Tag: ಕಂಗನಾ ರನೌತ್

  • 2025 ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಂಗನಾ ರಣಾವತ್‌ ನೇಮಕ

    2025 ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಂಗನಾ ರಣಾವತ್‌ ನೇಮಕ

    ನವದೆಹಲಿ: ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಂಗನಾ ರಣಾವತ್‌ (Kangana Ranaut) ನೇಮಕಗೊಂಡಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut) 

    ಭಾರತದ ಪ್ಯಾರಾಲಿಂಪಿಕ್ ಸಮಿತಿಯು  (Paralympic Committee of India), ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್‌ ಅವರನ್ನು 2025ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ಘೋಷಿಸಿದೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತನಿಖೆ ಏನಾಯ್ತು – ಪಾದಯಾತ್ರೆ ನೆನಪಿಸಿ ಸಿಎಂಗೆ ಪತ್ರ ಬರೆದ ಹೆಚ್.ಕೆ ಪಾಟೀಲ್

    ಕಂಗನಾ ಅವರು ಭಾರತದಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ಗೆ ನವೀಕೃತ ಶಕ್ತಿ, ಗೋಚರತೆ ಮತ್ತು ಗಮನವನ್ನು ತರುವ ನಿರೀಕ್ಷೆ ನಮಗಿದೆ. ಕಂಗನಾ ಅವರ ಹೊಸ ಪಾತ್ರದಲ್ಲಿ, ಚಾಂಪಿಯನ್‌ಶಿಪ್‌ಗಳ ಮೂಲ ಮೌಲ್ಯಗಳನ್ನು ಉತ್ತೇಜಿಸುತ್ತಾರೆ ಎಂದು ಪಿಸಿಐ ತಿಳಿಸಿದೆ. ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದು ಹೀನ ಕೃತ್ಯ – ಜಮೀನಿನಲ್ಲೇ ನರಳಿ ಪ್ರಾಣ ಬಿಟ್ಟ ಹಸು

    ಈ ಬಗ್ಗೆ ಕಂಗನಾ ರಣಾವತ್‌ ಅವರು ಸಮಾರಂಭದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಪ್ಯಾರಾ ಅಥ್ಲೀಟ್‌ಗಳನ್ನು ಬೆಂಬಲಿಸಲು ಮತ್ತು ಅವರ ಅಸಾಧಾರಣ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ನನಗೆ ತುಂಬಾ ಗೌರವವಿದೆ. ನಮ್ಮ ಚಾಂಪಿಯನ್‌ಗಳ ಹಿಂದೆ ನಿಲ್ಲಲು ನನಗೆ ಹೆಮ್ಮೆ ಇದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆಣ್ಣು ಹೂವಿನಂತೆ – ಇರಾನ್‌ ಸುಪ್ರೀಂ ನಾಯಕನ ಹಳೆಯ ಪೋಸ್ಟ್‌ ವೈರಲ್‌

    2025ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 5ರವರೆಗೆ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ 100ಕ್ಕೂ ಹೆಚ್ಚು ದೇಶಗಳ 1,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಲಿದ್ದಾರೆ.

  • ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ

    ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ

    – ಪಂಜಾಬ್ ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗುತ್ತಿದೆ

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿಯಾಗಿದೆ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ.

    ಭದ್ರತಾ ಲೋಪದಿಂದ ನರೇಂದ್ರ ಮೋದಿ ಪಂಜಾಬ್ ಫ್ಲೈಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಈ ಹಿನ್ನೆಲೆ ಕಂಗನಾ ರನೌತ್ ಕೋಪದಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ – ಕಾರ್ಯಕ್ರಮ ರದ್ದು

    ಕಂಗನಾ ಇನ್‍ಸ್ಟಾಗ್ರಾಮ್ ನಲ್ಲಿ, ಪಂಜಾಬ್‍ನಲ್ಲಿ ಮೋದಿ ಅವರಿಗೆ ಈ ರೀತಿ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಗೌರವಾನ್ವಿತ ಪ್ರಧಾನ ಮಂತ್ರಿಗಳು ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಯಕ, ಪ್ರತಿನಿಧಿಯಾಗಿದ್ದಾರೆ. ಅವರು 1.4 ಬಿಲಿಯನ್ ಜನರ ಧ್ವನಿಯಾಗಿದ್ದಾರೆ. ಅವರ ಮೇಲಿನ ದಾಳಿ ಪ್ರತಿಯೊಬ್ಬ ಭಾರತೀಯನ ಮೇಲಿನ ದಾಳಿಯಾಗಿದೆ. ಇದು ನಮ್ಮ ಪ್ರಜಾಪ್ರಭುತ್ವದ ಮೇಲೆಯೇ ದಾಳಿಯಾಗಿದೆ. ಪಂಜಾಬ್ ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಒಂದು ವೇಳೆ ನಾವು ಇದನ್ನು ತಡೆಯದಿದ್ದರೆ ದೇಶವು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಆಕ್ರೋಶದಿಂದ ಬರೆದು ಪೋಸ್ಟ್ ಮಾಡಿದ್ದಾರೆ.

    ಬಟಿಂಡಾದಲ್ಲಿ ನಿನ್ನೆ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಅವರು ಪಂಜಾಬ್ ಗೆ ಆಗಮಿಸಿದ್ದರು. ಮಧ್ಯಾಹ್ನ ಹುಸೇನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಸ್ಥಳಕ್ಕೆ ಭದ್ರತಾ ಸಿಬ್ಬಂದಿ ಜೊತೆ ಫ್ಲೈ ಓವರ್‍ನಲ್ಲಿ ತೆರಳುತ್ತಿದ್ದಾಗ ರೈತರು ರಸ್ತೆಯನ್ನು ತಡೆದ ಪ್ರತಿಭಟ£ ಮಾಡಿದ್ದಾರೆ. ಹೀಗಾಗಿ ಮೋದಿ ಅವರು ಫ್ಲೈ ಓವರ್‍ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಬಳಿಕ ಬಟಿಂಡಾಕ್ಕೆ ಮರಳಿದ್ದರು. ಇದನ್ನೂ ಓದಿ: ಕ್ರಿಕೆಟ್ ಲೆಜೆಂಡರಿ ಬೌಲರ್ ಪಾತ್ರದಲ್ಲಿ ಅನುಷ್ಕಾ ಶರ್ಮಾ

    ಘಟನೆಯ ಬಳಿಕ ಬಟಿಂಡಾ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ಮಾತನಾಡಿದ್ದ ಮೋದಿ, ನಾನು ಜೀವಂತವಾಗಿ ಬಂದಿದ್ದೇನೆ. ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿ ಎಂದು ಪಂಜಾಬ್ ಸರ್ಕಾರಕ್ಕೆ ಮಾತಿನಲ್ಲೇ ಕುಟುಕಿದ್ದರು.

  • ಕಂಗನಾ ವಿರುದ್ಧ FIR ದಾಖಲಿಸುವಂತೆ ಸಿಖ್ ಸಮುದಾಯ ಮನವಿ

    ಕಂಗನಾ ವಿರುದ್ಧ FIR ದಾಖಲಿಸುವಂತೆ ಸಿಖ್ ಸಮುದಾಯ ಮನವಿ

    ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್(kangana ranaut) ಸಾಮಾಜಿಕ ಜಾಲತಾಣದಲ್ಲಿ ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆಂದು ಆರೋಪಿಸಿ ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್‍ಮೆಂಟ್ ಕಮಿಟಿಯು (ಡಿಎಸ್‍ಜಿಎಂಸಿ) ದೂರು ಸಲ್ಲಿಸಿ ಎಫ್‍ಐಆರ್ ದಾಖಲಿಸುವಂತೆ ಮನವಿ ಮಾಡಿದೆ.

    ಶಿರೋಮಣಿ ಅಕಾಲಿದಳದ ನಾಯಕ ಮತ್ತು ಡಿಎಸ್‍ಜಿಎಂಸಿ ಅಧ್ಯಕ್ಷ ಮನ್‍ಜಿಂದರ್ ಸಿಂಗ್ ಸಿರ್ಸಾ ನೇತೃತ್ವದ ನಿಯೋಗವು ಕಂಗನಾ ವಿರುದ್ಧ ದೂರು ಸಲ್ಲಿಸಿದೆ. ಕಂಗನಾ ಅವರು ರೈತರ ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಖಲಿಸ್ತಾನಿ ಆಂದೋಲನಕ್ಕೆ ಹೋಲಿಸಿದ್ದಾರೆ. ಸಿಖ್ ಸಮುದಾಯವನ್ನು ಖಲಿಸ್ತಾನಿ ಉಗ್ರರು ಎಂದು ಬಿಂಬಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ಖಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:  ನಟಿ ಕಂಗನಾರನ್ನು ಹುಚ್ಚಾಸ್ಪತ್ರೆಗೆ ಸೇರಿಸ್ಬೇಕು ಇಲ್ಲವೇ ಜೈಲಿಗೆ ಹಾಕ್ಬೇಕು: ಮಂಜಿಂದರ್‌ ಸಿಂಗ್‌

    1984ರಲ್ಲಿ ಮತ್ತು ಅದಕ್ಕೂ ಮೊದಲಿನ ಸಾಮೂಹಿಕ ಹತ್ಯೆ ಮತ್ತು ನರಮೇಧವನ್ನು ನೆನಪಿಸಿಕೊಂಡಿರುವ ಕಂಗನಾ, ಇವು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ವ್ಯಾವಹಾರಿಕ ಮತ್ತು ಯೋಜಿತ ನಡೆ. ಸಿಖ್ ಸಮುದಾಯದವರು ಇಂದಿರಾ ಅವರ ಷೂ ಕೆಳಗೆ ನಲುಗಿದರು ಎಂದು ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದೂ ದೂರಿನಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಗೇಮ್ ಆಡುತ್ತಾ ಹಳಿ ಮೇಲೆ ಕುಳಿತ ಬಾಲಕರ ಮೇಲೆ ಹರಿದ ರೈಲು

  • ಯುರೋಪ್‍ನಲ್ಲಿ ಕಂಗನಾ ಹಾಟ್ ಪೋಸ್ – ಅಭಿಮಾನಿಗಳು ಕ್ಲೀನ್ ಬೋಲ್ಡ್

    ಯುರೋಪ್‍ನಲ್ಲಿ ಕಂಗನಾ ಹಾಟ್ ಪೋಸ್ – ಅಭಿಮಾನಿಗಳು ಕ್ಲೀನ್ ಬೋಲ್ಡ್

    ಮುಂಬೈ: ಸದಾ ಒಂದಲ್ಲ ಒಂದು ವಿವಾದದ ಮೂಲಕ ಸದ್ದು ಮಾಡುವ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಾರಿ ಫೋಟೋವೊಂದಕ್ಕೆ ಪೋಸ್ ನೀಡುವ ಮೂಲಕ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋ ಯುವಕರ ಎದೆಬಡಿತ ಏರಿಸುವಂತಿದೆ ಎಂದೇ ಹೆಳಬಹುದು.

    ಧಾಕಡ್ ಚಿತ್ರೀಕರಣಕ್ಕಾಗಿ ಯುರೋಪ್‍ನಲ್ಲಿರುವ ಕಂಗನಾ ಶೂಟಿಂಗ್ ಮುಗಿಸಿ ಇದೀಗ ಕೂಲ್ ಆಗಿ ಚಿತ್ರತಂಡದೊಂದಿಗೆ ಪಾರ್ಟಿ ಮಾಡುತ್ತಿದ್ದಾರೆ. ಈ ಮಧ್ಯೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದು, ತಿಳಿ ಸಂಜೆಯಲ್ಲಿ ಕ್ರಿಮ್ ಕಲರ್ ಡ್ರಸ್ ತೊಟ್ಟು ಕಂಗನಾ ಸಖತ್ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಇನ್ನೂ ಈ ಫೋಟೋ ನೋಡಿದ ಅಭಿಮಾನಿಗಳು ಕಂಗನಾ ಹಾಟ್ ಲುಕ್‍ಗೆ ಫುಲ್ ಫಿದಾ ಆಗಿದ್ದಾರೆ. ಫೋಟೋ ಜೊತೆಗೆ ಪ್ರೀತಿಯಲ್ಲಿ ಹುಟ್ಟು, ಸಾವು ಇಲ್ಲ. ಅವರನ್ನು ನೋಡುತ್ತಾ ಬದುಕುವಾಗಲೇ ನಿಜವಾದ ಧೈರ್ಯ ಹೊರಬರುತ್ತದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಧಾಕಡ್ ಚಿತ್ರಕ್ಕೆ ನಿರ್ದೇಶಕ ರಜನೀಶ್ ಘಾಯ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದೊಂದು ಸ್ಪೈ ಥ್ರಿಲ್ಲರ್ ಕಥಾಹಂದರವಾಗಿದ್ದು, ಈ ಚಿತ್ರದ ಏಜೆಂಟ್ ಅಗ್ನಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅರ್ಜುನ್ ರಾಂಪಾಲ್ ಹಾಗೂ ದಿವ್ಯಾ ಸತ್ ಅಭಿನಯಿಸಿದ್ದಾರೆ. ಜೊತೆಗೆ ಕಂಗನಾ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಬಯೋಪಿಕ್ ತಲೈವಿ ಚಿತ್ರದಲ್ಲಿ ಅಭಿನಯಿಸಿದ್ದು, ಕೋವಿಡ್ ಕಾರಣದಿಂದಾಗಿ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇದನ್ನೂ ಓದಿ:ಪತ್ನಿ ಜೊತೆಗಿನ ಲವ್ಲೀ ಫೋಟೋ ಶೇರ್ ಮಾಡಿದ ನಟ ನಿಖಿಲ್

     

    View this post on Instagram

     

    A post shared by Kangana Ranaut (@kanganaranaut)

  • ದೀಪಿಕಾ ಪಡುಕೋಣೆಯ ಮಾಜಿ ಲವರ್ ಬಾಲಿವುಡ್‍ಗೆ ಎಂಟ್ರಿ

    ದೀಪಿಕಾ ಪಡುಕೋಣೆಯ ಮಾಜಿ ಲವರ್ ಬಾಲಿವುಡ್‍ಗೆ ಎಂಟ್ರಿ

    ಮುಂಬೈ: ಪದ್ಮಾವತಿಯ ರಾಣಿ ನಟಿ ದೀಪಿಕಾ ಪಡುಕೋಣೆ ಅವರ ಮಾಜಿ ಪ್ರಿಯಕರ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

    ಹೌದು, ದೀಪಿಕಾ ಪಡುಕೋಣೆಯ ಮಾಜಿ ಪ್ರಿಯಕರನಾಗಿದ್ದ ನಿಹಾರ್ ಪಾಂಡ್ಯ ಈಗ ಹಿಂದಿ ಸಿನಿಮಾ ರಂಗಕ್ಕೆ ಬಂದಿದ್ದಾರೆ. ಕಂಗನಾ ರನೌತ್ ಅಭಿನಯಿಸುತ್ತಿರುವ ‘ಮಣಿಕರ್ಣಿಕಾ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

    ನಟಿ ದೀಪಿಕಾ ಲವರ್ ಎಂದಾಕ್ಷಣ ನಟ ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಎಲ್ಲಾರಿಗೂ ನೆನಪಾಗುತ್ತಾರೆ. ಆದರೆ ಅವರ ಮಾಜಿ ಬಾಯ್ ಫ್ರೆಂಡ್ ನಿಹಾರ್ ಪಾಂಡ್ಯ ಆಗಿದ್ದರು ಇವರು ಮಣಿಕರ್ಣಿಕಾ ಸಿನಿಮಾದ ಮೂಲಕ ಬಾಲಿವುಡ್ ಸಿನಿಮಾನದಲ್ಲಿ ಅಭಿನಯಿಸುತ್ತಿದ್ದಾರೆ.

    ಬ್ರಿಟಿಷರ ವಿರುದ್ಧ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ ಜೀವನಾಧರಿತ ಐತಿಹಾಸಿಕ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಬಾಜಿ ರಾವ್ ಪಾತ್ರದಲ್ಲಿ ನಿಹಾರ್ ಪಾಂಡ್ಯ ಅವರು ಕಾಣಿಸಿಕೊಳ್ಳಲ್ಲಿದ್ದಾರೆ. ಚಿತ್ರಕ್ಕಾಗಿ ನಿಹಾರ್ ಪಾಂಡ್ಯ ಸಖತ್ ತಯಾರಿ ಮಾಡಿಕೊಳ್ಳುತ್ತಿದ್ದು, ಸಮರ ಕಲೆ, ಕುದುರೆ ಸವಾರಿ ಮತ್ತು ಇನ್ನಿತರ ಫಿಟ್‍ನೆಸ್ ಕ್ರಮಗಳ ತರಬೇತಿಯನ್ನು ಪಡೆಯುತ್ತಿದ್ದಾರೆ.

    ಮಣಿಕರ್ಣಿಕಾ ಸಿನಿಮಾವನ್ನು ಕೃಷ್ಣ ಜಗರ್ಲಾಡಿ ಅವರು ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ಕಂಗನಾ ರಾನೌತ್, ನಟ ಸೋನು ಸೂದ್, ಮತ್ತು ಅಂಕಿತಾ ಲೋಖಾಂಡೆ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ 2018 ರ ಏಪ್ರಿಲ್ ತಿಂಗಳಿನಲ್ಲಿ ತೆರೆಗೆ ಬರುವ ನೀರೀಕ್ಷೆಯಲ್ಲಿದೆ.