Tag: ಕಂಡೆಕ್ಟರ್

  • BMTC ಬಸ್‍ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ- ಫ್ರೀ ಟಿಕೆಟ್ ನೀಡಲು ನಿರಾಕರಿಸಿ ನಿಂದನೆ

    BMTC ಬಸ್‍ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ- ಫ್ರೀ ಟಿಕೆಟ್ ನೀಡಲು ನಿರಾಕರಿಸಿ ನಿಂದನೆ

    ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ (BMTC Bus) ವಿದ್ಯಾರ್ಥಿನಿಯ ಮೇಲೆ ಹಾಡಹಗಲೇ ಕಂಡೆಕ್ಟರ್ ಹಾಗೂ ಇಬ್ಬರು ಪುರುಷ ಪ್ರಯಾಣಿಕರು ಕಿರುಕುಳ ನೀಡಿರುವ ಘಟನೆ ನಡೆದಿದೆ. ಈ ಘಟನೆಯಿಂದ ಬೆಚ್ಚಿ ಬಿದ್ದಿರೋ ಕುಟುಂಬ, ಅದೃಷ್ಟವಶಾತ್ ವಿದ್ಯಾರ್ಥಿನಿಯ ಪ್ರಾಣ, ಮಾನ ಸೇವ್ ಆಗಿದೆ. ವಿದ್ಯಾರ್ಥಿನಿಯ ಮೇಲೆ ಅಮಾನವೀಯ ವರ್ತನೆ ತೋರಿದ ಕಂಡೆಕ್ಟರ್, ಪ್ರಯಾಣಿಕರ ವಿರುದ್ಧ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    9 ನೇ ತರಗತಿಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ದೊಮ್ಮಲೂರಿನಿಂದ ರಿಚ್ಮಂಡ್ ಸರ್ಕಲ್‍ಗೆ ಪ್ರಯಾಣ ಮಾಡುತ್ತಿದಳು. ಗುಂಜೂರು ಡಿಪೋ, 41, KA 57- F2695 ನ ಕಂಡೆಕ್ಟರ್ ಅಮಾನವೀಯ ವರ್ತನೆ ತೋರಿದ್ದಾರೆ. ಶಕ್ತಿ ಯೋಜನೆಯಡಿ ಫ್ರೀ ಟಿಕೆಟ್ ಗೆ ಅಂತ ಆಧಾರ್ ಕಾರ್ಡ್ (Adhar Card) ತೋರಿಸಿದ್ದಾಳೆ. ಆದರೆ ಆಧಾರ್ ಕಾರ್ಡ್ ನಲ್ಲಿ ಹಿಂದಿ ಬರಹ ಇದ್ದಿದ್ದಕ್ಕೆ ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡುವಂತೆ ಕಂಡೆಕ್ಟರ್ ಹೇಳಿದ್ದಾರೆ. ಇದನ್ನೂ ಓದಿ: ನಾಗಾ ಸಾಧುಗಳ ಸೋಗಿನಲ್ಲಿ ಬಂದು ಸ್ಟುಡಿಯೋ ಮಾಲೀಕನ ಉಂಗುರ ಎಗರಿಸಿದ ಕಳ್ಳರು

    ವಿದ್ಯಾರ್ಥಿನಿ ದುಡ್ಡು ಕೊಟ್ಟು ಟಿಕೆಟ್ ಪಡೆದ್ರೂ, ವಿದ್ಯಾರ್ಥಿನಿಯ ಆಧಾರ್ ತೊಗೊಂಡು ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರ ಮುಂದೆ ನಿಂದಿಸಿದ್ದಾನೆ. ಈ ವೇಳೆ ಬಸ್ಸಿನಲ್ಲಿದ್ದ ಇಬ್ಬರು ಪ್ರಯಾಣಿಕರು ಕೂಡ ಕಂಡೆಕ್ಟರ್‍ಗೆ ಸಾಥ್ ನೀಡಿ, ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ. ಏನ್ ನಿಮ್ ಅಪ್ಪಂಗೆ ಹೇಳ್ತೀಯಾ..?. ನಿಮ್ಮಪ್ಪ ಏನ್ ಸಿಎಂ ಆ..? ಪಿಎಂ ಆ..? ನಿನ್ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹಾಕ್ತೀನಿ ಅಂತ, ಕತ್ತು ಹಿಡಿದು ಬಸ್ ನಿಂದ ಹೊರದಬ್ಬಲು ಪ್ರಯತ್ನಿಸಿದ್ದಾನೆ ಎಂದು ವಿದ್ಯಾರ್ಥಿನಿ ಹಾಗೂ ತಾಯಿ ಆರೋಪಿಸಿದ್ದಾರೆ.‌

    ರಿಚ್ಮಂಡ್ ಸರ್ಕಲ್ ನಲ್ಲಿ ಇಳಿಸದೇ, ಕಾರ್ಪೋರೇಶನ್ ಸರ್ಕಲ್ ಬಳಿ ವಿದ್ಯಾರ್ಥಿನಿಯನ್ನ ಇಳಿಸಿ ಹೋಗಿದ್ದಾರೆ. ವಿಷಯ ತಿಳಿದ ನಂತರ ತಾಯಿ ಕಾರ್ಪೋರೇಶನ್ ಸರ್ಕಲ್ ಗೆ ಬಂದು ಮಗಳನ್ನ ಹುಡುಕಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಹಾಡಹಗಲೇ ಬಿಎಂಟಿಸಿ ಬಸ್ಸಿನಲ್ಲಿ, ಬಾಲಕಿಯ ಮೇಲೆ ಈ ರೀತಿಯ ದೌರ್ಜನ್ಯ ಆಗುತ್ತೆ ಅಂದ್ರೆ ಬಿಎಂಟಿಸಿ ಪ್ರಯಾಣ, ಮಹಿಳೆಯರಿಗೆ ಎಷ್ಟು ಸೇಫ್ ಅನ್ನೋ ಪ್ರಶ್ನೆ ಮೂಡುತ್ತಿದೆ. ಇನ್ನು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗದುಕೊಂಡು ಇಂತಹ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಸ್‍ಗೆ ಬೋರ್ಡ್ ಹಾಕಿ ಎಂದ ಪ್ರಯಾಣಿಕನಿಗೆ ಕಂಡಕ್ಟರ್‌ನಿಂದ ಬಿತ್ತು ಬೂಟಿನೇಟು

    ಬಸ್‍ಗೆ ಬೋರ್ಡ್ ಹಾಕಿ ಎಂದ ಪ್ರಯಾಣಿಕನಿಗೆ ಕಂಡಕ್ಟರ್‌ನಿಂದ ಬಿತ್ತು ಬೂಟಿನೇಟು

    ಯಾದಗಿರಿ: ಬಸ್ ಯಾವ ಕಡೆ ಹೋಗುತ್ತೆ ಎಂಬುದ ಗೊತ್ತಾಗಲು ಬೋರ್ಡ್ ಹಾಕಿ ಎಂದ ಪ್ರಯಾಣಿಕನಿಗೆ ಸರ್ಕಾರಿ ಬಸ್ ಕಂಡಕ್ಟರ್ ಬೂಟ್ ಕಾಲಿನಿಂದ ಒದ್ದು ಥಳಿಸಿದ ಅಮಾನವೀಯ ಘಟನೆ ಯಾದಗಿರಿಯ ಗುರುಮಠಕಲ್ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನೋರ್ವ ಬಸ್ ತೆರಳುವ ಮಾರ್ಗದ ಬೋರ್ಡ್ ಹಾಕಿ ಎಂದು ಅವಾಚ್ಯ ಶಬ್ದಗಳಿಂದ ಕೂಗಾಡಿದ್ದಾನೆ. ಇದರಿಂದಾಗಿ ಕೋಪಗೊಂಡ ಗುರುಮಠಕಲ್ ವಿಭಾಗದ ನಿರ್ವಾಹಕ ಸಿದ್ದಪ್ಪ ಪ್ರಯಾಣಿಕನಿಗೆ ಮನಬಂದಂತೆ ಥಳಿಸಿ, ಬೂಟ್‍ನಿಂದ ಒದ್ದಿದ್ದಾನೆ. ಇದನ್ನೂ ಓದಿ: KSRTC ಬಸ್‍ನಲ್ಲಿ ಕೋಳಿ ಪ್ರಯಾಣ- ಟಿಕೆಟ್ ಕೊಟ್ಟ ನಿರ್ವಾಹಕ

    ಇಷ್ಟೇ ಅಲ್ಲದೇ ಪ್ರಯಾಣಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಿದ್ದಪ್ಪ ಅಮಾನವೀಯತೆ ಪ್ರದರ್ಶನ ಮಾಡಿದ್ದಾನೆ. ಕಂಡಕ್ಟರ್ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೂಡಲೇ ಸೇವೆಯಿಂದ ವಜಾ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. ನಿರ್ವಾಹಕ ಬೂಟಿನಿಂದ ಒದೆಯುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಪೊಲೀಸರೇ ಡ್ರಗ್ಸ್ ನೀಡಿದ್ರು – ಶ್ರೀಕಿ ಆರೋಪ ಸುಳ್ಳು

  • ಲೇಡಿ ಕಂಡಕ್ಟರ್‍ಗಳಿಗೆ ಡಿಫೆನ್ಸ್ ಟ್ರೈನಿಂಗ್ ನೀಡಲು ಮುಂದಾದ ಬಿಎಂಟಿಸಿ

    ಲೇಡಿ ಕಂಡಕ್ಟರ್‍ಗಳಿಗೆ ಡಿಫೆನ್ಸ್ ಟ್ರೈನಿಂಗ್ ನೀಡಲು ಮುಂದಾದ ಬಿಎಂಟಿಸಿ

    ಬೆಂಗಳೂರು: ಮಹಿಳಾ ಕಂಡಕ್ಟರ್ ಗಳಿಗೆ ಸ್ವರಕ್ಷಣಾ ತರಬೇತಿ ನೀಡಲು ಬಿಎಂಟಿಸಿ ಮುಂದಾಗಿದೆ. ಇನ್ನು ಮುಂದೆ ಮಾರ್ಷಲ್ ಆರ್ಟ್ಸ್, ಕರಾಟೆಯನ್ನು ಲೇಡಿ ಕಂಡಕ್ಟರ್ ಗಳು ಕಲಿಯಲಿದ್ದಾರೆ.

    ಬಿಎಂಟಿಸಿ ಲೇಡಿ ಕಂಡಕ್ಟರ್ ತಂಟೆಗೆ ಬರೋ ಮುನ್ನ ಹುಷಾರ್ ಆಗಿರಬೇಕು. ಬಸ್‍ಗಳಲ್ಲಿ ಬೇಕಾ ಬಿಟ್ಟಿಯಾಗಿ ವರ್ತಿಸುವ ಮುನ್ನ ಎಚ್ಚರಿಕೆ ವಹಿಸುವುದು ಒಳ್ಳೆಯದು. ಯಾಕೆಂದರೆ ಮಾರ್ಷಲ್ ಆರ್ಟ್ಸ್, ಕರಾಟೆ, ಸಮರ ಕಲೆಗಳಲ್ಲಿ ಬಿಎಂಟಿಸಿಯ ಲೇಡಿ ಕಂಡಕ್ಟರ್  ಎಕ್ಸ್ ಪರ್ಟ್ಸ್ ಆಗಲಿದ್ದಾರೆ.

    ಮಹಿಳಾ ಕಂಡಕ್ಟರ್ ಗಳಿಗೆ ಸ್ವರಕ್ಷಣೆ ತರಬೇತಿ ನೀಡಲು ಮುಂದಾಗಿದೆ. ಕೆಲಸದ ವೇಳೆ ಹಾಗೂ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳ ಬಗ್ಗೆ ಆಗಾಗ ದೂರು ದಾಖಲಾಗುತ್ತಿತ್ತು. ಮಹಿಳೆಯರ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳವ ತರಬೇತಿ ನೀಡಲು ಬಿಎಂಟಿಸಿ ಮುಂದಾಗುತ್ತಿದೆ.

    ಮಹಿಳಾ ಕಂಡಕ್ಟರ್ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ಡಿಫೆನ್ಸ್ ಟ್ರೈನಿಂಗ್ ಕರಾಟೆ, ಜೂಡೋ, ಸಮರ ಕಲೆ, ಸ್ವಯಂ ದೃಢೀಕರಣ, ಕಾನೂನು ಜ್ಞಾನ, ಸಾರ್ವಜನಿಕ ಭಾಷಣದ ಬಗ್ಗೆ ತರಬೇತಿಯನ್ನು ನೀಡಲು ಬಿಎಂಟಿಸಿ ಮುಂದಾಗಿದೆ. 21 ದಿನಗಳ ಕೋರ್ಸ್ ಇದಾಗಿದ್ದು, 42 ಗಂಟೆಗಳ ತರಬೇತಿ ಹಾಗೂ 120 ನಿಮಿಷಗಳ ಸೆಷನ್ ನಡೆಸಲಾಗುತ್ತದೆ.

  • UPSC ಪಾಸಾದ ಬಿಎಂಟಿಸಿ ಬಸ್ ಕಂಡಕ್ಟರ್‌ಗೆ ಐಎಎಸ್ ಆಗೋ ಕನಸು

    UPSC ಪಾಸಾದ ಬಿಎಂಟಿಸಿ ಬಸ್ ಕಂಡಕ್ಟರ್‌ಗೆ ಐಎಎಸ್ ಆಗೋ ಕನಸು

    – ಪ್ರತಿದಿನ 5 ಗಂಟೆಕಾಲ ಓದು
    – ಕೋಚಿಂಗ್ ಪಡೆಯದೇ ಯೂಟ್ಯೂಬ್ ವಿಡಿಯೋ ನೋಡಿ ಸಾಧನೆ

    ಬೆಂಗಳೂರು: ಸಾಧಿಸುವ ಛಲ, ಗುರಿ ಮುಟ್ಟಬೇಕೆಂಬ ಹಂಬಲವಿದ್ದರೆ ಅಸಾಧ್ಯವನ್ನು ಸಾಧ್ಯವಾಗಿಸಬಹುದೆಂಬುದನ್ನ ಬಿಎಂಟಿಸಿ ಬಸ್ ನಿರ್ವಾಹಕರೊಬ್ಬರು ಸಾಧಿಸಿ ತೋರಿಸಿದ್ದಾರೆ.

    ಬಿಎಂಟಿಸಿ ಬಸ್ ನಿರ್ವಾಹಕ ಮಧು ಎನ್.ಸಿ. ಯುಪಿಎಸ್‍ಸಿ ಪರೀಕ್ಷೆಯನ್ನ ಪಾಸ್ ಮಾಡಿ ಕಷ್ಟದಿಂದ ಓದುವ ವ್ಯಕ್ತಿಗಳಿಗೆ ಮಾದರಿಯಾಗಿದ್ದಾರೆ. ನಗರದ ಡಿಪೋ ನಂಬರ್ 34ರ ಕೊತ್ತನೂರು ದಿಣ್ಣೆಯಲ್ಲಿ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿರುವ ಮಧು 29ನೇ ವಯಸ್ಸಿನಲ್ಲೇ ಈ ಸಾಧನೆ ಮಾಡಿದ್ದಾರೆ.

    ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಮಧು, 19 ವರ್ಷ ಇರುವಾಗಲೇ ಬಿಎಂಟಿಸಿಯಲ್ಲಿ ಕಂಡೆಕ್ಟರ್ ಆಗಿ ಸೇರಿಕೊಂಡರು. ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರೂ ಓದಿನ ಮೇಲಿನ ಆಸಕ್ತಿಯನ್ನು ಮಾತ್ರ ಕಳೆದುಕೊಳ್ಳಲಿಲ್ಲ. ರಾಜ್ಯಶಾಸ್ತ್ರ, ಇಂಟರ್‌ನ್ಯಾಷನಲ್ ರಿಲೇಶನ್ಸ್‌, ಎಥಿಕ್ಸ್, ಜನರಲ್ ಸ್ಟಡೀಸ್ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದ ಮಧು ಪ್ರಿಲಿಮಿನರಿ ಪರೀಕ್ಷೆಯನ್ನ 2019ರ ಜೂನ್‍ನಲ್ಲಿ ಕನ್ನಡದಲ್ಲಿ ಬರೆದು ಪಾಸಾಗಿದ್ದರು.

    ನಂತರ ನಡೆದ ಐಎಎಸ್ ಮೇನ್ಸ್ ನಲ್ಲಿ ಪಾಸಾಗಿದ್ದಾರೆ. ಮಾರ್ಚ್ 25 ರಂದು ನಡೆಯುವ ಸಂದರ್ಶನವನ್ನು ಎದುರಿಸಲಿದ್ದು, ಐಎಎಸ್ ಆಗುವ ಕನಸು ಕಂಡಿದ್ದಾರೆ. ಕಂಡಕ್ಟರ್ ಮಧು ಕೆಲಸ ಮಾಡಿಕೊಂಡೆ ಡಿಸ್ಟೆನ್ಸ್ ಎಜುಕೇಶನ್ (ದೂರಶಿಕ್ಷಣ) ಮುಖಾಂತರ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನ ಪಡೆದಿದ್ದಾರೆ. 2014ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಫೇಲಾಗಿದ್ದ ಮಧು, ಬಳಿಕ 2018ರಲ್ಲಿ ಯುಪಿಎಸ್‍ಸಿ ಬರೆದಿದ್ದರು. ಆದರೆ ಆ ಪರೀಕ್ಷೆಯಲ್ಲೂ ಫೇಲ್ ಆಗಿದ್ದರು. ಹಠ ಬಿಡದೆ ಮತ್ತೆ ಪರೀಕ್ಷೆ ಬರೆದು ಪಾಸಾಗಿದ್ದಾರೆ.

    ಪ್ರತಿದಿನ 5 ಗಂಟೆಕಾಲ ಓದುತ್ತಿದ್ದ ಮಧು ಯಾವುದೇ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆದುಕೊಂಡಿಲ್ಲ. ಯೂಟ್ಯೂಬ್ ವಿಡಿಯೋಗಳೇ ಇವರಿಗೆ ಮಾರ್ಗದರ್ಶಿಯಾಗಿವೆ.

  • ಮಗಳು ಮೃತಪಟ್ಟರೂ ಕಂಡಕ್ಟರ್ ಕೆಲಸಕ್ಕೆ ಹಾಜರಾಗಲು ಸೂಚಿಸಿದ ಅಧಿಕಾರಿ

    ಮಗಳು ಮೃತಪಟ್ಟರೂ ಕಂಡಕ್ಟರ್ ಕೆಲಸಕ್ಕೆ ಹಾಜರಾಗಲು ಸೂಚಿಸಿದ ಅಧಿಕಾರಿ

    – ರಾತ್ರಿ ಡಿಪೋಗೆ ಬಂದಾಗ ನಿರ್ವಾಹಕನಿಗೆ ಶಾಕ್
    – ರಜೆ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡ ನಿರ್ವಾಹಕ

    ಕೊಪ್ಪಳ: ಮಗಳು ಮೃತಪಟ್ಟ ವಿಷಯವನ್ನು ಮುಚ್ಚಿಟ್ಟು ಕರ್ತವ್ಯಕ್ಕೆ ಕಳುಹಿಸಿದ ಅಮಾನವೀಯ ಘಟನೆಯೊಂದು ಕೊಪ್ಪಳದ ಕೆಎಸ್‍ಆರ್ ಟಿಸಿ ಡಿಪೋದಲ್ಲಿ ನಡೆದಿದೆ.

    ಗಂಗಾವತಿ ಕೆಎಸ್‍ಆರ್ ಟಿಸಿ ಡಿಪೋದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಪ್ರಮಾದ ಎಸಗಿದ್ದರಿಂದ ಕಂಡಕ್ಟರ್ ಮಂಜುನಾಥ್ ಅವರು ತನ್ನ ಮಗಳು ಮೃತಪಟ್ಟಿದ್ದರೂ ಕೊನೆಗಳಿಗೆ ಮುಖವನ್ನು ನೋಡದಂತೆ ಆಗಿದೆ.

    ಕೊಪ್ಪಳದ ಗಂಗಾವತಿ ಕೊಲ್ಲಾಪುರ ಬಸ್ಸಿನ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಾಗಲಕೋಟೆ ತಾಲೂಕಿನ ರಾಂಪೂರದ ಮಂಜುನಾಥ್ ಅವರ ಪುತ್ರಿ ಕವಿತಾ ಅನಾರೋಗ್ಯದ ಕಾರಣ ಬುಧವಾರ ಮುಂಜಾನೆ 10 ಗಂಟೆ ಸುಮಾರಿಗೆ ಮೃತಪಟ್ಟಿದ್ದಾಳೆ. ಕವಿತಾ ಸಾವನ್ನಪ್ಪಿದ ವಿಷಯವನ್ನು ತಂದೆ ಮಂಜುನಾಥ್‍ಗೆ ತಿಳಿಸಲು ಕುಟುಂಬ್ಥರು ಗಂಗಾವತಿ ಬಸ್ ಡಿಪೋಗೆ ಫೋನ್ ಮಾಡಿ ಹೇಳಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳು ಮಂಜುನಾಥ್‍ಗೆ ಮಗಳು ಮೃತಪಟ್ಟಿರುವ ವಿಷಯ ತಿಳಿಸದೇ ಕೆಲಸಕ್ಕೆ ಕಳುಹಿಸಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಚಾಲಕರೇ ಹುಷಾರ್ – ಮೊಬೈಲ್ ಇಟ್ಕೊಂಡ್ರೆ ಕೆಲ್ಸ ಕಳ್ಕೋತಿರಾ!

