Tag: ಕಂಪ್ಲಿ ಗಣೇಶ್

  • ‘ಕುಡಿದ ಮತ್ತಲ್ಲಿ ಹೊಡೆದಾಟ’- ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ

    ‘ಕುಡಿದ ಮತ್ತಲ್ಲಿ ಹೊಡೆದಾಟ’- ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ

    ಬೆಂಗಳೂರು: ಬಿಡದಿ ರೆಸಾರ್ಟಿನಲ್ಲಿ ಬಾಟಲಿಯಿಂದ ಬಡಿದಾಡಿಕೊಂಡಿದ್ದ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ಪ್ರಕರಣದ ದೋಷಾರೋಪ ಪಟ್ಟಿಯನ್ನು ಬಿಡದಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

    ಗಲಾಟೆ ಮಾಡುವ ಸಂದರ್ಭದಲ್ಲಿ ಇಬ್ಬರೂ ಕೂಡ ಮದ್ಯಪಾನ ಮಾಡಿದ್ದರು. ಅಲ್ಲದೆ ಮಾತಿನ ಚಕಮಕಿಯಿಂದ ಈ ಗಲಾಟೆ ಪ್ರಾರಂಭವಾಯಿತು. ಗಲಾಟೆಗೂ ಮುನ್ನ ಯಾವುದೇ ಸಂಚು ಮಾಡಿದ್ದಾಗಲಿ, ಹಲ್ಲೆ ಮಾಡುವ ಉದ್ದೇಶವಾಗಲಿ ಇರಲಿಲ್ಲ. ತಕ್ಷಣ ಪ್ರಚೋದನೆಯಿಂದ ಈ ಗಲಾಟೆ ನಡೆದಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.

    ದೋಷಾರೋಪ ಪಟ್ಟಿಯಲ್ಲಿ 41 ಸಾಕ್ಷ್ಯಗಳನ್ನು ಪರಿಗಣಿಸಿರುವ ಪೊಲೀಸರು ಆ ಸಂದರ್ಭ ಇಬ್ಬರ ಆರೋಗ್ಯ ವರದಿಗಳನ್ನು ಕೂಡ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದ್ದು, ಘಟನಾ ಸಂದರ್ಭದಲ್ಲಿ ಇದ್ದ ಪ್ರತ್ಯಕ್ಷದರ್ಶಿಗಳನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗಿದೆ.

    ಎನಿದು ಪ್ರಕರಣ?
    ಈ ವರ್ಷದ ಜನವರಿ 19ರ ರಾತ್ರಿ ಈಗಲ್ ಟನ್ ರೆಸಾರ್ಟಿನಲ್ಲಿ ಕಂಪ್ಲಿ ಗಣೇಶ್ ಕುಡಿದು ಗಲಾಟೆ ನಡೆಸಿ ಶಾಸಕ ಆನಂದ್ ಸಿಂಗ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದರು. ಹಲ್ಲೆ ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.

    ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆಗೈದ ಶಾಸಕ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದ್ದು, ಈಗ ಪೊಲೀಸರು ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

