Tag: ಓ ಪರಿ

  • ಹಿಂದೂ ಭಾವನೆಗೆ ಧಕ್ಕೆ: ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ

    ಹಿಂದೂ ಭಾವನೆಗೆ ಧಕ್ಕೆ: ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ

    ಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಇತ್ತೀಚೆಗಷ್ಟೇ ಹಲವು ಭಾಷೆಗಳಲ್ಲಿ ‘ಓ ಪರಿ’ ಎನ್ನುವ ಹಾಡೊಂದನ್ನು ಹೊರ ತಂದಿದ್ದರು. ಈ ಹಾಡಿನ ಸಾಹಿತ್ಯದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಹಾಗೂ ಧಾರ್ಮಿಕ ಪಠಣಗಳಿರುವ ಹಾಡಿನಲ್ಲಿ ನೃತ್ಯ ಮಾಡುವವರು ಅರೆಬರೆ ಬಟ್ಟೆ ಧರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿ ಕರಾಟೆ ಕಲ್ಯಾಣಿ ಅನ್ನುವವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

    ಹಿಂದೂ ಭಾವನೆಗಳಿಗೆ ಧಕ್ಕೆ ವಿಚಾರವಾಗಿ ದೇವಿ ಶ್ರೀ ಪ್ರಸಾದ್ ಮೇಲೆ ದೂರು ಸಲ್ಲಿಕೆ ಆಗುತ್ತಿದ್ದಂತೆಯೇ ಹೈದರಾಬಾದ್ ನಗರ ಪೊಲೀಸರು ಅವರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ. ತನಿಖೆಯನ್ನೂ ಶುರು ಮಾಡಿದ್ದಾರೆ. ತುಂಡುಡುಗೆ ತೊಟ್ಟು ಡಾನ್ಸ್ ಮಾಡಿದ ಹಾಡಿನಲ್ಲಿ ‘ಹರೇ ಕೃಷ್ಣ ಹರೇ ರಾಮ’  ಎಂದು ಜಪಿಸಲಾಗುತ್ತಿದೆ. ಪವಿತ್ರ ಶ್ಲೋಕಗಳನ್ನು ಹೇಳಲು ಸಾಧ್ಯವಾಗದೇ ಇದ್ದಾಗ ಈ ಪವಿತ್ರ ಸಾಲುಗಳನ್ನು ಹೇಳಲಾಗುತ್ತದೆ. ಇಂತಹ ಸಾಲುಗಳನ್ನು ಹೇಳುವಾಗ ನೃತ್ಯ ಮಾಡುವವರು ಅಶ್ಲೀಲವಾಗಿ ಕಂಡಿದ್ದಾರೆ ಎನ್ನುವುದು ದೂರು ನೀಡಿದವರ ಆರೋಪ. ಇದನ್ನೂ ಓದಿ:ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

    ಕರಾಟೆ ಕಲ್ಯಾಣಿ ಮತ್ತು ಲಲಿತ್ ಕುಮಾರ್ ಜಂಟಿಯಾಗಿ ಹೈದರಾಬಾದ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆಯೇ ಪೊಲೀಸರು ದೇವಿಶ್ರೀ ಪ್ರಸಾದ್ ಮೇಲೆ ಐಪಿಸಿ ಸೆಕ್ಷನ್ 153 (ಎ) ಮತ್ತು 295 (ಎ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಆಂಧ್ರ ಪ್ರದೇಶದ ಬಿಜೆಪಿ ಕಾರ್ಯದರ್ಶಿ ಎಸ್. ವಿಷ್ಣುವರ್ಧನ್ ರೆಡ್ಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಂಗೀತ ನಿರ್ದೇಶಕರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಿಎಸ್ಪಿ ಆಲ್ಬಂ ರಿಲೀಸ್ ಮಾಡಿದ ಕಮಲ್ ಹಾಸನ್, ನಾಗಾರ್ಜುನ

    ಡಿಎಸ್ಪಿ ಆಲ್ಬಂ ರಿಲೀಸ್ ಮಾಡಿದ ಕಮಲ್ ಹಾಸನ್, ನಾಗಾರ್ಜುನ

    ಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ರಾಕ್ಸ್ಟಾರ್ ಎಂದೇ ಜನಪ್ರಿಯರಾಗಿರುವ ದೇವಿ ಶ್ರೀಪ್ರಸಾದ್ (Devi Sriprasad) ಅಲಿಯಾಸ್ ಡಿಎಸ್ಪಿ, ಟಿ-ಸೀರೀಸ್ ಜೊತೆಗೆ ಕೈಜೋಡಿಸಿ ‘ಓ ಪರಿ’ (O Pari) ಎಂಬ ಹಿಂದಿ ಸಿಂಗಲ್ ಹೊರತಂದಿರುವುದು, ಅದನ್ನು ಇತ್ತೀಚೆಗೆ ಮುಂಬೈನಲ್ಲಿ ರಣವೀರ್ ಸಿಂಗ್ ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಇದೊಂದು ಪ್ಯಾನ್ ಇಂಡಿಯಾ ಹಾಡಾಗಿದ್ದು, ಹಿಂದಿಯಲ್ಲದೆ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಮೂಡಿಬಂದಿದೆ. ಈಗ ‘ಓ ಪರಿ’ಯ ತಮಿಳಿನ ಅವತರಣಿಕೆಯಾದ ‘ಓ ಪೆಣ್ಣೆ’ ಮತ್ತು ತೆಲುಗು ಅವತರಣಿಕೆಯಾದ ‘ಓ ಪಿಲ್ಲ’ ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ತಮಿಳು ಮತ್ತು ತೆಲುಗು ‘ಬಿಗ್ ಬಾಸ್’ ಕಾರ್ಯಕ್ರಮಗಳ ಲಾಂಚ್ನಲ್ಲಿ ಎರಡೂ ಹಾಡುಗಳು ಬಿಡುಗಡೆಯಾಗಿದ್ದು, ತಮಿಳು ಹಾಡನ್ನು ಕಮಲ್ ಹಾಸನ್ ಬಿಡುಗಡೆ ಮಾಡಿದರೆ, ತೆಲುಗು ಹಾಡನ್ನು ನಾಗಾರ್ಜುನ ಬಿಡುಗಡೆ ಮಾಡಿ ಡಿಎಸ್ಪಿಗೆ ಶುಭ ಕೋರಿದ್ದಾರೆ.

    ‘ಓ ಪಿಲ್ಲ’ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿರುವ ನಾಗಾರ್ಜುನ (Nagarjun), ‘’ಓ ಪರಿ’ ಹಾಡು ಸೂಪರ್ ಹಿಟ್ ಆಗಿದೆ, ಈ ಹಾಡು ತೆಲುಗಿನಲ್ಲೂ ಮೂಡಿಬರಬೇಕಿತ್ತು ಅಂದುಕೊಳ್ಳುತ್ತಿರುವಾಗಲೇ, ಡಿಎಸ್ಪಿ ತೆಲುಗು ಹಾಡಿನೊಂದಿಗೆ ಬಂದಿದ್ದಾರೆ. ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ನನಗೆ ಮೊದಲಿನಿಂದಲೂ ಡಿಎಸ್ಪಿ ಅವರ ಪ್ರತಿಭೆ ಕುರಿತು ವಿಶೇಷವಾದ ಕುತೂಹಲ, ಆಸಕ್ತಿ ಎರಡೂ ಇದೆ. ಅವರು ಹೇಗೆ ಇಷ್ಟೊಂದು ಅದ್ಭುತವಾಗಿ ಕೆಲಸ ಮಾಡುವುದರ ಜೊತೆಗೆ, ಹೇಗೆ ಈ ರೀತಿ ಹಿಟ್ ಹಾಡುಗಳನ್ನು ಕೊಡುವುದಕ್ಕೆ ಸಾಧ್ಯ ಎಂಬ ಪ್ರಶ್ನೆ ಇದೆ. ಹಾಗಿರುವಾಗಲೇ ಡಿಎಸ್ಪಿ ಇನ್ನೊಂದು ಅದ್ಭುತ ಹಾಡಿನೊಂದಿಗೆ ವಾಪಸ್ಸಾಗಿದ್ದಾರೆ’ ಎಂದಿದ್ದಾರೆ ನಾಗಾರ್ಜುನ. ಇದನ್ನೂ ಓದಿ:ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

    ಡಿಎಸ್ಪಿ ತಮಗೆ ಬಹಳ ವರ್ಷಗಳಿಂದ ಗೊತ್ತು ಎಂದು ಹೇಳಿಕೊಂಡಿರುವ ಕಮಲ್ ಹಾಸನ್ (Kamal Haasan), ‘ಅವರು ತಮ್ಮ ಹಾಡು ಮತ್ತು ಪ್ರತಿಭೆಯಿಂದ ನನ್ನನ್ನು ಖುಷಿಪಡಿಸುತ್ತಲೇ ಇದ್ದಾರೆ. ತಮ್ಮ ಸಾಧನೆಗಳಿಂದ ಹೊಸಹೊಸ ಮೈಲಿಗಲ್ಲುಗಳನ್ನು ತಲುಪುತ್ತಿದ್ದಾರೆ. ಪ್ರತಿಯೊಬ್ಬ ಸಂಗೀತ ನಿರ್ದೇಶಕರು ಸಹ ಈ ನಿಟ್ಟಿನಲ್ಲಿ ಹೊಸ ಸಾಧನೆಗಳನ್ನು ಮಾಡುವುದರ ಬಗ್ಗೆ ಯೋಚಿಸಬೇಕು. ಅವರ ಸಾಧನೆ ಮತ್ತು ಕೆಲಸಗಳಿಗೆ ಪ್ರತಿಯಾಗಿ ಅವರಿಗೆ ಯಶಸ್ಸು ಸಿಗುತ್ತಲೇ ಇದ್ದು, ಈಗ ಓ ಪರಿ ಮೂಲಕ ಮತ್ತೊಂದು ದೊಡ್ಡ ಯಶಸ್ಸನ್ನು ಕಂಡಿದ್ದಾರೆ ಡಿಎಸ್ಪಿ. ಅವರು ಇನ್ನಷ್ಟು ಎತ್ತರಗಳನ್ನು ಕಾಣಲಿ ಎನ್ನುವುದರ ಜೊತೆಗೆ, ಅವರಿಗೆ ಬೆನ್ನೆಲುಬಾಗಿ ನಿಂತಿರುವ ಭೂಷಣ್ ಕುಮಾರ್‌ರಂತಹವರ ಸಹಕಾರ ಹೀಗೆಯೇ ಮುಂದುವರೆಯಲಿ’ ಎಂದು ಹಾರೈಸಿದ್ದಾರೆ.

    ಕಮಲ್ ಹಾಸನ್ ಮತ್ತು ನಾಗಾರ್ಜುನ ಅವರ ಸಹಕಾರ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಡಿಎಸ್ಪಿ, ಅವರಿಬ್ಬರ ಪ್ರೋತ್ಸಾಹವಿಲ್ಲದೆ ಇಷ್ಟು ದೂರ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ಇಂಥದ್ದೊಂದು ಅಂತಾರಾಷ್ಟ್ರೀಯ ಮಟ್ಟದ ಹಾಡಿನ ಬಗ್ಗೆ ನಾನು ಮೊದಲು ಪ್ರಸ್ತಾಪ ಮಾಡಿದ್ದು ಕಮಲ್ ಹಾಸನ್ ಅವರ ಬಳಿ. ಅವರ ಪ್ರೋತ್ಸಾಹದ ಮಾತುಗಳು ನನ್ನನ್ನು ಈ ಹಾಡು ಸಂಯೋಜಿಸುವಂತೆ ಮಾಡಿತು. ಅವರ ಸಂಗೀತಾಸಕ್ತಿಯೇ ನಮ್ಮಿಬ್ಬರನ್ನೂ ಇಷ್ಟು ಹತ್ತಿರಕ್ಕೆ ಸೇರಿಸಿದ್ದು. ಅದೇ ಕಾರಣಕ್ಕೆ ಈ ಹಾಡನ್ನು ಅವರಿಂದಲೇ ಬಿಡುಗಡೆ ಮಾಡಿಸಲಾಯಿತು ಎಂದು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಹಿಂದಿ ಆಲ್ಬಂ ಲೋಕಕ್ಕೆ ಎಂಟ್ರಿ

    ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಹಿಂದಿ ಆಲ್ಬಂ ಲೋಕಕ್ಕೆ ಎಂಟ್ರಿ

    ಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕರಾದ ದೇವಿ ಶ್ರೀಪ್ರಸಾದ್ (Devi Sriprasad) ಅಲಿಯಾಸ್ ಡಿಎಸ್ಪಿ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸುವುದರ ಜೊತೆಗೆ ತಮ್ಮ ಹಿಟ್ ಹಾಡುಗಳ ಮೂಲಕ ಲಕ್ಷಾಂತರ ಜನರನ್ನು ರಂಜಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು ಸಿನಿಮಾ ಹೊರತುಪಡಿಸಿ ಆಲ್ಬಂ (Album) ಸಿಂಗಲ್ವೊಂದಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅದೇ ‘ಓ ಪರಿ’.

    ಟಿ-ಸೀರೀಸ್ ಮೂಲಕ ಇದುವರೆಗೂ ಹಲವಾರು ಗಾಯಕರನ್ನು ಮತ್ತು ಸಂಗೀತಗಾರರನ್ನು ಮುನ್ನೆಲೆಗೆ ತಂದಿರುವ ಭೂಷಣ್ ಕುಮಾರ್, ಇದೇ ಮೊದಲ ಬಾರಿಗೆ ‘ರಾಕ್ಸ್ಟಾರ್’ ಎಂದೇ ಜನಪ್ರಿಯವಾಗಿರುವ ಡಿಎಸ್ಪಿ ಜೊತೆಗೆ ಕೈ ಜೋಡಿಸಿದ್ದಾರೆ. ಡಿಎಸ್ಪಿ ಸಂಯೋಜಿಸಿರುವ ‘ಓ ಪರಿ’ (Oh Pari) ಎಂಬ ಸಿಂಗಲ್ ಅನ್ನು ಟಿ-ಸೀರೀಸ್ ಮೂಲಕ ಹೊರತಂದಿದ್ದಾರೆ. ಈ ಹಾಡನ್ನು ಡಿಎಸ್ಪಿ ಅವರೇ ಹಾಡಿದ್ದು, ಇತ್ತೀಚೆಗೆ ಮುಂಬೈನಲ್ಲಿ ನಡೆದ ವಿಶೇಷ ಇವೆಂಟ್ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡು ಈಗಾಗಲೇ ಯೂಟ್ಯೂಬ್ನ ಟಿ-ಸೀರೀಸ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಜನಪ್ರಿಯವಾಗಿದೆ. ಅದರಲ್ಲೂ, ಡಿಎಸ್ಪಿ ಅವರ ಹುಕ್ ಸ್ಟೆಪ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ:‘ಅರ್ಧಂಬರ್ಧ ಪ್ರೇಮಕಥೆ’ಯಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ

    ಈ ಹಾಡಿನ ವಿಶೇಷತೆಯೆಂದರೆ, ಇದು ಡಿಎಸ್ಪಿ ಅವರ ಮೊದಲ ಹಿಂದಿ ಸಿಂಗಲ್ ಆದರೂ, ಇದು ಹಿಂದಿಗೆ ಮಾತ್ರ ಸೀಮಿತವಲ್ಲ. ಇದೊಂದು ಪ್ಯಾನ್ ಇಂಡಿಯಾ ಹಾಡಾಗಿದ್ದು, ಹಿಂದಿಯಲ್ಲದೆ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಮೂಡಿಬಂದಿದೆ. ವಿಶೇಷವೆಂದರೆ, ಐದೂ ಭಾಷೆಗಳಲ್ಲಿ ಡಿಎಸ್ಪಿ ಅವರೇ ಈ ಹಾಡನ್ನು ಹಾಡಿದ್ದಾರೆ.

    ಈ ಹಾಡಿನ ಕುರಿತು ಮಾತನಾಡಿರುವ ಡಿಎಸ್ಪಿ, ‘ಹಿಂದಿ ಆಲ್ಬಂ ಕ್ಷೇತ್ರಕ್ಕೆ ಕಾಲಿಡುವುದಕ್ಕೆ ಕೆಲವು ಸಮಯದಿಂದ ಯೋಚಿಸುತ್ತಿದ್ದೆ. ಅದಕ್ಕೊಂದು ಅದ್ಭುತ ವೇದಿಕೆ ಕಲ್ಪಿಸಿದ್ದು ಭೂಷಣ್ ಕುಮಾರ್ ಅವರ ಟಿ-ಸೀರೀಸ್. ನನ್ನ ಬೇರೆ ಹಾಡುಗಳನ್ನು ಮೆಚ್ಚಿದಂತೆ ಈ ಹಾಡನ್ನು ಸಹ ಕೇಳುಗರು ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ. ಮುಂದಿನ ದಿನಗಳಲ್ಲಿ ಈ ತರಹದ ಇನ್ನಷ್ಟು ಆಲ್ಬಂ ಹಾಡುಗಳನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]