Tag: ಓಡಿಶಾ

  • ಪುರಿಯ ಜಗನ್ನಾಥ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ – ದೇವಾಲಯದ ಸುತ್ತ ಪೊಲೀಸ್ ಬಿಗಿಭದ್ರತೆ

    ಪುರಿಯ ಜಗನ್ನಾಥ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ – ದೇವಾಲಯದ ಸುತ್ತ ಪೊಲೀಸ್ ಬಿಗಿಭದ್ರತೆ

    ಭುವನೇಶ್ವರ: ಪುರಿಯ ಜಗನ್ನಾಥ ದೇವಾಲಯದ (Puri Jagannath Temple) ಮೇಲೆ ಇಂದು ಡ್ರೋನ್ (Drone) ಹಾರಾಟ ನಡೆಸಿದ್ದು, ಈ ಹಿನ್ನೆಲೆ ತನಿಖೆಗಾಗಿ ತಂಡವನ್ನು ರಚಿಸಿದೆ.

    ಇಂದು (ಜ.05) ಮುಂಜಾನೆ 4:10ರ ಸುಮಾರಿಗೆ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ ನಡೆಸಿದ್ದು, ಸುಮಾರು ಅರ್ಧಗಂಟೆಗಳ ಕಾಲ ಹಾರಾಡಿದೆ. ಇದರಿಂದ ಭಯದ ವಾತಾವರಣ ಸೃಷ್ಟಿಯಾಗಿದ್ದು, ದೇವಾಲಯದ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.ಇದನ್ನೂ ಓದಿ: ಮಗಳ ಜೊತೆಗಿನ ಮುದ್ದಾದ ವಿಡಿಯೋ ಹಂಚಿಕೊಂಡ ಮಿಲನಾ ನಾಗರಾಜ್‌

    ಈ ಕುರಿತು ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಮಾತನಾಡಿ, ದೇವಸ್ಥಾನದ ಮೇಲೆ ಡ್ರೋನ್ ಹಾರಿಸುವುದು ಕಾನೂನುಬಾಹಿರ ಮತ್ತು ಸ್ವೀಕಾರಾರ್ಹವಲ್ಲ, ಭದ್ರತೆಯನ್ನು ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ವ್ಯಕ್ತಿಯನ್ನು ಪತ್ತೆ ಹಚ್ಚಿ, ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಪುರಿ ಎಸ್ಪಿ ತಂಡಗಳನ್ನು ರಚಿಸಿ, ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದರು.

    ದೇವಾಲಯವು ಡ್ರೋನ್ ಹಾರಾಟ ನಿಷೇಧ ವಲಯವಾಗಿರುವುದರಿಂದ ಸದ್ಯ ಭದ್ರತೆಯನ್ನು ಹೆಚ್ಚಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಲು ದೇವಸ್ಥಾನದ ಸುತ್ತಲಿನ ನಾಲ್ಕು ಕಾವಲು ಗೋಪುರಗಳಲ್ಲಿ 24 ಗಂಟೆಯೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಹೇಳಿದರು.

    ಸದ್ಯ ಯಾರೋ ಒಬ್ಬ ವ್ಲಾಗರ್ ಡ್ರೋನ್ ಅನ್ನು ದೇವಸ್ಥಾನದ ಮೇಲೆ ಹಾರಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ತನಿಖೆ ನಡೆಸಿ, ಅದರ ಹಿಂದಿನ ಉದ್ದೇಶ ತಿಳಿದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಚುನಾವಣೆಯಲ್ಲಿ ಗೆದ್ದರೆ ಪ್ರಿಯಾಂಕ ಕೆನ್ನೆಯಂತೆ ನಯವಾದ ರಸ್ತೆಗಳನ್ನು ನಿರ್ಮಿಸುತ್ತೇನೆ: ಬಿಜೆಪಿ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ

  • ಪಿಎಂ ಮೋದಿ ಪ್ರಧಾನ ಕಾರ್ಯದರ್ಶಿಯ ಅಳಿಯ, ಮಗಳ ಸೋಗಿನಲ್ಲಿ ವಂಚನೆ – ಓಡಿಶಾ ದಂಪತಿ ಅರೆಸ್ಟ್

    ಪಿಎಂ ಮೋದಿ ಪ್ರಧಾನ ಕಾರ್ಯದರ್ಶಿಯ ಅಳಿಯ, ಮಗಳ ಸೋಗಿನಲ್ಲಿ ವಂಚನೆ – ಓಡಿಶಾ ದಂಪತಿ ಅರೆಸ್ಟ್

    ಭುವನೇಶ್ವರ: ಪಿಎಂ ಪ್ರಧಾನ ಕಾರ್ಯದರ್ಶಿಯ ಮಗಳು ಹಾಗೂ ಅಳಿಯನ ಸೋಗಿನಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಓಡಿಶಾ ದಂಪತಿಯನ್ನು (Odisha) ಬಂಧಿಸಲಾಗಿದೆ.

    ಆರೋಪಿಗಳನ್ನು ಕಂಧಮಾಲ್ ಜಿಲ್ಲೆಯ ನಿವಾಸಿ ಪತ್ನಿ ಹನ್ಸಿತಾ ಅಭಿಲಿಪ್ಸಾ (38) ಹಾಗೂ ಪತಿ ಅನಿಲ್ ಕುಮಾರ್ ಮೊಹಂತಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: BBK 11: ‘ರಾಧಾ ಕೃಷ್ಣ’ರಂತೆ ಇದ್ದೀರಾ: ಭವ್ಯಾಗೆ ನೇರವಾಗಿ ಹೇಳಿದ ತ್ರಿವಿಕ್ರಮ್‌ ತಾಯಿ

    ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ (PK Mishra) ಅವರ ಮಗಳು ಮತ್ತು ಅಳಿಯನ ಸೋಗಿನಲ್ಲಿ ಬಂದು ಜನರನ್ನು ವಂಚಿಸುತ್ತಿದ್ದರು ಹಾಗೂ ನಾವು ಪ್ರಭಾವಿಗಳ ಸಂಪರ್ಕವನ್ನು ಹೊಂದಿದ್ದೇವೆ ಎಂದು ಹೇಳಿಕೊಂಡು ವಂಚನೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಒಡಿಶಾ ಪೊಲೀಸರು ಬಂಧಿಸಿದ್ದಾರೆ.

    ತನಿಖೆ ನಡೆಸಿದ ಪೊಲೀಸರು ದಂಪತಿಯ ನಿವಾಸದಿಂದ ಹಲವಾರು ಛಾಯಾಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಉನ್ನತ ವ್ಯಕ್ತಿಗಳೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಇಟ್ಟುಕೊಂಡಿದ್ದಾರೆ. ತಂತ್ರಜ್ಞಾನದ ಮೂಲಕ ಉನ್ನತ ವ್ಯಕ್ತಿಗಳೊಂದಿಗೆ ಇರುವ ಫೋಟೋಗಳನ್ನು ರಚಿಸಿದ್ದಾರೆ. ವಂಚನೆ ಮಾಡಲು ಈ ಫೋಟೋಗಳನ್ನು ಬಳಸಿಕೊಂಡಿದ್ದಾರೆ. ಭುವನೇಶ್ವರದಲ್ಲಿ ಈಗಾಗಲೇ ಶ್ರೀಮಂತ ಉದ್ಯಮಿ, ಬಿಲ್ಡರ್‌ಗಳು, ಗಣಿಗಾರಿಕೆಯ ನಿರ್ವಾಹಕರು ಸೇರಿದಂತೆ ಇತರ ಪ್ರಭಾವಿ ವ್ಯಕ್ತಿಗಳನ್ನು ವಂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಗಣಿ ಮಾಲೀಕರ ದೂರಿನ ಮೇರೆಗೆ ಭಾನುವಾರ (ಡಿ.29) ರಂದು ಬಂಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 329 (3), 319 (2), 318 (4), ಮತ್ತು 3 (5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಇದನ್ನೂ ಓದಿ: 179 ಮಂದಿ ಬಲಿ ಪಡೆದ ದ.ಕೊರಿಯಾ ಡೆಡ್ಲಿ ವಿಮಾನ ಅಪಘಾತದಲ್ಲಿ ಇಬ್ಬರು ಬದುಕುಳಿದಿದ್ದು ಹೇಗೆ?

  • ಹಾವು ಕಚ್ಚಿಸಿ ಪತ್ನಿ, ಎರಡು ವರ್ಷದ ಮಗಳ ಹತ್ಯೆ- ಆರೋಪಿ ಅರೆಸ್ಟ್

    ಹಾವು ಕಚ್ಚಿಸಿ ಪತ್ನಿ, ಎರಡು ವರ್ಷದ ಮಗಳ ಹತ್ಯೆ- ಆರೋಪಿ ಅರೆಸ್ಟ್

    ಭುವನೇಶ್ವರ್: ವಿಷಪೂರಿತ ಹಾವನ್ನು (Snake) ಹೆಂಡತಿ (Wife) ಮತ್ತು ಮಗಳು ಮಲಗಿದ್ದ ಕೋಣೆಗೆ ಬಿಟ್ಟು ಅವರನ್ನು ಕೊಲೆಗೈದಿದ್ದ ಆರೋಪಿಯನ್ನು ಒಡಿಶಾ (Odisha) ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಕೆ.ಗಣೇಶ್ (25) ಎಂದು ಗುರುತಿಸಲಾಗಿದೆ. ಆರೋಪಿ ಅಧೇಗಾಂವ್ ಗ್ರಾಮದ ತನ್ನ ಮನೆಯಲ್ಲಿ ಹೆಂಡತಿ ಬಸಂತಿ ಪತ್ರಾ (23) ಹಾಗೂ ತನ್ನ 2 ವರ್ಷದ ಮಗಳು ದೇಬಾಸ್ಮಿತಾ ಮಲಗಿದ್ದ ವೇಳೆ ಅವರನ್ನು ಕೊಲ್ಲುವ ಉದ್ದೇಶದಿಂದ ರೂಂ ಒಳಗೆ ಹಾವನ್ನು ಬಿಟ್ಟಿದ್ದ. ಬಳಿಕ ಆಕಸ್ಮಿಕವಾಗಿ ಹಾವು ಕಚ್ಚಿದೆ ಎಂಬಂತೆ ಬಿಂಬಿಸಿದ್ದ. ಇದನ್ನೂ ಓದಿ: ಡ್ರಗ್ಸ್‌ ಖರೀದಿಸಲು 74,000 ರೂ.ಗೆ ಹೆತ್ತ ಮಕ್ಕಳನ್ನೇ ಮಾರಾಟ ಮಾಡಿದ ಪೋಷಕರು – ಅಪ್ಪ-ಅಮ್ಮ ಅರೆಸ್ಟ್‌

    ಈ ಸಂಬಂಧ ಮೃತ ಮಹಿಳೆಯ ಮಾವ ಅನುಮಾನ ವ್ಯಕ್ತಪಡಿಸಿ, ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಇದು ಆಕಸ್ಮಿಕವಾಗಿ ಸಂಭವಿಸಿದೆ ಎಂದು ಪೊಲೀಸರು ಭಾವಿಸಿದ್ದರು. ಬಳಿಕ ತನಿಖೆ ನಡೆಸಿ ಸಾಕ್ಷ್ಯ ಕಲೆಹಾಕಿ ಘಟನೆ ನಡೆದ ಒಂದು ತಿಂಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಅಕ್ಟೋಬರ್ 6 ರಂದು ಹಾವಾಡಿಗನಿಂದ, ಧಾರ್ಮಿಕ ಕಾರ್ಯಕ್ರಮಕ್ಕೆ ಎಂದು ಹಾವು ತಂದಿದ್ದ ಎಂದು ತಿಳಿದು ಬಂದಿದೆ. ಮೊದಲು ಆರೋಪಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದ. ಬಳಿಕ ತೀವ್ರ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಹಾಗೂ ಆತನ ಪತ್ನಿ ನಡುವೆ ಕೌಟುಂಬಿಕ ಕಲಹ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಹಿಂದೆ 2020ರಲ್ಲಿ ಕೇರಳದ ಕೊಲ್ಲಂನಲ್ಲಿ ಆಸ್ತಿಗಾಗಿ ವ್ಯಕ್ತಿಯೊಬ್ಬ ಪತ್ನಿಯನ್ನು ಇದೇ ಮಾದರಿಯಲ್ಲಿ ಕೊಲೆಗೈದು ಹಾವಿನ ದ್ವೇಷದ ಕಥೆ ಕಟ್ಟಿದ್ದ. ಬಳಿಕ ಪತಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಹಾವಾಡಿಗನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಅಂಚಲ್ ನಿವಾಸಿ ಸೂರಜ್ (27) ಕೊಲೆಗೈದ ಪತಿ ಹಾಗೂ ಸುರೇಶ್ ಕೊಲೆಗೆ ಸಹಕರಿಸಿದ ಹಾವಾಡಿಗನಾಗಿದ್ದ. ಎಸ್.ಉತ್ತರ (25) ಕೊಲೆಯಾದ ಮಹಿಳೆ ಆಗಿದ್ದಳು. ಇದನ್ನೂ ಓದಿ: ಮಥುರಾದ ಪಟಾಕಿ ಮಳಿಗೆಯಲ್ಲಿ ಅಗ್ನಿ ಅವಘಡ- ಮೃತರ ಸಂಖ್ಯೆ 12ಕ್ಕೆ ಏರಿಕೆ

  • ವಿದ್ಯುತ್ ಕಡಿತ : ಮಂದ ಬೆಳಕಿನಲ್ಲೇ ಭಾಷಣ ಮಾಡಿದ ರಾಷ್ಟ್ರಪತಿ ಮುರ್ಮು

    ವಿದ್ಯುತ್ ಕಡಿತ : ಮಂದ ಬೆಳಕಿನಲ್ಲೇ ಭಾಷಣ ಮಾಡಿದ ರಾಷ್ಟ್ರಪತಿ ಮುರ್ಮು

    ಭುವನೇಶ್ವರ್: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಭಾಷಣ ಮಾಡುತ್ತಿದ್ದಾಗ ವಿದ್ಯುತ್ ಕಡಿತಗೊಂಡ (Power Outage) ಘಟನೆ ಓಡಿಶಾದ (Odisha) ಬರಿಪಾದದ ಮಹಾರಾಜ ಶ್ರೀರಾಮಚಂದ್ರ ಭಂಜಾ ದೇವು ವಿಶ್ವವಿದ್ಯಾಲಯದಲ್ಲಿ ನಡೆದಿದೆ.

    ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ 12ನೇ ಘಟಿಕೋತ್ಸವದಲ್ಲಿ ಈ ಘಟನೆ ನಡೆದಿದೆ. ರಾಜ್ಯಪಾಲ ಗಣೇಶಿ ಲಾಲ್ ಸಭಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಇದಾದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಕಡಿತಗೊಂಡಿದೆ.

    ಇದರಿಂದಾಗಿ ವಿದ್ಯುತ್ ಕಡಿತದಿಂದಾಗಿ ರಾಷ್ಟ್ರಪತಿ ಮುರ್ಮು ಮಂದ ಬೆಳಕಿನಲ್ಲೇ ಭಾಷಣವನ್ನು ಮಾಡಬೇಕಾದ ಪರಿಸ್ಥಿತಿ ಉಂಟಾಯಿತು. ಘಟನೆಯಿಂದಾಗಿ ರಾಷ್ಟ್ರಪತಿಯ ಭದ್ರತಾ ಸಿಬ್ಬಂದಿಗೆ ವಿದ್ಯುತ್ ವೈಫಲ್ಯದಿಂದಾಗಿ 9 ನಿಮಿಷಗಳ ಕಾಲ ಭದ್ರತೆ ಒದಗಿಸಲು ಸಮಸ್ಯೆ ಎದುರಾಯಿತು. ಇದರಿಂದಾಗಿ ಓಡಿಶಾ ಸರ್ಕಾರ ಮುಜುಗರಕ್ಕೆ ಒಳಗಾಗಿದೆ. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಡಿಜಿಟಲ್‌ ಮೀಡಿಯಾ ಹವಾ ಹೇಗಿದೆ?

    ಪ್ರಾಥಮಿಕ ತನಿಖೆಯ ಪ್ರಕಾರ ಕಾರ್ಯಕ್ರಮಕ್ಕೆ ಬ್ಯಾಕಪ್ ಜನರೆಟರ್‍ಗಳನ್ನು ಬಳಸಲಾಗಿತ್ತು. ಆದರೆ ಭಾಷಣ ಸಂದರ್ಭದಲ್ಲಿ ಕೆಲವು ತಾಂತ್ರಿಕ ತೊಂದರೆ ಉಂಟಾಗಿ ಈ ರೀತಿಯಾಗಿದೆ. ಸಂಪೂರ್ಣ ವೈಫಲ್ಯಕ್ಕಾಗಿ ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ಸಮನ್ಸ್ ನೀಡಲಾಗಿದೆ ಎಂದು ಮಯೂಭರ್ಂಜ್ ಕಲೆಕ್ಟರ್ ವಿನೀತ್ ಭಾರದ್ವಾಜ್ ಹೇಳಿದ್ದಾರೆ. ಇದನ್ನೂ ಓದಿ: Manipur Violence: ಧಗ ಧಗನೆ ಹೊತ್ತಿ ಉರಿಯುತ್ತಿದ್ದ ಮಣಿಪುರ ಸಹಜ ಸ್ಥಿತಿಗೆ – ಮೂರೇ ದಿನದಲ್ಲಿ 54 ಮಂದಿ ಸಾವು

  • ನಕ್ಸಲರ ಶಿಬಿರದಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಪತ್ತೆ

    ನಕ್ಸಲರ ಶಿಬಿರದಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಪತ್ತೆ

    ರಾಯ್ಪುರ: ಓಡಿಶಾ-ಛತ್ತೀಸ್‍ಗಢ (Chhattisgarh) ಗಡಿಯಲ್ಲಿ ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯ ವೇಳೆ ಪೊಲೀಸರು ನಕ್ಸಲರ ಅಡಗುತಾಣದಿಂದ ಕಾಂಡೋಮ್‍ಗಳು (Condoms), ಗರ್ಭ ನಿರೋಧಕ ಮಾತ್ರೆ (Contraceptive Pills) ಹಾಗೂ ಗರ್ಭಧಾರಣೆಯ ಪರೀಕ್ಷಾ ಕಿಟ್‍ಗಳನ್ನು (Pregnancy Test Kits) ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಛತ್ತೀಸ್‍ಗಢದ ಗಡಿಯಲ್ಲಿರುವ ನಬರಂಗಪುರ ಜಿಲ್ಲೆಯ ರಾಯ್ಘರ್ ಪ್ರದೇಶದಲ್ಲಿ ಯೋಧರು ನಕ್ಸಲರ ವಿರೋಧಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನಕ್ಸಲರ ಶಿಬಿರದಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಘಟನೆಯೇನು?: ನಬರಂಪುರದ ಪೂರ್ವ ಭಾಗದ ಉದಾಂತಿ ಅರಣ್ಯದ ಸೈಬಿನ್ ಕಚಾರ್ ಗ್ರಾಮದಲ್ಲಿ ಶಸ್ತ್ರಸಜ್ಜಿತ 20 ರಿಂದ 25 ಸಿಪಿಐ ಮಾವೋವಾದಿಗಳ ಗುಂಪು ಇರುವುದರ ಬಗ್ಗೆ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ್ದರು. ಪೊಲೀಸರು ಬರುತ್ತಿರುವುದನ್ನು ಗಮನಿಸಿದ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ರಕ್ಷಣೆಗಾಗಿ ಮರು ದಾಳಿ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಗುಂಡಿನ ಚಕಮಕಿ ಮುಂದುವರಿದಿದೆ. ಈ ವೇಳೆ ದಟ್ಟ ಅರಣ್ಯದ ಲಾಭ ಪಡೆದ ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದಾರೆ.

    ಈ ವೇಳೆ ನಕ್ಸಲ ಶಿಬಿರದಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಕ್ಸಲರ ಅಡಗು ತಾಣದಲ್ಲಿ ಕಾಂಡೋಮ್‍ಗಳು, ಗರ್ಭನಿರೋಧಕ ಮಾತ್ರಗಳು ಹಾಗೂ ಗರ್ಭಧಾರಣೆಯ ಪರೀಕ್ಷೆಯ ಕಿಟ್‍ಗಳು ಕಂಡುಬಂದಿವೆ. ಜೊತೆಗೆ 2 ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ.

    ಶಿಬಿರದಲ್ಲಿ ನಕ್ಸಲರ ಕರಪತ್ರಗಳು, ಬ್ಯಾನರ್‌ಗಳು, ಡಿಟೋನೇಟರ್‌ಗಳು ಮತ್ತು ಆಹಾರ ಪದಾರ್ಥಗಳು ಸಹ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಏ.30ಕ್ಕೆ ಚನ್ನಪಟ್ಟಣಕ್ಕೆ ಮೋದಿ – ದಶಪಥ ಹೆದ್ದಾರಿ ಮಾರ್ಗ ಬದಲಾವಣೆ

    ಮಾವೋವಾದಿ ಶಿಬಿರಗಳಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡಲಾಗುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಅಲ್ಲಿನ ಎಸ್ಪಿ ಹೇಳಿದರು. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ – ಕಾಂಗ್ರೆಸ್‍ನಿಂದ 5ನೇ ಗ್ಯಾರಂಟಿ ಘೋಷಣೆ

  • ಒಡಿಶಾದ ಆರೋಗ್ಯ ಸಚಿವರ ಮೇಲೆ ASI ಗುಂಡಿನ ದಾಳಿ

    ಒಡಿಶಾದ ಆರೋಗ್ಯ ಸಚಿವರ ಮೇಲೆ ASI ಗುಂಡಿನ ದಾಳಿ

    ಭುವನೇಶ್ವರ: ಒಡಿಶಾದ (Odisha) ಆರೋಗ್ಯ ಸಚಿವ (Health Minister) ಹಾಗೂ ಬಿಜೆಡಿ (BJD) ಹಿರಿಯ ನಾಯಕ ನಬಾ ದಾಸ್ (Naba Das) ಮೇಲೆ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ (ASI) ಗುಂಡಿನ ದಾಳಿ ನಡೆಸಿದ ಘಟನೆ ಜರ್ಸುಗುಡಾ ಜಿಲ್ಲೆಯಲ್ಲಿ ನಡೆದಿದೆ.

    ಒಡಿಶಾದ ಜರ್ಸುಗುಡಾ ಜಿಲ್ಲೆಯ ಬ್ರಜರಾಜನಗರದ ಗಾಂಧಿ ಚಾಕ್ ಬಳಿ ಆರೋಗ್ಯ ಸಚಿವರ ಮೇಲೆ ಪೊಲೀಸ್ ಅಧಿಕಾರಿ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಈ ವೇಳೆ ಸಚಿವರ ಎದೆಗೆ ಗುಂಡು ತಗುಲಿದೆ. ತೀವ್ರವಾಗಿ ಗಾಯಗೊಂಡ ಸಚಿವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

    ಆರೋಪಿಯನ್ನು ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಗೋಪಾಲ್ ದಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಸಚಿವ ನಬಾ ದಾಸ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನೂ ಓದಿ: ಬಸವ ಕಲ್ಯಾಣದಿಂದ ಸಿದ್ದರಾಮಯ್ಯ, ಕುರಡುಮಲೆಯಿಂದ ಡಿಕೆಶಿ ಬಸ್ ಯಾತ್ರೆ- ಫೆ. 3ರಿಂದ ಆರಂಭ

    ಮೂಲಗಳ ಪ್ರಕಾರ ನಬಾ ದಾಸ್ ಅವರು ಬ್ರಜರಾಜನಗರದ ಗಾಂಧಿ ಚೌಕ್‍ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ದಾಳಿಯ ಹಿಂದಿನ ಉದ್ದೇಶಗಳು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಎಲೆಕ್ಷನ್ ಟೈಂನಲ್ಲಿ ಬಿಬಿಎಂಪಿಯಿಂದ ಆಪರೇಷನ್ ಬುಲ್ಡೋಜರ್ ಸುಳಿವು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಾಸ್ಟೆಲ್ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

    ಭುವನೇಶ್ವರ: ವಿದ್ಯಾರ್ಥಿನಿಯೊಬ್ಬಳು ಮುಖ್ಯೋಪಾಧ್ಯಾಯರ ಕಿರುಕುಳ ತಾಳಲಾರದೇ ಹಾಸ್ಟೆಲ್ ಕಟ್ಟಡದ ಮೇಲಿಂದ ಜಿಗಿದು ಸಾವನ್ನಪ್ಪಿದ ಘಟನೆ ಒಡಿಶಾದ ಸುಂದರ್‌ಗಢ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

    ಶ್ಯಾಮ್ ಸುಂದರ್ ಪಟೇಲ್ ಬಂಧಿತ ಆರೋಪಿ. ಲೆಫ್ರಿಪಾಡಾ ಬ್ಲಾಕ್‍ನಲ್ಲಿರುವ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ 10ನೇ ತರಗತಿ ಓದುತ್ತಿದ್ದಳು. ಆದರೆ ಶ್ಯಾಮ್ ಸುಂದರ್ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ಮುಖ್ಯೋಪಾಧ್ಯಾಯರು ಕಿರುಕುಳ ನೀಡುತ್ತಿದ್ದಾರೆ ಎಂದು ತನ್ನ ಮನೆಯವರಿಗೆ ತಿಳಿಸಿದ್ದಳು.

    ಮುಖ್ಯೋಪಾಧ್ಯಾಯರ ಲೈಂಗಿಕ ಕಿರುಕುಳ ತಾಳಲಾರದೇ ಮನನೊಂದ ವಿದ್ಯಾರ್ಥಿನಿ ಹಾಸ್ಟೆಲ್ ಕಟ್ಟಡದ ಟೆರೇಸ್‍ನಿಂದ ಜಿಗಿದಿದ್ದಾಳೆ. ಪರಿಣಾಮವಾಗಿ ತಲೆಗೆ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಸುಂದರ್‌ಗಢ್ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗಮಧ್ಯೆ ಆಕೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಕೇಸ್‌ – ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್‍ಗೆ ಹೃದಯಾಘಾತ

    POLICE JEEP

    ಆರಂಭದಲ್ಲಿ ಶಾಲೆಯ ಅಧಿಕಾರಿಗಳು ಘಟನೆಯನ್ನು ಅಪಘಾತ ಎಂದು ಹೇಳಿದ್ದಾರೆ. ಆದರೆ ಇದು ಲೈಂಗಿಕ ಕಿರುಕುಳದ ಪರಿಣಾಮವಾಗಿದೆ ಎಂದು ಎಸ್‍ಪಿ ಹೇಳಿದರು. ಜೊತೆಗೆ ಈ ಬಗ್ಗೆ ಶಾಲೆಯ ಹಲವಾರು ವಿದ್ಯಾರ್ಥಿಗಳು ಸಹ ಮುಖ್ಯೋಪಾಧ್ಯಾಯರಿಂದ ಲೈಂಗಿಕ ಕಿರುಕುಳದ ಬಗ್ಗೆ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮುಖ್ಯೋಪಾಧ್ಯಾಯರು ಮತ್ತು ವಾರ್ಡನ್ ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಕಾಂಗ್ರೆಸ್ ಹೊಂದಿದೆ: ರಾಹುಲ್ ಗಾಂಧಿ

  • ಒಬ್ಬನನ್ನು ರಕ್ಷಿಸಲು ಹೋಗಿ 6 ಯುವಕರು ನೀರುಪಾಲು – ಮೂವರ ಮೃತದೇಹಕ್ಕಾಗಿ ಹುಡುಕಾಟ

    ಒಬ್ಬನನ್ನು ರಕ್ಷಿಸಲು ಹೋಗಿ 6 ಯುವಕರು ನೀರುಪಾಲು – ಮೂವರ ಮೃತದೇಹಕ್ಕಾಗಿ ಹುಡುಕಾಟ

    ಭುವನೇಶ್ವರ: ಸ್ನಾನ ಮಾಡಲೆಂದು ನದಿಗೆ ಇಳಿದಿದ್ದ 6 ಯುವಕರು ನೀರುಪಾಲಾಗಿರುವ ಘಟನೆ ಓಡಿಶಾದ ಜೈಪುರದಲ್ಲಿ ನಡೆದಿದ್ದು, ಅವರಲ್ಲಿ ಮೂರು ಯುವಕರ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಉಳಿದ ಮೂವರು ಯುವಕರ ಮೃತದೇಹ ಪತ್ತೆಹಚ್ಚಲು ಶೋಧಕಾರ್ಯ ನಡೆಸಲಾಗುತ್ತಿದೆ.

    ಶನಿವಾರ ಓಡಿಶಾದ ಜೈಪುರದಲ್ಲಿ ಹೋಳಿಹಬ್ಬ ಆಚರಿಸಲಾಯಿತು. ಸಂಭ್ರಮಾಚರಣೆಯ ಬಳಿಕ ಇಲ್ಲಿನ ಖರಾಸೋತ್ರ ಸರೋವರಕ್ಕೆ ಸ್ಥಾನ ಮಾಡಲು ತೆರಳಿದ್ದ ವೇಳೆ ಅನಾಹುತ ಆಗಿದೆ. ಇದನ್ನೂ ಓದಿ: ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

    ಈ ಸಂಬಂಧ ಮಾಹಿತಿ ನೀಡಿರುವ ಜಿಲ್ಲಾ ಸಹಾಯಕ ಅಗ್ನಿಶಾಮಕ ಅಧಿಕಾರಿ ಪೂರ್ಣ ಚಂದ್ರ ಮರಾಂಡಿ, ನಾವು ಆಗಮಿಸುವ ಮೊದಲೇ ಸ್ಥಳೀಯರು ಒಬ್ಬ ಯುವಕನ ಮೃತದೇಹ ಹೊರತೆಗೆದಿದ್ದರು. ಬಳಿಕ ನಮ್ಮ ತಂಡವು ಕಾರ್ಯಾಚರಣೆ ನಡೆಸಿ, ಮತ್ತಿಬ್ಬರ ಮೃತದೇಹ ಪತ್ತೆಹಚ್ಚಲಾಯಿತು. ಆದರೆ, ಶನಿವಾರ ತಡರಾತ್ರಿ ವಿದ್ಯುತ್ ಬೆಳಕು ಕಡಿಮೆಯಿದ್ದ ಕಾರಣ ಇನ್ನೂ ಮೂವರ ಮೃತದೇಹವನ್ನು ಪತ್ತೆಹಚ್ಚಲು ಶೋಧಕಾರ್ಯ ನಡೆಸಲಾಗುತ್ತಿದೆ. ಶನಿವಾರ ರಾತ್ರಿ ಕಡಿಮೆ ಬೆಳಕಿನಿಂದ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಅಗ್ನಿಶಾಮಕ ಇಲಾಖೆ ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಭಾನುವಾರ ಬೆಳಿಗ್ಗೆ ಮತ್ತೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಮಾಹಿತಿ ನೀಡಿದ್ದಾರೆ.

    ಇಷ್ಟಕ್ಕೂ ನಡೆದಿದ್ದೇನು?
    ಮೃತನ ತಂದೆ ಸತ್ಯ ಚಂದ್ರ ಜೆನಾ ಮಾಹಿತಿ ನೀಡಿರುವ ಪ್ರಕಾರ, `ಶನಿವಾರ ಹೋಳಿ ಆಡಿದ ನಂತರ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಅವರಲ್ಲಿ ಒಬ್ಬ ಸ್ನೇಹಿತ ಮುಳುಗುತ್ತಿರುವುದನ್ನು ಗಮನಿಸಿ, ಉಳಿದವರೂ ಒಬ್ಬೊಬ್ಬರಾಗಿ ರಕ್ಷಿಸುವ ಪ್ರಯತ್ನದಲ್ಲಿ ಮುಳುಗಿದರು. ಕೊನೆಯದಾಗಿ ರಕ್ಷಿಸಲು ಹೋದ ನನ್ನ ಮಗನೂ ನದಿಯಲ್ಲಿ ಮುಳುಗಿದನು ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕುಲಪತಿಗಳ ಸರ್ಕಾರಿ ಬಂಗಲೆಗೆ ಬೇಕಾಬಿಟ್ಟಿ ಖರ್ಚು – ಕುಲಪತಿ ಮೇಲೆ ಗಂಭೀರ ಆರೋಪ

  • ಭಾಷೆ ತಿಳಿಯದೆ ಅಧಿಕಾರ ಕಳೆದುಕೊಂಡ ಮಹಿಳೆ

    ಭಾಷೆ ತಿಳಿಯದೆ ಅಧಿಕಾರ ಕಳೆದುಕೊಂಡ ಮಹಿಳೆ

    ಭುವನೇಶ್ವರ: ಭಾಷೆ ಗೊತ್ತಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯತ್ವ ಸ್ಥಾನದಿಂದ ಮಹಿಳೆ ಅನರ್ಹವಾಗಿರುವ ಘಟನೆ ಗಂಜಾಮ್ ಜಿಲ್ಲೆಯಲ್ಲಿ ನಡೆದಿದೆ.

    ಎಂ. ಲಕ್ಷ್ಮೀ ಗಂಜಾಮ್ ಜಿಲ್ಲೆಯ ಛತ್ರಪುರ್ ಬ್ಲಾಕ್ ಅಡಿಯಲ್ಲಿ ಬರುವ ಆರ್ಯಪಲಿ ಗ್ರಾಮ ಪಂಚಾಯ್ತಿಯಿಂದ 2017ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಆದರೆ ಲಕ್ಷ್ಮೀಯ ಆಯ್ಕೆಯ ಕುರಿತಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಲಕ್ಷ್ಮೀ ಅವರಿಗೆ ಒಡಿಯಾ ಭಾಷೆ ಗೊತ್ತಿಲ್ಲ ಎಂದು ಆರೋಪಿಸಲಾಗಿತ್ತು.

    1994ರ ಒಡಿಶಾ ಗ್ರಾಮ ಪಂಚಾಯ್ತಿ ಕಾಯ್ದೆ ಪ್ರಕಾರ ಒಡಿಯಾ ಭಾಷೆಯನ್ನು ಓದಲು, ಬರೆಯಲು ಹಾಗೂ ಮಾತನಾಡಕಲು ಬರಲಿಲ್ಲವೆಂದರೆ ಗ್ರಾಮಪಂಚಾಯ್ತಿಯಲ್ಲಿ ಯಾವುದೇ ಸ್ಥಾನವನ್ನು ಹೊಂದಲು ಅವಕಾಶ ಇರುವುದಿಲ್ಲ.

    ಇದೀಗ ಸುದೀರ್ಘ ವಿಚಾರಣೆ ನಂತರ ಲಕ್ಷ್ಮೀ ಅವರಿಗೆ ಭಾಷೆ ಗೊತ್ತಿಲ್ಲ ಎಂದು ನ್ಯಾಯಾಲಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದೆ. ಲಕ್ಷ್ಮೀ ಅವರಿಗೆ ಒಡಿಯಾ ಗೊತ್ತಿಲ್ಲ ಎಂದು ಸ್ಪಷ್ಟವಾದ ಬಳಿಕ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತಾಗಿ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.

  • ಪೆಟ್ರೋಲ್ ಬಂಕ್ ಬ್ಲಾಸ್ಟ್ – ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ, 7 ಮಂದಿಗೆ ಗಾಯ

    ಪೆಟ್ರೋಲ್ ಬಂಕ್ ಬ್ಲಾಸ್ಟ್ – ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ, 7 ಮಂದಿಗೆ ಗಾಯ

    ಭುವನೇಶ್ವರ್: ಓಡಿಶಾದ ಭುವನೇಶ್ವರ್ ನಲ್ಲಿ ಎಲ್‍ಪಿಜಿಯನ್ನು ಸ್ಟೋರ್ ಮಾಡಿದ್ದ ಪೆಟ್ರೋಲ್ ಬಂಕ್ ಬ್ಲಾಸ್ಟ್ ಆಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

    ಬ್ಲಾಸ್ಟ್ ನಂತರ ಪೆಟ್ರೋಲ್ ಬಂಕಿನಲ್ಲಿ ದೊಡ್ಡ ಮಟ್ಟದ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಇದ್ದ ಏಳು ಮಂದಿಗೆ ಗಾಯವಾಗಿದೆ. ಜೊತೆಗೆ ಇಬ್ಬರ ಪರಿಸ್ಥಿತಿ ತೀರ ಗಂಭೀರವಾಗಿದ್ದು, ಅವರನ್ನು ಎಸ್‍ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದು, ಅಗ್ನಿ ನಂದಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

    ಈ ಘಟನೆ ಭುವನೇಶ್ವರ್ ನಲ್ಲಿರುವ ರಾಜ್ ಭವನ್ ಹತ್ತಿರದಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಸರ್ಕಾರಿ ಕ್ವಾರ್ಟರ್ಸ್ ನಲ್ಲಿರುವ ಮನೆಗಳ ಕಿಟಕಿಯ ಗಾಜುಗಳು ಪುಡಿಪುಡಿಯಾಗಿವೆ. ಜೊತೆಗೆ ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿದೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಜೊತೆಗೆ ಪೆಟ್ರೋಲ್ ಬಂಕ್‍ನಲ್ಲಿ ಇದ್ದ ಕಾರು ಮತ್ತು ಬೈಕುಗಳು ಸುಟ್ಟು ಕರಕಲಾಗಿವೆ. ಬಂಕ್ ಸುತ್ತಲಿನ 100 ಮೀಟರ್ ಜಾಗ ಸುಟ್ಟು ಹೋಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಡಿಸಿಪಿ ಉಮಾ ಶಂಕರ್ ದಾಸ್ ಅವರು, ಈ ಘಟನೆ ಮಧ್ಯಾಹ್ನ ಸುಮಾರು 1.25ಕ್ಕೆ ನಡೆದಿದೆ. ಈ ಅಗ್ನಿ ಅವಘಡದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಜೊತೆಗೆ ಪೆಟ್ರೋಲ್ ಬಂಕ್ ಬ್ಲಾಸ್ಟ್ ಆಗಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಘಟನೆ ನಡೆದ ಬಳಿಕ ಬಂಕ್ ರಸ್ತೆಯನ್ನು ಬಂದ್ ಮಾಡಿದ್ದೇವೆ. ಸ್ಫೋಟದ ಸದ್ದು 1 ಕಿ.ಮೀವರೆಗೂ ಕೇಳಿಸಿದೆ ಎಂದು ತಿಳಿಸಿದ್ದಾರೆ.

    ನಡೆದ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಓಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಭುವನೇಶ್ವರದ ರಾಜ್ ಭವನ್ ಬಳಿಯ ಪೆಟ್ರೋಲ್ ಬಂಕ್‍ನಲ್ಲಿ ಸಂಭವಿಸಿದ ಅಗ್ನಿ ಅಪಘಾತದಲ್ಲಿ ಗಾಯಗೊಂಡ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಘೋಷಿಸಲಾಗಿದೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಬೆಂಕಿಯನ್ನು ನಂದಿಸಲಾಗಿದೆ ಮತ್ತು ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ.