Tag: ಕಂಠೀರವ ಸುಡಿಯೋ

  • ಶಿವಣ್ಣನ ಆರ್‌ಡಿಎಕ್ಸ್‌ಗೆ ಮುಹೂರ್ತ ಫಿಕ್ಸ್

    ಶಿವಣ್ಣನ ಆರ್‌ಡಿಎಕ್ಸ್‌ಗೆ ಮುಹೂರ್ತ ಫಿಕ್ಸ್

    ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಆರ್‌ಡಿಎಕ್ಸ್‌ ಸಿನಿಮಾ ಸೆಟ್ಟೇರಲು ಎಲ್ಲ ಸಿದ್ಧತೆಗಳು ನಡೆದಿದ್ದು, ಫೆಬ್ರವರಿ 19ರಂದು ಸಿನಿಮಾ ಮುಹೂರ್ತ ಕಾರ್ಯಕ್ರಮ ನಿಗದಿಯಾಗಿದೆ.

    ಫೆಬ್ರವರಿ 19ರ ಬುಧವಾರ ಸಿನಿಮಾ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಕಂಠೀರವ ಸ್ಟುಡಿಯೋದಲ್ಲಿ ಚಿತ್ರ ಲಾಂಚ್ ಆಗಲಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹಾಗೂ ನಟ ಪುನೀತ್ ರಾಜ್‍ಕುಮಾರ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದಾರೆ. ಬೆಳಗ್ಗೆ 9.15 ರಿಂದ 11.45ರ ವರೆಗೆ ಕಾರ್ಯಕ್ರಮ ಜರುಗಲಿದೆ. ಸರಳ ಸಮಾರಂಭದ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಲಾಗುತ್ತಿದೆ.

    ಚಿತ್ರಕ್ಕೆ ‘ಆರ್‌ಡಿಎಕ್ಸ್‌’ ಎಂಬ ಶೀರ್ಷಿಕೆ ಇಡಲಾಗಿದೆ. ಆದರೆ ಈ ವರೆಗೆ ಚಿತ್ರತಂಡ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಮುಹೂರ್ತದ ದಿನವೇ ಸಿನಿಮಾ ಹೆಸರು ಕೂಡ ಹೊರ ಬರಬಹುದು ಎನ್ನಲಾಗಿದೆ. ಇನ್ನೂ ವಿಶೇಷವೆಂದರೆ ಇದೇ ಮೊದಲ ಬಾರಿಗೆ ರವಿ ಅರಸು ಕನ್ನಡ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸತ್ಯ ಜೋತಿ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಹಿಂದೆ ‘ವಿವೇಗಂ’, ‘ವಿಶ್ವಾಸಂ’ ಸೇರಿದಂತೆ ಅನೇಕ ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಿಸಿದೆ.

    ತಮಿಳು ನಿರ್ದೇಶಕ ರವಿ ಅರಸು ಅವರು ನಟ ಶಿವರಾಜ್ ಕುಮಾರ್ ಜೊತೆಗೆ ಸಿನಿಮಾ ಮಾಡುವ ಸುದ್ದಿ ಈ ಹಿಂದೆಯೇ ಹೊರಬಂದಿತ್ತು. ಇದೀಗ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್ ಆಗಿದೆ. ಅಲ್ಲದೆ ಇಬ್ಬರ ಕಾಂಬಿನೇಷನ್ ಕುರಿತು ನಿರೀಕ್ಷೆ ಸಹ ಹೆಚ್ಚಾಗಿದೆ.