Tag: ಓಪನಿಂಗ್

  • ಟೀಂ ಇಂಡಿಯಾದಲ್ಲಿ ಓಪನರ್ ಸ್ಥಾನಕ್ಕೆ ಬಿಗ್ ಪೈಪೋಟಿ

    ಟೀಂ ಇಂಡಿಯಾದಲ್ಲಿ ಓಪನರ್ ಸ್ಥಾನಕ್ಕೆ ಬಿಗ್ ಪೈಪೋಟಿ

    ಬೆಂಗಳೂರು : 2023 ರ ಏಕದಿನ ಕ್ರಿಕೆಟ್ ವಿಶ್ವಕಪ್‍ಗೆ ಟೀಂ ಇಂಡಿಯಾದಲ್ಲಿ ಪೈಪೋಟಿ ಆರಂಭವಾಗಿದ್ದು, ಅದರಲ್ಲೂ ಆರಂಭಿಕನ ಸ್ಥಾನಕ್ಕೆ ಪೃಥ್ವಿ ಶಾ, ಶುಭಮನ್ ಗಿಲ್, ಮಯಾಂಕ್ ಅಗರ್ ವಾಲ್, ಕೆ.ಎಲ್. ರಾಹುಲ್, ಶಿಖರ್ ಧವನ್ ಮಧ್ಯೆ ಸ್ಪರ್ಧೆ ಪ್ರಾರಂಭವಾಗಿದೆ.

    ಸದ್ಯ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಓಪನಿಂಗ್ ಜೋಡಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಶಿಖರ್ ಧವನ್ ಅವರನ್ನು ನ್ಯೂಜಿಲ್ಯಾಂಡ್ ಪ್ರವಾಸದಿಂದ ಕೈ ಬಿಡಲಾಗಿದೆ. ಈ ಸ್ಥಾನಕ್ಕೆ ಪೃಥ್ವಿ ಶಾ ಅವರನ್ನ ಆಯ್ಕೆ ಮಾಡಲಾಗಿದೆ.

    ನ್ಯೂಜಿಲೆಂಡ್ ಎ ವಿರುದ್ಧ ಪೃಥ್ವಿ ಶಾ  ಶತಕ ಸಿಡಿಸಿ ಉತ್ತಮ ಫಾರ್ಮ್ ನಲ್ಲಿ ಇದ್ದಾರೆ. ರಣಜಿಯಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ. ಒಂದು ವೇಳೆ ನ್ಯೂಜಿಲ್ಯಾಂಡ್ ವಿರುದ್ಧ ಪೃಥ್ವಿ ಶಾ ಚೆನ್ನಾಗಿ ಪ್ರದರ್ಶನ ತೋರಿದರೆ ವಿಶ್ವಕಪ್‍ಗೆ ಅವಕಾಶ ಗಿಟ್ಟಿಸುವ ಸಾಧ್ಯತೆಯಿದೆ.

    ಕನ್ನಡಿಗ ಕೆ.ಎಲ್.ರಾಹುಲ್ ಕೂಡಾ ಉತ್ತಮವಾಗಿ ಆಡುತ್ತಿದ್ದಾರೆ. ರಿಷಬ್ ಪಂತ್ ಗಾಯದ ಸಮಸ್ಯೆಯಿಂದಾಗಿ ರಾಹುಲ್ ಅವರಿಗೆ ಕೀಪಿಂಗ್ ಜವಾಬ್ದಾರಿಯೂ ಸಿಕ್ಕಿದೆ. ಓಪನಿಂಗ್ ನಲ್ಲಿ ರೋಹಿತ್ ಜೊತೆ ಉತ್ತಮ ಜೊತೆಯಾಟ ಆಡಿದ್ದು, ಟಿಂ ಮ್ಯಾನೆಜ್‍ಮೆಂಟ್ ರಾಹುಲ್ ಅವರನ್ನೇ ಆರಂಭಿಕನ ಸ್ಥಾನಕ್ಕೆ ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ.

    ಟೆಸ್ಟ್ ತಂಡದಲ್ಲಿ ಆರಂಭಿಕ ಆಟಗಾರನಾಗಿರೋ ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡಾ ಆಯ್ಕೆಗಾರರ ಫೆವರೇಟ್ ಆಗಿದ್ದಾರೆ. ಒಂದು ವೇಳೆ ಪೃಥ್ವಿ ಶಾ ಮತ್ತು ರಾಹುಲ್ ವಿಫಲವಾದರೆ ಮಯಾಂಕ್ ಅಗರ್ವಾಲ್  ಅವರಿಗೂ ಚಾನ್ಸ್ ಸಿಗುವ ಸಾಧ್ಯತೆ ಇದೆ.

    ಅಂಡರ್ 19 ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಈಗ ರಣಜಿಯಲ್ಲೂ ಉತ್ತಮ ಪ್ರದರ್ಶನ ತೋರುತ್ತಿರೋ ಶುಭಮನ್ ಗಿಲ್ ಕೂಡಾ ಓಪನಿಂಗ್ ರೇಸ್ ನಲ್ಲಿ ಇದ್ದಾರೆ. ಭಾರತ ಎ ತಂಡ ಹಾಗೂ ರಣಜಿ ಯಲ್ಲಿ ಶುಭಮನ್ ಗಿಲ್ ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಓಪನಿಂಗ್ ಸ್ಥಾನಕ್ಕೆ ಇವರ ಹೆಸರು ಕೇಳಿ ಬರುತ್ತಿದೆ. ಶಿಖರ್ ಧವನ್ ಓಪನಿಂಗ್ ಸ್ಥಾನಕ್ಕೆ ಟೀಂ ಇಂಡಿಯಾದ ಮೊದಲ ಆಯ್ಕೆ. ಫಾರ್ಮ್ ನಲ್ಲಿ ಇದ್ದರೆ ಬಹುತೇಕ ಅವರೇ ರೋಹಿತ್ ಜೊತೆ ಆಟ ಪ್ರಾರಂಭ ಮಾಡ್ತಾರೆ. ಗಾಯದ ಸಮಸ್ಯೆಯಿಂದಾಗಿ ಧವನ್ ಮತ್ತೆ ಆಯ್ಕೆ ಆಗಬೇಕಾದ್ರೆ ಉತ್ತಮ ಪ್ರದರ್ಶನ ತೋರಲೇಬೇಕು. ಒಂದು ವೇಳೆ ಧವನ್ ಉತ್ತಮ ಪ್ರದರ್ಶನ ನೀಡದೇ ಹೋದರೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವುದು ಗ್ಯಾರಂಟಿ. ಹೀಗಾಗಿ 5 ಜನರ ಮಧ್ಯೆ ಭಾರೀ ಪೈಪೋಟಿಯಿದ್ದು 2023ರ ವಿಶ್ವಕಪ್ ಕ್ರಿಕೆಟಿನಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ ಕಾದುನೋಡಬೇಕು.

  • ಬಿಗ್ ಬಾಸ್ ಸೀಸನ್-6 ಓಪನಿಂಗ್ ಡೇಟ್ ಫಿಕ್ಸ್

    ಬಿಗ್ ಬಾಸ್ ಸೀಸನ್-6 ಓಪನಿಂಗ್ ಡೇಟ್ ಫಿಕ್ಸ್

    ಬೆಂಗಳೂರು: ಕಿಚ್ಚ ಸುದೀಪ್ ನಿರೂಪಕರಾಗಿರುವ ಬಹು ನಿರೀಕ್ಷಿತ ಬಿಗ್ ಬಾಸ್ ಸೀಸನ್-6 ಕೆಲವೇ ದಿನಗಳಲ್ಲೇ ಶುರುವಾಗಲಿದೆ.

    ಬಿಗ್ ಬಾಸ್ ಸೀಸನ್- 6 ಮುಂದಿನ ಅಕ್ಟೋಬರ್ 21ರಂದು ಆರಂಭವಾಗಲಿದೆ ಎಂದು ಖಾಸಗಿ ವಾಹಿನಿ ಪ್ರಕಟಿಸಿದೆ. ಅಕ್ಟೋಬರ್ 21ರಂದು ಸಂಜೆ 6 ಗಂಟೆಯಿಂದ ಗ್ರಾಂಡ್ ಓಪನಿಂಗ್ ಕಾರ್ಯಕ್ರಮ ಪ್ರಸಾರವಾಗಲಿದೆ.

    ಗ್ರಾಂಡ್ ಓಪನಿಂಗ್ ಕಾರ್ಯಕ್ರಮದ ದಿನಾಂಕದ ಪ್ರೋಮೋವನ್ನು ಖಾಸಗಿ ವಾಹಿನಿ ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ಅಭಿನಯವನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ.

    ಈ ಪ್ರೋಮೋದಲ್ಲಿ ಸುದೀಪ್ ಈ ಹಿಂದೆ ಬಿಗ್ ಬಾಸ್‍ನಲ್ಲಿದ್ದ ಹಳೆಯ ಸ್ಪರ್ಧಿಗಳನ್ನು ಅನುಕರಣೆ ಮಾಡಿದ್ದಾರೆ. ನಿಜ ಹೇಳ್ತೀನಿ ಬಿಗ್ ಬಾಸ್ ಇಲ್ಲಿ ನಾನು ನಾನಾಗಿ ಇದ್ದೀನಿ. ಎಲ್ಲರೂ ಸೇರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಬಿಗ್‍ಬಾಸ್, ಎಷ್ಟು ನಾಟಕ ಬಿಗ್ ಬಾಸ್ ಎಂದು ಹಳೆಯ ಸ್ಪರ್ಧಿಗಳ ಅನುಕರಣೆ ಮಾಡಿದ್ದಾರೆ.

    ಈ ಬಾರಿ ಬಿಗ್‍ಬಾಸ್ ಶೋನಲ್ಲಿ ಭಾಗವಹಿಸುವ 6 ಸ್ಪರ್ಧಿಗಳ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲನೆಯದಾಗಿ ಆರ್.ಜೆ ರ್‍ಯಾಪಿಡ್ ರಶ್ಮಿ, ರ್‍ಯಾಪರ್ ಚಂದನ್ ಶೆಟ್ಟಿಯ `ಟಕೀಲಾ’ ಹಾಡಿನಲ್ಲಿ ಸೊಂಟ ಬಳುಕಿಸಿರುವ ಶಾಲಿನಿ, ಸ್ಯಾಂಡಲ್‍ವುಡ್ ನಟಿ ಭಾವನ ಮತ್ತು ಸುಮನ್ ರಂಗನಾಥ್ ಕೂಡ ಈ ಬಾರಿ ಬಿಗ್‍ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂದು ಚರ್ಚೆಯಾಗುತ್ತಿದೆ.

    ಬಿಗ್‍ಬಾಸ್ ಮನೆ ಅಂದಮೇಲೆ ಅಲ್ಲಿ ಮನರಂಜನೆ, ಆಟ, ಹರಟೆ ಎಲ್ಲವೂ ಇರಲೆಬೇಕು. ಹೀಗಾಗಿ ಈ ಬಾರಿ ಕುರಿ ಪ್ರತಾಪ್ ಅವರನ್ನು ಬಿಗ್‍ಬಾಸ್ ಮನೆಗೆ ಕಳುಹಿಸುವ ಯೋಚನೆಯನ್ನು ಬಿಗ್‍ಬಾಸ್ ಮಾಡಿದ್ದಾರಂತೆ. ಇತ್ತ ಬಿಗ್‍ಬಾಸ್ ಶೋನಲ್ಲಿ ಪ್ರೇಮ್ ಕುಮಾರಿ ಕೂಡ ಇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಶುಭಪುಂಜಾ, ನಟ ಟೆನ್ನಿಸ್ ಕೃಷ್ಣ, ಪುಟ್ಟಗೌರಿ ಖ್ಯಾತಿಯ ಶಿವರಂಜಿನಿ, ನಟ ಅನಿರುದ್ದ್, ಮುಂಗಾರು ಮಳೆ – 2 ನೇಹಾಶೆಟ್ಟಿ, ಸಿಲ್ಲಿಲಲ್ಲಿ ರವಿಶಂಕರ್, ಸರಿಗಮಪ ಚೆನ್ನಪ್ಪ, ನಟ ಅಚ್ಯುತ್ ಕುಮಾರ್, ಕಿರಿಕ್ ಪಾರ್ಟಿ ಚಂದನ್ ಆಚಾರ್, ನಟಿ ಮಯೂರಿ, ತಿಥಿ ಸಿನಿಮಾ ಖ್ಯಾತಿಯ ಅಭಿ, ಡಾ. ಶಂಕರೇಗೌಡ ಇವರೆಲ್ಲರ ಹೆಸರು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv