Tag: ಕಂಕನಾಡಿ

  • ರಸ್ತೆಯಲ್ಲಿ ನಮಾಜ್ ಪ್ರಕರಣ – ಸುಮೊಟೋ ಕೇಸ್ ದಾಖಲಿಸಿದ್ದಕ್ಕೆ ಇನ್ಸ್‌ಪೆಕ್ಟರ್‌ಗೆ ಕಡ್ಡಾಯ ರಜೆಯ ಶಿಕ್ಷೆ

    ರಸ್ತೆಯಲ್ಲಿ ನಮಾಜ್ ಪ್ರಕರಣ – ಸುಮೊಟೋ ಕೇಸ್ ದಾಖಲಿಸಿದ್ದಕ್ಕೆ ಇನ್ಸ್‌ಪೆಕ್ಟರ್‌ಗೆ ಕಡ್ಡಾಯ ರಜೆಯ ಶಿಕ್ಷೆ

    – ಬಿ ರಿಪೋರ್ಟ್ ಮಾಡಿ ಕೇಸ್ ರದ್ದು ಮಾಡಿದ ಪೊಲೀಸರು

    ಮಂಗಳೂರು: ಇಲ್ಲಿನ ರಸ್ತೆಯಲ್ಲಿ ಕೆಲ ಯುವಕರು ನಮಾಜ್ (Namaz) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೊಟೋ ಕೇಸ್ (Sumoto Case) ದಾಖಲಿಸಿದ್ದಕ್ಕಾಗಿ ಪೊಲೀಸ್ ಇನ್ಸ್ಪೆಕ್ಟರ್‌ಗೆ ಕಡ್ಡಾಯ ರಜೆಯ ಶಿಕ್ಷೆ ನೀಡಲಾಗಿದೆ.

    ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದು, ಬಿ ರಿಪೋರ್ಟ್ ಮಾಡಿ ಕೇಸ್ ರದ್ದು ಮಾಡಿದ್ದಾರೆ. ಕೇಸ್ ದಾಖಲಿಸಿದ್ದಕ್ಕೆ ಮುಸ್ಲಿಮರ ಆಕ್ಷೇಪ ಹಿನ್ನೆಲೆ ಕದ್ರಿ ಪಿಐ ಸೋಮಶೇಖರ್‌ಗೆ ಕಡ್ಡಾಯ ರಜೆ ಶಿಕ್ಷೆ ನೀಡಲಾಗಿದೆ. ಪೊಲೀಸರ ವಿರುದ್ಧ ತನಿಖೆ ಮಾಡಲು ಎಸಿಪಿ ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಇದನ್ನೂ ಓದಿ: ಧ್ಯಾನಕ್ಕೂ ಮುನ್ನ ಭಗವತಿ ಅಮ್ಮನ ದೇಗುಲದಲ್ಲಿ ಮೋದಿ ಪೂಜೆ

    ಮಂಗಳೂರಿನ ಕಂಕನಾಡಿಯ (Kankanadi) ಮಸೀದಿ ಬಳಿಯ ರಸ್ತೆಯಲ್ಲಿ ಮೇ 24ರಂದು ಕೆಲ ಅನ್ಯಕೋಮಿನ ಯುವಕರು ನಮಾಜ್ ಮಾಡಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾದ ಹಿನ್ನೆಲೆ ಕದ್ರಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ (ಸುಮೊಟೋ) ದಾಖಲಿಸಿಕೊಂಡಿದ್ದರು. ಐಪಿಸಿ ಸೆಕ್ಷನ್ 341 (ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ), 283 (ಸಾರ್ವಜನಿಕ ರಸ್ತೆಯಲ್ಲಿ ಅಡ್ಡಿ) ,143 (ವಿಧಿವಿರುದ್ಧ ಕೂಟದ ಸದಸ್ಯ) ,149 (ಏಕೋದ್ದೇಶವನ್ನು ಈಡೇರಿಸುವಲ್ಲಿ ಮಾಡಲಾದ ಅಪರಾಧದ ಬಗ್ಗೆ ವಿಧಿವಿರುದ್ಧ ಕೂಟದ ಪ್ರತಿಯೊಬ್ಬ ಸದಸ್ಯನು ತಪ್ಪಿತಸ್ಥನಾಗಿರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಕರಾವಳಿಯ ಕಾಂಗ್ರೆಸ್ ಅಲ್ಪಸಂಖ್ಯಾತರು, ಮುಸ್ಲಿಂ ವಲಯ ಮತ್ತು ಪ್ರಗತಿಪರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ಅಧಿಕಾರಿ ಆತ್ಮಹತ್ಯೆ ಪ್ರಕರಣ; ನಾಗೇಂದ್ರ ರಾಜೀನಾಮೆ ನೀಡಲಿ, ಸಿಬಿಐ ತನಿಖೆಯಾಗಲಿ: ಬೊಮ್ಮಾಯಿ

  • ಮಂಗಳೂರಿನಲ್ಲಿ ನಡುರಸ್ತೆಯಲ್ಲೇ ಯುವಕರಿಂದ ನಮಾಜ್- ವೀಡಿಯೋ ವೈರಲ್

    ಮಂಗಳೂರಿನಲ್ಲಿ ನಡುರಸ್ತೆಯಲ್ಲೇ ಯುವಕರಿಂದ ನಮಾಜ್- ವೀಡಿಯೋ ವೈರಲ್

    ಮಂಗಳೂರು: ನಗರದ ಕಂಕನಾಡಿಯಲ್ಲಿ (Kankanadi, Mangaluru) ನಡುರಸ್ತೆಯಲ್ಲಿಯೇ ಕೆಲ ಯುವಕರು ನಮಾಜ್ ಮಾಡಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಮಸೀದಿ ಮುಂಭಾಗ ಇರುವ ರಸ್ತೆಯಲ್ಲಿ ನಮಾಜ್ (Namaz) ಮಾಡುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕೇಜ್ರಿವಾಲ್‌ಗೆ ಕ್ಯಾನ್ಸರ್ ಗಂಭೀರ ಹಂತದಲ್ಲಿಯೇ?- ಜಾಮೀನು ವಿಸ್ತರಣೆ ಅರ್ಜಿಯ ಕುರಿತು ಅತಿಶಿ ಹೇಳಿದ್ದೇನು?

    ಕಳೆದ ಎರಡ್ಮೂರು ದಿನದ ಹಿಂದಿನ ವೀಡಿಯೋ ಇದಾಗಿದೆ. ಈ ವೀಡಿಯೋ ನೋಡಿದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಸ್ತೆಯಲ್ಲಿಯೇ ಯುವಕರು ನಮಾಜ್ ಮಾಡುತ್ತಿದ್ರಿಂದ ವಾಹನ ಸವಾರರಿಗೂ ಕಿರಿಕಿರಿ ಉಂಟಾಗಿದೆ. ಚಾಲಕರು ತಮ್ಮ ವಾಹನವನ್ನು ಯೂಟರ್ನ್ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು. ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.