Tag: ಓಮಿಕ್ರಾನ್ ವೈರಸ್

  • ಓಮಿಕ್ರಾನ್ ಬಾರದಂತೆ ಬೇವಿನ ಮರಕ್ಕೆ ಭರ್ಜರಿ ಪೂಜೆ

    ಓಮಿಕ್ರಾನ್ ಬಾರದಂತೆ ಬೇವಿನ ಮರಕ್ಕೆ ಭರ್ಜರಿ ಪೂಜೆ

    -ಗಾಳಿ ಸುದ್ದಿ ನಂಬಿ ಗ್ರಾಮೀಣ ಭಾಗದಲ್ಲಿ ಮೌಢ್ಯತೆ ಆಚರಣೆ

    ಯಾದಗಿರಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಮತ್ತು ಓಮಿಕ್ರಾನ್ ವೈರಸ್ ಆತಂಕದ ಹೆಚ್ಚಾಗಿದೆ. ಓಮಿಕ್ರಾನ್ ತಡೆಗಟ್ಟಲು ಇಡೀ ವೈದ್ಯಕೀಯ ಲೋಕವೆ ತಲೆ ಕೆಡಿಸಿಕೊಂಡಿದೆ. ಆದರೆ ಯಾದಗಿರಿಯಲ್ಲಿ ಮಾತ್ರ ಓಮಿಕ್ರಾನ್ ಬಾರದಂತೆ ಬೇವಿನ ಮರಕ್ಕೆ ಭರ್ಜರಿ ಪೂಜೆ ಮಾಡಲಾಗಿದೆ.

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಓಮಿಕ್ರಾನ್ ಮಾರಮ್ಮ ಬಾರದಂತೆ ಇಂದು, ಬೇವಿನ ಮರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ. ಕೋವಿಡ್ ಮೂರನೇ ಅಲೆ ಬಾರದಂತೆ ಬೇವಿನ ಮರಕ್ಕೆ ಪೂಜೆ ಮಾಡಲು ಗ್ರಾಮೀಣ ಜನ ಮುಂದಾಗಿದ್ದಾರೆ. ಬೇವಿನ ಮರಕ್ಕೆ ಪೂಜೆ ಮಾಡಿ ಹೊಳಿಗೆ ಎಡೆಯಿಡಲಾಯಿತ್ತು. ಇದನ್ನೂ ಓದಿ  ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್

    ಓಮಿಕ್ರಾನ್ ಮಕ್ಕಳಿಗೆ ಬರಬೇಕಿತ್ತು, ಆದರೆ ಬೇವಿನ ಮರಕ್ಕೆ ಬಂದಿದೆ. ಬೇವಿನ ಮರ ಓಮಿಕ್ರಾನ್ ರೋಗವನ್ನು ತಾನು ತೆಗೆದುಕೊಂಡು, ಮನುಷ್ಯ ಕುಲವನ್ನು ಉಳಿಸಿದೆ ಅಂತ ಯಾರೋ ಸ್ವಾಮೀಜಿ ಹೇಳಿದ್ದಾರೆಂಬ ಗಾಳಿ ಸುದ್ದಿ ಹಬ್ಬಿದೆ. ಈ ಗಾಳಿ ಸುದ್ದಿ ನಂಬಿ ಜನರು ಈ ರೀತಿಯ ಮೌಢ್ಯತೆ ಆಚರಣೆಯಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ

  • ವಿಕ್ಕಿ, ಕತ್ರಿನಾ ಮದುವೆಗೂ ತಟ್ಟಿದ ಹೊಸ ವೈರಸ್ ಬಿಸಿ

    ವಿಕ್ಕಿ, ಕತ್ರಿನಾ ಮದುವೆಗೂ ತಟ್ಟಿದ ಹೊಸ ವೈರಸ್ ಬಿಸಿ

    ಮುಂಬೈ: ಬಾಲಿವುಡ್ ಅಂಗಳದಲ್ಲಿ ಭರ್ಜರಿ ಸುದ್ದಿಯಲ್ಲಿರುವ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮದುವೆಗೆ ಹೊಸ ವೈರಸ್ ಬಿಸಿ ತಟ್ಟಿದೆ.

    ಈ ಜೋಡಿ ಮದುವೆ ಆಗುತ್ತಿರುವ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಮೂಲಗಳ ಪ್ರಕಾರ ಇವರು ಮದುವೆ ಆಗುತ್ತಿರುವ ವಿಚಾರ ಬಹುತೇಕ ಖಚಿತವಾಗಿದೆ. ರಾಜಸ್ಥಾನದ ಸವಾಯಿ ಮಾಧೋಪುರ್​ನಲ್ಲಿ ಮದುವೆ ಸಂಭ್ರಮಕ್ಕೆ ತಯಾರಿ ನಡೆಯುತ್ತಿದೆ. ಅದರೆ ಈ ಜೋಡಿ ಮದುವೆಗೆ ಕೊರೊನಾ ಕೆಂಗಣ್ಣು ಬಿದ್ದಿದೆ.

     

    ಡಿಸೆಂಬರ್ 7ರಿಂದ 9ರವರೆಗೆ ಈ ಜೋಡಿಯ ಮದುವೆ ನಡೆಯಲಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್  ಫೋರ್ಟ್ ಹೋಟೆಲ್‍ನಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಗಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಬಾಲಿವುಡ್ ಸೆಲೆಬ್ರಿಟಿಗಳಿಗೆ ಮದುವೆ ಆಮಂತ್ರಣ ಹೋಗಿದೆ. ಹೀಗಿರುವಾಗಲೇ ಭಾರತದಲ್ಲಿ ಕೋವಿಡ್ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾದ ರೂಪಾಂತರಿಯೂ ಪತ್ತೆ ಆಗಿದೆ. ಈ ಕಾರಣಕ್ಕೆ ಮದುವೆಗೆ ಸಮಸ್ಯೆ ಎದುರಾಗುವ ಸೂಚನೆ ಈಗಾಗಲೇ ಸಿಕ್ಕಿದೆ.

    ಈ ಮದುವೆಗೆ ಬಾಲಿವುಡ್‍ನ ಅನೇಕ ಸ್ಟಾರ್ ಕಲಾವಿದರು ಅಟೆಂಟ್ ಆಗುತ್ತಾರೆ ಎನ್ನಲಾಗುತ್ತಿತ್ತು. 45 ಹೋಟೆಲ್ ಕೂಡಾ ಬುಕ್ ಮಾಡಲಾಗಿತ್ತು. ಆದರೆ ಹೊಸ ವೈರಸ್ ಕಾರಣದಿಂದಾಗಿ ಮದುವೆ ಬರುತ್ತಿರುವ ಗಣ್ಯರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ತಿಳಿದು ಬಂದಿದೆ. ಕೋವಿಡ್ ರೂಪಾಂತರಿ ಓಮಿಕ್ರಾನ್ ವೈರಸ್ ಆತಂಕ ಹೆಚ್ಚಾಗಿದೆ. ಎಲ್ಲ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಇಂಥ ಸಂದರ್ಭದಲ್ಲಿ ಅದ್ದೂರಿಯಾಗಿ ಮದುವೆ  ಆಗುತ್ತಾರ ಎನ್ನುವುದನ್ನು ಕಾದು ನೋಡಬೇಕಾಗಿದೆ.