನೂ ಹೊರಗಡೆ ಬಂದಿಲ್ಲ. ಇದು ಕೇವಲ ಒಂದು ಸೈಡ್ ಸ್ಟೋರಿಯಾಗಿದೆ. ನಮ್ಮ ಕಡೆಯಿಂದ ಯಾವುದೇ ಹೇಳಿಕೆ ಪಡೆದುಕೊಂಡಿಲ್ಲ. ಗಣೇಶ್ ಕೂಡ ಇನ್ನೂ ಏನೂ ಹೇಳಿಲ್ಲ ಎಂದು ಹೇಳಿದ್ದಾರೆ.

    ಆತ ಕಾನೂನು ರೀತಿಯಲ್ಲಿ ಗೌರವ ಕೊಡಲೇ ಬೇಕು. ಆಗಿರುವಂತಹ ಸತ್ಯವನ್ನು ಹೇಳಿಕೊಳ್ಳಲು ನಮಗೆ ಇಂದಿನವರೆಗೂ ಅವಕಾಶ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬರೋಬ್ಬರಿ ಒಂದು ತಿಂಗ್ಳ ಬಳಿಕ ಶಾಸಕ ಗಣೇಶ್ ಸಿಕ್ಕಿಬಿದ್ದಿದ್ದು ಹೇಗೆ?

    ಯಾವುದೇ ಒಂದು ಘಟನೆಯ ಬೇಕಂದ್ರೆ ಅದು ಒಬ್ಬರಿಂದ ಸಾಧ್ಯವಿಲ್ಲ. ಆನಂದ್ ಸಿಂಗ್ ಅವರು ವಿಜಯನಗರ ಕ್ಷೇತ್ರಕ್ಕೆ 3 ಬಾರಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರು ಹಿರಿಯರು. ಅವರು ಆಗಿರುವಂತಹ ಘಟನೆಯ ಬಗ್ಗೆ ಹೇಳಿದ್ರೆ ರೆಸಾರ್ಟ್ ನಲ್ಲಿ ಇಬ್ಬರೂ ಮದ್ಯಪಾನ ಸೇವಿಸಿದ್ದಾರೆ. ತಲೆಗೆ ಏಟು ಆಗಿರುವಂತದ್ದು ಕೂಡ ನಿಜ. ಆದ್ರೆ ಅಂತಹ ಓರ್ವ ದೊಡ್ಡ ವ್ಯಕ್ತಿಗೆ ಗಣೇಶ್ ಹೊಡೆದಿದ್ದಾರೆ ಅಂದ್ರೆ ಅದಕ್ಕೆ ಕಾರಣ ಇದ್ದೇ ಇರುತ್ತದೆ ಎಂದು ಹೇಳಿದ್ರು. ಇದನ್ನೂ ಓದಿ: ಶಾಸಕ ಗಣೇಶ್ ರನ್ನು ಬೆಂಗ್ಳೂರಿಗೆ ಕರೆತಂದ ಪೊಲೀಸರು!

    ಮನುಷ್ಯನ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ಮಾತು ಹೇಳಿದ್ರೆ ಇದ್ದೂ ಸತ್ತಂಗೆ ಅಲ್ವ. ಆ ರೀತಿ ಅವರು ಕೂಡ ಮಾತನಾಡಬಾರದು. ಅವರೊಬ್ಬರು ಹಿರಿಯರು, ಗೌರವ ಸ್ಥಾನದಲ್ಲಿ ಇರುವವರು. ಅವರು ಯಾಕೆ ಆ ರೀತಿ ಮಾತಾಡಬೇಕು ಎಂದು ಪ್ರಶ್ನಿಸಿದ್ರು.

    ಕಂಪ್ಲಿ ಕ್ಷೇತ್ರದ ಜನ ಗಣೇಶ್ ಅವರಿಗೆ ನ್ಯಾಯ ಕೊಟ್ಟಿದ್ದಾರೆ. ಅಧಿಕಾರ ಕೊಟ್ಟಿದ್ದಾರೆ. ಆದ್ರೆ ಗಣೇಶ್ ಅವರು ಕ್ಷೇತ್ರದ ಜನತೆಗೆ ಮೋಸ ಮಾಡಿಲ್ಲ. ರೆಸಾರ್ಟ್ ನಲ್ಲಿ ಆಗಿರುವುದು ವೈಯಕ್ತಿಕ ವಿಚಾರ. ಆನಂದ್ ಸಿಂಗ್ ಹಾಗೂ ಗಣೇಶ್ ಜಗಳಕ್ಕೆ ಕಾರಣ ಭೀಮಾ ನಾಯ್ಕ್. ಆದ್ರೆ ಇಲ್ಲಿ ಅವರ ಬಗ್ಗೆ ಒಂದು ಚಕಾರವೇ ಎತ್ತದಿರುವುದು ಬೇಸರದ ಸಂಗತಿಯಾಗಿದೆ ಎಂದರು.

    https://www.youtube.com/watch?v=SgEiX7OC5ak

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಿನಕ್ಕೊಂದು ಸಿಮ್ ಕಾರ್ಡ್ ಬಳಕೆ – ಮುಂಬೈನಿಂದ ಗೋವಾಗೆ ಓಡಿಹೋದ ಕಂಪ್ಲಿ ಎಂಎಲ್‍ಎ

    ದಿನಕ್ಕೊಂದು ಸಿಮ್ ಕಾರ್ಡ್ ಬಳಕೆ – ಮುಂಬೈನಿಂದ ಗೋವಾಗೆ ಓಡಿಹೋದ ಕಂಪ್ಲಿ ಎಂಎಲ್‍ಎ

    ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಅವರು ದಿನಕ್ಕೊಂದು ಸಿಮ್ ಕಾರ್ಡ್ ಬಳಕೆ ಮಾಡ್ತಿದ್ದಾರೆ ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ದಿನಕ್ಕೊಂದು ಸಿಮ್ ಕಾರ್ಡ್ ಬಳಕೆ ಮಾಡ್ತಿರೋ ರೌಡಿ ಗಣೇಶ್, ಪೊಲೀಸರು ಫೋನ್ ಟ್ರ್ಯಾಪ್ ಮಾಡುವಷ್ಟರಲ್ಲಿ ಸ್ವಿಚ್ಛ್ ಆಫ್ ಮಾಡುತ್ತಾರಂತೆ. ಅಲ್ಲದೇ ಪದೇ ಪದೇ ಫೋನ್ ನಂಬರ್ ಬದಲಿಸ್ತಿದ್ದಾರಂತೆ. ಈ ಮೂಲಕ ಪೊಲೀಸರಿಗೆ ಸಿಗದಂತೆ ಗಣೇಶ್ ಓಡಾಡುತ್ತಿದ್ದಾರೆ.

    ಮುಂಬೈನ ಖಾಸಗಿ ಹೊಟೇಲ್ ನಲ್ಲಿದ್ದ ಗಣೇಶ್ ಅತೃಪ್ತ ಕಾಂಗ್ರೆಸ್ ಶಾಸಕರ ಜೊತೆ ಸಂಪರ್ಕ ಹೊಂದಿದ್ದರು. ಮುಂಬೈನ ಹೋಟೆಲ್ ನಲ್ಲಿ ಇದ್ದ ಬಗ್ಗೆ ಖಚಿತ ಮಾಹಿತಿ ಪಡೆದ ರಾಮನಗರ ಪೊಲೀಸರು ಮುಂಬೈ ಪೊಲೀಸರ ಸಹಾಯದಿಂದ ಗಣೇಶ್ ಬಂಧನಕ್ಕೆ ಮುಂದಾಗಿದ್ರು. ಆದ್ರೆ ಈ ವೇಳೆ ಗಣೇಶ್ ಹೋಟೆಲ್ ನಿಂದ ಗೋವಾಕ್ಕೆ ಎಸ್ಕೇಪ್ ಆಗಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು ಗೋವಾದಲ್ಲಿ ಶೋಧಕಾರ್ಯ ನಡೆಸಿದ್ದಾರೆ.

    ಒಂದೆಡೆ ಕೈ ನಾಯಕರಿಂದ ರಾಜೀ ಸಂಧಾನದ ಪ್ರಯತ್ನ ನಡೆಯುತ್ತಿದೆ. ಮತ್ತೊಂದೆಡೆ ಕಮಲ ನಾಯಕರು ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸೋಮವಾರ ನಿರೀಕ್ಷಣಾ ಜಾಮೀನಿಗೆ ಗಣೇಶ್ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ ಎಂಬುದಾಗಿ ತಿಳಿದುಬಂದಿದೆ.

    ಜನವರಿ 20 ರಂದು ಈಗಲ್ ಟನ್ ರೆಸಾರ್ಟ್ ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಶಾಸಕ ಗಣೇಶ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=zFS05gjT06E

    https://www.youtube.com/watch?v=G6pvtwbmf3g

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಣ್ಮರೆಯಾಗಿದ್ದ ಕಂಪ್ಲಿ ಶಾಸಕ ಹೊಸಪೇಟೆಯಲ್ಲಿ ದಿಢೀರ್ ಪ್ರತ್ಯಕ್ಷ

    ಕಣ್ಮರೆಯಾಗಿದ್ದ ಕಂಪ್ಲಿ ಶಾಸಕ ಹೊಸಪೇಟೆಯಲ್ಲಿ ದಿಢೀರ್ ಪ್ರತ್ಯಕ್ಷ

    ಬಳ್ಳಾರಿ: ರಾಜ್ಯದಲ್ಲಿ ಆಪರೇಷನ್ ಕಮಲದ ವದಂತಿ ನಡುವೆ ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಹೊಸಪೇಟೆಯಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದಾರೆ.

    ಆಪರೇಷನ್ ಕಮಲದ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ನಾನು ಮುಂಬೈಗೂ ಹೋಗಿಲ್ಲ. ಬೆಂಗಳೂರಿಗೂ ಹೋಗಿಲ್ಲ. ನನ್ನ ಇಬ್ಬರು ಮಕ್ಕಳು ಚಿಕ್ಕಮಗಳೂರಿನಲ್ಲಿ ಓದುತ್ತಿದ್ದಾರೆ. ಹೀಗಾಗಿ ಮಕ್ಕಳನ್ನು ನೋಡಲು ಹೋಗಿ, ಎರಡು ದಿನಗಳು ನಾನು ಅಲ್ಲಿಯೇ ಇದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಎಲ್ಲಿಯೂ ಹೋಗಲ್ಲ. ಕಂಪ್ಲಿ ಕ್ಷೇತ್ರ ಅಭಿವೃದ್ಧಿಯಾಗಬೇಕು ಎನ್ನುವುದು ನನ್ನ ಬೇಡಿಕೆ ಅಷ್ಟೇ. ಅತೃಪ್ತರ ಬಣದಲ್ಲಿ ನಾನು ಕಾಣಿಸಿಕೊಂಡಿಲ್ಲ. ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತಿವೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ನಾಗೇಂದ್ರ ಅವರ ಮನವೊಲಿಸುಷ್ಟು ನಾನು ದೊಡ್ಡವನಲ್ಲ ಎಂದು ಹೇಳಿದರು.

    ನಾನು ಎರಡು ದಿನ ಚಿಕ್ಕಮಗಳೂರಿಗೆ ಹೋಗಿದ್ದಕ್ಕೆ ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳು ಬಿಂಬಿಸಿದವು. ಇದರಿಂದಾಗಿ ಕ್ಷೇತ್ರದ ಜನರು ನನ್ನ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಮುಂಬೈನಲ್ಲಿರುವ ಶಾಸಕರ ಬಗ್ಗೆ ಈಗಾಗಲೇ ಮಾಹಿತಿ ಸಿಕ್ಕಿದೆ. ಈ ಹಿಂದೆ ಹಣ ಪಡೆದು ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಕುರಿತು ನನಗೆ ಗೊತ್ತಿದೆ. ನನ್ನ ಉದ್ದೇಶ ಹಾಗೂ ಗುರಿ ಕೇವಲ ಕ್ಷೇತ್ರದ ಅಭಿವೃದ್ಧಿ ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv