Tag: ಕಂಪೆನಿ

  • ಹೇರ್ ಕಟ್ ಎಡವಟ್ಟು-ಮಾಡೆಲ್‍ಗೆ 2ಕೋಟಿ ಪರಿಹಾರ ನೀಡುವಂತೆ ಆದೇಶ

    ಹೇರ್ ಕಟ್ ಎಡವಟ್ಟು-ಮಾಡೆಲ್‍ಗೆ 2ಕೋಟಿ ಪರಿಹಾರ ನೀಡುವಂತೆ ಆದೇಶ

    ನವದೆಹಲಿ: ಹೇರ್ ಕಟ್ ಮಾಡುವಾಗ ಎಡವಟ್ಟು ಮಾಡಿರುವುದಕ್ಕೆ ಮಾಡೆಲ್ ಗೆ 2 ಕೋಟಿ ಪರಿಹಾರ ನೀಡುವಂತೆ ಹೋಟೆಲ್ ಒಂದಕ್ಕೆ NCDRC (National Consumer Disputes Redressal Commission)ಆದೇಶ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಖ್ಯಾತ ರೂಪದರ್ಶಿಯಾಗಬೇಕು ಎಂಬ ಆಸೆಯಿಂದ ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಿದ್ದ ಮಹಿಳೆಗೆ ತಪೊದಾ ಹೇರ್ ಕಟ್ ಮತ್ತು ಚಿಕಿತ್ಸೆ ಮಾಡಿದ್ದಕ್ಕಾಗಿ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ (NCDRC) ದೆಹಲಿ ಮೂಲದ ಸಲೂನ್ ಒಂದಕ್ಕೆ ಆದೇಶ ನೀಡಿದೆ. ಇದನ್ನೂ ಓದಿ:  ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್‍ನಿಂದ ಸಂಪೂರ್ಣ ಬೆಂಬಲ

    ರೂಪದರ್ಶಿ ಆಶ್ನಾ ರಾಯ್ ತಮ್ಮ ನೀಳ ಕೇಶದ ಕಾರಣದಿಂದಾಗಿ ಹಲವಾರು ಕಂಪೆನಿಗಳ ಕೇಶ ಉತ್ಪನ್ನಗಳ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಐಷಾರಾಮಿ ಹೋಟೆಲ್‍ನಲ್ಲಿ ಇರುವ ಸಲೂನ್‍ಗೆ ಅವರು ಕೇಶವಿನ್ಯಾಸಕ್ಕಾಗಿ ಭೇಟಿಕೊಟ್ಟಿದ್ದರು. ಈ ವೇಳೆ ಅವರ ಕೂದಲು ಹಾಳಾದ್ದರಿಂದ ಜಾಹೀರಾತುಗಳು ತಪ್ಪಿಹೋಗುವ ಸಂದರ್ಭ ಎದುರಾಗಿದೆ. ಹೀಗಾಗಿ 2018 ರಲ್ಲಿ ಕಂಪೆನಿಯ ವಿರುದ್ಧ  NCDRCಗೆ ಅವರು ದೂರು ನೀಡಿದ್ದರು.

    ಈ ಕುರಿತಾಗಿ ವಿಚಾರಣೆ ನಡೆಸಿದ ಎನ್‍ಸಿಡಿಆರ್  ಅಧ್ಯಕ್ಷ ಆರ್.ಕೆ ಅಗರ್‍ವಾಲ್ ಮತ್ತು ಡಾ.ಎಂ ಕಂಠೀಕರ್ ಅವರಿದ್ದ ಪೀಠ ತಪ್ಪಾದ ಹೇರ್ ಕಟ್ ನಿಂದ ರೂಪದರ್ಶಿಯಾಗಬೇಕು ಎಂಬ ಅವರ ಕನಸು ನಾಶವಾಗಿದೆ. ಇದರಿಂದ ಮಾನಸಿಕವಾಗಿ ಅವರು ನೊಂದಿದ್ದಾರೆ. ಹೀಗಾಗಿ ಪರಿಹಾರ ನೀಡುವಂತೆ ಆದೇಶಿಸಿದೆ.

  • ಕರ್ನಾಟಕ ಬಂದ್- ಕೈಗಾರಿಕಾ ಪ್ರದೇಶದಲ್ಲಿ ಎಂದಿನಂತೆ ಕಾರ್ಯ ಚಟುವಟಿಕೆ

    ಕರ್ನಾಟಕ ಬಂದ್- ಕೈಗಾರಿಕಾ ಪ್ರದೇಶದಲ್ಲಿ ಎಂದಿನಂತೆ ಕಾರ್ಯ ಚಟುವಟಿಕೆ

    ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿ ತರುವಂತೆ ಕೈಗೊಂಡಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಅತಿ ದೊಡ್ಡ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶ ಎಂದಿನಂತೆ ಕಾರ್ಯ ಚಟುವಟಿಕೆ ನಡೆಸಿದೆ.

    ಕೈಗಾರಿಕಾ ಪ್ರದೇಶ ಎಂದಿನಂತೆ ಕಂಡು ಬಂದಿದ್ದು, ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಕಂಪೆನಿಗಳು ಉತ್ತಮ ಕಾರ್ಯ ಚಟುವಟಿಕೆ ನಡೆಸುತ್ತಿರುವುದು ಕಂಡು ಬಂದಿದ್ದು, ಯಾವುದೇ ಬಂದ್ ಬಿಸಿ ಇರಲಿಲ್ಲ.

    ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಇಂದು ಬೆಳಗ್ಗೆ ಮೊದಲನೇ ಪಾಳಿ ಕೆಲಸ ಕೈಗೊಂಡಿರುವ ಹಲವಾರು ಕಂಪನಿಗಳು, ಎರಡನೇ ಪಾಳಿ ಕೆಲಸವನ್ನು ಮಧ್ಯಾಹ್ನದ ವೇಳೆಗೆ ಪ್ರಾರಂಭಿಸುವ ಲಕ್ಷಣ ತೋರಿಸಿತ್ತು.

    ಕರ್ಲಾನ್, ಟಿಡಿಪಿಎಸ್, ಮಾರುತಿ ಸುಜುಕಿ, ಜಿಂದಾಲ್ ನಂತಹ ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ಎಂದಿನಂತೆ ಸಾಗಿದ್ದು, ಬಂದ್ ಸಂಪೂರ್ಣ ವಿಫಲವಾಗಿದೆ. ಬುಧವಾರ ಆಟೋ ಮತ್ತು ಟ್ಯಾಕ್ಸಿ ಮತ್ತು ಚಾಲಕರ ಮಾಲೀಕರ ಸಂಘದವರು ಬಂದ್‍ಗೆ ಪಾಲ್ಗೊಳ್ಳುವುದಿಲ್ಲ. ನಮಗೆ ರಾಜ್ಯ ಸಂಘಟನೆಯಿಂದ ಬಂದ್ ಮಾಹಿತಿ ಯಾವುದು ಬಂದಿಲ್ಲ ಎಂದು ತಿಳಿಸಿದ್ದರು.

  • ಅತ್ಯುತ್ತಮ ಕೆಲಸ ಮಾಡಿದ ಉದ್ಯೋಗಿಗಳ ಪಾದ ತೊಳೆದ ಬಾಸ್ – ವಿಡಿಯೋ ವೈರಲ್

    ಅತ್ಯುತ್ತಮ ಕೆಲಸ ಮಾಡಿದ ಉದ್ಯೋಗಿಗಳ ಪಾದ ತೊಳೆದ ಬಾಸ್ – ವಿಡಿಯೋ ವೈರಲ್

    ಬೀಜಿಂಗ್: ಸಾಮಾನ್ಯವಾಗಿ ಕಂಪನಿಗಳಲ್ಲಿ ಶ್ರಮ ವಹಿಸಿ ಕೆಲಸ ಮಾಡಿದರೆ ಮಾಲೀಕರು ನೌಕಕರನ್ನು ಉತ್ತೇಜಿಸುವ ಸಲುವಾಗಿ ಬೋನಸ್, ಬಡ್ತಿ ಅಥವಾ ಗಿಫ್ಟ್ ನೀಡುವುದನ್ನು ನೀವು ಕೇಳಿರಬಹುದು. ಆದರೆ ಚೀನಾದ ಕಂಪನಿಯೊಂದರಲ್ಲಿ ಮಾಲೀಕನೇ ಉದ್ಯೋಗಿಗಳ ಪಾದ ತೊಳೆದ ಪ್ರಸಂಗ ನಡೆದಿದೆ.

    ಈ ಘಟನೆ ನವೆಂಬರ್ 2ರಂದು ಚೀನಾದ ಶಂಡೊಂಗ್ ಪ್ರಾಂತ್ಯದಲ್ಲಿರುವ ಜಿನನ್ ನ 2ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಡೆದಿದೆ.

    ಮಾಲೀಕ ತಮ್ಮ ನೌಕರರ ಶ್ರಮವನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಪಾದಗಳನ್ನು ತೊಳೆಯುವ ಮೂಲಕ ಮತ್ತಷ್ಟು ಉತ್ತಮ ಕೆಲಸ ಮಾಡುವಂತೆ ಪ್ರೇರೇಪಿಸಿದ್ದಾರೆ. ಅಲ್ಲದೆ ಈ ಮೂಲಕ ಮಾಲೀಕ ಮತ್ತು ಉದ್ಯೋಗಿಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ.

    ಇಬ್ಬರು ಹಿರಿಯ ಅಧಿಕಾರಿಗಳು ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಅವರನ್ನು ಕುಳಿತುಕೊಳ್ಳಿಸಿ, ಪಾದ ತೊಳೆಯುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

    ಕಾಸ್ಮೆಟಿಕ್ ಕಂಪನಿಯ ಅಧ್ಯಕ್ಷ ಹಾಗೂ ಹಿರಿಯ ಕಾರ್ಯನಿರ್ವಾಹಕರೊಬ್ಬರು ತಮ್ಮ ಎರಡೂ ಕೈಗಳನ್ನು ಜೋಡಿಸಿ ಕಠಿಣ ಶ್ರಮ ವಹಿಸಿ ಕೆಲಸ ಮಾಡಿದ ಉದ್ಯೋಗಿಗಳ ಮುಂದೆ ತಲೆಬಾಗಿದ್ದಾರೆ. ನಂತರ ಉದ್ಯೋಗಿಗಳನ್ನು ವೇದಿಕೆಗೆ ಕರೆದು, ಸಾಲಾಗಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಬಳಿಕ ಅವರ ಶೂ ಹಾಗೂ ಸಾಕ್ಸ್ ಬಿಚ್ಚಿದ್ದಾರೆ. ಆ ನಂತರ 8 ಮಂದಿ ನೌಕರರು ಕುರ್ಚಿಯಲ್ಲಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಮಾಲೀಕರು ಕಚೇರಿ ಸಿಬ್ಬಂದಿ ಅಥವಾ ನೌಕರರ ಪಾದ ತೊಳೆದಿದ್ದಾರೆ. ಇದನ್ನೂ ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಒಟ್ಟಿನಲ್ಲಿ ಮಾಲೀಕರು, ತಮ್ಮ ಶ್ರೇಯಸ್ಸಿಗೆ ಕಾರಣರಾದ ಉದ್ಯೋಗಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದಲ್ಲದೇ ಮುಂದೆಯೂ ಉತ್ತಮ ಕೆಲಸ ನಿರ್ವಹಿಸುವಂತೆ ಆಶಿಸಿದ್ದಾರೆ.

    ಸದ್ಯ ವೈರಲಾಗುತ್ತಿರುವ ವಿಡಿಯೋಗೆ ಸಾಕಷ್ಟು ಕಮೆಂಟ್ ಗಳು ಬರುತ್ತಿದೆ. ಕೆಲವರು ಕಂಪನಿ ಮಾಲೀಕನ ಕೆಲಸವನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ತೆಗಳಿದ್ದಾರೆ. ಮತ್ತೆ ಕೆಲವರು ಉತ್ತಮ ಕೆಲಸ ಮಾಡಿದರೆ ನೌಕಕರಿಗೆ ಬೋನಸ್ ನೀಡಿದರೆ ಸಾಕು ಎಂದು ಸಲಹೆ ನೀಡಿದ್ದಾರೆ.

    ಇದು ಸರ್ವೇ ಸಾಮಾನ್ಯ. ನಮ್ಮಿಂದಾಗಿ ನೀವು ಸಾಕಷ್ಟು ಹಣ ಮಾಡಿದ್ದೀರಿ. ಹೀಗಾಗಿ ನೀವು ನಿಮ್ಮ ಪಾದ ತೊಳೆದರೆ ಏನೂ ಪ್ರಯೋಜವಾಗಲ್ಲ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಪಾದ ತೊಳೆಯುವ ಮೂಲಕ ಉದ್ಯೋಗಿಗಳು ಮತ್ತೆ ಬೋನಸ್ ಕೇಳದಂತೆ ಮಾಡುವ ಮಾಲೀಕನ ಕುತಂತ್ರ ಇದಾಗಿದೆ ಎಂದಿದ್ದಾರೆ. ಮಗದೊಬ್ಬರು, ಇದೂ ಒಂದು ಅವರ ಸಾಧನೆಯಾಗಿದೆ. ಮುಂದೆ ಅವರ ರೆಸ್ಯೂಮ್ ನಲ್ಲಿ ಬಳಸಿಕೊಳ್ಳಬಹುದೆಂದು ವ್ಯಂಗ್ಯವಾಡಿದ್ದಾರೆ.

  • ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ತಿಳಿದ ಪಾಕ್ ನಿರೂಪಕಿ ಟ್ರೋಲ್: ವಿಡಿಯೋ

    ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ತಿಳಿದ ಪಾಕ್ ನಿರೂಪಕಿ ಟ್ರೋಲ್: ವಿಡಿಯೋ

    ಇಸ್ಲಾಮಾಬಾದ್: ಪಾಕಿಸ್ತಾನದ ಟಿವಿ ಚಾನೆಲ್ ನಿರೂಪಕಿಯೊಬ್ಬರು ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ತಿಳಿದು ಟ್ರೋಲ್ ಆಗುತ್ತಿದ್ದಾರೆ.

    ಪಾಕಿಸ್ತಾನದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ನೇರ ಪ್ರಸಾರದಲ್ಲಿ ಸಾಫ್ಟ್ ವೇರ್ ದಿಗ್ಗಜ ಆ್ಯಪಲ್ ಕಂಪನಿಯ ವಾರ್ಷಿಕ ಬಜೆಟ್ ಪಾಕಿಸ್ತಾನದ ಬಜೆಟ್‍ಗಿಂತಲೂ ಹಲವಾರು ಪಟ್ಟು ಹೆಚ್ಚಾಗಿದೆ ಎಂದು ಪತ್ರಕರ್ತ ನೈಲಾ ಇನಾಯತ್ ಹೇಳಿದ್ದರು.

    ಈ ವೇಳೆ ನಿರೂಪಕಿ,” ಹೌದು. ಸೇಬಿನ ವ್ಯಾಪಾರವು ಅಭಿವೃದ್ಧಿ ಹೊಂದುತ್ತಿದೆ. ಅದರಲ್ಲಿ ಹಲವು ರೀತಿಯ ವೈವಿಧ್ಯಗಳಿವೆ, ನಾನು ಈ ಬಗ್ಗೆ ಕೇಳಿದ್ದೇನೆ ಎಂದು ಹೇಳಿದ್ದಾರೆ. ತಕ್ಷಣ ಅತಿಥಿ ನೈಲಾ ಇನಾಯತ್ ನಾನು ಸಾಫ್ಟ್ ವೇರ್ ಕಂಪನಿ ಆ್ಯಪಲ್ ಬಗ್ಗೆ ಹೇಳುತ್ತಿದ್ದೇನೆ ವಿನಃ ಸೇಬಿನ ಹಣ್ಣಿನ ಬಗ್ಗೆ ಅಲ್ಲ ಎಂದು ಕಾಲೆಳೆದಿದ್ದಾರೆ.

