Tag: ಓಕಳೀಪುರಂ

  • ಲಾರಿ ಚಾಲಕ ಪೊಲೀಸರ ಕಣ್ತಪ್ಪಿಸಲು ಹೋಗಿ ರೈಲ್ವೆ ಅಂಡರ್ ಪಾಸ್‍ ನಲ್ಲಿ ಸಿಲುಕಿದ ಜೆಸಿಬಿ

    ಲಾರಿ ಚಾಲಕ ಪೊಲೀಸರ ಕಣ್ತಪ್ಪಿಸಲು ಹೋಗಿ ರೈಲ್ವೆ ಅಂಡರ್ ಪಾಸ್‍ ನಲ್ಲಿ ಸಿಲುಕಿದ ಜೆಸಿಬಿ

    ಬೆಂಗಳೂರು: ಪೊಲೀಸರ ಕಣ್ತಪ್ಪಿಸಲು ಹೋದ ಟ್ರಕ್ ಚಾಲಕನೊಬ್ಬ ಎಡವಟ್ಟು ಮಾಡಿಕೊಂಡಿದ್ದಾನೆ.

     

    ಬೆಂಗಳೂರಿನ ಓಕಳೀಪುರಂನಲ್ಲಿ ರೈಲ್ವೇ ಅಂಡರ್‍ಪಾಸ್‍ನಲ್ಲಿ ಬೃಹತ್ ಜೆಸಿಬಿ ಸಿಲುಕಿಕೊಂಡ ಘಟನೆ ನಡೆದಿದೆ. ಲಾರಿ ಚಾಲಕ ಪೊಲೀಸರ ಕಣ್ತಪ್ಪಿಸಲು ಹೋಗಿ ಜೆಸಿಬಿ ಸಿಲುಕಿದೆ. ಟ್ರಕ್ ಮೇಲಿದ್ದ ಜೆಸಿಬಿ ರೈಲ್ವೆ ಟ್ರ್ಯಾಕ್ ಗೆ ತಗುಲಿಕೊಂಡಿದೆ. ಪರಿಣಾಮ ಮೆಜೆಸ್ಟಿಕ್- ಓಕಳಿಪುರಂ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಫುಲ್ ಜಾಮ್ ಆಗಿತ್ತು.

    ಜೆಸಿಬಿ ತುಂಬಿದ್ದ ಲಾರಿ ಯಲಹಂಕದ ಕೊಗಿಲುನಿಂದ ಬರುತ್ತಿತ್ತು ಎಂದು ತಿಳಿದುಬಂದಿದೆ. ಅಂಡರ್‍ಪಾಸ್‍ನಲ್ಲಿ ಸಿಲುಕಿರೋ ಜೆಸಿಬಿ ಇರುವ ಲಾರಿಯನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಮಾಡಿದ್ದಾರೆ. ಗ್ಯಾಸ್ ಕಟರ್ ಬಳಸಿ ಜೆಸಿಬಿ ಮೆಲ್ಭಾಗ ಕಟ್ ಮಾಡಿದ್ದಾರೆ.