  • ಜಗಳ ಆಡಿರೋದು ಕೆಟ್ಟ ಗಳಿಗೆ – ಆನಂದ್ ಸಿಂಗ್ ಹೋರಾಟಕ್ಕೆ ಕಂಪ್ಲಿ ಗಣೇಶ್ ಸಾಥ್

    ಜಗಳ ಆಡಿರೋದು ಕೆಟ್ಟ ಗಳಿಗೆ – ಆನಂದ್ ಸಿಂಗ್ ಹೋರಾಟಕ್ಕೆ ಕಂಪ್ಲಿ ಗಣೇಶ್ ಸಾಥ್

    ಬಳ್ಳಾರಿ: ನಾವು ಜಗಳ ಆಡಿರೋದು ಒಂದು ಕೆಟ್ಟ ಗಳಿಗೆ ಆನಂದ್ ಸಿಂಗ್ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೊಸಪೇಟೆಯನ್ನು ಹೊಸ ಜಿಲ್ಲೆಯಾಗಿ ಮಾಡಬೇಕು ಎಂದು ಹೊರಟಿರುವ ಅನರ್ಹ ಶಾಸಕ ಆನಂದ್ ಸಿಂಗ್‍ಗೆ ಬೆಂಬಲ ನೀಡುವುದಾಗಿ ಹೇಳಿದರು. ಇದರ ಜೊತೆಗೆ ನಾವು ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಕಂಪ್ಲಿ ಕೂಡ ಹೊಸಪೇಟೆಗೆ ಸೇರಿಸಲು ಮನವಿ ಮಾಡುತ್ತೆವೆ. ಹೊಸಪೇಟೆ ಜಿಲ್ಲೆಯಾದರೇ ಕಂಪ್ಲಿ ಹೊಸಪೇಟೆ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳುವ ಮೂಲಕ ಆನಂದ್ ಸಿಂಗ್ ನಿಯೋಗದಲ್ಲಿ ನಾನು ಕೂಡ ಇರುತ್ತೇನೆ ಎಂದು ಹೇಳಿದರು. ಇಂದು ಅನಂದ್ ಸಿಂಗ್ ನೇತೃತ್ವದ ನಿಯೋಗ ಸಿಎಂ ಬಿಎಸ್‍ವೈ ಅವರನ್ನು ಭೇಟಿ ಹೊಸಪೇಟೆಯನ್ನು ಜಿಲ್ಲೆ ಮಾಡಲು ಮನವಿ ಸಲ್ಲಿಸಲಿದ್ದಾರೆ.

  • ಕಷ್ಟ ಬಂದ್ರೂ ಕಾಂಗ್ರೆಸ್ಸಿನಲ್ಲೇ ಇರ್ತೀನಿ: ಕಂಪ್ಲಿ ಗಣೇಶ್

    ಕಷ್ಟ ಬಂದ್ರೂ ಕಾಂಗ್ರೆಸ್ಸಿನಲ್ಲೇ ಇರ್ತೀನಿ: ಕಂಪ್ಲಿ ಗಣೇಶ್

    ಬಳ್ಳಾರಿ: ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದುಕೊಂಡು ಗೆದ್ದು ಶಾಸಕನಾಗಿದ್ದೇನೆ. ಹೀಗಾಗಿ ಕಷ್ಟ ಬಂದರೂ ಕಾಂಗ್ರೆಸ್ಸಿನಲ್ಲಿಯೇ ಇರುತ್ತೇನೆ ಎಂದು ಕಂಪ್ಲಿ ಗಣೇಶ್ ತಿಳಿಸಿದ್ದಾರೆ.

    ಬಳ್ಳಾರಿಯಲ್ಲಿ ಮಾತನಾಡಿದ ಕಂಪ್ಲಿ ಗಣೇಶ್, ನಾವು ಕಾಂಗ್ರೆಸ್ ಪಕ್ಷದಲ್ಲಿ ಇರುತ್ತೇವೆ. ಕಾಂಗ್ರೆಸ್‍ಗೆ ಎಷ್ಟೇ ಕಷ್ಟ ಬಂದರೂ ಇಲ್ಲೇ ಇರುತ್ತೇನೆ. ಇದು ಸ್ವತಂತ್ರ ಪೂರ್ವದಿಂದ ಬಂದಂತಹ ಪಕ್ಷವಾಗಿದೆ. ನಮ್ಮ ಪಕ್ಷ ನಮಗೆ ಟಿಕೆಟ್ ಕೊಟ್ಟು ಗೆಲ್ಲಿಸಿದೆ. ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ಕಷ್ಟ ಬಂದರೂ ನಾವು ಕಾಂಗ್ರೆಸ್‍ನಲ್ಲಿಯೇ ಇರುತ್ತೇವೆ ಎಂದಿದ್ದಾರೆ.

    ನಾವು ಅಧಿಕಾರದಲ್ಲಿದ್ದರೂ ಕಾಂಗ್ರೆಸ್‍ನಲ್ಲಿಯೇ ಇರುತ್ತೇವೆ. ನಾನು ಯಾವ ಅತೃಪ್ತ ಶಾಸಕರ ಸಂಪರ್ಕದಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಫೋನ್ ಮಾಡಿ ಸಭೆಗೆ ಕರೆದಿದ್ದಾರೆ. ಹೀಗಾಗಿ ಮಂಗಳವಾರ ಬೆಂಗಳೂರಿನಲ್ಲಿ ಸಿಎಲ್‍ಪಿ ಸಭೆಗೆ ಹಾಜರಾಗುತ್ತೇನೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದರು.

    ಎಂತಹುದೇ ಸಂದರ್ಭದಲ್ಲಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಕಳೆದೊಂದು ತಿಂಗಳಿನಿಂದಲೂ ಕ್ಷೇತ್ರದಲ್ಲಿ ವಾರ್ಡ್ ಸಭೆಗಳನ್ನ ನಡೆಸುತ್ತಿದ್ದೇನೆ. ನಾನು ಗೆದ್ದಾಗಿನಿಂದಲೂ ಪಕ್ಷ ಬಿಡುತ್ತೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹ ಉಹಾಪೋಹಗಳಿಗೆ ಕ್ಷೇತ್ರದ ಜನರು ಕಿವಿಗೊಡಬಾರದು ಎಂದು ಗಣೇಶ್ ಹೇಳಿದರು.

  • ಸಿಎಂ ಬಳಿಕ ಮಾಧ್ಯಮದ ವಿರುದ್ಧ ಸಿಡಿಮಿಡಿಗೊಂಡ ಕಂಪ್ಲಿ ಗಣೇಶ್

    ಸಿಎಂ ಬಳಿಕ ಮಾಧ್ಯಮದ ವಿರುದ್ಧ ಸಿಡಿಮಿಡಿಗೊಂಡ ಕಂಪ್ಲಿ ಗಣೇಶ್

    ಬಳ್ಳಾರಿ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಎಚ್ ಡಿ ಕುಮಾರಸ್ವಾಮಿ ಅವರು ಒಂದಲ್ಲ ಒಂದು ರೀತಿಯಲ್ಲಿ ಮಾಧ್ಯಮದ ವಿರುದ್ಧ ಗರಂ ಆಗುತ್ತಿದ್ದಾರೆ. ಈ ಬೆನ್ನಲ್ಲೇ ಇದೀಗ ಕಂಪ್ಲಿ ಶಾಸಕ ಗಣೇಶ್ ಮೀಡಿಯಾ ವಿರುದ್ಧ ಗರಂ ಆಗಿದ್ದಾರೆ.

    ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಜೈಲು ಸೇರಿದ್ದ ಗಣೇಶ್, ಬಿಡುಗಡೆಯಾದ ಬಳಿಕ ಮೊದಲ ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಬಸವ ಜಯಂತಿ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಪಾಲ್ಗೊಂಡಿದ್ದ ನವದಂಪತಿಗಳಿಗೆ ಆಶೀರ್ವದಿಸಿದರು. ಇದನ್ನೂ ಓದಿ: ಮಾಧ್ಯಮಗಳ ಮೇಲೆ ಮತ್ತೆ ಸಿಎಂ ಮುನಿಸು – ನಿಮ್ಮ ಜೊತೆ ಮಾತನಾಡ್ಬಾರದೆಂದು ತೀರ್ಮಾನಿಸಿದ್ದೇನೆ ಎಂದ ಎಚ್‍ಡಿಕೆ

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ಸುಭದ್ರವಾಗಿದೆ. ಆದರೆ ಮಾಧ್ಯಮಗಳಿಂದಲೇ ಸರ್ಕಾರ ಅಸ್ಥಿರವಾಗುತ್ತಿದೆ. ಮಾಧ್ಯಮದವರಿಂದ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗುತ್ತಿದೆ. ಸರ್ಕಾರವನ್ನು ಕೆಡವಲು ಯಾರಿಂದಲೂ ಸಾಧ್ಯವಿಲ್ಲ. ನಾನು ಕಾಂಗ್ರೆಸ್‍ನಲ್ಲೇ ಇರುವೆ. ಇಲ್ಲಿಯೇ ಇದ್ದುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.

  • ನಾಗಸಾಧು ಮೊರೆ ಹೋದ ಶಾಸಕ ಕಂಪ್ಲಿ ಗಣೇಶ್!

    ನಾಗಸಾಧು ಮೊರೆ ಹೋದ ಶಾಸಕ ಕಂಪ್ಲಿ ಗಣೇಶ್!

    ಬಳ್ಳಾರಿ: ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ಜೈಲುವಾಸ ಅನುಭವಿಸಿ, ಬಿಡುಗಡೆಯಾಗಿರುವ ಕಂಪ್ಲಿ ಶಾಸಕ ಗಣೇಶ್ ಇದೀಗ ಕಷ್ಟಗಳಿಂದ ಪಾರಾಗಲು ನಾಗಸಾಧುವಿನ ಮೊರೆ ಹೋಗಿದ್ದಾರೆ.

    ಸಂಡೂರಿನ ಜೋಗಿಹಳ್ಳದ ಬಳಿಯಿರುವ ಅನ್ನಪೂರ್ಣೇಶ್ವರಿ ಮಠದಲ್ಲಿನ ನಾಗಸಾಧುಗಳನ್ನು ಕಂಪ್ಲಿ ಗಣೇಶ್ ಭೇಟಿ ಮಾಡಿ ಆಶೀರ್ವಾದ ಪಡೆದು ನೋವು ತೋಡಿಕೊಂಡಿದ್ದಾರೆ. ಗಣೇಶ್ ಅವರು ಕುಟುಂಬ ಸಮೇತರಾಗಿ ನಾಗಸಾಧು ಮೊರೆ ಹೋಗಿದ್ದು, ನಾಗಸಾಧು ಇರುವ ಮಠದಲ್ಲಿ ಕೆಲಕಾಲ ಧ್ಯಾನ ಮಾಡಿದ್ದಾರೆ. ಈ ವೇಳೆ ಮೌನ ವ್ರತದಲ್ಲಿದ್ದ ನಾಗಸಾಧು, ಸ್ಲೇಟ್‍ನಲ್ಲೇ ಬರೆದು ಒಳ್ಳೆಯದಾಗುತ್ತೆ ಎಂದು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಆಶೀರ್ವದಿಸಿದ್ದಾರೆ.

    ಈ ಹಿಂದೆ ಉಪಚುನಾವಣೆಗೂ ಮುನ್ನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಉಗ್ರಪ್ಪ ಅವರು ಈ ನಾಗಸಾಧುಗಳನ್ನೇ ಭೇಟಿ ಮಾಡಿ ಆಶೀರ್ವಾದ ಪಡೆದು ನಂತರ ಗೆಲುವು ಸಾಧಿಸಿದ್ದರು. ಹೀಗಾಗಿ ಇದೀಗ ಗಣೇಶ್ ಕೂಡ ಕಷ್ಟಗಳಿಂದ ಪಾರಾಗಾಲು ನಾಗಸಾಧು ಮೊರೆ ಹೋದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

  • ಆನಂದ್‍ಸಿಂಗ್ ನನಗೆ ಅಣ್ಣನ ಸಮಾನ: ಕಂಪ್ಲಿ ಗಣೇಶ್

    ಆನಂದ್‍ಸಿಂಗ್ ನನಗೆ ಅಣ್ಣನ ಸಮಾನ: ಕಂಪ್ಲಿ ಗಣೇಶ್

    ಬಳ್ಳಾರಿ: ಹೊಸಪೇಟೆ ಶಾಸಕ ಆನಂದ್‍ಸಿಂಗ್ ನನಗೆ ಅಣ್ಣನ ಸಮಾನ. ನಾನು ಮತ್ತು ನನ್ನ ತಂದೆ ಆನಂದ್‍ಸಿಂಗ್  ಗಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ. ಉದ್ದೇಶಪೂರ್ವಕವಾಗಿ ನಾವಿಬ್ಬರೂ ಗಲಾಟೆ ಮಾಡಿಕೊಂಡಿಲ್ಲ ಎಂದು ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಹೇಳಿದ್ದಾರೆ.

    ಆನಂದ್‍ಸಿಂಗ್ ಮೇಲೆ ಹಲ್ಲೆ ಮಾಡಿ ಜೈಲಿನಿಂದ ಬಿಡುಗಡೆಯಾದ ಬಳಿಕ ಹೊಸಪೇಟೆ ಮನೆಗೆ ಗಣೇಶ್ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮಿಬ್ಬರ ಮಧ್ಯೆ ಆದ ಗಲಾಟೆ ವಿಚಾರ ನ್ಯಾಯಾಲಯದಲ್ಲಿ ಇರುವ ಕಾರಣ ಹೆಚ್ಚಿಗೆ ಎನೂ ಮಾತನಾಡುವುದಿಲ್ಲ. ಆನಂದಸಿಂಗ್ ನನಗೆ ಅಣ್ಣನ ಸಮಾನ. ನಮ್ಮಿಬ್ಬರ ಮಧ್ಯೆ ಗಲಾಟೆಯಾಗಿದ್ದು ಉದ್ದೇಶಪೂರ್ವಕವಾಗಿ ಅಲ್ಲವೆಂದು ತಿಳಿಸಿದರು. ಹಾಗೆಯೇ ಈ ಬಗ್ಗೆ ಪಕ್ಷದ ವರಿಷ್ಠರು ಮಾತನಾಡುತ್ತಾರೆ, ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವ ಆದೇಶ ಹಿಂಪಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.

    ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅಭಿಮಾನದಿಂದ ಅವರು ನಾನು ಸಚಿವನಾಗುತ್ತೇನೆ ಎಂದು ಹೇಳಿರಬಹುದು. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ, ಆದ್ರೆ ಕಾಂಗ್ರೆಸ್‍ಗೆ ರಮೇಶ್ ಜಾರಕಿಹೊಳಿಯವರು ರಾಜೀನಾಮೆ ನೀಡಲು ಬಿಡುವುದಿಲ್ಲ, ನಾವೆಲ್ಲಾ ಅವರ ಮನವೊಲಿಸುತ್ತೇವೆ ಎಂದು ತಿಳಿಸಿದರು.

  • ಕಂಪ್ಲಿ ಶಾಸಕ ಜೆ.ಎನ್.ಗಣೇಶ್‍ಗೆ ಜಾಮೀನು ಮಂಜೂರು

    ಕಂಪ್ಲಿ ಶಾಸಕ ಜೆ.ಎನ್.ಗಣೇಶ್‍ಗೆ ಜಾಮೀನು ಮಂಜೂರು

    ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲು ಸೇರಿದ್ದ ಶಾಸಕ ಕಂಪ್ಲಿ ಗಣೇಶ್‍ಗೆ ಇಂದು ಜಾಮೀನು ಸಿಕ್ಕಿದೆ.

    ಹೈಕೋರ್ಟ್ ಏಕಸದಸ್ಯ ಪೀಠ ಇಂದು ಶಾಸಕರಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಈ ಮೊದಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಗಣೇಶ್ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು. ಬಂಧನಕ್ಕೊಳಗಾಗಿ 62 ದಿನಗಳ ಬಳಿಕ ಕಂಪ್ಲಿ ಗಣೇಶ್ ಜಾಮೀನು ಪಡೆಯುವ ಮೂಲಕ ಜೈಲಿನಿಂದ ಹೊರ ಬರಲಿದ್ದಾರೆ.

    ಜನವರಿಯಲ್ಲಿ ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ಶಾಸಕರು ಈಗಲ್ ಟನ್ ರೆಸಾರ್ಟ್ ಸೇರಿಕೊಂಡಿದ್ದರು. ಈ ವೇಳೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ನಡುವೆ ಗಲಾಟೆ ನಡೆದಿತ್ತು. ಅಲ್ಲದೆ ಗಲಾಟೆ ವಿಕೋಪಕ್ಕೆ ತಿರುಗಿ ಬಾಟಲಿಯಿಂದ ಹೊಡೆದುಕೊಂಡಿದ್ದರು. ಘಟನೆಯಲ್ಲಿ ಆನಂದ್ ಸಿಂಗ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹಲ್ಲೆಯ ಬಳಿಕ  ನಾಪತ್ತೆಯಾಗಿದ್ದ ಗಣೇಶ್ ಅವರನ್ನು ಫೆಬ್ರವರಿ 20ರಂದು ಅಹಮದಾಬಾದ್ ನಲ್ಲಿ  ಬಂಧಿಸಲಾಗಿತ್ತು.

  • ಕಂಪ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಉಗ್ರಪ್ಪಗೆ ತರಾಟೆ

    ಕಂಪ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಉಗ್ರಪ್ಪಗೆ ತರಾಟೆ

    – ಶಾಸಕ ಗಣೇಶಗೆ ಶೀಘ್ರವೇ ಜಾಮೀನು ಕೊಡಿಸಿ

    ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ವಿ.ಎಸ್.ಉಗ್ರಪ್ಪ ಅವರನ್ನು ಪಕ್ಷದ ಕಾರ್ಯಕರ್ತರೇ ತರಾಟೆ ತೆಗೆದುಕೊಂಡ ಪ್ರಸಂಗ ಜಿಲ್ಲೆಯ ಕಂಪ್ಲಿಯಲ್ಲಿ ನಡೆದಿದೆ.

    ವಿ.ಎಸ್.ಉಗ್ರಪ್ಪ ಅವರು ಇಂದು ಕಂಪ್ಲಿಯಲ್ಲಿ ಸಮಾವೇಶ ಹಾಗೂ ಪ್ರಚಾರ ನಡೆಸಿದರು. ಈ ವೇಳೆ ಕೆಲವರು ಶಾಸಕ ಗಣೇಶ ಅವರಿಗೆ ಶೀಘ್ರವೇ ಜಾಮೀನು ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ನಿಮಗ್ಯಾಕೆ ನಾವು ಬೆಂಬಲ ಕೊಡಬೇಕು. ನಮ್ಮ ಶಾಸಕ ಗಣೇಶ್ ಅವರನ್ನು ಕರೆದುಕೊಂಡು ಬನ್ನಿ. ನಂತರ ನಾವು ನಿಮಗೆ ಬೆಂಬಲ ಕೊಡುತ್ತೇವೆ ಎಂದು ಕಿಡಿಕಾರಿದರು.

    ಈ ವೇಳೆ ಮಾತನಾಡಿ ಸಂಸದರು, ಶಾಸಕ ಗಣೇಶ್ ಪಿಎ ಹಾಗೂ ಈ ಭಾಗದ ಜನರು ಸಲ್ಲಿಸಿದ ಮನವಿಯನ್ನು ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ. ಒಬ್ಬ ಮನುಷ್ಯ, ಸ್ನೇಹಿತನಾಗಿ ನಮ್ಮವರನ್ನು ರಕ್ಷಿಸುವಲ್ಲಿ ಪ್ರಯತ್ನಿಸುತ್ತಿದ್ದೇನೆ. ರಾಮನಗರದ ಈಗಲ್‍ಟನ್ ರೆಸಾರ್ಟಿನಲ್ಲಿ ಘಟನೆ ನಡೆಯಬಾರದಿತ್ತು. ಶಾಸಕರಾದ ಆನಂದ್ ಸಿಂಗ್ ಹಾಗೂ ಕಂಪ್ಲಿಯ ಗಣೇಶ್ ಅವರ ಮಧ್ಯೆ ಉತ್ತಮ ಸಂಬಂಧವಿತ್ತು. ಆದರೆ ಈಗ ಅದು ಹಾಳಾಗಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.

    ಆನಂದ್ ಸಿಂಗ್ ಅವರ ಮನವೊಲಿಕೆಗೆ ಬಹಳ ಸಮಯ ಬೇಕಾಯಿತು. ಹೀಗಾಗಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಶಾಸಕರನ್ನು ಆದಷ್ಟು ಬೇಗ ಜಾಮೀನಿನ ಆಧಾರದ ಹೊರ ತರಲಾಗುತ್ತದೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.

    ಏನಿದು ಪ್ರಕರಣ?:
    ಈಗಲ್ ಟನ್ ರೆಸಾರ್ಟಿನಲ್ಲಿ ಜನವರಿ 19ರ ರಂದು ರಾತ್ರಿ ಕಂಪ್ಲಿ ಶಾಸಕ ಗಣೇಶ್ ಹಾಗೂ ಶಾಸಕ ಆನಂದ್ ಸಿಂಗ್ ಪರಸ್ಪರ ಜಗಳ ಮಾಡಿಕೊಂಡಿದ್ದರು. ಈ ವೇಳೆ ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಸಂಬಂಧ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ಶಾಸಕ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿತ್ತು.

  • ಬೊಗಳುವ ನಾಯಿ ಬೊಗಳುತ್ತಲೇ ಇರುತ್ತದೆ: ಬಿಜೆಪಿಗೆ ವೆಂಕಟರಮಣಪ್ಪ ಲೇವಡಿ

    ಬೊಗಳುವ ನಾಯಿ ಬೊಗಳುತ್ತಲೇ ಇರುತ್ತದೆ: ಬಿಜೆಪಿಗೆ ವೆಂಕಟರಮಣಪ್ಪ ಲೇವಡಿ

    ಚಿತ್ರದುರ್ಗ: ಬೊಗಳುವ ನಾಯಿ ಬೊಗಳುತ್ತಲೇ ಇರುತ್ತದೆ ಎನ್ನುವಂತೆ ಬಿಜೆಪಿ ವರ್ತಿಸುತ್ತದೆ. ಯಡಿಯೂರಪ್ಪ ಹೇಳಿದಂತೆ ಆಗುವಂತಿದ್ದರೆ ಬಿಎಸ್‍ವೈ ಯಾವತ್ತೋ ಸಿಎಂ ಆಗಿರುತ್ತಿದ್ದರು ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಬಿಜೆಪಿಗೆ ಲೇವಡಿ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಕಷ್ಟು ಕಾಂಗ್ರೆಸ್ ಅತೃಪ್ತ ಶಾಸಕರು ಬಿಜೆಪಿ ಸೇರುತ್ತಾರೆ ಅಂತ ಬಿಜೆಪಿ ಅವರು ಸುಮ್ಮನೆ ಹೇಳಿಕೊಂಡು ತಿರುಗುತ್ತಿದ್ದಾರೆ. ಬೊಗಳುವ ನಾಯಿ ಬೊಗಳುತ್ತಲೇ ಇರುತ್ತದೆ. ಬಿಜೆಪಿ ಅವರಿಗೆ ಬೇರೆ ಕೆಲಸವಿಲ್ಲ. ಶಾಸಕ ಉಮೇಶ್ ಜಾಧವ್ ಒಬ್ಬ ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಾರೆಂದು ಕಾಂಗ್ರೆಸ್ಸಿನ ಇತರೇ ಶಾಸಕರು ಬಿಜೆಪಿ ಸೇರುವುದಿಲ್ಲ. ಜಾಧವ್ ಅವರೊಬ್ಬರಿಂದ ಕಾಂಗ್ರೆಸ್ಸಿಗೆ ಏನೂ ಹಾನಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ:ಎಲ್ಲರಿಗೂ ದೇಶ, ಸೈನಿಕರ ಚಿಂತೆಯಾದರೆ ಬಿಎಸ್‍ವೈಗೆ ಸೀಟಿನ ಚಿಂತೆ: ಯು.ಟಿ ಖಾದರ್

    ಪಕ್ಷಾಂತರ ಮಾಡಿದವರಿಗೆ ಜನ ಬುದ್ಧಿ ಕಲಿಸ್ತಾರೆ. ಯಾರು ಯಾರು ಎಲ್ಲೆಲ್ಲಿ ಅಭಿಮಾನವಿದೆ ಅಲ್ಲಿಗೆ ಹೋಗ್ತಾರೆ. ಇನ್ನೂ ನಾಲ್ಕುವರೆ ವರ್ಷ ಇರುವಾಗಲೇ ಜಾಧವ್ ರಾಜೀನಾಮೆ ಕೊಟ್ಟಿದ್ದಾರೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು. ಇದನ್ನೂ ಓದಿ:ಅವಳ ಸಪೋರ್ಟಿನಿಂದ ನೀನು ಹೀಗೆ ಮಾಡ್ತೀರೋದು: ಶಾಸಕರಿಬ್ಬರ ಜಗಳದಲ್ಲಿ ಮಹಿಳೆಯ ಎಂಟ್ರಿ

    ಕಾಂಗ್ರೆಸ್ಸಿನವರು ಬಿಜೆಪಿ ಸೇರುತ್ತಾರೆ ಎನ್ನುವುದು ಬರೀ ಕನಸು. ಯಡಿಯೂರಪ್ಪನವರ ಕನಸು ನನಸಾಗುವುದೇ ಇಲ್ಲ. ಯಡಿಯೂರಪ್ಪ ಹೇಳಿದಂತೆ ಆಗುವಂತಿದ್ದರೆ ಯಾವತ್ತೋ ಸಿಎಂ ಆಗುತ್ತಿದ್ದರು. ಮೂರು ವರ್ಷಕ್ಕೆ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಲೂ ಇರಲಿಲ್ಲ ಎಂದು ಟಾಂಗ್ ನೀಡಿದರು.

    ಶಾಸಕ ಗಣೇಶ್ ಹಾಗೂ ಆನದ್ ಸಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಬ್ಬರು ಫ್ರೆಂಡ್ಸ್. ವೈಯಕ್ತಿಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ ಅಷ್ಟೇ. ಒಂದೇ ತಾಯಿಯ ಮಕ್ಕಳು, ಅಣ್ಣ ತಮ್ಮಂದಿರು, ಗಂಡ-ಹೆಂಡತಿ ಕಿತ್ತಾಡುತ್ತಾರೆ. ಸಂಸಾರದ ಜಗಳ ತಾನಾಗಿಯೇ ಸರಿ ಆಗುತ್ತದೆ. ಹಾಗೆಯೇ ಇವರಿಬ್ಬರ ನಡುವೆ ಇರುವ ಭಿನ್ನಾಭಿಪ್ರಾಯ ಕೂಡ ಸರಿಯಾಗುತ್ತದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಂಪ್ಲಿ ಗಣೇಶ್‍ ಜೈಲಿಗೆ: ಕೋರ್ಟ್ ಕಲಾಪದಲ್ಲಿ ಏನಾಯ್ತು?

    ಕಂಪ್ಲಿ ಗಣೇಶ್‍ ಜೈಲಿಗೆ: ಕೋರ್ಟ್ ಕಲಾಪದಲ್ಲಿ ಏನಾಯ್ತು?

    ಬೆಂಗಳೂರು: ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದ ಆರೋಪಿ, ಶಾಸಕ ಕಂಪ್ಲಿ ಗಣೇಶ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧಮ ವಿಧಿಸಿ ರಾಮನಗರದ ಸಿಜೆಎಂ ಕೋರ್ಟ್ ಆದೇಶ ನೀಡಿದೆ.

    ಗುಜರಾತಿನ ಸೋಮನಾಥಪುರದಲ್ಲಿ ಬಂಧನಕ್ಕೆ ಒಳಗಾಗಿದ್ದ ಗಣೇಶ್ ಅವರನ್ನು ಇಂದು ಮಾಗಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರಿ ಪಡಿಸಿದರು. ವಿಚಾರಣೆ ನಡೆಸಿದ ನ್ಯಾ. ಅನಿತಾ.ಎಂ ಗಣೇಶ್ ಸಲ್ಲಿಸಿದ್ದ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಹೀಗಾಗಿ ಶಾಸಕರನ್ನು ಪರಪ್ಪನ ಅಗ್ರಹಾರಕ್ಕೆ ಕರೆತಲಾಗುತ್ತದೆ.

    ಇಂದು ಏನಾಯ್ತು?:
    ವೈದ್ಯಕೀಯ ತಪಾಸಣೆ ಬಳಿಕ ಶಾಸಕ ಗಣೇಶ್‍ರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ಊಟದ ಸಮಯವಾದ್ದರಿಂದ ನ್ಯಾಯಾಧೀಶರು ಊಟಕ್ಕೆ ತೆರಳಿದ್ದರು. ಇತ್ತ ಗಣೇಶ್ ಪರ ವಕೀಲರು ಜಾಮೀನು ಅರ್ಜಿ ಹಾಕಲು ಸಕಲ ಸಿದ್ಧತೆ ನಡೆಸಿಕೊಂಡಿದ್ದರು. ಬಳಿಕ ಗಣೇಶ್ ಪರವಾಗಿ ಹಿರಿಯ ವಕೀಲ ಹನುಮಂತರಾಯಪ್ಪ ಅವರ ಜೂನಿಯರ್ ವಕೀಲರು ಹಾಗೂ ಶಾಸಕ ಆನಂದ್ ಸಿಂಗ್ ಪರ ಹೈಕೋರ್ಟ್ ವಕೀಲ ಸಿ.ವಿ.ನಾಗೇಶ್ ಅವರ ಜೂನಿಯರ್ ವಕೀಲರು ನ್ಯಾಯಾಲಯಕ್ಕೆ ಹಾಜರಾದರು.

    ಶಾಸಕ ಗಣೇಶ್ ಅವರನ್ನು ಮಧ್ಯಾಹ್ನ 3:45 ಗಂಟೆಯ ಬಳಿಕ ನ್ಯಾಯಾಲಯಕ್ಕೆ ಕರೆತರಲಾಯಿತು. ವಿಚಾರಣೆ ಆರಂಭಿಸಿದ ನ್ಯಾಯಾಧೀಶರಾದ ಅನಿತಾ ಅವರ ಮುಂದೆ ಹಾಜರಾದ ಶಾಸಕ ಗಣೇಶ್, ನನಗೆ ಉಸಿರಾಟದ ತೊಂದರೆ ಇದೆ. ಚಿಕಿತ್ಸೆ ಅಗತ್ಯವಿದ್ದು, ಜಾಮೀನು ನೀಡಬೇಕು ಎಂದು ಕೇಳಿಕೊಂಡರು. ಇದೇ ವೇಳೆ ಗಣೇಶ್ ಪರ ವಕೀಲರು ವಾದ ಮಂಡಿಸಿ, 2016ರಿಂದ ಶಾಸಕರು ಅಸ್ತಮ ತೊಂದರೆಯಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯದ ಉದ್ದೇಶದಿಂದ ಜಾಮೀನು ನೀಡಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.

    ವಾದವನ್ನು ಆಲಿಸಿದ ನ್ಯಾಯಾಧೀಶರು ಆರೋಪಿ ಗಣೇಶ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv