Tag: ಕಂಟ್ರಿಮೇಡ್

  • ‘ಕಂಟ್ರಿಮೇಡ್’ನಲ್ಲಿ ಗ್ಯಾಂಗ್‌ಸ್ಟರ್ ಆದ ಟಾಮ್ ಅಂಡ್ ಜೆರ್ರಿಯ ನಿಶ್ವಿತ್ ಕೊರೋಡಿ

    ‘ಕಂಟ್ರಿಮೇಡ್’ನಲ್ಲಿ ಗ್ಯಾಂಗ್‌ಸ್ಟರ್ ಆದ ಟಾಮ್ ಅಂಡ್ ಜೆರ್ರಿಯ ನಿಶ್ವಿತ್ ಕೊರೋಡಿ

    ಹೊಸ ತಂಡದವರೇ ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ‘ಕಂಟ್ರಿಮೇಡ್’ ಸಿನಿಮಾ ಇಂದು ಸೆಟ್ಟೇರಿದೆ. ಗೊಂಬೆ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಟಾಮ್ ಅಂಡ್ ಜೆರ್ರಿ ಖ್ಯಾತಿಯ ನಟ ನಿಶ್ಚಿತ್ ಕೊರೋಡಿ ನಾಯಕ ನಟ. ಈ ಬಾರಿ ಪಕ್ಕಾ ಮಾಸ್ ಅವತಾರ ತಾಳಿರುವ ನಿಶ್ಚಿತ್ ಗ್ಯಾಂಗ್‌ಸ್ಟರ್ ಕಥಾನಕವುಳ್ಳ ‘ಕಂಟ್ರಿಮೇಡ್’ ಸ್ಕ್ರಿಪ್ಟ್ ಮೆಚ್ಚಿ ಆಯ್ಕೆ ಮಾಡಿಕೊಂಡಿದ್ದಾರೆ. ಮಾಸ್ ಸಿನಿಮಾಗೆ ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಿ ಹಾಗೂ ಖಳನಟ ವಸಿಷ್ಠ ಸಿಂಹ ಸಾಥ್ ನೀಡಿದ್ದಾರೆ.

    ಇಂದು ಅದ್ಧೂರಿಯಾಗಿ ಸೆಟ್ಟೇರಿರುವ ಕಂಟ್ರಿಮೇಡ್ ಚಿತ್ರಕ್ಕೆ ದುನಿಯಾ ವಿಜಿ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ರೆ, ವಸಿಷ್ಠ ಸಿಂಹ ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ’ಲವ್ ಮಾಕ್ಟೆಲ್’ ತೆಲುಗು ಅವತರಣಿಕೆ ನಿರ್ಮಾಣ ಮಾಡಿರುವ ಭಾವನಾರವಿ ಗೊಂಬೆ ಪಿಕ್ಚರ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ಕಂಟ್ರಿಮೇಡ್ ಚಿತ್ರದ ರೂವಾರಿ ರಾಘವ ಸೂರ್ಯ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಇವರಿಗೆ ಸಿನಿಮಾ ಮೇಲೆ ಅಪಾರ ಸೆಳೆತ. ನಿರ್ದೇಶಕನಾಗುವ ಕನಸ್ಸೊತ್ತಿರುವ ರಾಘವ್ ಸೂರ್ಯ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ದುಡಿದ ಅನುಭವ ಹೊಂದಿದ್ದಾರೆ. ಇದೀಗ ಕಂಟ್ರಿಮೇಡ್ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ ಕಿರೀಟಿ – ಸ್ಟಂಟ್, ಆ್ಯಕ್ಟಿಂಗ್, ಡ್ಯಾನ್ಸ್ ರಾಜಮೌಳಿ ಮೆಚ್ಚುಗೆ!

    ಕಲ್ಕತ್ತಾ ಮತ್ತು ಉತ್ತರ ಕರ್ನಾಟಕ ಎರಡು ಬ್ಯಾಕ್ ಡ್ರಾಪ್‌ನಲ್ಲಿ ಸಾಗುವ ಕಥೆ ಚಿತ್ರದಲ್ಲಿದೆ. ಮಾಸ್ ಗ್ಯಾಂಗ್‌ಸ್ಟರ್ ಕುರಿತಾದ ಕಥೆ ಚಿತ್ರದಲ್ಲಿದ್ದು ಬಾಲಕನಾಗಿದ್ದಾಗ ಕೆಲವು ಕಹಿ ಘಟನೆಗಳನ್ನು ಸಹಿಸಿಕೊಳ್ಳಲಾಗದೆ ಊರು ಬಿಟ್ಟು ಕಲ್ಕತ್ತಾ ಸೇರಿಕೊಳ್ಳುವ ನಾಯಕನ ಸುತ್ತ ಸಿನಿಮಾ ಹೆಣೆಯಲಾಗಿದೆ. ಚಿತ್ರದಲ್ಲಿ ನಿಶ್ವಿತ್ ಕೊರೋಡಿ ಎರಡು ಶೇಡ್‌ಗಳಲ್ಲಿ ಕಾಣಸಿಗಲಿದ್ದಾರೆ. ಇವರಿಗೆ ಜೋಡಿಯಾಗಿ, ಬೆಂಗಾಲಿ ಹುಡುಗಿಯಾಗಿ ’ಲವ್‌ಮಾಕ್ಟೆಲ್-2’ ಖ್ಯಾತಿಯ ರಚೇಲ್‌ ಡೇವಿಡ್ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಶರತ್‌ಲೋಹಿತಾಶ್ವ, ತಬಲಾನಾಣಿ ಒಳಗೊಂಡ ತಾರಾಬಳಗವಿದೆ. ನಕುಲ್‌ ಅಭಯಂಕರ್ ಸಂಗೀತ, ಜಿ.ಎಸ್.ಶ್ರೇಯಸ್ ಕ್ಯಾಮೆರಾ ವರ್ಕ್, ದೀಪು.ಎಸ್.ಕುಮಾರ್ ಸಂಕಲನ ಸಿನಿಮಾಗೆ ಇರಲಿದೆ. ಇಂದು ಸೆಟ್ಟೇರಿರುವ ಕಂಟ್ರಿಮೇಡ್ ಏಪ್ರಿಲ್‌ನಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು