Tag: ಕಂಪಾಲಾ

  • ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದೆ: ಜೈಶಂಕರ್‌

    ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದೆ: ಜೈಶಂಕರ್‌

    ಕಂಪಾಲ (ಉಗಾಂಡಾ): ವಿದೇಶಾಂಗ ಸಚಿವ ಎಸ್. ಜೈಶಂಕರ್ (Jai Shankar) ಅವರು ಇಂದು ಉಗಾಂಡಾದ (Uganda) ಕಂಪಾಲಾದಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ಮತ್ತು ಪ್ಯಾಲೆಸ್ತೀನ್ ವಿದೇಶಾಂಗ ಸಚಿವ ಡಾ.ರಿಯಾದ್ ಅಲ್-ಮಲಿಕಿ (Riyad al-Maliki) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

    ಶುಕ್ರವಾರ ಆರಂಭವಾದ ಅಲಿಪ್ತ ಚಳವಳಿಯ (NAM) ಎರಡು ದಿನಗಳ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಜೈಶಂಕರ್ ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಜೈಶಂಕರ್ ಅವರು, ಡಾ. ರಿಯಾದ್ ಅಲ್-ಮಲಿಕಿ ಅವರನ್ನು ಭೇಟಿಯಾಗಲು ಸಂತೋಷವಾಯಿತು ಎಂದಿದ್ದಾರೆ. ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಅವರೊಂದಿಗೆ ಸಮಗ್ರ ಚರ್ಚೆ ನಡೆಸಲಾಯಿತು. ಅವರು ಕೂಡ ಸಂಘರ್ಷದ ಮಾನವೀಯ ಮತ್ತು ರಾಜಕೀಯ ಆಯಾಮಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

    ಮಾನವೀಯ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದ್ದು, ಇದು ಯುದ್ಧ ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡುವಂತಿರಬೇಕು ಎಂದು ಜೈಶಂಕರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಅಗ್ನಿ ತೀರ್ಥ ಕಡಲತೀರದಲ್ಲಿ ನರೇಂದ್ರ ಮೋದಿ ಪವಿತ್ರ ಸ್ನಾನ

    ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮ್ ಸಿಂಗ್ ಅವರೊಂದಿಗೆ ದ್ವಿಪಕ್ಷೀಯ ಉಪಕ್ರಮಗಳ ಪ್ರಗತಿಯನ್ನು ಚರ್ಚಿಸಿದರು. ಕಂಪಲಾದಲ್ಲಿ ನಡೆದ NAM ಶೃಂಗಸಭೆಯ ಸಂದರ್ಭದಲ್ಲಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಭೇಟಿಯಾಗಲು ಸಂತೋಷವಾಗಿದೆ ಎಂದು ಜೈಶಂಕರ್ ಅವರು ಪೋಸ್ಟ್ ಮಾಡಿದ್ದಾರೆ. ವಿದೇಶಿ ವಿನಿಮಯ ಮೀಸಲುಗಳ ತೀವ್ರ ಕೊರತೆಯಿಂದಾಗಿ 2022 ರಲ್ಲಿ ಶ್ರೀಲಂಕಾವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು. ದೇಶವು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಭಾರತವು ತನ್ನ ‘ನೈಬರ್‌ಹುಡ್ ಫಸ್ಟ್’ ನೀತಿಗೆ ಅನುಗುಣವಾಗಿ ಸಾಲ ಸೌಲಭ್ಯಗಳು ಮತ್ತು ಕರೆನ್ಸಿ ಬೆಂಬಲದ ಮೂಲಕ ಬಹು ಆಯಾಮದ ಸಹಾಯವನ್ನು ನೀಡಿತು ಎಂದರು.

    ಒಟ್ಟಿನಲ್ಲಿ NAM ಶೃಂಗಸಭೆಯಲ್ಲಿ ಅತ್ಯುತ್ತಮ ವ್ಯವಸ್ಥೆಗಳಿಗಾಗಿ ಜೈಶಂಕರ್‌ ಅವರು ಧನ್ಯವಾದಗಳನ್ನು ತಿಳಿಸಿದರು. ಉಗಾಂಡಾದ ಅಧ್ಯಕ್ಷ ಸ್ಥಾನಕ್ಕೆ ಭಾರತದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಶ್ರೀಲಂಕಾ, ಪ್ಯಾಲೆಸ್ಟೇನ್‌ ಜೊತೆಗೆ ಬಹ್ರೇನ್, ಸರ್ಬಿಯಾ, ಬೊಲಿವಿಯಾ, ಅಜೆರ್ಬೈಜಾನ್ ಮತ್ತು ವೆನೆಜುವೆಲಾದ ತಮ್ಮ ಸಹವರ್ತಿಗಳೊಂದಿಗೆ ಕೂಡ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.

  • ಉಗಾಂಡಾದ ಅಧರ ಶಾಲೆಗೆ ಬೆಂಕಿ – ಮಕ್ಕಳು ಸೇರಿ 11 ಮಂದಿ ದುರ್ಮರಣ

    ಉಗಾಂಡಾದ ಅಧರ ಶಾಲೆಗೆ ಬೆಂಕಿ – ಮಕ್ಕಳು ಸೇರಿ 11 ಮಂದಿ ದುರ್ಮರಣ

    ಕಂಪಾಲಾ: ಅಂಧರ ಶಾಲೆಗೆ (School For The Blind) ಬೆಂಕಿ (Fire) ಬಿದ್ದಿರುವ ಪರಿಣಾಮ ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿರುವ ಭೀಕರ ಘಟನೆ ಉಗಾಂಡಾದಲ್ಲಿ (Uganda) ನಡೆದಿರುವುದಾಗಿ ಮಂಗಳವಾರ ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಉಗಾಂಡಾದ ರಾಜಧಾನಿ ಕಂಪಾಲಾದಿಂದ (Kampala) ಹೊರಗಿರುವ ಗ್ರಾಮೀಣ ಸಮುದಾಯದ ಶಾಲೆಯೊಂದರಲ್ಲಿ ನಡೆದಿದೆ. ಮುಕೊನೊ ಜಿಲ್ಲೆಯ ಅಂಧರ ಶಾಲೆಯಲ್ಲಿ ರಾತ್ರಿಯ ವೇಳೆ ಘಟನೆ ಸಂಭವಿಸಿದ್ದಾಗಿ ಪೊಲೀಸ್ ವಕ್ತಾರ ಲ್ಯೂಕ್ ಓವೊಯೆಸಿಗಿರ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಾದ್ಯಂತ ವಾಟ್ಸಪ್‌ಗೂ ಗ್ರಹಣ – ಸಂದೇಶ ಕಳುಹಿಸಲಾಗದೇ ಜನರ ಒದ್ದಾಟ

    ಘಟನೆಯ ಬಗ್ಗೆ ಅಧಿಕಾರಿಗಳು ವಿವರವಾದ ಮಾಹಿತಿ ನೀಡಿಲ್ಲವಾದರೂ ಅನಾಹುತದ ಬಗ್ಗೆ ಪೂರ್ವ ಆಫ್ರಿಕನ್ ದೇಶದ ಶಿಕ್ಷಣ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ 2022ರಲ್ಲಿ ಕಂಪಾಲಾದ ಪ್ರಮುಖ ಬೋರ್ಡಿಂಗ್ ಶಾಲೆಯ 2 ವಸತಿ ನಿಲಯಗಳು ಪ್ರತ್ಯೇಕ ಘಟನೆಗಳಲ್ಲಿ ಬೆಂಕಿ ತಗುಲಿ ನಾಶವಾಗಿತ್ತು. ಸದ್ಯ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. 2008ರಲ್ಲಿ ಕಂಪಾಲಾ ಬಳಿಯ ಬೋರ್ಡಿಂಗ್ ಶಾಲೆಯಲ್ಲಿ ರಾತ್ರಿಯ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು, 19 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇದನ್ನೂ ಓದಿ: ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ- ರೋಡ್ ರೋಮಿಯೋಗಳಿಗೆ ಕೋರ್ಟ್ ಖಡಕ್ ಎಚ್ಚರಿಕೆ

    Live Tv
    [brid partner=56869869 player=32851 video=960834 autoplay=true]

  • ಮದ್ವೆಯಾದ 2 ವಾರದ ನಂತ್ರ ಪತ್ನಿಯ ನಿಜ ರೂಪ ನೋಡಿ ವರನಿಗೆ ಶಾಕ್

    ಮದ್ವೆಯಾದ 2 ವಾರದ ನಂತ್ರ ಪತ್ನಿಯ ನಿಜ ರೂಪ ನೋಡಿ ವರನಿಗೆ ಶಾಕ್

    – ಪೊಲೀಸ್ರು ವಧುವಿನ ಬಟ್ಟೆ ಬಿಚ್ಚಿದಾಗ ರಹಸ್ಯ ಬಯಲು

    ಕಂಪಾಲಾ: ವರನೊಬ್ಬನಿಗೆ ಮದುವೆಯಾದ ಎರಡೇ ವಾರದಲ್ಲಿ ತನ್ನ ಪತ್ನಿ ಹುಡುಗಿಯಲ್ಲ, ಪುರುಷ ಎಂಬ ವಿಚಾರ ಗೊತ್ತಾಗಿದ್ದು, ಇದರಿಂದ ವರ ಸೇರಿದಂತೆ ಕುಟುಂಬದವರು ಶಾಕ್ ಆಗಿರುವ ಘಟನೆ ಉಗಾಂಡದಲ್ಲಿ ನಡೆದಿದೆ.

    ಮೊಹಮ್ಮದ್ ಮುತುಂಬ ವಧು ವೇಷಧಾರಿಯಲ್ಲಿದ್ದ ಹುಡುಗನನ್ನು ಮದುವೆಯಾಗಿದ್ದನು. ಮೊಹಮ್ಮದ್ ಎರಡು ವಾರಗಳ ಹಿಂದಯಷ್ಟೇ ವಧುವಿನ ಜೊತೆ ಸಾಂಪ್ರದಾಯಿಕ ನಿಖಾ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದನು. ಅಲ್ಲದೇ ನವ ದಂಪತಿ ಮದುವೆಯ ಒಪ್ಪದಕ್ಕೂ ಸಹಿ ಹಾಕಿದ್ದರು. ಮದುವೆಯಾದ ನಂತರ ವಧುವಿನ ವೇಷಧಾರಿಯಾಗಿದ್ದ ಹುಡುಗ ತಾನು ಋತುಮತಿಯಾಗಿದ್ದೇನೆಂದು ಪತಿಯ ಬಳಿ ಸುಳ್ಳು ಹೇಳಿ ಫಸ್ಟ್ ನೈಟ್ ಕ್ಯಾನ್ಸಲ್ ಮಾಡಿದ್ದನು.

    ಪತಿ ಮೊಹಮ್ಮದ್ ಆತನ ಮಾತು ನಂಬಿಕೊಂಡು ಆಕೆಯೇ ಇಷ್ಟಪಟ್ಟು ತನ್ನ ಬಳಿ ಬರಲಿ ಎಂದು ತಾಳ್ಮೆಯಿಂದ ಕಾಯುತ್ತಿದ್ದನು. ಇತ್ತ ಮೊಹಮ್ಮದ್ ನೆರೆಹೊರೆಯವರು ವಧುವಿನ ರಹಸ್ಯವನ್ನು ಬಯಲು ಮಾಡಿದ್ದಾರೆ. ಮೊಹಮ್ಮದ್ ಪತ್ನಿ ಟಿವಿ, ಬಟ್ಟೆ ಮತ್ತು ಕೆಲ ವಸ್ತುಗಳನ್ನು ಕಳ್ಳತನ ಮಾಡಿ ಮನೆಯ ಗೋಡೆಯಿಂದ ಹಾರಿ ಹೋಗುತ್ತಿರುವುದನ್ನು ನೋಡಿದ್ದಾರೆ. ಆಗ ಪಕ್ಕದ ಮನೆಯವರಿಗೆ ಮೊಹಮ್ಮದ್ ಪತ್ನಿಯ ಮೇಲೆ ಅನುಮಾನ ಬಂದಿದ್ದು, ತಕ್ಷಣ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

    ನೆರೆಹೊರೆಯವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರಿಂದ ಮೊಹಮ್ಮದ್ ತನ್ನ ಪತ್ನಿಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾನೆ. ಪೊಲೀಸ್ ಠಾಣೆಗೂ ಆತ ಸಾಂಪ್ರದಾಯಿಕವಾದ ಉಡುಪನ್ನು ಧರಿಸಿಕೊಂಡು ಬಂದಿದ್ದನು. ಹೀಗಾಗಿ ಪೊಲೀಸರು ಕೂಡ ಆತನನ್ನು ನೋಡಿ ಮೊದಲಿಗೆ ಅನುಮಾನ ಬಂದಿರಲಿಲ್ಲ. ಈ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮೊಹಮ್ಮದ್ ಪತ್ನಿಯನ್ನು ಪ್ರತ್ಯೇಕವಾದ ಸೆಲ್‍ಗೆ ಕರೆದುಕೊಂಡು ಹೋಗಿ ಪರಿಶೀಲನೆ ಮಾಡಿದ್ದಾರೆ.

    ಆಗ ವಧುವಿನ ರೂಪದಲ್ಲಿ ಒಬ್ಬ ಪುರುಷನಿದ್ದನ್ನು ನೋಡಿ ಮಹಿಳಾ ಅಧಿಕಾರಿ ಶಾಕ್ ಆಗಿದ್ದಾರೆ. ಕೊನೆಗೆ ಆತನ ಬಟ್ಟೆಯವನ್ನು ಬಿಚ್ಚಿಸಿದಾಗ ಹುಡುಗಿಯ ರೀತಿ ಮೇಕಪ್ ಮಾಡಿಕೊಂಡಿರುವುದು ಪತ್ತೆಯಾಗಿದೆ. ಪೊಲೀಸರು ವಿಚಾರಣೆ ಮಾಡಿದ ನಂತರ, ನಾನು ಹಣಕ್ಕಾಗಿ ಈ ರೀತಿ ಮಾಡಿದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.