Tag: ಕಂಪೌಂಡ್

  • ಹುಟ್ಟು ಹಬ್ಬದ ದಿನವೇ ಕಾಂಪೌಂಡ್ ಕುಸಿದುಬಿದ್ದು ಬಾಲಕ ಸಾವು

    ಹುಟ್ಟು ಹಬ್ಬದ ದಿನವೇ ಕಾಂಪೌಂಡ್ ಕುಸಿದುಬಿದ್ದು ಬಾಲಕ ಸಾವು

    ದಾವಣಗೆರೆ: ಹುಟ್ಟುಹಬ್ಬದ (Birthday) ದಿನದಂದೇ ಕೌಂಪೌಂಡ್ (Compound) ಕುಸಿದುಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ದಾವಣಗೆರೆಯ (Davanagere) ಬಸಾಪುರ (Basapura) ಗ್ರಾಮದಲ್ಲಿ ನಡೆದಿದೆ.

    ನಾಗಾರ್ಜುನ (11) ಮೃತ ಬಾಲಕ. ಈತ ಬಸಪುರ ಗ್ರಾಮದ ಗುರು ಶಾಂತಯ್ಯ ಎಂಬವರ ಪುತ್ರನಾಗಿದ್ದು, ಪಕ್ಕದ ಮನೆಗೆ ಆಟವಾಡಲು ತೆರಳಿದ್ದ ವೇಳೆ ಶಿಥಿಲಾವಸ್ಥೆಯಲ್ಲಿದ್ದ ಮನೆಯ ಕೌಂಪೌಂಡ್ ಗೋಡೆ ಕುಸಿದುಬಿದ್ದು ಮೃತಪಟ್ಟಿದ್ದಾನೆ. ನಾಗಾರ್ಜುನ ತನ್ನ 12ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುವ ಖುಷಿಯಲ್ಲಿದ್ದ. ಅದಕ್ಕಾಗಿ ಕುಟುಂಬಸ್ಥರು ರಾತ್ರಿಯೇ ಮನೆಗೆ ಕೇಕ್ ತಂದು ರಾತ್ರಿ 12ಕ್ಕೆ ಸರಿಯಾಗಿ ಮಗನ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ನಡೆಸಿದ್ದರು. ಇದನ್ನೂ ಓದಿ: ಶಹಾಪುರದಲ್ಲಿ 20 ಟನ್ ಪಡಿತರ ಅಕ್ಕಿ ಕಳ್ಳತನ ಪ್ರಕರಣ – ಖಾಲಿ ಲಾರಿ ಬಿಟ್ಟು ಖದೀಮರು ಪರಾರಿ

    ನಾಗಾರ್ಜುನ್ 9 ಗಂಟೆಯ ಸುಮಾರಿಗೆ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಸಂದರ್ಭ ಗೋಡೆ ಕುಸಿದು ದುರ್ಘಟನೆ ಸಂಭವಿಸಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮನೆಯ ಮಾಲೀಕ ಸಿದ್ದಪ್ಪ ಅವರ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏಕಾಏಕಿ ಕೌಂಪೌಂಡ್ ಕುಸಿದು ಬಿದ್ದ ಪರಿಣಾಮ ಕಬ್ಬಿಣದ ಗೇಟ್ (Iron Gate) ಬಾಲಕನ ತಲೆಗೆ ಬಡಿದು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗಾರ್ಜುನನ ಪೋಷಕರು ಬಡವರಾಗಿದ್ದು, ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾರ ಹುಣ್ಣಿಮೆ ತಡವಾಗಿ ಹೋಗು ಅಂದ್ರು ಮನೆಯವ್ರು – ಮಾತು ಲೆಕ್ಕಿಸದೇ ಹೊರಟ ವ್ಯಕ್ತಿ ಅಪಘಾತದಲ್ಲಿ ಸಾವು

  • ದರೋಡೆ ಮಾಡಲು ಸಾಧ್ಯವಾಗದಿದ್ದಾಗ ಮನೆ ಕಂಪೌಂಡ್ ನಾಶಪಡಿಸಿ ಪರಾರಿ!

    ದರೋಡೆ ಮಾಡಲು ಸಾಧ್ಯವಾಗದಿದ್ದಾಗ ಮನೆ ಕಂಪೌಂಡ್ ನಾಶಪಡಿಸಿ ಪರಾರಿ!

