Tag: ಓವೆಲ್

  • ಭಾರತದ ಗೆಲುವಿಗೆ ಕೊಹ್ಲಿ ಕಾರಣ: ಇಂಜಮಾಮ್ ಉಲ್ ಹಕ್

    ಭಾರತದ ಗೆಲುವಿಗೆ ಕೊಹ್ಲಿ ಕಾರಣ: ಇಂಜಮಾಮ್ ಉಲ್ ಹಕ್

    ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧ ಭಾರತ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲಲ್ಲು ನಾಯಕ ವಿರಾಟ್ ಕೊಹ್ಲಿ ಪ್ರಮುಖ ಕಾರಣ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.

    ಪಂದ್ಯದ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. 4ನೇ ಟೆಸ್ಟ್ ಪಂದ್ಯದ ಮೊದಲ  ಭಾರತ ಅಲ್ಪ ಮೊತ್ತಕ್ಕೆ ಆಲೌಟ್ ಆಗಿ ಸಂಕಷ್ಟಕ್ಕೆ ಸಿಲುಕಿತ್ತು.

    ಎರಡನೇ ಇನ್ನಿಂಗ್ಸ್‍ನಲ್ಲಿ 466ರನ್‍ಗಳ ದೊಡ್ಡ ಮೊತ್ತ ಕಲೆಹಾಕಿತು. ಭಾರತದ ಬೌಲರ್‍ಗಳಾದ ಜಸ್ಪ್ರೀತ್ ಬುಮ್ರಾ ಉಮೇಶ್ ಯಾದವ್, ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜಾ ಸೇರಿದಂತೆ ಎಲ್ಲಾ ಬೌಲರ್‍ಗಳು ಉತ್ತಮ ಪ್ರದರ್ಶನ ನೀಡಿ ಇಂಗ್ಲೆಂಡ್ ಬ್ಯಾಟ್ಸ್ಮನ್‍ಗಳನ್ನು ಕಟ್ಟಿಹಾಕಿ ಟೆಸ್ಟ್ ಪಂದ್ಯವನ್ನು ಗೆಲ್ಲಿಸಿದರು. ಭಾರತ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ ಕೇವಲ 191 ರನ್‍ಗಳಿಗೆ ಆಲೌಟ್ ಆಗಿ, ನಂತರ ಎರಡನೇ ಇನ್ನಿಂಗ್ಸ್‍ನಲ್ಲಿ 466 ರನ್‍ಗಳ ದೊಡ್ಡ ಮೊತ್ತ ಕಲೆಹಾಕಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಇದನ್ನೂ ಓದಿ: ಬೌಲರ್‌ಗಳ ಭರ್ಜರಿ ಆಟ – ಭಾರತಕ್ಕೆ 157 ರನ್‍ಗಳ ಗೆಲುವು

    ಭಾರತ ತಂಡದ ಈ ಗೆಲುವಿಗೆ ನಾಯಕ ವಿರಾಟ್ ಕೊಹ್ಲಿಯ ದೇಹ ಭಾಷೆಯೇ ಕಾರಣ. ತಂಡಕ್ಕೆ ಅವರು ನೀಡುವ ಹುರುಪು ಗೆಲುವಿಗೆ ಸಹಕಾರಿ ಎಂದು ಇಂಜಮಾಮುಲ್ ಹಕ್ ಕೊಹ್ಲಿಯನ್ನು ಹೊಗಳಿದ್ದಾರೆ. ಇದನ್ನೂ ಓದಿ: ರನ್‍ನಂತೆ ಏರುತ್ತಿದೆ ವಿರಾಟ್ ಕೊಹ್ಲಿ ಫಾಲೋವರ್ಸ್ ಸಂಖ್ಯೆ

  • ದ್ರಾವಿಡ್ ಫೋನ್ ಕಾಲ್ ರಹಸ್ಯ ಬಿಚ್ಚಿಟ್ಟ ಹನುಮ ವಿಹಾರಿ

    ದ್ರಾವಿಡ್ ಫೋನ್ ಕಾಲ್ ರಹಸ್ಯ ಬಿಚ್ಚಿಟ್ಟ ಹನುಮ ವಿಹಾರಿ

    ಲಂಡನ್: ಓವೆಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಯುವ ಆಟಗಾರ ಹನುಮ ವಿಹಾರಿ (56 ರನ್, 124 ಎಸೆತ, 7 ಬೌಂಡರಿ, 1 ಸಿಕ್ಸ್) ತಮ್ಮ ಮೊದಲ ಅರ್ಧ ಶತಕದ ಹಿಂದೆ ರಾಹುಲ್ ರ ಒಂದು ಫೋನ್ ಕಾಲ್ ಸಾಕಷ್ಟು ಪ್ರಭಾವ ಬೀರಿದ್ದು, ನನ್ನಲ್ಲಿ ಶಕ್ತಿ ತುಂಬಿತ್ತು ಎಂದು ಹೇಳಿದ್ದಾರೆ.

    ಓವೆಲ್ ಟೆಸ್ಟ್ ನ 3ನೇ ದಿನದಾಟದ ವೇಳೆ ಟೀಂ ಇಂಡಿಯಾವನ್ನು ಭಾರೀ ಅಂತರದ ಹಿನ್ನಡೆಯಿಂದ ತಪ್ಪಿಸಲು ನೆರವಾದ ವಿಹಾರಿ, ಜಡೇಜಾ 86* (156 ಎಸೆತ, 11 ಬೌಂಡರಿ, 1 ಸಿಕ್ಸ್) ರೊಂದಿಗೆ ಭರ್ಜರಿ ಬ್ಯಾಟಿಂಗ್ ನಡೆಸಿ ಅರ್ಧಶತಕ ಸಿಡಿಸಿದ್ದರು. ದಿನದಾಟದ ಬಳಿಕ ಮಾತನಾಡಿದ ವಿಹಾರಿ ಟೆಸ್ಟ್ ತಂಡಕ್ಕೆ ಆಯ್ಕೆ ಬಳಿಕ ರಾಹುಲ್ ದ್ರಾವಿಡ್ ರೊಂದಿಗೆ ನಡೆಸಿದ ಮಾತು ನನಗೆ ಶಕ್ತಿ ತುಂಬಿದ್ದು, ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಲು ನೆರವಾಯಿತು ಎಂದು ಹೇಳಿದ್ದಾರೆ.

    ನನ್ನ ಪಾದಾರ್ಪಣೆ ಪಂದ್ಯದ ಮುನ್ನ ಅವರಿಗೆ ಕರೆ ಮಾಡಿ ಕೆಲ ಸಮಯ ಮಾತನಾಡಿದ್ದೆ. ಆ ಮಾತು ನನ್ನಲ್ಲಿನ ಹಿಂಜರಿಕೆಯನ್ನು ದೂರ ಮಾಡಿ ಶಕ್ತಿ ತುಂಬಿತ್ತು. ಅವರು ಕ್ರಿಕೆಟ್ ಗೇಮ್ ಲೆಜೆಂಡ್. ಅವರ ಪ್ರತಿಯೊಂದು ಸಲಹೆಯೂ ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎಂದರು.

    ದ್ರಾವಿಡ್ ಅವರು ನನ್ನ ಬ್ಯಾಟಿಂಗ್ ತಂತ್ರಗಾರಿಕೆ ಕುರಿತು ಮೆಚ್ಚಿದ್ದರು, ಅಲ್ಲದೇ ಮೈದಾನದಲ್ಲಿ ನಿನ್ನ ಆಟವನ್ನು ಆನಂದಿಸು ಎಂದು ಸಲಹೆ ನೀಡಿದ್ದರು. ನನ್ನ ಜೀವನದಲ್ಲಿ ದ್ರಾವಿಡ್ ಕೋಚ್ ಮಾಡುತ್ತಿದ್ದ ಟೀಂ ಇಂಡಿಯಾ ಎ ತಂಡದ ಅವಧಿಯ ಜರ್ನಿ ಪ್ರಮುಖವಾದದ್ದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ವಲ್ಡ್ ಕ್ಲಸ್ ಬೌಲರ್ ಗಳಾದ ಜೇಮ್ಸ್ ಆ್ಯಂಡರ್ ಸನ್, ಬ್ರಾಡ್ ಬೌಲಿಂಗ್ ಎದುರಿಸಲು ನಾಯಕ ಕೊಹ್ಲಿ ಅವರ ಬೆಂಬಲವೂ ಈ ವೇಳೆ ಪ್ರಮುಖವಾಗಿದ್ದು, ಜಡೇಜಾರೊಂದಿಗೆ ಉತ್ತಮ ಜೊತೆಯಾಟ ನೀಡಲು ಕಾರಣವಾಯಿತು. ಮುಂದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಅಧಿಕ ರನ್ ಗಳಿಸುವುದು ನನ್ನ ಗುರಿಯಾಗಿದೆ ಎಂದು ಹನುಮ ವಿಹಾರಿ ಹೇಳಿದರು.

  • ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿ ರಂಜಿಸಿದ ಟೀಂ ಇಂಡಿಯಾ ಆಟಗಾರ!

    ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿ ರಂಜಿಸಿದ ಟೀಂ ಇಂಡಿಯಾ ಆಟಗಾರ!

    ಲಂಡನ್: ಓವೆಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಅಂತಿಮ ಟೆಸ್ಟ್ ಪಂದ್ಯದ ಮೇಲೆ ಟೀಂ ಇಂಡಿಯಾ ಮೊದಲ ದಿನವೇ ಹಿಡಿತ ಸಾಧಿಸಿದ್ದು, ಇದೇ ವೇಳೆ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್  ಕ್ರೀಡಾಂಗಣದಲ್ಲಿ ಭಾಂಗ್ರಾ ಡಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ದಿನದಾಟದ ಟೀ ವಿರಾಮ ವೇಳೆಗೆ 123 ರನ್ ಗಳಿಸಿದ್ದ ಇಂಗ್ಲೆಂಡ್ ಪಡೆ ದಿನದಾಟದ ಅಂತ್ಯಕ್ಕೆ 198 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಟೀಂ ಇಂಡಿಯಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಇಶಾಂತ್ ಶರ್ಮಾ 3, ಬುಮ್ರಾ ಹಾಗೂ ಜಡೇಜಾ ತಲಾ 2 ವಿಕೆಟ್ ಪಡೆದು ಮಿಂಚಿದ್ದಾರೆ.

    ಇತ್ತ ವೇಗಿಗಳು ಬೀಗಿ ಬೌಲಿಂಗ್ ದಾಳಿ ನಡೆಸುತ್ತಿದ್ದಾರೆ, ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಭಾರತೀಯ ಅಭಿಮಾನಿಗಳು ತಮ್ಮ ಹಾಡು, ಡಾನ್ಸ್, ಚೀರಾಟದ ಮೂಲಕ ಆಟಗಾರರನ್ನು ಬೆಂಬಲಿಸುತ್ತಿದ್ದರು. ಈ ವೇಳೆ ಲಾಂಗ್ ಆನ್ ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಧವನ್ ಅಭಿಮಾನಿಗಳ ಎದುರು ಭಾರತದ ಸಾಂಪ್ರದಾಯಿಕ ಭಾಂಗ್ರಾ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ತಂಡ ಒತ್ತಡದ ಎದುರಿಸುತ್ತಿದ್ದ ವೇಳೆಯಲ್ಲೂ ತಮ್ಮ ನಗುವಿನ ಮೂಲಕ ಧವನ್ ಇತರೇ ಆಟಗಾರರಲ್ಲಿ ಸ್ಫೂರ್ತಿ ತುಂಬುತ್ತಾರೆ. ಈ ಹಿಂದಿನ ಪಂದ್ಯಗಳಲ್ಲೂ ಧವನ್ ತಮ್ಮ ಹಾಸ್ಯದ ಮೂಲಕವೇ ಆಟಗಾರರಲ್ಲಿ ಉತ್ತಮ ಸಹಕಾರ ಮೂಡಲು ಕಾರಣರಾಗಿದ್ದರು.

    ಮೈದಾನದಲ್ಲಿ ಧವನ್ ಡಾನ್ಸ್ ಮಾಡುತ್ತಿದ್ದಾರೆ ವೀಕ್ಷಕ ವಿವರಣೆ ನೀಡುತ್ತಿದ್ದ ಹರ್ಭಜನ್ ಕೂಡ ಪಂಜಾಬಿ ಡಾನ್ಸ್ ಮಾಡಿದ್ದಾರೆ. ಧವನ್ ಹಾಗೂ ಹಭರ್ಜನ್ ಡಾನ್ಸ್ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇಂಗ್ಲೆಂಡ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಕುಕ್ ತಮ್ಮ ವಿದಾಯದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದಾರೆ. ಅಂತಿಮವಾಗಿ 72 ರನ್ ಗಳಿಸಿದ್ದ ಕುಕ್, ವೇಗಿ ಬುಮ್ರಾ ಬೌಲಿಂಗ್ ನಲ್ಲಿ ಔಟಾಗಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲ ಆಟಗಾರರು ಕುಕ್ ಗೆ ಗೌರವ ಸೂಚಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾತ್ರೆಯ ಆಕಾರದಲ್ಲಿ ಮೊಟ್ಟೆಯಿಟ್ಟ ಕೋಳಿ- ಕಾರವಾರದಲ್ಲೊಂದು ಅಚ್ಚರಿ

    ಮಾತ್ರೆಯ ಆಕಾರದಲ್ಲಿ ಮೊಟ್ಟೆಯಿಟ್ಟ ಕೋಳಿ- ಕಾರವಾರದಲ್ಲೊಂದು ಅಚ್ಚರಿ

    ಕಾರವಾರ: ಕೋಳಿಯೊಂದು ಟ್ಯಾಬ್ಲೆಟ್ (ಮಾತ್ರೆ) ಆಕಾರದಲ್ಲಿ ಮೊಟ್ಟೆಯಿಟ್ಟ ಅಚ್ಚರಿಯ ಘಟನೆ ಕಾರವಾರದಲ್ಲಿ ನಡೆದಿದೆ.

    ಕೋಳಿ ಮೊಟ್ಟೆ ಹಾಕಿದರೆ ಓವೆಲ್ ಷೇಪ್ ನಲ್ಲಿ ಇರುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಸೆಣಬಾವಿ ಗ್ರಾಮದಲ್ಲಿ ಕೋಳಿ ಮಾತ್ರೆಯಾಕಾರದಲ್ಲಿ ಮೊಟ್ಟೆಯಿಟ್ಟಿದೆ.

    ಮಾಸ್ತಮ್ಮ ಮೊಗೇರ್ ಎಂಬವರ ಮನೆಯಲ್ಲಿ ಕೋಳಿ ಮಾತ್ರೆ ಆಕಾರದಲ್ಲಿ ಮೊಟ್ಟೆ ಇಡುವ ಮೂಲಕ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ. ಕಳೆದ ಎರಡು ದಿನದ ಹಿಂದೆ ಕೋಳಿಯು 12 ಮೊಟ್ಟೆ ಇಟ್ಟಿದ್ದು, ಇದರಲ್ಲಿ ಮೊದಲ ಮೊಟ್ಟೆ ಮಾತ್ರೆ ಆಕಾರದಲ್ಲಿದ್ದು ಮೂರು ಸೆಂಟಿಮೀಟರ್ ನಷ್ಟು ಉದ್ದವಾಗಿದೆ.

    ಇನ್ನು ಈ ರೀತಿಯಾಗಿ ಮೊಟ್ಟೆಯಿಟ್ಟಿದ್ದ ಕೋಳಿ ಕಾವು ನೀಡುತ್ತಿದೆ. ಒಂದು ವೇಳೆ ಮರಿ ಆದಲ್ಲಿ ಯಾವ ರೀತಿ ಕೋಳಿ ಮರಿ ಇರಬಹುದೆಂದು ಕುತೂಹಲ ಎಲ್ಲರನ್ನು ಕಾಡುತ್ತಿದೆ.