Tag: ಓಆರ್‌ಆರ್

  • 3 ಸಾವಿರ ಕೆಜಿ ಪ್ಲಾಸ್ಟಿಕ್‌ನಿಂದ ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಯ್ತು ರಸ್ತೆ – ಏನಿದರ ವಿಶೇಷ?

    3 ಸಾವಿರ ಕೆಜಿ ಪ್ಲಾಸ್ಟಿಕ್‌ನಿಂದ ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಯ್ತು ರಸ್ತೆ – ಏನಿದರ ವಿಶೇಷ?

    ಬೆಂಗಳೂರು: ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಬಳಕೆಯನ್ನು ಇದೇ ಜುಲೈ ತಿಂಗಳಿನಿಂದ ನಿಷೇಧಿಸಲಾಗಿದೆ. ಆದ್ರೆ ಬೆಂಗಳೂರಿನಲ್ಲಿ ಮರುಬಳಕೆಯ ಪ್ಲಾಸ್ಟಿಕ್ ಬಳಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಪರಿಸರ ಸ್ನೇಹಿಯಾಗಿರುವ ಈ ರಸ್ತೆ ಡಾಂಬರು ಹಾಗೂ ಕಾಂಕ್ರಿಟ್ ರಸ್ತೆಗಳ ಗುಣಮಟ್ಟವನ್ನೂ ಮೀರಿಸುತ್ತದೆ. ಸಾರ್ವಜನಿಕರ ವಾಹನ ಸಂಚಾರಕ್ಕೂ ಅನುವು ಮಾಡಿಕೊಡುತ್ತದೆ.

    ಹೌದು.. ಬಿಬಿಎಂಪಿ ಹಾಗೂ ಸಾಮಾಜಿಕ ಉದ್ಯಮ ಪಾಟ್‌ಹೋಲ್‌ರಾಜಾ ಮತ್ತು ಓಆರ್‌ಆರ್ ಕಂಪನಿಗಳ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಆರ್‌ಎಂಜೆಡ್ ಇಕೋವರ್ಲ್ಡ್ ಮತ್ತು ಹೊರ ವರ್ತುಲ ರಸ್ತೆಯನ್ನು ಸಂಪರ್ಕಿಸುವ ಹೊಸ ಕಾಂಕ್ರಿಟ್ ರಸ್ತೆಯನ್ನು ಸಂಪೂರ್ಣವಾಗಿ ಮರುಬಳಕೆಯ ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿದೆ. ಇದನ್ನೂ ಓದಿ: ಮಹಿಳೆಯ ಕುತ್ತಿಗೆ ಕೊಯ್ದು ಬರ್ಬರ ಕೊಲೆ – ಚಿನ್ನಾಭರಣ ದೋಚಿ ಕಳ್ಳರು ಪರಾರಿ

    ನೂರಕ್ಕೆ ನೂರರಷ್ಟು ಪ್ಲಾಸ್ಟಿಕ್ ಅನ್ನೇ ಬಳಸಿ ನಿರ್ಮಿಸಲಾದ ಈ ರಸ್ತೆಯನ್ನು PotHoleRaja ‘GridMats’ ಎಂದು ಕರೆಯಲಾಗುತ್ತಿದೆ. ಇದು ಪೇಟೆಂಟ್ ಪಡೆದ ಉತ್ಪನ್ನವಾಗಿದ್ದು, ಪರಿಸರ ಸ್ನೇಹಿ ಹಾಗೂ ದೀರ್ಘಕಾಲ ಬಾಳಿಕೆ ಬರುವ, ಪಾದಚಾರಿ ಮಾರ್ಗಗಳನ್ನು ನಿರ್ಮಿಸಲು ಅನುಕೂಲವಾಗಿದೆ ಎಂದು ಕಂಪನಿಯು ಹೇಳಿದೆ.

    ಕಾಂಕ್ರೀಟ್ ರಸ್ತೆಗಿಂತ ಭಿನ್ನ: ಈ ರಸ್ತೆಯನ್ನು ನಿರ್ಮಿಸಲು 3,000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಲಾಗಿದೆ ಎಂದು ಪಾಟ್‌ಹೋಲ್ ರಾಜಾ ಪ್ರಕಟಣೆ ಹೇಳಿದೆ. ಈ ರಸ್ತೆ ನಿರ್ಮಾಣ ಕಾಮಗಾರಿಗೆ ಸಾಮಾನ್ಯ ಕಾಂಕ್ರಿಟ್ ರಸ್ತೆಗಳಿಗೆ ಬಳಕೆಯಾಗುವ ನೀರಿನ ಪ್ರಮಾಣಕ್ಕಿಂತ ಶೇ.30ರಷ್ಟು ಕಡಿಮೆ ನೀರು ಸಾಕಾಗುತ್ತದೆ. ಇದಕ್ಕೆ ಉಕ್ಕಿನ ಬಲವರ್ಧಕ ಕೂಡಾ ಅಗತ್ಯವಿಲ್ಲ ಎಂದು ಪಾಟ್‌ಹೋಲ್ ನಿರ್ದೇಶಕ ಸೌರಭ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಹೂಮಾಲೆಯಲ್ಲಿ ಹುಳು ಇರುತ್ತೆ ನನಗೆ ಹಾಕ್ಬೇಡಿ – ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಗರಂ

    ಸಾಂಪ್ರದಾಯಿಕ ಕಾಂಕ್ರಿಟ್ ತಂತ್ರಜ್ಞಾನದಲ್ಲಿ ಈ ನಿರ್ಮಾಣ ಕಾಮಗಾರಿಯಿಂದ 46.5 ಟನ್ ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಆದರೆ ಗ್ರಿಡ್‌ಮ್ಯಾಟ್ಸ್ ಪ್ರಕ್ರಿಯೆಯಲ್ಲಿ ಕೇವಲ 11.9 ಟನ್ ಬಿಡುಗಡೆಯಾಗುತ್ತದೆ. ಅಂದರೆ ಸುಮಾರು 34.6 ಟನ್ ಕಡಿಮೆ ಇಂಗಾಲದ ಡೈಆಕ್ಸೈಡ್‌ ಹೊರ ಸೂಸಲ್ಪಡುತ್ತದೆ. ಇದು 1,36,800 ಕಿಮೀ. ಕಾರು ಚಲಾಯಿಸಿದಾಗ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣಕ್ಕೆ ಸಮ ಎಂದು ಅವರು ವಿವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]