    ಮಂಡ್ಯ: ಮಾರಕಾಸ್ತ್ರಗಳೊಂದಿಗೆ ತೋಟದ ಮನೆಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿದ್ದು, ಸಾಧ್ಯವಾಗದೇ ಇದ್ದಾಗ ಮನೆಯ ಕಂಪೌಂಡ್ ನಾಶಪಡಿಸಿದ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಸೊಳ್ಳೇಪುರ ಸಮೀಪ ತೋಟದ ಮನೆಯಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ತಡರಾತ್ರಿ 12.30 ರ ಸಮಯದಲ್ಲಿ ನಡೆದಿದೆ. ದುಷ್ಕರ್ಮಿಗಳ ಗುಂಪಿನಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದು, ಕಂಪೌಂಡ್ ನಾಶಕ್ಕೆ ಬಳಸಿದ ಟ್ರ್ಯಾಕ್ಟರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಸರಕಾರಿ ಆಸ್ಪತ್ರೆಯ ವೈದ್ಯೆ ಡಾ.ಹರ್ಷವರ್ದಿನಿ ಹಾಗೂ ಬ್ಯಾಂಕ್ ಉದ್ಯೋಗಿ ಗಿರಿಪ್ರಸಾದ್ ಅವರ ತೋಟದ ಮನೆಯಲ್ಲಿ ದುಷ್ಕರ್ಮಿಗಳ ಗುಂಪು ದರೋಡೆಗೆ ಯತ್ನಿಸಿದೆ. ಈ ವೇಳೆ ದರೋಡೆ ಮಾಡಲು ಆಗದಿದ್ದಾಗ ಸಿಟ್ಟುಗೊಂಡ ಕಿಡಿಗೇಡಿಗಳು ಮನೆಯ ಕಂಪೌಂಡನ್ನು ಟ್ರ್ಯಾಕ್ಟರ್ ಬಳಸಿ ಬೀಳಿಸಿದ್ದಾರೆ. ಅಲ್ಲದೆ ಮನೆ ಎದುರು ನಿಲ್ಲಿಸಿದ್ದ ಎರಡು ಬೈಕ್ ಹಾಗೂ ಕಾರನ್ನು ಜಖಂಗೊಳಿಸಿ ಬಳಿಕ ಪರಾರಿಯಾಗಿದೆ.

    ಘಟನಾ ಸ್ಥಳಕ್ಕೆ ಕಿಕ್ಕೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಭೇಟಿ ಪರಿಶೀಲನೆ ನಡೆಸಿದ್ದು, ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿದ ನಶೆಯಲ್ಲಿ ಪೊಲೀಸ್ ಮಹಾನಿರ್ದೇಶಕರ ಮನೆಗೆ ಕಾರು ನುಗ್ಗಿಸಿದ ಯುವಕರು!

    ಕುಡಿದ ನಶೆಯಲ್ಲಿ ಪೊಲೀಸ್ ಮಹಾನಿರ್ದೇಶಕರ ಮನೆಗೆ ಕಾರು ನುಗ್ಗಿಸಿದ ಯುವಕರು!

    ಮೈಸೂರು: ಕುಡಿದ ಅಮಲಿನಲ್ಲಿ ಮೂವರು ಯುವಕರು ಕಾರು ಚಾಲನೆ ಮಾಡಿ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ವಿಫುಲ್ ಕುಮಾರ್ ಮನೆಗೆ ಕಾರು ನುಗ್ಗಿಸಿದ ಘಟನೆ ಮಂಗಳವಾರ ರಾತ್ರಿ ನಗರದಲ್ಲಿ ನಡೆದಿದೆ.

    ಕಾರು ನುಗ್ಗಿದ ಪರಿಣಾಮ ವಿಪುಲ್ ಕುಮಾರ್ ಅವರ ಸರ್ಕಾರಿ ಬಂಗಲೆಯ ಕಾಂಪೌಂಡ್ ನೆಲಸಮವಾಗಿದ್ದು, ಕಾರು ಭಾಗಶಃ ಜಖಂ ಆಗಿದೆ. ಮೈಸೂರಿನ ಗಾಂಧಿನಗರದ ನಿವಾಸಿಗಳಾದ ಮೂವರು ಯುವಕರು ರಾತ್ರಿ ಕಂಠ ಪೂರ್ತಿ ಕುಡಿದು ಗಾಂಧಿ ನಗರದಲ್ಲಿನ ತಮ್ಮ ನಿವಾಸಕ್ಕೆ ಹೋಗುತ್ತಿರುವಾಗ ವೇಗವಾಗಿ ಕಾರು ಚಾಲನೆ ಮಾಡಿ ಕಂಪೌಂಡ್ ಗೋಡೆಗೆ ಗುದ್ದಿದ್ದಾರೆ.

    ಕಾರಿನಲ್ಲಿದ್ದ ಯುವಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಮೂವರನ್ನು ನಜರ್ ಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ವೇಳೆ ಐಜಿಪಿ ವಿಪುಲ್ ಕುಮಾರ್ ಮನೆಯಲ್ಲಿಯೇ ಇದ್ದರು. ಭಾರೀ ಸದ್ದು ಕೇಳಿ ತಕ್ಷಣ ಮನೆಯಿಂದ ಹೊರಬಂದ ಅವರು ಘಟನೆ ಗಮನಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದರು.

    ಸದ್ಯ ನಜರ್‍ಬಾದ್ ಪೊಲೀಸರು ಮದ್ಯ ಮತ್ತು ಯುವಕರನ್ನು ವಶಕ್ಕೆ ಪಡೆದು ಕಾರು ಜಪ್ತಿ ಮಾಡಿದ್ದಾರೆ.

  • KSRTC ಡಿಪೋದ ನೀರಿನ ಗುಂಡಿಯಲ್ಲಿ ಬಿದ್ದ ಐದು ವರ್ಷದ ಬಾಲಕ ಸಾವು

    KSRTC ಡಿಪೋದ ನೀರಿನ ಗುಂಡಿಯಲ್ಲಿ ಬಿದ್ದ ಐದು ವರ್ಷದ ಬಾಲಕ ಸಾವು

    ಶಿವಮೊಗ್ಗ: ಮಳೆ ನೀರು ತುಂಬಿದ್ದ ಗುಂಡಿಯಲ್ಲಿ ಐದು ವರ್ಷದ ಬಾಲಕ ಬಿದ್ದು ಮೃತಪಟ್ಟ ಘಟನೆ ಜಿಲ್ಲೆ ಸಾಗರದಲ್ಲಿ ಕೆಎಸ್‍ಆರ್ ಟಿಸಿ ಡಿಪೋದಲ್ಲಿ ನಡೆದಿದೆ.

    ಶಿವಪ್ಪ ನಾಯಕ ನಗರದಲ್ಲಿರುವ ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ಮುನೀಂದ್ರ ಎಂಬವರ ಮಗ ಭುವನ್ (5) ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಡಿಪೋ ಕಂಪೌಂಡ್ ಕಟ್ಟಲು ಗುಂಡಿ ತಗೆಯಲಾಗಿತ್ತು. ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಗುಂಡಿ ತುಂಬಿದ್ದು, ಸಮೀಪದಲ್ಲಿಯೇ ಆಟವಾಡುತ್ತಿದ್ದ ಭುವನ್ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾನೆ.

    ತಕ್ಷಣವೇ ಅಲ್ಲಿದ್ದ ಜನರು ಬಾಲಕನನ್ನು ಮೇಲೆದ್ದಾರೆ. ನೀರು ಕುಡಿದು ಹೊಟ್ಟೆ ಭಾರವಾಗಿದ್ದ ಭುವನ್‍ಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆ ತಲುಪುತ್ತಿದ್ದಂತೆ ಬಾಲಕ ಮೃತಪಟ್ಟಿದ್ದಾನೆ.

    ಗುಂಡಿ ತೆಗೆದು ಸೂಚನಾ ಫಲಕ ಹಾಕುವಲ್ಲಿ ಕಾಮಗಾರಿ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದಾರೆ. ನನ್ನ ಮಗನ ಸಾವಿಗೆ ಅವರೇ ಕಾರಣ ಎಂದು ಗುತ್ತಿಗೆದಾರರ ವಿರುದ್ಧ ಮೃತ ಬಾಲಕನ ತಂದೆ ಮುನೀಂದ್ರ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಸಾರ್ವಜನಿಕರು ಸಂಚರಿಸುವ ಸ್ಥಳದಲ್ಲಿ ಕಂಪೌಂಡ್ ನಿರ್ಮಾಣಕ್ಕೆ ಅನೇಕ ಗುಂಡಿಗಳನ್ನು ತೆಗೆಯಲಾಗಿದೆ. ಅಲ್ಲದೇ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ ಎಂದು ಕೆಎಸ್‍ಆರ್ ಟಿಸಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.