Tag: ಕಂಟೈನರ್ ಡಿಪೋ

  • ಕಂಟೈನರ್ ಡಿಪೋದಲ್ಲಿ ಬೆಂಕಿ: 16 ಸಾವು, 450ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ಕಂಟೈನರ್ ಡಿಪೋದಲ್ಲಿ ಬೆಂಕಿ: 16 ಸಾವು, 450ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ಢಾಕಾ: ಬಾಂಗ್ಲಾದೇಶದ ಕಂಟೈನರ್ ಡಿಪೋಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 16 ಜನರು ಸಜೀವ ದಹನವಾಗಿದ್ದು, 450ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ.

    ಚಿತ್ತಗಾಂಗ್‍ನ ಸೀತಾಕುಂಡ ಉಪಜಿಲಾದಲ್ಲಿರುವ ಕಡಮ್ರಸುಲ್ ಪ್ರದೇಶದ ಬಿಎಂ ಕಂಟೈನರ್ ಡಿಪೋದಲ್ಲಿ ಶನಿವಾರ ರಾತ್ರಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, 16 ಜನರು ಸಾವನ್ನಪ್ಪಿದ್ದಾರೆ ಮತ್ತು 450 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆ(ಸಿಎಂಸಿಎಚ್)ಗೆ ರವಾನಿಸಲಾಗಿದೆ. ಇದನ್ನೂ ಓದಿ: ಸಿಡಿಲು ಬಡಿದು ಅಸ್ಸಾಂನಲ್ಲಿ ಬಾಗಲಕೋಟೆ ಯೋಧ ಸಾವು

    ಪೊಲೀಸ್ ಔಟ್‍ಪೋಸ್ಟ್ ಸಬ್-ಇನ್‍ಸ್ಪೆಕ್ಟರ್(ಎಸ್‍ಐ) ನೂರುಲ್ ಆಲಂ ಅವರು ಮಾತನಾಡಿದ್ದು, ಈ ಘಟನೆಯ ಪ್ರಾಥಮಿಕ ತನಿಖೆ ವೇಳೆ, ಕಂಟೈನರ್ ಡಿಪೋಗೆ ರಾಸಾಯನಿಕಗಳಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ಇದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಮುನ್ನವೇ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಬೆಂಕಿ ಮತ್ತಷ್ಟು ವ್ಯಾಪಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ನಂತರ ರಾತ್ರಿ 11:45ಕ್ಕೆ ಭಾರೀ ಸ್ಫೋಟ ಸಂಭವಿಸಿದೆ ಎಂದು ವಿವರಿಸಿದರು.

    ಈ ಬೆನ್ನಲ್ಲೇ ಕಂಟೈನರ್ ಒಂದರಲ್ಲಿ ರಾಸಾಯನಿಕ ಅಂಶವಿದ್ದ ಕಾರಣ ಬೆಂಕಿ ಒಂದು ಕಂಟೇನರ್ ನಿಂದ ಮತ್ತೊಂದು ಕಂಟೇನರ್ ಗೆ ವ್ಯಾಪಿಸಿದೆ. ಈ ಸ್ಫೋಟವು ನೆರೆಹೊರೆಯನ್ನು ಬೆಚ್ಚಿಬೀಳಿಸಿದೆ. ಹತ್ತಿರದ ಮನೆಗಳ ಕಿಟಕಿ ಗಾಜುಗಳು ಒಡೆದುಹೋಗಿವೆ ಎಂದರು. ಇದನ್ನೂ ಓದಿ: ಗ್ಯಾಂಗ್ ರೇಪ್: ಅಪ್ರಾಪ್ತ ಆರೋಪಿ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ 

    ಚಿತ್ತಗಾಂಗ್ ಅಗ್ನಿಶಾಮಕ ಸೇವೆ ಮತ್ತು ಸಿವಿಲ್ ಡಿಫೆನ್ಸ್ ಸಹಾಯಕ ನಿರ್ದೇಶಕ ಎಂಡಿ ಫಾರುಕ್ ಹೊಸೈನ್ ಸಿಕ್ದರ್ ಸೇರಿ ಸುಮಾರು 19 ಅಗ್ನಿಶಾಮಕ ಘಟಕಗಳು ಬೆಂಕಿ ನಂದಿಸಲು ಕೆಲಸ ಮಾಡುತ್ತಿವೆ. ಆರು ಆಂಬ್ಯುಲೆನ್ಸ್‌ಗಳು ಸಹ ಸ್ಥಳದಲ್ಲಿದೆ.