Tag: ಕಂಕಣ ಸೂರ್ಯಗ್ರಹಣ

  • ಕಂಕಣ ಸೂರ್ಯಗ್ರಹಣದ ವಿಸ್ಮಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಘಳಿಗೆ!

    ಕಂಕಣ ಸೂರ್ಯಗ್ರಹಣದ ವಿಸ್ಮಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಘಳಿಗೆ!

    ಕಾಸರಗೋಡು: ಈ ದಶಕದ ಕೊನೆಯ ಕಂಕಣ ಗ್ರಹಣ ಜಿಲ್ಲೆಯ ಪಾಲಿಗೆ ಅದ್ಭುತ ದೃಶ್ಯ ವಿಸ್ಮಯ ನೀಡಿತ್ತು. ಭಾರತದಲ್ಲೇ ಕಾಸರಗೋಡು ಜಿಲ್ಲೆಯ ಚೆರುವತ್ತೂರಿನಲ್ಲಿ ಮೊದಲ ಬಾರಿಗೆ ಸೂರ್ಯಗ್ರಹಣ ಗೋಚರವಾಯಿತು. ದೇಶದಲ್ಲೇ ಮೊದಲ ಬಾರಿಗೆ ಗ್ರಹಣ ಚೆರುವತ್ತೂರಿನಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಡಳಿತ ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿತ್ತು. ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಗ್ರಹಣ ವೀಕ್ಷಿಸಿದರು.

    ಚೆರುವತ್ತೂರಿನಲ್ಲಿ ಗ್ರಹಣ ವೀಕ್ಷಣೆಗೆ ತೆರಳಿದ್ದ ಕಾಸರಗೋಡು ನಗರದ ಫೋಟೋಸ್ಟಾರ್ ಸಂಜು ಅವರು ತೆಗೆದ ಫೋಟೋಗಳು ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ವೈರಲ್ ಆಗುತ್ತಿದೆ. ಬೆಳಗ್ಗೆ 8.04ರಿಂದ 9.40ರವರೆಗಿನ ಅವಧಿಯ ಫೋಟೋ ಕೊಲಾಜ್ ಮಾಡಿ ಸಂಜು ಅವರು ತಮ್ಮ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ರಿಂಗ್ ಆಫ್ ಫೈರ್ – ಸೋಲಾರ್ ಎಕ್ಲಿಪ್ಸ್ 2019’ ಹೆಸರಿನಲ್ಲಿ ಹಾಕಿರೋ ಫೋಟೋ ಎಲ್ಲರ ಮನಸೆಳೆಯುತ್ತಿದೆ.

    ಗ್ರಹಣ ಶುರುವಾದಾಗಿನಿಂದ ಗ್ರಹಣ ಮೋಕ್ಷದವರೆಗಿನ ಒಟ್ಟು 16 ಫೋಟೋಗಳ ಕೊಲಾಜನ್ನು ಸಂಜು ಅವರು ಹಂಚಿಕೊಂಡಿದ್ದಾರೆ. ಈ ಫೋಟೋ ಇಂದು ಕಾಣಿಸಿದ ಗ್ರಹಣ ಹೇಗಿತ್ತು ಎನ್ನುವುದನ್ನು ಸ್ಪಷ್ಟವಾಗಿ ಜನರಿಗೆ ಅರ್ಥ ಮಾಡಿಸುತ್ತಿದೆ. ಅಲ್ಲದೆ ಬಾನಂಗಳದ ವಿಸ್ಮಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಸಂಜು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

    ಚೆರುವತ್ತೂರಿನಲ್ಲಿ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಎಂ.ರಾಜಗೋಪಾಲನ್, ಕಾಸರಗೋಡು ಜಿಲ್ಲಾಧಿಕಾರಿ ಡಿ.ಸಜಿತ್ ಬಾಬು ಕೂಡಾ ಗ್ರಹಣ ವೀಕ್ಷಣೆಗೆ ಆಗಮಿಸಿದ್ದರು.

    ಚೆರುವತ್ತೂರಿನ ಭೌಗೋಳಿಕ ವಿಶೇಷತೆ ಹಿನ್ನೆಲೆಯಲ್ಲಿ ಸ್ಪೇಸ್ ಇಂಡಿಯಾ ಸಂಸ್ಥೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು. ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ವಿಶೇಷ ಕನ್ನಡಕಗಳ ಮೂಲಕವೂ ಜನರು ಗ್ರಹಣ ವೀಕ್ಷಿಸಿದರು. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿದ್ದರು.

  • ಒಂದೂವರೆ ಲಕ್ಷ ಮಕ್ಕಳಿಗೆ ಗ್ರಹಣ ತೋರಿಸಿದ ಪಬ್ಲಿಕ್ ಹೀರೋ ಎ.ಪಿ ಭಟ್

    ಒಂದೂವರೆ ಲಕ್ಷ ಮಕ್ಕಳಿಗೆ ಗ್ರಹಣ ತೋರಿಸಿದ ಪಬ್ಲಿಕ್ ಹೀರೋ ಎ.ಪಿ ಭಟ್

    ಉಡುಪಿ: ಕಂಕಣ ಸೂರ್ಯಗ್ರಹಣವನ್ನು ವಿಶ್ವದ ಕೋಟ್ಯಾಂತರ ಜನ ಕಣ್ತುಂಬಿಕೊಂಡಿದ್ದಾರೆ. ರಾಜ್ಯದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಅಪರೂಪದ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ಉಡುಪಿಯ ಎ.ಪಿ ಭಟ್ ನಾಲ್ಕು ತಿಂಗಳು ಪಟ್ಟ ಪರಿಶ್ರಮ ಇವತ್ತು ಫಲ ಕೊಟ್ಟಿದೆ.

    ಪಬ್ಲಿಕ್ ಹೀರೋ ಕಾರ್ಯಕ್ರಮ ಮೂಲಕ ಲಕ್ಷ ಮಕ್ಕಳನ್ನು ತಲುಪುವ ಯೋಜನೆ ಹಾಕಿದ್ದ ಎ.ಪಿ.ಭಟ್, ಒಂದೂವರೆ ಲಕ್ಷ ಮಕ್ಕಳು ಗ್ರಹಣ ನೋಡುವಂತೆ ಮಾಡಿದರು. ರಾಜ್ಯರ ಮೂಲೆ ಮೂಲೆ ಮಕ್ಕಳು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿಗೆ ಕರೆಸಿ ಗ್ರಹಣ ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.

    ಗ್ರಹಣ ವಿಕ್ಷೇಣೆ ಮಾಡಲು ವಿಶೇಷ ವ್ಯವಸ್ಥೆಯನ್ನು ಮಾಡಿದ್ದೇವೂ. ನಮ್ಮ ಫಿನ್ ಹೋಲ್ ಅನ್ನು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬಳಕೆ ಮಾಡಿದ್ದಾರೆ. ಉಡುಪಿ ಮಾತ್ರವಲ್ಲದೇ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ನಮ್ಮ ಯೋಜನೆ ಯಶಸ್ವಿಯಾಗಿದೆ. ಗ್ರಹಣದ ಕುರಿತು ಇರುವ ಭಯವನ್ನು ಬಿಟ್ಟು ಮಕ್ಕಳಿಗೆ ತೋರಿಸುವುದು ನಮ್ಮ ಉದ್ದೇಶವಾಗಿತ್ತು. ಆದ್ದರಿಂದಲೇ ಕಂಕಣ ಸೂರ್ಯಗ್ರಹಣ ಸಂಭ್ರಮ ಎಂದು ಕಾರ್ಯಕ್ರಮಕ್ಕೆ ಹೆಸರಿಟ್ಟೇವೂ. ದಕ್ಷಿಣ ಭಾರತದಲ್ಲಿ ಮತ್ತೆ ಕಂಕಣ ಸೂರ್ಯಗ್ರಹಣ ಕಾಣಿಸುವುದು 2064ಕ್ಕೆ ಮಾತ್ರ. ಆದ್ದರಿಂದಲೇ ಕಂಕಣ ಸೂರ್ಯಗ್ರಹಣವನ್ನು ಹೆಚ್ಚಿನ ಮಕ್ಕಳಿಗೆ ತೋರಿಸಲು ಯೋಜನೆ ರೂಪಿಸಲಾಗಿತ್ತು. ಉಡುಪಿ ಕಾಲೇಜಿನಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ ಎಂದು ಪಬ್ಲಿಕ್ ಟಿವಿ ಧನ್ಯವಾದ ತಿಳಿಸಿದರು.

  • ಕೇತುಗ್ರಸ್ಥ ಸೂರ್ಯಗ್ರಹಣ- ಕೃಷ್ಣಮಠದ ಮಧ್ವ ಸರೋವರದಲ್ಲಿ ಪುಣ್ಯಸ್ನಾನ

    ಕೇತುಗ್ರಸ್ಥ ಸೂರ್ಯಗ್ರಹಣ- ಕೃಷ್ಣಮಠದ ಮಧ್ವ ಸರೋವರದಲ್ಲಿ ಪುಣ್ಯಸ್ನಾನ

    ಉಡುಪಿ: ಕೇತುಗ್ರಸ್ಥ ಕಂಕಣ ಸೂರ್ಯಗ್ರಹಣದ ಸಂದರ್ಭ ಉಡುಪಿಯ ಕೃಷ್ಣ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಕೃಷ್ಣ ದೇವರ ದರ್ಶನ ಮಾಡಿದರು.

    ದೇವಾಲಯದ ಬಾಗಿಲು ಮುಚ್ಚದೇ ಇದ್ದ ಕಾರಣ ಭಕ್ತರಿಗೆ ಅನುಕೂಲವಾಯಿತು. ಗ್ರಹಣಕಾಲದಲ್ಲಿ ಮಠಾಧೀಶರು ಪುಣ್ಯಸ್ನಾನ ಕೈಗೊಂಡರು. ಪರ್ಯಾಯ ಪಲಿಮಾರು ಸ್ವಾಮೀಜಿ ಹಾಗೂ ಉತ್ತರಾಧಿಮಠಾಧೀಶರ ನೇತೃತ್ವದಲ್ಲಿ ಸಾವಿರಾರು ಭಕ್ತರು ಮಧ್ವ ಸರೋವರದಲ್ಲಿ ಮಿಂದೆದ್ದರು. ಸರೋವರದ ಸುತ್ತಲೂ ಕುಳಿತು ಜಪತಪ ಪಾರಾಯಣಗಳನ್ನು ಮಾಡಿದರು.

    ಕೃಷ್ಣನಿಗೆ ನೈರ್ಮಲ್ಯ ವಿಸರ್ಜನಾ ಪೂಜೆಯ ನಂತರ ಯಾವುದೇ ಅಲಂಕಾರ ಮಾಡಿರಲಿಲ್ಲ. ಗ್ರಹಣ ಮೋಕ್ಷದ ಬಳಿಕ ದೇವರಿಗೆ ಮಹಾಪೂಜೆ ನಡೆಸಿ ಭಕ್ತರಿಗೆ ಅನ್ನ ಪ್ರಸಾದ ಬಡಿಸಲಾಗುತ್ತದೆ. ಗ್ರಹಣ ಕಾಲದಲ್ಲಿ ಮಠದೊಳಗೆ ಪೂಜೆ, ಹೋಮ ನಡೆದವು. ಗ್ರಹಣದ ವೇಳೆಯಲ್ಲೇ ಆಗಸದಲ್ಲಿ ಕಾಮನಬಿಲ್ಲು ಕಾಣಿಸಿಕೊಂಡು ನೋಡುಗರ ಗಮನ ಸೆಳೆದಿದ್ದು ವಿಶೇಷವಾಗಿತ್ತು.