Tag: ಓಲಾ ಕ್ಯಾಬ್

  • ತಂಗಿ ಆರೋಗ್ಯ ಸರಿಯಿಲ್ಲವೆಂದು ಕ್ಯಾಬ್ ದರೋಡೆ ಮಾಡಿದ ಸಹೋದರರು..!

    ತಂಗಿ ಆರೋಗ್ಯ ಸರಿಯಿಲ್ಲವೆಂದು ಕ್ಯಾಬ್ ದರೋಡೆ ಮಾಡಿದ ಸಹೋದರರು..!

    ಲಕ್ನೋ: ತಂಗಿ ಆರೋಗ್ಯ ಸರಿಯಿಲ್ಲವೆಂದು ಅಣ್ಣಂದಿರು ಓಲಾ ಕ್ಯಾಬ್ ದರೋಡೆ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಗಾಜಿಪುರದ ಸೈದ್‍ಪುರ ಕೊತ್ವಾಲಿ ಪೊಲೀಸರು ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಕ್ಯಾಬ್ ಬುಕ್ ಮಾಡಿ ಚಾಲಕನ ಮೇಲೆ ಹಲ್ಲೆ ನಡೆಸಿ ಕಾರನ್ನು ದರೋಡೆ ಮಾಡಿದ್ದರು. ವಿಷಯ ತಿಳಿದ ತಕ್ಷಣ ಪೊಲೀಸರು ತನಿಖೆ ಮಾಡಿ ಆರೋಪಿಗಳನ್ನು ಹಿಡಿದಿದ್ದು, ಟ್ಯಾಕ್ಸಿ ಜೊತೆಗೆ ಪಿಸ್ತೂಲ್, ಕಾಟ್ರಿಡ್ಜ್ ಮತ್ತು ಫೋನ್ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:  ದೆಹಲಿ ನಾಯಕರು ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಂಜಿತ್ ಚನ್ನಿ

    Ola to now sell used cars

    ಕಾರಣವೇನು?
    ಬಂಧಿತ ಆರೋಪಿಗಳನ್ನು ಈ ಕೃತ್ಯಕ್ಕೆ ಕಾರಣವೇನು ಎಂದು ಕೇಳಿದಾಗ ಅವರು, ನಮ್ಮ ತಂಗಿಯ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ನಮ್ಮ ತಂಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಈ ಕೃತ್ಯ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

    ನಡೆದಿದ್ದೇನು?
    ಆರೋಪಿಗಳು ವಾರಣಾಸಿ ಕ್ಯಾಂಟ್‍ನಿಂದ ಕ್ಯಾಬ್ ಬುಕ್ ಮಾಡಿದ್ದಾರೆ. ಚಾಲಕ ಇವರನ್ನು ಕರೆದುಕೊಂಡು ಹೋಗುತ್ತಿರಬೇಕಾದರೆ ಸೈದ್‍ಪುರ ಬಳಿ ಕ್ಯಾಬ್ ಚಾಲಕನನ್ನು ಬೆದರಿಸಿದ್ದು, ಚೆನ್ನಾಗಿ ಥಳಿಸಿ ಕಾರಿನಿಂದ ಹೊರ ಹಾಕಿದ್ದಾರೆ. ಬಳಿಕ ಆರೋಪಿಗಳು ಕಾರಿನ ಸಮೇತ ಪರಾರಿಯಾಗಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಕಾರ್ ಚಾಲಕ ಜ್ಞಾನೇಂದ್ರ ಪಾಂಡೆ ದೂರು ನೀಡಿದ್ದಾರೆ.

    POLICE JEEP

    ಈ ದೂರಿನಲ್ಲಿ ಜ್ಞಾನೇಂದ್ರ ಅವರು, ವಾಹನ ಸಂಖ್ಯೆ ‘ಯುಪಿ 65 ಕೆಟಿ 1217’ ಸಂಖ್ಯೆಯ ಸುಜುಕಿ ಡಿಜೈರ್ ಕಾರನ್ನು ದರೋಡೆಕೋರರು ಕದ್ದಿದ್ದಾರೆ. ಈ ವೇಳೆ ಆರೋಪಿಗಳನ್ನು ನನ್ನ ಮೇಲೆ ಹಲ್ಲೆ ಮಾಡಿದ್ದು, ಕಾರಿನಿಂದ ಹೊರ ಹಾಕಿದ್ದಾರೆ. ಬಳಿಕ ಕಾರಿನ ಸಮೇತ ಪರಾರಿಯಾಗಿದ್ದಾರೆ. ಆ ಕಾರನ್ನು ನಾನು ಓಲಾಗೆ ಲಿಂಕ್ ಮಾಡಿಸಿಕೊಂಡು ಓಡಿಸುತ್ತಿದ್ದೆ ಎಂದು ವಿವರಣೆ ಕೊಟ್ಟಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದು, ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರನ್ನು ಮುಸುಕಿನಲ್ಲಿರಿಸಲಾಗಿದೆ: ಸುನಿಲ್ ಕುಮಾರ್

    ಆರೋಪಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ರಂಬದನ್ ಸಿಂಗ್ ಮಾಧ್ಯಮದ ಮುಂದೆ ಹಾಜರುಪಡಿಸಿ ಮಾತನಾಡಿದ್ದು, ಈ ಗುಂಪಿನಲ್ಲಿರುವ ಇಬ್ಬರು ಹಳೆಯ ಕ್ರಿಮಿನಲ್ ದಾಖಲೆ ಹೊಂದಿದ್ದಾರೆ. ಇನ್ನಿಬ್ಬರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಪ್ರಸ್ತುತ ಆರೋಪಿಗಳ ಬಳಿ ಇದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಪಿಸ್ತೂಲ್, ಕಾಟ್ರಿಡ್ಜ್ ಮತ್ತು ಫೋನ್ ಗಳನ್ನು ಸಹ ವಶಪಡಿಸಿಕೊಂಡಿದ್ದೇವೆ ಎಂದು ವಿವರಿಸಿದರು.

  • ಬೆಂಗಳೂರಿನಲ್ಲಿ ಪತ್ರಕರ್ತೆಯ ಮುಂದೆ ಕ್ಯಾಬ್ ಚಾಲಕನಿಂದ ಹಸ್ತಮೈಥುನ!

    ಬೆಂಗಳೂರಿನಲ್ಲಿ ಪತ್ರಕರ್ತೆಯ ಮುಂದೆ ಕ್ಯಾಬ್ ಚಾಲಕನಿಂದ ಹಸ್ತಮೈಥುನ!

    ಬೆಂಗಳೂರು: ಕ್ಯಾಬ್ ಚಾಲಕನೊಬ್ಬ ಪತ್ರಕರ್ತೆಯ ಮುಂದೆ ಅಸಭ್ಯವಾಗಿ ವರ್ತಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಹೌದು. ಕೆಲಸ ಮುಗಿಸಿ ಮನೆಗೆ ಮರಳಲು ಪತ್ರಕರ್ತೆ ರಾತ್ರಿ ಓಲಾ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ನಡೆದ ಘಟನೆಯನ್ನು ಪತ್ರಕರ್ತೆ ವಿವರವಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ರಾತ್ರಿ ಹೊತ್ತು ಮನೆಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದೆ. ಅಂತೆಯೇ ನಾನು ಆತನ ಕ್ಯಾಬ್ ನಲ್ಲಿ ಹೋಗುವಾಗ ಚಾಲಕ ಹಸ್ತಮೈಥುನ ಮಾಡಿಕೊಳ್ಳಲು ಶುರು ಮಾಡಿ. ನಾನು ಗಮನಿಸಿದಾಗ ಮುಚ್ಚಿಕೊಂಡು ಏನೂ ನಡೆದೇ ಇಲ್ಲವೆಂಬಂತೆ ವರ್ತಿಸಿದ. ಬಳಿಕ ಕಿರುಚಾಡಿ ನಾನು ಕ್ಯಾಬ್ ನಿಲ್ಲಿಸಿ ಬೇರೊಂದು ಕ್ಯಾಬ್ ನಲ್ಲಿ ಮನೆಗೆ ಮರಳಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ನಾಳೆ ಬಾಬರಿ ಮಸೀದಿ ಧ್ವಂಸಗೊಂಡ ದಿನ- ಮಥುರಾದಲ್ಲಿ ನಿಷೇಧಾಜ್ಞೆ ಜಾರಿ

    ಹೀಗೆ ಟ್ವಿಟ್ಟರ್ ನಲ್ಲಿ ವಿವರವಾಗಿ ಬರೆದುಕೊಂಡು ಪತ್ರಕರ್ತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇತ್ತ ಪ್ರಕರಣ ಸಂಬಂಧ ಆರೋಪಿ ಕ್ಯಾಬ್ ಚಾಲಜನ ಪತ್ತೆಗೆ ಪೋಲಿಸರು ಬೀಸಿದ್ದಾರೆ. ಇತ್ತ ಪತ್ರಕರ್ತೆ ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆಯೇ ಓಲಾ ಕ್ಯಾಬ್‍ನ ಅಧಿಕಾರಿಗಳು ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಆತನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಈ ಬಗ್ಗೆ ಪತ್ರರ್ಕೆಗೂ ಕೂಡ ಅಧಿಕಾರಿಗಳು ಇ-ಮೇಲ್ ಮಾಡುವ ಮೂಲಕ ಪ್ರಕರಣ ಸಂಬಂಧ ಆರೋಪಿ ವಿರುದ್ಧ ಕ್ರಮ ಕೈಗೊಂಡಿರುವ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.

    ಬೆಂಗಳೂರು ನಗರ ಪೊಲೀಸರು ಘಟನೆಯನ್ನು ಗಮನಿಸಿ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದಾರೆ. ಚಾಲಕನ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಚಾಲಕನನ್ನು ಹಿಡಿಯುವ ಕಾರ್ಯಕ್ಕೆ ಈಗಾಗಲೇ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಒಂದೇ ದಿನ ಕೋಟಿ ಲಸಿಕೆ ನೀಡಿಕೆ-5ನೇ ಸಲ ದಾಖಲೆ

  • ಕ್ಯಾಬ್ ಕಿರಿಕ್‍ಗೆ ನಟಿ ಸಂಜನಾ ಗಲ್ರಾನಿ ಸ್ಪಷ್ಟನೆ

    ಕ್ಯಾಬ್ ಕಿರಿಕ್‍ಗೆ ನಟಿ ಸಂಜನಾ ಗಲ್ರಾನಿ ಸ್ಪಷ್ಟನೆ

    ಬೆಂಗಳೂರು: ನಟಿ ಸಂಜನಾ ಗಲ್ರಾನಿ ಓಲಾ ಕ್ಯಾಬ್ ಚಾಲಕನ ಜೊತೆ ಕಿರಿಕ್ ಮಾಡಿಕೊಂಡಿದ್ದು, ಕೋಪಾತಾಪ ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ವಿಚಾರವಾಗಿ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಂಜನಾ, ಆತ ಎಸಿ ಹಾಕುವುದಿಲ್ಲ ಎಂದು ರೂಡ್ ಆಗಿ ಹೇಳಿದ. ಆದರೆ ಆತ ಕೋವಿಡ್ ರೂಲ್ಸ್ ಇದೆ ಹಾಕಲ್ಲ ಅಂತ ಹೇಳಿಲ್ಲ. ನಾನು ಎಸಿ ಕಾರನ್ನೇ ಬುಕ್ ಮಾಡಿದ್ದೆ. ಎಸಿ ಹಾಕಲು ಸರ್ವೀಸ್ ಕೊಡಬೇಕು. ಒಂದು ಹುಡುಗಿಯನ್ನ ರಸ್ತೆಯಲ್ಲಿ ನಿಲ್ಲಿಸುತ್ತೇನೆ ಎಂದು ಬೆದರಿಕೆ ಹಾಕಿದಾಗ ಭಯ ಆಯ್ತು. ನಾನು ಒಂದು ಸಿಂಗಲ್ ಪದದಲ್ಲೂ ಆತನನ್ನ ನಿಂದಿಸಿಲ್ಲ ಎಂದು ತಮ್ಮ ಮೇಲೆ ಕೇಳಿ ಬಂದಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.

    ಆತ ನಾನು ಹೇಳುವ ಲೊಕೇಶನ್ ತಲುಪಿಸಲು ಡಬಲ್ ಮೀಟರ್ ಕೇಳಿದ್ದಾನೆ. ನಾನು ಅದಕ್ಕೆ ಹೇಳದ್ದೆ 10.000 ಕೊಡಬೇಕಾ ಅಂತ..? ಕೇಳಿದ್ದೆನು. ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಕೇಳಿ ಬರುತ್ತಿದೆ. ಇದೆಲ್ಲಾ ಸುಳ್ಳು ಎಂದು ಕ್ಯಾಬ್ ಡ್ರೈವರ್ ಮೇಲಿನ ಕಂಪ್ಲೇಂಟ್ ವಿಚಾರಕ್ಕೆ ತೆರೆ ಎಳೆದಿದ್ದಾರೆ.  ಕ್ಯಾಬ್ ಡ್ರೈವರ್ ಜೊತೆ ಸಂಜನಾ ಕಿರಿಕ್ – ಅವಾಚ್ಯ ಶಬ್ದಗಳಿಂದ ನಿಂದನೆ

    ಏನಿದು ಕಿರಿಕ್..?: ಶೂಟಿಂಗ್ ಸ್ಪಾಟ್‍ಗೆ ಹೋಗಬೇಕೆಂದು ಸಂಜನಾ ಸೋಮವಾರ ಬೆಳಗ್ಗೆ ಓಲಾ ಬುಕ್ ಮಾಡಿದ್ದರು. ಇಂದಿರಾ ನಗರದಿಂದ ಕೆಂಗೇರಿಗೆ ಕ್ಯಾಬ್ ಬುಕ್ ಮಾಡಬೇಕಿತ್ತು. ಆದರೆ ರಾಜರಾಜೇಶ್ವರಿ ನಗರಕ್ಕೆ ಕ್ಯಾಬ್ ಬುಕ್ ಮಾಡಿದ್ದಾರೆ. ಓಲಾ ಚಾಲಕ ಸುಸಯ್ ಮಣಿ.ಎಸ್ ಓಲಾ ಕಸ್ಟಮರ್ ಕೇರ್‍ಗೆ ಕರೆ ಮಾಡಿ ಲೊಕೇಶನ್ ಬದಲಿಸುವಂತೆ ಹೇಳಿದ್ದರು. ಆದರೆ ಲೊಕೇಶನ್ ಬದಲಾಗಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಾಲಕನ ಜೊತೆ ನಟಿ ಸಂಜನಾ ವಾಗ್ವಾದಕ್ಕಿಳಿದು ಆವಾಜ್ ಹಾಕಿದ್ದಾರೆ.

    ಸಂಜನಾ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಚಾಲಕ ಮಣಿ ಆರೋಪಿಸಿದ್ದಾರೆ. ಅಲ್ಲದೆ ಸಂಜನಾ ನಡೆದುಕೊಂಡಿರುವ ಬಗ್ಗೆ ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದಾರೆ. ಹೇಳಿದ ಜಾಗಕ್ಕೆ ಹೋಗಿಲ್ಲ ಎಂದು ಸಂಜನಾ ಕೆಂಡಾಮಲರಾಗಿದ್ದರಂತೆ. ಅದೇ ರೀತಿ ಅವಾಚ್ಯ ಶಬ್ದದಿಂದ ಸಂಜನಾ ನಿಂದಿಸಿದರು ಎಂದು ರಾಜರಾಜೇಶ್ವರಿ ನಗರ ಠಾಣೆಗೆ ತೆರಳಿ ಕ್ಯಾಬ್ ಚಾಲಕ ಮಣಿ ದೂರು ದಾಖಲಿಸಿದ್ದಾರೆ.

    ಇತ್ತ ಸಂಜನಾ ಟ್ವೀಟ್ ಮಾಡುವ ಮೂಲಕ ಓಲಾ ಕ್ಯಾಬ್ ನಂಬರ್ ಹಾಗೂ ಚಾಲಕನ ಹೆಸರು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಎಸಿ ಹೆಚ್ಚು ಮಾಡುವಂತೆ ಹೇಳಿದ್ದಕ್ಕೆ ಉಡಾಫೆ ಉತ್ತರ ನಿಡಿದರು. ತೊಂದರೆ ನೀಡಿದ್ದಾರೆ. ಅಲ್ಲದೆ ಕಾರ್ ಕಿಟಕಿ ಸಹ ಸರಿಯಾಗಿ ಇರಲಿಲ್ಲ. ನಾವು ಪೂರ್ತಿ ಹಣ ನೀಡಿದರೂ ಇಂತಹ ಕಾರನ್ನು ಏಕೆ ನೀಡುತ್ತೀರಿ ಎಂದು ಓಲಾಗೆ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಇದೀಗ ಅವರ ವಿರುದ್ಧವಾಗಿ ಕೇಳಿ ಬಂದಿರುವ ಆರೋಪ ಸುಳ್ಳು ಎಂದು ಹೇಳಿದ್ದಾರೆ.

  • 100 ರೂ.ಗೆ ಉಗಾಂಡ ಪ್ರಜೆಗಳ ಕಿರಿಕ್ – ಕ್ಯಾಬ್ ಚಾಲಕನಿಗೆ ಅಂಗಾಂಗ ತೋರಿಸಿ ಯುವತಿಯರ ವಿಕೃತಿ

    100 ರೂ.ಗೆ ಉಗಾಂಡ ಪ್ರಜೆಗಳ ಕಿರಿಕ್ – ಕ್ಯಾಬ್ ಚಾಲಕನಿಗೆ ಅಂಗಾಂಗ ತೋರಿಸಿ ಯುವತಿಯರ ವಿಕೃತಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉಗಾಂಡ ಪ್ರಜೆಗಳ ಅಟ್ಟಹಾಸ ಇನ್ನೂ ನಿಂತಿಲ್ಲ. ಜಿಸಿ ನಗರದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಬಳಿಕ ಸೈಲೆಂಟ್ ಆಗಿದ್ದ ಉಗಾಂಡ ಪ್ರಜೆಗಳು ಶನಿವಾರ ಕ್ಯಾಬ್ ಚಾಲಕನಿಗೆ ಚಪ್ಪಲಿ ತೋರಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಮಹಿಳೆಯರು ಖಾಸಗಿ ಅಂಗಾಂಗ ತೋರಿಸಿ ವಿಕೃತಿ ಮೆರೆದಿದ್ದಾರೆ.

    ರಾತ್ರಿ ಕಾಲೇಜು ಒಂದರ ಕಾರ್ಯಕ್ರಮದ ನಿಮಿತ್ತ ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್‍ನಲ್ಲಿ ಉಗಾಂಡ ಪ್ರಜೆಗಳು ಸೇರಿದ್ದರು. 10 ಗಂಟೆಗೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಶ್ರೀಕಾಂತ್ ಅವರು ಪ್ಯಾಸೆಂಜರ್ ಬಳಿ ಓಟಿಪಿ ಪಡೆದು ಓಕೆ ಮಾಡಿದ್ದಾರೆ.

    ಕ್ಯಾಬ್ ಬುಕ್ ಮಾಡುವಾಗ 4 ಮಂದಿ ಮಾತ್ರ ಸ್ಥಳದಲ್ಲಿ ಇದ್ದರು. ಕಾರು ಬಂದ ಬಳಿಕ ಮತ್ತೊಬ್ಬ ಬಂದಿದ್ದಾನೆ. ಐವರು ಇರುವುದನ್ನು ನೋಡಿ ಕಾರಿನಲ್ಲಿ 5 ಮಂದಿಯನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಶ್ರೀಕಾಂತ್ ಹೇಳಿದ್ದಾರೆ.

    4 ಮಂದಿ ಬರುವುದಿದ್ದರೆ ಮಾತ್ರ ನಾನು ಕಾರಿನಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ. ಇದಕ್ಕೆ ಅವರು ಒಪ್ಪದೇ ಟ್ರಿಪ್ ಕ್ಯಾನ್ಸಲ್ ಮಾಡಿದ್ದಾರೆ. ಇದನ್ನು ಕಂಡು ಟ್ರಿಪ್ ರದ್ದು ಮಾಡಿದ್ದಕ್ಕೆ 100 ರೂ. ಚಾರ್ಜ್ ಕೇಳಿದ್ದಾರೆ. ಇದಕ್ಕೆ ರಾದ್ಧಾಂತವೇ ನಡೆದಿದ್ದು, ಕೆರಳಿ ನಿಂತ ಉಗಾಂಡ ಯುವತಿಯರು ಮನಬಂದಂತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಂಗಾಂಗ ತೋರಿಸಿ ವಿಕೃತಿ ಮರೆದಿದ್ದಾರೆ.

    ಹೋಟೆಲ್ ಆವರಣದಲ್ಲಿ ಮತ್ತಷ್ಟು ಉಗಾಂಡ ಪ್ರಜೆಗಳು ಜಮಾಯಿಸಿದ್ದಾರೆ. ಕ್ಯಾಬ್ ಚಾಲಕ ಶ್ರೀಕಾಂತ್ ಅವರನ್ನು ಹಿಗ್ಗಾಮುಗ್ಗ ಎಳೆದಾಡಿದ್ದಾರೆ. ಮಹಿಳೆಯರು ಚಪ್ಪಲಿಯಿಂದ ಥಳಿಸಿದ್ದಾರೆಂದು ಶ್ರೀಕಾಂತ್ ಆರೋಪಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಕ್ಯಾಬ್ ಚಾಲಕ ಶ್ರೀಕಾಂತ್ ಅವರ ಸ್ನೇಹಿತರು ಕೂಡ ಅಲ್ಲಿಗೆ ಬಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್ 

    ಘಟನೆಗೆ ಸಂಬಂಧ ಪಟ್ಟಂತೆ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಿರಿಕ್ ಮಾಡಿದ್ದ ಉಗಾಂಡ ಪ್ರಜೆ ಲುಬೆಗಾ ರೇಮಂಡ್ ನನ್ನು ವಶಕ್ಕೆ ಪಡೆಯಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲುಬೆಗಾ ರೇಮಂಡ್ ನನ್ನು  ವಶಕ್ಕೆ ಪಡೆದ ವಿಚಾರ ತಿಳಿದ ಆಫ್ರಿಕನ್ ವಿದ್ಯಾರ್ಥಿಗಳ ಮುಖಂಡ ಪೊಲೀಸ್ ಠಾಣೆಗೆ ಆಗಮಿಸಿದ್ದ. ಇದನ್ನೂ ಓದಿ: ಪಂಜಾಬ್ ಸಿಎಂ ರೇಸ್‍ನಲ್ಲಿ ಅಚ್ಚರಿಯ ಹೆಸರು?

    ಘಟನೆಯಲ್ಲಿ ಭಾಗಿಯಾಗಿದ್ದ ಯುವತಿಯರನ್ನ ಇಂದು 10 ಗಂಟೆಗೆ ಠಾಣೆಗೆ ವಿಚಾರಣೆಗೆ ಕರೆತರುವಂತೆ ಉಗಾಂಡ ವಿದ್ಯಾರ್ಥಿಗಳ ಮುಖಂಡನಿಗೆ ಪೊಲೀಸರು ನೋಟಿಸ್ ಕೊಟ್ಟು ಕಳಿಸಿದ್ದಾರೆ.

  • ಯುವತಿಯನ್ನು ವಿವಸ್ತ್ರಗೊಳಿಸಿ ನಡುರಸ್ತೆಯಲ್ಲಿ ಬಿಟ್ಟುಹೋದ ಚಾಲಕ

    ಯುವತಿಯನ್ನು ವಿವಸ್ತ್ರಗೊಳಿಸಿ ನಡುರಸ್ತೆಯಲ್ಲಿ ಬಿಟ್ಟುಹೋದ ಚಾಲಕ

    ಚಿಕ್ಕಬಳ್ಳಾಪುರ: ಓಲಾ ಕ್ಯಾಬ್ ಚಾಲಕ ಮತ್ತು ಮೂವರು ಅಪ್ರಾಪ್ತ ಬಾಲಕರು ಸೇರಿ ಉಗಾಂಡಾ ದೇಶದ ಯುವತಿಯ ಬಟ್ಟೆ ಸಂಪೂರ್ಣವಾಗಿ ಕಿತ್ತುಹಾಕಿ ಆಕೆಯನ್ನ ಬೆತ್ತಲು ಮಾಡಿ ನಡುರಸ್ತೆಯಲ್ಲಿ ಬಿಟ್ಟುಹೋಗಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಆಲಹಳ್ಳಿ ಗ್ರಾಮದ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಜನವರಿ 16ರಂದು ಘಟನೆ ನಡೆದಿದ್ದು, ಜನವರಿ 20ರಂದು ನೊಂದ ಯುವತಿ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಓಲಾ ಕ್ಯಾಬ್ ಚಾಲಕ ಸೇರಿದಂತೆ ಮೂವರು ಅಪ್ರಾಪ್ತ ಬಾಲಕರ ವಿರುದ್ಧ ದೂರು ದಾಖಲಿಸಿದ್ದಾರೆ.

