Tag: ಓಮಿಕ್ರಾನ್ ಕೊರೊನಾ

  • ತಮಿಳುನಾಡಿನಲ್ಲಿ ನ್ಯೂ ಇಯರ್‌ಗೆ ಹೊಸ ಮಾರ್ಗಸೂಚಿ ಬಿಡುಗಡೆ

    ತಮಿಳುನಾಡಿನಲ್ಲಿ ನ್ಯೂ ಇಯರ್‌ಗೆ ಹೊಸ ಮಾರ್ಗಸೂಚಿ ಬಿಡುಗಡೆ

    ಚೆನ್ನೈ: ತಮಿಳುನಾಡು ಸರ್ಕಾರ ರಾಜ್ಯಾದ್ಯಂತ ಬೀಚ್‍ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಆಚರಣೆಯನ್ನು ನಿಷೇಧಿಸಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

    ಕಡಲತೀರಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಆಚರಣೆಗಳನ್ನು ಅನುಮತಿಸಲಾಗುವುದಿಲ್ಲ. ಇದಲ್ಲದೆ ಪೊಲೀಸರು ಡ್ರಿಂಕ್ ಆಂಡ್ ಡ್ರೈವ್ ವಿರುದ್ಧ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅನಾವಶ್ಯಕವಾಗಿ ಖಾಸಗಿ ವಾಹನಗಳನ್ನು ರೋಡಿಗೆ ಇಳಿಸಿದರೆ ಅಂತಹವರನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಳ್ಳುವ ಎಚ್ಚರಿಕೆ ನೀಡಿದ್ದೇವೆ ಎಂದು ಡಿಜಿಪಿ ತಿಳಿಸಿದ್ದಾರೆ. ಇದನ್ನೂ ಓದಿ: ವೀಡಿಯೋ: ಮೇಕಪ್ ಆರ್ಟ್‍ನಿಂದ ಶಾರೂಖ್ ಆಗಿ ರೂಪಾಂತರಗೊಂಡ ಯುವತಿ

    ರೋಡ್ ರೇಜ್ ಪ್ರಕರಣಗಳಿಗೂ ಸಹ ಕಠಿಣ ಶಿಕ್ಷೆ ನೀಡಲಾಗುತ್ತದೆ. ಎಲ್ಲಾ ಹೋಟೆಲ್‍ಗಳು ಪ್ರಸ್ತುತ (ಎಸ್‍ಒಪಿ) ಅನ್ನು ಅನುಸರಿಸಬೇಕಾಗುತ್ತದೆ. ರಾತ್ರಿ 11 ಗಂಟೆಯೊಳಗೆ ಎಲ್ಲ ಕಾರ್ಯಾಚರಣೆಯನ್ನು ಕೊನೆಗೊಳಿಸಬೇಕಾಗುತ್ತದೆ. ಹೊಸ ವರ್ಷದ ಆಚರಣೆಯ ಭಾಗವಾಗಿ ಖಾಸಗಿ ಪಾರ್ಟಿಗಳಿಗೂ ನಿರ್ಬಂಧಗಳು ಅನ್ವಯಿಸುತ್ತವೆ. ರಾಜ್ಯ ಆರೋಗ್ಯ ಸಚಿವರು ಈ ಹಿಂದೆ ಕುಟುಂಬಗಳೊಂದಿಗೆ ಮನೆಯಲ್ಲಿಯೇ ಹೊಸ ವರ್ಷವನ್ನು ಆಚರಿಸಿ ಎಂದು ಹೇಳಿದ್ದರು.

    ಎಲ್ಲಾ ದೂರದ ಪ್ರಯಾಣಿಕರು ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸಬೇಕು. ದ್ವಿಚಕ್ರ ವಾಹನಗಳ ಬಳಕೆಯನ್ನು ತಪ್ಪಿಸಬೇಕು. ಇದಲ್ಲದೆ, ಅಪಘಾತಗಳನ್ನು ತಪ್ಪಿಸಲು ಪ್ರತಿ 3 ಗಂಟೆಗಳಿಗೊಮ್ಮೆ ವಿರಾಮ ತೆಗೆದುಕೊಳ್ಳುವಂತೆ ಪ್ರಯಾಣಿಕರಿಗೆ ಸರ್ಕಾರವು ಸಲಹೆ ನೀಡಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?: ಹೆಚ್.ಡಿ.ದೇವೇಗೌಡ

    ಎಲ್ಲಾ ಧಾರ್ಮಿಕ ಸ್ಥಳಗಳು ಕೋವಿಡ್ -19 ಗೆ ಸಂಬಂಧಿಸಿದಂತೆ ಈಗಾಗಲೇ ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.

  • ಓಮಿಕ್ರಾನ್ ಭೀತಿ- ನಾಲ್ಕೇ ದಿನದಲ್ಲಿ 7 ಲಕ್ಷಕ್ಕೂ ಅಧಿಕ ದಂಡ ವಸೂಲಿ

    ಓಮಿಕ್ರಾನ್ ಭೀತಿ- ನಾಲ್ಕೇ ದಿನದಲ್ಲಿ 7 ಲಕ್ಷಕ್ಕೂ ಅಧಿಕ ದಂಡ ವಸೂಲಿ

    ಬೆಂಗಳೂರು: ಓಮಿಕ್ರಾನ್ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಕಳೆದ ನಾಲ್ಕು ದಿನದಲ್ಲೇ ಬಿಬಿಎಂಪಿಗೆ ದಂಡದ ರೂಪದಲ್ಲಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹವಾಗಿದೆ.

    ಓಮಿಕ್ರಾನ್ ತಡೆಗೆ ಮುಲಾಜಿಲ್ಲದೆ ದಂಡ ವಿಧಿಸಲು ಬಿಬಿಎಂಪಿ ಮಾರ್ಷಲ್ಸ್ ಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಹಾಕದೆ ಇರುವವರಿಂದ ದಂಡ ವಸೂಲಿ ಮಾಡುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ 7 ಲಕ್ಷಕ್ಕೂ ಅಧಿಕ ದಂಡ ವಸೂಲಿಯಾಗಿದೆ.

    ಮಾಸ್ಕ್ ಹಾಕದೆ ಓಡಾಡುತ್ತಿದ್ದವರಿಂದ 6,31,500 ರೂ. ಹಾಗೂ ಸಾಮಾಜಿಕ ಅಂತರ ಇಲ್ಲದೆ ಇರುವುದರಿಂದ 1,17,750 ರೂ. ದಂಡ ವಸೂಲಿ ಆಗಿದೆ. ಕಳೆದ ನಾಲ್ಕು ದಿನದಲ್ಲಿ 2960 ಪ್ರಕರಣಗಳಲ್ಲಿ 7,49,250 ರೂ. ದಂಡ ವಸೂಲಿ ಮಾಡಿದ್ದಾರೆ. ಇದೂವರೆಗೂ 14,82,75,211 ರೂ. ದಂಡವನ್ನು ಪಾಲಿಕೆ ವಸೂಲಿ ಮಾಡಿದೆ. ಇದನ್ನೂ ಓದಿ: ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

    ಇಂದಿನಿಂದ ಮಾರ್ಷಲ್ಸ್ ಗಳು ಮತ್ತಷ್ಟು ಚುರುಕಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮಾಸ್ಕ್ ಹಾಕದೆ ರೋಡಿಗೆ ಇಳಿದರೆ ದಂಡ ಕಟ್ಟಬೇಕು. ಮಾರ್ಕೆಟ್, ಮಾಲ್, ಜನನಿಬಿಡ ಪ್ರದೇಶಗಳಲ್ಲಿ ಮಾರ್ಷಲ್ಸ್ ಕಾರ್ಯಾಚರಣೆ ನಡೆಸಲಿದ್ದಾರೆ. ಓಮಿಕ್ರಾನ್ ವೈರಸ್ ತಡೆಗೆ ಬಿಬಿಎಂಪಿ ಈ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಮಾಸ್ಕ್ ಹಾಕದವರು ಯಾರೇ ಇದ್ದರೂ ಮುಲಾಜಿಲ್ಲದೇ ದಂಡ ವಸೂಲಿ ಮಾಡುತ್ತಾರೆ. ಇದನ್ನೂ ಓದಿ: ದೇಶದಲ್ಲಿ ಒಮಿಕ್ರಾನ್ ಕೇಸ್ 21ಕ್ಕೆ ಏರಿಕೆ – ಒಂದೇ ದಿನ 17 ಹೊಸ ಪ್ರಕರಣ ಪತ್ತೆ

  • ಕಾನೂನು ತಂದು, ದಂಡ ಹಾಕಿ ಜನರಿಗೆ ಲಸಿಕೆ ಕೊಡುವ ಚಿಂತನೆ ಸರ್ಕಾರಕ್ಕಿಲ್ಲ: ಸುಧಾಕರ್

    ಕಾನೂನು ತಂದು, ದಂಡ ಹಾಕಿ ಜನರಿಗೆ ಲಸಿಕೆ ಕೊಡುವ ಚಿಂತನೆ ಸರ್ಕಾರಕ್ಕಿಲ್ಲ: ಸುಧಾಕರ್

    ಬೆಂಗಳೂರು: ಓಮಿಕ್ರಾನ್ ಕೊರೊನಾ ರೂಪಾಂತರ ವೈರಸ್ ತೀವ್ರತೆಯ ಕುರಿತಾಗಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಇಲಾಖೆ ಸಮಿತಿ ಸಭೆ ಮಾಡಲಾಗಿದೆ. ಸಭೆಯಲ್ಲಿ ವ್ಯಾಕ್ಸಿನೇಷನ್ ಕಡ್ಡಾಯವಲ್ಲ ಎಂದು ಚರ್ಚಿಸಲಾಗಿದೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಭೆಗೆ ಪೂರಕವಾಗಿ ಸಭೆ ಆಗಿದೆ. ಓಮಿಕ್ರಾನ್ ಹೊಸ ತಳಿ ನಿಯಂತ್ರಣದ ಬಗ್ಗೆ ಚರ್ಚೆ ಆಗಿದ್ದು, ಒಂದು ವೇಳೆ ವೈರಸ್ ಬಂದರೆ ಅದಕ್ಕೆ ಸಿದ್ಧತೆ ಹೇಗೆ ಇರಬೇಕು ಅಂತ ಚರ್ಚೆ ಮಾಡಿದ್ದೇವೆ. ವೈದ್ಯರು, ಆಸ್ಪತ್ರೆಗಳ ಸಿದ್ಧತೆ, ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಸಿದ್ಧತೆ ಬಗ್ಗೆ ಚರ್ಚೆ ಆಗಿದೆ. ಮೊದಲು ಕ್ವಾರಂಟೈನ್ ಇತ್ತು, ಈಗ ಅದನ್ನ ಮತ್ತೆ ಜಾರಿ ಮಾಡುತ್ತೇವೆ. ವಿದೇಶದಿಂದ ಬರೋ ಎಲ್ಲರಿಗೂ RTPCR ಟೆಸ್ಟ್ ಮಾಡುತ್ತೇವೆ. ನೆಗೆಟಿವ್ ಬಂದರೆ ಮನೆಯಲ್ಲಿ ಒಂದು ವಾರ ಕ್ವಾರಂಟೈನ್ ಇರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬನ್ನಿ ದೇವೇಗೌಡ್ರೇ… ಇಲ್ಲಿ ಕುಳಿತುಕೊಳ್ಳಿ: ಪ್ರಧಾನಿ ಮೋದಿ

    ರೋಗದ ಲಕ್ಷಣ ಇದ್ದರೆ 5ನೇ ದಿನ ಟೆಸ್ಟ್ ಮಾಡುತ್ತೇವೆ. ರೋಗದ ಲಕ್ಷಣ ಇಲ್ಲದೆ ಹೋದರೆ 7 ನೇ ದಿನ ಟೆಸ್ಟ್ ಮಾಡಿ ಹೊರಗೆ ಓಡಾಟ ಮಾಡಲು ಅವಕಾಶ ಕೊಡುತ್ತೇವೆ. ಟೆಲಿ ಮೆಡಿಸಿನ್, ಟೆಲಿ ಕೌನ್ಸಿಲಿಂಗ್ ಸಿದ್ಧತೆ ಮಾಡಿಕೊಳ್ಳುತ್ತೇವೆ. ಚಿಕಿತ್ಸೆಗೆ ಯುನಿಫಾರ್ಮ್ ವ್ಯವಸ್ಥೆ ಮಾಡಲು ತಂಡ ರಚನೆ ಮಾಡಲಾಗುತ್ತದೆ. ಚಿಕಿತ್ಸೆ ಪ್ರೋಟೋ ಕಾಲ್‍ಗೆ ತಂಡ ರಚನೆಯಾಗಿದ್ದು, ಡಾ. ರವಿ ಅವರನ್ನು ನೇಮಕ ಮಾಡಲಾಗಿದೆ. ಸಮಿತಿಯಲ್ಲಿ 10 ಜನ ಇರುತ್ತಾರೆ. ಅಗತ್ಯ ಔಷಧಿ ದಾಸ್ತಾನು ಬಗ್ಗೆ ಸಭೆ ಆಗಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಸಿದ್ದರಾಮಯ್ಯ, ಜಿಟಿಡಿ ನಡುವಿನ ಹೊಸ ಲವ್ ಸಕ್ಸಸ್ ಆಗಲ್ಲ: ಎಸ್.ಟಿ. ಸೋಮಶೇಖರ್