    ಜುಲೈ 4ರಂದು ಪಾಕಿಸ್ತಾನದ ಪತ್ರಕರ್ತ ಈ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿದ್ದರು. ಆ್ಯಪಲ್ ಬಗ್ಗೆ ಆಂಕರ್ ಕನ್‍ಫ್ಯೂಸ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಜನರು ವಿಧವಿಧವಾಗಿ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಈ ವಿಡಿಯೋ ನೋಡಿ ಕೆಲವರು ಇದು ನ್ಯೂಸ್ ಚಾನೆಲ್ ಅಥವಾ ಕಾಮಿಡಿ ಚಾನೆಲಾ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ತುಂಬಾ ಕೆಟ್ಟ ನಿರೂಪಣೆ. ಈ ಕಾರ್ಯಕ್ರಮ ಮುಗಿದ ಮೇಲೆ ಧಾನ್ಯಗಳ ಬಗ್ಗೆಯೂ ಮಾತನಾಡಿ ಎಂದು ಟ್ವೀಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

  • ಸನ್ನಿ ಲಿಯೋನ್ ಎಂದಿದ್ದ ಆ್ಯಂಕರ್ ಕಾಲೆಳೆದ ಕಾಂಡೋಮ್ ಕಂಪನಿ!

    ಸನ್ನಿ ಲಿಯೋನ್ ಎಂದಿದ್ದ ಆ್ಯಂಕರ್ ಕಾಲೆಳೆದ ಕಾಂಡೋಮ್ ಕಂಪನಿ!

    ಮುಂಬೈ: ರಾಷ್ಟ್ರೀಯ ಸುದ್ದಿ ವಾಹಿನಿ ನಿರೂಪಕ ಎಕ್ಸಿಟ್ ಪೋಲ್ ದಂದು ನಟ ಸನ್ನಿ ಡಿಯೋಲ್ ಹೆಸರು ಹೇಳುವ ಬದಲು ಸನ್ನಿ ಲಿಯೋನ್ ಹೆಸರು ಹೇಳಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ಸನ್ನಿ ಲಿಯೋನ್ ಹೆಸರು ಹೇಳಿದ್ದಕ್ಕೆ ಕಾಂಡೋಮ್ ಕಂಪನಿ ನಿರೂಪಕರ ಕಾಲೆಳೆದಿದೆ.

    ನಿರೂಪಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮ್ಯಾನ್‍ಫೋರ್ಸ್ ಕಂಪನಿ, “ಡಿಯರ್ ಅರ್ನಬ್, ನಾವು ಅರ್ಥ ಮಾಡಿಕೊಳ್ಳುತ್ತೇವೆ. ಸನ್ನಿ ನಮ್ಮ ಮನಸ್ಸಿನಲ್ಲೂ ಯಾವಾಗಲೂ ಇರುತ್ತಾರೆ” ಎಂದು ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಕಾಂಡೋಮ್ ಕಂಪನಿ ಟ್ವೀಟ್‍ನಿಂದ ನಿರೂಪಕ ಮತ್ತಷ್ಟು ಟ್ರೋಲ್ ಆಗುತ್ತಿದ್ದಾರೆ.

    ಈ ವೈರಲ್ ವಿಡಿಯೋ ಬಗ್ಗೆ ಸನ್ನಿ ಲಿಯೋನ್ ಕೂಡ ಪ್ರತಿಕ್ರಿಯಿಸಿದ್ದರು. ಸನ್ನಿ ಲಿಯೋನ್ ತಮ್ಮ ಟ್ವಿಟ್ಟರಿನಲ್ಲಿ, “ನಾನು ಎಷ್ಟು ಮತಗಳಿಂದ ಮುನ್ನಡೆಯಲ್ಲಿ ಇದ್ದೇನೆ?” ಎಂದು ಟ್ವೀಟ್ ಮಾಡಿ ನಿರೂಪಕನ ಕಾಲೇಳೆದಿದ್ದರು. ಸನ್ನಿ ಲಿಯೋನ್ ಪ್ರತಿಕ್ರಿಯೆಗೆ ಜನರು ತಮ್ಮ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ರೀ-ಟ್ವೀಟ್ ಮಾಡಿದ್ದರು.

    ಬಾಲಿವುಡ್ ನಟ ಸನ್ನಿ ಡಿಯೋಲ್ ಪಂಜಾಬ್‍ನ ಗುರ್ದಾಸ್‍ಪುರದಲ್ಲಿ ಬಿಜೆಪಿ ಪರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸನ್ನಿ ಡಿಯೋಲ್ ಈ ಚುನಾವಣೆಯಲ್ಲಿ 82,459 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸನ್ನಿ ಡಿಯೋಲ್ ಅವರು ಕಾಂಗ್ರೆಸ್ ಹಿರಿಯ ನಾಯಕ ಸುನೀಲ್ ಜಾಕಾ ವಿರುದ್ಧ ಸ್ಪರ್ಧಿಸಿದ್ದರು.

  • ಕುವೈಟ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿದ 35 ಮಂದಿ ಮಂಗ್ಳೂರಿಗರು!

    ಕುವೈಟ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿದ 35 ಮಂದಿ ಮಂಗ್ಳೂರಿಗರು!

    ಮಂಗಳೂರು: ಜಿಲ್ಲೆಯ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿ ಇರುವ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್‍ಮೆಂಟ್ ಎನ್ನುವ ಕಂಪನಿಯಿಂದ ಮೋಸಕ್ಕೊಳಗಾದ 35 ಮಂದಿ ಮಂಗಳೂರಿಗರು ಕಳೆದ 6 ತಿಂಗಳಿನಿಂದ ಕುವೈಟ್‍ನಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.

    ಕುವೈಟ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್‍ಮೆಂಟ್ ಕಂಪನಿಯ ಪ್ರಸಾದ್ ಶೆಟ್ಟಿ ಎಂಬವರು ಪ್ರತಿಯೊಬ್ಬರಿಂದ 65 ಸಾವಿರ ರೂ. ವಸೂಲಿ ಮಾಡಿದ್ದರು. ಇದನ್ನು ನಂಬಿ ಕುವೈಟ್‍ಗೆ ತೆರಳಿದ್ದ ಜನರು ಮಾತ್ರ ಸರಿಯಾದ ಕೆಲಸ ದೊರೆಯದೆ, ಕಳೆದ 6 ತಿಂಗಳಿಂದ ಪರದಾಡುತ್ತಿದ್ದಾರೆ.

    ಪ್ರಸ್ತುತ ಊಟಕ್ಕೂ ಗತಿಯಿಲ್ಲದೆ ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ. ಇಂಡಿಯನ್ ಎಂಬೆಸಿಯನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗದೆ ಕೊನೆಯದಾಗಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಅವರನ್ನು ವಿಡಿಯೋ ರೆಕಾರ್ಡ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.

    ಸಂತ್ರಸ್ತರ ವಿಡಿಯೋ ವೈರಲ್‍ಗೊಳ್ಳುವ ಮೂಲಕ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ತಲುಪಿದ್ದು, ಕೂಡಲೇ ಸ್ಪಂದಿಸಿದ ಶಾಸಕರು ಕುವೈಟ್‍ನಲ್ಲಿರುವ ತನ್ನ ಗೆಳೆಯರನ್ನು ಸಂಪರ್ಕಿಸಿ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ.

    ಅಲ್ಲದೆ ಕೇಂದ್ರ ಸಚಿವಾಲಯದ ಮೂಲಕ ಇಂಡಿಯನ್ ಎಂಬೆಸಿಯನ್ನು ಸಂಪರ್ಕಿಸಿ ಸಂತ್ರಸ್ತರನ್ನು ಹಿಂದಕ್ಕೆ ಕರೆಸಿಕೊಳ್ಳುವ ವ್ಯವಸ್ಥೆಯ ಬಗ್ಗೆಯೂ ಕ್ರಮ ಕೈಗೊಂಡಿದ್ದಾರೆ. ಇಂದು ಇಂಡಿಯನ್ ಎಂಬೆಸಿ ಸಂತ್ರಸ್ತರನ್ನು ಭೇಟಿಯಾಗಲಿದೆ.

  • ಆಂಬಿಡೆಂಟ್ ಆಯ್ತು ಇದೀಗ ಮತ್ತೊಂದು ಚಿಟ್‍ಫಂಡ್ ಕಂಪನಿ ಮೇಲೆ ಸಿಸಿಬಿ ಕಣ್ಣು!

    ಆಂಬಿಡೆಂಟ್ ಆಯ್ತು ಇದೀಗ ಮತ್ತೊಂದು ಚಿಟ್‍ಫಂಡ್ ಕಂಪನಿ ಮೇಲೆ ಸಿಸಿಬಿ ಕಣ್ಣು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗ ಚೀಟ್ ಫಂಡ್ ಕಂಪನಿಗಳದ್ದೆ ಹವಾ ಆಗಿದ್ದು, ಸದ್ಯಕ್ಕೆ ಸಿಸಿಬಿ ಪೊಲೀಸರು ಆಂಬಿಡೆಂಟ್ ಕೇಸ್ ತನಿಖೆ ಮಾಡುತ್ತಿದ್ದಾರೆ. ಆದರೆ ಈಗ ಅಜ್ಮೀರ ಕಂಪನಿ ಕರ್ಮಕಾಂಡ ಹೊರ ಬಂದಿದೆ. ಆಂಬಿಡೆಂಟ್ ಚಿಟ್‍ಫಂಡ್ ವಂಚನೆ ಕೇಸನ್ನು ಜಾಲಾಡುತ್ತಿರುವ ಸಿಸಿಬಿ ಪೊಲೀಸರಿಗೆ ಇದೀಗ ಮತ್ತೊಂದು ವಂಚನೆ ಕೇಸ್ ಹೆಗಲೇರಿದೆ.

    ಜಯನಗರ ಮೂಲದ ಅಜ್ಮೀರ ಕಂಪನಿ ಸಾವಿರಾರು ಜನರಿಂದ ನೂರಾರು ಕೋಟಿ ಹಣ ಸಂಗ್ರಹ ಮಾಡಿ ಗ್ರಾಹಕರಿಂದ ಪಡೆದ ಹಣಕ್ಕೆ 18% ಬಡ್ಡಿ ನೀಡುವ ಆಮಿಷವೊಡ್ಡಿತ್ತು. ಜನರು ಕೂಡ ಆಭರಣ, ಮನೆ, ಚಿನ್ನ ಮಾರಿ ಲಕ್ಷ ಲಕ್ಷ ಹಣ ಹೂಡಿದ್ದಾರೆ. ಆದರೆ ಮಾಲೀಕ ತಬ್ರೇಜ್ ಹಾಗೂ ದಸ್ತಗೀರ್ ಈಗ ಕಚೇರಿಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾನೆ ಎಂದು ಹಣ ಕಳೆದುಕೊಂಡ ನಾಜೀಯಾ ಹೇಳಿದ್ದಾರೆ.

    ಹಣ ಕಳೆದುಕೊಂಡವರು ವಂಚನೆ ಪ್ರಕರಣದ ಬಗ್ಗೆ ತನಿಖೆ ಮಾಡಬೇಕು. ನಮಗೂ ಹಣ ವಾಪಸ್ ಕೊಡಿಸಿ ಅಂತ ಸಿಸಿಬಿ ಮುಂದೆ ಪ್ರತಿಭಟಿಸಿದ್ದಾರೆ. ಒಂದು ವಾರದೊಳಗೆ ಅಕೌಂಟ್‍ ಗಳ ಪರಿಶೀಲನೆ ನಡೆಸಿ ಹಣ ಎಲ್ಲೆಲ್ಲಿ ಹೋಗಿದೆ ಅನ್ನೋದನ್ನ ಪತ್ತೆ ಹಚ್ಚುತ್ತೇವೆ ಅಂತ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಭರವಸೆ ಕೊಟ್ಟಿದ್ದಾರೆ.

    ಕೋಟಿ ಕೋಟಿ ಹಣ ವಂಚಿಸಿದ ಮಾಲೀಕರಾದ ತಬ್ರೇಜ್ ನಾಪತ್ತೆಯಾಗಿದ್ದು, ದಸ್ತಗೀರ್ ಜಾಮೀನು ಪಡೆದಿದ್ದಾನೆ ಎಂದು ತಿಳಿದು ಬಂದಿದೆ. ಬಣ್ಣ ಬಣ್ಣದ ಮಾತುಗಳಿಂದ ಜನರನ್ನು ಯಾಮಾರಿಸುವ ಇಂತಹ ಬೋಗಸ್ ಕಂಪನಿಗಳಿಗೆ ಪೊಲೀಸರು ಬ್ರೇಕ್ ಹಾಕಬೇಕಿದೆ. ಜನರು ಕೂಡ ಇಂತಹವರ ಬಣ್ಣದ ಮಾತುಗಳಿಗೆ ಎಚ್ಚೆತ್ತುಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದೀಪಿಕಾ-ರಣ್‍ವೀರ್ ಮದ್ವೆಗೆ ಕಾಂಡೋಮ್ ಕಂಪೆನಿಯಿಂದ ವಿನೂತನ ವಿಶ್

    ದೀಪಿಕಾ-ರಣ್‍ವೀರ್ ಮದ್ವೆಗೆ ಕಾಂಡೋಮ್ ಕಂಪೆನಿಯಿಂದ ವಿನೂತನ ವಿಶ್

    ಮುಂಬೈ: ಬಾಲಿವುಡ್ ಬಾಜಿರಾವ್- ಮಸ್ತಾನಿ ಆದ ರಣ್‍ವೀರ್ ಹಾಗೂ ದೀಪಿಕಾ ನ.14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಇವರ ಮದುವೆಗೆ ಬಾಲಿವುಡ್ ತಾರೆಯರು, ಗಣ್ಯವ್ಯಕ್ತಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಈ ಮಧ್ಯೆ ಪ್ರತಿಷ್ಠಿತ ಕಾಂಡೋಮ್ ಕಂಪೆನಿಯೊಂದು ದೀಪ್‍ವೀರ್ ಮದುವೆಗೆ ವಿನೂತನವಾಗಿ ವಿಶ್ ಮಾಡಿದೆ.

    ಡ್ಯೂರೆಕ್ಸ್ ಎಂಬ ಕಾಂಡೋಮ್ ಕಂಪೆನಿ ದೀಪಿಕಾ ಹಾಗೂ ರಣ್‍ವೀರ್ ಮದುವೆಗೆ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದೆ. ಡ್ಯೂರೆಕ್ಸ್ 2008ರಲ್ಲಿ ಬೇಒನ್ಸ್ ಸೂಪರ್ ಹಿಟ್ ಸಿಂಗಲ್ ಲೇಡಿಸ್ ಹಾಡಿನ ಸಾಲನ್ನು ಬರೆದು ವಿನೂತನವಾಗಿ ಶುಭಾಶಯ ತಿಳಿಸಿದೆ.

    ಡ್ಯೂರೆಕ್ಸ್ ತಮ್ಮ ಟ್ವಿಟ್ಟರಿನಲ್ಲಿ, “ದೀಪಿಕಾ ಹಾಗೂ ರಣ್‍ವೀರ್ ಅಧಿಕೃತವಾಗಿ ಅದರ ಮೇಲೆ ರಿಂಗ್ ಹಾಕಿಕೊಳ್ಳುವುದಕ್ಕೆ ಶುಭಾಶಯಗಳು” ಎಂದು ಟ್ವೀಟ್ ಮಾಡಿದೆ. 2008ರಲ್ಲಿ ಸಿಂಗಲ್ ಲೇಡಿಸ್ ಹಾಡಿಗೆ ಟ್ವಿಸ್ಟ್ ನೀಡಿ ನಾವು ನಿಮ್ಮನ್ನು ಸತ್ತುವರಿಸಿದ್ದೇವೆ ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದೆ.

    ಈ ಹಿಂದೆ 2017ರಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಟಲಿಯ ಟಸ್ಕನ್ ಅಲ್ಲಿ ಮದುವೆಯಾಗಿದ್ದಾಗ ಡ್ಯೂರೆಕ್ಸ್ ಕಂಪೆನಿ ಅವರಿಗೂ ವಿನೂತನವಾಗಿ ಶುಭಾಶಯ ತಿಳಿಸಿತ್ತು. ಡಿಸೆಂಬರ್ 12ರಂದು ಡ್ಯೂರೆಕ್ಸ್ ತಮ್ಮ ಟ್ವಿಟ್ಟರಿನಲ್ಲಿ, “ವಿರಾಟ್ ಹಾಗೂ ಅನುಷ್ಕಾ ನಿಮಗೆ ಮದುವೆಯ ಶುಭಾಶಯಗಳು. ನಿಮ್ಮ ನಡುವೆ ಡ್ಯೂರೆಕ್ಸ್ ಬಿಟ್ಟು ಏನೂ ಬರದೇ ಇರಲಿ” ಎಂದು ಟ್ವೀಟ್ ಮಾಡಿತ್ತು.

    ದೀಪ್‍ವೀರ್ ಕೊಂಕಣಿ ಹಾಗೂ ಸಿಖ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಇಟಲಿಯಿಂದ ನ.18ಕ್ಕೆ ಭಾರತಕ್ಕೆ ವಾಪಸ್ಸಾಗಲಿರುವ ಬಾಜಿರಾವ್ ಮಸ್ತಾನಿ ದಂಪತಿ ನ.21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‍ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆಯವರ ಬಂಧುಗಳು ಮತ್ತು ಆಪ್ತ ಸ್ನೇಹಿತರು ಪಾಲ್ಗೊಳ್ಳಲಿದ್ದಾರೆ. ನ.21ರಂದು ಮುಂಬೈಯಲ್ಲಿ ಇನ್ನೊಂದು ರಿಸೆಪ್ಷನ್ ಪಾರ್ಟಿ ನಡೆಯಲಿದ್ದು, ಅದರಲ್ಲಿ ಬಾಲಿವುಡ್ ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

    https://twitter.com/deepikapadukone/status/1063079371748057089?ref_src=twsrc%5Etfw%7Ctwcamp%5Etweetembed%7Ctwterm%5E1063079371748057089&ref_url=https%3A%2F%2Fpublictv.jssplgroup.com%2Fdeepveer-marriage-photo-reveal%2Famp

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚಾಲಕನಿಲ್ಲದೇ 92 ಕಿ.ಮೀ ಚಲಿಸಿದ ರೈಲು!

    ಚಾಲಕನಿಲ್ಲದೇ 92 ಕಿ.ಮೀ ಚಲಿಸಿದ ರೈಲು!

    ಪರ್ಥ್: ಕಬ್ಬಿಣದ ಅದಿರನ್ನು ಲೋಡ್ ಮಾಡಲಾದ ರೈಲೊಂದು ಚಾಲಕನಿಲ್ಲದೇ 92 ಕಿ.ಮೀ ಚಲಿಸಿರುವ ಘಟನೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಈ ಘಟನೆಯಿಂದಾಗಿ ರೈಲನ್ನು ನಿಲ್ಲಿಸಲು ಉದ್ದೇಶಪೂರ್ವಕವಾಗಿ ಹಳಿತಪ್ಪಿಸಲಾಗಿದೆ. ದಕ್ಷಿಣ ಆಸ್ಟ್ರೇಲಿಯಾ ಪಿಲಾಬರ ಗಣಿ ಕಂಪನಿಗೆ ಸೇರಿದ ಕಬ್ಬಿಣ ಅದಿರನ್ನು ತುಂಬಿದ್ದ ರೈಲು ಚಾಲಕನಿಲ್ಲದೇ ಸುಮಾರು 92 ಕಿ.ಮೀ. ಚಲಿಸಿದೆ. ಈ ಘಟನೆಯ ನಂತರ ಬಿಎಚ್‍ಪಿ ಸಂಸ್ಥೆಯು ರೈಲು ನಿರ್ವಹಣೆ ಮಾಡುತ್ತಿದ್ದವರನ್ನು ಅಮಾನತುಗೊಳಿಸಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದೆ.

    ಚಲಿಸುತ್ತಿದ್ದ ರೈಲನ್ನು ತಡೆಯುವುದಕ್ಕಾಗಿ ಹಳಿತಪ್ಪಿಸಿದ್ದರಿಂದ ರೈಲಿಗೆ ಹಾನಿ ಉಂಟಾಗಿದ್ದು, ಈ ಅವಘಡದಿಂದಾಗಿ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ. ಚಾಲಕ ರೈಲಿನಲ್ಲಿದ್ದ ಸಮಸ್ಯೆಯನ್ನು ನೋಡುತ್ತಿದ್ದಾಗ ರೈಲು ಇದ್ದಕ್ಕಿದ್ದಂತೆ ಚಲಿಸಿದೆ.

    ಬಿಎಚ್‍ಪಿ ಸಂಸ್ಥೆ ವಿಶ್ವದ ಅತಿದೊಡ್ಡ ಗಣಿಗಾರಿಕಾ ಕಂಪನಿಯಾಗಿದ್ದು, ಗಣಿಯಿಂದ ಬಂದರಿಗೆ ಕಬ್ಬಿಣದ ಅದಿರನ್ನು ಸಾಗಿಸಲು 1 ಸಾವಿರ ಕಿ.ಮೀ ಉದ್ದದ ರೈಲ್ವೇ ಹಳಿ ಜಾಲವನ್ನು ಹೊಂದಿದೆ. ಈ ಕಂಪನಿ ಜಪಾನ್ ಮತ್ತು ಚೀನಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅದಿರನ್ನು ರಫ್ತು ಮಾಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೆಕ್ಸ್ ನಲ್ಲಿ ತೊಡಗಿದ್ದಾಗ ಮಂಚ ಮುರಿತ- ಬೆಡ್ ಕಂಪನಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆ

    ಸೆಕ್ಸ್ ನಲ್ಲಿ ತೊಡಗಿದ್ದಾಗ ಮಂಚ ಮುರಿತ- ಬೆಡ್ ಕಂಪನಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆ

    ಲಂಡನ್: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೆಕ್ಸ್ ನಲ್ಲಿ ತೊಡಗಿದ್ದಾಗ ಮಂಚ ಮುರಿದಿದ್ದು, ಈಗ ಆಕೆ ಬೆಡ್ ಕಂಪನಿಯ ವಿರುದ್ಧ ಹೈಕೋರ್ಟ್‍ನಲ್ಲಿ ಮೆಟ್ಟಿಲೇರಿದ ಪ್ರಕರಣವೊಂದು ಲಂಡನ್‍ನಲ್ಲಿ ಬೆಳಕಿಗೆ ಬಂದಿದೆ.

    ಕ್ಲೇರ್ ಬ್ಸಬಿ(46) ಬೆಡ್ ಕಂಪನಿ ಮೇಲೆ ಕೇಸ್ ಹಾಕಿದ ಮಹಿಳೆ. ಕ್ಲೇರ್ ತನ್ನ ಪ್ರಿಯಕರ ಜಾನ್ ಮರ್ಷಾಲ್ ಜೊತೆ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದಳು. ಈ ವೇಳೆ ಇಬ್ಬರು ಬೇರೆ ಆಯಾಮದಲ್ಲಿ ತಿರುಗುವಾಗ ಬೆಡ್ ಮುರಿದಿದೆ. ಮೂರು ದಿನಗಳ ಹಿಂದೆ ಖರೀದಿಸಿದ ಬೆಡ್ ಮುರಿದಿರುವುದು ನೋಡಿ ಕ್ಲೇರ್ ಲಂಡನ್ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

    ಜಾನ್ ಹಾಗೂ ಕ್ಲೇರ್ ಬೆಡ್‍ನಿಂದ ಕೆಳಗೆ ಬಿದಿದ್ದು, ಜಾನ್‍ಗೆ ಸಣ್ಣಪುಟ್ಟ ಗಾಯಗಳಾಗಿದೆ. ಕ್ಲೇರ್ ಗೆ ತೀವ್ರ ಪ್ರಮಾಣದಲ್ಲಿ ಪೆಟ್ಟು ಬಿದ್ದಿದ್ದು, ಸ್ಪೈನಲ್ ಕಾರ್ಡ್ ಮುರಿದಿದೆ. ಈಗ ಆಕೆ ವೀಲ್ ಚೇರ್ ನಲ್ಲಿ ಜೀವನ ಕಳೆಯುತ್ತಿದ್ದಾರೆ. ಹಾಗಾಗಿ ಕ್ಲೇರ್ ಬಕ್ರ್ಷೈರ್ ಬೆಡ್ ಕಂಪನಿ ಲಿ. ವಿರುದ್ಧ ಹೈಕೋರ್ಟ್ ನಲ್ಲಿ 1 ಮಿಲಿಯನ್ ಡಾಲರ್ (7,34,75,000) ಹಣ ನೀಡುವಂತೆ ಕೇಸ್ ಹಾಕಿದ್ದಾಳೆ.

    ಮಹಿಳೆ ಮಂಚವನ್ನು ಖರೀದಿಸಿದಾಗ ಅದರ ಜೋಡಣೆ ಸರಿಯಾಗಿತ್ತು. ಆ ಮಂಚದಲ್ಲಿ ಯಾವುದೇ ದೋಷವಿರಲಿಲ್ಲ ಎಂದು ಬೆಡ್ ಕಂಪನಿ ಮಹಿಳೆಯ ಆರೋಪವನ್ನು ತಳ್ಳಿ ಹಾಕಿದೆ. ಸದ್ಯ ಕ್ಲೇರ್ ತನ್ನ ಮೊದಲ ಪತಿಗೆ ವಿಚ್ಛೇದನ ನೋಡಿ ಒಬ್ಬಳೇ ಜೀವನ ಸಾಗಿಸುತ್ತಿದ್ದಳು. ಈ ನಡುವೆ ಇಂತಹ ಘಟನೆ ನಡೆದಿದ್ದು, ತನ್ನ ಜೀವನ ನಡೆಸಲು ಹಣ ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv