Tag: ಕಂಟೇನರ್

  • ಆಕ್ಸಿಡೆಂಟ್ ರಭಸಕ್ಕೆ ಹೊತ್ತಿ ಉರಿದ ಕಂಟೇನರ್ – ಚಾಲಕರಿಬ್ಬರ ಸಜೀವ ದಹನ

    ಆಕ್ಸಿಡೆಂಟ್ ರಭಸಕ್ಕೆ ಹೊತ್ತಿ ಉರಿದ ಕಂಟೇನರ್ – ಚಾಲಕರಿಬ್ಬರ ಸಜೀವ ದಹನ

    ವಿಜಯಪುರ: ಕಂಟೇನರ್ ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಚಾಲಕರಿಬ್ಬರು ಸಜೀವ ದಹನವಾದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಈ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ಎನ್‍ಎಚ್ 13 ರಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಕಂಟೇನರ್ ನಲ್ಲಿದ್ದ ಕ್ಲೀನರ್ ಒಬ್ಬರು ಪಾರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಹೊರ್ತಿ ಠಾಣಾ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

    ಅಪಘಾತದ ಪರಿಣಾಮ ಎನ್‍ಎಚ್ ಸಂಚಾರ ಸಪೂರ್ಣ ಬಂದ್ ಆಗಿದೆ. ಘಟನೆ ಸಂಬಂಧ ಹೊರ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • KSRTC ಬಸ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಂಟೇನರ್ ಪಲ್ಟಿ!

    KSRTC ಬಸ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಂಟೇನರ್ ಪಲ್ಟಿ!

    ಮಡಿಕೇರಿ: ಕೆಎಸ್‍ಆರ್ ಟಿಸಿ ಬಸ್ ಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಕಂಟೇನರ್ ಮಗುಚಿಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮೈಸೂರು-ಮಡಿಕೇರಿ ಹೆದ್ದಾರಿಯ ಬೋಯಿಕೇರಿಯಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ ಮೈಸೂರಿಂದ ಮಡಿಕೇರಿಗೆ ಬರುತ್ತಿತ್ತು. ಈ ವೇಳೆ ವೇಗವಾಗಿ ಬಂದು ಕಂಟೇನರ್ ಬಸ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿಯಾದ ರಭಸಕ್ಕೆ ರಸ್ತೆ ಮಧ್ಯೆಯೇ ಕಂಟೇನರ್ ಪಲ್ಟಿಯಾಗಿದೆ.

    ಇನ್ನು ಘಟನೆ ನಡೆದ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು, ವಾಹನ ತೆರವಿಗೆ ಕ್ರಮಕೈಗೊಂಡಿದ್ದಾರೆ. ಸದ್ಯ ಈ ಅಪಘಾತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್‍ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಕಂಟೇನರ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನ ಹಿಂಬದಿ ನಜ್ಜುಗುಜ್ಜಾಗಿದೆ.

    ಈ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಕಾರ್, ಕಂಟೇನರ್ ಮುಖಾಮುಖಿ ಡಿಕ್ಕಿ- ಮೂವರು ಸಾವು!

    ಕಾರ್, ಕಂಟೇನರ್ ಮುಖಾಮುಖಿ ಡಿಕ್ಕಿ- ಮೂವರು ಸಾವು!

    ಬೀದರ್: ಕಾರು ಮತ್ತು ಕಂಟೇನರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ನಸುಕಿನ ಜಾವ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ಕೌಡಿಯಾಳ ಬಳಿ ಸಂಭವಿಸಿದೆ.

    ರಾಜೇಂದ್ರ ಶಿವಲಿಂಗಪ್ಪಾ ಚಿತಕೋಟೆ(52), ಶ್ರೀಧರ್ ಚಿತಕೋಟೆ(32) ಹಾಗೂ ಸಂತೋಷ್ ಕಾರಮೋರೆ (40) ಮತ ದುರ್ದೈವಿಗಳು. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹೊದಲೂರು ಗ್ರಾಮದವರು ಸಂಬಂಧಿಕರ ಮದುವೆಗೆಂದು ಮಹಾರಾಷ್ಟ್ರಕ್ಕೆ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರು ಓವರ್ ಟೆಕ್ ಮಾಡಿ ಮುಂದೆ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಈ ಕುರಿತು ಬಸವಕಲ್ಯಾಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯುರೇನಿಯಂ ತುಂಬಿದ್ದ ಕಂಟೇನರ್ ಪಲ್ಟಿ- ಕಾರವಾರದಲ್ಲಿ ತಪ್ಪಿತು ಭಾರೀ ದುರಂತ

    ಯುರೇನಿಯಂ ತುಂಬಿದ್ದ ಕಂಟೇನರ್ ಪಲ್ಟಿ- ಕಾರವಾರದಲ್ಲಿ ತಪ್ಪಿತು ಭಾರೀ ದುರಂತ

    ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಸಾಗಿಸುತ್ತಿದ್ದ ಯುರೇನಿಯಂ ತುಂಬಿದ್ದ ಕಂಟೇನರ್ ಪಲ್ಟಿಯಾದ ಘಟನೆ ನಡೆದಿದೆ.

    ಈ ಘಟನೆ ಕಾರವಾರ ತಾಲೂಕಿನ ಶಿರವೆ ಬಳಿ ನಡೆದಿದ್ದು, ಈ ಕಂಟೇನರ್ ಕೇರಳದ ತಿರುವನಂತಪುರಂನ ಶ್ರೀಹರಿ ಕೋಟಾದಿಂದ ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಬಿಗಿ ಭದ್ರತೆಯಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಕಂಟೇನರ್ ನಲ್ಲಿದ್ದ ನಾಲ್ಕು ಯುರೇನಿಯಂ ಪೆಟ್ಟಿಗೆಗಳು ಧರೆಗುಳಿವೆ. ಅದೃಷ್ಟವಶಾತ್ ಯಾವುದೇ ಸೋರಿಕೆಯಾಗಿಲ್ಲ. ಹೀಗಾಗಿ ಭಾರೀ ಅನಾಹುತವೊಂದು ತಪ್ಪಿದೆ.

    ಸ್ಥಳಕ್ಕೆ ಕೈಗಾ ಅಣು ಸ್ಥಾವರದ ಅಧಿಕಾರಿಗಳು ಹಾಗೂ ಪೂಲೀಸರು ಭೇಟಿ ನೀಡಿದ್ದು, ಬಿಗಿ ಭದ್ರತೆ ನಡುವೆ ಯುರೇನಿಯಂ ಪೆಟ್ಟಿಗೆಗಳ ರಕ್ಷಣೆ ಮಾಡಲಾಗಿದೆ.