Tag: ಕಂಟೆಸ್ಟೆಂಟ್

  • ಅಕ್ಟೋಬರ್ ನಲ್ಲಿ ‘ಬಿಗ್ ಬಾಸ್’ ಕನ್ನಡ: ಹೌದು ಸ್ವಾಮಿ ಅಂತಿದೆ ಕಂಟೆಸ್ಟೆಂಟ್ ಲಿಸ್ಟ್

    ಅಕ್ಟೋಬರ್ ನಲ್ಲಿ ‘ಬಿಗ್ ಬಾಸ್’ ಕನ್ನಡ: ಹೌದು ಸ್ವಾಮಿ ಅಂತಿದೆ ಕಂಟೆಸ್ಟೆಂಟ್ ಲಿಸ್ಟ್

    ಳೆದ ಸಲದಂತೆ ಈ ಬಾರಿಯೂ ಅಕ್ಟೋಬರ್‍ ಮೂರನೇ ವಾರದಿಂದ ಬಿಗ್ ಬಾಸ್ ಕನ್ನಡ (Bigg Boss Kannada) ಶುರುವಾಗಲಿದೆ ಅನ್ನೋ ಮಾಹಿತಿ ಸಿಕ್ಕಿದೆ. ಅದಕ್ಕಾಗಿ ಸರ್ವ ರೀತಿಯಲ್ಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ಕಳೆದ ಬಾರಿ ಕಂಟೆಸ್ಟೆಂಟ್ (Contestant)  ಕಾರಣದಿಂದಾಗಿ ಶೋ ಗೆದ್ದಿತ್ತು. ಈ ಬಾರಿಯೂ ಅದೇ ತಂತ್ರಕ್ಕೆ ಬಿಗ್ ಬಾಸ್ ಟೀಮ್ ಮೊರೆ ಹೋಗಲಿದೆಯಂತೆ.

    ಸೋಷಿಯಲ್ ಮೀಡಿಯಾದಲ್ಲಿ ಮಿಂಚಿದೋರು, ವಿವಾದಕ್ಕೆ ಕಾರಣರಾಗಿದ್ದವರು ಮತ್ತು ಹೆಚ್ಚು ಮನರಂಜನೆ ನೀಡಬಲ್ಲ ಮುಖಗಳನ್ನು ಹುಡುಕುವ ಕೆಲಸವನ್ನು ಆರಂಭಿಸಲಾಗಿದೆ. ತುಕಾಲಿ ಸಂತು ಪತ್ನಿ ಮಾನಸ, ಗಿಚ್ಚಿಗಿಲಿಗಿಲಿಯ ರಾಘವೇಂದ್ರ. ರೀಲ್ಸ್ ರೇಷ್ಮಾ ಸೇರಿದಂತೆ ಹಲವರಿಗೆ ಈಗಾಗಳೇ ಆಫರ್ ಹೋಗಿದೆ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ.

    ಎಂದಿನಂತೆ ಸುದೀಪ್ (Sudeep) ಈ ಬಾರಿಯೂ ಕಾರ್ಯಕ್ರಮವನ್ನು ನಡೆಸಲಿಕೊಡಲಿದ್ದಾರೆ. ತಮ್ಮ ಹೊಸ ಸಿನಿಮಾದ ಕಾಲ್‍ ಶೀಟ್ ಮಧ್ಯಯೂ ಬಿಗ್ ಬಾಸ್ ಗಾಗಿ ದರ್ಶನ್ ಟೈಮ್ ಹೊಂದಿಸಿಕೊಂಡಿದ್ದಾರಂತೆ. ಜೊತೆಗೆ ಸ್ವತಃ ಸುದೀಪ್ ಅವರೇ ಹಲವು ಹೊಸ ಐಡ್ಯಾಗಳನ್ನು ಬಿಗ್ ಬಾಸ್ ಟೀಮ್‍ ಗೆ ನೀಡಿದ್ದಾರಂತೆ. ಅವೆಲ್ಲವನ್ನೂ ಇಟ್ಟುಕೊಂಡು ಟೀಮ್ ತಮ್ಮ ಕೆಲಸ ಶುರು ಮಾಡಿದೆ.

    ಬಿಗ್ ಬಾಸ್ ಹಳೆಮನೆಯಲ್ಲೇ ಹೊಸ ರೂಪ ಕೊಟ್ಟು ಶೂಟಿಂಗ್ ಮಾಡುವ ಪ್ಲ್ಯಾನ್ ವಾಹಿನಿಯದ್ದು. ಈಗಾಗಲೇ ಮನೆಯ ಕೆಲಸ ಕೂಡ ಶುರುವಾಗಿದೆಯಂತೆ. ಹೊಸ ವಿನ್ಯಾಸದಲ್ಲಿ ಮನೆ ತಯಾರಾಗಲಿದೆ. ಹಳೆಯ ನೆನಪುಗಳು ಯಾವವು ಬಾರದಂತೆ ಮನೆ ಸಿದ್ಧವಾಗಲಿ ಇರಲಿದೆ.

  • ಬಿಗ್ ಬಾಸ್ ಕಂಟೆಸ್ಟೆಂಟ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ ದೀಪಿಕಾ ದಾಸ್

    ಬಿಗ್ ಬಾಸ್ ಕಂಟೆಸ್ಟೆಂಟ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ ದೀಪಿಕಾ ದಾಸ್

    ರಡು ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿ ರಂಜಿಸಿರುವ ನಟಿ ದೀಪಿಕಾ ದಾಸ್ (Deepika Das) ಯಾಕೋ ಬಿಗ್ ಬಾಸ್ ಮೇಲೆ (Bigg Boss Kannada) ಕೋಪಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ ಹತ್ತರ ಕಂಟೆಸ್ಟೆಂಟ್ (Contestant) ಬಗ್ಗೆ ಅವರು ಗರಂ ಆಗಿದ್ದಾರೆ. ಜೊತೆಗೆ ತಮ್ಮ ಮನದಾಳದ ಅಭಿಪ್ರಾಯವನ್ನೂ ಅವರು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    ಎರಡೆರಡು ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗಲು ಅವಕಾಶ ಸಿಗುವುದು ತುಂಬಾ ವಿರಳ. ಅಂಥದ್ದೊಂದು ಅವಕಾಶವನ್ನು ದೀಪಿಕಾ ಪಡೆದುಕೊಂಡಿದ್ದರು. ಎರಡೂ ಬಾರಿಯೂ ಅವರು ಉತ್ತಮ ಕಂಟೆಸ್ಟೆಂಟ್ ಆಗಿಯೇ ಜನಪ್ರಿಯತೆ ಪಡೆದರು. ಹಾಗಾಗಿ ಈ ಬಾರಿಯ ಕಂಟೆಸ್ಟೆಂಟ್ ಬಗ್ಗೆ ಅವರು ಕೋಪವಿದೆ. ಅಲ್ಲದೇ, ದೊಡ್ಮನೆಯ ಸದಸ್ಯರು ಆಡುತ್ತಿರುವ ಟಾಸ್ಕ್ ಬಗ್ಗೆ ಅವರಿಗೆ ಅಸಮಾಧಾನವಿದೆ. ಹಾಗಾಗಿಯೇ ಅವರು ಸೋಷಿಯಲ್ ಮೀಡಿಯಾದಲ್ಲಿ ತಮಗೆ ಅನಿಸಿದ್ದನ್ನು ಬರೆದುಕೊಂಡಿದ್ದಾರೆ.

    ಬಿಗ್ ಬಾಸ್ ಸ್ಪರ್ಧಿಗಳಿಂದ ಇಂತಹ ಹುಚ್ಚುತನ, ಸಂವೇದನಾರಹಿತ ನಡೆ ಮತ್ತು ಅಸಹಿಷ್ಣುತೆಯ ವರ್ತನೆಯನ್ನು ಸಹಿಸಿಕೊಳ್ಳಲು ಅಸಾಧ್ಯ. ನಾನು ಮಾಜಿ ಸ್ಪರ್ಧಿ ಆಗಿರುವುದರಿಂದ ಯಾರನ್ನು ದೂಷಿಸಬೇಕು ಎಂದು ಅರ್ಥವಾಗುತ್ತಿಲ್ಲ. ಬಿಗ್ ಬಾಸ್ ಅವರನ್ನು ದೂಷಿಸಬೇಕಾ? ಸ್ಪರ್ಧಿಗಳನ್ನಾ ಅಥವಾ ಈ ಕಾರ್ಯಕ್ರಮ ನೋಡುವ ಪ್ರೇಕ್ಷಕರನ್ನಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಯಾರನ್ನೂ ವೈಯಕ್ತಿಕ ಗುರಿಯಾಗಿಸೋದು ಸ್ಪರ್ಧೆ ಆಗಲ್ಲ. ನನ್ನ ಪ್ರಕಾರ ಆಟವು ಆಟದಂತೆಯೇ ಇರಬೇಕು ಎಂದು ಅವರು ಸಲಹೆ ಕೂಡ ನೀಡಿದ್ದಾರೆ.

    ನಿನ್ನೆಯ ಬೈಗುಳದ ಟಾಸ್ಕ್ ಬಗ್ಗೆ ಸಾಕಷ್ಟು ಜನರು ಅಸಮಾಧಾನ ತೋಡಿಕೊಂಡಿದ್ದಾರೆ. ಅದೊಂದು ರೀತಿಯ ಪರ್ಸನಲ್ ಅಟ್ಯಾಕ್ ಆಗಿತ್ತು ಎಂದು ದೂರಿದ್ದಾರೆ. ಸ್ನೇಹಿತ್ ಆಡಿದ ಮಾತಿಗೆ ಸ್ವತಃ ತನಿಷಾ ಕಣ್ಣೀರಿಟ್ಟಿದ್ದಾರೆ. ಕಾರ್ತಿಕ್ ಮತ್ತು ಸಂಗೀತಾಗೆ ಸ್ನೇಹಿತ್ ಮತ್ತು ನಮ್ರತಾ ಆಡಿದ ಮಾತಿಗೆ ಅನೇಕರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವುಗಳ ಬಗ್ಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ ಕೂಡ ಬಂದಿದೆ. ಹಾಗಾಗಿ ನಟಿ ದೀಪಿಕಾ ದಾಸ್ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಸುದೀಪ್ ಯಾವ ರೀತಿಯಲ್ಲಿ ಕಾಮೆಂಟ್ ಮಾಡುತ್ತಾರೆ ಎನ್ನುವುದನ್ನು ಕಾದನೋಡಬೇಕು.