Tag: ಕಂಡಕ್ಟರ್

  • ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!

    ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!

    ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಗ್ಯಾರಂಟಿ (Congress Guarantee) ಯೋಜನೆಗಳು ಇಡಿ ದೇಶದ ಗಮನವನ್ನೇ ಸೆಳೆದಿದೆ. ಅದರಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Travel for Women) ಯೋಜನೆಯಾಗಿರುವ ಶಕ್ತಿ (Shakti Scheme) ಅತ್ಯಂತ ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದೆ. ಇದೇ ಭಾನುವಾರದಂದು ಈ ಯೋಜನೆಗೆ ಚಾಲನೆ ಸಿಗಲಿದೆ. ಕಾಂಗ್ರೆಸ್ ಗ್ಯಾರಂಟಿಗಳಿಗೆ ಇದೀಗ ವಿಭಿನ್ನವಾಗಿ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ (Siddaramaiah) ಸ್ವತಃ ಬಸ್‌ನ ಕಂಡಕ್ಟರ್ (Bus Conductor) ಆಗಲಿದ್ದಾರೆ.

    ಜೂನ್ 11 ರಂದು ಶಕ್ತಿ ಯೋಜನೆಗೆ ವಿಶೇಷ ರೂಪದಲ್ಲಿ ಚಾಲನೆ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ತಾವೇ ಬಸ್ ಕಂಡಕ್ಟರ್ ಆಗಿ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಲಿದ್ದಾರೆ. ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ವಿತರಿಸಿ ಶಕ್ತಿ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಕೋಪದಲ್ಲಿ ಅಜ್ಜಿ ಕೊಂದು, ಕೊರಿಯನ್ ವೆಬ್ ಸೀರಿಸ್‌ನಂತೆ ಹೆಣ ಸುಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ

    ಮೆಜೆಸ್ಟಿಕ್‌ನಿಂದ ವಿಧಾನಸೌಧ ಮಾರ್ಗದ ಬಿಎಂಟಿಸಿ ಬಸ್‌ನಲ್ಲೇ ಸಿದ್ದರಾಮಯ್ಯ ಕಂಡಕ್ಟರ್ ಆಗಲಿದ್ದಾರೆ. ರೂಟ್ ನಂ.43 ಬಸ್‌ನಲ್ಲಿ ಕಂಡಕ್ಟರ್ ರೀತಿ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಲಿದ್ದಾರೆ. ನಂತರ ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಅಂದೇ ಜಿಲ್ಲೆಗಳಲ್ಲಿ ಸಚಿವರಿಂದ ಏಕಕಾಲದಲ್ಲಿ ಯೋಜನೆಗೆ ಚಾಲನೆ ಸಿಗಲಿದೆ. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ನಮಗೆ ಸೋಲು – ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಏನಾಯ್ತು?

  • ಬಿಎಂಟಿಸಿ ಶೀಘ್ರ ಆಗಲಿದೆ ಕಂಡಕ್ಟರ್ ಲೆಸ್ – ಡಿಜಿಟಲ್ ತಂತ್ರಜ್ಞಾನದಿಂದ ಟಿಕೆಟ್ ಕಲೆಕ್ಷನ್

    ಬಿಎಂಟಿಸಿ ಶೀಘ್ರ ಆಗಲಿದೆ ಕಂಡಕ್ಟರ್ ಲೆಸ್ – ಡಿಜಿಟಲ್ ತಂತ್ರಜ್ಞಾನದಿಂದ ಟಿಕೆಟ್ ಕಲೆಕ್ಷನ್

    ಬೆಂಗಳೂರು: ಬಿಎಂಟಿಸಿ (BMTC) ಸದ್ಯ ಮುಳುಗೋ ಹಡಗು. ಇರುವ ನೌಕರರಿಗೆ ಸಂಬಳ ಕೊಡಲಾಗದೇ ನಿಗಮ ಹೆಣಗಾಡುತ್ತಿದೆ. ಹೀಗಿರುವಾಗ ನಷ್ಟದ ಸುಳಿಯಿಂದ ಬಿಎಂಟಿಸಿಯನ್ನು ಮೇಲೆತ್ತಲು ಮಾಸ್ಟರ್ ಪ್ಲಾನ್ ರೆಡಿಯಾಗಿದೆ. ಹೊಸ ಪ್ಲಾನ್ ಪ್ರಕಾರ ಬಸ್ ಓಡಿದರೆ, ಡ್ರೈವರ್ ಇರುತ್ತಾರೆ. ಆದರೆ ನಿರ್ವಾಹಕ ಮಾತ್ರ ಇರುವುದಿಲ್ಲ. ಏನಿದು ಹೊಸ ಪ್ಲಾನ್? ನಿರ್ವಾಹಕ ಇಲ್ಲದೇ ಟಿಕೆಟ್ ಕಲೆಕ್ಷನ್ ಹೇಗೆ? ಈ ಎಲ್ಲದರ ಕುರಿತಂತೆ ಮಾಹಿತಿ ಈ ಕೆಳಗಿನಂತಿದೆ.

    ಹೌದು, ಬಿಎಂಟಿಸಿ ಬಸ್ ಹತ್ತುತ್ತಿದ್ದಂತೆ ನಿಮ್ಮನ್ನ ಸ್ವಾಗತಿಸುವುದೇ ನಿರ್ವಾಹಕ. ಆದರೆ ಇನ್ಮುಂದೆ ಬಿಎಂಟಿಸಿಯಲ್ಲಿ ಈ ನಿರ್ವಾಹಕರು ಕಾಣುವುದು ಡೌಟ್. ನಿರ್ವಾಹಕರಿಲ್ಲದೇ ಟಿಕೆಟ್ ಕಲೆಕ್ಷನ್ ಟಿಕೆಟ್ ಕಲೆಕ್ಷನ್ ಹೇಗೆ ಮಾಡುವುದು ಎಂಬುವುದರ ಬಗ್ಗೆ ಬಿಎಂಟಿಸಿ ಪ್ಲಾನ್ ಮಾಡಿಕೊಂಡಿದೆ. ಸದ್ಯ ನಿಗಮ ಆರ್ಥಿಕ ಹೊರೆ ಎದುರಿಸುತ್ತಿದೆ. ಜೊತೆಗೆ ಡ್ರೈವರ್ ಕೊರತೆಯೂ ಕಾಡುತ್ತಿದೆ. ಹೊಸ ನೇಮಕಾತಿಗೂ ಸರ್ಕಾರ ಒಪ್ಪಿಗೆ ಸೂಚಿಸುತ್ತಿಲ್ಲ. ಹೀಗಾಗಿ ನಿರ್ವಾಹಕ ಪೋಸ್ಟ್‌ಗಳನ್ನೇ ಎತ್ತಂಗಡಿ ಮಾಡಲು ನಿಗಮ ಪ್ಲಾನ್ ಮಾಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಬಲವಂತದ ಮತಾಂತರ ಹಾವಳಿ – ವಿವಾಹಿತನನ್ನು ಮತಾಂತರಗೊಳಿಸಿದ ಮುಸ್ಲಿಂ ನಾರಿ

    ಬಿಎಂಟಿಸಿಯಲ್ಲಿ ಡಿಜಿಟಲ್ ತಂತ್ರಜ್ಞಾನ (Digital Technology) ಅಳವಡಿಸುವ ಪ್ರಯತ್ನವನ್ನು ಆರಂಭಿಸಲಾಗಿದೆ. ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್, ಸೇರಿ ಹಲವು ಡಿಜಿಟಲ್ ಸೌಲಭ್ಯವನ್ನು ಜಾರಿಗೆ ತಂದು ಟಿಕೆಟ್ ಕಲೆಕ್ಷನನ್ನು ಸಂಪೂರ್ಣ ಡಿಜಿಟಲೈಸ್ ಮಾಡಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕ ನಿಗಮದಲ್ಲಿರುವ ಎಲ್ಲಾ ನಿರ್ವಾಹಕರನ್ನು ಕೆಲಸದಿಂದ ಮುಕ್ತರಾಗಲಿದ್ದಾರೆ. ಸದ್ಯ ಇರುವ ಪ್ರತಿಯೊಬ್ಬ ನಿರ್ವಾಹಕರು ಕಂಡಕ್ಟರ್ ಕಂ ಡ್ರೈವರ್ ಆದವರೇ. ಹೀಗಾಗಿ ಈ ಎಲ್ಲಾ ನಿರ್ವಾಹಕರನ್ನು ಡ್ರೈವಿಂಗ್‍ಗೆ ನಿಯೋಜಿಸಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕ ಹೊಸ ನೇಮಕಾತಿ ಇಲ್ಲದೇ ಹೆಚ್ಚುವರಿ ಬಸ್‍ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಪ್ಲಾನ್ ಮಾಡಿದೆ. ಆದರೆ ಇದಕ್ಕೆ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.

    ಇದು ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರ. ಮುಂದೆ ಬಿಎಂಟಿಸಿಯನ್ನು ಖಾಸಗೀಕರಣ ಮಾಡುವ ನಿಟ್ಟಿನ ಕೊನೆಯ ಮಳೆಯಾಗಿದೆ. ಬಿಎಂಟಿಸಿ ಸಂಸ್ಥೆಯ ನೌಕರರು ಬೀದಿಗೆ ಬರುತ್ತಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕಾರ್ಮಿಕ ಮುಖಂಡ ಆನಂದ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಾಲಕನ ಯಡವಟ್ಟು – ಖಾಸಗಿ ಬಸ್ ಪಲ್ಟಿ, 30ಕ್ಕೂ ಹೆಚ್ಚು ಮಂದಿಗೆ ಗಾಯ

    ಸದ್ಯದ ಪರಿಸ್ಥಿತಿಯಲ್ಲಿ ನಿರ್ವಾಹಕರಿಲ್ಲದೇ ಬಸ್ ಊಹಿಸುವುದು ಅಸಾಧ್ಯ, ಹೆಚ್ಚಿನ ಮಂದಿಗೆ ಡಿಜಿಟಲ್ ತಂತ್ರಜ್ಞಾನ ಒಪ್ಪಿಕೊಳ್ಳುವುದಕ್ಕೆ ಸಮಯ ಬೇಕಾಗಲಿದೆ. ಆದರೂ ಬಿಎಂಟಿಸಿ ಸಿಬ್ಬಂದಿ ಹೊರೆ ತಪ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಮುಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • KSRTC ಟಿಕೆಟ್ ವಿತರಣ ಯಂತ್ರ ಸ್ಫೋಟ – ಸುಟ್ಟುಹೋದ ಕಂಡಕ್ಟರ್ ಕೈ

    KSRTC ಟಿಕೆಟ್ ವಿತರಣ ಯಂತ್ರ ಸ್ಫೋಟ – ಸುಟ್ಟುಹೋದ ಕಂಡಕ್ಟರ್ ಕೈ

    ತಿರುವನಂತಪುರಂ: KSRTC ಬಸ್‍ನ ಟಿಕೆಟ್ ವಿತರಣ ಯಂತ್ರ ಸ್ಫೋಟಗೊಂಡು ಕಂಡಕ್ಟರ್ ಗಾಯಗೊಂಡಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ.

    ರಾಜ್ಯ ಸಾರಿಗೆ ನಿಗಮದ ಬಸ್‍ನಲ್ಲಿ ಕಂಡೆಕ್ಟರ್ ಆಗಿ ಕೆಲಸ ನಿರ್ವಹಿಸುವ ಪೆರುಂಬೂರ್ ನಿವಾಸಿ ಎಂ.ಎಂ ಮೊಹಮ್ಮದ್ ಟಿಕೆಟ್ ವಿತರಣ ಯಂತ್ರ ಸ್ಫೋಟದಿಂದ ಗಾಯಗೊಂಡಿದ್ದಾರೆ. ತಿರುವನಂತಪುರಂ-ಸುಲ್ತಾನ್ ಬತ್ತೇರಿ ಸೂಪರ್ ಡಿಲಕ್ಸ್ ಬಸ್‍ನ ಕಂಡಕ್ಟರ್ ಮೊಹಮ್ಮದ್ ವಿಶ್ರಾಂತಿ ಕೊಠಡಿಯಲ್ಲಿ ಇರುವ ವೇಳೆ ಯಂತ್ರ ಸ್ಫೋಟಗೊಂಡಿದೆ. ಈ ವೇಳೆ ಕಂಡಕ್ಟರ್ ಕೈಗೆ ಸುಟ್ಟ ಗಾಯಗಳಾಗಿದ್ದು. ಯಂತ್ರ ಸುಟ್ಟು ಕರಕಲಾಗಿದೆ. ಬತ್ತೇರಿ ಡಿಪೋಗೆ ಸೇರಿದ ಟಿಕೆಟ್ ವಿತರಣ ಯಂತ್ರ, ಮೈಕ್ರೋಎಫ್‍ಎಕ್ಸ್ ಕಂಪನಿಗೆ ಸೇರಿದ್ದಾಗಿದೆ. ಇದನ್ನೂ ಓದಿ: ಗೋಣಿ ಚೀಲ ಒಣಗಿಸುವ ವಿಚಾರಕ್ಕೆ ಮಹಿಳೆಗೆ ಮಚ್ಚಿನೇಟು

    ಶಾರ್ಟ್ ಸರ್ಕ್ಯೂಟ್‌ನಿಂದ ಯಂತ್ರ ಸ್ಫೋಟಗೊಂಡಿದೆ ಎಂದು ಕಂಪನಿ ಕಾರಣ ತಿಳಿಸಿದೆ. ಆದರೆ ಈ ಹಿಂದೆ ಕೇರಳದಲ್ಲಿ ಆಡಳಿತ ನಡೆಸಿದ್ದ LDF ಸರ್ಕಾರ ಈ ಯಂತ್ರಗಳನ್ನು ಖರೀದಿಸಿತ್ತು. ಈ ವೇಳೆ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಲ್ಲದೆ KSRTC ಯಂತ್ರ ಖರೀದಿಯ ಗುತ್ತಿಗೆಯನ್ನು ಸಾರ್ವಜನಿಕ ಕಂಪನಿಗೆ ನೀಡದೆ ಖಾಸಗಿ ಕಂಪನಿಗೆ ನೀಡಿ ಗೋಲ್‌ಮಾಲ್ ನಡೆಸಿದೆ ಎಂಬ ಮಾತು ಸದ್ದು ಮಾಡುತ್ತಿದೆ. ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

  • 40 ಮಂದಿ ಪ್ರಯಾಣಿಕರಿದ್ದ BMTC ಬಸ್ ಧಗ ಧಗ

    40 ಮಂದಿ ಪ್ರಯಾಣಿಕರಿದ್ದ BMTC ಬಸ್ ಧಗ ಧಗ

    ಬೆಂಗಳೂರು: ಬಿಎಂಟಿಸಿ ಬಸ್ ಸಂಚಾರ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿ ಉರಿದಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳ ಕೂಟ ಬಳಿ ನಡೆದಿದೆ.

    ಬಸ್ ಚಲಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬಸ್‍ನಲ್ಲಿ 40 ಪ್ರಯಾಣಿಕರಿದ್ದರು, ಯಾವುದೇ ಸಾವು ನೋವು ಸಂಭವಿಸಿಲ್ಲ. ಬೇರೆ ಬಸ್‍ಗೆ ಶಿಫ್ಟ್ ಮಾಡಿ ಪ್ರಯಾಣಿಕರನ್ನು ಕಳಿಸಲಾಗಿದೆ. ಕೆ ಆರ್ ಮಾರ್ಕೆಟ್‍ಗೆ ಹೊರಟಿದ್ದ ಬಸ್‍ಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನೂ ಓದಿ:   ಉದ್ದೇಶಪೂರ್ವಕವಾಗಿಯೇ ಕೋವಿಡ್ ಸೋಂಕು ತಗುಲಿಸಿಕೊಂಡು ಗಾಯಕಿ ನಿಧನ

    ಕಂಡಕ್ಟರ್ ಬಾಕ್ಸ್‌ನಲ್ಲಿ ಇಡಲಾಗಿದ್ದ ಬಸ್ ಟಿಕೆಟ್ ಸುಟ್ಟು ಭಸ್ಮವಾಗಿವೆ. ಡ್ರೈವರ್, ಕಂಡಕ್ಟರ್‌ ಬಸ್‍ಗೆ ಹತ್ತಿರುವ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದು. ಪೊಲೀಸರು ರಸ್ತೆ ಬಂದ್ ಮಾಡಿಸಿದ್ದಾರೆ. ಮಿನಿ ನೀರಿನ ಟ್ಯಾಂಕರ್ ಮೂಲಕ ಬೆಂಕಿ ನಂದಿಸಲಾಗುತ್ತಿದೆ. ಇದನ್ನೂ ಓದಿ:  ಪತಿ ಕೊಂದು ಕತ್ತರಿಸಿದ ತಲೆ ಠಾಣೆಗೆ ತಂದು ಶರಣಾದಳು

  • ಚಲಿಸ್ತಿದ್ದ ಬಸ್‍ನಲ್ಲಿ ಗ್ಯಾಂಗ್‍ರೇಪ್- ಮಹಿಳೆಯನ್ನ ರಸ್ತೆಗೆ ಎಸೆದು ಪರಾರಿ

    ಚಲಿಸ್ತಿದ್ದ ಬಸ್‍ನಲ್ಲಿ ಗ್ಯಾಂಗ್‍ರೇಪ್- ಮಹಿಳೆಯನ್ನ ರಸ್ತೆಗೆ ಎಸೆದು ಪರಾರಿ

    – ಚಾಲಕ, ನಿರ್ವಾಹಕನಿಂದಲೇ ಅತ್ಯಾಚಾರದ ಶಂಕೆ
    – ಅರೆಪ್ರಜ್ಞೆ ಸ್ಥಿತಿಯಲ್ಲಿ ಮಹಿಳೆ ಪತ್ತೆ

    ಲಕ್ನೋ: ಚಲಿಸುತ್ತಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಅತ್ಯಾಚಾರದ ಬಳಿಕ ಕಾಮುಕರು ಸಂತ್ರಸ್ತೆಯನ್ನ ರಸ್ತೆಯಲ್ಲಿ ಇಳಿಸಿ ಪರಾರಿಯಾಗಿದ್ದಾರೆ. ಅರೆಪ್ರಜ್ಞೆ ಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾರೆ.

    ಮಹಿಳೆಗೆ ತಂಪು ಪಾನೀಯದಲ್ಲಿ ನಶೆಯ ಪದಾರ್ಥ ಸೇರಿಸಿ ಕುಡಿಸಿ ಅತ್ಯಾಚಾರ ಎಸಗಲಾಗಿದೆ. ನಂತರ ಬಸ್ ಕಂಡಕ್ಟರ್ ಮತ್ತು ಚಾಲಕ ಸಂತ್ರಸ್ತೆಯನ್ನು ನಡುರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಮಹಿಳೆ ಮಾತನಾಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮಹಿಳೆಯ ಕುಟುಂಬಸ್ಥರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಮೇಲೆ ಅತ್ಯಾಚಾರ ನಡೆದಿದೆಯಾ ಅಥವಾ ಇಲ್ಲವಾ ಎಂಬುವುದು ವೈದ್ಯಕೀಯ ವರದಿಯಲ್ಲಿ ತಿಳಿದು ಬರಬೇಕಿದೆ. ಮಹಿಳೆ ಕುಟುಂಬಸ್ಥರ ಬಗ್ಗೆ ಕೆಲ ಮಾಹಿತಿ ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

  • ಮಾಸ್ಕ್ ಧರಿಸುವಂತೆ ಹೇಳಿದ  ಕಂಡಕ್ಟರ್‌ಗೆ ಹಿಗ್ಗಾಮುಗ್ಗ ಥಳಿಸಿದ!

    ಮಾಸ್ಕ್ ಧರಿಸುವಂತೆ ಹೇಳಿದ ಕಂಡಕ್ಟರ್‌ಗೆ ಹಿಗ್ಗಾಮುಗ್ಗ ಥಳಿಸಿದ!

    ಮುಂಬೈ: ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದ ನಿರ್ವಾಹಕನಿಗೆ ಪ್ರಯಾಣಿಕನೊಬ್ಬ ಹಿಗ್ಗಾಮುಗ್ಗ ಥಳಿಸಿದ ಅಚ್ಚರಿಯ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಬಸ್ ಕಂಡಕ್ಟರ್ ಅವರನ್ನು ಸಾಯಿನಾಥ್ ಖಾರ್ಪಡೆ ಎಂದು ಗುರುತಿಸಲಾಗಿದೆ. ಅಂಧೇರಿಯ ಮಾರೋಲ್ ನಿಂದ ಭಾಯಂದರ್ ಕಡೆ ಬಸ್ ಚಲಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

    ಘಟನೆಯಿಂದ ಬಸ್ ಕಂಡಕ್ಟರ್ ದೇಹದಲ್ಲಿ ಗಾಯಗಳಾಗಿದ್ದು, ಹೊಲಿಗೆ ಹಾಕಲಾಗಿದೆ. ಪ್ರಯಾಣಿಕ ಮಾಸ್ಕ್ ಹಾಕಿರಲಿಲ್ಲ. ಹೀಗಾಗಿ ಮಾಸ್ಕ್ ಹಾಕುವಂತೆ ಕಂಡಕ್ಟರ್ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕ, ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ.

    ಅಂಧೇರಿಯ ಮಾರೋಲ್ ನಿಂದ ಭಾಯಂದರ್ ಕಡೆ ಚಲಿಸುತ್ತಿದ್ದ ಬಸ್ಸಿಗೆ ಮಾಸ್ಕ್ ಧರಿಸದೆ ಪ್ರಯಾಣಿಕರೊಬ್ಬರು ಹತ್ತಿದರು. ಈ ವೇಳೆ ನಿರ್ವಾಕರು ಮಾಸ್ಕ್ ಹಾಕೊಳಿ ಅಂದಿದ್ದಾರೆ. ಆದರೆ ಪ್ರಯಾಣಿಕ ನನಗೆ ಕೊರೊನಾ ಇಲ್ಲ ಎಂದು ಹೇಳುವ ಮೂಲಕ ಮಾಸ್ಕ್ ಧರಿಸಿಲು ನಿರಾಕರಿಸಿದ್ದಾನೆ. ಈ ವೇಳೆ ಕಂಡಕ್ಟರ್ ಮಾಸ್ಕ್ ಧರಿಸಿ ಅಂತ ಮತ್ತೊಮ್ಮೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕ ಹಿಗ್ಗಾಮುಗ್ಗ ಥಳಿಸಿದ್ದಾನೆ ಎಂದು ಹೇಳಲಾಗಿದೆ.

    ಕಂಡಕ್ಟರ್ ಮೈಮೇಲೆ ರಕ್ತ ಬರುತ್ತಿದ್ದಂತೆಯೇ, ಮುಂದಿನ ನಿಲ್ದಾಣದಲ್ಲಿ ಇಳಿದು ಪ್ರಯಾಣಿಕ ಪರಾರಿಯಾಗಿದ್ದಾನೆ. ಘಟನೆಯ ಬಳಿಕ ನಿರ್ವಾಹಕ ಪೊಲೀಸರಿಗೆ ದೂರು ನೀಡಿದ್ದಾರೆ.

  • ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ – ಕಂಡಕ್ಟರ್ ದೇಹಕ್ಕೆ ಚುಚ್ಚಿದ ಕಬ್ಬಿಣದ ರಾಡ್‍ಗಳು

    ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ – ಕಂಡಕ್ಟರ್ ದೇಹಕ್ಕೆ ಚುಚ್ಚಿದ ಕಬ್ಬಿಣದ ರಾಡ್‍ಗಳು

    ಬಳ್ಳಾರಿ: ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಬಸ್ ಕಂಡಕ್ಟರ್ ದೇಹಕ್ಕೆ ಕಬ್ಬಿಣದ ರಾಡ್‍ಗಳು ಚುಚ್ಚಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ಹೊರವಲಯದಲ್ಲಿ ನಡೆದಿದೆ.

    ಕೂಡ್ಲಿಗಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಘಟನೆ ನಡೆದಿದೆ. ಕಬ್ಬಿಣದ ರಾಡ್‍ ತುಂಬಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಬಸ್‍ನ ಎಡಭಾಗದಲ್ಲಿ ಕಂಡಕ್ಟರ್ ಕುಳಿತಿದ್ದ. ಹೀಗಾಗಿ ಡಿಕ್ಕಿ ಹೊಡೆದ ರಭಸಕ್ಕೆ ಕಂಡಕ್ಟರ್ ಹೊಟ್ಟೆಗೆ ಕಬ್ಬಿಣದ ರಾಡ್‍ಗಳು ಚುಚ್ಚಿವೆ.

    ತಕ್ಷಣ ಸ್ಥಳೀಯರು ಕಂಡಕ್ಟರ್‌ಗೆ ಚುಚ್ಚಿರುವ ರಾಡ್‍ಗಳನ್ನ ಕತ್ತರಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಂಡಕ್ಟರನ್ನ ದಾಖಲಿಸಲಾಗಿದೆ. ಸದ್ಯಕ್ಕೆ ಕಂಡಕ್ಟರ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಫಿನಾಡಲ್ಲಿ ವೈದ್ಯ, ಕಂಡಕ್ಟರ್, ಪೇದೆಗೆ ಕೊರೊನಾ

    ಕಾಫಿನಾಡಲ್ಲಿ ವೈದ್ಯ, ಕಂಡಕ್ಟರ್, ಪೇದೆಗೆ ಕೊರೊನಾ

    ಚಿಕ್ಕಮಗಳೂರು: ಕಳೆದ 45 ದಿನಗಳಿಂದ ಬರುತ್ತಿರುವ ಒಂದು-ಎರಡು ಕೇಸ್ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85ರ ಗಡಿ ತಲುಪಿದ್ದು, ದಿನ ಕಳೆದಂತೆ ಜಿಲ್ಲೆಯ ಜನರ ಆತಂಕ ಕೂಡ ಹೆಚ್ಚಾಗುತ್ತಿದೆ. ಇಂದು ಜಿಲ್ಲೆಯಲ್ಲಿ ಮೂರು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

    ಮೂರು ಹೊಸ ಪ್ರಕರಣಗಳಲ್ಲಿ ಓರ್ವ ವೈದ್ಯ, ಮತ್ತೋರ್ವ ಸರ್ಕಾರಿ ಬಸ್ ಕಂಡಕ್ಟರ್, ಮಗದೊಬ್ಬ ಬೆಂಗಳೂರಿನಿಂದ ಹಿಂದಿರುಗಿದ ಪೇದೆ. ವೈದ್ಯ ಹಾಗೂ ಕಂಡಕ್ಟರ್ ಈ ಎರಡೂ ಪ್ರಕರಣಗಳು ಜಿಲ್ಲಾಡಳಿತ ಹಾಗೂ ಜನರ ಆತಂಕವನ್ನು ಹೆಚ್ಚಾಗಿಸಿವೆ. ವೈದ್ಯ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯ ಕೆಲಸ ಮಾಡುತ್ತಿದ್ದು, ಇದೀಗ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ.

    ವೈದ್ಯಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಕಂಡಕ್ಟರ್ ಕೂಡ ಜಿಲ್ಲೆಯ ಕಡೂರು ತಾಲೂಕಿನ ಚೌಳಹಿರಿಯೂರಿನವರು. ಪ್ರತಿದಿನ ಅರಸೀಕೆರೆಯಿಂದ ಹಾಸನ ಮಾರ್ಗವಾಗಿ ಓಡಾಡುತ್ತಿದ್ದರು. ಕೆಲಸ ಮುಗಿಸಿ ಅರಸೀಕೆರೆಯಿಂದ ಚೌಳಹಿರಿಯೂರಿನ ಮನೆಗೆ ಬೈಕ್ ಮೂಲಕ ಬರುತ್ತಿದ್ದರು. ಇದೀಗ ಕಂಡಕ್ಟರ್‍ ಗೂ ಕೊರೊನಾ ಸೋಂಕು ತಗುಲಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

    ಕಂಡಕ್ಟರ್ ಗೆ ಕೊರೊನಾ ಹೇಗೆ ಬಂದಿತು ಎಂಬುದರ ಜೊತೆಗೆ ಇವರು ಎಷ್ಟು ಜನರಿಗೆ ಸೋಂಕು ಹಚ್ಚಿದ್ದಾರೆ ಎಂಬ ಭಯ ಸಹ ಹೆಚ್ಚಾಗಿದೆ. ಕಂಡಕ್ಟರ್ ಗ್ರಾಮದಲ್ಲಿ ತೋಟ-ಮನೆಗೆಲ್ಲ ಓಡಾಡಿದ್ದಾರೆ. ಈಗಾಗಲೇ ತಾಲೂಕು ಆಡಳಿತ ಕಂಡಕ್ಟರ್ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಹನ್ನೆರಡಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲು ಸೂಚಿಸಿದೆ. ಬೆಂಗಳೂರಿನ ಪೊಲೀಸ್ ತರಬೇತಿ ಕೇಂದ್ರದಲ್ಲಿನ ಪೇದೆಗೂ ಕೊರೊನಾ ಪಾಸಿಟಿವ್ ಬಂದಿದ್ದು, ಅವರ ಪ್ರಾಥಮಿಕ ಸಂಪರ್ಕದವರನ್ನು ಪತ್ತೆ ಹಚ್ಚಲಾಗುತ್ತಿದೆ.

  • ಮಾಸ್ಕ್ ಧರಿಸದಿದ್ದಕ್ಕೆ ಪ್ರಯಾಣಿಕನನ್ನು ಬಸ್ ನಿಂದ ಇಳಿಸಿದ ನಿರ್ವಾಹಕ

    ಮಾಸ್ಕ್ ಧರಿಸದಿದ್ದಕ್ಕೆ ಪ್ರಯಾಣಿಕನನ್ನು ಬಸ್ ನಿಂದ ಇಳಿಸಿದ ನಿರ್ವಾಹಕ

    ಮಡಿಕೇರಿ: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡವನ್ನೂ ಕೂಡ ವಿಧಿಸಲಾಗುತ್ತಿದೆ. ಆದರೆ ಸರ್ಕಾರಿ ಬಸ್ ನಲ್ಲಿ ಮಾಸ್ಕ್ ಧರಿಸದೇ ಹತ್ತಿದ ವ್ಯಕ್ತಿಯನ್ನು ನಡುರಸ್ತೆಯಲ್ಲಿಯೇ ಕೆಳಗೆ ಇಳಿಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಸುಂಟಿಕೋಪ್ಪ ಮಡಿಕೇರಿ ಮಾರ್ಗಮದ್ಯೆ ನಡೆದಿದೆ.

    ಬೆಳಗ್ಗೆ ಸುಂಟಿಕೊಪ್ಪದಿಂದ ವ್ಯಕ್ತಿಯೋರ್ವ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನೇರಿದ್ದಾರೆ. ಆದರೆ ವ್ಯಕ್ತಿ ಮಾಸ್ಕ್ ಧರಿಸದೇ ಇರೋದನ್ನು ಗಮನಿಸಿದ ಕಂಡಕ್ಟರ್ ಟಿಕೆಟ್ ನೀಡಲು ನಿರಾಕರಿಸಿ ಬಸ್ ನಿಂದ ಇಳಿಯುವಂತೆ ತಾಕೀತು ಮಾಡಿದ್ದಾರೆ. ಕಂಡಕ್ಟರ್ ಗೆ ಸಹ ಪ್ರಯಾಣಿಕರು ಸಾಥ್ ನೀಡಿದ್ದಾರೆ. ಏನೇನೋ ಸಾಬೂಬು ನೀಡಲು ಮುಂದಾದ ಮಾಸ್ಕ್ ಧರಿಸದ ಪ್ರಯಾಣಿಕನ ಮಾತನ್ನು ಒಪ್ಪದ ಕಂಡಕ್ಟರ್ ಮತ್ತು ಡ್ರೈವರ್ ಮಾರ್ಗ ಮಧ್ಯೆ ಸುಂಟಿಕೋಪ್ಪ ಕೆ.ಇ.ಬಿ. ಬಳಿ ಇಳಿಸಿದ್ದಾರೆ. ಅಲ್ಲದೇ ಇನ್ನು ಮುಂದಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿ ಹೇಳಿದ್ದಾರೆ.

    ಮಾಸ್ಕ್ ಇಲ್ಲದ ಕಾರಣ ತನ್ನ ಪ್ರಯಾಣ ಅರ್ಧಕ್ಕೆ ಮೊಟಕುಗೊಂಡಿದ್ದರಿಂದ ಕೋಪಗೊಂಡ ಪ್ರಯಾಣಿಕ ಕೊರೊನಾ ವೈರಸ್ ಅನ್ನು ಶಪಿಸಿಕೊಂಡು ಮುಂದಿನ ಪ್ರಯಾಣಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು. ಒಟ್ಟಿನಲ್ಲಿ ಮಾಸ್ಕ್ ಧರಿಸದೇ ಉದ್ಧಟತನ ತೋರುವವರಿಗೆ ಈ ಪ್ರಕರಣವೊಂದು ಪಾಠವಾಗಿದೆ.

  • ಕೋವಿಡ್ ಪರಿಹಾರ ನಿಧಿಗೆ ಒಂದು ತಿಂಗಳ ವೇತನ ನೀಡಿದ ಕಂಡಕ್ಟರ್

    ಕೋವಿಡ್ ಪರಿಹಾರ ನಿಧಿಗೆ ಒಂದು ತಿಂಗಳ ವೇತನ ನೀಡಿದ ಕಂಡಕ್ಟರ್

    ಧಾರವಾಡ: ಕೋವಿಡ್-19 ಪರಿಹಾರ ನಿಧಿಗೆ ಜಿಲ್ಲೆಯ ಕಂಡಕ್ಟರ್ ಒಬ್ಬರು ತಮ್ಮ ಒಂದು ತಿಂಗಳ ವೇತನ ನೀಡಿ ಮಾನವೀಯತೆ ಮೆರೆದಿದ್ದಾರೆ.

    ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸವರಾಜ ನೀಲಪ್ಪ ಗಾಣಿಗೇರ ಅವರು ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ 25 ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ನೀಡಿದ್ದಾರೆ. ಬಸವರಾಜ ಅವರು ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ನಿವಾಸಿಯಾಗಿದ್ದು, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ಒಂದನೇ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಚೆಕ್ ಸ್ವೀಕರಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು, ಸಾರಿಗೆ ಸಂಸ್ಥೆಯ ಕಂಡಕ್ಟರ್ ಬಸವರಾಜ ಅವರು ಸ್ವಯಂ ಪ್ರೇರಣೆಯಿಂದ ತಮ್ಮ ಒಂದು ತಿಂಗಳ ವೇತನವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿರುವುದು ಸಮಾಜಕ್ಕೆ ಮಾದರಿಯಾದ ಕಾರ್ಯವಾಗಿದೆ. ಜಿಲ್ಲಾಡಳಿತ ಈ ಕಾರ್ಯವನ್ನು ಪ್ರಶಂಸಿಸುತ್ತದೆ ಎಂದರು.

    ಈ ವೇಳೆ ವಾ.ಕ.ರ.ಸಾ.ಸಂ ವಿಭಾಗೀಯ ನಿಯಂತ್ರಕರಾದ ವಿವೇಕಾನಂದ ವಿಶ್ವಜ್ಞ, ಹನುಮಂತ ಬೋಜೇದಾರ್, ಬಸವರಾಜ ಅವಾರಿ, ಎಂ.ಎಸ್.ರೋಣದ, ವೆಂಕಟೇಶ್ ಹರ್ತಿ, ಡಾ.ಪಿ.ವಿ.ಸವದಿ ಇದ್ದರು.