Tag: ಓವೆನ್

  • ಓವೆನ್‍ನಲ್ಲಿ ಜಿಗಿದಾಡಿದ ತಲೆ ಇಲ್ಲದ ಮೀನು

    ಓವೆನ್‍ನಲ್ಲಿ ಜಿಗಿದಾಡಿದ ತಲೆ ಇಲ್ಲದ ಮೀನು

    ಒವೆನ್‍ನಲ್ಲಿ ಬೇಯಿಸಲು ಇಟ್ಟಾಗ ಇದ್ದಕ್ಕಿದಂತೆ ತಲೆ ಇಲ್ಲದ ಮೀನು ಮೇಲಕ್ಕೆ ಕೆಳಕ್ಕೆ ಜಿಗಿದಾಡುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ವೀಡಿಯೋ ಕಂಡು ತಲೆಯಿಲ್ಲದ ಮೀನು ಅಲುಗಾಡಲು ಹೇಗೆ ಸಾಧ್ಯ ಎಂದು ಎಲ್ಲರಿಗೂ ಅಚ್ಚರಿ ಮೂಡಿದೆ. ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ನಾಸರ್ ಪಾರ್ ಎಂಬವರು ಯೂಟ್ಯೂಬ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ

    ವೀಡಿಯೋದಲ್ಲಿ ಮೀನಿನ ತಲೆಯನ್ನು ಕತ್ತರಿಸಲಾಗಿದ್ದು, ನಂತರ ಸತ್ತ ಮೀನನ್ನು ಓವೆನ್‍ನಲ್ಲಿ ಬೇಯಿಸಲು ತಟ್ಟೆಯ ಮೇಲೆ ಇರಿಸಿ ಗ್ರಿಲ್ ಮೇಲೆ ಇಟ್ಟಾಗ ಮೀನು ಓವೆನ್ ಒಳಗೆ ಮೇಲಕ್ಕೆ ಹಾಗೂ ಕೆಳಕ್ಕೆ ಜಿಗಿಯುವುದನ್ನು ಕಾಣಬಹುದಾಗಿದೆ. ಒಂದು ಕ್ಷಣ ಈ ದೃಶ್ಯ ನೋಡಿದ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. 35 ಸೆಕೆಂಡುಗಳಿರುವ ಈ ವೀಡಿಯೋವನ್ನು ಐದು ವರ್ಷದ ಹಿಂದೆ ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದು, ಇಲ್ಲಿಯವೆರೆಗೂ 3.4 ಮಿಲಿಯನ್‍ಗಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದನ್ನೂ ಓದಿ:ಐಸ್‍ಕ್ರೀಮ್ ಸವಿದು, ಜಿಮ್ ಮಾಡಿ ಫುಲ್ ಎಂಜಾಯ್ ಮೂಡ್‍ನಲ್ಲಿ ತಾಲಿಬಾನಿಗಳು

  • ಚಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಬಾಲಕ ಓವನ್‍ನಲ್ಲಿ ಸಿಲುಕಿ ಸಾವು!

    ಚಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಬಾಲಕ ಓವನ್‍ನಲ್ಲಿ ಸಿಲುಕಿ ಸಾವು!

    ಸಾಂದರ್ಭಿಕ ಚಿತ್ರ

    ಲಕ್ನೋ: ಚಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ 15 ವರ್ಷದ ಬಾಲಕನೊಬ್ಬ ಓವನ್ ಒಳಗೆ ಸಿಲುಕಿ ಹೊರಬರಲಾಗದೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಖೈರಪುರ್ ಗ್ರಾಮದಲ್ಲಿ ನಡೆದಿದೆ.

    ದೀಪಕ್ ಜೈಸ್ವಾಲ್ (15) ಮೃತ ಬಾಲಕ. ತಂದೆಯ ಬಿಸ್ಕತ್ ಫ್ಯಾಕ್ಟರಿಯಲ್ಲಿ ದುರಂತ ಸಂಭವಿಸಿದೆ. 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ದೀಪಕ್ ಶನಿವಾರ ತಂದೆಯ ಬಿಸ್ಕತ್ ಫ್ಯಾಕ್ಟರಿಗೆ ನೌಕರರೆಲ್ಲ ತೆರಳಿದ ಮೇಲೆ ಓವನ್ ಬಂದ್ ಮಾಡಲು ತೆರಳಿದ್ದ. ಆದರೆ ಈ ವೇಳೆ ಚಳಿಯಿಂದ ರಕ್ಷಿಸಿಕೊಳ್ಳಲು ಕೆಲ ಸಮಯ ಓವನ್ ಬಳಿ ಕುಳಿತಿದ್ದ ದೀಪಕ್ ಆಕಸ್ಮಿಕವಾಗಿ ಒಳಗೆ ಸಿಲುಕಿಕೊಂಡಿದ್ದಾನೆ. ಈ ವೇಳೆ ಓವನ್ ಬಾಗಿಲು ತೆರಯಲು ಆಗದ ಕಾರಣ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿ ಆರ್ ಪಿ ಸಿಂಗ್ ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ದೀಪಕ್ ಮನೆಯ ನೆಲ ಮಹಡಿಯಲ್ಲೇ ತಂದೆ ಬಿಸ್ಕತ್ ಫ್ಯಾಕ್ಟರಿ ನಡೆಸುತ್ತಿದ್ದು, ಫ್ಯಾಕ್ಟರಿಗೆ ತೆರಳಿದ ಆತ ಹೆಚ್ಚಿನ ಸಮಯ ಬಾರದ ಕಾರಣ ಪೋಷಕರು ಹುಡುಕಾಟ ನಡೆಸಿದ್ದಾರೆ. ಆದರೆ ಆಕಸ್ಮಿಕವಾಗಿ ಓವನ್ ಒಳಗೆ ಸಿಲುಕಿದ್ದ ದೀಪಕ್ ಜೀವಂತವಾಗಿಯೇ ಬೆಂದು ಹೋಗಿದ್ದ. ಈ ವೇಳೆ ಪೋಷಕರು ಓವನ್ ಬಾಗಿಲು ಒಡೆದು ದೀಪಕ್‍ನನ್ನು ಹೊರತೆಗೆದಿದ್ದು, ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದ್ದರು. ಆದರೆ ಆಸ್ಪತ್ರೆಗೆ ತೆರಳುವ ಮುನ್ನವೇ ಬಾಲಕ ಮೃತ ಪಟ್ಟಿದ್ದ.

    ಮೃತ ಬಾಲಕ ದೀಪಕ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಎಸ್‍ಪಿ ಮಾಹಿತಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv