Tag: ಓಣಂ ಹಬ್ಬ

  • ಓಣಂ ಹಬ್ಬದಂದು ‌’ವೆಟ್ಟೈಯಾನ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ತಲೈವಾ

    ಓಣಂ ಹಬ್ಬದಂದು ‌’ವೆಟ್ಟೈಯಾನ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ತಲೈವಾ

    ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಓಣಂ ಹಬ್ಬದಂದು (ಸೆ.15) ‘ಮನಸಿಲಾಯೋ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತಲೈವಾ ಮಾಡಿರುವ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಮೊದಲ ಬಾರಿಗೆ ಮಗನ ಮುಖ ರಿವೀಲ್ ಮಾಡಿದ ‘ಹೆಬ್ಬುಲಿ’ ನಟಿ ಅಮಲಾ

    ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ (Coolie) ಸಿನಿಮಾ ಸೆಟ್‌ನಲ್ಲಿ ತಾವೇ ನಟಿಸಿರುವ ‘ವೆಟ್ಟೈಯಾನ್’ ಸಿನಿಮಾದ ಹಾಡಿಗೆ ಚಿತ್ರತಂಡದ ಜೊತೆ ಹೆಜ್ಜೆ ಹಾಕಿ ರಜನಿಕಾಂತ್ ಸಂಭ್ರಮಿಸಿದ್ದಾರೆ. ಈ ಸ್ಪೆಷಲ್ ವಿಡಿಯೋ ಮೂಲಕ ಫ್ಯಾನ್ಸ್‌ಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ಕೊನೆಯ ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್

     

    View this post on Instagram

     

    A post shared by Lyca Productions (@lycaproductions)

    ಅಂದಹಾಗೆ, ಬಹುನಿರೀಕ್ಷಿತ ಸಿನಿಮಾ ‘ವೆಟ್ಟೈಯಾನ್’ ಬಿಡುಗಡೆ ಸಜ್ಜಾಗಿದೆ. ಅಕ್ಟೋಬರ್ 10ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ವೆಟ್ಟೈಯಾನ್ ಬಳಗ ಮೊದಲ ಹಾಡನ್ನು ಇತ್ತೀಚೆಗೆ ರಿಲೀಸ್ ಮಾಡಿತ್ತು.

    ‘ವೆಟ್ಟೈಯಾನ್’ ಸಿನಿಮಾದ ‘ಮನಸಿಲಾಯೋ’ ಎಂಬ ಸಾಂಗ್ ಸಖತ್ ಸದ್ದು ಮಾಡುತ್ತಿದೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಹಾಡು ರಿಲೀಸ್ ಮಾಡಲಾಗಿದ್ದು, ಕಲರ್‌ಫುಲ್ ಸೆಟ್ ನಲ್ಲಿ ತಲೈವ ಜೊತೆ ಮಂಜು ವಾರಿಯರ್ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದರು. ರಾಕ್ ಸ್ಟಾರ್ ಅನಿರುದ್ಧ ರವಿಚಂದರ್ ಹಾಡಿಗೆ ಟ್ಯೂನ್ ಮಾಡಿರೋದು ವಿಶೇಷ.

    ರಜನಿಕಾಂತ್ ಹಾಗೂ ಅನಿರುದ್ಧ ಕಾಂಬೋದಲ್ಲಿ ಬಂದ ಹಾಡುಗಳು ಹಿಟ್ ಲಿಸ್ಟ್‌ ಸೇರಿವೆ. ಈ ಹಿಂದೆ ಪೆಟ್ಟಾ, ದರ್ಬಾರ್, ಜೈಲರ್ ಬಳಿಕ ಈ ಜೋಡಿ ವೆಟ್ಟೈಯಾನ್‌ಗಾಗಿ ಒಂದಾಗಿದೆ. ಮನಸಿಲಾಯೋ ಸಿಂಗಿಂಗ್ ಸಖತ್ ಸೌಂಡ್ ಮಾಡುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ.

    ಸೂರ್ಯ ನಟಿಸಿದ ‘ಜೈ ಭೀಮ್’ ಸಿನಿಮಾ ನಿರ್ದೇಶಿಸಿದ್ದ ಟಿ.ಜೆ. ಜ್ಞಾನವೇಲ್ `ವೆಟ್ಟೈಯಾನ್’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗೋದಿಕ್ಕೆ ಮತ್ತೊಂದು ಕಾರಣ ತಲೈವಾ ಹಾಗೂ ಬಿಗ್ ಬಿ ಸಂಗಮ. ಭಾರತೀಯ ಚಿತ್ರರಂಗದ ದಿಗ್ಗಜರಾದ ಬಿಗ್ ಬಿ ಹಾಗೂ ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ಮೂಲಕ ಮೂರು ದಶಕದ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಮಾಗಮಕ್ಕೆ ವೇದಿಕೆ ನಿರ್ಮಿಸಿದೆ.

    ಈ ಚಿತ್ರದಲ್ಲಿ ರಜನಿಕಾಂತ್, ಅಮಿತಾಭ್ ಜೊತೆ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಸೇರಿದಂತೆ ಇನ್ನೂ ಅನೇಕ ಪ್ರಮುಖ ನಟರು ನಟಿಸಿದ್ದಾರೆ.

  • ಗೆಳೆಯನ ಜೊತೆ ನಯನತಾರಾ ಓಣಂ ಆಚರಣೆ – ರೊಮ್ಯಾಂಟಿಕ್ ಫೋಟೋಶೂಟ್

    ಗೆಳೆಯನ ಜೊತೆ ನಯನತಾರಾ ಓಣಂ ಆಚರಣೆ – ರೊಮ್ಯಾಂಟಿಕ್ ಫೋಟೋಶೂಟ್

    ತಿರುವನಂತಪುರಂ: ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿರುವುದು ತಿಳಿದಿರುವ ವಿಚಾರ. ಶೀಘ್ರದಲ್ಲೇ ಈ ಜೋಡಿ ವಿವಾಹ ಸಹ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಈ ಜೋಡಿ ಒಟ್ಟಿಗೆ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.

    ಕೇರಳದ ಅತೀ ದೊಡ್ಡ ಹಬ್ಬ ಓಣಂ. ಹೀಗಾಗಿ ಕೊರೊನಾ ನಡುವೆಯೂ ಪ್ರಪಂಚದಾದ್ಯಂತ ಮಲಯಾಳಿಗಳು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅದೇ ರೀತಿ ನಟಿ ನಯನತಾರಾ ತಮ್ಮ ಹುಟ್ಟೂರಿನಲ್ಲಿ ಓಣಂ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಗೆಳೆಯ ವಿಘ್ನೇಶ್ ಸಹ ಜೊತೆಯಲ್ಲಿ ಇದ್ದಿದ್ದು ಓಣಂ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ.

    https://www.instagram.com/p/CEjZ16VB_q2/?igshid=3qzdep2f1uzt

    ನಯನತಾರಾ ಗೆಳೆಯ ವಿಘ್ನೇಶ್ ಶಿವನ್ ಜೊತೆ ತಮ್ಮ ಹುಟ್ಟೂರು ಕೊಚ್ಚಿಗೆ ಹೋಗಿದ್ದಾರೆ. ಅಲ್ಲಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಹಬ್ಬದ ಜೊತೆಗೆ ಇಬ್ಬರು ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಪು ಧರಿಸಿರುವ ನಯನತಾರಾ ಮತ್ತು ವಿಘ್ನೇಶ್ ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಯನತಾರ ಮತ್ತು ವಿಘ್ನೇಶ್ ಶಿವನ್ ಇಬ್ಬರು ಇನ್‍ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಆ ಫೋಟೋಗಳಿಗೆ “ಖುಷಿಯಾಗಿರಲು ಕಾರಣಗಳನ್ನು ಕಂಡುಕೊಳ್ಳೋಣ. ಅವುಗಳನ್ನು ಎಲ್ಲರೊಂದಿಗೆ ಭರವಸೆಯಿಂದ ಹೆಚ್ಚಿಕೊಳ್ಳೋಣ. ಈ ಕೊರೊನಾ ಸಂದರ್ಭದಲ್ಲಿಯೂ ಮುಖದಲ್ಲಿ ಮಂದಹಾಸವನ್ನು ಆಹ್ವಾನಿಸುವ ಏಕೈಕ ಮಾರ್ಗವಾಗಿದೆ” ಎಂದು ವಿಘ್ನೇಶ್ ಬರೆದುಕೊಂಡಿದ್ದಾರೆ.

    https://www.instagram.com/p/CEjRm3-Be7S/?igshid=13lry2wyew4uh

    ಈ ಜೋಡಿಯ ಜೊತೆ ನಯನತಾರಾ ತಾಯಿ ಕೂಡ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ರಿಲೇಷನ್‍ಶಿಪ್‍ನಲ್ಲಿದ್ದು, ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾವಾಗ ಮದುವೆಯಾಗುತ್ತದೆ ಎಂದು ಇಬ್ಬರೂ ಅಧಿಕೃತವಾಗಿ ಹೇಳಿಲ್ಲ.

    https://www.instagram.com/p/CEjPqFDhqNn/?igshid=2hto1mjpkaey