Tag: ಓವರ್ ಟೇಕ್

  • ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ – ನಾಲ್ವರು ದುರ್ಮರಣ

    ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ – ನಾಲ್ವರು ದುರ್ಮರಣ

    ಚಿಕ್ಕಬಳ್ಳಾಪುರ: ಲಾರಿ ಓವರ್ ಟೇಕ್ (Over Take) ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಮಾಕಳಿ ಬಳಿ ನಡೆದಿದೆ.

    ಬೆಳಗ್ಗೆ ದೇವಸ್ಥಾನಕ್ಕೆಂದು ಇನ್ನೋವಾ ಕಾರಿನಲ್ಲಿ 08 ಮಂದಿ ತೆರಳುತ್ತಿದ್ದರು. ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಮೃತದೇಹಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ಬಾಸ್ ಜೊತೆ ಅಕ್ರಮ ಸಂಬಂಧದ ಶಂಕೆ – ಲಿವ್ ಇನ್ ಗೆಳತಿಯ ಹತ್ಯೆಗೈದು ಶವದೊಂದಿಗೆ ಮಲಗಿದ್ದ 2 ಮಕ್ಕಳ ತಂದೆ

    ಮೃತರನ್ನು ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ ನಿವಾಸಿಗಳಾದ ಕಾಳಪ್ಪ, ಪುರುಷೋತ್ತಮ, ನಾರಾಯಣಪ್ಪ, ಈಶ್ವರಪ್ಪ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳಿಗೆ ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: Hassan | ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿ

  • ಒವರ್ ಟೇಕ್ ಮಾಡಲೋಗಿ ಕ್ಯಾಂಟರ್‌ಗಳ ನಡುವೆ ಡಿಕ್ಕಿ – ಚಾಲಕರಿಗೆ ಗಂಭೀರ ಗಾಯ

    ಒವರ್ ಟೇಕ್ ಮಾಡಲೋಗಿ ಕ್ಯಾಂಟರ್‌ಗಳ ನಡುವೆ ಡಿಕ್ಕಿ – ಚಾಲಕರಿಗೆ ಗಂಭೀರ ಗಾಯ

    ಚಿಕ್ಕಬಳ್ಳಾಪುರ: ಓವರ್ ಟೇಕ್ (Over take) ಮಾಡಲು ಹೋಗಿ ಎರಡು ಕ್ಯಾಂಟರ್‌ಗಳ (Canter) ನಡುವೆ ಡಿಕ್ಕಿಯಾಗಿ, ಕ್ಯಾಂಟರ್ ಚಾಲಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಅಮ್ಮನ ಕೆರೆಯ ಕಟ್ಟೆ ಮೇಲೆ ಭಾನುವಾರ (ಜ.28) ನಡೆದಿದೆ.

    ಶಿಡ್ಲಘಟ್ಟ-ಚಿಕ್ಕಬಳ್ಳಾಪುರ (Sidlaghatta-Chikkaballapur) ಮಾರ್ಗದಲ್ಲಿರುವ ಅಮ್ಮನ ಕೆರೆ ಕಟ್ಟೆಮೇಲೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಎರಡು ಕ್ಯಾಂಟರ್ ಚಾಲಕರು ಜಿದ್ದಿಗೆ ಬಿದ್ದವರಂತೆ ಪರಸ್ಪರ ಓವರ್ ಟೇಕ್ ಮಾಡಲು ಅತೀ ವೇಗವಾಗಿ ಕ್ಯಾಂಟರ್ ಚಾಲನೆ ಮಾಡಿದ್ದಾರೆ. ಈ ವೇಳೆ ಓವರ್ ಸ್ಪೀಡ್‌ನಿಂದ ಡಿವೈಡರ್‌ಗೆ ಡಿಕ್ಕಿ ಹೊಡೆದು, ಮುಗ್ಗರಿಸಿ ನೆಲಕ್ಕುರುಳಿವೆ. ಇದನ್ನೂ ಓದಿ: ಹೃದಯಾಘಾತ – ಮಾಜಿ ಶಾಸಕ ನಾಗನಗೌಡ ಕಂದಕೂರು ನಿಧನ

    ಅದೃಷ್ಟವಶಾತ್ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸ್ನೇಹಿತನ ಮೇಲೆ ಹಲ್ಲೆ – ಪ್ರಶ್ನೆ ಮಾಡಿದಕ್ಕೆ ಕುಚಿಕುಗಳಿಂದಲ್ಲೇ ಕೊಲೆ

    ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಿಡ್ಲಘಟ್ಟ ತಾಲೂಕಿನ ಪೊಲೀಸರು ಪ್ರಕರಣ ಕುರಿತು ದೂರು ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೂ ಅಧಿಕಾರ – ಡಿಕೆ ಶಿವಕುಮಾರ್

  • ಸಚಿವರ ಕಾರ್ ಓವರ್ ಟೇಕ್ – 5 ಗಂಟೆ ಠಾಣೆಯಲ್ಲಿ ಕುಳಿತ ಚಾಲಕರು

    ಸಚಿವರ ಕಾರ್ ಓವರ್ ಟೇಕ್ – 5 ಗಂಟೆ ಠಾಣೆಯಲ್ಲಿ ಕುಳಿತ ಚಾಲಕರು

    – ಚಾಲಕರಿಬ್ಬರಿಗೂ ಪೊಲೀಸರಿಂದ ದಂಡ

    ಭುವನೇಶ್ವರ: ಓಡಿಶಾದ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಎಂಎಸ್‍ಎಂಇ ರಾಜ್ಯ ಮಂತ್ರಿ ಪ್ರತಾಪ್ ಚಂದ್ರ ಸಾರಂಗಿ ಅವರ ಕಾರ್ ಓವರ್ ಟೇಕ್ ಮಾಡಿ ಚಾಲಕರಿಗೆ ದಂಡ ಹಾಕಲಾಗಿದೆ.

    ಸಚಿವ ಸಾರಂಗಿ ಅವರ ಪ್ರಯಾಣಿಸುತ್ತಿದ್ದ ಮಾರ್ಗದಲ್ಲಿ ಎರಡು ಕಾರ್ ಗಳು ಓವರ್ ಟೇಕ್ ಮಾಡಿದ್ದವು. ತದನಂತರ ಎಸ್ಕಾರ್ಟ್ ಎರಡು ಕಾರ್ ಗಳನ್ನ ಸುಮಾರು 20 ಕಿಲೋ ಮೀಟರ್ ಹಿಂಬಾಲಿಸಿ ತಡೆದಿದ್ದಾರೆ. ನಂತರ ಕಾರ್ ಚಾಲಕರಿಬ್ಬರನ್ನ ಐದು ಗಂಟೆ ಠಾಣೆಯಲ್ಲಿ ರಿಸಿ ದಂಡ ವಿಧಿಸಿ ಕಳುಹಿಸಲಾಗಿದೆ.

    ಕೋಲ್ಕತ್ತಾ ಮೂಲದ ಸಂತೋಷ್ ತಮ್ಮ ಸೋದರ, ಪತ್ನಿ ಹಾಗೂ ಮಕ್ಕಳೊಂದಿಗೆ ಬಾಲಸೋರ್ ಜಿಲ್ಲೆಯ ಪಂಚಲಿಂಗೇಶ್ವರ ಕ್ಷೇತ್ರಕ್ಕೆ ಎರಡು ಕಾರ್ ಗಳಲ್ಲಿ ತೆರಳುತ್ತಿದ್ದರು. ಸಂತೋಷ್ ಅವರ ಕಾರುಗಳು ಹೆದ್ದಾರಿ ಪ್ರವೇಶಿಸುತ್ತಿದ್ದಂತೆ ಎಸ್ಕಾರ್ಟ್ ಸಿಬ್ಬಂದಿ ಹಾರ್ನ್ ಹಾಕಿದ್ದಾರೆ. ಹಾರ್ನ್ ಕೇಳದ ಹಿನ್ನೆಲೆ ಸಂತೋಷ್ ಓವರ್‍ಟೇಕ್ ಮಾಡಿ ಮುಂದೆ ಸಾಗಿದ್ದಾರೆ.

    ಹಿಂದಿನಿಂದ ಸೈರನ್ ಕೇಳಿದಾಗ ಅಂಬುಲೆನ್ಸ್ ಅಂತ ಸೈಡ್ ನೀಡಿದೆ. ಆದ್ರೆ ಅದು ಸಚಿವರ ಎಸ್ಕಾರ್ಟ್ ಸಿಬ್ಬಂದಿ ವಾಹನವಾಗಿತ್ತು. ಸಚಿವರ ಕಾರ್ ಓವರ್ ಟೇಕ್ ಮಾಡೋದು ತಪ್ಪು ಎಂದು ನಮಗೆ ತಿಳಿದಿರಲಿಲ್ಲ. ಐದು ಗಂಟೆ ನಮ್ಮನ್ನ ಠಾಣೆಯಲ್ಲಿರಿಸಿ ಸಮಯ ವ್ಯರ್ಥ ಮಾಡಲಾಯ್ತು. ಪೊಲೀಸರು ಪಿಆರ್ ಬಾಂಡ್ ನಲ್ಲಿ ನಮ್ಮ ಸಹಿ ತೆಗೆದು ದಂಡ ತೆಗದುಕೊಂಡಿದ್ದಾರೆ ಎಂದು ಸಂತೋಷ್ ಬೇಸರ ವ್ಯಕ್ತಪಡಿಸಿದ್ದಾರೆ.

    ಸಚಿವ ಪ್ರತಾಪ್ ಚಂದ್ರ ಸಾರಂಗಿ ಸಮೀಕ್ಷೆ ಸಭೆ ಹಿನ್ನೆಲೆ ಬಾಲಸೋರ್ ಜಿಲ್ಲೆಯ ಬಾಸ್ತಾಗೆ ಆಗಮಿಸಿದ್ದರು. ಸಚಿವರ ಎಸ್ಕಾರ್ಟ್ ಸಿಬ್ಬಂದಿ ಇಬ್ಬರು ಚಾಲಕರನ್ನ ಕಾರ್ ಸಹಿತ ಠಾಣೆಗೆ ಕರೆ ತಂದಿದ್ದರು. ನಿಯಮದಂತೆ ಇಬ್ಬರಿಗೂ ದಂಡ ಹಾಕಲಾಗಿದೆ ಎಂದು ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಅಶೋಕ್ ನಾಯಕ್ ಹೇಳಿದ್ದಾರೆ.

  • ಓವರ್ ಟೇಕ್ ಪೈಪೋಟಿ – ಗದ್ದೆಗೆ ಇಳಿದ ಕಾರ್, ಬೈಕ್

    ಓವರ್ ಟೇಕ್ ಪೈಪೋಟಿ – ಗದ್ದೆಗೆ ಇಳಿದ ಕಾರ್, ಬೈಕ್

    ಚಿಕ್ಕಮಗಳೂರು: ನಿನಗಿಂತ ನಾನು ಮೊದಲು ಹೋಗ್ತೀನಿ ಅಂತ ರಸ್ತೆ ಮಧ್ಯೆ ಪೈಪೋಟಿಗೆ ಬಿದ್ದಿದ್ದ ಕಾರ್-ಬೈಕ್ ಸವಾರರಿಬ್ಬರೂ ನಿಯಂತ್ರಣ ತಪ್ಪಿ ಗದ್ದೆಯೊಳಗೆ ಇಳಿದಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಬಳಿ ನಡೆದಿದೆ.

    ಕಾರ್ ಮೂಡಿಗೆರೆಯಿಂದ ಕೊಟ್ಟಿಗೆಹಾರದ ಮಾರ್ಗವಾಗಿ ಕಳಸ ಸಮೀಪದ ಹಿರೇಬೈಲಿಗೆ ಹೊರಟಿತ್ತು. ಅದೇ ವೇಳೆ ಬೈಕ್ ಸವಾರ ಕೂಡ ಕೊಟ್ಟಿಗೆಹಾರದ ಮೂಲಕ ಮಾಗುಂಡಿಗೆ ಹೊರಟಿದ್ದ. ಮೂಡಿಗೆರೆಯಿಂದ ನೀನಾ-ನಾನಾ ಅಂತ ಹೊರಟ ಕಾರು-ಬೈಕ್ ನವರು ಬಿದ್ದವಂರಂತೆ ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಆದರೆ ಕಾರು ಹಾಗೂ ಬೈಕ್ ಅತ್ತಿಗೆರೆಯತ್ತ ಬರುತ್ತಿದ್ದಂತೆ ಬೈಕನ್ನ ನೋಡುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ಗದ್ದೆಯೊಳಕ್ಕೆ ಇಳಿದಿದ್ದಾನೆ. ಕಾರನ್ನು ಓವರ್ ಟೇಕ್ ಮಾಡಲು ಹೋದ ಬೈಕ್ ಸವಾರ ಕೂಡ ಕಾರನ್ನ ನೋಡಿಕೊಂಡು ಅದೇ ಕಾರಿನ ಹಿಂದೆ ಗದ್ದೆಗೆ ಇಳಿದಿದ್ದಾನೆ.

    ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಕಾರಿನ ಕೆಲ ಭಾಗಕ್ಕೆ ಹಾನಿಯಾಗಿದ್ದು ಚಾಲಕನಿಗೆ ಸಣ್ಣಪುಟ್ಟ ಗಾಯಳಾಗಿವೆ. ಇನ್ನು ವೇಗವಾಗಿದ್ದ ಬೈಕಿನ ಸಮೇತ ಗದ್ದೆಗೆ ಇಳಿದಿರೋ ಬೈಕ್ ಸವಾರ ಪಲ್ಟಿಯಾಗಿ ಬಿದಿದ್ದಾನೆ. ಬೈಕಿಗೂ ಕೂಡ ಅಲ್ಲಲ್ಲೇ ಡ್ಯಾಮೇಜ್ ಆಗಿದ್ದು, ಬೈಕ್ ಸವಾರನು ಅನಾಹುತದಿಂದ ಪಾರಾಗಿದ್ದಾನೆ. ಬೈಕ್ ಸವಾರನಿಗೆ ಸ್ವಲ್ಪ ಹೆಚ್ಚಾಗಿ ಪೆಟ್ಟು ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿಲ್ಲ.

  • ಅಂಬುಲೆನ್ಸ್ ಓವರ್ ಟೇಕ್ ಮಾಡಿದ ಡಿಸಿಎಂ ಅಶ್ವಥ್ ನಾರಾಯಣ

    ಅಂಬುಲೆನ್ಸ್ ಓವರ್ ಟೇಕ್ ಮಾಡಿದ ಡಿಸಿಎಂ ಅಶ್ವಥ್ ನಾರಾಯಣ

    ಬೆಂಗಳೂರು: ಅಂಬುಲೆನ್ಸ್ ಬರುತ್ತಿದೆ ಅಂದರೆ ಸಾಮಾನ್ಯವಾಗಿ ಅದಕ್ಕೆ ದಾರಿ ಮಾಡಿಕೊಡುತ್ತೇವೆ. ಆದರೆ ಅದನ್ನು ಪಾಲಿಸಿ ಮಾದರಿಯಾಗಬೇಕಿದ್ದ ನಮ್ಮ ಡಿಸಿಎಂ ಅಶ್ವಥ್ ನಾರಾಯಣ ಮುಂದೆ ಬರುತ್ತಿದ್ದ ಅಂಬುಲೆನ್ಸ್ ಹಿಂದಿಕ್ಕಿ ಅಡ್ಡ ಬಂದಿದ್ದಾರೆ.

    ಸಂಜೆ 4:30ಕ್ಕೆ ಬೆಂಗಳೂರಿನ ಕಾವೇರಿ ಜಂಕ್ಷನ್ ಬಳಿ ಯಾವ ಮಟ್ಟಿಗೆ ಜಾಮ್ ಅನ್ನೋದು ಆ ರಸ್ತೆಯಲ್ಲಿ ಓಡಾಡೋರಿಗೆ ಗೊತ್ತೆ ಇರುತ್ತೆ. ಆ ರೀತಿಯ ಜಾಮ್ ರಸ್ತೆಯಲ್ಲೂ ಸಾಮಾನ್ಯ ಜನ ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದರೂ ಡಿಸಿಎಂ ಸಾಹೇಬ್ರು ದಾರಿಬಿಡದೇ ಫೋನ್ ನಲ್ಲಿ ಬ್ಯುಸಿಯಾಗಿದ್ದಾರೆ.

    ಅಂಬುಲೆನ್ಸ್ ಓವರ್ ಟೆಕ್ ಮಾಡಿದ್ದರೆ ದಂಡ ಇದೆ. ಆ ದಂಡವನ್ನ ಡಿಸಿಎಂ ಸಾಹೇಬ್ರಿಗೆ ಹಾಕಬೇಕಬೇಕು. ಸಾಮಾನ್ಯ ಜನ ಈ ತಪ್ಪನ್ನು ಮಾಡಿದರೆ ಹೇಗೆ ಬೆಲೆ ತೆರುತ್ತಾರೋ ಅದೇ ರೀತಿ ಡಿಸಿಎಂ ಬೆಲೆ ತೆತ್ತು ದಂಡ ಕಟ್ಟುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

  • ಹೈವೇಯಲ್ಲೇ ಚಪ್ಪಲಿ ಹಿಡಿದು ಸರ್ಕಾರಿ ಬಸ್ ಹಾಗೂ ಲಾರಿ ಚಾಲಕನ ಮಾರಾಮಾರಿ

    ಹೈವೇಯಲ್ಲೇ ಚಪ್ಪಲಿ ಹಿಡಿದು ಸರ್ಕಾರಿ ಬಸ್ ಹಾಗೂ ಲಾರಿ ಚಾಲಕನ ಮಾರಾಮಾರಿ

    – ಗಂಟೆಗಂಟಲೇ ನಿಂತಲ್ಲೇ ನಿಂತ ನೂರಾರು ವಾಹನಗಳು

    ಹುಬ್ಬಳ್ಳಿ: ಇಟ್ಟಿಗಟ್ಟಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸರ್ಕಾರಿ ಬಸ್ ಚಾಲಕ ಹಾಗೂ ಲಾರಿ ಡ್ರೈವರ್ ಪರಸ್ಪರ ಕೈ ಕೈ ಮಿಲಾಯಿಸಿದ ಪರಿಣಾಮ ಗಂಟೆಗಂಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಓವರ್‍ಟೇಕ್ ಮಾಡುವ ವಿಚಾರಕ್ಕೆ ಈಶಾನ್ಯ ಕರ್ನಾಟಕ ಸಾರಿಗೆ ಚಾಲಕ ಹಾಗೂ ಲಾರಿ ಡ್ರೈವರ್ ಇಬ್ಬರೂ ನಡುರಸ್ತೆಯಲ್ಲೇ ಚಪ್ಪಲಿ ಹಿಡಿದು ಕೈ ಕೈ ಮಿಲಾಯಿಸಿದ್ದಾರೆ. ಬೆಳಗಾವಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬಸ್ ಲಾರಿಯನ್ನು ಓವರ್‌ಟೇಕ್ ಮಾಡಿ ಮುಂದೆ ಸಾಗಲು ಯತ್ನಿಸಿತ್ತು. ಈ ವೇಳೆ ಲಾರಿ ಚಾಲಕ ಅಡ್ಡಾದಿಡ್ಡಿಯಾಗಿ ಲಾರಿ ಓಡಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಬಸ್ ಚಾಲಕ ಲಾರಿಯನ್ನು ಹಿಂದಿಕ್ಕಿ ರಸ್ತೆಮಧ್ಯೆಯೇ ಬಸನ್ನು ನಿಲ್ಲಿಸಿದ್ದಾನೆ.

    ಬಳಿಕ ಲಾರಿಯನ್ನು ತಡೆದು, ವಿಚಾರಿಸಿದ್ದಾನೆ. ಈ ವೇಳೆ ಇವರಿಬ್ಬರ ಗಲಾಟೆ ತರಾಕಕ್ಕೇರಿ ಚಪ್ಪಲಿ ಹಿಡಿದು, ಹೊಡೆದಾಡಿಕೊಂಡಿದ್ದಾರೆ. ಇವರಿಬ್ಬರ ಕಿತ್ತಾಟದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆ ಗಟ್ಟಲೇ ವಾಹನಗಳನ್ನು ನಿಂತಿದ್ದವು. ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಯಾಣಿಕರು ಇಬ್ಬರನ್ನೂ ಸಮಾಧಾನ ಮಾಡಿ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೆಂಪೋವನ್ನು ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಫುಟ್ ಪಾತ್ ಗೆ ನುಗ್ಗಿತು ಬಿಎಂಟಿಸಿ ಬಸ್!

    ಟೆಂಪೋವನ್ನು ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಫುಟ್ ಪಾತ್ ಗೆ ನುಗ್ಗಿತು ಬಿಎಂಟಿಸಿ ಬಸ್!

    ಬೆಂಗಳೂರು: ಟೆಂಪೋ ಒಂದನ್ನು ಓವರ್ ಟೇಕ್ ಮಾಡುವಾಗ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್ಸೊಂದು ಫುಟ್‍ ಪಾತ್‍ಗೆ ನುಗ್ಗಿದ ಘಟನೆ ಕನಕಪುರ ರಸ್ತೆಯ ಜರಗನಹಳ್ಳಿ ಸ್ಮಶಾನದ ಬಳಿ ನಡೆದಿದೆ.

    ಬಸ್ ಬನಶಂಕರಿಯಿಂದ ಹಾರೋಹಳ್ಳಿಗೆ ತೆರಳುತ್ತಿದ್ದ ವೇಳೆ ಟೆಂಪೋವನ್ನು ಓವರ್ ಟೇಕ್ ಮಾಡುವಾಗ ಈ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಬಸ್ ಚಾಲಕನ ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ಸದ್ಯ ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಓವರ್ ಟೇಕ್ ಮಾಡಲು ಜಾಗ ಬಿಡ್ಲಿಲ್ಲ ಎಂದು ಊಬರ್ ಚಾಲಕನ ಮೇಲೆ ಹಲ್ಲೆ

    ಓವರ್ ಟೇಕ್ ಮಾಡಲು ಜಾಗ ಬಿಡ್ಲಿಲ್ಲ ಎಂದು ಊಬರ್ ಚಾಲಕನ ಮೇಲೆ ಹಲ್ಲೆ

    ಬೆಂಗಳೂರು: ಓವರ್ ಟೇಕ್ ಮಾಡಲು ಜಾಗ ಬಿಡಲಿಲ್ಲ ಎಂದು ಯುವಕರ ತಂಡವೊಂದು ಊಬರ್ ಚಾಲಕನಿಗೆ ಥಳಿಸಿದ ಘಟನೆ ಗುರುವಾರ ರಾತ್ರಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ಬಳಿ ನಡೆದಿದೆ.

    ಪ್ರವೀಣ್(30) ಹಲ್ಲೆಗೊಳಗಾದ ಊಬರ್ ಚಾಲಕ. ಪ್ರವೀಣ್ ಸ್ವಿಫ್ಟ್ ಕಾರಿನಲ್ಲಿ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಇನ್ನೋವ ಕಾರಿನಲ್ಲಿ ಹಿಂದೆ ಬರ್ತಿದ್ದ ನಾಲ್ವರು ಪ್ರವೀಣ್ ಕಾರನ್ನು ಅಡ್ಡಗಟ್ಟಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.

    ಹಲ್ಲೆಕೋರರು ಮುಖ ಮೂತಿ ನೋಡದೆ ಕಣ್ಣಲ್ಲಿ ರಕ್ತ ಬರೋ ಹಾಗೆ ಹೊಡೆದಿದ್ದಾರೆ. ಮೂವರು ಪ್ರವೀಣ್ ಮೇಲೆ ಹಲ್ಲೆ ಮಾಡುತ್ತಿದ್ದರೆ, ಮತ್ತೊಬ್ಬ ಪ್ರವೀಣ್ ಅವರ ಸ್ವಿಫ್ಟ್ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದಾನೆ.

    ಸದ್ಯ ಪ್ರವೀಣ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರವಾರ ಬಸ್ ನಿಲ್ದಾಣದಲ್ಲಿ ಓವರ್‍ ಟೇಕ್ ಗಲಾಟೆ: KSRTC ಚಾಲಕನಿಗೆ ಖಾಸಗಿ ಬಸ್ ಸಿಬ್ಬಂದಿಯಿಂದ ಥಳಿತ

    ಕಾರವಾರ ಬಸ್ ನಿಲ್ದಾಣದಲ್ಲಿ ಓವರ್‍ ಟೇಕ್ ಗಲಾಟೆ: KSRTC ಚಾಲಕನಿಗೆ ಖಾಸಗಿ ಬಸ್ ಸಿಬ್ಬಂದಿಯಿಂದ ಥಳಿತ

    ಕಾರವಾರ: ಓವರ್‍ಟೇಕ್ ಮಾಡಿದ್ದನ್ನ ಪ್ರಶ್ನಿಸಿದ್ದ ಕೆಎಸ್‍ಆರ್‍ಟಿಸಿ ಬಸ್ ಚಾಲಕರಿಗೆ ಖಾಸಗಿ ಬಸ್ ಚಾಲಕ ಹಾಗೂ ಏಜೆಂಟ್ ಥಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

    ಚಂದ್ರಹಾಸ್ ಬೀಸನಳ್ಳಿ ಹಾಗೂ ಏಕನಾಥ್ ಎಂಬವರು ಹಲ್ಲೆಗೊಳಗಾದ ಬಸ್ ಚಾಲಕರು. ಚಂದ್ರಹಾಸ್ ಮತ್ತು ಏಕನಾಥ್ ಇಬ್ಬರೂ ಅತಿ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ ಸುಗಮ ಟೂರಿಸ್ಟ್ ಬಸ್ ಸಂಸ್ಥೆಯ ವಾಹನ ಚಾಲಕರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಕಚೇರಿಯ ಒಳಗೆ ಕರೆದುಕೊಂಡು ಹೋಗಿ ಕಚೇರಿಯ ಏಜೆಂಟ್ ಸಂತೋಷ್ ಶೆಟ್ಟಿ ಹಾಗೂ ಆತನ ಸಹಚರರು ಸೇರಿ ಹಲ್ಲೆ ನೆಡೆಸಿದ್ದಾರೆ.

    ಆಗಿದ್ದೇನು?: ಇಂದು ಬೆಳಗ್ಗೆ ಕೆಎಸ್‍ಆರ್‍ಟಿಸಿ ನಗರ ಸಾರಿಗೆ ಬಸ್ ಮುದಗಾ ದಿಂದ ಕಾರವಾರಕ್ಕೆ ಬರುತ್ತಿರುವಾಗ ಬಿಣಗಾ ಗ್ರಾಮದ ಬಳಿ ಬೆಂಗಳೂರಿನಿಂದ ಕಾರವಾರಕ್ಕೆ ಬರುತಿದ್ದ ಸುಗಮ ಟ್ರಾವೆಲ್ಸ್ ಅತೀ ವೇಗದಿಂದ ಸರ್ಕಾರಿ ಬಸ್ ಅನ್ನು ಓವರ್ ಟೇಕ್ ಮಾಡಿತ್ತು. ಇದರಿಂದಾಗಿ ಸರ್ಕಾರಿ ಬಸ್ ಅಪಘಾತವಾಗುವುದರಲ್ಲಿತ್ತು. ಹೀಗಾಗಿ ನಿಲ್ದಾಣಕ್ಕೆ ಬಂದವೇಳೆ ಇದನ್ನು ಸರ್ಕಾರಿ ಬಸ್ ಚಾಲಕರಾದ ಚಂದ್ರಹಾಸ್ ಹಾಗೂ ಏಕನಾಥ್ ಪ್ರಶ್ನಿಸಿದ್ರು. ಇದರಿಂದ ಕೋಪಗೊಂಡ ಖಾಸಗಿ ಬಸ್ ಚಾಲಕರು ಚಂದ್ರಹಾಸ್ ಮತ್ತು ಏಕನಾಥ್‍ರ ಮೇಲೆ ಹಲ್ಲೆ ಮಾಡಿದ್ದಾರೆ.

    ಹಲ್ಲೆಗೊಳಗಾದ ಇಬ್ಬರು ಸರ್ಕಾರಿ ಬಸ್ ಚಾಲಕರು ಕಾರವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ಈ ಕಾರಣದಿಂದ ಸರ್ಕಾರಿ ಬಸ್ ಸಿಬ್ಬಂದಿ ನಗರದ ವಿವಿಧಡೆ ಸಂಚರಿಸುವ ಸರ್ಕಾರಿ ಬಸ್ಸುಗಳನ್ನು ಸ್ಥಗಿತಗೊಳಿಸಿ ಸುಗಮ ಟ್ರಾವೆಲ್ಸ್ ಕಚೇರಿ ಎದುರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲವು ಕಾಲ ನಗರದ ಹೃದಯ ಭಾಗದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ಸಹ ನಿರ್ಮಾಣವಾಗಿತ್ತು.

    ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು ಸುಗಮ ಟ್ರಾವೆಲ್ಸ್ ನ ಸಂತೋಷ್ ಶೆಟ್ಟಿಯನ್ನು ವಶಕ್ಕೆ ಪಡೆದುಕೊಂಡ ನಂತರ ಸಾರಿಗೆ ನೌಕರರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಇನ್ನೂ ಸಂತೋಷ್ ಶೆಟ್ಟಿಯ ಸಹಚರರಾದ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ನಾಪತ್ತೆಯಾಗಿರುವ ನಾಲ್ವರ ಪತ್ತೆಗಾಗಿ ಜಾಲ ಬೀಸಿದ್ದಾರೆ.

     +