    ಮಂಜುನಾಥ್ ಕೆಲಸಕ್ಕೆ ಹೋಗಿ ಗುರುವಾರ ರಾತ್ರಿ ಡಿಪೋಗೆ ಬಂದಾಗ ವಿಷಯ ಗೊತ್ತಾಗಿದೆ. ಮಗಳ ಸಾವಿನ ವಿಷಯವನ್ನು ಒಂದು ದಿನ ತಡವಾಗಿ ತಿಳಿದ ಮಂಜುನಾಥ್ ದಿಗ್ಭ್ರಮೆಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಮಂಜುನಾಥ್ ಅವರು ಅಧಿಕಾರಿಗಳ ಬಳಿ ಹೋಗಿ ಮಗಳು ಸಾವನ್ನಪ್ಪಿರುವ ವಿಷಯ ತಿಳಿಸಿದ್ದಾರೆ. ನನಗೆ ಶುಕ್ರವಾರ ರಜೆ ಕೊಡಿ ಊರಿಗೆ ಹೋಗುತ್ತೇನೆ ಎಂದು ಅಂಗಲಾಚಿ ಬೇಡಿಕೊಂಡರೂ ಅಧಿಕಾರಿಗಳು ಮಾತ್ರ ರಜೆ ನೀಡಲು ನಿರಾಕರಿಸಿದ್ದಾರೆ.

    ಕೊನೆಯ ಸಾರಿ ಮಗಳ ಮುಖವನ್ನು ನೋಡದ ಹಾಗೆ ಮಾಡಿದ ಅಧಿಕಾರಿಗಳು ಇದೀಗ ಮನೆಗೆ ಹೋಗಲು ಸಹ ರಜೆ ನೀಡುತಿಲ್ಲ ಎಂದು ಸಹೋದ್ಯೋಗಿಗಳ ಜೊತೆ ಮಂಜುನಾಥ್ ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.

    ಫೋನ್ ಬಳಕೆಯಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಚಾಲಕ ಮತ್ತು ನಿರ್ವಾಹಕರಿಗೆ ಮೊಬೈಲ್ ಫೋನ್ ಬಳಕೆಯನ್ನು ನಿರ್ಬಂಧಿಸಿದೆ. ಒಂದು ವೇಳೆ ಆದೇಶ ಮೀರಿ ನಡೆದುಕೊಂಡರೆ ಕೆಲಸದಿಂದಲೇ ಅಮಾನತು ಮಾಡಲಾಗುತ್ತದೆ.

  • ಬಸ್ ಯಾಕೆ ನಿಲ್ಲಿಸಲಿಲ್ಲ ಎಂದು ಕೇಳಿದ್ದಕ್ಕೆ ಪ್ರಯಾಣಿಕನ ಬಟ್ಟೆ ಬಿಚ್ಚಿ ಹೊಡೆದ ನಿರ್ವಾಹಕ!

    ಬಸ್ ಯಾಕೆ ನಿಲ್ಲಿಸಲಿಲ್ಲ ಎಂದು ಕೇಳಿದ್ದಕ್ಕೆ ಪ್ರಯಾಣಿಕನ ಬಟ್ಟೆ ಬಿಚ್ಚಿ ಹೊಡೆದ ನಿರ್ವಾಹಕ!

    ಬೆಳಗಾವಿ: ಬಸ್ ಯಾಕೆ ನಿಲ್ಲಿಸಲಿಲ್ಲ ಎಂದು ಕೇಳಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಪ್ರಯಾಣಿಕನನ್ನು ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ.

    ಗೋಕಾಕ್ ಪಟ್ಟಣದಿಂದ ಅಥಣಿ ಪಟ್ಟಣಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮುಗಳಖೋಡ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗಿ ಮುಂದೆ ತೆರಳಬೇಕು. ಹೀಗಾಗಿ ಧಾರವಾಡ ಮೂಲದ ಮೊಬೈಲ್ ಟವರ್ ದುರಸ್ಥಿ ಮಾಡುವ ಕಾರ್ಮಿಕ ಬಸ್ ನಿಲ್ದಾಣದ ಒಂದು ಕಿ.ಮೀ ಹಿಂದೆಯೇ ಬಸ್ ನಿಲುಗಡೆ ಮಾಡುವಂತೆ ಕೋರಿದ್ದಾನೆ. ಆದರೆ ಇದಕ್ಕೆ ಒಪ್ಪದ ಕಂಡಕ್ಟರ್ ಶ್ರೀಮಂತ ಮುತ್ತೆನ್ನವರ ಹಾಗೂ ಕಾರ್ಮಿಕನ ನಡುವೆ ವಾಗ್ವಾದ ನಡೆದಿದೆ.

    ಬಸ್ ನಿಲ್ದಾಣ ಬರುತ್ತಿದ್ದಂತೆ ನಿರ್ವಾಹಕ ತನ್ನ ಗೂಂಡಾಗಿರಿ ಪ್ರದರ್ಶಿಸಿದ್ದು ಪ್ರಯಾಣಿಕನ ಬಟ್ಟೆ ಬಿಚ್ಚಿ ನಡು ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾನೆ. ಎರಡು ದಿನಗಳ ಹಿಂದೆ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನಿರ್ವಾಹಕನ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಬಳಿಕ ಇಬ್ಬರಿಗೂ ರಾಜಿ ಸಂಧಾನ ಮಾಡಿಸಿ ಹಾರೋಗೇರಿ ಪೊಲೀಸರು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2 ಗಂಟೆಯಾದ್ರೂ ಬಸ್ ಹೊರಡಲಿಲ್ಲ- ಪ್ರಶ್ನಿಸಿದ್ದಕ್ಕೆ ಮಹಿಳೆ ಜೊತೆ ಬಸ್ ಚಾಲಕ, ಕಂಡಕ್ಟರ್ ಕಿರಿಕ್

    2 ಗಂಟೆಯಾದ್ರೂ ಬಸ್ ಹೊರಡಲಿಲ್ಲ- ಪ್ರಶ್ನಿಸಿದ್ದಕ್ಕೆ ಮಹಿಳೆ ಜೊತೆ ಬಸ್ ಚಾಲಕ, ಕಂಡಕ್ಟರ್ ಕಿರಿಕ್

    ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರ ಬಳಿ ಬಸ್ ಚಾಲಕ ಮತ್ತು ಕಂಡಕ್ಟರ್ ಅನುಚಿತವಾಗಿ ನಡೆದುಕೊಂಡಿರುವ ಘಟನೆ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದೆ.

    ಅಲಹಬಾದ್ ನಿಂದ ಬೆಂಗಳೂರಿಗೆ ಬಂದಿದ್ದ ಡಾಕ್ಟರ್ ಪಟೇಲ್ ಎನ್ನುವ ಎಂಬ ಮಹಿಳೆ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ನಗರದ ಶಾಂತಿನಗರ ಬಸ್ ನಿಲ್ದಾಣಕ್ಕೆ ಬಂದಿದ್ದರು. ತಮಿಳುನಾಡಿನ ವೆಲ್ಲೂರಿಗೆ ಟಿಕೆಟ್ ಕೊಟ್ಟ ಕಂಡಕ್ಟರ್ ಹತ್ತು ನಿಮಿಷದಲ್ಲಿ ಬಸ್ ಹೊರಡುತ್ತೆ ಎಂದು ಹೇಳಿದ್ದರು.

    ಆದರೆ ಎರಡು ಗಂಟೆಯಾದ್ರೂ ಬಸ್ ಹೊರಡದಿರುವುದನ್ನು ಕಂಡ ಡಾಕ್ಟರ್ ಪಟೇಲ್ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಡ್ರೈವರ್ ಮತ್ತು ಕಂಡಕ್ಟರ್ ಇನ್ನೂ ಹತ್ತು ಟಿಕೆಟ್ ಬಾಕಿ ಉಳಿದಿವೆ. ಅದನ್ನು ನೀವೇ ಖರೀದಿಸಿ ಆಗ ಹೋಗೋಣ ಎಂದು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಡಾಕ್ಟರ್ ಪಟೇಲ್ ಆರೋಪಿಸಿದ್ದಾರೆ.