Tag: ಔಷಧ ನಿಯಂತ್ರಣ ಇಲಾಖೆ

  • ರಾಜ್ಯದಲ್ಲಿ 400 ಔಷಧಿಗಳ ಗುಣಮಟ್ಟ ಕಳಪೆ

    ರಾಜ್ಯದಲ್ಲಿ 400 ಔಷಧಿಗಳ ಗುಣಮಟ್ಟ ಕಳಪೆ

    ಬೆಂಗಳೂರು: ರಾಜ್ಯ ಔಷಧ ನಿಯಂತ್ರಣ ಇಲಾಖೆ (Drug Control Department) ನಡೆಸಿದ ಪರೀಕ್ಷೆಯಲ್ಲಿ 400 ಔಷಧಿಗಳ ಗುಣಮಟ್ಟ ಕಳಪೆ ಎಂಬುದು ಬಹಿರಂಗವಾಗಿದೆ.

    ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳ ಗುಣಮಟ್ಟ ಪರೀಕ್ಷೆ ಮಾಡಲಾಗಿತ್ತು. ರಾಜ್ಯದ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಮತ್ತು ಕ್ಲಿನಿಕ್‌ಗಳಲ್ಲಿ ಬಳಸುವ ಔಷಧಿಗಳ ಗುಣಮಟ್ಟ ಪರೀಕ್ಷಿಸಲಾಗಿತ್ತು. ಇದನ್ನೂ ಓದಿ: ಹೊಸ ವರ್ಷದಂದು ಪಬ್‌ಗೆ ಹೋಗಿದ್ದ ಯುವತಿಗೆ ಬ್ಯಾಡ್ ಟಚ್ ಆರೋಪ – ಎಫ್‌ಐಆರ್‌ ದಾಖಲು

    2023-24ನೇ ಸಾಲಿನಲ್ಲಿ 7,420 ಔಷಧಿಗಳ ಮಾದರಿಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. 285 ಔಷಧಿಗಳು ಪ್ರಮಾಣಿತ ಗುಣಮಟ್ಟ ಇಲ್ಲ ಅಂತಾ ವರದಿಯಲ್ಲಿ ತಿಳಿಸಲಾಗಿದೆ.

    2024-25ನೇ ಸಾಲಿನಲ್ಲಿ 3,636 ಔಷಧಿಗಳ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 177 ಔಷಧಿಗಳು ಪ್ರಮಾಣಿತ ಗುಣಮಟ್ಟ ಇಲ್ಲ ಅಂತಾ ವರದಿ ಬಂದಿದೆ. ಔಷಧಿಗಳನ್ನ ಮಾರುಕಟ್ಟೆಗೆ ಸರಬರಾಜು ಮಾಡುವ ಮುನ್ನ ಕಂಪನಿಗಳು ಪ್ರಮಾಣಿತ ಗುಣಮಟ್ಟ ಪರೀಕ್ಷೆ ಮಾಡಿಸಬೇಕು. ಇದನ್ನೂ ಓದಿ: ಹೊಸ ವರ್ಷದ ಎಣ್ಣೆ ಏಟಲ್ಲಿ ವಾಹನ ಚಾಲನೆ – ಒಂದೇ ರಾತ್ರಿ 513 ಕೇಸ್ ದಾಖಲು

    ಆದರೆ, ಕೆಲ ಕಂಪನಿಗಳು ಪರೀಕ್ಷೆಗೆ ಒಳಪಡಿಸದೇ ನಿರ್ಲಕ್ಷ್ಯ ತೋರಿವೆ. ಔಷಧದ ಪ್ರಮಾಣಿತ ಗುಣಮಟ್ಟ ಹೊಂದಿರದ ಕಂಪನಿಗಳ ವಿರುದ್ಧ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ.

  • ಬಾಣಂತಿಯರ ಸರಣಿ ಸಾವು ಕೇಸ್ – ಆಹಾರ ಸುರಕ್ಷತಾ ಇಲಾಖೆ, ಔಷಧ ನಿಯಂತ್ರಣ ಇಲಾಖೆ ವಿಲೀನ

    ಬಾಣಂತಿಯರ ಸರಣಿ ಸಾವು ಕೇಸ್ – ಆಹಾರ ಸುರಕ್ಷತಾ ಇಲಾಖೆ, ಔಷಧ ನಿಯಂತ್ರಣ ಇಲಾಖೆ ವಿಲೀನ

    ಬೆಂಗಳೂರು: ಬಾಣಂತಿಯರ ಸರಣಿ ಸಾವು ಬಳಿಕ ಆಹಾರ ಸುರಕ್ಷತಾ ಇಲಾಖೆ (Food Safety Department) ಹಾಗೂ ಔಷಧ ನಿಯಂತ್ರಣ ಇಲಾಖೆಯನ್ನು (Drug Control Department) ಸರ್ಕಾರ ವಿಲೀನಗೊಳಿಸಿದೆ.

    ಈಗ ಎರಡು ಇಲಾಖೆಯನ್ನು ವಿಲೀನಗೊಳಿಸಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂತಾ ಹೊಸ ಮರುನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು – ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

    ರಾಜ್ಯದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯದ ಜನರಿಗೆ ಆರೋಗ್ಯ ಸೇವೆಗಾಗಿ, ಹೆಚ್ಚು ಚಿಕಿತ್ಸಾ ವೆಚ್ಚ ಇರುವ ಕಾಯಿಲೆಗಳಿಗೆ ಹಾಗೂ ವಿರಳ ಆರೋಗ್ಯ ಸೇವೆ ಒದಗಿಸಲು ಕಾರ್ಫಸ್ ಫಂಡ್. ಒಟ್ಟು 45 ಕೋಟಿಯನ್ನು ಸರ್ಕಾರ ಮೀಸಲಿಟ್ಟಿದೆ.

    ಬಳ್ಳಾರಿ ಹಾಗೂ ಬೆಳಗಾವಿಯಲ್ಲಿ ಬಾಣಂತಿಯರ ಸಾವು ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬೆಳಗಾವಿಯ ಕುಂದಾನಗರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಆರು ತಿಂಗಳಲ್ಲಿ 322 ಶಿಶುಗಳು ಮತ್ತು 29 ಬಾಣಂತಿಯರು ಮೃತಪಟ್ಟಿದ್ದಾರೆ. ಅಲ್ಲದೇ, ರಾಯಚೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಆಯ್ತು ಈಗ ರಾಯಚೂರು – ಅಕ್ಟೋಬರ್‌ನಲ್ಲಿ ನಾಲ್ವರು ಬಾಣಂತಿಯರು ಸಾವು

  • ನಕಲಿ ಔಷಧಗಳ ಹಾವಳಿ- 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು

    ನಕಲಿ ಔಷಧಗಳ ಹಾವಳಿ- 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು

    ನವದೆಹಲಿ: ನಕಲಿ ಔಷಧಗಳನ್ನು (Spurious medicines) ತಯಾರಿಸುತ್ತಿದ್ದ ಆರೋಪದ ಮೇಲೆ 18 ಫಾರ್ಮಾ ಕಂಪನಿಗಳ (Pharma Companies) ಪರವಾನಗಿಯನ್ನು ಔಷಧ ನಿಯಂತ್ರಣ ಇಲಾಖೆ (DCGI) ರದ್ದುಗೊಳಿಸಿದೆ.

    20 ರಾಜ್ಯಗಳ 76 ಕಂಪನಿಗಳ ಮೇಲೆ ತಪಾಸಣೆ ನಡೆಸಿದ ನಂತರ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ. ಅಲ್ಲದೆ ಹಿಮಾಚಲ ಪ್ರದೇಶದ (Himachal Pradesh) 70, ಉತ್ತರಾಖಂಡ್‍ನ (Uttarakhand) 45 ಮತ್ತು ಮಧ್ಯಪ್ರದೇಶದ 23 ಕಂಪನಿಗಳ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾನೇನಾದ್ರೂ ರೇಪ್ ಮಾಡಿದ್ನಾ: ಏನ್ ತಪ್ಪು ಮಾಡಿದ್ದೆ? – ಟಿಕೆಟ್ ಕೈತಪ್ಪಿದ್ದಕ್ಕೆ ಸವದಿ ಬೇಸರ

    ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಕ್ರಮ ಕೈಗೊಳ್ಳಲಾಗಿರುವ ಹೆಚ್ಚಿನ ಕಂಪನಿಗಳು ನೋಂದಣಿಯಾಗಿವೆ. ಡೆಹ್ರಾಡೂನ್‍ನಲ್ಲಿ ನೋಂದಾಯಿಸಲಾದ ಹಿಮಾಲಯ ಮೆಡಿಟೆಕ್ ಪ್ರೈವೇಟ್ ಲಿಮಿಟೆಡ್‍ನ ಪರವಾನಗಿಯನ್ನು 2022ರ ಡಿ.30 ರಂದು ಅಮಾನತುಗೊಳಿಸಲಾಗಿತ್ತು. 12 ಉತ್ಪನ್ನಗಳನ್ನು ತಯಾರಿಸಲು ನೀಡಿದ್ದ ಅನುಮತಿಯನ್ನು 2023ರ ಫೆ.7 ರಂದು ರದ್ದುಗೊಳಿಸಲಾಗಿತ್ತು.

    ಈ ಹಿಂದೆ ಹಿಮಾಚಲ ಪ್ರದೇಶದ ಶ್ರೀ ಸಾಯಿ ಬಾಲಾಜಿ ಕಂಪನಿಗೆ ಶೋಕಾಸ್ ನೋಟಿಸ್ ನೀಡಿ, ಔಷಧಗಳ ತಯಾರಿಕೆ ನಿಲ್ಲಿಸುವಂತೆ ಸೂಚಿಸಲಾಗಿತ್ತು. ಪರಿಶೀಲನೆಯ ನಂತರ ಹಿಂದಿನ ಆದೇಶವನ್ನು ರದ್ದುಗೊಳಿಸಲಾಗಿತ್ತು.

    ಅಲ್ಲದೆ ಇಜಿ ಫಾರ್ಮಾಸ್ಯುಟಿಕಲ್ಸ್, ವಿಲ್ ಮಂಡಲ, ತೆಹ್ ಕಸೌಲಿ, ಡಿಸ್ಟ್ ಸೋಲನ್ ಸಂಸ್ಥೆಗಳಿಗೂ ನೋಟಿಸ್ ನೀಡಲಾಗಿತ್ತು. ಪರಿಶೀಲನೆಯ ನಂತರ ಉತ್ಪಾದನೆ ನಿಷೇಧಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಅಥೆನ್ಸ್ ಲೈಫ್ ಸೈನ್ಸಸ್ ಕಂಪನಿಗೂ ಸಹ ಎಚ್ಚರಿಕೆಯನ್ನು ನೀಡಲಾಗಿತ್ತು.

    ಹಿಮಾಚಲದ ಸೋಲನ್‍ನ ಜಿಎನ್‍ಬಿ ಮೆಡಿಕಾ ಲ್ಯಾಬ್‍ಗೆ ಮಾತ್ರೆಗಳು, ಕ್ಯಾಪ್ಸುಲ್‍ಗಳು, ಕೆಮ್ಮಿನ ಔಷಧಿಗಳು, ಚುಚ್ಚುಮದ್ದು ಮತ್ತು ಪ್ರೋಟಿನ್ ಪೌಡರ್ ಉತ್ಪಾದನೆಯನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ. ಕಂಪನಿಯ ಔಷಧಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.

    ಫರಿದಾಬಾದ್‍ನಲ್ಲಿ ನೋಂದಾಯಿಸಲಾದ ನೆಸ್ಟರ್ ಕಂಪನಿಗೆ ಜ.30 ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಪರಿಶೀಲನೆ ನಡೆಸಿದ ನಂತರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯಿದೆಯ ಅಡಿಯಲ್ಲಿ ರೂಪಿಸಲಾದ ನಿಯಮಗಳನ್ನು ಅನುಸರಿಸಲು ಎಚ್ಚರಿಕೆ ನೀಡಲಾಗಿತ್ತು.

    ನಕಲಿ ಔಷಧಗಳ ತಯಾರಿಕೆಗೆ ಸಂಬಂಧಿಸಿದಂತೆ ದೇಶಾದ್ಯಂತ ಫಾರ್ಮಾ ಕಂಪನಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ವೇಳೆ ಶಾಂತಿ ಕದಡಲು ವಿಎಚ್‍ಪಿ ಅಧ್ಯಕ್ಷನ ಮೇಲೆ ಫೈರಿಂಗ್: ಬೋಪಯ್ಯ