Tag: ಓಪನ್ ಥಿಯೇಟರ್

  • ಕಾರ್‌ನಲ್ಲೇ ಕುಳಿತು ಸಿನಿಮಾ ನೋಡುವ ಓಪನ್ ಥಿಯೇಟರ್‌ಗೆ ಚಾಲನೆ

    ಕಾರ್‌ನಲ್ಲೇ ಕುಳಿತು ಸಿನಿಮಾ ನೋಡುವ ಓಪನ್ ಥಿಯೇಟರ್‌ಗೆ ಚಾಲನೆ

    ಮುಂಬೈ: ದೇಶದ ಮೊಟ್ಟ ಮೊದಲ ರೂಫ್ ಟಾಪ್ ಡ್ರೈವ್ ಇನ್( ಓಪನ್ ಥಿಯೇಟರ್) ಸಿನಿಮಾ ಥಿಯೇಟರ್ ಮುಂಬೈನಲ್ಲಿ ಶುಕ್ರವಾರದಿಂದ ಪ್ರಾರಂಭವಾಗಿದೆ.

    ದೇಶದ ಮೊದಲ ಓಪನ್ ಥಿಯೇಟರ್ ಪ್ರಾರಂಭವಾಗಿದೆ. ಜಿಯೋ ವರ್ಲ್ಡ್ ಡ್ರೈವ್ ಇನ್ ಮಾಲ್‍ನಲ್ಲಿರುವ ಜಿಯೋ ಡ್ರೈವ್ ಇನ್ ಥಿಯೇಟರ್ ಭಾರತದ ದೊಡ್ಡ ಪರದೆ ಹೊಂದಿದ ಥಿಯೇಟರ್‌‌ಗಳಲ್ಲಿ ಒಂದಾಗಿದೆ.

    ಕೊರೊನಾ ವೈರಸ್ ಸಾಂಕ್ರಾಮಿಕದ ನಂತರ ಜಗತ್ತು ಇನ್ನೂ ಹೊಸ ಜೀವನಕ್ಕೆ ಹೊಂದಿಕೊಳ್ಳುತ್ತಿರುವುದರಿಂದ, ಡ್ರೈವ್-ಇನ್ ಥಿಯೇಟರ್ ಅನ್ನು ಚಲನಚಿತ್ರ ಅಭಿಮಾನಿಗಳಿಗೆ ಸುರಕ್ಷಿತವಾದ ಮುಕ್ತ ಸ್ಥಳವಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸೂರ್ಯವಂಶಿ ಸಿನಿಮಾ ರೂಫ್‍ಟಾಪ್ ಡ್ರೈವ್-ಇನ್ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿರುವ ಮೊದಲ ಚಲನಚಿತ್ರವಾಗಿದೆ. ಸುಮಾರು 290 ಕಾರ್ ಪಾರ್ಕ್ ಮಾಡುವ ವ್ಯವಸ್ಥೆ. ಸ್ಥಳಾವಕಾಶ ನೀಡಬಹುದಾದ ಡ್ರೈವ್-ಇನ್ ಥಿಯೇಟರ್, ರಿಲಯನ್ಸ್ ರೀಟೈಲ್ ಸಹಭಾಗಿತ್ವದ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್ ಇದಾಗಿದೆ. ಇದನ್ನೂ ಓದಿ: ದತ್ತಪೀಠಕ್ಕೆ ತೆರಳ್ತಿದ್ದ ಬಸ್ ಮೇಲೆ ಅನ್ಯ ಕೋಮಿನ ಗುಂಪಿನಿಂದ ಕಲ್ಲುತೂರಾಟ

    ಇದರ ವಿಶೇಷತೆ ಏನು?
    * ರೂಪ್ ಟಾಪ್ ಡ್ರೈವ್ ಇನ್ ಥಿಯೇಟರ್‍ನಲ್ಲಿ 290 ಕಾರು ಪಾರ್ಕ್ ಮಾಡುವ ವ್ಯವಸ್ಥೆ.
    * ಕ್ರಿಸ್ಟಿ ಆರ್‌ಜಿಬಿ ಲೇಸರ್‌ ಪ್ರೊಜೆಕ್ಷನ್‍ನಿಂದ ಸಿನಿಮಾ ಪ್ರದರ್ಶನ
    * ದೇಶದಲ್ಲೇ ಅತೀ ದೊಡ್ಡ ಪ್ರದರ್ಶನ ಪರದೆ ಹೊಂದಿರುವ ಚಿತ್ರ ಮಂದಿರದಲ್ಲಿ 24 ಮೀಟರ್
    * ಪ್ರತಿ ಕಾರಿಗೆ 1,200ರೂಪಾಯಿ ಟಿಕೆಟ್ ಶುಲ್ಕವಾಗಿರುತ್ತದೆ. ನಾಲ್ಕು ಮಂದಿ ಮಾತ್ರ ವಾಹನದಲ್ಲಿ ಕುಳಿತು ಸಿನಿಮಾ ನೋಡಬಹುದಾಗಿದೆ. ಇದನ್ನೂ ಓದಿ: ಕಾಲೇಜಿನಲ್ಲಿ ವಿದ್ಯಾರ್ಥಿಗಳ 250 ಮೊಬೈಲ್ ಜಪ್ತಿ – ಫೋನ್ ನೋಡಿ ಪೋಷಕರು ಶಾಕ್

  • ನಿರಾಶ್ರಿತ ಕೇಂದ್ರಗಳಲ್ಲಿ ಓಪನ್ ಥಿಯೇಟರ್ ವ್ಯವಸ್ಥೆ ಕಲ್ಪಿಸಿದ ಪೊಲೀಸರು

    ನಿರಾಶ್ರಿತ ಕೇಂದ್ರಗಳಲ್ಲಿ ಓಪನ್ ಥಿಯೇಟರ್ ವ್ಯವಸ್ಥೆ ಕಲ್ಪಿಸಿದ ಪೊಲೀಸರು

    – ಖಿನ್ನತೆಗೊಳಗಾಗದಂತೆ ಕ್ರಮ
    – ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಮುಂಬೈ: ಕೊರೊನಾ ವೈರಸ್ ನಿಂದಾಗಿ ಲಾಕ್‍ಡೌನ್ ಮಾಡಲಾಗಿದೆ. ಅಲ್ಲದೆ ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರ ಮಧ್ಯೆ ನಾಗ್ಪುರ ಪೊಲೀಸರು ನಿರಾಶ್ರಿತ ಕೇಂದ್ರಗಳಲ್ಲಿ ಮನರಂಜನೆಗಾಗಿ ಉತ್ತಮ ವ್ಯವಸ್ಥೆ ಕಲ್ಪಿಸಿದ್ದಾರೆ.

    ನಿರಾಶ್ರಿತರು ಒಂದೇ ಸ್ಥಳದಲ್ಲಿದ್ದು ಆತಂಕಕ್ಕೊಳಗಾಗಿದ್ದು, ಅವರ ಆತಂಕವನ್ನು ಕಡಿಮೆ ಮಾಡಿ ಮನರಂಜನೆ ನೀಡಲು ನಾಗ್ಪುರ ಪೊಲೀಸರು ಹೊಸ ಐಡಿಯಾ ಹುಡುಕಿದ್ದು, ನಿರಾಶ್ರಿತ ಕೇಂದ್ರಗಳಲ್ಲಿ ಓಪನ್ ಥಿಯೇಟರ್ ವ್ಯವಸ್ಥೆ ಕಲ್ಪಿಸಿದ್ದಾರೆ.

    ಈ ಸೋಮವಾರ ಟ್ವೀಟ್ ಮಾಡುವ ಮೂಲಕ ಪೊಲೀಸ್ ಇಲಾಖೆ ಮಾಹಿತಿ ಬಹಿರಂಗಪಡಿಸಿದ್ದು, ಈ ಕುರಿತು ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಗಮನಸೆಳೆದಿದ್ದಾರೆ. ಓಪನ್ ಥಿಯೇಟರ್ನಲ್ಲಿ ಮೊದಲ ಸಿನಿಮಾ ಅಜಯ್ ದೇವಗನ್ ಹಾಗೂ ಕಾಜಲ್ ಅಭಿನಯದ ತಾನಾಜಿ ಸಿನಿಮಾ ಪ್ರಸಾರವಾಗಿದೆ. ಅಲ್ಲಿರುವ ಜನ ಸಹ ಮುಖಕ್ಕೆ ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸಿನಿಮಾವನ್ನು ಎಂಜಾಯ್ ಮಾಡಿದ್ದಾರೆ.

    ಒಂದೇ ಕಡೆ ಕೂತವರು ಚಲನಚಿತ್ರ ನೋಡುವುದರಿಂದಾಗಿ ಅವರ ಗಮನವನ್ನು ಬೇರೆಡೆ ಸೆಳೆಯುತ್ತದೆ. ಇದರಿಂದಾಗಿ ಆತಂಕ ಹಾಗೂ ಖಿನ್ನತೆಯಿಂದ ದೂರವಾಗಬಹುದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ನಿರಾಶ್ರಿತರ ಕೇಂದ್ರಗಳಲ್ಲಿ ಓಪನ್ ಥಿಯೇಟರ್ ವ್ಯವಸ್ಥೆ ಮಾಡಲಾಗಿದೆ ಎಂದು ನಾಗ್ಪುರ ಸಿಟಿ ಪೊಲೀಸ್ ಕಾತೆಯಿಂದ ಟ್ವೀಟ್ ಮಾಡಲಾಗಿದೆ.

    ಪೊಲೀಸರ ಈ ಕ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಮೆಂಟ್ ಹಾಗೂ ಲೈಕ್ ಮಾಡುವ ಮೂಲಕ ಪ್ರಶಂಸಿದ್ದಾರೆ. ಮಾನಸಿಕ ಖಿನ್ನತೆ ಕುರಿತು ಸಹ ಪೊಲೀಸರು ಯೋಚಿಸಿರುವುದು ತುಂಬಾ ಒಳ್ಳೆಯ ಬೆಳವಣಿಗೆ. ಪೊಲೀಸರಿಂದ ಉತ್ತಮ ಕಾರ್ಯವಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೊಬ್ಬರು ಈ ಕರಿತು ಪ್ರತಿಕ್ರಿಯಿಸಿ, ತುಂಬಾ ಒಳ್ಳೆಯ ನಿರ್ಧಾರ ಎಂದು ತಿಳಿಸಿದ್ದಾರೆ. ಹೀಗೆ ನಾಗ್ಪುರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.