Tag: ಕಂಗ್ರೆಸ್

  • ಯಾವ ಪುರುಷಾರ್ಥಕ್ಕೆ ಈ ಅಧಿವೇಶನ? ದಿನಕ್ಕೆ 1.5 -2 ಕೋಟಿ ರೂ.ನಷ್ಟಕ್ಕೆ ಹೊಣೆ ಯಾರು? – ಬಿಜೆಪಿ, ಕಾಂಗ್ರೆಸ್‍ನ್ನು ತಿವಿದ ಎಚ್‍ಡಿಕೆ

    ಯಾವ ಪುರುಷಾರ್ಥಕ್ಕೆ ಈ ಅಧಿವೇಶನ? ದಿನಕ್ಕೆ 1.5 -2 ಕೋಟಿ ರೂ.ನಷ್ಟಕ್ಕೆ ಹೊಣೆ ಯಾರು? – ಬಿಜೆಪಿ, ಕಾಂಗ್ರೆಸ್‍ನ್ನು ತಿವಿದ ಎಚ್‍ಡಿಕೆ

    ಬೆಂಗಳೂರು: ಯಾವ ಪುರುಷಾರ್ಥಕ್ಕೆ ಈ ಅಧಿವೇಶನ ನಡೆಯುತ್ತಿದೆ. ದಿನಕ್ಕೆ 1.5-2 ಕೋಟಿ ರೂ.ನಷ್ಟು ಪೋಲಾಗುವ ಜನರ ತೆರಿಗೆ ಹಣಕ್ಕೆ ಹೊಣೆ ಯಾರು ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:
    “ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ.” ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ಹೇಳಿದ ಈ ಮಾತು ಪ್ರಜಾಸತ್ತೆಯನ್ನು ಗೌರವಿಸುವ ಪ್ರತಿ ವ್ಯಕ್ತಿಗೂ ದಾರಿದೀಪ. ಆದರೆ, ಇವತ್ತು ಪ್ರಜಾಪ್ರಭುತ್ವವೆಂದರೆ; “ರಾಜಕೀಯದಿಂದ, ರಾಜಕೀಯಕ್ಕಾಗಿ, ಎನ್ನುವಂತಾಗಿದೆ. ರಾಜಕೀಯಕೋಸ್ಕರ ಕಳೆದೆರಡು ದಿನಗಳ ವಿಧಾನಮಂಡಲ ಕಲಾಪ ‘ರಾಜಕೀಯ ಪ್ರತಿಷ್ಠೆ’ಗೆ ಆಹುತಿಯಾಗಿದೆ. ಬೆಳಗಾವಿ ಕಲಾಪವನ್ನು ಬಲಿ ಪಡೆದ ಮೇಲೂ ರಾಜ್ಯಪಾಲರ ಭಾಷಣದ ಮೇಲೆ ಅಮೂಲ್ಯ ಚರ್ಚೆ ನಡೆಸಬೇಕಿದ್ದ ಈ ಸದನಕ್ಕೂ ಅದೇ ಚಾಳಿ ವಕ್ಕರಿಸಿದೆ. ‘ಪ್ರಜಾಪ್ರಭುತ್ವಕ್ಕೆ ಗ್ರಹಣ’ ಹಿಡಿಸುವ ಕೆಲಸ ನಡೆದಿದೆ.  ಇದನ್ನೂ ಓದಿ: ಕಲಾಪ ಹಾಳು ಮಾಡುತ್ತಿರುವವರನ್ನು ಸದನದಿಂದ ಹೊರಹಾಕಿ: ಹೆಚ್‍ಡಿಕೆ

    ಹತ್ತು ನಿಮಿಷ ಧರಣಿ, ಆಮೇಲೆ ಕಲಾಪ ಮುಂದೂಡುವುದು; ಸದನ ನಡೆಯುವ ರೀತಿ ಇದೇನಾ? ಯಾವ ಪುರುಷಾರ್ಥಕ್ಕೆ ಈ ಅಧಿವೇಶನ? ದಿನಕ್ಕೆ 1.5-2 ಕೋಟಿ ರೂ.ನಷ್ಟು ಪೋಲಾಗುವ ಜನರ ತೆರಿಗೆ ಹಣಕ್ಕೆ ಉತ್ತರದಾಯಿತ್ವ ಯಾರದ್ದು? ಅವರ ನಿರೀಕ್ಷೆಗಳನ್ನು ‘ಕಾಲ ಕಸ’ ಮಾಡಿಕೊಂಡ ರಾಜಕೀಯ ಪ್ರತಿಷ್ಠೆಗೆ ಕೊನೆ ಇಲ್ಲವೆ?. ಕೋವಿಡ್’ನಿಂದ ಎರಡು ವರ್ಷ ಮಕ್ಕಳ ಶಿಕ್ಷಣ ಹಾಳಾಯಿತು. ಈಗ ಹಿಜಬ್, ಕೇಸರಿ ಶಾಲು ಗಲಾಟೆಯಿಂದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆಯೇ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಹೊಣೆ ಯಾರು? ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಜವಾಬ್ದಾರಿ ರಾಜಕೀಯ ಪಕ್ಷಗಳಿಗೆ ಇಲ್ಲವೇ?. ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗಕ್ಕೆ ಸಮಿತಿ ರಚನೆ: ಬೊಮ್ಮಾಯಿ

    ಕಲಾಪಕ್ಕೆ ‘ಜನಪರ ಅಜೆಂಡಾ’ ಇರಬೇಕೆ ವಿನಾ ‘ಚುನಾವಣೆ ಅಜೆಂಡಾ’ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಅಧಿವೇಶನವು ‘ಮತ ಗಳಿಕೆಗೆ ಗುರಾಣಿ’ ಆಗಿರುವುದು ದುರದೃಷ್ಟಕರ. ತಮ್ಮ ಪ್ರತಿಷ್ಠೆಗೆ ಕಲಾಪವನ್ನು ಹಳಿತಪ್ಪಿಸಿ ಜನರ ನಿರೀಕ್ಷೆಗಳನ್ನು ಹೊಸಕಿ ಹಾಕುವುದು ‘ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣ’ಕ್ಕೆ ನಿದರ್ಶನ ಎನ್ನುವುದು ನನ್ನ ಅಭಿಪ್ರಾಯ. ಜನರು ಕಷ್ಟದಲ್ಲಿದ್ದಾರೆ. ಕೋವಿಡ್’ನಿಂದ ಅವರ ಬದಕಿನ ಬವಣೆ ಹೆಚ್ಚಿ ರೋಸಿ ಹೋಗಿದ್ದಾರೆ. ಅವರು ರೊಚ್ಚಿಗೇಳುವ ಮುನ್ನ ಆಡಳಿತಾರೂಢ ಬಿಜೆಪಿ & ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ಎಚ್ಚೆತ್ತುಕೊಂಡು ತಮ್ಮ ಜನವಿರೋಧಿ ನೀತಿ ಬದಲಿಸಿಕೊಳ್ಳಬೇಕು. ವಿಧಾನ ಕಲಾಪಕ್ಕೆ ಕುಣಿಕೆ ಬಿಗಿಯುವ ಹೀನ ರಾಜಕಾರಣ ನಿಲ್ಲಲಿ.

  • ಕೆಲಸ ಮಾಡೋರಿಗೆ ಓಟು ಹಾಕಿ, ನಿದ್ದೆ ಮಾಡೋರಿಗೆ ಓಟು ಹಾಕಬೇಡಿ ಅಂದಿದ್ದೆ – ಸಿದ್ದರಾಮಯ್ಯ

    ಕೆಲಸ ಮಾಡೋರಿಗೆ ಓಟು ಹಾಕಿ, ನಿದ್ದೆ ಮಾಡೋರಿಗೆ ಓಟು ಹಾಕಬೇಡಿ ಅಂದಿದ್ದೆ – ಸಿದ್ದರಾಮಯ್ಯ

    ಬಾಗಲಕೋಟೆ: ಕೆಲಸ ಮಾಡೋರಿಗೆ ಮತ ಹಾಕಿ, ಕೆಲಸ ಮಾಡದವರಿಗೆ ಏಕೆ ಮತ ಹಾಕುತ್ತೀರಿ ಎಂದು ಹೇಳಿದ್ದೆ ಇದರಲ್ಲಿ ತಪ್ಪೇನಿದೆ? ಇದನ್ನೇ ಸಿಎಂ ಅವರ ಹೇಳಿಕೆಗೆ ಲಿಂಕ್ ಮಾಡಿದ್ದೀರಿ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾಧ್ಯಮಗಳ ವಿರುದ್ಧವೇ ಕಿಡಿಕಾರಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಮಾತನಾಡಿದ ಅವರು, ನಾನು ಹೇಳಿದ್ದು, ಹಾಗಲ್ಲ. ಕೆಲಸ ಮಾಡುವವರಿಗೆ ಮತ ಹಾಕಿ, ಕೆಲಸ ಮಾಡದವರಿಗೆ ಏಕೆ ಮತ ಹಾಕುತ್ತೀರಿ ಎಂದು ಹೇಳಿದ್ದೆ. ಇದರಲ್ಲಿ ತಪ್ಪೇನಿದೆ? ಆದರೆ ನೀವು(ಮಾಧ್ಯಮದವರು) ನಾನು ಹೇಳಿದ ರೀತಿ ಪ್ರಸಾರ ಮಾಡಿಲ್ಲ. ಕುಮರಸ್ವಾಮಿಯವರಿಗೆ ನನ್ನನ್ನು ಲಿಂಕ್ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಾಹಿತಿ ಇಲ್ಲ: ಮುಖ್ಯಮಂತ್ರಿಗಳ ಪ್ರವಾಸದ ಕುರಿತು ನನಗೆ ತಿಳಿದಿಲ್ಲ. ಸಿಎಂ ಎಲ್ಲವನ್ನೂ ನನ್ನ ಜೊತೆ ಮಾತನಾಡುವುದಿಲ್ಲ. ಸಮನ್ವಯ ಸಮಿತಿಯಲ್ಲಿ ಚರ್ಚಿಸುವುದನ್ನು ಹೊರತುಪಡಿಸಿ, ನಾನೂ ಸಿಎಂ ಭೇಟಿಯಾಗುವುದು ಅಪರೂಪ. ರಾಜ್ಯದಲ್ಲಿ ಆಪರೇಶನ್ ಕಮಲ ಆಗಲ್ಲ. ಅವರಿಗೇ (ಬಿಜೆಪಿ) ಆಪರೇಶನ್ ಆಗಬೇಕು ಅಷ್ಟೇ ಎಂದು ಮಾಜಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

    ಬೈಯ್ಯಾಪುರ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅಹಿಂದ ಸಂಘಟನೆ ಮಾಡಿದ್ದಕ್ಕೆ ಜೆಡಿಎಸ್‍ನಿಂದ ಹೊರಹಾಕಿದರು ಎಂಬ ಬೈಯ್ಯಾಪುರ ಹೇಳಿಕೆ ಸತ್ಯ. ಅವರು ಸರಿಯಾಗಿ ಹೇಳಿದ್ದಾರೆ. ವಾಟ್ ಇಸ್ ರಾಂಗ್? ಈಗ ಸಮ್ಮಿಶ್ರ ಸರ್ಕಾರ ಇದೆ ಎಂದು ಹಿಂದೆ ನಡೆದ ಸತ್ಯವನ್ನು ತಿರುಚಬೇಕಾ? ಈಗ ನಾನು ಕಾಂಗ್ರೆಸ್‍ನಲ್ಲಿದ್ದೇನೆ. ಪಕ್ಷದ ಮೂಲಕ ಅಹಿಂದ ಸಂಘಟನೆ ಮಾಡುತ್ತೇವೆ. ಹಿಂದೆ ಜೆಡಿಎಸ್ ನಿಂದ ಹೊರಹಾಕಿದ್ದರಿಂದ ಪ್ರತ್ಯೇಕ ಸಂಘಟನೆ ಮಾಡಿದ್ದೆ. ಇಂದು ಶಾಸಕಾಂಗ ಪಕ್ಷದ ನಾಯಕ, ಸಮನ್ವಯ ಸಮಿತಿ ಅಧ್ಯಕ್ಷನಾಗಿರುವುದರಿಂದ ಪ್ರತ್ಯೇಕ ಅಹಿಂದ ಸಂಘಟನೆ ಮಾಡುವುದಿಲ್ಲ. ಕುಡಿಯಲು ನೀರು ಇಟ್ಟುಕೊಂಡು ಉಳಿದದ್ದನ್ನು ಬಿಡಬೇಕು. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಇರಬೇಕು ಎಂದು ಕೆಆರ್‍ಎಸ್‍ನಿಂದ ನೀರು ಬಿಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದರು.

    ಸಿದ್ದರಾಮಯ್ಯ ಹೇಳಿದ್ದೇನು?
    ಗುರುವಾರ ಆಲೂರು ಎಸ್.ಕೆ ಗ್ರಾಮದಲ್ಲಿ ಪಂಚಾಯತ್ ಕಟ್ಟಡ ಶಿಲಾನ್ಯಾಸ ನೇರವೇರಿಸಿ ಲೋಕಸಭೆ ಚುನಾವಣೆಯ ವೇಳೆ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾದ ವಿಚಾರವನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದರು.

    ಬಿಜೆಪಿಗೆ ಬಾದಾಮಿಯಿಂದ 9 ಸಾವಿರ ಲೀಡ್ ಹೋಗಿದೆ. ಬಿಜೆಪಿಯವರು ಏನು ಕೆಲಸ ಮಾಡಿದ್ದಾರೆ ಎಂದು ಅವರಿಗೆ ವೋಟ್ ಹಾಕುತ್ತೀರಾ ಅಂತ ನನಗೆ ಗೊತ್ತಾಗುತ್ತಿಲ್ಲ. ಅಭಿವೃದ್ಧಿ ಕೆಲಸ ಮಾಡಿದರೂ ನಮಗೆ ವೋಟ್ ಹಾಕುವುದಿಲ್ಲ. ಹೀಗೆ ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸಿ ಜನರಲ್ಲಿ ಅಸಮಾಧಾನ ಹೊರ ಹಾಕಿದ್ದರು.

  • ನೆಹರೂಮನೆತನದವರಿಂದ ದೇಶದಲ್ಲಿ ಭಯೋತ್ಪಾದನೆ ಹುಟ್ಟಿದೆ: ಗೋವಿಂದ ಕಾರಜೋಳ

    ನೆಹರೂಮನೆತನದವರಿಂದ ದೇಶದಲ್ಲಿ ಭಯೋತ್ಪಾದನೆ ಹುಟ್ಟಿದೆ: ಗೋವಿಂದ ಕಾರಜೋಳ

    ಬೆಂಗಳೂರು: ನೆಹರೂ ಮನೆತನ 37 ವರ್ಷ ದೇಶವನ್ನು ಆಳಿದ್ದು, ಇವರ ಆಡಳಿತ ದೇಶಕ್ಕೆ ಶಾಪ ಆಯ್ತು. ನೆಹರು ಮನೆತನದವರಿಂದ ದೇಶದಲ್ಲಿ ಭಯೋತ್ಪಾದನೆ ಹುಟ್ಟಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.

    ಮೋದಿ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಡುಗೋಡಿ ಮುನಿಚಿನ್ನಪ್ಪ ಕ್ರೀಡಾಂಗಣದಲ್ಲಿ ಮೋದಿ ಫೆಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ನವರು ರೈತರ ಬೆನ್ನು ಮುರಿದವರು. ದಲಿತರ ಉದ್ದಾರ ಮಾಡದೇ ಅವರನ್ನ ಹೆಸರಿಗೆ ಬಳಸಿಕೊಂಡಿದ್ದಾರೆ. ದಲಿತ ಅಭಿವೃದ್ದಿ ಮಾಡಿಲ್ಲ ಅಂತಾ ಕಾಂಗ್ರೆಸ್ ವಿರುದ್ಧ ಸಿಡಿಮಿಡಿಗೊಂಡರು.

    ಮೋದಿಯವರಿಗೆ ದೇಶದ ಬಡವರ ಕಷ್ಟ-ಸುಖ ಗೊತ್ತು. ಹೀಗಾಗಿ ದೇಶಕ್ಕೆ ಅನೇಕ ಅಭಿವೃದ್ಧಿ ಕಾರ್ಯಕ್ರಮ ಕೊಟ್ಟಿದ್ದಾರೆ. ಹಿಂದೆ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಕಾರ್ಯಕ್ರಮ ಜಾರಿಗೆ ತಂದ್ರು. ಆದ್ರೆ ಅದನ್ನ ಅನುಷ್ಠಾನ ಮಾಡಿಲ್ಲ. ಮೋದಿ ಸೈಲೈಂಟ್ ಆಗಿ ಎಲ್ಲ ಯೋಜನೆಗಳಿಗೆ ಅನುಷ್ಠಾನ ಮಾಡ್ತಿದ್ದಾರೆ. ಕಾಂಗ್ರೆಸ್ ಮಾಡದ ಕೆಲಸವನ್ನ ಬಿಜೆಪಿಯ ಮೋದಿ ಸರ್ಕಾರ ಮಾಡ್ತಿದೆ ಅಂತಾ ಹೇಳಿದ್ರು.

    ಬಳಿಕ ಮಾಜಿ ಡಿಸಿಎಂ ಆರ್ ಅಶೋಕ್ ಮಾತನಾಡಿ, 10 ವರ್ಷ ಕಾಂಗ್ರೆಸ್ ಮನಮೋಹನ್ ಸಿಂಗ್ ಸರ್ಕಾರ ಇತ್ತು ಅಂತ ಯಾರಿಗೂ ಅನ್ನಿಸಿರಲಿಲ್ಲ. ಸೋನಿಯಾ ಗಾಂಧಿ ಸರ್ಕಾರ ಅಂತ ಎಲ್ಲರಿಗೂ ಅನ್ನಿಸಿತ್ತು. ಇವತ್ತು ಮೋದಿ ಸರ್ಕಾರ ಜನರ ಸರ್ಕಾರವಾಗಿದೆ. ಮೋದಿ ವಿಶ್ವಮಟ್ಟದಲ್ಲಿ ದೇಶದ ಕೀರ್ತಿ ಹಾರಿಸಿದ್ದಾರೆ. ಕರ್ನಾಟಕದ ವಿದ್ಯಾರ್ಥಿಯೊಬ್ಬಳು ಮೋದಿಗೆ ಪತ್ರ ಬರೆದು ಫ್ಲೈ ಓವರ್ ಬೇಕು ಅಂತಾ ಕೇಳಿದ್ದಾಳೆ. ಪ್ರಧಾನಿ ಮೋದಿ ಅದಕ್ಕೆ ಸ್ಪಂದನೆಯನ್ನೂ ನೀಡಿದ್ದಾರೆ. ಮನಮೋಹನ್ ಸಿಂಗ್ ಸೀನಿಯರ್ ಸಿಟಿಜನ್ ಹೋದ್ರು ಏನು ಮಾಡ್ತಿರಲಿಲ್ಲ ಅಂತಾ ಹೇಳಿದ್ರು.

    ಕಾಳಧನಿಕರಿಗೆ ಮೋದಿ ತಕ್ಕ ಪಾಠ ಕಲಿಸಿದ್ದಾರೆ. ದೇಶಕ್ಕೆ ಮೋದಿ ಏನಾದ್ರು ಮಾಡ್ತಾರೆ ಅಂತಾ ಬಡವರು, ರೈತರಿಗೆ ಗೊತ್ತು. ಕಾಂಗ್ರೆಸ್, ಜೆಡಿಎಸ್ ಅವ್ರನ್ನ ಆಫ್ ದ ರೆಕಾರ್ಡ್ ಕೇಳಿ ಅವರೇ ಮೋದಿ ಜನರ ಮನಸ್ಸಿಗೆ ಹೋಗಿದ್ದಾರೆ ಅಂತಾರೆ. ರಾಜ್ಯದಲ್ಲಿ ನಿದ್ರೆ ಮಾಡೋ ಸಿದ್ರಾಮಯ್ಯ ಸರ್ಕಾರ ಇದೆ. 4 ವರ್ಷದಿಂದ ನಿದ್ರೆಯಿಂದ ಎದ್ದೇಳಿ ಅಂದ್ರು ಇನ್ನೂ ಸಿದ್ದರಾಮಯ್ಯ ಎದ್ದಿಲ್ಲ. ಕಾಂಗ್ರೆಸ್ ಉಸ್ತುವಾರಿ ಪಕ್ಕದಲ್ಲೇ ಸಿದ್ದರಾಮಯ್ಯ ನಿದ್ರೆ ಮಾಡ್ತಾರೆ. ಎಲ್ಲಿ ಮೋದಿ, ಎಲ್ಲಿ ಸಿದ್ದರಾಮಯ್ಯ. ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ ಅಂತಾ ಅಶೋಕ್ ತಿಳಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಶಾಸಕರಾದ ರಘು, ಬಿ.ಎನ್.ವಿಜಯಕುಮಾರ್, ವಿಧಾನಪರಿಷತ್ ಸದಸ್ಯರಾದ ವಿ.ಸೋಮಣ್ಣ, ತಾರಾ, ಲೆಹರ್ ಸಿಂಗ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

  • ಪಂಚರಾಜ್ಯಗಳ ಮಹಾ ಫಲಿತಾಂಶಕ್ಕೆ ಕ್ಷಣಗಣನೆ

    ಪಂಚರಾಜ್ಯಗಳ ಮಹಾ ಫಲಿತಾಂಶಕ್ಕೆ ಕ್ಷಣಗಣನೆ

    ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಮಹಾ ಫಲಿತಾಂಶಕ್ಕೆ 2 ಗಂಟೆಯಷ್ಟೇ ಬಾಕಿ ಇದೆ. ಕೆಲವೇ ಕ್ಷಣಗಳಲ್ಲಿ ಮತದಾನ ಎಣಿಕೆ ಕಾರ್ಯ ಶುರುವಾಗಲಿದೆ.

    ಸಾವಿರಾರು ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಮೊದಲ ಬಾರಿಗೆ ಉತ್ತರ ಪ್ರದೇಶ, ಮಣಿಪುರದಲ್ಲಿ ಬಿಜೆಪಿ ಬಹುಮತ ಪಡೆಯುತ್ತಾ 4 ದಶಕದ ಬಳಿಕ ಮತ್ತೆ ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸುತ್ತಾ? ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.

    ಹಾಗೆ ಪಂಜಾಬ್‍ನಲ್ಲಿ 14 ಬಾರಿ ಕಾಂಗ್ರೆಸ್, 8 ಬಾರಿ ಅಕಾಲಿದಳದ ಆಡಳಿತ ಅಂತ್ಯವಾಗುತ್ತಾ? 3ನೇ ಬಾರಿಗೆ ಗೋವಾ, ಉತ್ತರಾಖಂಡ್‍ನಲ್ಲಿ ಮತ್ತೆ ಕಮಲ ಅರಳುತ್ತಾ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.