    ಘಟನೆಯ ವಿವರ
    ಕಿಡ್ನಿ ಸ್ಟೋನ್ ಸಂಬಂಧಿತ ಚಿಕಿತ್ಸೆಗೆ ಎಂದು ಯುವತಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದು, ಜನವರಿ 16ರ ರಾತ್ರಿ 10 ಗಂಟೆ ಸುಮಾರಿಗೆ ಕಮ್ಮನಹಳ್ಳಿಯಿಂದ ಓಲಾ ಕ್ಯಾಬ್ ಬುಕ್ ಮಾಡಿಕೊಂಡು ಕ್ಯಾಬ್ ಮುಖಾಂತರ ನವಜ್ಯೋತಿ ಸ್ಟ್ರೀಟ್ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಓಲಾ ಕ್ಯಾಬ್ ನಲ್ಲಿದ್ದ ಚಾಲಕ ಹಾಗೂ ಇತರ ಅಪರಿಚಿತರು ಚಾಕು ತೋರಿಸಿ ಬೆದರಿಕೆ ಹಾಕಿ ಆಕೆಯ ಬಳಿಯಿದ್ದ ಚಿನ್ನಾಭರಣ, ಮೊಬೈಲ್ ಹಾಗೂ ಹಣವನ್ನು ಕಸಿದುಕೊಂಡಿದ್ದಾರೆ.

    ಬಟ್ಟೆಗಳನ್ನು ಕಿತ್ತುಹಾಕಿ ವಿವಸ್ತ್ರಗೊಳಿಸಿ ಕೊನೆಗೆ ಆಲಹಳ್ಳಿ ಬಳಿ ನಡುರಸ್ತೆಯಲ್ಲೇ ಬಿಟ್ಟುಹೋಗಿದ್ದಾರೆ. ತದನಂತರ ಯುವತಿ ಅಲ್ಲೇ ತೋಟದ ಮನೆಯೊಂದರ ಬಳಿ ಹೋಗಿ ಮನೆಯಲ್ಲಿದ್ದವರ ಬಟ್ಟೆಯನ್ನು ಪಡೆದು ಧರಿಸಿಕೊಂಡಿದ್ದಾರೆ. ಈ ಬಗ್ಗೆ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು, ಮೂವರು ಸಹ ಅಪ್ರಾಪ್ತ ಬಾಲಕರು ಎಂದು ತಿಳಿದು ಬಂದಿದೆ.

    ಪ್ರಕರಣದಲ್ಲಿ ಕ್ಯಾಬ್ ಚಾಲಕ ನಾಪತ್ತೆಯಾಗಿದ್ದು, ಚಾಲಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆದರೆ ಬಂಧಿತ ಅಪ್ರಾಪ್ತ ಬಾಲಕರು ಬೇರೆಯೇ ಹೇಳುತ್ತಿದ್ದು, ಯುವತಿ ವೇಶ್ಯಾವಾಟಿಕೆ ನಡೆಸುತ್ತಿದ್ದು ನಮ್ಮ ಜೊತೆ ಬಂದಿದ್ದಳು. ಹಣ ಪಡೆದುಕೊಳ್ಳುವ ವಿಚಾರದಲ್ಲಿ ತಗಾದೆ ಉಂಟಾಗಿ ನಾವು ಆಕೆಯನ್ನು ಅಲ್ಲೇ ಬಿಟ್ಟು ಹೋದೆವು ಎಂದು ಹೇಳುತ್ತಿದ್ದಾರೆ.

  • ಓಲಾ ಹತ್ತಿದ್ದೇ ತಪ್ಪಾಯ್ತು, ಯುವತಿಗೆ ನರಕಯಾತನೆ ನೀಡಿದ ಡ್ರೈವರ್!

    ಓಲಾ ಹತ್ತಿದ್ದೇ ತಪ್ಪಾಯ್ತು, ಯುವತಿಗೆ ನರಕಯಾತನೆ ನೀಡಿದ ಡ್ರೈವರ್!

    ಬೆಂಗಳೂರು: ಓಲಾ ಹತ್ತಿದ ಯುವತಿಗೆ ಡ್ರೈವರ್ ಒಬ್ಬ ನರಕಯಾತನೆ ನೀಡಿರುವ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.

    ಯುವತಿ ಬೈಯಪ್ಪನಹಳ್ಳಿಯ ಮಲ್ಲೇಶ್ ಪಾಳ್ಯ ಕಿಡ್ ಕ್ಯಾಸ್ಟಲ್‍ಗೆ ಹೋಗಲು ಓಲಾ ಬುಕ್ ಮಾಡಿದ್ದಾಳೆ. ಬುಕ್ ಮಾಡಿದ ಬಳಿಕ ಓಲಾ ತಡವಾಗಿ ಬಂದಿತ್ತು. ಈ ವೇಳೆ ತಡವಾಗಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಓಲಾ ಡ್ರೈವರ್ ಕಿರಿಕ್ ಮಾಡಿದ್ದಾನೆ.

    ಇಷ್ಟರ ನಡುವೆ ಮಲ್ಲೇಶ್ ಪಾಳ್ಯದಿಂದ ಕ್ಯಾಬ್ ಹೊರಟಿದೆ. ಅಷ್ಟರಲ್ಲಿ ಡ್ರೈವರ್ ಮತ್ತೆ ಕಿರಿಕ್ ಶುರು ಮಾಡಿದ್ದ. ಮಾತಿಗೆ ಮಾತು ಬೆಳಸಿದ ಕ್ಯಾಬ್ ಡ್ರೈವರ್, ಕಾರಿನ ಡೋರ್ ಲಾಕ್ ಮಾಡಿ ಕಾರಿನಲ್ಲೇ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾನೆ. ಹುಡುಗಿಯ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ.

    ಯಾವಾಗ ಕ್ಯಾಬ್ ಡ್ರೈವರ್ ನ ಉದ್ಧಟತನ ಜಾಸ್ತಿ ಆಯ್ತೋ ಯುವತಿಗೆ ಬೇರೆ ದಾರಿ ಇಲ್ಲದೇ ಕಿರುಚಿಕೊಂಡಿದ್ದಾಳೆ. ಯುವತಿಯ ಚೀರಾಟ ಕೇಳಿಸಿಕೊಂಡ ಸಾರ್ವಜನಿಕರು ಕಾರನ್ನು ನಿಲ್ಲಿಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಜೊತೆಗೆ ಕ್ಯಾಬ್ ಚಾಲಕನಿಗೆ ಬುದ್ಧಿವಾದ ಹೇಳಿದ್ದಾರೆ.

    ಬಳಿಕ ಯುವತಿ ಕ್ಯಾಬ್‍ನ ಚಾಲಕನ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

  • ಓಲಾ ಬ್ಯಾನ್ ವಾಪಸ್ – ಎಲೆಕ್ಷನ್ ಫಂಡ್ ಬಂತಾ ಎಂದು ಖರ್ಗೆ ಕಾಲೆಳೆದ ಟ್ವೀಟಿಗರು!

    ಓಲಾ ಬ್ಯಾನ್ ವಾಪಸ್ – ಎಲೆಕ್ಷನ್ ಫಂಡ್ ಬಂತಾ ಎಂದು ಖರ್ಗೆ ಕಾಲೆಳೆದ ಟ್ವೀಟಿಗರು!

    ಬೆಂಗಳೂರು: ಓಲಾ ಸಂಚಾರ ನಿಷೇಧ ಆದೇಶ ವಾಪಸ್ ಪಡೆದುಕೊಂಡಿದೆ ಎಂದು ಟ್ವೀಟ್ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ನಯವಾಗಿಯೇ ಕಾಲೆಳೆಯುತ್ತಿದ್ದಾರೆ. ಚುನಾವಣೆಗೆ ಫಂಡ್ ಬಂದಿರಬೇಕು ಅದಕ್ಕಾಗಿ ಎರಡೇ ದಿನದಲ್ಲಿ ಆದೇಶ ವಾಪಸ್ ಆಗಿದೆ ಎಂದು ಟ್ವೀಟ್ ಗಳು ಶುರುವಾಗಿದೆ.

    ಆರು ತಿಂಗಳಿಗೆ ಓಲಾ ಸಂಚಾರವನ್ನು ನಿಷೇಧಿಸಿದ ಸಾರಿಗೆ ಇಲಾಖೆ ಆದೇಶವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ನಿಷೇಧ ವಾಪಸ್ ಪಡೆದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಭಾನುವಾರ ಬೆಳಗ್ಗೆ ಟ್ವೀಟ್ ಮಾಡಿ, ಇಂದಿನಿಂದ ಎಂದಿನಂತೆ ಓಲಾ ಸಂಚರಿಸಲಿದೆ ಎಂದು ಹೇಳಿಕೊಂಡಿದ್ದರು. ಇದರ ಬೆನ್ನಿಗೇ ಒಲಾ ಕ್ಯಾಬ್ ನಿಷೇಧ ವಾಪಸ್ ತೆಗೆದುಕೊಂಡ ಸರ್ಕಾರವನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಶುರುವಾಯಿತು.

    https://twitter.com/girimm09/status/1109687565425074177

    ಎಲೆಕ್ಷನ್ ಫಂಡ್ ಗೆ ಈ ಡ್ರಾಮಾನಾ ಅಂತಾ ಖರ್ಗೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ ಸುರಿಮಳೆಯಾಯಿತು. ನಿಷೇಧ ಹೇರಿದ ಎರಡೇ ದಿನದಲ್ಲಿ ಹೇಗೆ ಸಮಸ್ಯೆ ಬಗೆಹರಿದಿದೆ? ಓಲಾ ನಿಷೇಧವನ್ನು ಅಷ್ಟು ಸುಲಭವಾಗಿ ಎರಡು ದಿನದಲ್ಲಿ ಬಗೆಹರಿಸಿದ್ದು ಹೇಗೆ? ಇದು ಎಲೆಕ್ಷನ್ ಫಂಡ್ ಗೆ ಮಾಡಿರುವ ಗಿಮಿಕ್ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

    ಇನ್ನು ಕೆಲವರು ಪೀಕ್ ಹವರ್ ಶುಲ್ಕಕ್ಕೆ ಕಡಿವಾಣ ಹಾಕಿ. ಇಲ್ಲದಿದ್ದರೆ ಸರ್ಕಾರವೇ ಒಂದು ಹೊಸ ಆ್ಯಪ್ ಬಿಡುಗಡೆ ಮಾಡಲಿ ಎಂದು ಮನವಿ ಮಾಡಿದ್ದಾರೆ. ಫಸ್ಟ್ ಬ್ಯಾನ್ ಮಾಡಿದ್ರಿ, ಈಗ ಬ್ಯಾನ್ ವಾಪಸ್ ಪಡೆದ್ರಿ. ಆದರೆ ಇದಕ್ಕೆ ಸ್ಪಷ್ಟನೆ ಯಾಕೆ ಕೊಟ್ಟಿಲ್ಲ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

    ಏನ್ ಡೀಲ್ ಮಾಡಿದ್ರಿ.? ಈ ಆದೇಶದ ಮೂಲಕ ಎಷ್ಟು ಎಲೆಕ್ಷನ್ ಫಂಡ್ ಎತ್ತಿದ್ರಿ.? ಎರಡೇ ದಿನದಲ್ಲಿ ಬ್ಯಾನ್ ವಾಪಸ್ ಪಡೆಯುತ್ತೀರಿ ಎಂದರೆ ಬ್ಯಾನ್ ಮಾಡುವುದಕ್ಕೆ ಅಷ್ಟು ಅರ್ಜೆಂಟ್ ಏನಿತ್ತು ಎಂದು ಇನ್ನೊಬ್ಬರು ಟ್ವೀಟ್ ಮೂಲಕ ಪ್ರಿಯಾಂಕ್ ಖರ್ಗೆಯನ್ನು ಪ್ರಶ್ನಿಸಿದ್ದಾರೆ.

    ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ಅಗ್ರಿಗೇಟರ್ ನಿಯಮಗಳನ್ನು ಉಲ್ಲಂಘಿಸಿ ಬೈಕ್ ಟ್ಯಾಕ್ಸಿಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದ ಹಿನ್ನೆಲೆಯಲ್ಲಿ ಓಲಾ ಕಂಪನಿಗೆ ನೀಡಿದ್ದ ಪರವಾನಿಗೆಯನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರದ ಈ ಆದೇಶ ಪ್ರಶ್ನಿಸಿ ಸೋಮವಾರ ಕೋರ್ಟ್ ಗೆ ಹೋಗಲು ಓಲಾ ನಿರ್ಧರಿಸಿತ್ತು. ಆದರೆ ಇದಕ್ಕೂ ಮುನ್ನವೇ ಸಚಿವರ ಟ್ವೀಟ್ ಬಂದಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

  • ಓಲಾ ಕ್ಯಾಬ್ ಸಂಚಾರ ನಿಷೇಧ ವಾಪಸ್

    ಓಲಾ ಕ್ಯಾಬ್ ಸಂಚಾರ ನಿಷೇಧ ವಾಪಸ್

    ಬೆಂಗಳೂರು: ಓಲಾ ಕ್ಯಾಬ್ ಸಂಚಾರ ನಿಷೇಧವನ್ನು ಸರ್ಕಾರ ವಾಪಸ್ ಪಡೆದುಕೊಂಡಿದ್ದು, ಎಂದಿನಂತೆ ನಗರದಲ್ಲಿ ಓಲಾ ಕ್ಯಾಬ್ ಸಂಚರಿಸಲಿದೆ.

    ಆರು ತಿಂಗಳಿಗೆ ಓಲಾ ಸಂಚಾರವನ್ನು ನಿಷೇಧಿಸಿದ ಸಾರಿಗೆ ಇಲಾಖೆ ಆದೇಶವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ನಿಷೇಧ ವಾಪಸ್ ಪಡೆದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ಅಗ್ರಿಗೇಟರ್ ನಿಯಮಗಳನ್ನು ಉಲ್ಲಂಘಿಸಿ ಬೈಕ್ ಟ್ಯಾಕ್ಸಿಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದ ಹಿನ್ನೆಲೆಯಲ್ಲಿ ಓಲಾ ಕಂಪನಿಗೆ ನೀಡಿದ್ದ ಪರವಾನಿಗೆಯನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು.

  • ಏರ್‌ಪೋರ್ಟ್‌ ಪ್ರಯಾಣಿಕರೇ ಓಲಾ ಕ್ಯಾಬ್ ಬುಕ್ ಮಾಡುವ ಮುನ್ನ ಎಚ್ಚರ..!

    ಏರ್‌ಪೋರ್ಟ್‌ ಪ್ರಯಾಣಿಕರೇ ಓಲಾ ಕ್ಯಾಬ್ ಬುಕ್ ಮಾಡುವ ಮುನ್ನ ಎಚ್ಚರ..!

    ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೋ ಪ್ರಯಾಣಿಕರೇ ಎಚ್ಚರವಾಗಿರಿ. ಯಾಕೆಂದರೆ ಏರ್‌ಪೋರ್ಟ್‌ ನಲ್ಲಿ ಓಲಾ ಕ್ಯಾಬ್‍ನಿಂದ ಮಹಾದೋಖಾ ನಡೆಯುತ್ತಿದೆ.

    ಕತ್ರಿಗುಪ್ಪೆ ನಿವಾಸಿ ನಿವೃತ್ತ ವಿಜ್ಞಾನಿ ನಾಗೇಂದ್ರ, ಪತ್ರಕರ್ತೆಯಾಗಿರುವ ಚೂಡಾಮಣಿ ಅನ್ನೋರು, ಕಳೆದ 17 ರಂದು ರಾತ್ರಿ 9 ಗಂಟೆ ಸುಮಾರಿಗೆ ಸ್ನೇಹಿತರೊಬ್ಬರನ್ನು ಕಳಸಿಕೋಡುವುದಕ್ಕೆ ಏರ್‌ಪೋರ್ಟ್‌ ಗೆ ಹೋಗಿದ್ದರು. ಕಳುಹಿಸಿಕೊಟ್ಟ ನಂತರ ಸುಮಾರು 10 ಗಂಟೆಗೆ ಓಲಾ ಕ್ಯಾಬ್ ಬುಕ್ ಮಾಡಿದ ದಂಪತಿ, ಕಾರು ಹತ್ತಿ ಹೋಗುತ್ತಿದ್ದರು.

    ನಾವು ಕ್ಯಾಬ್ ಹತ್ತಿ ಐದು ನಿಮಿಷ ಆಗಿತ್ತಷ್ಟೇ. ಅಷ್ಟರಲ್ಲಿ ಮಂಕಿ ಕ್ಯಾಪ್ ಹಾಕಿದ್ದ ಚಾಲಕ, ಮುಖ್ಯ ರಸ್ತೆ ಬಿಟ್ಟು ಬೇಗೂರು ರಸ್ತೆಯ ನಿರ್ಜನ ಪ್ರದೇಶದ ಡೆಂಜರ್ ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿದ್ದ. ತಕ್ಷಣ ಗಾಬರಿಗೊಂಡ ನಾವು ಮೈನ್ ರೋಡ್‍ನಲ್ಲಿ ಹೋಗಿ, ಇಲ್ಲ ಅಂದರೆ ನಮ್ಮನ್ನ ವಾಪಸ್ ಏರ್‌ಪೋರ್ಟ್‌ ಗೆ ಬಿಟ್ಟುಬಿಡಿ ಅಂತ ಮನವಿ ಮಾಡಿಕೊಂಡಿದ್ದೇವು. ಆದರೆ ಕ್ಯಾಬ್ ಚಾಲಕ ಮಾತ್ರ ಡೋಂಟ್ ಕೇರ್ ಅನ್ನೋ ರೀತಿ ವರ್ತಿಸಿ, ಮೈನ್ ರೋಡ್‍ನಲ್ಲಿ ಹೋದರೆ ಟೋಲ್ ಕಟ್ಟಬೇಕು. ಸುಮ್ಮನೆ ಕುಳಿತುಕೊಳ್ಳಿ ಅಂತ ದಂಪತಿ ಜೊತೆ ಜೋರು ಗಲಾಟೆ ಮಾಡಿದ್ದಾನೆ ಎಂದು ಚೂಡಾಮಣಿ ಹೇಳಿದ್ದಾರೆ.

    ಓಲಾ ಕ್ಯಾಬ್ ಚಾಲಕನ ವರ್ತನೆಯಿಂದ ಭಯಗೊಂಡ ನಾವು ಅಲ್ಲೆ ಇದ್ದ ಏಮರ್ಜನ್ಸಿ ಬಟನ್ ಒತ್ತಿ ಸಹಾಯಕ್ಕೆ ಅಂಗಲಾಚಿದೆವು. ಆದರೆ ಆ ಕಡೆಯಿಂದ ಮಾತಾಡಿದ ಅಧಿಕಾರಿ, ಚಾಲಕ ವರ್ತನೆಯನ್ನು ಸಮರ್ಥಿಸಿಕೊಂಡು ಫೋನ್ ಕಟ್ ಮಾಡಿದ್ದ. ಇದರಿಂದ ಇನ್ನಷ್ಟು ಗಾಬರಿಗೊಂಡಿದ್ದು, ಆ ಕಗ್ಗತ್ತಲಲ್ಲೇ ಕಾರು ಇಳಿದು ರಸ್ತೆಯಲ್ಲಿ ಬರುತ್ತಿದ್ದ ಬಸ್ ಹತ್ತಿ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದೇವೆ. ಹಾಗೇ ಬಸ್ಸಿನಲ್ಲಿ ತಮ್ಮ ಮನೆಗೆ ಬರುವ ಹೊತ್ತಿಗೆ, ಓಲಾ ಕ್ಯಾಬ್‍ನಿಂದ ನಿಮ್ಮನ್ನು 11 ಗಂಟೆ 8 ನಿಮಿಷಕ್ಕೆ ಮನೆಗೆ ಡ್ರಾಪ್ ಮಾಡಲಾಗಿದೆ ಅಂತ ಮಸೇಜ್ ಮಾಡಿ 861 ರೂಪಾಯಿ ಹಣ ನೀಡುವಂತೆ ಬಿಲ್ ಕಳುಹಿಸಿದ್ದರು. ಓಲಾದವರು ಟೋಲ್ ಹಣ ಉಳಿಸಿಕೊಳ್ಳೋಕೆ ಸಣ್ಣ ಪುಟ್ಟ ನಿರ್ಜನ ಪ್ರದೇಶದ ಡೆಂಜರ್ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ನಾಗೇಂದ್ರ ಆರೋಪಿಸಿದ್ದಾರೆ.

    ಈ ಬಗ್ಗೆ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜವಾಗಿಲ್ಲ. ಬೆಂಗಳೂರು ಗೊತ್ತಿರುವ ಪ್ರಯಾಣಿರಿಗೆ ಈ ರೀತಿ ವಂಚನೆ ಮಾಡುತ್ತಾರೆ ಅಂದರೆ ಸಿಟಿಗೆ ಹೊಸದಾಗಿ ಬರೋ ಪ್ರಯಾಣಿಕರ ಪರಿಸ್ಥಿತಿ ಏನು.? ನಿರ್ಜನ ಪ್ರದೇಶದ ಡೇಂಜರ್ ರಸ್ತೆಯಲ್ಲಿ ಟ್ರಾವೆಲ್ ಮಾಡಿ ಏನಾದ್ರು ಹೆಚ್ಚು ಕಡಿಮೆ ಆದ್ರೆ ಯಾರು ಜವಾಜ್ದಾರರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಇಡೀ ರಾತ್ರಿ ಬೆಂಗ್ಳೂರು ಸುತ್ತಿಸಿ ಒಲಾ ಚಾಲಕನನ್ನು ಕೂಡಿ ಹಾಕಿ 20 ಸಾವಿರ ದರೋಡೆ!

    ಇಡೀ ರಾತ್ರಿ ಬೆಂಗ್ಳೂರು ಸುತ್ತಿಸಿ ಒಲಾ ಚಾಲಕನನ್ನು ಕೂಡಿ ಹಾಕಿ 20 ಸಾವಿರ ದರೋಡೆ!

    ರಾಮನಗರ: ಬೆಂಗಳೂರಿನ ಆಡುಗೋಡಿಯಿಂದ ದಮ್ಮಸಂದ್ರಕ್ಕೆ ಓಲಾ ಕ್ಯಾಬ್ ಬುಕ್ ಮಾಡಿದ ನಾಲ್ವರು ಖದೀಮರು ಕ್ಯಾಬ್ ಚಾಲಕನನ್ನು ಬೆದರಿಸಿ ಹಣವನ್ನು ದರೋಡೆ ಮಾಡಿದ್ದಾರೆ.

    ಸೋಮಶೇಖರ್ ಎಂಬವರ ಕಾರನ್ನು ನಾಲ್ವರು ವ್ಯಕ್ತಿಗಳು ಬುಕ್ ಮಾಡಿದ್ದರು. ಶುಕ್ರವಾರ ಆಡುಗೋಡಿಯಲ್ಲಿ ಹತ್ತಿದ ಆ ನಾಲ್ವರು ಪ್ರಯಾಣಿಕರು ಕ್ಯಾಬ್ ಚಾಲಕನಿಗೆ ಚಾಕು ತೋರಿಸಿ ಬೆದರಿಸಿ ಇಡೀ ರಾತ್ರಿ ಬೆಂಗಳೂರನ್ನು ಸುತ್ತಿಸಿದ್ದಾರೆ. ಅಷ್ಟೇ ಅಲ್ಲದೇ ಚಾಲಕನ ಎಟಿಎಂ ಕಾರ್ಡ್ ಮೂಲಕ 20 ಸಾವಿರ ಹಣವನ್ನು ಡ್ರಾ ಮಾಡಿಸಿಕೊಂಡಿದ್ದಾರೆ.

    ಸೋಮಶೇಖರ್ ಅವರನ್ನು ಬೆದರಿಸಿ ದರೋಡೆ ಮಾಡಿದ್ದು ಅಲ್ಲದೇ ಅವರ ಮೊಬೈಲ್‍ನಿಂದ ಪತ್ನಿಗೆ ವಿಡಿಯೋ ಕಾಲ್ ಕೂಡ ಮಾಡಿಸಿದ್ದರು. ದುಷ್ಕರ್ಮಿಗಳು ರಾತ್ರಿ ಬೆಂಗಳೂರಿನಿಂದ ಬಿಡದಿ, ರಾಮನಗರ ಮಾರ್ಗವಾಗಿ ಚನ್ನಪಟ್ಟಣಕ್ಕೆ ಕ್ಯಾಬ್‍ನಲ್ಲಿಯೇ ಚಾಲಕನನ್ನು ಕರೆದುಕೊಂಡು ಬಂದಿದ್ದಾರೆ. ಆ ನಂತರ ಇಂದು ಬೆಳಗ್ಗೆ ಚನ್ನಪಟ್ಟಣದ ಆನಂದ್ ಲಾಡ್ಜ್ ನಲ್ಲಿ ರೂಂ ಮಾಡಿ ಕ್ಯಾಬ್ ಚಾಲಕನನ್ನು ಕೂಡಿ ಹಾಕಿದ್ದಾರೆ. ಬಳಿಕ ಚಾಲಕ  ಲಾಡ್ಜ್ ನ ಕಿಟಕಿ ಹಾರಿ ದುಷ್ಕರ್ಮಿಗಳಿಂದ ತಪ್ಪಿಕೊಂಡು ಸ್ಥಳಿಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಚಾಲಕ ತಪ್ಪಿಸಿಕೊಂಡ ನಂತರ ದರೋಡೆಕೋರರು ಲಾಡ್ಜ್ ನಿಂದ  ಎಸ್ಕೇಪ್ ಆಗಿದ್ದಾರೆ. ಈ ಕುರಿತು ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನನ್ನು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv