Tag: ಕಂಗುವ ಸಿನಿಮಾ

  • ಸೂರ್ಯ ನಟನೆಯ ‘ಕಂಗುವ’ ಚಿತ್ರದ ರೊಮ್ಯಾಂಟಿಕ್‌ ಸಾಂಗ್‌ ಔಟ್‌

    ಸೂರ್ಯ ನಟನೆಯ ‘ಕಂಗುವ’ ಚಿತ್ರದ ರೊಮ್ಯಾಂಟಿಕ್‌ ಸಾಂಗ್‌ ಔಟ್‌

    ಮಿಳಿನ ಸ್ಟಾರ್ ನಟ ಸೂರ್ಯ (Suriya) ನಟನೆಯ ಬಹುನಿರೀಕ್ಷಿತ ‘ಕಂಗುವ’ (Kanguva) ಸಿನಿಮಾ ರಿಲೀಸ್ ಸಜ್ಜಾಗಿದೆ. ಇದೀಗ ಸೂರ್ಯ ಮತ್ತು ದಿಶಾ (Disha Patani) ಕಾಣಿಸಿಕೊಂಡಿರುವ ರೊಮ್ಯಾಂಟಿಕ್ ಸಾಂಗ್‌ವೊಂದು ಚಿತ್ರತಂಡ ರಿಲೀಸ್ ಮಾಡಿದೆ. ಸಾಂಗ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದಿದೆ.

    ಮೊದಲ ಬಾರಿಗೆ ಸೂರ್ಯ ಮತ್ತು ದಿಶಾ ಜೊತೆಯಾಗಿ ನಟಿಸುತ್ತಿದ್ದಾರೆ. ಸದ್ಯ ಚಿತ್ರದ ‘ಯೋಲೋ’ (Yolo) ಎಂಬ ಚೆಂದದ ಸಾಂಗ್ ಅನ್ನು ರಿಲೀಸ್ ಆಗಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹಾಡಿನಲ್ಲಿ ಸೂರ್ಯ ಮತ್ತು ದಿಶಾ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಾಗಾಗಿ ಫ್ಯಾನ್ಸ್‌ಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದನ್ನೂ ಓದಿ:ಅಜ್ಜಿಯ ನೆನೆದು ಭಾವನಾತ್ಮಕ ಪತ್ರ ಬರೆದ ಸುದೀಪ್ ಪುತ್ರಿ

    ಈ ಸಿನಿಮಾವು ಬಹುಭಾಷೆಗಳಲ್ಲಿ ನವೆಂಬರ್ 14ರಂದು ರಿಲೀಸ್ ಆಗುತ್ತಿದೆ. ಸೂರ್ಯ ಜೊತೆ ದಿಶಾ ಮತ್ತು ಬಾಬಿ ಡಿಯೋಲ್ (Bobby Deol), ಜಗಪತಿ ಬಾಬು ನಟಿಸಿದ್ದಾರೆ.

  • Kanguva Trailer: ಅಬ್ಬರಿಸಿ ಬೊಬ್ಬಿರಿದ ಸೂರ್ಯ, ಬಾಬಿ ಡಿಯೋಲ್

    Kanguva Trailer: ಅಬ್ಬರಿಸಿ ಬೊಬ್ಬಿರಿದ ಸೂರ್ಯ, ಬಾಬಿ ಡಿಯೋಲ್

    ಕಾಲಿವುಡ್ ನಟ ಸೂರ್ಯ ನಟನೆಯ ‘ಕಂಗುವ’ (Kanguva Film) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಹೀರೋ ಸೂರ್ಯ, ವಿಲನ್‌ ಆಗಿ ಬಾಬಿ ಡಿಯೋಲ್ (Bobby Deol) ಅಬ್ಬರಿಸಿದ ರೀತಿ ಮತ್ತು ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ ಝಲಕ್ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು 7ನೇ ಬಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ

    ದ್ವೀಪವೊಂದರಲ್ಲಿ ವಾಸಿಸುವ ವಿವಿಧ ಬುಡಕಟ್ಟುಗಳ ಜನರ ಆಚಾರ, ವಿಚಾರಗಳ ಜೊತೆ ಗುಂಪು ಗಂಪುಗಳ ನಡುವಿನ ಸಂಘರ್ಷದ ಕಥೆಯನ್ನು ಟ್ರೈಲರ್‌ನಲ್ಲಿ ಸಣ್ಣ ಝಲಕ್ ತೋರಿಸಿದ್ದಾರೆ. ಭೀಕರ ಯುದ್ಧದಲ್ಲಿ ಸೂರ್ಯ ಮತ್ತು ಬಾಬಿ ಡಿಯೋಲ್‌ ಜುಗಲ್‌ಬಂದಿ ಅದ್ಭುತವಾಗಿ ಮೂಡಿ ಬಂದಿದೆ.

     

    View this post on Instagram

     

    A post shared by Bobby Deol (@iambobbydeol)

    ಮೊಸಳೆಗಳಿಂದ ಕಚ್ಚಿಸಿಕೊಂಡರು ಕಂಗುವ ಪಾತ್ರಧಾರಿ ಸೂರ್ಯ ಮಾಸ್ ಆಗಿ ಎದ್ದು ಬರುವ ಲುಕ್ ಸಖತ್ ಆಗಿದೆ. ನಿನ್ನ ರಕ್ತ ಮತ್ತು ನನ್ನ ರಕ್ತ ಒಂದೇ ಎಂದು ಸೂರ್ಯ ಹೇಳುವ ಡೈಲಾಗ್ ಖಡಕ್ ಆಗಿ ಬಂದಿದೆ. ಬಾಬಿ ಡಿಯೋಲ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

    ಶಿವ ನಿರ್ದೇಶನದಲ್ಲಿ ಸೂರ್ಯ ನಾಯಕಿಯಾಗಿ ದಿಶಾ ಪಟಾನಿ ನಟಿಸಿದ್ದಾರೆ. ಸದ್ಯ ಅದ್ಧೂರಿ ಸಿನಿಮಾ ಮೇಕಿಂಗ್, ಸೂರ್ಯ ಮತ್ತು ಬಾಬಿ ಡಿಯೋಲ್ ಲುಕ್‌ನಿಂದ ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. 300 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಆಗಿರುವ ‘ಕಂಗುವ’ ಸಿನಿಮಾ ಈ ವರ್ಷದ ಅಂತ್ಯದಲ್ಲಿ ಅಬ್ಬರಿಸಲಿದೆ.

  • ಸ್ಟಾರ್ ಸಹೋದರರ ಜಟಾಪಟಿ- ‘ಕಂಗುವ’ ಸೂರ್ಯಗೆ ವಿಲನ್ ಆದ ಕಾರ್ತಿ

    ಸ್ಟಾರ್ ಸಹೋದರರ ಜಟಾಪಟಿ- ‘ಕಂಗುವ’ ಸೂರ್ಯಗೆ ವಿಲನ್ ಆದ ಕಾರ್ತಿ

    ಮಿಳಿನ ಸ್ಟಾರ್ ಸಹೋದರರಾದ ಸೂರ್ಯ (Suriya) ಮತ್ತು ಕಾರ್ತಿ (Karthi) ಇದೀಗ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ಇಬ್ಬರು ಎದುರಾಳಿಗಳಾಗುತ್ತಿದ್ದಾರೆ. ‘ಕಂಗುವ’ (Kanguva Film) ಚಿತ್ರಕ್ಕೆ ಕಾರ್ತಿ ಎಂಟ್ರಿ ಕೊಟ್ಟಿದ್ದಾರೆ.

    ಬಹುಭಾಷೆಗಳಲ್ಲಿ ಮೂಡಿ ಬರುತ್ತಿರುವ ‘ಕಂಗುವ’ ಸಿನಿಮಾದಲ್ಲಿ ಭಿನ್ನ ಪಾತ್ರದಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಣ್ಣ ಸೂರ್ಯನ ಮುಂದೆ ಕಾರ್ತಿ ವಿಲನ್ ಆಗಿ ಘರ್ಜಿಸಲಿದ್ದಾರೆ. ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ. ಇದನ್ನೂ ಓದಿ:‘ನೈಸ್ ರೋಡ್’ ಸಿನಿಮಾಗೆ ಕಂಟಕ- ಚಿತ್ರತಂಡಕ್ಕೆ ಬಂತು ನೋಟಿಸ್

    ಇದು ಒಂದೇ ಅಲ್ಲ, ಇದರ ಜೊತೆ ಮತ್ತೊಂದು ಸಿನಿಮಾದ ಮಾತುಕತೆ ಕೂಡ ಆಗಿದೆ. ಅದರಲ್ಲಿ ಕಾರ್ತಿಗೆ ಸೂರ್ಯ ವಿಲನ್ ಆಗಲಿದ್ದಾರೆ ಎನ್ನಲಾಗಿದೆ. ಸದ್ಯ ಈ ಸುದ್ದಿ ತಿಳಿದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    ‘ಕಂಗುವ’ ಚಿತ್ರವನ್ನು ಶಿವ ನಿರ್ದೇಶನ ಮಾಡಿದ್ದಾರೆ. ಸೂರ್ಯಗೆ ನಾಯಕಿಯಾಗಿ ದಿಶಾ ಪಟಾನಿ ನಟಿಸಿದ್ದಾರೆ. ಬಾಬಿ ಡಿಯೋಲ್ ಈ ಸಿನಿಮಾದ ಭಾಗವಾಗಿದ್ದಾರೆ. ಅಕ್ಟೋಬರ್ 10ರಂದು ಸಿನಿಮಾ ರಿಲೀಸ್ ಆಗಲಿದೆ.

  • ‘ಕಂಗುವ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್- ದೇವರ, ಮಾರ್ಟಿನ್ ಜೊತೆ ಕ್ಲ್ಯಾಶ್

    ‘ಕಂಗುವ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್- ದೇವರ, ಮಾರ್ಟಿನ್ ಜೊತೆ ಕ್ಲ್ಯಾಶ್

    ಮಿಳು ನಟ ಸೂರ್ಯ (Suriya) ನಟನೆಯ ‘ಕಂಗುವ’ (Kanguva) ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ದಸರಾ ಪ್ರಯುಕ್ತ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಧ್ರುವ ಸರ್ಜಾ ನಟನೆಯ `ಮಾರ್ಟಿನ್’ಗೆ (Martin), ದೇವರ ಸಿನಿಮಾಗೆ ಠಕ್ಕರ್ ಕೊಡಲು ರೆಡಿಯಾಗಿದೆ.

    ಅಕ್ಟೋಬರ್ 10ರಂದು ಬಹುಭಾಷೆಗಳಲ್ಲಿ ‘ಕಂಗುವ’ ಸಿನಿಮಾ ರಿಲೀಸ್ ಆಗ್ತಿದೆ. ಶಿವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಫ್ಯಾಂಟಸಿ ಸಿನಿಮಾವು ದಸರಾ ಹಬ್ಬದ ಸಂದರ್ಭದಲ್ಲಿ ಮನರಂಜನೆ ಕೊಡಲು ರೆಡಿಯಾಗಿದೆ. ಇದನ್ನೂ ಓದಿ:ಪ್ಯಾನ್ ಇಂಡಿಯಾ ಚಿತ್ರ ಘೋಷಿಸಿದ ಸಾಯಿ ಧರಮ್ ತೇಜ್ ಹೀರೋ

    ಜ್ಯೂ.ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ನಟನೆಯ ‘ದೇವರ’ (Devara)ಕೂಡ ಅಕ್ಟೋಬರ್ 10ರಂದು ರಿಲೀಸ್‌ಗೆ ಸಿದ್ಧವಾಗಿದೆ. ಅಕ್ಟೋಬರ್ 11ರಂದು ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಬರಲಿದೆ. ಈ ಮೂರು ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಕ್ಲ್ಯಾಶ್ ಆಗಲಿದೆ.

    ಇದೀಗ ಪರಭಾಷಾ ಸಿನಿಮಾದ ಮುಂದೆ ಬಹುನಿರೀಕ್ಷಿತ ‘ಮಾರ್ಟಿನ್’ ಪೈಪೋಟಿ ಕೊಡಲಿದೆಯಾ ಕಾದುನೋಡಬೇಕಿದೆ. ಈ ಸಿನಿಮಾಗಳ ಸ್ಪರ್ಧೆಯಲ್ಲಿ ಗೆಲ್ಲೋರು ಯಾರು? ಸೋಲೋರು ಯಾರು ಎಂದು ಕಾಯಬೇಕಿದೆ.

  • ಹಾಟ್ ಅವತಾರ ತಾಳಿದ ದಿಶಾ ಪಟಾನಿ

    ಹಾಟ್ ಅವತಾರ ತಾಳಿದ ದಿಶಾ ಪಟಾನಿ

    ಬಾಲಿವುಡ್ (Bollywood) ಬ್ಯೂಟಿ ದಿಶಾ ಪಟಾನಿ (Disha Patani) ಅವರು ಸದಾ ಟ್ರೋಲ್‌ಗಳ ಮೂಲಕ ಸದ್ದು ಮಾಡ್ತಿರುತ್ತಾರೆ. ಕಳೆದ ಬಾರಿ ಫೇಸ್ ಸರ್ಜರಿ ವಿಷ್ಯವಾಗಿ ನಟಿ ಭಾರಿ ಟ್ರೋಲ್ ಆಗಿದ್ದರು. ಈ ಬೆನ್ನಲ್ಲೇ ಹಾಟ್ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ.

    ಭಾಘಿ 2, ಭಾಘಿ 3, ರಾಧೆ (Radhe) ಸಿನಿಮಾಗಳಲ್ಲಿ ನಟಿಸಿರುವ ದಿಶಾ ಪಟಾನಿ ಅವರಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಸದಾ ಬೋಲ್ಡ್ ಫೋಟೋಶೂಟ್‌ನಿಂದಲೇ ನಟಿಮಣಿ ದಿಶಾ ಸಂಚಲನ ಸೃಷ್ಟಿಸಿದ್ದಾರೆ.

    ಇದೀಗ ಕಪ್ಪು ಬಣ್ಣದ ಬಿಕಿನಿಯಲ್ಲಿ ನಟಿ ದಿಶಾ ಪಟಾನಿ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಸ್ವಿಮಿಂಗ್ ಪೂಲ್ ಬಳಿ ನಟಿ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ದಿಶಾ ಅವತಾರಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ:ಮದುವೆಗೂ ಮುನ್ನವೇ ಪ್ರೆಗ್ನೆಂಟ್ ಆಗಿದ್ದರ ಬಗ್ಗೆ ನೇಹಾ ಧೂಪಿಯಾ ಮಾತು

    ನಟಿ ದಿಶಾ ಸದ್ಯ ‘ಕಂಗುವ’ (Kanguva) ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 10 ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ತಮಿಳಿನ ಸ್ಟಾರ್ ನಟ ಸೂರ್ಯಗೆ (Suriya) ಜೋಡಿಯಾಗಿ ದಿಶಾ ಕಾಣಿಸಿಕೊಳ್ತಿದ್ದಾರೆ. ಸಕ್ಸಸ್ ಸಿಗದೇ ಬೆಸತ್ತಿರೋ ದಿಶಾಗೆ, ಈ ಚಿತ್ರ ಯಶಸ್ಸು ನೀಡುತ್ತಾ ಎಂಬುದನ್ನ ಕಾದುನೋಡಬೇಕಿದೆ.