    ಲಸಿಕೆ ಕಡ್ಡಾಯವಾಗಿ 41 ಲಕ್ಷ ಜನ ಎರಡನೇ ಡೋಸ್ ಪಡೆಯಬೇಕು. ಇವರಿಗೂ ಪ್ರತಿ ಜಿಲ್ಲೆಯಲ್ಲಿ ಲಸಿಕೆ ಆದ್ಯತೆ ಮೇಲೆ ಕೊಡುತ್ತೇವೆ. ಇವರಿಗೆ ಲಸಿಕೆ ಕೊಟ್ರೆ 70% ಲಸಿಕೆ ಆಗುತ್ತೆ. ಹೀಗಾಗಿ ಲಸಿಕೆ ನೀಡಲು ಕ್ರಮ ತಗೋತೀವಿ. ಓಮಿಕ್ರಾನ್ ಹರಡುವಿಕೆ ಪ್ರಮಾಣ ಹೆಚ್ಚಿದೆ. ಅದರ ತೀವ್ರತೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಜನರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ. ಲಸಿಕೆ ಜನರು ಬಂದು ಪಡೆಯಬೇಕು. ಲಸಿಕೆ ರೋಗ ನಿರೋಧಕ ಸೃಷ್ಟಿ ಮಾಡುತ್ತೆ. ಜನ ಲಸಿಕೆ ಪಡೆಯಬೇಕು. ಹೈರಿಸ್ಕ್ ದೇಶದಿಂದ ಬರೋ ಪ್ರಯಾಣಿಕರಿಗೆ ಕೆಲ ನಿರ್ಬಂಧ ಹಾಕೋ ಬಗ್ಗೆ ಸಿಎಂ ಚಿಂತನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಸಿಎಂ ಕೇಂದ್ರಕ್ಕೆ ಪತ್ರ ಬರೆಯಲು ನಿರ್ಧಾರ ಮಾಡಿದ್ದಾರೆ. ಪ್ರಾರಂಭಿಕ ಹಂತದಲ್ಲಿ ನಿಯಂತ್ರಣ ಮಾಡಲು ಸಿಎಂ ಈ ನಿರ್ಧಾರ ಮಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಕುರಿತು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ನಿತ್ಯ ವಿದೇಶದಿಂದ 2.5 ಸಾವಿರ ಜನ ಬೆಂಗಳೂರಿಗೆ ಬರ್ತಾರೆ. ಎಲ್ಲರಿಗೂ RTPCR ಟೆಸ್ಟ್ ಕಡ್ಡಾಯ ಮಾಡಲಾಗುತ್ತೆ ಎಂದರು.

     ಲಸಿಕೆ ಪಡೆಯದೇ ಹೋದರೆ ಸರ್ಕಾರಿ ಸೌಲಭ್ಯ ನೀಡಬಾರದು ಅನ್ನೋ ಶಿಫಾರಸು ವಿಚಾರವಾಗಿ ಮಾತನಾಡಿದ ಅವರು, ಜನರಿಗೆ ಕಾನೂನು ತಂದು, ದಂಡ ಹಾಕಿ ಲಸಿಕೆ ಕೊಡೊ ಚಿಂತನೆ ಸರ್ಕಾರಕ್ಕೆ ಇಲ್ಲ. ಆದರೆ ಎರಡನೇ ಡೋಸ್ ಲಸಿಕೆ ಪಡೆಯದೇ ಇರೋರಿಗೆ ಆಸ್ಪತ್ರೆ ವೆಚ್ಚ ಭರಿಸಬಾರದು ಅಂತ ಸಮಿತಿ ಶಿಫಾರಸ್ಸು ಮಾಡಿದೆ. ಇದರ ಜೊತೆ ಅನೇಕ ಶಿಫಾರಸು ತಜ್ಞರ ತಂಡ ಮಾಡಿದೆ. ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡೋರಿಗೆ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡೋ ಬಗ್ಗೆ ಶಿಫಾರಸು ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.